ಆಂತರಿಕವಾಗಿ ಆಡಳಿತ ಪುನಾರಚನೆ ಮತ್ತು ರಾಜಕೀಯ ಭದ್ರತೆಯನ್ನು ಕಂಡು ಕೊಂಡಿರುವುದರಿಂದ ರೇಝಾ ಶಾಹ ಪ್ರಭುತ್ವ ಯಶಸ್ವಿಯಾಗಿ ಬುಡಕಟ್ಟು ಸಮುದಾಯಗಳು, ವ್ಯಾಪಾರಿಗಳು ಮತ್ತು ಧಾರ್ಮಿಕ ಗುಂಪುಗಳು ಸಂಘಟಿಸುವ ಪ್ರತಿಭಟನೆಗಳನ್ನು ಸದೆಬಡಿಯಲಾಯಿತು. ಶಾಹನ ಅರಸೊತ್ತಿಗೆ ಭದ್ರವಾದುದರಿಂದ ಕಮ್ಯೂನಿಸ್ಟ್ ಪಾರ್ಟಿ, ಟ್ರೇಡ್ ಯೂನಿಯನ್‌ಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು, ಪಾರ್ಲಿಮೆಂಟನ್ನು ಕೇವಲ ರಬ್ಬರ್ ಸ್ಟಾಂಪ್‌ನಂತೆ ಬಳಸಿಕೊಳ್ಳಲಾಯಿತು. ಜೊತೆಗೆ, ಎದುರಿಸಬಹುದಾದ ಟೀಕೆಗಳನ್ನು ತಡೆಯಲು ಮಾಧ್ಯಮಗಳ ನಿರ್ಬಂಧ ಹೇರಲಾಯಿತು. ರಾಜಕೀಯ ಸುಭದ್ರತೆಯನ್ನು ಉಳಿಸಿಕೊಳ್ಳಲು ಅರಸೊತ್ತಿಗೆ ಹೆಚ್ಚು ಹೆಚ್ಚು ಭೂಮಾಲೀಕರನ್ನು ಅವಲಂಭಿಸಿತು. ಅವರು ಹೆಚ್ಚು ಹೆಚ್ಚು ಭೂಮಿಯ ಮಾಲೀಕತ್ವವನ್ನು ಹೊಂದಿ ಆರ್ಥಿಕವಾಗಿ ಸದೃಢರಾಗಲು ೧೯೨೮ ಮತ್ತು ೧೯೨೯ರಲ್ಲಿ ಹೊಸ ಭೂಕಾಯ್ದೆಯನ್ನು ಜರಿಗೊಳಿ ಸಲಾಯಿತು. ಇದು ಹೆಚ್ಚು ಹೆಚ್ಚು ಶ್ರೀಮಂತ ಭೂಮಾಲೀಕರ ಪರವಾಗಿದ್ದು, ಬಡವರಿಗೆ ಮುಳುವಾಯಿತು. ಎಲ್ಲ ಬುಡಕಟ್ಟು ಜನಾಂಗಗಳ ಪ್ರಭಾವವನ್ನು ದುರ್ಬಲಗೊಳಿಸಿ ಮೊತ್ತ ಮೊದಲ ಬಾರಿಗೆ ಇರಾನಿನ ಇತಿಹಾಸದಲ್ಲಿ, ಪ್ರಭುತ್ವ ಈ ವರ್ಗಗಳನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಂಡಿತು. ಸ್ಥಳೀಯವಾಗಿ ಅವರ ರಾಜಕೀಯ ಶಕ್ತಿಯನ್ನು ದಮನಿಸಲಾಯಿತು.

