ತಮ್ಮ ಪ್ರಭುತ್ವವನ್ನು ಹೇರಿ ಆರ್ಥಿಕ ಸಂಪನ್ಮೂಲಗಳನ್ನು ಸೂರೆ ಮಾಡುವುದಾಗಿತ್ತು. ಆದರೆ ೧೯ನೆಯ ಶತಮಾನದ ಪ್ರಾರಂಭದಲ್ಲಿ ಬ್ರಿಟಿಷ್ ಮತ್ತು ಡಚ್ಚರು ತಮ್ಮ ವಸಾಹತೀಕರಣವನ್ನು ಸಂಘಟಿಸಿ ಸ್ವತಂತ್ರ ವಸಾಹತುಗಳನ್ನು ಸ್ಥಾಪಿಸಿದರು. ಈ ಬದಲಾವಣೆಯು ಸ್ಥಾಪಿತ ಸಾಂಪ್ರದಾಯಿಕ ವ್ಯವಸ್ಥೆ, ರಚನೆ ಮತ್ತು ಸಂಸ್ಥೆಗಳ ನಾಶಕ್ಕೆ ಕಾರಣವಾಗಿದ್ದಲ್ಲದೆ, ಹೊಸ ರೀತಿಯ ರಾಜಂಗ ಮತ್ತು ಧಾರ್ಮಿಕ ಸಂಘಟನೆಗೆ ಪ್ರಚೋದನೆ ನೀಡಿತು. ಡಚ್ ಮತ್ತು ಬ್ರಿಟಿಷರ ವಸಾಹತುಶಾಹಿ ಆಡಳಿತವು ಇಲ್ಲಿನ ರಾಜಕೀಯ ಮತ್ತು ಆರ್ಥಿಕ ಜೀವನಕ್ರಮವನ್ನು ಆಧುನೀಕರಿಸಿ ರಾಷ್ಟ್ರೀಯವಾದದ ಚಳುವಳಿಗೆ ಹಿನ್ನೆಲೆಯನ್ನು ಹುಟ್ಟಿಸಿತು. ಜೊತೆಗೆ ಸ್ಥಳೀಯ ಮುಸಲ್ಮಾನರನ್ನು ವಿದೇಶಿ ಬಂಡವಾಳಶಾಹಿ ಪ್ರಭುತ್ವದ ವಿರುದ್ಧ ದಂಗೆ ಏಳಲು ಪ್ರಚೋದನೆ ನೀಡಿತು. ದಕ್ಷಿಣ ಏಷ್ಯಾದಂತೆ ವಿದೇಶಿಯರು ಇಲ್ಲಿನ ರಾಜಂಗದ ರೂವಾರಿಗಳಾದರು. ಆದರೆ ವಿದೇಶಿಯರ ದಬ್ಬಾಳಿಕೆಯ ವಿರುದ್ಧ ಸ್ಥಳೀಯ ಸ್ವಾಯತ್ತ ಗುಂಪುಗಳು ಮೊತ್ತ ಮೊದಲಿಗೆ ವಿರೋಧಿ ಧ್ವನಿಯನ್ನು ವ್ಯಕ್ತಪಡಿಸಿದವು. ಇಸ್ಲಾಮಿ ಉಲೇಮಾಗಳು, ಸೂಫಿ ಗುರುಗಳು ಮತ್ತು ರಾಜಕೀಯ ಪ್ರತಿನಿಧಿಗಳು, ಹೊಸ ತಲೆಮಾರಿನ ಇಂಡೋನೇಶಿಯಾದ ಆಡಳಿತಾಧಿಕಾರಿಗಳು, ವಿದ್ವಾಂಸರು, ಮುಸಲ್ಮಾನ ಸುಧಾರಕರು ಹಾಗೂ ಕಾಲಕ್ರಮೇಣ ಸೈನ್ಯಾಂಗದ ಉಗ್ರ ನೇತಾರರು ಸಂಘಟಿತರಾಗಿ ಮಲೇಶಿಯಾ ಮತ್ತು ಇಂಡೋನೇಶಿಯಾಗಳನ್ನು ಆಧುನಿಕ ದೇಶಗಳನ್ನಾಗಿ ಕಟ್ಟಲು ಹೋರಾಡಿ, ಪ್ರಾರಂಭಿಸಿದರು. ಜತ್ಯತೀತ ರಾಷ್ಟ್ರೀಯವಾದಿಗಳು, ಕಮ್ಯೂನಿಸ್ಟರು, ಸಂಪ್ರದಾಯ ಇಸ್ಲಾಮಿಗಳು, ಉಲೇಮಾಗಳು ಮತ್ತು ಸುಧಾರಣಾ ಇಸ್ಲಾಮಿ ಚಳುವಳಿಗಳು ಡಚ್ ಮತ್ತು ಬ್ರಿಟಿಷರ ವಸಾಹತೀಕರಣಗಳ ವಿರುದ್ದ ಹೋರಾಡಿ ಮಲೇಶಿಯಾ ಮತ್ತು ಇಂಡೋನೇಶಿಯಾ ಸಮಾಜದ ಪುನರ್‌ನಿರ್ಮಾಣದ ಹೊಣೆಯನ್ನು ಹೊತ್ತರು. ಈ ಹೋರಾಟದ ಜೊತೆಗೆ ಇಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮಲ್ಯಗಳು ಸಂಸ್ಕೃತಿಯ ಪ್ರಭಾವದಿಂದಾಗಿ ಪರಿವರ್ತನೆಗೊಂಡವು. ಈ ಪರಿವರ್ತನೆಯನ್ನು ದೇಶೀಯ ಮಟ್ಟದಲ್ಲಿ ಬೇರೆ ಬೇರೆ ಹಂತಗಳಲ್ಲಿ ನಾವು ಕಾಣಬಹುದು. ಇದು ವಸಾಹತುಶಾಹಿಯ ಕ್ರೋಡೀಕರಣ ಮತ್ತು ವಿವಿಧ ಹಂತದ ಬೆಳವಣಿಗೆಯ ಜೊತೆ ಜೊತೆಗೆ ಕಂಡುಬರುವುದು ಅನಿವಾರ್ಯವಾಗಿತ್ತು. ಏಕೆಂದರೆ ವಸಾಹತು ರಾಷ್ಟ್ರಗಳಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಬದಲಾವಣೆಗಳು ಮತ್ತು ಹೊಸ ಬೇಡಿಕೆಗಳು ಸುಗಮವಾಗಿ ಈಡೇರಬೇಕಾದರೆ ತಮ್ಮ ತಮ್ಮ ವಸಾಹತು ಗಳಲ್ಲಿ ಅದಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ತರುವುದು ಸೂಚ್ಯವಾಗಿರುತ್ತದೆ. ಈ ಅನಿವಾರ್ಯತೆಯಿಂದಾಗಿ ಬಂಡವಾಳಶಾಹಿಯ ಅವತಾರ ಮತ್ತು ಲಕ್ಷಣಗಳು ವಸಾಹತುಗಳಲ್ಲಿ ಪುನರಾವರ್ತನೆಗೊಳ್ಳುವುದು ಸಹಜ. ಈ ಪುನರಾವರ್ತನೆ ಬಂಡವಾಳಶಾಹಿ ಮತ್ತು ವಸಾಹತು ರಾಷ್ಟ್ರಗಳಲ್ಲಿ ಒಂದೇ ಮಟ್ಟದ ಅಭಿವೃದ್ದಿಯನ್ನು ಕಾದಿರಿಸಿಕೊಳ್ಳುತ್ತದೆ ಎಂಬ ಅರ್ಥವೇನಲ್ಲ. ಬದಲಾಗಿ, ವಿಭಿನ್ನ ರೀತಿಯದ್ದಾಗಿರುತ್ತದೆ. ಇದಕ್ಕಾಗಿಯೇ ೧೯ನೆಯ ಶತಮಾನದಲ್ಲಿ ದಕ್ಷಿಣ ಪೂರ್ವ ಏಷ್ಯಾದಲ್ಲಿ ವಸಾಹತುಶಾಹಿ ವಿರೋಧಿ ಚಳುವಳಿಗಳು ಹುಟ್ಟಿಕೊಂಡವು. ಈ ಬೆಳವಣಿಗೆಯ ಸ್ವರೂಪವನ್ನು ತಿಳಿದುಕೊಳ್ಳಲು ಸಂಕ್ಷಿಪ್ತವಾಗಿ ವಸಾಹತುಶಾಹಿಯ ಕಾರ್ಯಾಚರಣೆ ಮತ್ತು ದೇಶೀಯ ಸಂಸ್ಥೆಗಳೊಂದಿಗೆ ಅದರ ಹೊಂದಾಣಿಕೆಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಏಕೆಂದರೆ ೧೯ನೆಯ ಶತಮಾನದಲ್ಲಿ ವಸಾಹತುಶಾಹಿ ಆಡಳಿತದ ಪ್ರಭಾವದಿಂದ ದೇಶೀಯ ಚಿಂತನೆ, ಸಂಸ್ಥೆ ಮತ್ತು ಚಳುವಳಿಗಳ ಸ್ವರೂಪವೇ ಬದಲಾಗುತ್ತವೆ. ಈ ಎಲ್ಲ ಬೆಳವಣಿಗೆಗಳನ್ನು ಇಂಡೋನೇಶಿಯಾದಲ್ಲಿ ಡಚ್ಚರ ವಸಾಹತು ನೀತಿಯ ಮೂಲಕ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಇಂಡೋನೇಶಿಯಾದಲ್ಲಿ ಡಚ್ಚರು ಮತ್ತು ಬಂಡವಾಳಶಾಹಿ ಪದ್ಧತಿ

