ಭೂಮಿ ಆಧಾರಿತ ಕೃಷಿ ನಾಡುಗಳು

ಫ್ಯೂನಾನ್ ಹಾಗೂ ಚೌಲಾಗಳ ತರುವಾಯ ಕೃಷಿಗೆ ಪ್ರಾಧಾನ್ಯ ನೀಡಿದ ಖಮರ್ ಸಾಮ್ರಾಜ್ಯ ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗಗಳ ಹಿಡಿತಕ್ಕೊಳಗಾಗದೇ ಕೃಷಿಯನ್ನೇ ಆಧರಿಸಿದ ವಿಭಿನ್ನ ಬಗೆಯ ನಾಡಾಗಿತ್ತು. ನಾವಿಕರ ಸಾಮರ್ಥ್ಯ ಬೆಳೆದಂತೆ ಹಡಗುಗಳು ಚೀನಾದಿಂದ ನೆಯರವಾಗಿ ಮಲಕ್ಕಾ ಜಲಸಂಧಿಗೆ ಹೋಗತೊಡಗಿದಂತೆ ಬಂದರು ಸೌಕರ್ಯವುಳ್ಳ ನಾಡೆಂದು ಫ್ಯೂನಾನ್‌ಗಿದ್ದ ಮಹತ್ವ ಕುಗ್ಗಿತು. ತತ್ಪರಿಣಾಮವಾಗಿ ಕೃಷಿ ಉತ್ಪಾದನೆಯಿಂದ ಬರುವ ಆದಾಯವನ್ನು ಹೆಚ್ಚಿಸಿಕೊಳ್ಳಲು ಉದ್ಯುಕ್ತವಾಗಿ, ಗ್ರಾಮೀಣ ಕೃಷಿ ಉದ್ಯೋಗವನ್ನು ಬಲಪಡಿಸಲು ತನ್ನ ಅಧಿಕಾರವನ್ನು ಬಳಸಿಕೊಂಡಿತು. ಈ ಬದಲಾವಣೆಯ ಕಾರ್ಯದಲ್ಲಿ ಫ್ಯೂನಾನ್ ಪೂರ್ತಿ ಯಶಸ್ವಿಯಾಗದಿದ್ದರೂ ಹಾಗೂ ನಶಿಸಿ ಹೋದರೂ(ಅದರ ಪೂರ್ವದ ಪ್ರದೇಶಗಳು ಇನ್ನೊಂದು ನಾಡಾದ ಚೌಲಾಕ್ಕೆ ಸೇರಿದವು. ಪಶ್ಚಿಮ ಭಾಗದ ಮೇಲೆ ಮಾನ್ ಸೈನ್ಯ ದಾಳಿ ಮಾಡಿ ಗೆದ್ದುದರಿಂದ ಅದು ಹಲವಾರು ಪಂಗಡಗಳಾಗಿ ವಿಭಜಿತವಾಯಿತು) ಖಮರ್ ಫ್ಯೂನಾನ್ ಪ್ರದೇಶವನ್ನು ಹಾಗೂ ಅದರ ಸಂಕೀರ್ಣ ಕೃಷಿ ವ್ಯವಸ್ಥೆಯನ್ನು ಸಂಪಾದಿಸಿತು. ಅಲ್ಲಿಯ ಜನರು ಅದೇ ಪ್ರದೇಶದಲ್ಲಿ ನೆಲೆಸಿ, ನೈಸರ್ಗಿಕ ತಗ್ಗು ಪ್ರದೇಶಗಳಲ್ಲಿ ನೀರು ಹಿಡಿದಿಡಲು-ಅಣೆಕಟ್ಟುಗಳನ್ನು ಬಳಿಸಿ ಮಾನ್ಸೂನ್ ಮಳೆಯ ಪ್ರವಾಹವನ್ನು ನಿಯಂತ್ರಿಸಿದರು. ಸಿಂಹಾಸನಕ್ಕೆ ರಾಜನಿಗಿದ್ದ ಅಧಿಕಾರವನ್ನು ಬೆಂಬಲಿಸುವುದಕ್ಕಾಗಿ ಖಿಮರ್ ಹಿಂದೂ ಸಂಪ್ರದಾಯಗಳನ್ನು ಬಳಸಿತು.

ಖಿಮ್ ನಾಗರಿಕತೆ ಬೆಳೆದಂತೆ ಅದರ ಕೃಷಿ ಹಾಗೂ ನೀರು ನಿರ್ವಹಣೆಯ ತಾಂತ್ರಿ ಕತೆಗಳೂ ಸಂಕೀರ್ಣವಾದವು. ಉದಾಹರಣೆಗೆ ಕ್ರಿ.ಶ.೮೮೯ರ ವೇಳೆಗೆ ಸಿಂರೀಪ್ ನದಿಯ ದಿಕ್ಕನ್ನು ಬದಲಿಸಿ ಒಂದು ಕೃತಕ ಸರೋವರವನ್ನು ನಿರ್ಮಿಸಿತು. ಈ ಸರೋವರದ ಉದ್ದಗಲ ೧೮೦೦ ಮೀ. ಹಾಗೂ ೧೦೦೦ ಮೀಟರುಗಳಾಗಿದ್ದು, ನೀರಾವರಿಗಷ್ಟೇ ಅಲ್ಲದೇ ನಗರಗಳಿಗೂ ಮಠಗಳಿಗೂ ನೀರು ಒದಗಿಸಿತು. ಕ್ರಿ.ಶ.೧೦೦೦ದ ವೇಳೆಗೆ ಖಿಮ್ಸ್‌ನಲ್ಲಿ ಹೈಡ್ರಾಲಿಕ್ ಪ್ರಗತಿ ಕಂಡಿತು.

ಈ ಪ್ರಗತಿಯ ಮುಖ್ಯ ಅಂಶವೆಂದರೆ ಜನಸಂಖ್ಯೆಯಲ್ಲಿನ ಸ್ಥಿರತೆ ಹಾಗೂ ನೀರಾವರಿ ವ್ಯವಸ್ಥೆ ಸುಗಮವಾಗಿ ಸಾಗುವಂತೆ ಮಾಡುವುದಕ್ಕಾಗಿ ಅಗತ್ಯವಿದ್ದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆ. ಬತ್ತದ ಬೆಳೆಯಲ್ಲಾಗಲೀ ಹಳೆಯ ಆಗ್ನೇಯ ಏಷ್ಯಾದ ರಾಜಕೀಯ ಘಟಕಗಳಾಗಲೀ ಪೂರ್ವದ ನಿರಂಕುಶ ಪ್ರಭುತ್ವದ ಅಧಿಕಾರವನ್ನು ಪ್ರದರ್ಶಿಸದಿದ್ದರೂ, ಅಂಥ ನಿಯಂತ್ರಣವನ್ನು ಕಾಪಾಡಿಕೊಂಡು ಬರಲಾಗಿತ್ತು ಎಂಬುದು ನೀರಾವರಿ ಕೃಷಿಯ ನಿಯಂತ್ರಣದಲ್ಲಿ ಹಾಗೂ ಅಧಿಕಾರಯುತ ರಾಜಕೀಯ ವ್ಯವಸ್ಥೆಯಲ್ಲಿ ಒಡೆದು ಕಾಣು ತ್ತದೆ. ಸಾಮಾಜಿಕ ಸ್ಥಿರತೆ ಹಾಗೂ ಸಂಘಟನೆಯಿಂದಾಗಿ ಖಿಮ್ಸ್ ನಾಗರಿಕತೆಯ ಉತ್ಕೃಷ್ಟ ಸ್ಮಾರಕವಾದ ಅಂಕೋರವಾಟ್‌ನಂಥ ನಗರದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪ್ರಗತಿಗಾಗಿ ಸಂಪನ್ಮೂಲಗಳನ್ನು ಸಂಪಾದಿಸಲು ಸಾಧ್ಯವಾಯಿತು. ಫ್ಯೂನಾನ್ ಅವನತಿಗೂ ಜವಾದಲ್ಲಿ ಶೈಲೇಂದ್ರ ಅರಸರು ಕಾಣಿಸಿಕೊಂಡುದಕ್ಕೂ ರುಜುವಾತು ಮಾಡಲಿಕ್ಕಾಗದಿದ್ದರೂ ಯಾವುದೋ ಸೂಚ್ಯ ಸಂಬಂಧವಿದೆ. ಎರಡು ಘಟನೆಗಳೂ ಒಂದೇ ಕಾಲಕ್ಕೆ- ೭ನೆಯ ಶತಮಾನದ ಆದಿಯಲ್ಲಿ ನಡೆದವು. ಎರಡೂ ರಾಜವಂಶಗಳ ಹೆಸರು ಪರ್ವತರಾಜ ಎಂಬರ್ಥವನ್ನೇ ಕೊಡುತ್ತಿತ್ತು. ಶೈಲೇಂದ್ರ ವಂಶದ ದೊರೆ ಸಂಜಯನು ಫ್ಯೂನಾನ್‌ನ ರಾಜ್ಯಭ್ರಷ್ಟ ರಾಜಕುಮಾರರ ವಂಶದವನೆಂಬ ನಂಬಿಕೆಯಿದೆ. ಶೈಲೇಂದ್ರನು ಕೂಡ ಫ್ಯೂನಾನ್ ಹಾಗೂ ಆ ತರುವಾಯದ ಖಾರ್ ಸಾಮ್ರಾಜ್ಯಗಳಂತೆ ಕೃಷಿ ಪ್ರಧಾನ ನಾಡಾಗಿದ್ದು ಉತ್ಪಾದನೆಗಾಗಿ ಮಾನವ ಸಂಪನ್ಮೂಲವನ್ನು ಸಮೃದ್ಧವಾಗಿ ಹೊಂದಿದ್ದರು.

ಶೈಲೇಂದ್ರರಿಗೆ ರಾಜ್ಯ ವಿಸ್ತರಣೆಯ ಆಕಾಂಕ್ಷೆ ಇತ್ತು. ಖಿಮ್ ಸಾಮ್ರಾಜ್ಯದ ೧೧ನೆಯ ಜಯವರ್ಮನ್‌ನು ಶೈಲೇಂದ್ರರ ನೆರವಿನಿಂದಲೇ ಪಟ್ಟಕ್ಕೇರಿದನು. ಶೈಲೇಂದ್ರನು ಕ್ರಿ.ಶ.೭೭೫ರಲ್ಲಿ ಲಿಗೋರ್ ಮೇಲೆಯೂ ಕ್ರಿ.ಶ.೭೮೨ರಲ್ಲಿ ಚಾಮ್ ರಾಜಧಾನಿಯ ಮೇಲೆಯೂ ದಾಳಿ ಮಾಡಿದ ಬಗ್ಗೆ ದಾಖಲೆಗಳಿವೆ. ಅಂತಾರಾಷ್ಟ್ರೀಯ ಸಮುದ್ರ ವ್ಯಾಪಾರದ ಕುರಿತು ಶೈಲೇಂದ್ರರಿಗಿದ್ದ ಆಸ್ಥೆಯ ಕಾರಣದಿಂದಾಗಿಯೇ ಶ್ರೀವಿಜಯದೊಂದಿಗೆ ವೈರ ಉಂಟಾಯಿತು. ೯ನೆಯ ಶತಮಾನದ ವೇಳೆಗೆ ಶೈಲೇಂದ್ರರು ವಿವಾಹದ ಮೂಲಕ ಶ್ರೀವಿಜಯದ ಮೇಲೆ ಅಧಿಕಾರ ಸ್ಥಾಪಿಸಿದರು.