ಈ ಎಲ್ಲ ಸುಧಾರಣೆಗಳು ವಾಸ್ತವವಾಗಿ, ಉಲೇಮಾಗಳ ಆಸಕ್ತಿಗಳಿಗೆ ವಿರುದ್ಧ ವಾದವುಗಳು. ನಿಜವಾಗಿಯೂ ರೇಜ ಶಾಹ ಖಾಜರ್ ವಂಶವನ್ನು ಅಧಿಕಾರದಿಂದ ಪದಚ್ಯುತಗೊಳಿಸುವಾಗ ಉಲೇಮಾಗಳ ಬೆಂಬಲವನ್ನು ಪಡೆದಿದ್ದನು. ಪಹಲವೀ ರಾಜವಂಶವು, ಇರಾನಿನ ರಾಜಕೀಯ ವಾತಾವರಣದಲ್ಲಿ ಕಾನೂನುಬದ್ಧವಾದ ಬೆಲೆಯನ್ನು ಸ್ಥಾಪಿಸಲು ಶಾಹ ಅದೇ ಉಲೇಮಾಗಳನ್ನು ಮತ್ತು ಬುಡಕಟ್ಟು ಸಮುದಾಯಗಳನ್ನು ಅವಲಂಬಿಸಿದ್ದನು. ಆರಂಭದಲ್ಲಿ ಉಲೇಮಾಗಳ ಜೊತೆಗೂಡಿ ವಿದೇಶಿಯರ ಆಕ್ರಮಣವನ್ನು ವಿರೋಧಿಸಿದ್ದನು. ಆದರೆ, ಅಧಿಕಾರವನ್ನು ಭದ್ರಗೊಳಿಸಿಕೊಂಡ ಶಾಹನ ಅರಸೊತ್ತಿಗೆ ಯಾರಿಂದ ಬೆಂಬಲ ಪಡೆದು ಅಧಿಕಾರದ ಗದ್ದುಗೆಗೆ ಏರಿದ್ದನೋ ಅದೇ ಗುಂಪುಗಳ ವಿರುದ್ಧ ಸೆಟೆದು ನಿಂತನು ಮತ್ತು ಆ ಗುಂಪುಗಳ ದಮನವನ್ನು ತನ್ನ ಒಂದು ಕಾರ್ಯ ಸೂಚಿ ಎಂದು ರಾಜರೋಷವಾಗಿ ಹಮ್ಮಿಕೊಂಡನು. ಮೊದಲು ಇದೇ ಉಲೇಮಾಗಳು ಇರಾನ್ ಸಮಾಜದಲ್ಲಿ ಗೌರವಿಸಲ್ಪಟ್ಟ ಉತ್ಕೃಷ್ಟ ಸಾಮಾಜಿಕ ಗುಂಪು ಇಸ್ಲಾಂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡುವ ಅಧಿಕಾರ ಹೊಂದಿದ್ದವರು. ಮಸೀದಿ ಮತ್ತು ಮೊನ್ಯಾಸ್ಟರಿಗಳಲ್ಲಿ ಪ್ರಭಾವಿ ಗುಂಪುಗಳಾಗಿದ್ದು, ಅಲ್ಲಿನ ಅಧಿಕಾರವನ್ನು ಹಂಚಿಕೊಂಡವರು. ಸಮಾಜದ ಬೇರೆ ಬೇರೆ ವರ್ಗಗಳು ಈ ಶಾಸ್ತ್ರೀಯ ಶಿಕ್ಷಣ ಸಂಸ್ಥೆಗಳಿಗೆ, ಮಸೀದಿಗಳಿಗೆ ಮತ್ತು ಮೊನ್ಯಾಸ್ಟರಿಗಳಿಗೆ ದಾನದ ರೂಪದಲ್ಲಿ ಸಂಪತ್ತು ಮತ್ತು ಭೂಮಿ ನೀಡುತ್ತಿದ್ದು ಆ ಶ್ರೀಮಂತಿಕೆಯ ಯಜಮಾನಿಕೆಯನ್ನು ಈ ಉಲೇಮಾಗಳೇ ಅನುಭವಿಸುತ್ತಿದ್ದರು. ಕಾನೂನು ಪಾಲನೆಯಲ್ಲಿ ಹೆಚ್ಚು ಪಾಲು ಇವರದ್ದಾಗಿತ್ತು. ಅರಸನ ಅಳಿವು ಮತ್ತು ಉಳಿಯು ಕೂಡ ಇವರ ಕೈಯಲ್ಲಿತ್ತು. ಹಾಗಾಗಿ ಧಾರ್ಮಿಕವಾಗಿ, ಆರ್ಥಿಕವಾಗಿ, ರಾಜಕೀಯ ವಾಗಿ ಮತ್ತು ಸಾಮಾಜಿಕವಾಗಿ ಎಲ್ಲ ವರ್ಗಗಳಿಂದ ಗೌರವಿಸಲ್ಪಟ್ಟ ಈ ಉಲೇಮಾಗಳನ್ನು ರೇಜ ಶಾಹ ದಮನಿಸಲಾರಂಭಿಸಿದನು. ಸೆಕ್ಯೂಲಾರ್ ಶಿಕ್ಷಣ ಪದ್ಧತಿಯನ್ನು ಅನುಷ್ಠಾನ ಗೊಳಿಸಿ, ಶಾಸ್ತ್ರೀಯ ಮತ್ತು ಇಸ್ಲಾಂ ಶಿಕ್ಷಣ ಪದ್ಧತಿಯ ಬೋಧನೆಯನ್ನು ತಾತ್ಸಾರದಿಂದ ನೋಡಿದನು. ಮಸೀದಿ, ಮೊನ್ಯಾಸ್ಟರಿ ಮತ್ತು ಶಿಕ್ಷಣ ಸಂಸ್ಥೆಗಳು ಹೊಂದಿದ್ದ ಸಂಪತ್ತು ಮತ್ತು ಭೂಮಿ, ಸ್ಟೇಟಿನ ಸಂಪತ್ತು ಎಂದು ಅರಸ ಘೋಷಿಸಿದನು. ಮತ್ತು ಅವು ಸ್ಟೇಟಿನ ನಿಯಂತ್ರಣಕ್ಕೆ ಒಳಪಟ್ಟವು. ನಿಧಾನವಾಗಿ, ಉಲೇಮಾಗಳ ಪ್ರಾಬಲ್ಯ ದುರ್ಬಲಗೊಳ್ಳುತ್ತಾ ಹೋಯಿತು. ೧೯೩೪ರಲ್ಲಿ ಶಿಕ್ಷಕ ತರಬೇತಿ ಖಾಯ್ದೆಯನ್ನು ತಂದು ಹೊಸ ಕಾಲೇಜುಗಳನ್ನು ತೆರೆಯಲಾಯಿತು ಮತ್ತು ಅಲ್ಲಿ ಸೆಕ್ಯುಲರ್ ಶಿಕ್ಷಣ ಬೋಧಿಸಲಾಯಿತು. ಶಿಕ್ಷಣ ಮಂತ್ರಿ ಮಂಡಲವನ್ನೆ ರಚಿಸಿ, ಹೊಸ ಶಿಕ್ಷಣ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಬೋಧಿಸುವ ಪಠ್ಯ ಸಿದ್ಧಪಡಿಸುವ ಜವಾಬ್ದಾರಿಯನ್ನು ಕೊಡಲಾಯಿತು. ಧಾರ್ಮಿಕ ಶಿಕ್ಷಣಕ್ಕೆ ಪರ್ಯಾಯವಾಗಿ ತಾಂತ್ರಿಕ ಶಾಲೆಗಳನ್ನು ಶಿಕ್ಷಣ ಮಂಡಳಿ ತೆರೆಯಿತು. ಪ್ರತ್ಯೇಕವಾಗಿ ಕೈಗಾರಿಕಾ, ಆರೋಗ್ಯ, ಕೃಷಿ, ಯುದ್ಧ ಮತ್ತು ಹಣಕಾಸು ಮಂಡಳಿಗಳನ್ನು ತೆರೆಯಲಾಯಿತು. ೧೯೩೫ರಲ್ಲಿ ತೆಹರಾನ್ ವಿಶ್ವವಿದ್ಯಾನಿಲಯ ವನ್ನು ಸ್ಥಾಪಿಸಿ, ಅಲ್ಲಿ ಯುರೋಪ್ ಮಾದರಿಯಲ್ಲಿ ಫ್ಯಾಕಲ್ಟಿಗಳನ್ನು ನೇಮಿಸಲಾಯಿತು. ಪ್ರೌಢ ಶಿಕ್ಷಣವನ್ನು ಹೆಚ್ಚು ಪ್ರೋ ಅಷ್ಟು ಹೊತ್ತಿಗೆ ವಿದೇಶದಲ್ಲಿ ಶಿಕ್ಷಣ ಮುಗಿಸಿ ದೇಶಕ್ಕಾಗಮಿಸಿದ ವಿದ್ಯಾವಂತ ವರ್ಗವು ಇರಾನ್ ಸರಕಾರ, ಶಿಕ್ಷಣ ರಂಗದಲ್ಲಿ ಹಮ್ಮಿಕೊಂಡ ಯೋಜನೆಗಳನ್ನು ಮತ್ತಷ್ಟು ವಿಸ್ತರಿಸಲು