೧೭೯೫ರ ಮೊದಲು ಡಚ್ ವರ್ತಕರು ಕಾಫಿ, ಟೀ, ಕರಿಮೆಣಸು ಮತ್ತು ಇನ್ನಿತರ ವಾಣಿಜ್ಯ ಧಾನ್ಯಗಳನ್ನು ಇಂಡೋನೇಶಿಯಾದ ಸ್ಥಳೀಯ ರೈತರಿಂದ ಬಹಳ ಕಡಿಮೆ ಬೆಲೆಗೆ ಪಡೆಯುತ್ತಿದ್ದರು. ಈ ವಸ್ತುಗಳನ್ನು ಬಲಾತ್ಕಾರದಿಂದ ಸಂಗ್ರಹಿಸಿ ಯುರೋಪಿನ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು. ೧೭೯೫ರಲ್ಲಿ ಹಾಲೆಂಡನ್ನು ನೆಪೋಲಿಯನ್ ಆಕ್ರಮಿಸಿಕೊಂಡ ಮೇಲೆ ಈಸ್ಟ್ ಇಂಡೀಸ್‌ನಲ್ಲಿ ಡಚ್ಚರ ವಸಾಹತು ಚಟುವಟಿಕೆಗಳಲ್ಲಿ ಇಳಿಮುಖ ಕಂಡುಬಂದು, ವಸಾಹತು ಎಕಾನಮಿಯನ್ನು ಸೂರೆ ಮಾಡಲು ಡಚ್ ರಿಪಬ್ಲಿಕ್ ಕೇಂದ್ರೀಕೃತ ಆಡಳಿತಕ್ಕೆ ಹೆಚ್ಚು ಪ್ರೋ ನೀಡಿದರು. ೧೮೦೬ರಲ್ಲಿ ಹರ್ಮನ್ ಡಾಯನ್‌ಡೆಲ್‌ನನ್ನು ರಾಜ್ಯಪಾಲನನ್ನಾಗಿ ಜವಾದಲ್ಲಿ ನೆಯಮಿಸಿ, ಸ್ಥಳೀಯ ಅರಸರ ಆಧಿಪತ್ಯವನ್ನು ದುರ್ಬಲಗೊಳಿಸಿ, ಅವರನ್ನು ಡಚ್ ಅಧಿಕಾರಿಗಳಿಗೆ ವಿಧೇಯರಾಗಿರುವಂತೆ ಒತ್ತಡ ಹೇರಲಾಯಿತು. ಫಲವತ್ತಾದ ಜಮೀನಿನಲ್ಲಿ ವಾಣಿಜ್ಯ ಬೆಳೆಗಳಾದ ಹತ್ತಿ, ಕಾಫಿ, ಟೀ ಮತ್ತು ಇನ್ನಿತರ ಬೆಲೆಬಾಳುವ ಧಾನ್ಯಗಳನ್ನೇ ಬೆಳೆಸಲು ರೈತರಿಗೆ ಸೂಚನೆ ನೀಡಲಾಯಿತು. ೧೮೧೧ರಲ್ಲಿ ಬ್ರಿಟಿಷರು ಜವಾ ದ್ವೀಪವನ್ನು ಆಕ್ರಮಿಸಿ ಸರ್ ಸ್ಟ್ಯಾಪರ್ಡ್ ರ‍್ಯಾಫಲ್ಸ್ ಎಂಬ ಹೊಸ ರಾಜ್ಯಪಾಲನನ್ನು ನೇಮಕ ಮಾಡಲಾಯಿತು. ಬ್ರಿಟಿಷರು ಇಲ್ಲಿ ಬಂಡವಾಳಶಾಹಿ ಆರ್ಥಿಕ ಅಭಿವೃದ್ದಿಗೆ ಗಮನಹರಿಸಿ ಇಂಡೋನೆಯಶಿ ಯನ್ನರಿಗೆ ಖಾಸಗಿ ಭೂಮಾಲೀಕತ್ವ ನೀತಿಯನ್ನು ಜರಿಗೆ ತರಲಾಯಿತು. ಹೊಸ ಕಂದಾಯ ಪದ್ಧತಿಯನ್ನು ಅನುಷ್ಠಾನಗೊಳಿಸಿ ತೆರಿಗೆಯನ್ನು ವಸ್ತುಗಳ ರೂಪದಲ್ಲಿ ಪಾವತಿಸುವ ಬದಲು ಹಣದ ರೂಪದಲ್ಲಿಯೇ ಪಾವತಿಸಲು ಆಜ್ಞೆ ಹೊರಡಿಸಿದನು. ಇದರ ಪ್ರಕಾರ ಒಟ್ಟು ಉತ್ಪಾದನೆಯ ೨/೫ರಷ್ಟು ಭಾಗವನ್ನು ಸರಕಾರ ಹೇರುವ ತೆರಿಗೆಗಾಗಿ ಕಾದಿರಿಸಬೇಕಾಯಿತು. ಉಳಿದ ಉತ್ಪಾದನೆಯ ಭೂಮಾಲೀಕರು ಮತ್ತು ರೈತರು ಹಂಚಿಕೊಂಡು, ಡಚ್ ಏಜನ್ಸಿಗಳು ನಿರ್ದಿಷ್ಟಪಡಿಸಿದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಜೀತದಾಳು ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಕಾರ್ಮಿಕರಿಗೆ ಸಂಬಳ ನೀಡುವ ವ್ಯವಸ್ಥೆಯನ್ನು ಆರಂಭಿಸಿದರು. ಸ್ಥಳೀಯರ ವ್ಯಹಿಸುವ ಅಧಿಕಾರವನ್ನು ವೃದ್ದಿಸಲು ಆರ್ಥಿಕ ರಂಗದಲ್ಲಿ ಹಣವೇ ಮುಖ್ಯವಾದ ಮಾಧ್ಯಮವಾಗಿ ಬೆಳೆಸಲಾಯಿತು. ಇದು ಬ್ರಿಟಿಷರು ಆಮದು ಮಾಡಿಕೊಳ್ಳುವ ಸಿದ್ಧವಸ್ತುಗಳಿಗೆ ಇಂಡೋನೇಶಿಯಾದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿತು. ಈ ಎಲ್ಲ ಧೋರಣೆಗಳ ಮೂಲ ಉದ್ದೇಶ ‘‘ದೇಶೀಯ ಜನರ ಸರ್ವತೋಮುಖ ಅಭಿವೃದ್ದಿ ಮತ್ತು ಜನರ ಹಿತರಕ್ಷಣೆ’’ ವಸಾಹತುಶಾಹಿ ಸರಕಾರದ ಘೋಷಣೆಯಾಗಿತ್ತು. ಅಂದರೆ ಡಾಯನ್‌ಡೆಲ್ ಮತ್ತು ರ‍್ಯಾಫಲ್ಸ್ ಇಬ್ಬರೂ ಒಂದು ರೀತಿಯ ವಸಾಹತುಶಾಹಿ ಚಳುವಳಿಯನ್ನೇ ಪ್ರಾರಂಭಿಸಿದರು.

೧೮೩೦ರಲ್ಲಿ ಇಂಡೋನೇಶಿಯಾದ ಜವ ದ್ವೀಪವು ಪ್ರಮುಖವಾದ ವಸಾಹತಾಗಿ ಬೆಳೆಯಿತು. ಹೊಸ ರಾಜ್ಯಪಾಲನಾದ ವಾನ್‌ಡೆನ್ ಬೋಷ್ ಜವಾದ ರಾಜಕೀಯ ಮತ್ತು ಆರ್ಥಿಕ ರಂಗಗಳಲ್ಲಿ ಅಧಿಕಾರವನ್ನು ಕೇಂದ್ರೀಕರಿಸಿದನು. ಇಡೀ ಜವವನ್ನು ಹಲವು ಆಡಳಿತ ಜಿಲ್ಲೆಗಳನ್ನಾಗಿ ವಿಂಗಡಿಸಿ ರೆಸಿಡೆನ್ಸೀಸ್‌ಗಳೆಂದು ಕರೆಯಲಾಯಿತು. ಜಿಲ್ಲೆಗಳನ್ನು ಪುನಃ ವಿಭಜಿಸಿ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ರಿಜನ್ಸೀಸ್ ಎಂದು ಕರೆಯಲಾಯಿತು. ಈ ರೀತಿಯ ಡಚ್ಚ ಅಧಿಪತ್ಯವು ವಂಶೀಯ ಪದ್ಧತಿಯನ್ನು ಅನುಸರಿಸುವ ಸ್ಥಳೀಯ ಅರಸರನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿತು. ಜೊತೆಗೆ ಕಂದಾಯ ವಸೂಲಿ ಮಾಡುವ ಹಕ್ಕನ್ನು ಅವರಿಂದ ಡಚ್ಚರು ಕಸಿದುಕೊಂಡು, ೧೮೬೭ರಲ್ಲಿ ಅವರ ಜಮೀನನ್ನು ಕಬಳಿಸಿ, ೧೮೮೨ರಲ್ಲಿ ಅಂತಹ ಅರಸರೊಂದಿಗೆ ದುಡಿಯುವ ಕಾರ್ಮಿಕ ವರ್ಗದವರನ್ನು ಸ್ವತಂತ್ರಗೊಳಿಸಿದರು. ಕ್ರಮೇಣ ಅವರನ್ನು ಸ್ವತಂತ್ರ ಅರಸೊತ್ತಿಗೆಯ ಗದ್ದುಗೆಯಿಂದ ಕೆಳಗಿಸಿ ವಸಾಹತುಶಾಹಿ ಆಡಳಿತದಲ್ಲಿ ವಿಲೀನಗೊಳಿಸಿ ಕೇವಲ ಸಂಬಳಕ್ಕಾಗಿ ದುಡಿಯುವ ಅಧಿಕಾರಿಗಳನ್ನಾಗಿ ಪರಿವರ್ತಿಸಿದರು.

ಜವಾ ದ್ವೀಪದ ಆರ್ಥಿಕ ವ್ಯವಸ್ಥೆಯನ್ನು ವಸಾಹತುಶಾಹಿ ‘ಕಲ್ಚರ್ ಸಿಸ್ಟಮ್’ ಎಂಬ ಉದ್ದೇಶಿತ ಯೋಜನೆಯಂತೆ ಪುನರ್‌ಸಂಘಟಿಸಲಾಯಿತು. ಕಲ್ಚರ್ ಸಿಸ್ಟಮ್ ಒಂದು ಬಗೆಯ ಕಂದಾಯ ವಸೂಲಿ ಪದ್ಧತಿಯಾಗಿದ್ದು, ಪ್ರತಿ ಹಳ್ಳಿಯ ಸುಮಾರು ೪೦ ಶೇಕಡದಷ್ಟು ಉತ್ಪಾದನೆಯನ್ನು ಕಂದಾಯವಾಗಿ ಸರಕಾರಕ್ಕೆ ಸಲ್ಲಿಸಬೇಕು. ರಾಜ್ಯಪಾಲ ಬೋಷ್‌ನ ಕಲ್ಚರ್ ಸಿಸ್ಟಮ್ ಪ್ರಕಾರ ಜವಾ ದ್ವೀಪದ ರೈತ ಸಮುದಾಯವೂ, ಪ್ರತಿ ಹಳ್ಳಿಯಲ್ಲಿ ಭತ್ತ ಬೆಳೆಯಲು ಮೀಸಲಿಟ್ಟ ಫಲವತ್ತಾದ ಭೂಮಿಯಲ್ಲಿ ೧/೫ರಷ್ಟು ಭೂಮಿಯನ್ನು ಸರಕಾರ ಚೂಚಿಸಿದ(ರಫ್ತು ಮಾಡಲು ಲಭ್ಯವಾಗುವ) ವಾಣಿಜ್ಯ ಬೆಳೆಗಳಾದ ಕಬ್ಬು, ನೀಲಿ, ಕಾಫಿ, ಟೀ, ಹೊಗೆಸೊಪ್ಪು, ಏಲಕ್ಕಿ, ಲವಂಗ, ಹತ್ತಿ, ಕಾಳು ಮೆಣಸು ಮತ್ತು ಇತ್ನಿತರ ಆಹಾರ ಧಾನ್ಯಗಳನ್ನು ಬೆಳಸಲು ಪ್ರತ್ಯೇಕವಾಗಿ ಕಾದಿರಿಸಬೇಕಾಯಿತು. ಇದರಿಂದ ಬೋಷ್‌ನ ಪ್ರಕಾರ ಪ್ರತಿ ಹಳ್ಳಿಗಳ ಉತ್ಪಾದನೆಯ ಒಟ್ಟು ೨೦ರಷ್ಟು, ಭೂಕಂದಾಯ ತೆರಲು ಸಾಕಾಗುತ್ತಿತ್ತು (ಮೊದಲು ೪೦ ಇತ್ತು). ಆದರೆ ಉತ್ಪಾದಿಸಿದ ಎಲ್ಲ ವಾಣಿಜ್ಯ ಬೆಳೆಗಳನ್ನು ಡಚ್ ಸರಕಾರದ ಏಜನ್ಸಿಗಳಿಗೆ ಸರಕಾರ ನಿಗದಿಪಡಿಸಿದ ಬೆಲೆಗೆ ಮಾತ್ರ ಮಾರಾಟ ಮಾಡಬೇಕಾಯಿತು. ಇದಲ್ಲದೆ, ರೈತವರ್ಗವು ನೀರಾವರಿ ವ್ಯವಸ್ಥೆಯನ್ನು ಸರಿಪಡಿಸಲು, ಕಾಲುವೆಗಳನ್ನು ಕಟ್ಟಲು ಮತ್ತು ಸೇವೆಯನ್ನು ಉಚಿತವಾಗಿ ಸಲ್ಲಿಸಬೇಕಿತ್ತು. ರಸ್ತೆಗಳನ್ನು, ಗುಡ್ಡ ಪ್ರದೇಶಗಳನ್ನು ಫಲವತ್ತಾದ ಭೂಮಿ ಯಾಗಿ ಮಾರ್ಪಡಿಸಲು, ವಸಾಹತುಶಾಹಿ ರಾಷ್ಟ್ರಕ್ಕೆ ನೆರವಾಗಬೇಕಿತ್ತು. ವಾಸ್ತವಿಕವಾಗಿ ಈ ಕಲ್ಚರ್ ಸಿಸ್ಟಮ್ ರೈತಪ್ರಿಯವಾಗಿದ್ದರೂ, ನಿಜವಾಗಿ ವಸಾಹತುಶಾಹಿಯ ಪ್ರಭುತ್ವವನ್ನು ಭದ್ರಪಡಿಸಿತು ಮತ್ತು ಅವರ ಇಚ್ಛೆಯಂತೆ ಇಲ್ಲಿನ ಆರ್ಥಿಕ ಸಂಪನ್ಮೂಲಗಳನ್ನು ಸುಲಭವಾಗಿ ಸೂರೆಗೊಳ್ಳಲು ಸಹಕರಿಸಿತು.