ಶೈಲೇಂದ್ರರು ಕ್ರಿ.ಶ.೭೩೨ರ ತರುವಾಯ ಮಧ್ಯ ಹಾಗೂ ಪೂರ್ವ ಜವಾದಲ್ಲಿ ಮಾತರಂನ್ನು ಆಳಿರುವುದಾಗಿ ತಿಳಿದುಬರುತ್ತದೆ. ಈ ಸಮಯದಲ್ಲಿ, ಮೊದಲು ಮಹಾಯಾನ ಬೌದ್ಧಧರ್ಮದ ಮೂಲಕ ತರುವಾಯ ಹಿಂದೂ ಧರ್ಮದ ಮೂಲಕ ಜವಾದ ತುಂಬೆಲ್ಲ ಭಾರತೀಯ ಸಂಸ್ಕೃತಿ, ತತ್ವಜ್ಞಾನ ಹಾಗೂ ಧರ್ಮದ ಪ್ರಭಾವ ಉಂಟಾಯಿತು. ಜವಾದ ಮಾತರಂ, ಒಳನಾಡಿನಲ್ಲಿದ್ದ ಕೃಷಿ ಪ್ರಾಂತ್ಯವಾಗಿದ್ದು ತನ್ನ ಸಂಪನ್ಮೂಲಗಳು ಹಾಗೂ ಮಾನವಶಕ್ತಿಯನ್ನು, ಮಧ್ಯ ಜವಾದ ತುಂಬೆಲ್ಲ ಕಂಡುಬರುವ ದೇವಾಲಯಗಳ ನಿರ್ಮಿತಿಯಲ್ಲಿ ಎದ್ದು ಕಾಣುವ ಉತ್ಕೃಷ್ಟ ಮಾದರಿಯ ವಾಸ್ತುಶಿಲ್ಪಕ್ಕಾಗಿ ಬಳಸಿತು. ರಾಜಮನೆತನದವರ ಸಮಾಧಿಗಳಂತೆ ಕಟ್ಟಿರುವ ಈ ದೇವಾಲಯಗಳು ಜವಾದಲ್ಲಿ ೮ನೆಯ ಶತಮಾನದಲ್ಲಿದ್ದ ಜನಜೀವನವನ್ನು ಪ್ರತಿಬಿಂಬಿಸುತ್ತವೆ. ೮ನೆಯ ಶತಮಾನದ ಅಂತ್ಯದ ವೇಳೆಗೆ ಮಾತರಂದಲ್ಲಿ ಬೌದ್ಧಧರ್ಮದ ಪ್ರಾಬಲ್ಯ ಕುಗ್ಗಿ ಹಿಂದೂ ಧರ್ಮ ಬಂದಿತು. ಆದರೆ ಮಧ್ಯ ಜವಾದಲ್ಲಿ ದೇವಸ್ಥಾನಗಳ ಅಭಿವೃದ್ದಿ ಹೆಚ್ಚಾಗಿಯೇ ಇದ್ದು, ಇದಕ್ಕೆ ಪ್ರಂಬನಂ ಕಟ್ಟಡ ಸಂಕೀರ್ಣ ಉತ್ತಮ ನಿದರ್ಶನ. ೧೦ನೆಯ ಶತಮಾನದ ಆದಿಯಲ್ಲಿ ಮಾತರಂನ ರಾಜಧಾನಿ ಮಧ್ಯಜವಾಕ್ಕೆ ಸ್ಥಳಾಂತರಗೊಂಡಿತು. ಅಲ್ಲಿಯೇ, ಈಗಿನ ಬಾಲಿಗಳ ಶಿವ-ಬುದ್ಧ ಕಲ್ಪನೆ ಹುಟ್ಟು ಪಡೆಯಿತು.

ಜವಾದಲ್ಲಿ ಮಾತರಂ ಅವನತಿ ಹೊಂದುವ ವೇಳೆಗೆ ಬರ್ಮಾದಲ್ಲಿ, ಬರ್ಮಿಯರು ಹಾಗೂ ಮಾನ್‌ರ ಗೆಳೆತನದ ಪರಿಣಾಮವಾಗಿ ಪೆಗನ್ ಎಂಬ ಪ್ರಾಂತ ಹುಟ್ಟಿತು. ಬರ್ಮಿಯರಿಗೆ ಎಲ್ಲ ವಿಧದ ಶಕ್ತಿಗಳು ಹಾಗೂ ಮೂಢನಂಬಿಕೆಗಳ ಬಗ್ಗೆ ಶ್ರದ್ಧೆ, ಇತ್ತು; ಮಾನ್‌ರಷ್ಟು ಇವರು ಸಾಂಸ್ಕೃತಿಕವಾಗಿ ಮುಂದುವರಿದವರಲ್ಲ. ಆದರೆ ಸೈನ್ಯ ಹಾಗೂ ರಾಜಕೀಯದಲ್ಲಿ ಮುಂದಾಳತ್ವ ವಹಿಸಿದರು. ಮಾನ್‌ರ ಕಾರಣದಿಂದಾಗಿ ಅಲ್ಲಿ ಬೌದ್ಧಮತ ಬೆಳೆದು ಕಾನೂನು ಹಾಗೂ ಶಿಕ್ಷಣ ಕ್ಷೇತ್ರಗಳಲ್ಲೂ ವ್ಯಾಪಾಸಿತು. ಬೌದ್ಧ ಸನ್ಯಾಸಿಗಳ ಸಂಘ ಪರಿಕಲ್ಪನೆ ಹೆಚ್ಚಿನ ಪ್ರಭಾವ ಬೀರಿತು. ೧೨೮೧ರಲ್ಲಿ ಕುಬ್ಲಾಖಾನ್ ಬರ್ಮಾದ ಮೇಲೆ ದಾಳಿ ಮಾಡುವವರೆಗೂ ಪೆಗನ್ ಇತ್ತು.

ಖಿಮರ್ ಸಾಮ್ರಾಜ್ಯ ದುರ್ಬಲವಾದಂತೆ ಥಾಯ್ ಜನರು ಆಗ್ನೇಯ ಏಷ್ಯಾ ಮುಖ್ಯ ಬಾಗದ ಪ್ರದೇಶಗಳಲ್ಲಿ ಸ್ವತಂತ್ರವಾದ ಸಾಂಸ್ಕೃತಿಕ ಹಾಗೂ ರಾಜಕೀಯ ಅಸ್ತಿತ್ವವನ್ನು ನೆಲೆಗೊಳಿಸಿದರು. ಮಂಗೋಲ ದಾಳಿಯ ತರುವಾಯ (೧೨೫೩-೧೨೯೩) ಥಾಯ್ ಸೇನಾಪತಿಯೊಬ್ಬ ಖಿಮರ್ ರಾಜರ ವಿರುದ್ಧ ದಂಗೆ ಎದ್ದು ಸುಖತೊಯ್ ಎಂಬಲ್ಲಿ ಹೊಸ ರಾಜ್ಯ ಸ್ಥಾಪಿಸುವವರೆಗೆ, ಮೀನಂ ಬಯಲು ಪ್ರದೇಶದಲ್ಲಿ ರಾಜಕೀಯ ಅಧಿಕಾರ ವುಳ್ಳ ಹಲವಾರು ಸಂಘಟನೆಗಳು ಇದ್ದಂತೆ ಕಂಡುಬರುತ್ತದೆ. ಸುಖತೊಯ್ ರಾಜರು ಪೀಕಿಂಗ್‌ನಲ್ಲಿದ್ದ ಮಂಗೋಲರಿಗೆ ಕಾಣಿಕೆ ಕಳಿಸಿ ಜಣ್ಮೆ ತೋರಿ, ಮಂಗೋಲರಿಂದ ಒದಗಬಹುದಾಗಿದ್ದ ಹಗೆತನ ಹಾಗೂ ದಾಳಿಯಿಂದ ಪಾರಾದರು. ಕ್ರಿ.ಶ.೧೩೫ರ ವೇಳೆಗೆ ಥಾಯ್‌ನ ರಾಜಕೀಯ ಗುರುತ್ವಾಕರ್ಷಣ ದಕ್ಷಿಣದಲ್ಲಿದ್ದ ಆಯುಧ್ಯಾದತ್ತ ತಿರುಗಿ ಉತ್ತರಕ್ಕಿದ್ದ ಸುಖೋತಾಯ್ ಹಾಗೂ ಚಿಂಗನೈಗಳಿಗೆ ಗ್ರಹಣ ಹಿಡಿಸಿತು.

ಕನ್ಪ್ಯೂಶಿಯನ್ ಅಧಿಕಾರಾರೂಢ ಪ್ರಾಂತ್ಯಗಳು

ಕ್ರಿಸ್ತಪೂರ್ವ ೨೦೦ರಿಂದ ಚೀನಿಯರ ವಶದಲ್ಲಿದ್ದ ವಿಯಟ್ನಾಮ್, ಟಾನ್‌ಕಿನ್ ಅನ್ನಮ್ ಪ್ರದೇಶಗಳ ಉತ್ತರ ಭಾಗಗಳು ವಿಲಕ್ಷಣ ಸ್ವರೂಪವನ್ನು ಹೊಂದಿದ್ದವು. ಕ್ರಿಸ್ತಶಕ ೯೦೦ರವರೆಗೆ ಇದು ಮುಂದುವರೆಯಿತು. ಈ ಅವಧಿಯುದ್ದಕ್ಕೂ ವಿಯಟ್ನಾಮ್ ಚೀನಾದ ಒಂದು ಪ್ರಾಂತ್ಯವೆಂಬಂತೆಯೇ ಆಳ್ವಿಕೆಗೆ ಒಳಪಟ್ಟಿತ್ತು. ಚೀನೀಯರ ಅಧಿಕಾರ ಹಾಗೂ ಸಾಂಸ್ಕೃತಿಕ ಪ್ರಭಾವ ಇದ್ದರೂ ವಿಯಟ್ನಾಮ್ ತನ್ನ ಸಾಂಸ್ಕೃತಿಕ ವೈಶಿಷ್ಷ್ಯವನ್ನುಳಿ ಕೊಂಡು ತನ್ನ ಸ್ವಾತಂತ್ರ್ಯ ಹಾಗೂ ಸ್ವತಂತ್ರ ಅಸ್ತಿತ್ವವನ್ನು ಕಾಯ್ದುಕೊಂಡಿತು.

