ಘಟನೆಗಳು:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1910: ಯುನೈಟೆಡ್ ಕಿಂಗ್ಡಂನ ಪಾರ್ಲಿಮೆಂಟು ಬ್ರಿಟಿಷ್ ಇತಿಹಾಸದಲ್ಲೇ ಮೊದಲಬಾರಿಗೆ ಸಂಪತ್ತನ್ನು ಬ್ರಿಟಿಷ್ ಜನರಿಗೆ ಹಂಚುವ ಆಶಯವುಳ್ಳ ಜನಪರ ಬಜೆಟ್ ಮಂಡಿಸಿತು” open=”no”]ಯುನೈಟೆಡ್ ಕಿಂಗ್ಡಂನ ಪಾರ್ಲಿಮೆಂಟು ಬ್ರಿಟಿಷ್ ಇತಿಹಾಸದಲ್ಲೇ ಮೊದಲಬಾರಿಗೆ ಸಂಪತ್ತನ್ನು ಬ್ರಿಟಿಷ್ ಜನರಿಗೆ ಹಂಚುವ ಆಶಯವುಳ್ಳ ಜನಪರ ಬಜೆಟ್ ಮಂಡಿಸಿತು.[/fusion_toggle][fusion_toggle title=”1953: ಅಮೆರಿಕದ ಪ್ರಥಮ 3 ಡಿ ಟೆಲಿವಿಷನ್ ಕಾರ್ಯಕ್ರಮವಾದ ‘ಸ್ಪೇಸ್ ಪೆಟ್ರೋಲ್’ ಪ್ರಸಾರಗೊಂಡಿತು” open=”no”]ಅಮೆರಿಕದ ಪ್ರಥಮ 3 ಡಿ ಟೆಲಿವಿಷನ್ ಕಾರ್ಯಕ್ರಮವಾದ ‘ಸ್ಪೇಸ್ ಪೆಟ್ರೋಲ್’ ಪ್ರಸಾರಗೊಂಡಿತು.[/fusion_toggle][fusion_toggle title=”1986: ಅಮೆರಿಕ ಮತ್ತು ಯೂರೋಪಿನ ಬೇಹುಗಾರಿಕೆ ಉಪಗ್ರಹಗಳು ಚೆರ್ನೋಬಿಲ್ ದುರಂತದಲ್ಲಿ ನಾಶಗೊಂಡ 4ನೇ ರಿಯಾಕ್ಟರಿನ ಅವಶೇಷಗಳನ್ನು ಸೆರೆಹಿಡಿದವು” open=”no”]ಅಮೆರಿಕ ಮತ್ತು ಯೂರೋಪಿನ ಬೇಹುಗಾರಿಕೆ ಉಪಗ್ರಹಗಳು ಚೆರ್ನೋಬಿಲ್ ದುರಂತದಲ್ಲಿ ನಾಶಗೊಂಡ 4ನೇ ರಿಯಾಕ್ಟರಿನ ಅವಶೇಷಗಳನ್ನು ಸೆರೆಹಿಡಿದವು.[/fusion_toggle][fusion_toggle title=”1991: ಬಾಂಗ್ಲಾದೇಶದ ಚಿಟ್ಟಗಾಂಗ್ನಲ್ಲಿ ಉಂಟಾದ ಗಂಟೆಗೆ 249 ಕಿಲೋಮೀಟರ್ ವೇಗದ ಭೀಕರ ಸೈಕ್ಲೋನಿನಲ್ಲಿ 1,38,000 ಜನ ಹತರಾಗಿ ಕೋಟಿ ಜನ ವಸತಿ ಕಳೆದುಕೊಂಡರು. ” open=”no”]ಬಾಂಗ್ಲಾದೇಶದ ಚಿಟ್ಟಗಾಂಗ್ನಲ್ಲಿ ಉಂಟಾದ ಗಂಟೆಗೆ 249 ಕಿಲೋಮೀಟರ್ ವೇಗದ ಭೀಕರ ಸೈಕ್ಲೋನಿನಲ್ಲಿ 1,38,000 ಜನ ಹತರಾಗಿ ಕೋಟಿ ಜನ ವಸತಿ ಕಳೆದುಕೊಂಡರು.[/fusion_toggle][fusion_toggle title=”1993: ರಾಸಾಯನಿಕ ಶಸ್ತ್ರಾಸ್ತ್ರಗಳ 1993ನೇ ಅಧಿವೇಶನ ನಿರ್ಣಯ ಜಾರಿ” open=”no”]ರಾಸಾಯನಿಕ ಶಸ್ತ್ರಾಸ್ತ್ರಗಳ 1993ನೇ ಅಧಿವೇಶನದ ನಿರ್ಣಯ ಜಾರಿಗೊಂಡು, ಆ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವುದು ಮತ್ತು ಪೇರಿಸಿಟ್ಟುಕೊಳ್ಳುವುದನ್ನು ಕಾನೂನು ಬಾಹಿರವನ್ನಾಗಿ ಮಾಡಲಾಯಿತು.[/fusion_toggle][fusion_toggle title=”2001: ಮೊಟ್ಟ ಮೊದಲ ಬಾರಿಗೆ ಖಾಸಗಿಯಾಗಿ ಬಾಹ್ಯಾಕಾಶ ಪ್ರವಾಸ ಕೈಗೊಂಡ ವ್ಯಕ್ತಿ ಎನಿಸಿದಅಮೆರಿಕದ ಡೆನ್ನಿಸ್ ಟಿಟೋ” open=”no”]ಅಮೆರಿಕದ ಕೋಟ್ಯಾಧಿಪತಿಯಾದ ಡೆನ್ನಿಸ್ ಟಿಟೋ ಅವರು ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಖಾಸಗಿಯಾಗಿ ಬಾಹ್ಯಾಕಾಶ ಪ್ರವಾಸ ಕೈಗೊಂಡ ವ್ಯಕ್ತಿ ಎನಿಸಿದರು.