ಹೀಗೆ ಸಂಗ್ರಹಿಸಿದ ಉತ್ಪಾದನೆಯನ್ನು ಯುರೋಪಿನ ಮಾರುಕಟ್ಟೆಗೆ ಡಚ್ ವರ್ತಕರು ತಮ್ಮ ದೇಶದ ಹಡಗುಗಳ ಮೂಲಕ ಸಾಗಿಸಿ ಉತ್ತಮ ಲಾಭ ಗಳಿಸಿದರು. ಗಳಿಸಿದ ಲಾಭಾಂಶವನ್ನು ತಮ್ಮ ತಾಯ್ನಾಡಿನ ಕೈಗಾರಿಕೀಕರಣಕ್ಕೆ, ಆರ್ಥಿಕ ಅಭಿವೃದ್ದಿಗೆ ಮತ್ತು ಹಣಕಾಸಿನ ವೃದ್ದಿಗೆ ಯಶಸ್ವಿಯಾಗಿ ಬಳಸಲಾಯಿತು. ಇದರ ಪರಿಣಾಮವಾಗಿ ೧೮೪೮ರ ಹೊತ್ತಿಗೆ ಹಾಲೆಂಡಿನಿಂದ ಜವಾ ದ್ವೀಪಕ್ಕೆ ಭಾರಿ ಪ್ರಮಾಣದಲ್ಲಿ ಸಿದ್ಧ ವಸ್ತುಗಳು ಆಗಮಿಸ ತೊಡಗಿದವು. ಇದರಿಂದ ಇಂಡೋನೇಶಿಯಾದ ಮಾರುಕಟ್ಟೆಗಳು ವಿದೇಶಿ ವಸ್ತುಗಳಿಗೆ ಕೇಂದ್ರವಾದವು. ಆದರೆ ೧೮೪೮ರಲ್ಲಿ ಕಲ್ಚರ್ ಸಿಸ್ಟಮ್ಸ್‌ನ ಮುಂದುವರಿಕೆಯಿಂದ ಎಣಿಸಿದಷ್ಟು ಕಂದಾಯ ವಸೂಲಿ ಮಾಡಲು ವಿಫಲವಾಯಿತು. ಏಕೆಂದರೆ, ೧೮೪೦ರ ದಶಕದಲ್ಲಿ ಜವಾದಿಂದ ಸಂಪನ್ಮೂಲಗಳನ್ನು ಮಿತಿಮೀರಿ ದೋಚಿದ್ದರಿಂದ ಜವಾದ ರೈತವರ್ಗದ ಸಾಮಾನ್ಯ ಜೀವನ ಕ್ರಮವೂ ಹದಗೆಟ್ಟಿತು. ಇದಲ್ಲದೆ, ಹಾಲೆಂಡ್‌ನಲ್ಲಿ ನಡೆದ ೧೮೪೮ರ ಉದಾರೀಕರಣ ಚಳುವಳಿಯಿಂದಾಗಿ, ಉದಾರಿ ಬಂಡವಾಳಶಾಹಿ ಸಿದ್ಧಾಂತಕ್ಕೆ ಪ್ರೋ ಹೊಸ ವರ್ತಕ ವರ್ಗವು ರಾಜಕೀಯ ರಂಗದಲ್ಲಿ ಅಧಿಕಾರ ವಹಿಸಿಕೊಂಡು, ಪ್ರಜತಂತ್ರ ಸರಕಾರವನ್ನು ರಚಿಸಿ ಸಚಿವ ಸಂಪುಟದ ಪುನಾರಚನೆಯ ಹೊಣೆಯನ್ನು ಹೊತ್ತಿತ್ತು. ೧೮೬೪ರಲ್ಲಿ ಪ್ರಜತಂತ್ರ ಸರಕಾರವೇ ನೇರವಾಗಿ ಇಂಡೋನೇಶೀಯಾದ ಬಜೆಟ್‌ನ ಮೇಲೆ ನೆಯರ ಹಿಡಿತ ಸಾಧಿಸಿತು. ಮಾತ್ರವಲ್ಲ, ಡಚ್ ವಸಾಹತುಗಳು ಡಚ್ಚ ಸರಕಾರದ ನೆಯರ ಆಳ್ವಿಕೆಗೆ ಒಳಪಟ್ಟಿತು. ಈ ಬದಲಾವಣೆಯ ಜೊತೆಯಲ್ಲಿಯೇ ೧೮೫೦ ಮತ್ತು ೧೯೬೦ರ ದಶಕದಲ್ಲಿ ಡಚ್ ಸಾರ್ವತ್ರಿಕ ಅಭಿಪ್ರಾಯವು ಬದಲಾಯಿತು. ಡೆಕ್ಕರ್ ಬರೆದ ‘‘ಮ್ಯಾಕ್ಸ್ ಹವೆಲಾರ್’’ ಪ್ರಕಟಣೆ ಮತ್ತು ಕಬ್ಬು ಬೆಳೆಯಲ್ಲಿ ಆದ ಭ್ರಷ್ಟಾಚಾರವು ಕಲ್ಚರ್ ಸಿಸ್ಟಮ್ ಅನ್ನು ದುರ್ಬಲಗೊಳಿಸಿ, ಉದಾರೀಕರಣ ಸಿದ್ಧಾಂತಗಳ ಆಧಾರದ ಮೇಲೆ ವಸಾಹತುಶಾಹಿ ಆಡಳಿತ ವ್ಯವಸ್ಥೆಯನ್ನು ಪುನರ್‌ಸಂಘಟಿಸಲಾಯಿತು.

ಈ ಉದಾರೀಕರಣ ನೀತಿಯ ಪ್ರೋ ಇಂಡೋನೇಶಿಯಾದ ಕಂದಾಯ ವಸೂಲಿಯಲ್ಲಿ ರಾಜಂಗದ ನೆಯರ ಹಸ್ತಕ್ಷೇಪವನ್ನು ಸಡಿಲಿಸಿದರು. ಈ ಕಾರಣಕ್ಕಾಗಿ ೧೮೬೦ರ ದಶಕದಲ್ಲಿ ವಸಾಹತುಶಾಹಿಯ ಬಲಾತ್ಕಾರ, ಉತ್ಪಾದನಾ ಪದ್ಧತಿಯಡಿಯಲ್ಲಿ ಬೆಳೆಸುವ ವಾಣಿಜ್ಯ ಬೆಳೆಗಳಾದ ಲವಂಗ, ನೀಲಿ, ಟೀ, ಹೊಗೆಸೊಪ್ಪು ಮತ್ತು ಏಲಕ್ಕಿ ಇನ್ನಿತರ ಬೆಳೆಗಳನ್ನು ಕೈಬಿಡಲಾಯಿತು. ಜೊತೆಗೆ ಕಬ್ಬು ಬೆಳೆಗೆ ೧೮೭೦ರಲ್ಲಿ ಪ್ರತ್ಯೇಕ ಕಾನೂನನ್ನು ತಂದು ಕಬ್ಬು ಉತ್ಪಾದನೆಯನ್ನು ದ್ವಿಗುಣ ಗೊಳಿಸಲಾಯಿತು. ಹೊಸ ಖಾಸಗೀಕರಣ ನೀತಿಯನ್ವಯ ರಾಜಂಗದ ಸ್ವಾಧೀನದಲ್ಲಿದ್ದ ಭೂಮಿಯನ್ನು ದೀರ್ಘಕಾಲದವರೆಗೆ ಖಾಸಗಿ ಬಂಡವಾಳಶಾಹಿಗಳಿಗೆ ಬಿಟ್ಟುಕೊಡಲಾಯಿತು. ಸಣ್ಣ ಹಿಡುವಳಿಗಳು ಮತ್ತು ಹಳ್ಳಿ ಜಮೀನಿನಲ್ಲಿ ಖಾಸಗಿ ಬಂಡವಾಳಶಾಹಿಗಳ ಆಕ್ರಮಣದಿಂದಾಗಿ, ಸರಕಾರ ಅವರನ್ನು ದೀರ್ಘಕಾಲದವರೆಗೆ ಮಾಲೀಕರನ್ನಾಗಿ ಮಾಡಿತು. ಕೊರ್ವಿ ಕಾರ್ಮಿಕ ಪದ್ಧತಿಯನ್ನು ೧೮೮೨ರಲ್ಲಿ ಸಂಪೂರ್ಣವಾಗಿ ನಿರ್ಮೂಲನ ಮಾಡಿ, ನಿರ್ದಿಷ್ಟ ಸಂಬಳದ ಮೇಲೆ ಕಾರ್ಮಿಕರನ್ನು ನೇಮಿಸುವ ಕಾನೂನನ್ನು ಜರಿಗೆ ತರಲಾಯಿತು. ಈ ಹೊಸ ಕಾಯ್ದೆಗಳು, ನೀತಿಗಳು ಇಂಡೋನೇಶಿಯಾದ ಎಕಾನಮಿಯಲ್ಲಿ ಬಂಡವಾಳಶಾಹಿ ಅಭಿವೃದ್ದಿಗೆ ಕುಮ್ಮಕ್ಕು ನೀಡಿ, ಸಕ್ಕರೆ ಕಾರ್ಖಾನೆ, ನೀರಾವರಿ ಯೋಜನೆ ಮತ್ತು ರೈಲು ಮಾರ್ಗ ನಿರ್ಮಾಣದಲ್ಲಿ ವಿದೇಶೀಯರು ತಮ್ಮ ಹೆಚ್ಚುವರಿ ಬಂಡವಾಳ ಹೂಡಿ ಅತಿ ಹೆಚ್ಚು ಲಾಭ ಗಳಿಸುವ ಪ್ರಯತ್ನ ಮಾಡಿದರು. ಆದರೆ, ಈ ಬೆಳವಣಿಗೆಯಿಂದಾಗಿ ೧೯ನೆಯ ಶತಮಾನದ ಕೊನೆಯಲ್ಲಿ ಜವಾದ ಅರ್ಥವ್ಯವಸ್ಥೆಯ ಮೇಲಿನ ಪ್ರಭುತ್ವವು ಡಚ್ ಸರಕಾರದಿಂದ ನೆಯರವಾಗಿ ಖಾಸಗಿ ಸಂಸ್ಥೆಗಳಿಂದ ಹಸ್ತಾಂತರಿಸಲಾಯಿತು.

