ಈ ಯೋಜನೆಯನ್ನು ಸಿದ್ಧಪಡಿಸಲು ಹಾಗೂ ಪ್ರಕಟಿಸಲು ಅನೇಕರು ನೆರವಾಗಿದ್ದಾರೆ.

ಈ ಯೋಜನೆಯನ್ನು ರೂಪಿಸಲು ಪ್ರೋತ್ಸಾಹ ನೀಡಿದ ಹಿಂದಿನ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರಿಗೆ ಹಾಗೂ ಇಂದಿನ ನಮ್ಮ ಪ್ರೀತಿಯ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರಿಗೆ,

ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸ್ಫೂರ್ತಿ ಹಾಗೂ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸಿದ ಕುಲಸಚಿವರಾದ ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ, ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ, ಈ ಪ್ರಕಟಣೆಯನ್ನು ಹೊರತರುತ್ತಿರುವ ಡಾ. ಹಿ.ಚಿ. ಬೋರಲಿಂಗಯ್ಯ ಅವರಿಗೆ ಹಾಗೂ ನನ್ನಲ್ಲಿರುವ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತಾ ಬಂದಿರುವ ಪ್ರೊ. ಅಂಬಳಿಕೆ ಹಿರಿಯಣ್ಣ, ಪ್ರೊ. ಕಾಳೇಗೌಡ ನಾಗವಾರ, ಪ್ರೊ. ಕೆ. ಚಿನ್ನಪ್ಪಗೌಡ, ಪ್ರೊ. ಜಯಪ್ರಕಾಶಗೌಡ, ಪ್ರೊ. ವೀರಣ್ಣದಂಡೆ, ಪ್ರೊ. ಡಿ.ಬಿ. ನಾಯಕ ಅವರಿಗೆ,

ಈ ಪುಸ್ತಕದ ರಚನೆಯ ಸಂದರ್ಭದಲ್ಲಿ ಮಾಹಿತಿಗಳನ್ನು ನೀಡಿದ ವಿದ್ವಾಂಸರಾದ ಶ್ರೀ ವಿ.ಎನ್. ಶಿವರಾಮು, ತೈಲೂರು ವೆಂಕಟಕೃಷ್ಣ ಅವರಿಗೆ ಹಾಗೂ ಅರಕೆರೆ ಗ್ರಾಮಸ್ಥ ಜನತೆಗೆ ಮತ್ತು ಕ್ಷೇತ್ರಕಾರ್ಯ ಸಂದರ್ಭದಲ್ಲಿ ಸಹಕರಿಸಿದ ನನ್ನ ಅಣ್ಣನ ಮಗ ಮಂಜುನಾಥ ಮತ್ತು ಅವರ ಕುಟುಂಬ ವರ್ಗದವರಿಗೆ,

ಈ ರೀತಿಯ ಬರಹಗಳನ್ನು ಹಿಂದಿನಿಂದಲೂ ಪ್ರೋತ್ಸಾಹಿಸುತ್ತಿರುವ ಪ್ರೊ. ಲಕ್ಷ್ಮಣ್ ತೆಲಗಾವಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಪ್ರೊ. ದೇವರಕೊಂಡಾರೆಡ್ಡಿ, ಪ್ರೊ. ಟಿ.ಪಿ. ವಿಜಯ್, ಡಾ. ಪಾಂಡುರಂಗಬಾಬು, ಡಾ. ಸಿ. ಮಹದೇವ, ಡಾ. ಕೆ.ಸಿ. ಶಿವಾರೆಡ್ಡಿ, ಡಾ. ಸಿ.ಆರ್. ಗೋವಿಂದರಾಜು ಅವರಿಗೆ,

ಈ ಪುಸ್ತಕವನ್ನು ರೂಪಿಸಲು ಸಹಕರಿಸಿದ ವಿಭಾಗದ ಸಹದ್ಯೋಗಿ ಸ್ನೇಹಿತರಾದ ಡಾ. ಮಂಜುನಾಥ ಬೇವಿನಕಟ್ಟಿ, ಡಾ. ಸ.ಚಿ. ರಮೇಶ್, ಡಾ. ಮೊಗಳ್ಳಿ ಗಣೇಶ್, ಡಾ. ಹೆಬ್ಬಾಲೆ ಕೆ. ನಾಗೇಶ್, ಡಾ. ಹರಿಶ್ಚಂದ್ರ ದಿಗ್ಸಂಗಿಕರ ಅವರಿಗೆ ಹಾಗೂ ನನ್ನ ಬರಹಗಳಿಗೆ ಇಂಬು ನೀಡುತ್ತಿರುವ ಸಮಾನ ಮನಸ್ಕರಾದ ಡಾ. ಮಾಧವ ಪೆರಾಜೆ, ಶ್ರೀ ಸಿ. ವೆಂಕಟೇಶ, ಶ್ರೀ ಎ.ಎನ್. ಪ್ರಭಾಕರ ಅವರಿಗೆ ಹಾಗೂ ವಿಶ್ವವಿದ್ಯಾಲಯದ ಅಧ್ಯಾಪಕ ವರ್ಗದವರಿಗೆ.

ಪುಸ್ತಕದ ಪುಟವಿನ್ಯಾಸವನ್ನು ರೂಪಿಸಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿಯವರಿಗೆ, ಅಕ್ಷರ ಸಂಯೋಜನೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟ ಶ್ರೀ ಜೆ. ಬಸವರಾಜ ಅವರಿಗೆ, ಮುಖಪುಟ ಚೆನ್ನಾಗಿರುವಂತೆ ಕಾಳಜಿ ವಹಿಸಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಸಿ.ಟಿ. ಗುರುಪ್ರಸಾದ್