೧೦ನೆಯ ಶತಮಾನದ ಆಧಿಭಾಗದಲ್ಲಿ ಟಾಂಗ್-ಚೈನಾ ಅವಸಾನ ಹೊಂದಿದ ಸಮಯದಲ್ಲಿ ವಿಯಟ್ನಾಮ್ ಸ್ವತಂತ್ರವಾಯಿತು.(ಕ್ರಿಸ್ತಶಕ ೪೩೯). ವಿಯಟ್ನಾಮ್ ಸ್ವತಂತ್ರವಾಗಿದ್ದರೂ ಅದರ ಉತ್ತರ ಭಾಗಕ್ಕೆ ಚೀನೀಯರ ಬೆದರಿಕೆ ಇದ್ದು ಹಾಗೂ ದಕ್ಷಿಣದಲ್ಲಿ ಹಿಂದು ಜಂಗ್ ಪ್ರಾಂತ್ಯದಿಂದ ಬೆದರಿಕೆ ಇತ್ತು. ಕೊನೆಯಲ್ಲಿ ವಿಯಟ್ನಾಮ್ ಶಕ್ತಿಶಾಲಿಯಾಗಿ ಚಾಮರ ವಿರುದ್ಧ ಆಕ್ರಮಣ ಮಾಡಿತು. ವಿಯಟ್ನಾಮ್ ಸ್ವತಂತ್ರವಾಗುವ ವೇಳೆಗೆ, ಅಲ್ಲಿಯ ಸ್ಥಳೀಯ ಪ್ರದೇಶಗಳಲ್ಲಿ ಬೌದ್ಧ ಧರ್ಮ ಬೆಳೆದು ತತ್ಪರಿಣಾಮವಾಗಿ ಚೀನಾದ ಬೌದ್ಧ ಮತೀಯರ ವಿರುದ್ಧ ಪ್ರತಿಭಟನೆ ಬೆಳೆಯಿತು. ವಿಯಟ್ನಾಮ್ , ನೈರುತ್ಯ ಏಷ್ಯಾದಲ್ಲಿ ಇದ್ದುದರಿಂದ ಅಲ್ಲಿಯ ಹಿಂದೂ ಧರ್ಮ ಹಾಗೂ ರಾಜಸ್ಥಾನದ ನಡುವೆ ರಾಜಕೀ ಸಂಬಂಧ ಬೆಳೆಯಲೇ ಇಲ್ಲ. ಚೀನಾದಿಂದ ಹೊರತಾಗಿ ವಿಯಟ್ನಾಮ್ ತನ್ನ ಸ್ವಾತಂತ್ರ್ಯವನ್ನು ಕಾಯ್ದುಕೊಂಡರೂ ಅಲ್ಲಿಯ ರಾಜಧಿಕಾರ ಹಾಗೂ ಆಡಳಿತ ಸ್ವರೂಪ ಚೀನಾದಲ್ಲಿಯ ವ್ಯವಸ್ಥೆಯನ್ನೇ ಬಹುಮಟ್ಟಿಗೆ ಹೋಲುತ್ತಿತ್ತು.

ದಕ್ಷಿಣದ ಕಡೆಗೆ ವಿಯಟ್ನಾಮಿನ ವಿಸ್ತಾರ ವಿಧಾನವಾಗಿದ್ದರೂ ನಿರಂತರವಾಗಿ ಸಾಗಿದ್ದು ಇದು ಕ್ರಿಸ್ತಶಕ ೧೦೦೯ರಲ್ಲಿ ಲೀ ರಾಜ ವಂಶದಿಂದ ಪ್ರಾರಂಭವಾಯಿತು. ದಕ್ಷಿಣದ ಕಡೆಗೆ ಈ ವಿಸ್ತರಣೆ ಮೊದಲು ೧೦೬೯ರಲ್ಲಿ ಆಗಿರುವುದಕ್ಕೆ ಐತಿಹಾಸಿಕ ದಾಖಲೆ ಲಭ್ಯದ್ದು, ಜಮ್ ಪ್ರಾಂತ್ಯ ಪರಾಭವಗೊಂಡ ಮೇಲೆ ಅದರ ಉತ್ತರದ ೨ ಪ್ರಾಂತಗಳನ್ನು ವಿಯಟ್ನಾಮಿಗೆ ಸೇರಿಸಲಾಯಿತು. ವಿಯಟ್ನಾಮೀಯರು ಸುಮಾರು ೫೦೦ ವರ್ಷಗಳಿಂದ ದಕ್ಷಿಣದಲ್ಲಿ ಈ ಬಗ್ಗೆ ಒತ್ತಡ ತಂದಿದ್ದು, ೧೫೪೩ರಲ್ಲಿ ಚೀನಿ ದಾಖಲೆಗಳಿಂದ ಚಾಮ್ ಪ್ರಾಂತ್ಯ ಮರೆಯಾಗುವವರೆಗೆ ನಡೆದೇ ಇತ್ತು.

ಇಂಡೋ-ಚೀನಾದ ಪೂರ್ವದ ಕರಾವಳಿಯುದ್ದಕ್ಕೂ ವಿಯಟ್ನಾಮೀಯರ ಬಲ ಒಗ್ಗೂಡಿದ್ದು ಈಗಿರುವ ಲಾವೊಸ್ ಹಾಗೂ ಕಾಂಬೋಡಿಯರ ಪ್ರದೇಶಗಳು ಪಶ್ಚಿಮದಲ್ಲಿ ಥಾಯಿಗಳನ್ನು ಪೂರ್ವದಲ್ಲಿ ವಿಯಟ್ನಾಮಿಯರನ್ನು ತಡೆದವು. ಕಾಂಬೋಡಿಯ ಅಥವಾ ಲಾವೋಸ್ ದ ಸೈನ್ಯ ದಳದ ವಿರುದ್ಧ ವಿಯಟ್ನಾಮಿನಲ್ಲಿ ರಾಜವಂಶಗಳ ಪ್ರತಿಸ್ಪರ್ಧೆ ನಡೆದಿದ್ದು ೧೫೦೦ರ ಮಧ್ಯಭಾಗದಿಂದ ೩ ಶತಮಾನಗಳ ಅವಧಿಯಲ್ಲಿ ವಿಯಟ್ನಾಮಿನಲ್ಲಿ ಫ್ರೆಂಚರ ಆಗಮನದವರೆಗೆ ಪ್ರಕ್ಷುಬ್ಧ ವಾತಾವರಣವಿತ್ತು. ನೈರುತ್ಯ ಏಷ್ಯಾದ ಇತಹಾಸದ ಮಟ್ಟಿಗೆ ವಿಯಟ್ನಾಮಿಯರು ಈ ಅವಧಿಯಲ್ಲಿ ದಕ್ಷಿಣ ಪ್ರದೇಶದ ಆಂದೋಲನವನ್ನು ಕೈಗೊಂಡು ವಿಯಟ್ನಾಮ್ ಪ್ರದೇಶಕ್ಕೆ ಹೊಸ ಭಾಗಗಳನ್ನು ಸೇರಿಸಿಕೊಂಡ ಮಹತ್ವದ ಅವಧಿಯಾಗಿತ್ತು. ರಾಜ ವಂಶದಲ್ಲಿಯ ಸಂಘರ್ಷಗಲು ಯುದ್ಧ, ಧರ್ಮಸಂಬಂಧ ದ್ವೇಷ ಹಾಗೂ ವಸಾಹತು ರಾಜ್ಯಗಲ ಅಳಿಕೆಗಳಿಂದಾಗಿ ಉಂಟಾದ ಅಸ್ಥಿರತೆಯಿಂದಾ ವಿಯಟ್ನಾಮಿ ಕೃಷಿಕರು ಪಶ್ಚಿಮದ ಕಡೆಗೆ ಹರಡುವಂತಾಯಿತು. ಫ್ರೆಂಚರು ಈ ಆಂದೋಲನಗಳನ್ನು ನಿಲ್ಲಿಸುವವರೆಗೆ ವಲಸೆಗಾರ ರೈತರಿಗೆ ರಾಜಶ್ರಯ ಹಾಗೂ ಸೈನ್ಯದ ಬೆಂಬಲ ಇದ್ದೇ ಇತ್ತು.

ವಿಯಟ್ನಾಮಿನ ಮೇಲೆ ಚೀನಾದ ವೈಶಿಷ್ಟ್ಯಗಳ ಪ್ರಭಾವ ಇತರ ನೈರುತ್ಯ ಏಷ್ಯಾದ ಸಂಸ್ಕೃತಿಗಳ ಮೇಲೆ ಆದಷ್ಟೇ ಆಗಿದೆ. ಆದರೆ ವಿಯಟ್ನಾಮಿಯರು ತಮ್ಮದೇ ಆದ ಸಂಸ್ಕೃತಿಯನ್ನು ರೂಪಿಸುವಲ್ಲಿ, ಆಯ್ಕೆ ಮಾಡಿಕೊಳ್ಳುವ ಹಾಗೂ ಬೇಕಾದಂತೆ ತಿದ್ದಿಕೊಳ್ಳುವ ಮನೋಭಾವದವರಾಗಿದ್ದರು. ಚೀನಾದ ವಿವಾಹ ಪದ್ಧತಿ, ಉಡುಪು ಮುಂತಾದ ಸಾಮಾಜಿಕ ಅಂಶಗಳನ್ನು ವಿಯಟ್ನಾಮೀಯರ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾ ದರೂ ವಿಯಟ್ನಾಮಿನ ಸಂಸ್ಕೃತಿಯ ಅದರದೇ ಆದ ಕೆಲವು ಲಕ್ಷಣಗಳು ಚೀನಿಯರೊಂದಿಗಿನ ದೀರ್ಘಾವಧಿ ಜೀವನದಿಂದಾಗಿ ಪರಿವರ್ತನೆಗೆ ಒಳಗಾದರೂ ತಕ್ಕಮಟ್ಟಿಗೆ ಮೂಲ ಸ್ವರೂಪದಲ್ಲಿಯೇ ಉಳಿದುಕೊಂಡವು. ಚೀನೀಯರು ವಿಯಟ್ನಾಮಿನ ಮೂಲಭೂತ ಸೌಕರ್ಯಗಳನ್ನು ಎಂದರೆ ರಸ್ತೆಗಳು, ಸೇತುವೆಗಳು ಮುಂತಾದವುಗಳನ್ನು ಬಲಪಡಿಸಿ ಕಬ್ಬಿಣದ ವಿಯಟ್ನಾಮಿಯರು ಇಂಡೋ ಜೈನದಲ್ಲಿ ಗಾಢವಾಗಿ ಸಾಂಸ್ಕೃತಿಕ ತಂಡವನ್ನು ಅಭಿವೃದ್ದಿಪಡಿಸಿ, ೧೬ನೆಯ ಶತಮಾನದಲ್ಲಿ ಚಾಮರನ್ನು ಗೆದ್ದು, ೧೮೬೦ರಲ್ಲಿ ಫ್ರೆಂಚರಿಂದ ಅಡ್ಡಿ ಉಂಟಾಗುವವರೆಗೂ ಖುರ್ ಹಾಗೂ ಲಾವೊಸ್ ವಂಶದವರನ್ನು ಸದೆ ಬಡಿದರು.

ಯುರೋಪಿಯನ್ನರು ಪ್ರಥಮ ಬಾರಿಗೆ ಆಗಮಿಸಿದಾಗ ಮಲಕ್ಕಾ ಜಲಸಂಧಿಯಲ್ಲಿ ಮಲಕ್ಕಾ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಇದರಿಂದಾಗಿ ಉತ್ತರದ ತುದಿಯನ್ನು ಹೊರತುಪಡಿಸಿ ಸುಮಾತ್ರಾವನ್ನು ಚಿಕ್ಕಪುಟ್ಟ ರಾಜ್ಯಗಳ ಅಧೀನದಲ್ಲಿ ಇರಿಸಲಾಗಿತ್ತು. ಜವಾ ಮಸಾಪಿಟ್ ನಿಯಂತ್ರಣದಲ್ಲಿತ್ತು. ಇಸ್ಲಾಮ ಧರ್ಮವನ್ನು ಅನುಸರಿಸುತ್ತಿದ್ದ ಉತ್ತರದ ಚಿಕ್ಕ ಕರಾವಳಿ ಪ್ರದೇಶಗಳ ಕಾರಣದಿಂದಾಗಿ ಅವರ ಅಧಿಕಾರ ತುಂಬ ಸೀಮಿತವಾಗಿತ್ತು. ಇದೇ ಸಮಯಕ್ಕೆ(೧೭೬೭) ಆಯುಧ್ಯದ ಥಾಯ್ ರಾಜ್ಯವು ಬರ್ಮೀಯರಿಂದ ನಾಶಗೊಂಡು (ಈಗಿನ ಬ್ಯಾಂಕಾಕ್) ಚಕ್ರಿ ರಾಜ ವಂಶ ಉದಯವಾಗಿ ಬರ್ಮವನ್ನು ಕಾನ್ ಬಂಗ್ ರಾಜ ಮನೆತನದವರು ಆಳತೊಡಗಿದರು. ಲಾವೊಸ್ ೧೪ನೆಯ ಶತಮಾನದಲ್ಲಿ ಒಗ್ಗೂಡಿದರೂ ತರುವಾಯ ೩ ಪ್ರಾಂತಗಳಾಗಿ ವಿಭಜಿತವಾಗಿ ವಿಯಟ್ನಾಮ್ , ಮುವಾಂಗ್ ಪ್ರಾಭಾಂಗ್ ಹಾಗೂ ಛಾಂಪಾಸಕೆ ಎಂಬ ಪ್ರಾಂತಗಳಲ್ಲಿ ಹರಡಿತು. ಖಿಮರರ ಅಳಿಕೆಯ ಕಾಲದಿಂದ ಅವನತಿ ಹೊಂದುತ್ತಿದ್ದ ಕಾಂಬೋಡಿಯ ಎನಿಡಾಂಗ್ ಮನೆತನದವರ ಅಳಿಕೆಗೆ ಒಳಪಟ್ಟಿತು. ಥಾಯ್ ಚಕ್ರಿ ಹಾಗೂ ವಿಯಟ್ನಾಮಿಯರ ಪ್ರಭಾವಕ್ಕೆ ಒಳಪಟ್ಟಿತ್ತು. ಅಧಿಕಾರಕ್ಕಾಗಿ ನಡೆದ ಯುದ್ಧಗಳ ೫೦ ವರ್ಷಗಳ ತರುವಾಯ ವಿಯಟ್ನಾಮ್ ಜೀಯಲಾಂಗ್ ಸಾಮ್ರಾಜದ ಕಾಲದಲ್ಲಿ ಮತ್ತೆ ಒಗ್ಗೂಡಿತು. ಆ ವೇಳೆಗೆ ಫ್ರೆಂಚರ ರಾಜ್ಯ ವಿಸ್ತರಣೆ ಪ್ರಾರಂಭವಾಯಿತು. ಅಂತಿಮವಾಗಿ ಫಿಲಿಫೈಣರು ಶ್ರೀವಿಜಯ ಅಥವಾ ಮಜಪಾಹಿಟ್‌ನ ಪ್ರಭಾವಕ್ಕೆ ಒಳಗಾದರು. ೧೫೭೧ರಲ್ಲಿ ಮನಿಲಾಕ್ಕೆ ಸ್ಪೇನ್ ದೇಶಿಯರು ಬರುವವರೆಗೆ ಗಣನೀಯವಾಗಿ ಯಾವುದೇ ರಾಜ್ಯವನ್ನು ಕಟ್ಟಲಿಲ್ಲ.

ಸಾಂಪ್ರದಾಯಿಕ ಆಗ್ನೇಯ ಏಷ್ಯಾದ ರಾಜಕೀಯ ಸಮುದಾಯಕ್ಕೆ ಅಡಿಪಾಯ

ಸಂಪ್ರದಾಯಿಕ ಆಗ್ನೇಯ ಏಷ್ಯಾದ ಸಮಾಜವನ್ನು ೨ ಬಗೆಗಳಾಗಿ ವಿಂಗಡಿಸಲಾಯಿತು. ಗ್ರಾಮೀಣ ಹಾಗೂ ರಾಜಸ್ಥಾನದ ಕ್ಷೇತ್ರಗಳೆಂದು ಈ ಮೂರರಷ್ಟು ಭಾಗದ ಜನರು ಗುಲಾಮರಾಗಿದ್ದರು. ಗುಲಾಮರು ಹಾಗೂ ಕೃಷಿಕರ ನಡುವಣ ವ್ಯತ್ಯಾಸ ಎದ್ದು ಕಾಣುವಂತಹುದ್ದಾಗಿರಲಿಲ್ಲ. ಕಾಂಬೋಡಿಯದಲ್ಲಿ ಗುಲಾಮ ಗುಂಪಿನ ಪರಿಕಲ್ಪನೆ ಅಸ್ಪಷ್ಟವಾಗಿತ್ತು. ಏಕೆಂದರೆ ಸಾಮಾನ್ಯ ಜನರಲ್ಲಿ ಬಹುತೇಕ ಜನ ದೇವರ ಮತ್ತು ದೇವಸ್ಥಾನದ ಅಸ್ತಿಯ ಗುಲಾಮರೇ ಆಗಿದ್ದರು. ಹೀಗಾಗಿ ಈ ಬಗ್ಗೆ ಈಗಲೂ ಬಹಳ ಹೇಳಲಾಗುವುದಿಲ್ಲ. ವಿಯಟ್ನಾಮಿನಲ್ಲಿ ೧೫ನೆಯ ಶತಮಾನದ ಕಾನೂನು ಸಂಹಿತೆಯಲ್ಲಿ ಕೆಳವರ್ಗದ ಜನರನ್ನು ವಿಮುಕ್ತರು, ಜೀತದವರು, ಗುಲಾಮರು, ಸರ್ಕಾರದ ಅಧೀನರಾಗಿರು ವವರು ಎಂದು ವಿಭಜಿಸಲಾಗಿತ್ತು. ಆದರೆ ರಾಜಶ್ರಯದ ತಂಡದಲ್ಲಿ ಅಧಿಕಾರಿ ವರ್ಗ ಮಾತ್ರವೇ ಅಲ್ಲದೆ ಕುಶಲಕರ್ಮಿಗಳು, ಉದ್ಯೋಗಿಗಳು, ಯೋಧರು, ಶ್ರೀಮಂತ ವ್ಯಾಪಾರಿಗಳು, ಉದ್ಯಮಿಗಳು ರಾಜಮನೆತನದ ಹಾಗೂ ಸರ್ಕಾರದ, ರಾಜನ ಬೆಂಬಲಿಗರೂ ಸೇರಿದ್ದರು. ಸಮಾಜದ ಈ ೨ ಗುಂಪುಗಳು ಒಟ್ಟಾರೆಯಾಗಿ ಪ್ರಪಂಚದ ಬಗೆಗಿನ ಪಾರಮಾರ್ಥಿಕ ತತ್ವದಿಂದಾಗಿ ಒಗ್ಗೂಡಿದವು ಹಾಗೂ ಪ್ರಪಂಚದಲ್ಲಿಯ ಮಾನವನ ಪಾತ್ರದ ಕುರಿತು ಅವರಲ್ಲಿ ಐಕ್ಯಮತ್ಯ ಇತ್ತು. ಒಂದೇ ಭಾಷೆ, ಭೌಗೋಳಿಕ ಪರಿಸರ, ಜನಾಂಗೀಯ ಏಕತೆಗಳು ಇಂಥ ಮೂಲಭೂತ ತತ್ವಗಳ ಹೊರತಾಗಿ ನೈರುತ್ಯ ಏಷ್ಯಾದ ಕೃಷಿಕ ಸಮಾಜದ ಸಾಮಾಜಿಕ ಸಂಬಂಧಗಳು ಆ ಪ್ರದೇಶದಲ್ಲಿ ರಾಜ್ಯದ ಸಂಘಟನೆಗ ಹಾಗೂ ರಾಜ್ಯಗಳ ಅಭಿವೃದ್ದಿಗೆ ಅವಕಾಶ ಕಲ್ಪಿಸಿದವು. ಕೃಷಿಕ ಸಮಾಜದ ಬಹುಪಾಲು ಜನ ಪರಂಪರಾಗತವಾಗಿ ಬಂದ ಆಗ್ನೇಯ ಏಷ್ಯಾದ ಗ್ರಾಮೀಣ ಸಮುದಾಯಗಳಲ್ಲಿ ಇರುತ್ತಿದ್ದರು. ಹಳ್ಳಿಯಲ್ಲಿ ವಾಸಸ್ಥಳಗಳಷ್ಟೇ ಅಲ್ಲದೆ ಸಾಗುವಳಿ ಭೂಮಿಗಳು, ಹುಲ್ಲುಗಾವಲುಗಳು, ಉರುವಲಿಗೆ ಹಾಗೂ ಬೇಟೆಗಾಗಿ ಅರಣ್ಯ ಭೂಮಿ ಇದ್ದವು. ಹಳ್ಳಿ ಒಂದು ನಿಕಟ ಸಂಪರ್ಕ ಹೊಂದಿದ ಸಮುದಾಯವಾಗಿದ್ದು ಗ್ರಾಮದ ಗಾತ್ರಕ್ಕೆ ತಕ್ಕಂತೆ ಅಲ್ಲಿನ ಜನರು ಪರಸ್ಪರ ರಕ್ತಸಂಬಂಧಿಗಳೇ ಆಗಿರುತ್ತಿದ್ದರು. ಹೊರಗಿನವರನ್ನು ಅಂಗೀಕರಿಸುವುದು ಅಪರೂಪಕ್ಕೆ ಆಗಿತ್ತು. ವಿದೇಶೀಯರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಅವರ ಸಾಮಾಜಿಕ ಸ್ಥಿತಿ ಕೆಳಮಟ್ಟದಲ್ಲಿದ್ದು ಅವರನ್ನು ತಾರತಮ್ಯ ಭಾವದಿಂದ ನೋಡಲಾಗುತ್ತಿತ್ತು. ಸ್ಥಳೀಯರು ಸಂದಾಯ ಮಾಡದ ಅಗತ್ಯವಿಲ್ಲದ ತೆರಿಗೆಗಳನ್ನು ಸಂದಾಯ ಮಾಡುವಂತೆ ಅವರನ್ನು ಒತ್ತಾಯಪಡಿಸಲಾಗುತ್ತಿತ್ತು.