ಶ್ರಮ ಪಟ್ಟರು. ಇವರು ಪಶ್ಚಿಮ ಮಾದರಿಯ ಶಿಕ್ಷಣವನ್ನು ಇರಾನ್‌ನಲ್ಲಿ ಪ್ರಚಾರ ಮಾಡುವುದರ ಜೊತೆಗೆ ಈ ಶಿಕ್ಷಣ ಸಂಸ್ಥೆಗಳ ಮೂಲಕ ಹೊಸ ಹೊಸ ವಿದೇಶಿ ಚಿಂತನೆಗಳನ್ನು, ತತ್ವಗಳನ್ನು ಮತ್ತು ಸಿದ್ಧಾಂತಗಳನ್ನು ಇರಾನ್‌ನ ಜನತೆಗೆ/ವಿದ್ಯಾರ್ಥಿ ಸಮೂಹಕ್ಕೆ ಪರಿಚಯಿಸಿದರು. ಇಂತಹ ಆಧುನೀಕರಣ ಪ್ರಕ್ರಿಯೆ ಉಲೇಮಾಗಳ ಅಸ್ತಿತ್ವವನ್ನೆ ತಲೆಕೆಳಗೆ ಮಾಡಿತು.

ಉಲೇಮಾಗಳನ್ನು ಬಹಿರಂಗವಾಗಿ ಬಿಕ್ಕಟ್ಟಲ್ಲಿ ಸಿಲುಕಿಸಿರುವುದು ನ್ಯಾಯಾಡಳಿತದ ಪುನಾರಚನೆ. ೧೯೦೬ರಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟ್‌ಗಳನ್ನು ತೆರೆದಿತ್ತಾದರೂ, ನ್ಯಾಯಾಡಳಿತ ಮಾತ್ರ ಉಲೇಮಾಗಳ ಕೈಯಲ್ಲೆ ಇತ್ತು. ಆದರೆ, ರೇಝಾ ಶಾಹ ೧೯೨೮ರಲ್ಲಿ ಹೊಸ ಕಾನೂನು ಕೋಡ್‌ಗಳನ್ನು ಘೋಷಿಸಿದ ಕಾರಣ ಶರಿಯವನ್ನು ಬದಿಗಿಡಲಾಯಿತು. ಸೆಕ್ಯುಲರ್ ಕೋರ್ಟ್‌ಗಳನ್ನು ೧೯೩೨ರಲ್ಲಿ ತೆರೆದು, ಧಾರ್ಮಿಕ ಕೋರ್ಟ್‌ಗಳ ಕಾರ್ಯಗಳನ್ನು ಸ್ಥಗಿತಗೊಳಿಸಲಾಯಿತು. ೧೯೩೫ರಲ್ಲಿ ಒಂದು ಕಾನೂನನ್ನು ತಂದು ಎಲ್ಲ ನ್ಯಾಯವಾದಿಗಳು ತೆಹರಾನ್ ಫ್ಯಾಕಲ್ಟಿ ಆಫ್ ಲಾ ಪದವಿ ಅಥವಾ ಯಾವುದೇ ವಿದೇಶಿ ವಿಶ್ವವಿದ್ಯಾನಿಲಯದ ಕಾನೂನು ಪದವಿ ಪಡೆದವರು ಆಗಿರಬೇಕು. ಮತ್ತು ಅಂತಹವರು ಮಾತ್ರ ನ್ಯಾಯಾಧೀಶ ರಾಗಲು ಅರ್ಹರೆಂದು ಘೋಷಿಸಲಾಯಿತು. ಈ ಕಾನೂನಿನಂತೆ, ಉಲೇಮಾಗಳು ಯಾವುದೇ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಸಾಧ್ಯತೆಯನ್ನು ತಡೆಯಲಾಯಿತು. ಇಡೀ ನ್ಯಾಯಾಂಗ ವ್ಯವಸ್ಥೆ ಸ್ಟೇಟ್‌ನ ನಿಯಂತ್ರಣಕ್ಕೆ ಒಳಪಟ್ಟಿತು. ಇದು ನೇರವಾಗಿ ಉಲೇಮಾಗಳ ಆಸಕ್ತಿಗಳಿಗೆ ವಿರುದ್ಧವಾಯಿತು ಮತ್ತು ಅವರನ್ನು ನಿಧಾನಗತಿಯಲ್ಲಿ ಅಧಿಕಾರದಿಂದ ಹೊರಗಿಡಲಾಯಿತು.