ಮೇಲೆ ಪ್ರಸ್ತಾಪಿಸಿದ ಸಾಮ್ರಾಜ್ಯಶಾಹಿ ‘ಕಲ್ಚರ್ ಸಿಸ್ಟಮ್’ನ ಪ್ರತಿಶ್ರುತವಾಗಿ ೧೯ನೆಯ ಶತಮಾನದ ವಸಾಹತು ಯುಗದಲ್ಲಿ ಒಂದು ಬೆಳವಣಿಗೆಯ ಚಕ್ರವೇ ನಿರ್ಮಾಣವಾಗಿ ಕೃಷಿ ಮತ್ತು ವ್ಯವಸಾಯ ಯೋಜನೆಯಲ್ಲಿ ಅನೇಕ ಆವಿಷ್ಕಾರಗಳಾದವು. ಮುಖ್ಯವಾಗಿ ಬೆಳೆಯಲ್ಲಿ ಕಬ್ಬು ರಫ್ತಿಗಾಗಿ, ಭತ್ತದ ಬೆಳೆ ಜೀವನೋಪಕ್ಕಾಗಿ ಉಪಯೋಗಿಸುವ ಎರಡು ಮಹತ್ವಪೂರ್ಣ ಬೆಳೆಯಾಗಿ ಮಾರ್ಪಟ್ಟಿತು. ಈ ಬೆಳೆಗಳನ್ನು ಒಂದಾದ ಮೇಲೊಂದರಂತೆ ಒಂದೇ ಜಮೀನಿನಲ್ಲಿ, ಒಂದೇ ಕಾರ್ಮಿಕ ವರ್ಗದವರಿಂದ ಬೆಳೆಸಲು ಅನುಕೂಲಕರವಾಗಿತ್ತು. ಈ ರೀತಿಯ ಬದಲಿ ವ್ಯವಸ್ಥೆಯಿಂದಾಗಿ ಏಕಕಾಲಕ್ಕೆ ರಫ್ತು ಮಾಡಲು ಕಬ್ಬು, ಆಹಾರ ಉತ್ಪಾದನೆಗಳು ಮತ್ತು ಭೂಕಂದಾಯ ಸರಕಾರಕ್ಕೆ ಕ್ಲುಪ್ತ ಸಮಯಕ್ಕೆ ಲಭಿಸುತ್ತಿತ್ತು. ಜೊತೆಗೆ ಕಬ್ಬು ಮತ್ತು ಭತ್ತ ಎರಡು ಬೆಳೆಗಳನ್ನು ಪ್ರತಿವರ್ಷ ಒಂದೇ ಮಟ್ಟದ ಬಂಡವಾಳ ಹೂಡುವಿಕೆ ಮತ್ತು ಒಂದೇ ಕಾರ್ಮಿಕ ವರ್ಗದ ಸೇವೆಯಿಂದ ಹೆಚ್ಚು ಉತ್ಪಾದನೆಯನ್ನು ಪಡೆಯಲು ಸಾಧ್ಯವಿರುವುದರಿಂದ ಏರುತ್ತಿರುವ ಜನಸಂಖ್ಯೆಗೆ ಆಹಾರ ಸಾಮಗ್ರಿಗಳ ಕೊರತೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತಿತ್ತು. ಜನಸಂಖ್ಯೆಯ ವೃದ್ದಿ ಮತ್ತು ಹೆಚ್ಚು ಭತ್ತದ ಇಳುವರಿಯಿಂದಾಗಿ, ಭತ್ತ ಮತ್ತು ಕಬ್ಬು ಬೆಳೆಸಲಾಗದ ಜಮೀನಿ ನಲ್ಲಿ ಜೋಳ, ರಾಗಿ, ಬೀನ್ಸ್ ಮತ್ತು ಇನ್ನಿತರ ಆಹಾರ ವಸ್ತುಗಳ ಉತ್ಪಾದನೆಗೆ ಗಮನ ಹರಿಸಲಾಯಿತು. ಕಲ್ಚರ್ ಸಿಸ್ಟಮ್‌ನ ಯಶಸ್ಸಿನಿಂದಾಗಿ, ಇಂಡೋನೆಯಶಿಯಾದ ಜವಾ ದ್ವೀಪವು ವಸಾಹತೀಕರಣದ ಯುಗದಲ್ಲಿ ಬೆಳೆಯುತ್ತಿರುವ ಕಾಲಚಕ್ರದೊಳಗೆ ವಿಲೀನಗೊಂಡಿತು.

ಕೃಷಿ ರಂಗದಂತೆ, ಡಚ್ ಸರಕಾರ ಇಂಡೋನೆಯಶಿಯಾದ ವ್ಯಾಪಾರ ಮತ್ತು ಕೈಗಾರಿಕೆಯ ಮೇಲೆ ತಮ್ಮ ಪ್ರಭುತ್ವವನ್ನು ಸಾಧಿಸಿತು. ಇದರಿಂದ ಇಲ್ಲಿನ ವಾಣಿಜ್ಯ ರಂಗದಲ್ಲಿ ಒಂದು ಆಕ್ರಮಣಕಾರಿ ಬದಲಾವಣೆಯನ್ನು ಅನುಭವಿಸಿತು. ಇಂಡೊನೇಶಿಯಾ, ಜಾಗತಿಕ ಮಾರುಕಟ್ಟೆ ಯೊಂದಿಗೆ ನೆಯರ ಸಂಪರ್ಕವನ್ನು ಹೊಂದಿದ್ದು ಐಕ್ಯತೆ ಸಾಧಿಸಿತು. ಆದರೆ ಈ ಐಕ್ಯತೆಯು ಸಮಾನತೆಯಿಂದ ನೆರವೇರಿದ್ದುದ್ದಲ್ಲ. ಏಕೆಂದರೆ ಇಂಡೋನೇಶಿ ಯಾವು ಜಾಗತಿಕ ಮಾರುಕಟ್ಟೆ ಸಂಬಂಧವನ್ನು ಬೆಳೆಸುವಾಗ ಡಚ್ ಸರಕಾರ ಅಲ್ಲಿ ಇಂಡೋನೇಶಿಯಾಕ್ಕೆ ತೀರ ಕೆಳ ದರ್ಜೆಯ ಸ್ಥಾನವನ್ನು ಕಲ್ಪಿಸಿತ್ತು. ವಿದೇಶಿ ವ್ಯಾಪಾರದಲ್ಲಿ ಇಂಡೋನೇಶಿಯಾ ವೃದ್ದಿಯನ್ನು ಕಂಡಿತ್ತು. ಈ ಬದಲಾವಣೆ ಇಂಡೋನೇಶಿಯಾದ ಆರ್ಥಿಕ ಮತ್ತು ವ್ಯಾಪಾರ ರಂಗದಲ್ಲಿ ಮುನ್ನಡೆಯನ್ನು ಸಾಧಿಸಿದೆ ಎಂದೇನೂ ಅಲ್ಲ ಅಥವಾ ಇದು ಇಂಡೋನೇಶಿಯರ ಹಿತರಕ್ಷಣೆಗೆ ಸಹಕಾರಿಯಾಗಿದೆ ಎಂದು ತಿಳಿಯಬಾರದು. ಏಕೆಂದರೆ ೧೯ನೆಯ ಶತಮಾನದುದ್ದಕ್ಕೂ ಇಂಡೋನೇಶಿಯಾ ಅವಶ್ಯಕವಾದ ಡಚ್ ವಸಾಹತು ಆಗಿ ಕಾರ್ಯ ನಿರ್ವಹಿಸಿ ಜಾಗತಿಕ ಬಂಡವಾಳಶಾಹಿಗೆ ಅವಲಂಬಿತವಾಗಿತ್ತು. ಇಂಡೋನೆಯಶಿಯಾದ ವಿದೇಶಿ ವ್ಯಾಪಾರ ಸಹಜವಾಗಿರದೆ ಅಥವಾ ಯಥಾಕ್ರಮದ್ದಾಗಿರದೆ, ಒಂದು ರೀತಿಯಲ್ಲಿ ಕೃತಕವಾಗಿ ಸೃಷ್ಟಿಯಾಗಿ ಸಾಮ್ರಾಜ್ಯಶಾಹಿ ವಾದವನ್ನು ರಕ್ಷಿಸಲು ಮಾಧ್ಯಮವಾಗಿತ್ತು. ಅದರ ವಿದೇಶಿ ವ್ಯಾಪಾರದ ರಚನೆ ಮತ್ತು ಸ್ವಭಾವ ಅಸಮತೋಲನವಾಗಿತ್ತು. ೧೯ನೆಯ ಶತಮಾನದ ಎರಡನೆಯ ಭಾಗದಲ್ಲಿ ಡಚ್ಚರು ಆಮದು ಮಾಡಿಕೊಂಡ ಸಿದ್ಧವಸ್ತುಗಳಿಂದ ತುಂಬಿ ತುಳಿಕುತ್ತಿದ್ದು, ಇಂಡೋನೇಶಿಯಾದ ಒತ್ತಾಯದಿಂದ, ಕೇವಲ ಕಚ್ಚಾವಸ್ತುಗಳು, ವಾಣಿಜ್ಯ ಬೆಳೆಗಳು ಮತ್ತು ಆಹಾರ ಉತ್ಪನ್ನಗಳನ್ನು ಅಭಿವೃದ್ದಿಪಡಿಸಿ ರಫ್ತು ಮಾಡ ಬೇಕಾಯಿತು. ಆಂತರಿಕ ಸರಬರಾಜಿನ ವ್ಯವಸ್ಥೆ ಮತ್ತು ಆದಾಯವು ಅಸಮತೋಲನದಿಂದ ಕ್ಷೀಣಿಸಲ್ಪಟ್ಟಿತು. ಹಳ್ಳಿಯ ರೈತರು ಮತ್ತು ಕಾರ್ಮಿಕರಿಂದ ಉತ್ಪಾದನೆಗೊಳ್ಳುವ ಉತ್ಪನ್ನ ಗಳನ್ನು ವಿದೇಶಿ ವ್ಯಾಪಾರಸ್ಥರು, ವರ್ತಕರು ಮತ್ತು ಬಂಡವಾಳಶಾಹಿಗಳಿಗೆ ಸುಲಭವಾಗಿ ತಲುಪಿಸುವ ಡಚ್ ವ್ಯವಸ್ಥೆಗೆ ಮಾತ್ರ ಸ್ಪಂದಿಸುತ್ತಿದ್ದರು.