[/fusion_toggle][fusion_toggle title=”2008: ಸಂಸತ್ತಿನಲ್ಲಿ ಕರ್ನಾಟಕದಲ್ಲಿ ಆರು ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ನಿರ್ಣಯ” open=”no”]ಕರ್ನಾಟಕದಲ್ಲಿ ಆರು ತಿಂಗಳ ಅವಧಿಗೆ ರಾಷ್ಟ್ರಪತಿ ಆಡಳಿತ ವಿಸ್ತರಿಸುವ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು.[/fusion_toggle][fusion_toggle title=”2009: ಅಮೆರಿಕದ ಪ್ರತಿಷ್ಠಿತ ‘ಹೂವರ್’ ಪ್ರಶಸ್ತಿ ಸ್ವೀಕರಿಸಿದ ಪ್ರಥಮ ಏಷ್ಯಾದ ವ್ಯಕ್ತಿ ಎನಿಸಿದ ಡಾ. ಅಬ್ದುಲ್ ಕಲಾಂ” open=”no”]ಅಮೆರಿಕದ ಪ್ರತಿಷ್ಠಿತ ‘ಹೂವರ್’ ಪ್ರಶಸ್ತಿಯನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸ್ವೀಕರಿಸಿದರು. ಈ ಪ್ರಶಸ್ತಿ ಸ್ವೀಕರಿಸಿದ ಏಷ್ಯಾದ ಪ್ರಥಮ ವ್ಯಕ್ತಿ ಕಲಾಂ.[/fusion_toggle][fusion_toggle title=”2009: ಐಸಿಎಲ್ ಆಟಗಾರರ ಮೇಲೆ ಐಪಿಎಲ್ ನಿಷೇದ ತೆರವು” open=”no”]ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಆಟಗಾರರ ಮೇಲೆ ಹೇರಲಾಗಿದ್ದ ನಿಷೇಧವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆರವುಗೊಳಿಸಿತು. ಆದರೆ ಮೇ 31ರೊಳಗೆ ಐಸಿಎಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಅದು ಆಟಗಾರರಿಗೆ ಸೂಚಿಸಿತು.[/fusion_toggle][fusion_toggle title=”2016: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೆ ಚಾಲನೆ” open=”no”]ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈದಿನ ಚಾಲನೆ ನೀಡಿದರು.[/fusion_toggle][/fusion_accordion]
ಜನನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1848: ಪ್ರಸಿದ್ಧ ಕಲಾವಿದ ರಾಜಾ ರವಿವರ್ಮ ಜನನ” open=”no”]ಪ್ರಸಿದ್ಧ ಕಲಾವಿದರಾದ ರಾಜಾ ರವಿವರ್ಮ ಅವರು ಟ್ರಾವನ್ಕೂರ್ ಸಂಸ್ಥಾನದ ಕಿಲಿಮನೂರ್ ಎಂಬಲ್ಲಿ ಜನಿಸಿದರು.[/fusion_toggle][fusion_toggle title=”1856: ಮಹಾನ್ ಆಡಳಿತಗಾರ, ಸಮಾಜ ಸೇವಕ ಸರ್. ಕೆ.ಪಿ. ಪುಟ್ಟಣ್ಣಚೆಟ್ಟಿ ಜನನ” open=”no”]ತಮ್ಮ ಜೀವನವನ್ನು ಸಮಾಜದ ಸೇವೆಗಾಗಿಯೇ ಮುಡಿಪಾಗಿಟ್ಟ ಮಹನೀಯರಾದ ದಿವಾನ್ ಸರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರು ಬೆಂಗಳೂರಿನ ಕೃಷ್ಣರಾಜಪುರದಲ್ಲಿ ಜನಿಸಿದರು. ಇವರಿಗೆ ಮೈಸೂರು ಮಹಾರಾಜರ ‘ರಾಜ್ಯಸಭಾ ಭೂಷಣ’ ಪ್ರಶಸ್ತಿ, ಭಾರತ ಸರ್ಕಾರದ ‘ದಿವಾನ್ ಬಹದ್ದೂರ್’ ಪ್ರಶಸ್ತಿ, 1917ರಲ್ಲಿ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್’ ಮತ್ತು 1925ರ ವರ್ಷದಲ್ಲಿ ‘ಕೈಸರ್ ಹಿ ಹಿಂದ್’ ಪದಕ, ಬ್ರಿಟಿಷ್ ಸರ್ಕಾರದ ‘ಸರ್’ ಬಿರುದು ಸಂದಿದ್ದವು. 1921ರಲ್ಲಿ ನಡೆದ ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು 1936ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಮಾರಕೋತ್ಸವದ ಅಧ್ಯಕ್ಷತೆಯ ಗೌರವವೂ ಇವರಿಗೆ ಸಂದಿತು.[/fusion_toggle][fusion_toggle title=”1891: ತಮಿಳು ಕವಿ ಮತ್ತು ಸಾಮಾಜಿಕ ಹೋರಾಟಗಾರ ಭಾರತೀದಾಸನ್ ಜನನ” open=”no”]ತಮಿಳು ಕವಿ ಮತ್ತು ಸಾಮಾಜಿಕ ಹೋರಾಟಗಾರ ‘ಭಾರತೀದಾಸನ್’ ಕಾವ್ಯನಾಮದ ಕನಕಸಭಾಯ್ ಸುಬ್ಬುರತ್ನಂ ಅವರು ಪಾಂಡಿಚೇರಿಯಲ್ಲಿ ಜನಿಸಿದರು.[/fusion_toggle][fusion_toggle title=”1893: ನೊಬೆಲ್ ಪುರಸ್ಕೃತ ರಸಾಯನ ಶಾಸ್ತ್ರಜ್ಞ ಹೆರಾಲ್ಡ್ ಉರೆಯ್ ಜನನ” open=”no”]ಅಮೆರಿಕದ ರಸಾಯನ ಶಾಸ್ತ್ರಜ್ಞ ಹೆರಾಲ್ಡ್ ಉರೆಯ್ ಅವರು ಇಂಡಿಯಾನದ ವಾಕರ್ಟನ್ ಎಂಬಲ್ಲಿ ಜನಿಸಿದರು. ‘ಡಿಯೋಟೆರಿಯಂ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1934 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತ್ತು.[/fusion_toggle][fusion_toggle title=”1919: ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಜನನ” open=”no”]ತಬಲಾ ವಾದನದಲ್ಲಿ ಮಾಂತ್ರಿಕರೂ, ತಾಳ ವಾದ್ಯಕ್ಕೆ ವಿಶ್ವದಲ್ಲೇ ಪ್ರತಿಷ್ಟಿತ ಸ್ಥಾನವನ್ನು ತಂದುಕೊಟ್ಟ ಉಸ್ತಾದ್ ಅಲ್ಲಾ ರಖಾ ಅವರು ರತನ್ ಘರ್ ಎಂಬಲ್ಲಿ ಜನಿಸಿದರು. ಇವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.[/fusion_toggle][fusion_toggle title=”1929: ಸಾಹಿತಿ ಸಿಸು ಸಂಗಮೇಶ ಜನನ” open=”no”]ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿಸು ಸಂಗಮೇಶ ಎಂಬ ಕಾವ್ಯನಾಮದಿಂದ ಹೆಸರಾದ ಸಂಗಮೇಶ ಸಿದ್ದಾಮಪ್ಪನಗೊಂಡ ಅವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಹತ್ತಿರದ ಯಕನಾಳ ಗ್ರಾಮದಲ್ಲಿ ಜನಿಸಿದರು. ಆದರ್ಶ ಶಿಕ್ಷಕ ಪ್ರಶಸ್ತಿ, ‘ನನ್ನ ಮನೆ’ ಮತ್ತು ‘ನನ್ನ ಗೆಳೆಯ ಜಪಾನದ ಟಾರೊ’ ಕೃತಿಗೆ ರಾಷ್ಟ್ರಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ್ದ ಮಕ್ಕಳ ಸಾಹಿತ್ಯ ಸಮಾವೇಶದ ಸರ್ವಾಧ್ಯಕ್ಷತೆ. ಭೂಪಾಲದಲ್ಲಿ ನಡೆದ ಅಖಿಲ ಭಾರತ ಭಾಷಾ ಸಮ್ಮೇಳನದ ‘ಭಾರತ ಭಾಷಾ ಭೂಷಣ ಪ್ರಶಸ್ತಿ’, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.[/fusion_toggle][fusion_toggle title=”1936: ಪ್ರಖ್ಯಾತ ಭಾರತೀಯ ಪಾಶ್ಚಾತ್ಯ ಶೈಲಿಯ ವಿಶ್ವಪ್ರಸಿದ್ಧ ಸಂಗೀತಗಾರ” open=”no”]ಪಾಶ್ಚಾತ್ಯ ಸಂಗೀತ ಸಾಧಕರಲ್ಲಿ ಪ್ರಮುಖ ಭಾರತೀಯರಾದ ಜುಬಿನ್ ಮೆಹ್ತಾ ಅವರು ಮುಂಬೈನಲ್ಲಿ ಜನಿಸಿದರು. ಇಸ್ರೇಲ್ ದೇಶದ ಗೌರವ, ಲಾರಿಯೇಟ್ ಆಫ್ ವುಲ್ಫ್ ಪ್ರೈಜ್ ಇನ್ ಆರ್ಟ್ಸ್ವ, ಯುಕ್ತ ರಾಷ್ಟ್ರಗಳ ಒಕ್ಕೂಟದ ‘ಶಾಂತಿ ಮತ್ತು ಸೌಹಾರ್ದತೆಯ ಜೀವಮಾನ ಸಾಧನೆಗಾಗಿನ ಗೌರವ’, ಭಾರತ ಸರ್ಕಾರದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಗೌರವಗಳು ಇವರಿಗೆ ಸಂದಿವೆ.[/fusion_toggle][fusion_toggle title=”1958: ಭಾರತೀಯ ಇತಿಹಾಸಜ್ಞ ರಾಮಚಂದ್ರ ಗುಹಾ ಜನನ” open=”no”]ಭಾರತೀಯ ಇತಿಹಾಸಜ್ಞ ರಾಮಚಂದ್ರ ಗುಹಾ ಅವರು ಡೆಹ್ರಾಡೂನ್ ಪಟ್ಟಣದಲ್ಲಿ ಜನಿಸಿದರು. ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಗಳಲ್ಲದೆ ಅನೇಕ ಅಂತರರಾಷ್ಟ್ರೀಯ ಗೌರವಗಳೂ ಇವರಿಗೆ ಸಂದಿವೆ.[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1236: ದೊರೆ ಇಲ್ತಮಿಷ್ ನಿಧನ” open=”no”]ಭಾರತದ ಪ್ರಮುಖ ದೊರೆಗಳಲ್ಲಿ ಒಬ್ಬರಾದ ಗುಲಾಮ ಮನೆತನದ ಮೂರನೇ ಇಲ್ತಮಿಷ್ ಮೃತರಾದರು. ಇಲ್ತಮಿಷ್ ಗುಲಾಮನಾಗಿ ತನ್ನ ಬದುಕು ಆರಂಭಿಸಿದರೂ ತನ್ನ ಯಜಮಾನ ಕುತ್ಬ್-ಉದ್-ದಿನ್ ಐಬಕ್ನ ಪುತ್ರಿಯನ್ನು ಮದುವೆಯಾದ. ನಂತರ 1211ರಲ್ಲಿ ಐಬಕ್ನ ಉತ್ತರಾಧಿಕಾರಿಯಾದ. ಈತ ದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಲ್ಲಿ ಕುತುಬ್ ಮಿನಾರ್ ಕಟ್ಟಿಸಿದ.[/fusion_toggle][fusion_toggle title=”1937: ನೈಲಾನ್ ಕಂಡುಹಿಡಿದ ವ್ಯಾಲೇಸ್ ಕಾರೋಥೆರ್ಸ್ ಆತ್ಮಹತ್ಯೆ” open=”no”]ವ್ಯಾಲೇಸ್ ಕಾರೋಥೆರ್ಸ್ ಆತ್ಮಹತ್ಯೆ ಮಾಡಿಕೊಂಡ. ಇದಕ್ಕೆ ಕೇವಲ ಎರಡು ತಿಂಗಳು ಮೊದಲು ಆತ ನೈಲಾನ್ ಪೇಟೆಂಟ್ ಪಡೆದಿದ್ದ.[/fusion_toggle][/fusion_accordion]