ಪರಂಪರಾಗತವಾಗಿ ಇದ್ದ ಗ್ರಾಮಗಳು ಮಾತ್ರ ಹಾಗೂ ಸ್ವರೂಪದಲ್ಲಿ ವಿಭಿನ್ನವಾಗಿದ್ದವು. ಕೆಲವು ಪ್ರದೇಶಗಳಲ್ಲಿ ಅವುಗಳ ಸುತ್ತ ಕೋಟೆ ಇರುತ್ತಿದ್ದವು. ಇನ್ನು ಕೆಲವು ಪ್ರದೇಶ ಗಳಲ್ಲಿ ಗುಡಿಸಲುಗಳು ಚದುರಿದಂತೆ ಇದ್ದು ಅಲ್ಲಿ ಕೆಲವೇ ಕುಟುಂಬದವರು ವಾಸಿಸು ತ್ತಿದ್ದರು. ಒಟ್ಟಾರೆಯಾಗಿ ಹಳ್ಳಿಗಳಲ್ಲಿ ೨ ವಿಧಗಳಿದ್ದು ಮೊದಲನೆಯ ತಂಡವು ಜಲ ಸಂಪನ್ಮೂಲಗಳು ರಸ್ತೆಗಳು, ಅಥವಾ ಹಾದಿಗಳಗುಂಟಾ ಕಂಡುಬರುತ್ತಿದ್ದವು. ಎರಡನೆಯ ತಂಡ ಜಲಮೂಲಗಳು, ದೇವಸ್ಥಾನಗಳು ಅಥವಾ ಬಹಳ ಕಾಲದಿಂದ ಆ ಹಳ್ಳಿಯಲ್ಲಿ ನೆಲಸಿದ ಜನ ಅಥವಾ ಗ್ರಾಮದ ಧುರೀಣರ ಸುತ್ತಮುತ್ತ ನೆಲೆಸಿದ್ದರು. ಬಹುಪಾಲು ಹಳ್ಳಿಗಳು ಚದುರಿದ ಗುಡಿಸಲುಗಳಿಂದ ಕೂಡಿದ್ದು ತಮ್ಮ ಜಮೀನುಗಳ ಕಾರಣದಿಂದಾಗಿ ಒಂದು ಇನ್ನೊಂದಕ್ಕಿಂತ ಪ್ರತ್ಯೇಕವಾಗಿದ್ದವು. ಅಪರೂಪವಾಗಿ ಕೆಲವು ಮನೆಗಳು ತಮ್ಮ ಸಮೀಪದ ನೆರೆಯವರಿಗಿಂತ ಪ್ರತ್ಯೇಕವಾಗಿಯೇ ಇರುತ್ತಿದ್ದವು. ಇದಲ್ಲದೆ ಮನೆಗೆ ನಿವೇಶನಗಳು ಆಯ್ದುಕೊಳ್ಳುವಾಗ ಪ್ರದೇಶದ ಭೌಗೋಳಿಕ ಸಮೀಕ್ಷೆ, ಸಲಕರಣೆಗಳ ಸೌಕರ್ಯ, ನೆಂಟರಿಂದ ಇರುವ ದೂರ, ಸಾಮಾಜಿಕ ಭೇದಗಳು ಮನೆ ಬಳಕೆಯ ಬಾಳಿಕೆ, ನೀರು ಪೂರೈಕೆ, ಸುರಕ್ಷಿತತೆ, ಜಲ ಸಾಗಣೆ, ಏಕಾಂತತೆ, ಶುಭಕರವಾದ ದಿಕ್ಕುಗಳು, ಹಾಗೂ ಶಕ್ತಿಗಳ ಕುರಿತಾದ ಅತೀತ ನಂಬಿಕೆಗಳು, ಗ್ರಾಮದ ಹಣಕಾಸು ಸ್ಥಿತಿ ಇವುಗಳ ಮೇಲೆ ನಿರ್ಣಯವನ್ನು ಕೈಗೊಳ್ಳಲಾಗುತ್ತಿತ್ತು.

ಹಳ್ಳಿಯು ಆರ್ಥಿಕ (ಕೃಷಿ) ಹಾಗೂ ಸಾಮಾಜಿಕ ಜೀವನದ ಕೇಂದ್ರವಾಗಿದ್ದುದಲ್ಲದೆ ಸಂಘಟನೆಯ ಮೂಲಭುತ ರೂಪಗಳನ್ನು ಅಭಿವೃದ್ದಿಪಡಿಸುತ್ತಿತ್ತು. ಇದು ದೈನಂದಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದ್ದಷ್ಟೇ ಅಲ್ಲದ ಸಾಮಾನ್ಯ ಸಮುದಾಯದ ಮೇಲೂ ಪ್ರಭಾವ ಬೀರಿದ್ದವು. ಹಳ್ಳಿ ಒಂದು ಸಂಘಟಿತ ಘಟಕವಾಗಿದ್ದು ಅಲ್ಲಿ ನೆಂಟಸ್ತನ ಅಥವಾ ಸಾಂದರ್ಭಿಕವಾಗಿ ಮತೀಯ ಸಮ್ಮತಿಯ ಮೂಲಕ ನಾಗರಿಕತೆಯನ್ನು ಕಾಪಾಡಿ ಕೊಂಡು ಬರಲಾಗಿತ್ತು. ಜಮೀನಿನ ನಿಯಂತ್ರಣ ಹಾಗೂ ಇದರ ಬಳಕೆಯ ನಿಯಂತ್ರಣದ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಕ್ರಮಬದ್ಧಗೊಳಿಸಲಾಗಿತ್ತು. ಊರಿನ ಹಿರಿಯರು ಅಥವಾ ಅಪ್ರತ್ಯಕ್ಷವಾಗಿ ಸಾಮಾಜಿಕ ಒಪ್ಪಿಗೆಗಳ ಮೂಲಕ ಕಾನೂನು ವ್ಯವಸ್ಥೆಯನ್ನು ಜರಿಗೊಳಿಸಲಾಗಿತ್ತು.

ಆರ್ಥಿಕ ತಳಹದಿ

ಐತಿಹಾಸಿಕವಾದ ಆಗ್ನೇಯ ಏಷ್ಯಾದ ಜನರು ತಂಡ ತಂಡಗಳಾಗಿ ಇರುವ ಹಂತದಿಂದ ಗ್ರಾಮಗಳಾಗಿ ಅಸ್ತಿತ್ವಕ್ಕೆ ಬರತೊಡಗಿದಂತೆ ಸ್ಥಿರವಾದ ಗ್ರಾಮಗಳು ಹುಟ್ಟಿಕೊಂಡವು. ಕೃಷಿ ಉತ್ಪಾದನೆಯ ವಿಧಾನಗಳು ಹಳೆಯ ಸ್ವರೂಪ ಹಾಗೂಕ ಸ್ಥಿರತೆಯ ಮೇಲೆ ಪ್ರಭಾವ ರೂಢಿಸಿಕೊಂಡ ಪ್ರದೇಶಗಳಲ್ಲಿ ಜಮೀನುಗಳು, ಹೆಚ್ಚಿನ ಸತ್ವಕ್ಕಾಗಿ ಕಳೆಯನ್ನು ಕಳೆಯನ್ನು ಸುಡುವ ಕಾರಣದಿಂದಾಗಿ ಖಾಲಿ ಬಿದ್ದಿರುತ್ತಿದ್ದವು. ಹೀಗಾಗಿ ಹಳ್ಳಿಗಳು ಹೊಸ ಜಮೀನು ಗಳು ಇದ್ದ ಪ್ರದೇಶಕ್ಕೆ ವಲಸೆ ಹೋಗಿ ಮೊದಲಿನ ಜಮೀನುಗಳು ಖಾಲಿ ಉಳಿದಿರುತ್ತಿದ್ದವು. ಸುಡುವುದರಿಂದಾಗುವ ಕೃಷಿ ಭೂಮಿಯ ಪರಿಸರ ಸಮತೋಲನ ಹೇಗೆಂದರೆ ಇಂಥ ಪ್ರದೇಶಗಳಲ್ಲಿ ಸೀಮಿತ ಜನಸಂಖ್ಯೆ ಮಾತ್ರ ವಾಸಿಸಬಲ್ಲದು. ಆರೋಗ್ಯ ಸುಧಾರಣೆಯಿಂದಾಗಿ ವಸಾಹತುಗಳು ಬೆಳೆದಿದ್ದರಿಂದ ಜನಸಂಖ್ಯೆ ಬೆಳೆದು ಈ ಮಾದರಿಯ ಕೃಷಿಗೆ ಧಕ್ಕೆಯುಂಟಾಯಿತು. ವಸಾಹತು ಪೂರ್ವದ ಅವಧಿಯಲ್ಲಿ ಈ ಬೆಳವಣಿಗೆ ಅಂಥ ಬೃಹತ್ ಸಮಸ್ಯೆಯಾಗಿ ತೋರಿರಲಿಲ್ಲ.

ಸಾಗುವಳಿ ಭೂಮಿಯನ್ನು ಹೊಂದಿದ್ದ ಪ್ರದೇಶಗಳ ಸ್ಥಿರತೆ ಪ್ರಾದೇಶಿಕವಾಗಿ ವಿಭಿನ್ನ ವಾಗಿತ್ತು. ಅಲ್ಲಿ ವಾಸಿಸುತ್ತಿದ್ದ ಜನರ ಪೈಕಿ ಹಲವರು ಅಲೆಮಾರಿಗಳಾಗಿದ್ದು ದೂರ ದೂರದ ಪ್ರದೇಶಗಳಿಗೆ ಹೋಗುವಾಗಲೆಲ್ಲ ತಮ್ಮ ಆಗಿ ಒಂದು ಸ್ಥಳದಲ್ಲಿ ಇರುವ ಸಾಮೂಹಿಕ ಜೀವನವನ್ನು ರೂಢಿಸಿಕೊಂಡರು. ಆ ಪೈಕಿ ಯಾವುದೇ ಉತ್ಪಾದನಾ ಕಾರ್ಯವನ್ನು ಕೈಗೊಳ್ಳದೇ ಇದ್ದ ಜನರೂ ಇದ್ದರು. ಆದರೂ ಇನ್ನು ಕೆಲವು ಗ್ರಾಮಗಳು ಖಾಯಂ ವಸತಿಯನ್ನು ಹೊಂದಿದ್ದು, ಗ್ರಾಮದ ಸುತ್ತಲೂ ವಿಸ್ತೃತ ಸಾಗುವಳಿಯನ್ನು ಕೈಗೊಂಡಿದ್ದು, ವರ್ಷದ ಒಂದು ಕಾಲದಲ್ಲಿ ಮಾತೃಭೂಮಿಯ ಒಂದು ಭಾಗವನ್ನು ಮಾತ್ರ ಸಾಗುವಳಿಗೆ ಬಳಸುತ್ತಿದ್ದರು. ಲಭ್ಯವಿದ್ದ ಕೃಷಿ ಭೂಮಿಯ ಪ್ರಮಣ ಹಾಗೂ ಉತ್ಪಾದನಾ ಸಾಮರ್ಥ್ಯದ ಮೇಲೆ ಗ್ರಾಮದ ಗಾತ್ರ ಅವಲಂಬಿಸುತ್ತಿತ್ತು. ವ್ಯಾಪಾರ ಧರ್ಮ ಅಥವಾ ಸಾಗಾಣಿಕೆ ಉದ್ದೇಶಗಳಿಗಾಗಿ ಗ್ರಾಮದ ಮಲ್ಯ ಹಾಗೂ ಖಾಯಂ ನೀತಿ ನಿರ್ಣಯವಾಗುತ್ತಿತ್ತು.

ಆಗ್ನೇಯ ಏಷ್ಯಾದ ಹೆಚ್ಚು ಸ್ಥಿತರವಾದ ಅಥವಾ ಖಾಯಂ ಗ್ರಾಮಗಳ ಪೈಕಿ ಕಳೆ ಕತ್ತರಿಸಿ ಸುಡುವ ಮಾದರಿಯ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದಕ್ಕಾಗಿ, ಪ್ರವಾಹ ಹಾಗೂ ಗೌಣ ನದಿ ವ್ಯವಸ್ಥೆಗಳ ಬಯಲು ಪ್ರದೇಶಗಳಲ್ಲಿ ನಿರಂತರವಾದ ಪ್ರವಾಹದಿಂದಾಗಿ ಭೂಮಿಗೆ ಮತ್ತೆ ಮತ್ತೆ ಪೋಷಕಾಂಶಗಳು ದೊರೆತು ಅಕ್ಕಿಯನ್ನು ಹೆಚ್ಚಿಗೆ ಬೆಳೆಯಲಾಗಿತ್ತು. ನೀರಾವರಿಯನ್ನು ಆ ಪ್ರದೇಶಗಳಲ್ಲಿ ನಿರಂತರವಾಗಿ ನಡೆಸು ತ್ತಿದ್ದುದಕ್ಕೆ ಕಾರಣವೆಂದರೆ ಆ ಪ್ರದೇಶ ತಪ್ಪಲು ಭೂಮಿಯಲ್ಲಿತ್ತು. ಅಲ್ಲದೆ ಮಾನ್ಯೂನ್ ಹವಾಮಾನ ಹಾಗೂ ನದಿ ಪ್ರವಾಹಗಳು ನಿಯತವಾಗಿದ್ದು ಕೃಷಿ ಉತ್ಪಾದನೆಗೆ ಸ್ಥಿರತೆ ಇತ್ತು. ಇದರಿಂದ ಕೃಷಿ ಪ್ರಮುಖ ಉದ್ಯೋಗವಾಗಿತ್ತು.