ಇಂಡೋನೇಶಿಯಾದ ವಿದೇಶಿ ವ್ಯಾಪಾರದಲ್ಲಿ ಕಂಡುಬರುವ ಮುಖ್ಯ ಲಕ್ಷಣ ಎಂದರೆ, ಸಿದ್ಧವಸ್ತುಗಳ ಆಮದಿನ ಪ್ರಮಾಣಕ್ಕಿಂತಲೂ ಇಂಡೋನೇಶಿಯಾದಿಂದ ಕಚ್ಚಾ ಮತ್ತು ಆಹಾರ ವಸ್ತುಗಳ ರಫ್ತು ಜಸ್ತಿ ಪ್ರಮಾಣದಲ್ಲಿತ್ತು. ಇದು ಇಂಡೋನೆಯಶಿಯಾಕ್ಕೆ ಫಲಪ್ರದವಾಗಿರಲಿಲ್ಲ ಮತ್ತು ಭವಿಷ್ಯದಲ್ಲಿ ಅಭಿವೃದ್ದಿಯ ಹಾದಿ ಹಿಡಿಯುವ ಲಕ್ಷಣವಾಗಿರಲಿಲ್ಲ. ಬದಲಾಗಿ ಇಂಡೋನೇಶಿಯಾದಿಂದ ಡಚ್ಚರು ಮಾಡಿದ ಸಂಪನ್ಮೂಲ ಗಳ ಲೂಟಿ ಮತ್ತು ದರೋಡೆಯಾಗಿತ್ತು. ಇನ್ನೊಂದು ಗಮನಾರ್ಹ ವಿಷಯ ಎಂದರೆ ಈ ಶತಮಾನದಲ್ಲಿ ಇಂಡೋನೇಶಿಯಾ ವ್ಯವಹರಿಸಿದ ವಿದೇಶಿ ವ್ಯಾಪಾರದಲ್ಲಿ ಡಚ್ಚರದ್ದೇ ಮೇಲುಗೈ ಆಗಿತ್ತು. ಇದರಿಂದಾಗಿ ಇಂಡೋನೇಶಿಯಾದಲ್ಲಿರುವ ನಗರ ಮತ್ತು ಹಳ್ಳಿ ಗಳಲ್ಲಿ ಕೇಂದ್ರೀಕೃತವಾಗಿರುವ ಗುಡಿ ಕೈಗಾರಿಕೆಗಳು, ಕೈಕಸುಬುಗಾರರು, ನೆಯಕಾರರು ಬಂಡವಾಳದ ಕೊರತೆಯಿಂದಾಗಿ ನಶಿಸತೊಡಗಿದವು. ಇಂಡೋನೇಶಿಯಾ ಮುಖ್ಯವಾಗಿ ಏಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳ ಮಾರುಕಟ್ಟೆಯ ಲಾಭ ಪಡೆಯುವ ಅವಕಾಶವನ್ನು ಡಚ್ ಸಾಮ್ರಾಜ್ಯಶಾಹಿಗಳು ತಪ್ಪಿಸಿದಲ್ಲದೆ, ಇಲ್ಲಿನ ರೈತರು ಬಡತನದ ರೇಖೆಯ ಕೆಳಗೆ ಬದುಕಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿದರು. ಮಾರುಕಟ್ಟೆಗಳನ್ನು ಡಚ್ಚರಿಗಾಗಿ ಮೀಸಲಿಡಲಾಯಿತು. ಸ್ಥಳೀಯ ಗುಡಿಕೈಗಾರಿಕೆಗಳು ಮೂಲೆ ಪಾಲಾಗಿ ಮಿಲಿಯಗಟ್ಟಲೆ ಜನ ಉದ್ಯೋಗಕ್ಕೋಸ್ಕರ ಕೃಷಿ ರಂಗಕ್ಕೆ ಧುಮುಕಿದರು. ಆದ್ದರಿಂದ ಈ ರಂಗದಲ್ಲಿ ಜನಸಂಖ್ಯಾ ಒತ್ತಡ ಅನಿವಾರ್ಯವಾಯಿತು.

ಡಚ್ ಆಳ್ವಿಕೆ, ಆಧುನಿಕ ಬಂಡವಾಳಶಾಹಿ ಕೈಗಾರೀಕರಣಕ್ಕೆ ಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ, ಇಡೀ ಇಂಡೋನೇಶಿಯಾದಲ್ಲಿ ಸುಸಜ್ಜಿತ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿ ದೇಶದ ಉದ್ದಗಲಕ್ಕೂ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿತು. ಇಲ್ಲಿನ ಕೃಷಿ ಉತ್ಪನ್ನಗಳ ಉತ್ಪಾದನಾ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆ ತಂದರೂ ಸಹ ಅದು, ಇಲ್ಲಿಯ ಕೃಷಿ ವಸ್ತುಗಳಿಗೆ ಉತ್ಪಾದನಾ ಮಟ್ಟವನ್ನು ಹೆಚ್ಚಿಸಿ, ದೇಶೀಯ ಜನರ ಕ್ಷೇಮ ಮತ್ತು ಅಭಿವೃದ್ದಿಯ ದೃಷ್ಟಿಯಿಂದಲ್ಲ. ಬದಲಾಗಿ ಡಚ್ ವ್ಯಾಪಾರಿಗಳ ಸ್ವಾರ್ಥ ಬೇಡಿಕೆ ಗಳನ್ನು ಈಡೇರಿಸುವ ಸಲುವಾಗಿ. ಭೂಕಂದಾಯ ಮತ್ತು ಹೆಚ್ಚುವರಿ ಕೃಷಿ ಉತ್ಪನಗಳನ್ನು ಸಂಗ್ರಹಿಸಿ ಐರೋಪ್ಯ ಮಾರುಕಟ್ಟೆಗೆ ರಫ್ತು ಮಾಡಿ ಇಂಡೋನೇಶಿಯಾವನ್ನು ಬರಿದು ಮಾಡಿದರು. ಹಳೆಯ ಸಂಬಂಧಗಳು ಮತ್ತು ಸಂಸ್ಥೆಗಳನ್ನು ಪೂರ್ತಿಯಾಗಿ ನಿರ್ಮೂಲನ ಮಾಡಿ ಹೊಸತನ್ನು ಸ್ಥಾಪಿಸಿದರು. ಆದರೆ ಈ ಲಕ್ಷಣಗಳು ಮತ್ತು ಬದಲಾವಣೆಗಳು ಇಂಡೋನೇಶಿಯಾದ ಆಧುನೀಕರಣದ ಹಾದಿಯಲ್ಲಿ ಸಾಗಲಿಲ್ಲ ಮತ್ತು ಕೃಷಿರಂಗ ಹಾಗೂ ಅಭಿವೃದ್ದಿಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಡಚ್ಚರ ಕೃಷಿ ಧೋರಣೆಗಳನ್ನು ಗಮನಿಸಿದರೆ, ಡಚ್ ಅಧಿಕಾರಿ ವರ್ಗವು ಇಲ್ಲಿ ಕೇವಲ ವಾಣಿಜ್ಯ ಬೆಳೆಗೆ ಮಹತ್ವ ಕೊಡುತ್ತಿತ್ತು ಮತ್ತು ಫಲವತ್ತಾದ ಭೂಮಿಯಲ್ಲಿ ಅವರ ವ್ಯಾಪಾರಕ್ಕಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಸಲು ರೈತರನ್ನು ಒತ್ತಾಯಿಸುತ್ತಿದ್ದರು. ಇದರಿಂದ ದೇಶೀಯ ಜನರ ಮುಖ್ಯ ಆಹಾರವಾದ ಭತ್ತದ ಬೆಳೆಗೆ ಅವಕಾಶ ವಿರಳವಾಯಿತು. ಜೊತೆಗೆ ಇಲ್ಲಿನ ಭೌಗೋಳಿಕ ವಿಸ್ತಾರ ಮತ್ತು ಜನಸಂಖ್ಯೆಗೆ ಹೋಲಿಸಿದರೆ ಕೈಗಾರಿಕೆಗಳ ಕೇಂದ್ರಗಳು ೧೯ನೆಯ ಶತಮಾನದ ಕೊನೆಯವರೆಗೂ ಬಹಳ ಕಡಿಮೆಯಿತ್ತು. ಈ ಬೆಳವಣಿಗೆ ಕೇವಲ ಸಕ್ಕರೆ ಕಾರ್ಖಾನೆ, ತೈಲ ಶುದ್ದೀಕರಣ ಕೇಂದ್ರ ಮತ್ತು ಗಣಿಗಾರಿಕೆಗಳಿಗೆ ಮಾತ್ರ ಸೀಮಿತವಾಗಿತ್ತು.

ಅಸಮತೋಲನ, ಅನಭಿವೃದ್ದಿ, ಆಧುನೀಕರಣದಲ್ಲಿ ಏರಿಳಿತ ಮತ್ತು ಅಸಮರ್ಪಕವಾಗಿ ಆರ್ಥಿಕ ಸಂಪನ್ಮೂಲಗಳ ಹಂಚುವಿಕೆಯು ಸಾಮಾನ್ಯವಾಗಿ ವಸಾಹತುಶಾಹಿ ಯುಗದಲ್ಲಿ ದಕ್ಷಿಣ ಪೂರ್ವ ಏಷ್ಯಾದ ಇಂಡೋನೇಶಿಯಾಕ್ಕೆ ಮಾತ್ರ ಸೀಮಿತವಾಗಿರದೆ, ಇದರ ಪರಿಣಾಮಗಳನ್ನು ಫಿಲಿಫೈನ್ಸ್, ಇಂಡೋಚೈನಾ, ಮಲೇಶಿಯಾ ಮತ್ತು ಬರ್ಮಾದಂತಹ ಐರೋಪ್ಯ ರಾಷ್ಟ್ರಗಳ ವಸಾಹತುಗಳಲ್ಲೂ ಕಾಣಬಹುದು. ವಸಾಹತುಶಾಹಿ ಆಡಳಿತ ಮತ್ತು ಧೋರಣೆಗಳು ಇಲ್ಲಿಯೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿಯೂ ಸಾಂಸ್ಥಿಕ ನೆಲೆಗಳಲ್ಲಿ ಪುನರ್‌ನಿರ್ಮಿಸಲು ಪೋತ್ಸಾಹ ನೀಡಿವೆ. ಐರೋಪ್ಯ ರಾಷ್ಟ್ರಗಳ ಗುರಿಗಳನ್ನು ಬೇರೆ ಬೇರೆ ಮಾರ್ಗಗಳಲ್ಲಿ ಈಡೇರಿಸಿಕೊಂಡರೂ ಕೂಡ ಇಲ್ಲಿನ ದೇಶೀಯ ವ್ಯವಸ್ಥೆಗಳನ್ನು ಆಧುನೀಕರಿಸುವುದರ ಜೊತೆಗೆ ಹೊಸ ಸಮಾಜವನ್ನು ಸೃಷ್ಟಿಸಲು ಹಲವು ಬಗೆಯ ಪ್ರಯತ್ನಗಳು ನಡೆದಿವೆ. ಅಂದ ಮಾತ್ರಕ್ಕೆ ವಸಾಹತುಶಾಹಿ ಯುಗದಲ್ಲಿ ಬಂಡವಾಳಶಾಹಿ ರಾಷ್ಟ್ರಗಳು ಮತ್ತು ದಕ್ಷಿಣಪೂರ್ವ ರಾಷ್ಟ್ರಗಳು ಒಂದೇ ಮಟ್ಟದ ಬೆಳವಣಿಗೆಯನ್ನು ಕಂಡುಕೊಂಡಿದೆಯೆಂದಲ್ಲ. ಬದಲಾಗಿ ವಸಾಹತುಶಾಹಿ ಆಡಳಿತದ ಪ್ರಭಾವದಿಂದ ದಕ್ಷಿಣ ಪೂರ್ವ ಏಷ್ಯಾ ಕೇವಲ ವಾಣಿಜ್ಯರಂಗದಲ್ಲಿ ಮಾತ್ರ ರೂಪಾಂತರ ಗೊಂಡಿತೆ ವಿನಃ ನಿಜವಾದ ಕೈಗಾರಿಕಾ ಕ್ರಾಂತಿ ಇಲ್ಲಿ ಆಗಲಿಲ್ಲ. ಅಲ್ಲದೆ ಈ ಬದಲಾವಣೆ ಸ್ವತಂತ್ರವಾದ ಬಂಡವಾಳಶಾಹಿ ಕೈಗಾರಿಕೆಗಳನ್ನು ಸ್ಥಾಪಿಸಲು ಬದಲು ಅವಲಂಬನಾ ಅನಭಿವೃದ್ದಿ ವಸಾಹತುಗಳಾಗಿ ದಕ್ಷಿಣಪೂರ್ವ ಏಷ್ಯಾ ದೇಶಗಳು ಬೆಳೆದವು. ಕೈಗಾರಿಕೆಯ ಹಂಚುವಿಕೆಯಲ್ಲಿ ಅಸಮತೋಲನವಿದ್ದು ಕೆಲವೇ ನಗರಗಳಿಗೆ ಸೀಮಿತವಾಗಿದ್ದವು. ನೀರಾವರಿ ಯೋಜನೆ ಮತ್ತು ವಿದ್ಯುಚ್ಛಕ್ತಿ ಸರಬರಾಜಿನಲ್ಲಿ ಸಹ ಅಸಮತೋಲನ ನೀತಿಯನ್ನು ಈ ೨೦೦ ವರ್ಷಗಳಲ್ಲಿ ಪಾಲಿಸಲಾಗಿತ್ತು. ಇದರಿಂದಾಗಿ ಪ್ರಾದೇಶಿಕ ನೆಲೆ ಯಲ್ಲಿ ಆದಾಯ ಹಂಚುವಿಕೆ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ಅನಭಿವೃದ್ದಿ ಕಂಡುಬಂದಿತು. ಈ ಕಾರಣಕ್ಕಾಗಿಯೇ ಬಡತನ ಸಾಮಾನ್ಯವಾಗಿ ಎಲ್ಲೆಲ್ಲೂ ಕಂಡುಬರುತ್ತಿತ್ತು. ಲಕ್ಷಗಟ್ಟಲೇ ಜನ ತಿನ್ನಲು ಆಹಾರವಿಲ್ಲದೆ ಉಪಾವಾಸದಿಂದ ಸತ್ತರು. ಹಾಗಾಗಿ ೧೯ನೆಯ ಶತಮಾನದಲ್ಲಿ ಸೃಷ್ಟಿಯಾದ ಬಡತನ, ಕ್ಷಾಮ, ಬರಗಾಲ ಹಾಗೂ ಇನ್ನಿತರ ಸಮಸ್ಯೆಗಳಿಗೆ ವಸಾಹತುಶಾಹಿಯೇ ಮೂಲ ಕಾರಣವಾಯಿತು.

ಹೊಸ ಚಿಂತನೆಗಳು

ಇಷ್ಟೆಲ್ಲ ಅಸಮತೋಲನವಿದ್ದರೂ ಕೂಡ ೧೯ನೆಯ ಶತಮಾನದಿಂದ ಬೆಳೆದ ಸಂಬಂಧ ದಿಂದ ಇಂಡೋನೇಶಿಯ, ಫಿಲಿಫೈನ್ಸ್, ಇಂಡೋ-ಚೈನಾ, ಮಲೇಶಿಯಾ ಹಾಗೂ ಬರ್ಮದಲ್ಲಿರುವ ಜನರಿಗೆ ಪಾಶ್ಚಾತ್ಯ ದೇಶಗಳೊಂದಿಗೆ ವ್ಯವಹರಿಸುವ ಅವಕಾಶ ಲಭಿಸಿತು. ಪಶ್ಚಿಮ ಯುರೋಪ್‌ನಲ್ಲಿ ಅಭಿವೃದ್ದಿ ಹೊಂದಿದ ಹೊಸ ಚಿಂತನೆಗಳು ಮೊದಲ ಬಾರಿಗೆ ದಕ್ಷಿಣ ಪೂರ್ವ ಏಷ್ಯಾವನ್ನು ಪ್ರವೇಶ ಮಾಡಿದವು. ಆದರೆ ಐರೋಪ್ಯ ರಾಷ್ಟ್ರಗಳು ಇಲ್ಲಿಗೆ ಬಾರದೆ ಇದ್ದರೆ ಈ ಚಿಂತನೆಗಳು ಲಭಿಸುವುದಿಲ್ಲವೆಂದಲ್ಲ. ಬದಲಾವಣೆಯ ಸೋಂಕು ಈ ಎಲ್ಲ ಪ್ರದೇಶಗಳಿಗೆ ಬೀಸಿಯೇ ಬೀಸುತ್ತಿತ್ತು. ಏಕೆಂದರೆ ಪ್ರಾಚೀನ ಕಾಲದಿಂದಲೂ ವಿದೇಶಿಯರಿಗೆ ಇಲ್ಲಿಯ ರಾಷ್ಟ್ರಗಳು ತಮ್ಮ ಬಾಗಿಲನ್ನು ಮುಚ್ಚಿರಲಿಲ್ಲ. ಶತಮಾನಗಳಿಂದಲೂ ವ್ಯಾಪಾರ ಮತ್ತು ಪ್ರವಾಸದ ಮೂಲಕ ಏಷ್ಯಾದೊಂದಿಗೆ, ಐರೋಪ್ಯ ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ಬೆಳೆಸಿಕೊಂಡಿತ್ತು. ಬೇರೆ ಬೇರೆ ಮಾಧ್ಯಮಗಳಿಂದ ಆಗಾಗ ಆದ ಬದಲಾವಣೆಗಳು, ಹೊಸ ಚಿಂತನೆಗಳು, ಸಿದ್ಧಾಂತಗಳು ೧೯ನೆಯ ಶತಮಾನದ ಮೊದಲೂ ತಲುಪುತ್ತಿದ್ದವು. ಹಾಗಾಗಿ ೧೯ನೆಯ ಶತಮಾನದ ಕೊನೆಯಲ್ಲಿ ಇಲ್ಲಿ ಕ್ರಾಂತಿಕಾರಿ ಚಿಂತನೆಗಳಾದ ಪ್ರಜಪ್ರಭುತ್ವ, ಶ್ರೇಷ್ಠಾಧಿಕಾರಿ, ತೀವ್ರಗಾಮಿತ್ವ ಮತ್ತು ಮಾನವತಾವಾದಗಳು ಜನರಲ್ಲಿ ಪ್ರಚಾರವಾದವು. ಈ ಹೊಸ ಚಿಂತನೆಗಳಿಂದ ಸ್ಥಳೀಯ ವಿದ್ವಾಂಸರಿಗೆ ೨೦ನೆಯ ಶತಮಾನದ ಆರಂಭದಲ್ಲಿ ವಸಾಹತುಶಾಹಿ ಆಳ್ವಿಕೆ ಕಾಲದಲ್ಲಿನ ಆರ್ಥಿಕ ವ್ಯವಸ್ಥೆ, ಸರಕಾರದ ದ್ವಂದ್ವ, ಧೋರಣೆಗಳ ಫಲಿತಾಂಶ, ಸರಕಾದ ವೈಫಲ್ಯ ಮತ್ತು ಸಾಮ್ರಾಜ್ಯಶಾಹಿಯ ಸ್ವರೂಪವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಲು ಸಾಧ್ಯವಾಯಿತು.