ಆಗ್ನೇಯ ಏಷ್ಯಾದಲ್ಲಿ ನಿಯಂತ್ರಿತ ಪ್ರವಾಹದ ನೀರಾವರಿ ವ್ಯವಸ್ಥೆಯು ಕೃಷಿ ಉತ್ಪಾದನೆಯ ವಿಸ್ತೃತ ಬಗೆಯಾಗಿತ್ತು. ನದಿ ಪ್ರವಾಹಗಳಿಂದ ಬರುವ ನೀರನ್ನು ತಡೆಗಟ್ಟು ವುದಕ್ಕೆ ನಿರ್ಮಾಣವಾದ ಸೇತುವೆಗಳಲ್ಲದೆ, ಪರಸ್ಪರ ನಿರು ಉಣಿಸಲಾಗುತ್ತಿತ್ತು. ಈ ರೀತಿಯ ಬೇಸಾಯದಿಂದಾಗಿ ಭತ್ತದ ಬೆಳೆಗೆ ಉತ್ತಮ ಸತ್ವ ಸಿಕ್ಕಿದುದೇ ಅಲ್ಲದೆ ಫಸಲು ಹೆಚ್ಚು ಲಭಿಸಿ ವರ್ಷದಲ್ಲಿ ಆವರ್ತಕ ರೀತಿಯ ಬೆಳೆಗಳನ್ನು ತೆಗೆಯಲು ಸಾಧ್ಯವಾಗುತ್ತಿತ್ತು. ಇದಕ್ಕೆ ಕಾರಣ ಇಲ್ಲಿ ಲಭ್ಯವಿದ್ದ ನೀರಿನ ಸಮೃದ್ದಿ.

ಕೃಷಿ ತಂತ್ರಜ್ಞಾನದ ದೃಷ್ಟಿಯಿಂದ ಮುಂದುವರಿದ ನೈರುತ್ಯ ಏಷ್ಯಾದ ಪ್ರದೇಶಗಳು ರಾಜಕೀಯ ಸಂಘಟನೆಗಳ ದೃಷ್ಟಿಯಿಂದಲೂ ಮಹತ್ವದವುಗಳಾಗಿದ್ದವು. ಹೀಗೆ ೨ ವಿಷಯದಲ್ಲಿಯೂ ಅಭಿವೃದ್ದಿಗೊಂಡ ಪ್ರದೇಶಗಳು ವ್ಯಾಪಾರದಲ್ಲೂ ಅಭಿವೃದ್ದಿಯನ್ನು ಸಾಧಿಸಿದ್ದು ಹಳ್ಳಿಗಳ ಅಗತ್ಯಗಳಿಗೆ ಬೇಕಾದುದನ್ನು ಒದಗಿಸುತ್ತಿದ್ದರು. ಇದು ಆ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದು ವಾಣಿಜ್ಯ ಅಥವಾ ವ್ಯಾಪಾರವನ್ನು ಅವಲಂಭಿಸಿದ ಮಧ್ಯ ವರ್ಗದ ಜನತೆಯ ಅಭಿವೃದ್ದಿಗೆ ಉತ್ತಜನಕಾರಿಯಾಗಿರಲಿಲ್ಲ. ಇದರ ಪರಿಣಾಮವಾಗಿ ಸ್ವಾವಲಂಬಿ ಗ್ರಾಮಗಳ ನಿರ್ಮಾಣವಾಗಿದ್ದು, ಸ್ವಲ್ಪ ಮಾತ್ರ ಹೆಚ್ಚುವರಿ ಆಹಾರ ರಫ್ತಾಗುತ್ತಿದ್ದು, ಸ್ವಲ್ಪ ಮಟ್ಟಿಗೆ ಹೊರಗಿನಿಂದ ಕೆಲವು ಸರಕುಗಳನ್ನು ತರಿಸಿಕೊಳ್ಳಲಾಗುತ್ತಿತ್ತು.

ಕೃಷಿ ಕಾರ್ಯಗಳು ಹಾಗೂ ವಾಣಿಜ್ಯ ಕಾರ್ಯಗಳ ಮಧ್ಯ ಸಾಮಾಜಿಕ ವಿಭಿನ್ನತೆ ಸಾಕಷ್ಟು ಪ್ರಮಾಣದಲ್ಲಿತ್ತು. ಕೃಷಿಕರು ಹಳ್ಳಿಗಳಿಲ್ಲಿ ವಾಸಿಸಿದ ಜನತೆಯಾಗಿದ್ದು, ವ್ಯಾಪಾರದಿಂದಾಗಿ ವಣಿಕ ವರ್ಗಕ್ಕೆ ಆರ್ಥಿಕ ಅಂಶಗಳ ಕಾರಣದಿಂದಾಗಿ ಹೊರಗಿನ ಜನತೆಯೊಡನೆ ಸಾಕಷ್ಟು ಸಂಪರ್ಕ ಬೆಳೆಯಿತು. ಸ್ಥಳೀಯ ಮಾರುಕಟ್ಟೆಗಳಿಗೆ ಪ್ರತ್ಯೇಕವಾದ ಸ್ಥಳವಿದ್ದು ಸಾಮಾನ್ಯವಾಗಿ ಅದು ಗ್ರಾಮದ ಕಡೆಗಳಲ್ಲಿರದೆ ವಿಭಿನ್ನ ಹಳ್ಳಿಗಳನ್ನು ಸೇರುವ ರಸ್ತೆಗಳ ಕೂಡುದಾರಿಗಳಲ್ಲಿ ಇರುತ್ತಿತ್ತು. ವ್ಯಾಪಾರವನ್ನು ಕೈಗೊಂಡಿದ್ದ ಜನ ಸಾಮಾನ್ಯವಾಗಿ ಹಳ್ಳಿಯ ಸಮುದಾಯಗಳಿಂದ ಪ್ರತ್ಯೇಕವಾಗಿಯೇ ಪರಿಗಣಿತವಾಗಿದ್ದು, ಅವರನ್ನು ಡಗಾಂಗ್ ಎಂದರೆ ವ್ಯಾಪಾರಿ ಎಂದು ಅರ್ಥ ಬರುವ ಜವಾ ಭಾಷೆಯ ಶಬ್ದದಿಂದ ಗುರುತಿಸಲಾಗಿತ್ತು. ಹೀಗೆಂದರೆ ವಿದೇಶೀಯ ಅಥವಾ ಅಲೆಮಾರಿ ಎಂದು ಅರ್ಥ. ಮಾರುಕಟ್ಟೆ ಹಳ್ಳಿಯಿಂದ ಪ್ರತ್ಯೇಕವಾಗಿ ಒಂದು ಸಾಂಸ್ಕೃತಿಕ ಘಟಕವಾಗಿದ್ದು ವಿಶಾಲ ಸಮಾಜದ ಸ್ಥಾನಮಾನವನ್ನು ಹೊಂದಿತ್ತು. ನೈರುತ್ಯ ಏಷ್ಯಾದಲ್ಲಿ ನೆಲೆಗೊಂಡಿದ್ದ ಚೀನಿಯರಲ್ಲದೆ ಸ್ಥಳೀಯ ವ್ಯಾಪಾರಿಗಳು ಚೀನಾ ಹಾಗೂ ನೈರುತ್ಯ ರಾಜ್ಯಗಳ ಮಧ್ಯೆ ಪ್ರವಾಸ ಮಾಡಿದರೂ ಪ್ರವಾಸಕ್ಕೂ ಕೂಡ ಸಾಲದಷ್ಟು ಕಡಿಮೆ ಬಂಡವಾಳವನ್ನು ಹೊಂದಿರುತ್ತಿದ್ದರು. ಇವರು ಆಯಾ ಪ್ರದೇಶಗಳನ್ನು ದಾಟಿ ಪ್ರಯಾಣಿಸಿದರೂ ಕೂಡ  ಹವಾಮಾನದ ಮೇಲೆ ಅವರ ಪ್ರವಾಸ ಅವಲಂಬಿತವಾಗಿದ್ದು, ಮತ್ತೊಂದು  ಪ್ರದೇಶದಲ್ಲಿ ಮಾರಬೇಕಾದ ವಸ್ತುಗಳನ್ನು ಸೈಕಲ್ ಮೇಲೆಯೂ ಕೊಂಡೊಯ್ಯುತ್ತಿದ್ದರು.

ಬಂಧುತ್ವ(ಕಿನ್ ಶಿಪ್) ಹಾಗೂ ಜನಾಂಗೀಯ ಸಮುದಾಯಗಳು

ಗ್ರಾಮೀಣ ಹಂತಕ್ಕಿಂತ ಮೇಲೇರಿ ಆಗ್ನೇಯ ಏಷ್ಯಾದಲ್ಲಿ ನೆಂಟಸ್ತಿಕೆ ಹಾಗೂ ಜನಾಂಗೀಯ ಸಮುದಾಯಗಳ ಮೂಲಕ ರಾಜಕೀಯ ಸಂಘಟನೆಯನ್ನು ಕಟ್ಟಲಾಗಿತ್ತು. ತನ್ಮೂಲಕವಾಗಿಯೇ ಕಾಲಕ್ರಮೇಣ ಭೌಗೋಳಿಕ ಸ್ವರೂಪವು ಸಿಕ್ಕಿತ್ತು. ಚಿಕ್ಕಚಿಕ್ಕ ಒಂಟಿ ಬಣಗಳಿಗೆ ಮುಂದೆ ನೆಂಟಸ್ತಿಕೆಯ ಸ್ವರೂಪವ ಸಿಕ್ಕಿತ್ತು. ಚಿಕ್ಕ ಚಿಕ್ಕ ಒಂಟಿ ಬಣಗಳಿಗೆ ಮುಂದೆ ನೆಂಟಸ್ತಿಕೆಯ ಬಂಧುತ್ವವನ್ನು ವಹಿಸಿ ದೊಡ್ಡ ಜನಾಂಗೀಯ ಗುಂಪುಗಳಾದವು. ಇದರಿಂದಾಗಿ ಹೊರಗಿನಿಂದ ಉಂಟಾಗುವ ದಾಳಿಗಳನ್ನು, ಬೆದರಿಕೆಗಳನ್ನು ತಡೆಗಟ್ಟಲು ಸಾಧ್ಯವಾಗಿತ್ತು. ಹೀಗೆ ವಿಸ್ತಾರಗೊಂಡ ಜನಾಂಗೀಯ ಗುಂಪುಗಳು ಸಾಮಾನ್ಯವಾದ ಸಮಸ್ಯೆ ಇಲ್ಲದಿರುವಾಗ ಮತ್ತೆ ಚಿಕ್ಕ ಚಿಕ್ಕ ಅಥವಾ ಹೆಚ್ಚಿಗೆ ಸ್ಥಳೀಯ ಸಂಘಟನೆಗಳಿಗೆ ರೂಪಾಂತರ ಹೊಂದಿರುತ್ತಿದ್ದವು. ರಾಜ್ಯವನ್ನು ಕಟ್ಟುವಲ್ಲಿ ನೆಂಟಸ್ತಿಕೆಯ ಗುಂಪುಗಳಾಗಲಿ ಅಥವಾ ಜನಾಂಗೀಯ ಗುಂಪುಗಳಾಗಲಿ ಸಂಕ್ರಮಣದ ಕಾಲದ ಸ್ವರೂಪವಾಗಿ ಕಾಣಿಸಿಕೊಳ್ಳಲಿಲ್ಲ. ಕೆಲವು ಸಂದರ್ಭಗಳಲ್ಲಿ ೨ ಗುಂಪುಗಳ ಹಗೆ ರಾಜ್ಯವನ್ನು ಕಟ್ಟುವಲ್ಲಿ ಅಡ್ಡಿಯಾಗಿಯೇ ಪರಿಣಮಿಸಿವೆ. ನೆಂಟಸ್ತಿಕೆಯ ಗುಂಪುಗಳು ನೈರುತ್ಯ ಏಷ್ಯಾದ ಭೌಗೋಳಿಕ ಸ್ವರೂಪದ ನಿರ್ಮಾಣದ ದೃಷ್ಟಿಯಿಂದ ಅವರ ಇತಿಹಾಸದುದ್ದಕ್ಕೂ ಮಹತ್ವದ ಪಾತ್ರವಹಿಸಿವೆ. ನೈರುತ್ಯ ಏಷ್ಯಾದ ಪ್ರದೇಶವನ್ನು ನೆಂಟಸ್ತಿಕೆಯ ಗುಂಪುಗಳು ಎಂದು ಗುರುತಿಸಿದ್ದಕ್ಕಿಂತ ಹೆಚ್ಚಿಗೆ ಭೌಗೋಳಿಕ ವಿಭಾಗಗಳ ದೃಷ್ಟಿಯಿಂದ ಅಥವಾ ರಾಜಕೀಯ ಘಟಕಗಳ ದೃಷ್ಟಿಯಿಂದ ಗಮನಿಸಿದಾಗ, ರಾಜ್ಯದ ಸ್ವರೂಪ ಹಾಗೂ ಅಂತರ್ ರಾಜ್ಯ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಬಹುದು.

ವಸಾಹತು ಸಾಮ್ರಾಜ್ಯದ ಶಕೆಯ ಪ್ರಾರಂಭಿಕ ಕಾಲದಲ್ಲಿ ಬಟಕ್ ಮತ್ತು ಮಿನಾಕಾಬು ಸಮಾಜಗಳ ಬಗ್ಗೆ ಯಾವುದೇ ಪುರಾವೆಗಳು ದೊರೆತಿಲ್ಲದಿದ್ದರೂ ಕ್ರಿಸ್ತಶಕದ ಪ್ರಾರಂಭ ಅಥವಾ ಅದಕ್ಕೂ ಮುಂಚಿನ ನೈರುತ್ಯ ಏಷ್ಯಾದ ಸಮಾಜದ ಸಾಮಾನ್ಯ ಲಕ್ಷಣಗಳನ್ನು ನೋಡಿದಾಗ ಈ ಕುರಿತು ಉಲ್ಲೇಖ ಸಿಗುತ್ತದೆ. ಜನಾಂಗೀಯ ಸಮುದಾಯವೇ ದೊಡ್ಡ ಸಮುದಾಯವಾಗಿದ್ದು ಇದರಲ್ಲಿ ವ್ಯಕ್ತಿಗೆ ಪ್ರಾಧಾನ್ಯ ಇತ್ತು. ಈ ಮಟ್ಟವನ್ನು ಮೀರಿ ಒಂದು ಭಾಷೆ, ಪದ್ಧತಿಗನುಗುಣವಾದ ಕಾನೂನು ಹಾಗೂ ಎಲ್ಲರ ನಡುವಣ ಜನಾಂಗೀಯ ಬಾಂಧವ್ಯ ಧಾರ್ಮಿಕ ಹಾಗು ನ್ಯಾಯಿಕ ಉದ್ದೇಶಗಳಿಗೆ ಅಥವಾ ಹೊರಗಿ ನಿಂದ ಒದಗುವ ಆಕ್ರಮಣಗಳಿಂದ ರಕ್ಷಣೆ ಪೆಡಯಲು ಸಹಾಯಕವಾಗಿತ್ತು. ಆದರೆ ಹೊರಗಿನ ಆಕ್ರಮಣಗಳು ಹಾಗೂ ಯುದ್ಧಗಳು ಯಾವುದೇ ಕಾಲಕ್ಕೂ ಸಂಭವಿಸ ಬಹುದಾಗಿದ್ದುದರಿಂದ ಸಹಕಾರ ಮಹತ್ವದ ಅಂಶವಾಗಿತ್ತು. ತೋಬಾ ಬಟಕ್ ಪ್ರದೇಶ ಗಳಲ್ಲಿ ಗ್ರಾಮ ಅಥವಾ ನೆಂಟಸ್ತನದ ಸಮುದಾಯದ ಮಟ್ಟಕ್ಕಿಂತ ಹೆಚ್ಚಿನ ಯಾವುದೇ ರಾಜಕೀಯ ಘಟಕ ಯಾವ ಕಾಲಕ್ಕೂ ಬೆಳೆಯಲಿಲ್ಲ. ಬಟಕ್ ಜನಾಂಗದಲ್ಲಿ ತಮ್ಮ ವಂಶಾವಳಿಯ ಕುರಿತಾದ ತೀವ್ರ ಪ್ರಜ್ಞೆ ಇತ್ತು. ಮನೆತನಗಳು ಘಟಕಗಳನ್ನು ಪ್ರಧಾನವಾಗಿ ಮನ್ನಿಸಲಾಗಿತ್ತು. ಆದರೆ ಇವುಗಳನ್ನು ರಾಜಕೀಯ ಘಟಕಗಳಾಗಿ ಪರಿಗಣಿಸಲಾಗಲಿಲ್ಲ. ಗ್ರಾಮ ಅಥವಾ ವಂಶದ ವ್ಯಾಪ್ತಿಯಿಂದ ಹೊರತಾಗಿ ನಿರ್ಮಾಣಗೊಂಡ ಸಂಸ್ಥೆಗಳು ಹಲವಾರು ಇದ್ದವು. ಇದರಲ್ಲಿ ನ್ಯಾಯಾಂಗ ಮಾರುಕಟ್ಟೆ ಭೂಮಿ ಹಾಗೂ ನೀರು ಘಟಕಗಳು ಸೇರುತ್ತವೆ. ಇಡಿಯ ಬಟಕ್ ಜನಾಂಗ ಅಥವಾ ಅವರ ಒಂದು ಭಾಗದಷ್ಟು ಇಲ್ಲದೆ ಉಪ ಭಾಷಾ ವಿಭಾಗದ ಗುಂಪು, ಪರಕೀಯರ ಧಾಳಿಯ ಸಂದರ್ಭದಲ್ಲೂ ಒಂದು ರಾಜಕೀಯ ಘಟಕವಾಗಿ ವರ್ತಿಸಿದ ಉದಾಹರಣೆ ಕಾಣಸಿಗುವುದಿಲ್ಲ.

ಸುಮಾತ್ರಾದ ಜನಾಂಗವಾದ ಮಿನಾಂಗ್ ಕಬಾವ್ ಜನರ ವಿಷಯದಲ್ಲೂ ಈ ಮಾತು ನಿಜ. ಇಲ್ಲಿಯ ಗ್ರಾಮೀಣ ಘಟಕಗಳಿಗೆ ನಿರ್ದಿಷ್ಟ ಪ್ರದೇಶಗಳಿದ್ದರೂ ಕೆಲವು ಬಾರಿ ದೊಡ್ಡ ಘಟಕಗಳಾಗಿ ವಿಂಗಡಣೆಯಾಗಿರುತ್ತಿದ್ದವು. ಆದರೆ ಇವೂ ಸಹ ಇತರ ರಾಜ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಪದ್ಧತಿಗಳನ್ನು ಅಳವಡಿಸಿಕೊಳ್ಳಲಿಲ್ಲ.

ಬಟಕ್ ಜನಾಂಗದಂತೆಯೇ ಮಿನಾಂಗ್ ಕಬಾವ್ ಜನಾಂಗಕ್ಕೂ ಗ್ರಾಮವನ್ನು ಮಿರಿ ಮಿತ್ರಕೂಟಗಳಿದ್ದು ಇವು ಕೆಲವು ಸಾಮಾಜಿಕ ಸಂಘಟನೆಯ ಒಂದೆರಡು ಅಂಶಗಳ ಮೇಲೆ ಹಿಡಿತ ಸಾಧಿಸಿದ್ದವು. ಮುಖ್ಯಸ್ಥರಿಗೆ ವಾಡಿಕೆಯ ಬಿರಿದುಗಳು, ಸಾಕಷ್ಟು ಗೌರವವಿದ್ದರೂ, ಅಧಿಕಾರ ಪರಿಣಾಮಕಾರಿಯಾಗಿರಲಿಲ್ಲ. ರೂಢಿಗತ ಕಾನೂನಿನ ರಾಜ, ಧರ್ಮದ ರಾಜ, ವಿಶ್ವದ ರಾಜ. ಆದರೆ ಈ ರಾಜರ ಪಾತ್ರದ ಬಗೆಗೆ ಸರಿಯಾಗಿ ತಿಳಿದುಬಂದಿಲ್ಲ. ಅವರು ತಮ್ಮ ಅಧಿಕಾರವನ್ನು ಮೀರಿ ಸಂಭಾವನೆಯನ್ನು ಬಯಸುತ್ತಿದ್ದರೂ ರಾಜಕೀಯ ವ್ಯಕ್ತಿಗಳಿಗಿಂತ ಹೆಚ್ಚು ನ್ಯಾಯಬದ್ಧರಾಗಿದ್ದರು. ನೈರುತ್ಯ ಏಷ್ಯಾದ ಇತರ ಪ್ರದೇಶಗಳಲ್ಲಿ ಕೇಂದ್ರಾಡಳಿತವಿರುವ ರಾಜಕೀಯ ವ್ಯವಸ್ಥೆಗಿಂತ ಅನೌಪಚಾರಿಕ ನೆಂಟಸ್ತನ ಗುಂಪುಗಳನ್ನೇ ಅವಲಂಬಿಸಿದ್ದರು. ಈಗಿನ ಬಾಲಿ ಜನಾಂಗ ದೊಡಿಯಾ ಎಂಬುದರ ವಿಸ್ತೃತ ನೆಂಟಸ್ತಿಕೆಯ ಗುಂಪೇ ಆಗಿದ್ದು, ಅಲ್ಲಿನ ಸಮುದಾಯದಲ್ಲಿ ವ್ಯಕ್ತಿಗೆ ಪ್ರಾಶಸ್ತ್ಯ ಹಾಗೂ ಅವರು ತಾವೆಲ್ಲ ಒಬ್ಬನೆಯ ಹಿರಿಯನಿಂದ ಬಂದವರೆಂದು ನಂಬುತ್ತಾರೆ. ಈಗಿನ ಫಿಲಿಫೈನ್ಸ್ ದ ಬಹು ಭಾಗದಲ್ಲಿ ಕೂಡ ಇದೇ ಸಾಮಾಜಿಕ-ರಾಜಕೀಯ ರಚನೆ ಇರುವಂತೆ ತೋರುತ್ತದೆ. ಫಿಲಿಫೈನ್ ದೇಶದಲ್ಲಿ ವಸಾಹತು ಕಾಲ ಪ್ರಾರಂಭವಾಗುವವರೆಗೂ, ಪ್ರಾಥಮಿಕ ಹಂತದ ರಾಜಕೀಯ ಗುಂಪುಗಳು ನೆಂಟಸ್ತಿಕೆಯಿಂದ ಆದವುಗಳೇ ಆಗಿದ್ದು ಹಿರಿಯರೇ ಮುಖ್ಯಸ್ಥ ರಾಗಿರುತ್ತಿದ್ದರು.