ಹೊಸ ಚಿಂತನೆಗಳು ಬೇರೆ ಬೇರೆ ಮಾಧ್ಯಮಗಳಿಂದ ಪ್ರಚಾರಿಸಲ್ಪಟ್ಟವು. ರಾಜಕೀಯ ಪಕ್ಷ, ದೈನಿಕವಾಣಿ, ಕರಪತ್ರಗಳು ಮತ್ತು ಸಾರ್ವಜನಿಕ ವೇದಿಕೆಗಳಿಂದ ಬುದ್ದಿಜೀವಿಗಳು ಮತ್ತು ಚಿಂತನಕಾರರು ಸಾಮಾನ್ಯ ಜನರಿಗೆ ಮನವರಿಕೆ ಮಾಡಿದರು. ವಸಾಹತುಶಾಹಿ ಸರಕಾರ, ಮಿಶನರಿಗಳು ಮತ್ತು ಖಾಸಗಿ ಸಂಸ್ಥೆಗಳಿಂದಲೂ ಪ್ರಸಾರಿಸಲ್ಪಟ್ಟು ದೇಶೀಯರ ಚಿಂತನಾಶಕ್ತಿಯನ್ನು ವೃದ್ದಿಸಲು ಪ್ರಮುಖ ಪಾತ್ರ ವಹಿಸಿತು. ಹೊಸ ಶಿಕ್ಷಣದಿಂದ ಪ್ರಯೋಜನವನ್ನು ಪಡೆದ ಬುದ್ದಿಜೀವಿಗಳು, ಚಿಂತಕರು ಐರೋಪ್ಯ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಆಡಳಿತದ ಪರಿಣಾಮಗಳನ್ನು, ಅವರು ದೋಚಿದ ಸಂಪನ್ಮೂಲಗಳಿಂದ ದೇಶೀಯ ಆರ್ಥಿಕ ವ್ಯವಸ್ಥೆಯ ಮೇಲೆ ಆದ ಪ್ರಭಾವವನ್ನು ವಿಶ್ಲೇಷಿಸಿ ದೇಶದಾದ್ಯಂತ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಯನ್ನು ಮತ್ತು ರಾಜಕೀಯ ಚಟುವಟಿಕೆಗಳನ್ನು ಪ್ರೋ ಜೊತೆಗೆ ಹೊಸ ಶಿಕ್ಷಣ ನೀತಿಯಿಂದ ಬೇರೆ ಬೇರೆ ಚಿಂತನೆಗಳು ಪ್ರಚಾರಗೊಂಡು ದಕ್ಷಿಣಪೂರ್ವ ಏಷ್ಯಾದವರಲ್ಲಿ ರಾಷ್ಟ್ರೀಯವಾದದ ಉಗಮಕ್ಕೆ ಕಾರಣವಾಯಿತು. ಜೊತೆಗೆ ಆಧುನಿಕ ಶಿಕ್ಷಣದಿಂದ ಅದೆಷ್ಟೋ ಸಾಹಿತ್ಯಗಳು, ಪುಸ್ತಕಗಳು, ವೈಜ್ಞಾನಿಕ, ಸಾಮಾಜಿಕ ಮತ್ತು ಮಾನವಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು ಸುಲಭವಾಗಿ ಸಾಮಾನ್ಯ ಜನರಿಗೆ ಲಭಿಸಿ ಅವರ ಚಿಂತನಾಶಕ್ತಿಯನ್ನು ಮತ್ತಷ್ಟು ಪ್ರಬಲಗೊಳಿಸಿತು. ಇಲ್ಲವಾದರೆ ಶಿಕ್ಷಣದ ರೂಪ, ರಚನೆ, ಧ್ಯೇಯ, ಉದ್ದೇಶಗಳು, ಮಾಧ್ಯಮಗಳು ಮತ್ತು ವಿಷಯಾನುಕ್ರಮಗಳು ವಸಾಹತುಶಾಹಿಯ ಒಳ ಮತ್ತು ಹೊರ ನೀತಿಯನ್ನೇ ರಕ್ಷಿಸಲು ಸಾಧನವಾಗುತ್ತಿತ್ತು.

ಶಿಕ್ಷಣದ ಸಂಪರ್ಕದಿಂದ ಕ್ರಾಂತಿಕಾರಿ ಚಿಂತನೆಗಳು ಇಲ್ಲಿನ ಆರ್ಥಿಕ ಮತ್ತು ರಾಜಕೀಯ ಜೀವನದಲ್ಲಿ ಹೊಸ ಪರಿಸರವನ್ನು ಸೃಷ್ಟಿಸಿತು. ಸಾಮಾಜಿಕ ರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ೧೯ನೆಯ ಶತಮಾನದ ಪೂರ್ವಾರ್ಧದಲ್ಲಿ ಈ ಪ್ರಭಾವ ನಗರಗಳಿಗೆ ಸೀಮಿತವಾದರೂ, ಕ್ರಮೇಣ ಹಳ್ಳಿಗಳಿಗೂ ತಲುಪಿ ಹಳ್ಳಿ ಮತ್ತು ಪಟ್ಟಣದ ನಡುವೆ ಇರುವ ಭಿನ್ನಾಭಿಪ್ರಾಯವನ್ನು ನಾಶಮಾಡಿತು. ಆಧುನಿಕ ಕೈಗಾರಿಕೆಗಳು, ರಸ್ತೆ ಸಾರಿಗೆ ಸಂಸ್ಥೆಗಳು, ನಗರೀಕರಣದ ಅಭಿವೃದ್ದಿ, ಕಾರ್ಖಾನೆಗಳಲ್ಲಿ, ಆಫೀಸುಗಳಲ್ಲಿ, ಆಸ್ಪತ್ರೆಗಳಲ್ಲಿ ಹಾಗೂ ಶಾಲೆಗಳಲ್ಲಿ ಸ್ಥಳೀಯ ವಿದ್ಯಾವಂತರಿಗೆ ಉದ್ಯೋಗವನ್ನು ಕಲ್ಪಿ ಸಿರುವುದರಿಂದ ಸಾಮಾಜಿಕ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಹಳೆಯ ಭೂ ಮತ್ತು ಪ್ರಾಂತೀಯ ಸಂಬಂಧಗಳು ಸಡಿಲುಗೊಂಡು ದೇಶದಾದ್ಯಂತ ಪೆಡಂಭೂತವಾಗಿದ್ದ ಕಟ್ಟಾಚಾರಗಳು, ಸಂಪ್ರದಾಯಗಳು ನಾಶವಾದವು. ಬಂಡವಾಳಶಾಹಿಯ ಪ್ರವೇಶದಿಂದ ಜನರು ಶ್ರೀಮಂತಿಕೆಗೆ ಹೆಚ್ಚು ಬೆಲೆಕೊಟ್ಟು ತಮ್ಮ ಅಂತಸ್ತನ್ನು ಅಳೆಯತೊಡಗಿದರು.

ವಸಾಹತುಶಾಹಿ ಆಡಳಿತದಿಂದಾಗಿ ದಕ್ಷಿಣಪೂರ್ವ ಏಷ್ಯಾದ ಪ್ರತಿಯೊಂದು ದೇಶವನ್ನು ಒಂದುಗೂಡಿಸಿ ಎಲ್ಲ ವರ್ಗದವರೂ, ಪ್ರಾಂತ್ಯಗಳೂ ಒಂದೇ ಆಧಿಪತ್ಯಕ್ಕೆ ಒಳಗಾಯಿತು. ಹೊಸ ಸೌಕರ್ಯಗಳಾದ ರಸ್ತೆ ಸಾರಿಗೆ ಸಂಪರ್ಕದಿಂದಾಗಿ ದೇಶಗಳ ಉದ್ದಗಲಕ್ಕೂ ಸಂಪರ್ಕ ಕಲ್ಪಿಸಿದ್ದರಿಂದ ಒಗ್ಗಟ್ಟು ಬೆಳೆಸಿತು. ಪ್ರಾದೇಶಿಕ ಆರ್ಥಿಕ ಪದ್ಧತಿ, ಆಂತರಿಕ ವ್ಯಾಪಾರದ ಬೆಳವಣಿಗೆಗಳು ಒಂದೇ ಆರ್ಥಿಕ ಪದ್ಧತಿಯಡಿಯಲ್ಲಿ ಸ್ಥಾಪನೆಯಾಯಿತು. ಆಧುನಿಕ ಕೈಗಾರಿಕೆಗಳು ಬೆಳೆದು ಸಂಪನ್ಮೂಲಗಳನ್ನು ವ್ಯಯಿಸುವುದಲ್ಲದೆ ಸಿದ್ಧವಸ್ತುಗಳ ಮಾರಾಟಕ್ಕೆ ಮತ್ತು ವಾಣಿಜ್ಯ ಬೆಳೆಗಳ ರಫ್ತಿಗೆ ಪಟ್ಟಣಗಳ, ನಗರಗಳ ಬೆಳವಣಿಗೆಯಾದವು. ಪ್ರಾದೇಶಿಕ ಮಟ್ಟದಲ್ಲಿ ಕಾರ್ಮಿಕ ವರ್ಗಗಳು ಸಂಘಟಿಸಲ್ಪಟ್ಟವು. ಹೊಸ ಶಿಕ್ಷಣ ನೀತಿಯಿಂದ, ಹೊಸ ಹೊಸ ಚಿಂತನೆಗಳ ಗ್ರಹಣಶಕ್ತಿಯು ರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಚಳುವಳಿಗೆ ಪ್ರೋ ನೀಡಿ, ಒಂದೇ ಭಾಷೆ, ಸಂಸ್ಕೃತಿ, ದೇಶ, ಜನಾಂಗ, ಧರ್ಮ ಎಂಬ ಕ್ರಾಂತಿಕಾರಿ ಹಾಗೂ ಚಿಂತನಾತ್ಮಕ ನಿಲುವುಗಳು ಪ್ರತಿಯೊಂದು ದಕ್ಷಿಣಪೂರ್ವ ಏಷ್ಯಾ ದೇಶಗಳಲ್ಲಿ ೧೯ನೆಯ ಶತಮಾನದ ಕೊನೆಯಲ್ಲಿ ಮೂಡಿಬಂದವು. ಈ ಚಿಂತನೆ ಕ್ರಮೇಣ ವಸಾಹತುಶಾಹಿ ವಿರೋಧಿಶಕ್ತಿಯನ್ನು ವೃದ್ದಿಸಿ ವಸಾಹತುಶಾಹಿಯ ನಿರ್ಮೂಲನಕ್ಕೆ ದೇಶದಾದ್ಯಂತ ಹೋರಾಟಕ್ಕೆ ಚಾಲನೆ ಕೊಟ್ಟಿತು.