ಸ್ಟ್ಯಾನಿಷ್‌ರ ಆಗಮನವಾಗುವ ವೇಳೆಗೆ, ಈ ಪೈಕಿ ಅತ್ಯಂತ ದೊಡ್ಡದೆನಿಸುತ್ತಿದ್ದ ಸಮುದಾಯ ಸುಮಾರು ಒಂದು ನೂರು ಕುಟುಂಬಗಳನ್ನೊಳಗೊಂಡಿದ್ದು, ಅವು ಪರಸ್ಪರ ರಸ್ತಸಂಬಂಧವುಳ್ಳವುಗಳಾಗಿದ್ದವು. ಅಲ್ಲದೆ ಒಂದೇ ಭೌಗೋಳಿಕ ಪರಿಸರದಲ್ಲಿ ಹಲವಾರು ಗುಂಪುಗಳ ಮಿಶ್ರಣವಿದ್ದರೂ, ಹಲವು ಮುಖಂಡರು ಸಮಾನರಾಗಿಯೇ ಪರಿಗಣಿತರಾಗು ತ್ತಿದ್ದರು. ಅಲ್ಲದೇ ಅವರವರ ನೆಂಟಸ್ತಿಕೆ ಸ್ವತಂತ್ರವಾಗಿಯೇ ಇತ್ತು. ಫಿಲಿಫೈನ್ಸ್ ನಡುಗಡ್ಡೆಗಳಲ್ಲಿ ಇನ್ನಾವುದೇ ದೊಡ್ಡ ರಾಜಕೀಯ ಘಟಕ ಕಾರ್ಯ ಮಾಡುತ್ತಿದ್ದ ಬಗ್ಗೆ ಯಾವ ಪುರಾವೆಯೂ ಇಲ್ಲ. ಕ್ಯೂಬಾ, ಮನಿಲಾ, ವೈಗನ್‌ಗಳಲ್ಲಿ ಇತರ ಬಹುತೇಕ ಸ್ಥಳೀಯ ಮನೆತನಗಳಿಗಿಂತ ದೊಡ್ಡ ಸಮುದಾಯಗಳು ಬೆಳೆದರೂ ಮನಿಲಾದ ಮುಖ್ಯಸ್ಥನು ಆಳರಸರಂತೆ ಇದ್ದನು. ಲಭ್ಯವಿರುವ ಸಾಕ್ಷ್ಯವು ಸ್ಥೂಲರೂಪವಿದ್ದಾದರೂ ಬ್ರಾನ್‌ಸನ್‌ನ ಪ್ರಕಾರ(ಕ್ರಿ.ಶ.೬೦೦) ದ್ವಾರಾವತಿ ಉದಯವಾಗುವುದಕ್ಕೂ ಮುಂಚೆ ಥೈಲಾಂಡ್‌ನಲ್ಲಿ ರಾಜಕೀಯ ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಚಿಕ್ಕ ಅಥವಾ ಪರಂಪರಾಗತ ಮಾದರಿಯ ರಾಜ್ಯ ಸಮೂಹಗಳಿದ್ದವು; ಇವೂ ಸಹ ನೆಂಟಸ್ತಿಕೆಯ ಸಮೂಹಗಳೇ ಆಗಿದ್ದವು.

ಇವರು ಸ್ಥಳೀಯ ರೀತಿಯನ್ನು ಬಿಟ್ಟು ಬಲಶಾಲಿ ಸರ್ಕಾರ ರಚನೆಯನ್ನು ಏಕೆ ಬೆಳೆ ಸಲಿಲ್ಲ ಎಂಬುದಕ್ಕೆ ಕಾರಣ ತಿಳಿದಿಲ್ಲ. ನೀರಾವರಿ ಸೌಲಭ್ಯದ ಕೃಷಿಯಿಂದಲೇ ಅಧಿಕಾರಶಾಹಿ ರಾಜಕೀಯ ಸಂಘಟನೆಗೆ ದಾರಿಯಾಗಿರಬೇಕು. ರಾಜಕೀಯ ಸಂಘಟನೆ ದುರ್ಬಲವಾಗಿದ್ದರೂ ಅವರನ್ನು ಪರಾಭವಕ್ಕೀಡು ಮಾಡಲಿಲ್ಲ. ದುರ್ಬಲ ರಾಜ್ಯವೊಂದನ್ನು ಕಟ್ಟಿ ಪರಕೀಯರ ಆಳಿಕೆಗೆ ಗುರಿಯಾಗುವುದು ಅವರಿಗೆ ಇಷ್ಟವಿರಲಿಲ್ಲ. ದೌರ್ಜನ್ಯಕ್ಕೆ ಮತ್ತೊಂದು ಹೆಸರಾಗಿದ್ದ ಬಟಕ್ ರು ಇಲ್ಲಿಯ ಕೆಲವು ರಫ್ತು ಸಾಮಗ್ರಿಗಳಿಂದ ಆಕರ್ಷಿತರಾಗಿದ್ದರು. ಸುಮಾತ್ರಾ ರಾಜ್ಯಗಳಾದ ಶ್ರೀವಿಜಯದಂಥ ನಾಡುಗಳು ತಮ್ಮ ಈ ಹಿನ್ನಾಡಿನ ಮೇಲೆ ಅಳಿಕೆ ನಡೆಸಲು ಬಯಸಲಿಲ್ಲ.

ಗ್ರಾಮಮಟ್ಟದ ನೆಂಟಸ್ತಿಕೆ ಸಮೂಹಗಳಿಂದ ದೊಡ್ಡ ರಾಜಕೀಯ ಗುಂಪುಗಳ ನಿರ್ಮಾಣ ಏಕಕಾಲಿಕವಾಗಿರಲಿಲ್ಲ ಹಾಗೂ ಇಡೀ ಆಗ್ನೇಯ ಏಷ್ಯಾದಲ್ಲಿ ಏಕರೂಪ ವಾಗಿರಲಿಲ್ಲ. ಫಿಲಿಫೈನ್ಸ್‌ಗೆ ಇಸ್ಲಾಮಿಯರ ಆಗಮನವಾದಂತೆ ಅವರೊಂದಿಗೆ ಅರಸೊತ್ತಿಗೆಯ ಪರಿಕಲ್ಪನೆಯೂ ಹುಟ್ಟಿಕೊಂಡಿತು. ಸುರಕ್ಷಿತತೆ ಹಾಗೂ ಸಂಘಟನೆಯ ಸುಧಾರಿತ ರೂಪವಾಗಿ ಗ್ರಾಮಗಳ ಮಲ್ಯದಲ್ಲಿ ರಾಜ್ಯದ ಅಗತ್ಯ ಕಂಡುಬಂದುದರ ಫಲವೇ ರಾಜ್ಯ ಸಂಘಟನೆ. ಮಲಯಾ ನಡುಗಡ್ಡೆಯಲ್ಲಿ ರಾಜಕೀಯ ಅನುಬಂಧದಷ್ಟೇ ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕವಾದ ಸಮುದಾಯವಿತ್ತು. ಇದಕ್ಕೆ ಒಂದೇ ರಾಜಧಾನಿಯಾಗಲಿ, ನಿಗದಿತ ಗಡಿರೇಖೆಗಳಾಗಲಿ, ಆಡಳಿತ ಸೂತ್ರಗಳಾಗಲಿ ಇರಲಿಲ್ಲ. ಪಾಶ್ಚಾತ್ಯ ಪರಿಭಾಷೆಯ ಮೇರೆಗಿನ ರಾಜ್ಯ ಅದಾಗಿರಲಿಲ್ಲವಾದರೂ ಆಧುನಿಕ ಆಗ್ನೇಯ ಏಷ್ಯಾ ರಾಜ್ಯಗಳಲ್ಲಿ ಕಂಡುಬಾರದಿದ್ದಂಥ ವಿಧೇಯತೆ, ಬೆಂಬಲ ಗೋಚರಿಸುತ್ತಿತ್ತು. ಪರಕೀಯರಿಗೆ ಅವಕಾಶವೀಯದೆ, ಒಂದೇ ಸಮುದಾಯದ ಜನತೆ ಮನ್ನಣೆ ನೀಡುವ ಹಾಗೂ ತಮ್ಮ ಮಲ್ಯಗಳು, ಜೀವನ ರೀತಿ ಹಾಗೂ ತಮ್ಮ ಸಮಾಜದ ವೈಲಕ್ಷಣ್ಯಗಳನ್ನು ಕಾಯ್ದು ಕೊಳ್ಳುವಂಥ ರಾಷ್ಟ್ರನಿರ್ಮಾಣ ವೈಖರಿ ಪ್ರಾಚೀನ ನೈರುತ್ಯ ಏಷ್ಯಾದಲ್ಲಿ ಕಂಡುಬರಲಿಲ್ಲ. ದೈನಂದಿನ ಜೀವನದ ದುಷ್ಟಶಕ್ತಿಗಳಿಂದ, ಅತಿಮಾನವ ಪ್ರಪಂಚದ ದುಷ್ಟಶಕ್ತಿಗಳಿಂದ ಸುರಕ್ಷತೆ ಪಡೆಯುವುದಕ್ಕಾಗಿ ಮಾನವಶಕ್ತಿಯನ್ನು ಅಧೀನದಲ್ಲಿಟ್ಟುಕೊಳ್ಳುವ ವಿಸ್ತೃತ ಅಧಿಕಾರರೂಪ ಸೃಷ್ಟಿಯಾಯಿತು. ಆದರೆ ಇದೂ ಕೂಡ ನೆಂಟಸ್ತಿಕೆ ಹಾಗೂ ಸ್ಥಳೀಯ ಅಧೀನ ಸಂಸ್ಥೆಗಳ ಮೂಲಕ ರಾಷ್ಟ್ರನಿರ್ಮಾಣ ಮಾಡುವ ಉದ್ದೇಶ ಹೊಂದಿತ್ತು. ರಾಜಕೀಯ ಸಂಘಟಣೆಗಾಗಿ ಸ್ಥಳೀಯ ಸಂಸ್ಥೆಗಳಿಗೆ ಒತ್ತು ನೀಡಿ. ರಾಜ್ಯದ ಘಟಕಗಳಿಗಿಂತ ಒಬ್ಬ ವ್ಯಕ್ತಿಯಲ್ಲಿ ಸಾರ್ವಭೌಮತ್ವವನ್ನು ನಿಹಿತಗೊಳಿಸಿದ ಪ್ರಾಚೀನ ಆಗ್ನೇಯ ಏಷ್ಯಾ ಒಂದು ದುರ್ಬಲ ರಾಜಕೀಯ ಘಟಕವೇ ಆಗಿತ್ತು.