೧೯ನೆಯ ಶತಮಾನ ಕೊನೆಯ ದಶಕ ೨೦ನೆಯ ಶತಮಾನದ ಆರಂಭದಿಂದ ಉಗಮವಾದ ಈ ರಾಷ್ಟ್ರೀಯ ಚಳುವಳಿಯ ನಾಯಕತ್ವವನ್ನು ಉತ್ತಮ ಹಾಗೂ ಸಮರ್ಪಕವಾಗಿ ನಿಭಾಯಿಸಿದವರು ಆಧುನಿಕ ಯುಗದ ವಿದ್ಯಾವಂತ ವರ್ಗದವರು. ಇವರು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ದೇಶಪ್ರೇಮ, ರಾಷ್ಟ್ರೀಯವಾದ ಮತ್ತು ರಾಷ್ಟ್ರೀಯ ಮನೋಭಾವನೆಯ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಿದರು. ಆರ್ಥಿಕ ರಂಗದಲ್ಲಿ ಬೃಹತ್ ಕೈಗಾರಿಕೆಗಳಿಗೆ ಮಹತ್ವಕೊಟ್ಟು ಸಂಪತ್ತನ್ನು ವೃದ್ದಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ವಸಾಹತುಶಾಹಿ ರಾಷ್ಟ್ರಗಳು ಅಭಿವೃದ್ದಿಯಲ್ಲಿ ಮುಂದುವರಿದಿದ್ದುದರಿಂದ ದಕ್ಷಿಣಪೂರ್ಣ ಏಷ್ಯಾದವರಿಗೆ ಆಧುನಿಕ ವೈಜ್ಞಾನಿಕ ಹಾಗೂ ತಾಂತ್ರಿಕ ಶಿಕ್ಷಣ ಕಲ್ಪಿಸಿ ಕೈಗಾರಿಕಾ ಕ್ರಾಂತಿಗೆ ಪ್ರಯತ್ನ ಮಾಡಲು ಒತ್ತಾಯ ತಂದರು. ರಾಜಕೀಯ ನೆಲೆಯಲ್ಲಿ ಆಧುನಿಕ ಚಿಂತನೆ ಮತ್ತು ಆಲೋಚನಾಶಕ್ತಿಗೆ ಮಾರುಹೋಗಿ ಸ್ವಾವಲಂಬನೆ, ಪ್ರಜಪ್ರಭುತ್ವ ಸರಕಾರದ ರಚನೆಗೆ ಕರೆಕೊಟ್ಟರು. ಸ್ವಾತಂತ್ರ್ಯ, ಸಮಾನತೆ ಮತ್ತು ಏಕಾಗ್ರತೆಗೆ ಒತ್ತು ಕೊಟ್ಟ ಇವರು ವಸಾಹತುಶಾಹಿ ರಾಷ್ಟ್ರಗಳ ಅಧಿಕಾರಿಗಳ ದಬ್ಬಾಳಿಕೆಯನ್ನು ಟೀಕಿಸುವ ಸ್ವಾತಂತ್ರ್ಯವನ್ನು ಪಡೆಯಲು, ಜನಸಾಮಾನ್ಯರಿಗೆ ಚಳುವಳಿಯು ಅನಿವಾರ್ಯವೆಂದು ಕರೆ ಕೊಟ್ಟರು. ಹೊಸ ಚಿಂತನೆ ಮತ್ತು ತತ್ವಗಳನ್ನು ಪಾಲಿಸುವ ಈ ವಿದ್ಯಾವಂತರು ತಮ್ಮ ತಮ್ಮ ದೇಶಗಳಲ್ಲಿ ಸಾಮ್ರಾಜ್ಯಶಾಹಿ ಆಡಳಿತವನ್ನು ಕೊನೆಗೊಳಿಸಿ ಒಂದೇ ರಾಷ್ಟ್ರ, ಒಂದೇ ಸಂಸ್ಕೃತಿ, ಒಂದೇ ಭಾಷೆಯ ನಿರ್ಮಾಣಕ್ಕೆ ಜನರಿಗೆ ಕರೆ ಕೊಟ್ಟರು. ಹೊಸ ಕಲೆ, ಸಾಹಿತ್ಯ ಮತ್ತು ಪುಸ್ತಕಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ಕ್ರಾಂತಿಕಾರಿ ಚಿಂತನೆಗಳನ್ನು, ತತ್ವಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡಿದರು. ಇಂಗ್ಲಿಷನ್ನು ಶಿಕ್ಷಣದ ಮಾಧ್ಯಮವಾಗಿ ಬಳಸುತ್ತಾ ಪ್ರಾದೇಶಿಕ ಭಾಷೆಯ ಬೆಳವಣಿಗೆಗೆ ಶ್ರಮಿಸಿ ಸಾಮಾಜಿಕ ನ್ಯಾಯ ಹಾಗೂ ಮಾನವತಾವಾದಕ್ಕೆ ಮಹತ್ವ ಕೊಟ್ಟರು. ಹೀಗೆ ಆಧುನಿಕ ದಕ್ಷಿಣಪೂರ್ವ ಏಷ್ಯಾದ ವಿದ್ಯಾವಂತ ಬುದ್ದಿಜೀವಿಗಳು, ಚಿಂತನಕಾರರು ಸಮಾಜದ ರೂಪಾಂತರಕ್ಕೆ ಶ್ರಮಿಸಿ ಸಾಮ್ರಾಜ್ಯಶಾಹಿ ಆಳ್ವಿಕೆಯಿಂದ ಸ್ವತಂತ್ರರಾಗಲು ಕರೆ ನೀಡಿದರು. ಆದರೆ ಅವರ ಆಶೋತ್ತರಗಳು, ಸಿದ್ಧಾಂತಗಳು ೧೯ನೆಯ ಶತಮಾನದ ಅಂತ್ಯದವರೆಗೂ ಪರಿಣಾಮಕಾರಿ ಫಲಿತಾಂಶವನ್ನು ದೊರಕಿಸಲು ವಿಫಲವಾಯಿತು.

ಈ ಹಿನ್ನೆಲೆಯಲ್ಲಿ ಐರೋಪ್ಯ ಆಳ್ವಿಕೆಯ ಲೋಪದೋಷಗಳನ್ನು ಚರ್ಚಿಸಿದಾಗ ಬಂಡವಾಳಶಾಹಿ ರಾಷ್ಟ್ರಗಳು ಇಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ರಾಂತಿಗೆ ಅಡಿಪಾಯವನ್ನು ಹಾಕಲು ವಿಫಲರಾಗಿದ್ದವು. ೧೮೦೦-೧೮೦೧ರ ನಡುವೆ ಉದ್ಭವಿಸಿದ ಬರಗಾಲ, ಕ್ಷಾಮ ಮತ್ತು ಇನ್ನಿತರ ಸಮಸ್ಯೆಗಳು ತಲೆದೋರಿದಾಗ ತಡೆಗಟ್ಟುವ ಕ್ರಮಗಳನ್ನು ಸರಕಾರಗಳು ತೆಗೆದುಕೊಳ್ಳಲಿಲ್ಲ. ಹಾಗಾಗಿ ಇಲ್ಲಿನ ಅಭಿವೃದ್ದಿಗೆ ಅಡಚಣೆ ಉಂಟಾಯಿತು. ಇದನ್ನು ಗಮನಿಸಿ ವಿದ್ಯಾವಂತ ಬುದ್ದಿಜೀವಿಗಳು ಇಲ್ಲಿನ ಬಡತನ, ಉದ್ಯೋಗ ಸಮಸ್ಯೆ ಮತ್ತು ಅನಭಿವೃದ್ದಿಗೆ ಕಾರಣವಾದ ಎಲ್ಲ ಸಾಮ್ರಾಜ್ಯಶಾಹಿ ರಾಷ್ಟ್ರಗಳನ್ನು ಕಟುವಾಗಿ ಟೀಕಿಸಿ, ಇಲ್ಲಿಯವರೆಗೆ ಈ ದಬ್ಬಾಳಿಕೆ, ಶೋಷಣೆ ಮತ್ತು ಏಕಸ್ವಾಮಿತ್ವ ಮುಂದುವರಿಯುತ್ತದೋ ಅಲ್ಲಿಯವರೆಗೆ ದಕ್ಷಿಣಪೂರ್ವ ಏಷ್ಯಾದ ಎಲ್ಲ ರಾಷ್ಟ್ರಗಳು ಅನಭಿವೃದ್ದಿ ಹೊಂದಿದ ರಾಷ್ಟ್ರಗಳಾಗಿ ಉಳಿಯುತ್ತವೆ ಎಂದು ಪ್ರಕಟಿಸಿದರು. ಶತಮಾನದ ಕೊನೆಯಲ್ಲಿ ಡಚ್, ಫ್ರೆಂಚ್, ಬ್ರಿಟಿಷ್ ಮತ್ತು ಅಮೆರಿಕಾದ ಅಧಿಕಾರಿಗಳು ದೇಶೀಯ ಜನರನ್ನು ಸ್ವತಂತ್ರ ಸರಕಾರ ರಚನೆಯಲ್ಲಿ ತರಬೇತಿ ಕೊಡುವುದನ್ನು ಕೈಬಿಟ್ಟು, ಖಾಯಂ ಆಗಿ ಧರ್ಮಿಷ್ಟ ನಿರಂಕುಶ ಪ್ರಭುತ್ವವನ್ನು ಸ್ಥಾಪಿಸುವುದೇ ಅವರ ರಾಜಕೀಯ ಧೋರಣೆ ಎಂದು ತಿಳಿದರು. ಸಾಮ್ರಾಜ್ಯಶಾಹಿಗಳ ಪ್ರಕಾರ ದೇಶೀಯ ಜನರು ಸ್ವತಂತ್ರ ಹಾಗೂ ಸ್ವಾವಲಂಬನೆ ಸರಕಾರ ಅಥವಾ ಪ್ರಜಸತ್ತಾತ್ಮಕ ಸರಕಾರದ ರಚನೆಗೆ ಅರ್ಹರಲ್ಲ. ಈ ಏಕಮುಖ ನೀತಿಗಳು ಬುದ್ದಿಜೀವಿಗಳನ್ನು ಕೆರಳಿಸಿದ್ದಲ್ಲದೆ, ಅವರು ಸಾಮ್ರಾಜ್ಯಶಾಹಿ ಆಳ್ವಿಕೆಯ ಸ್ವರೂಪವನ್ನು ಸರಳವಾಗಿ ವಿಶ್ಲೇಷಿಸತೊಡಗಿದರು. ಈ ತತ್ವಗಳು ಬೆಳೆಯಲು ಸಾಕಷ್ಟು ಸಮಯ ತೆಗೆದುಕೊಂಡರೂ ಸಹ ಶತಮಾನದ ಕೊನೆಯಲ್ಲಿ ಡಚ್ಚರು, ಫ್ರೆಂಚರು, ಬ್ರಿಟಿಷರು ಮತ್ತು ಅಮೆರಿಕದವರ ಆಧುನೀಕರಣ ನೀತಿಗಳು ಪರೋಕ್ಷವಾಗಿ ವಸಾಹತೀಕರಣಕ್ಕೆ ಅವಕಾಶ ಮಾಡಿಕೊಟ್ಟಿತು. ಅದಕ್ಕಾಗಿ ಸಾಮ್ರಾಜ್ಯಶಾಹಿಯನ್ನು ವಿರೋಧಿಸುವುದು ಅನಿವಾರ್ಯವಾಯಿತು. ಇದೊಂದು ಸಂಘಟಿತ ರಾಷ್ಟ್ರೀಯ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಯ ರೂಪ ತಾಳಿತು. ಅಲ್ಲದೆ ಈ ಎಲ್ಲ ದೇಶಗಳು ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಎಲ್ಲ ವರ್ಗಗಳನ್ನು, ಗುಂಪುಗಳನ್ನು ಮತ್ತು ಸಮುದಾಯಗಳನ್ನು ಒಂದುಗೂಡಿಸಿ ಸಂಘರ್ಷಕ್ಕೆ ತೊಡಗಲು ಪ್ರೋ ಈ ಎಲ್ಲ ವರ್ಗಗಳು ತಮ್ಮದೇ ಸಮಸ್ಯೆಗಳನ್ನು ಪ್ರತಿನಿಧಿಸಿ ವಿದೇಶಿ ಬಂಡವಾಳಶಾಹಿತ್ವದ ಆಡಳಿತವನ್ನು ಕೊನೆಗಾಣಿಸುವುದೇ ಗುರಿಯನ್ನಾಗಿಸಿಕೊಂಡಿತು.

 

ಪರಾಮರ್ಶನಗ್ರಂಥಗಳು

೧. ಪ್ರೂವಿನ್ ಜೆ.ಎಂ., ೧೯೮೭. ಸೌತ್ಈಸ್ಟ್ ಏಷ್ಯಾ ಫ್ರಂ ಕೊಲೋನಿಯಲಿಸಂ ಟು ಇಂಡಿಪೆಂಡೆನ್ಸ್, ಲಂಡನ್.

೨. ಫ್ರಾನ್ಸಿಸ್ ಗೊಡೆಮೆಂಟ್, ೧೯೯೨. ದಿ ನ್ಯೂ ಏಷ್ಯನ್ ರಿನೈಝಾನ್ಸ್ : ಫ್ರಂ ಕೊಲೋನಿಯಲಿಸಂ ಟು ದಿ ಪೋಸ್ಟ್ಕೋಲ್ಡ್ ವಾರ್, ಲಂಡನ್.