ನ್ಯಾಯಾಡಳಿತ ಮತ್ತು ಶಿಕ್ಷಣ ವ್ಯವಸ್ಥೆಯ ಆಧುನೀಕರಣವು, ಪ್ರಭುತ್ವದ ಪ್ರಾಯೋಜಕತ್ವದಲ್ಲಿ ಮುಂದುವರಿಯುವ ಆರ್ಥಿಕ ಆಧುನೀಕರಣದ ಇನ್ನೊಂದು ಮುಖವಾಗಿ ಕಂಡುಬರುತ್ತದೆ. ಮೂಲಭೂತ ಸೌಕರ್ಯಗಳನ್ನು ಜನತೆಗೆ ನೀಡಲು ೧೯೨೦ ಮತ್ತು ೧೯೩೦ರ ದಶಕಗಳಲ್ಲಿ ಯೋಜನೆಗಳನ್ನು ರೂಪಿಸಲಾಯಿತು. ಬೆಲ್ಜಿಯಂನಿಂದ ಆಮದು ಮಾಡಿಕೊಂಡ ಅಧಿಕಾರಿಗಳು ಮತ್ತು ಸಲಹೆಗಾರರನ್ನು ಅವಲಂಬಿಸಿ ಹೊಸ ತೆರಿಗೆ ಮತ್ತು ಕಸ್ಟಮ್ಸ್ ಇಲಾಖೆಗಳನ್ನು ತೆರೆಯಲಾಯಿತು. ಅಮೆರಿಕದಿಂದ ಬಂದ ತರಬೇತುದಾರರ ನೆರವಿನಿಂದ ಕಂದಾಯ ಮತ್ತು ಆದಾಯ ವಸೂಲಿ ಕ್ರಮದಲ್ಲಿ ಬದಲಾವಣೆಯನ್ನು ತರಲಾಯಿತು. ಹಣಕಾಸು ಮತ್ತು ವ್ಯವಹಾರವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ, ಜರ್ಮನ್ ಹಣಕಾಸು ತಜ್ಞರ ಸಹಯೋಗದೊಂದಿಗೆ ರಾಷ್ಟ್ರೀಯ ಬ್ಯಾಂಕ್‌ಗಳನ್ನು ಮತ್ತು ಹಣಕಾಸು ಸಂಸ್ಥೆಗಳನ್ನು ತೆರೆಯಲಾಯಿತು. ೧೯೨೬-೧೯೩೮ರ ನಡುವೆ ಕೈಗಾರಿಕೀಕರಣಕ್ಕೆ ಅನುಕೂಲವಾಗುವಂತೆ ರೈಲ್ವೆ ಮಾರ್ಗಗಳ ನಿರ್ಮಾಣವನ್ನು ಕೈಗೆತ್ತಿಕೊಂಡು ಅಭಿವೃದ್ದಿಗೊಳಿಸಲಾಯಿತು. ಪೋಸ್ಟಲ್ ಮತ್ತು ಟೆಲಿಪೋನ್ ಸಂಪರ್ಕಗಳನ್ನು, ವಾಯು ಯಾನವನ್ನು ಆರ್ಥಿಕ ಅಭಿವೃದ್ದಿಯನ್ನು ಗುರಿಯಾಗಿಟ್ಟುಕೊಂಡು ಒದಗಿಸಲಾಯಿತು. ಇದರಿಂದ ಪ್ರಭುತ್ವ ಬೇರೆ ಬೇರೆ ಪ್ರಾಂತ್ಯಗಳಿಗೆ ನಿಕಟ ಸಂಪರ್ಕವನ್ನು ಸಾಧಿಸಿತು. ಮತ್ತು ಪಟ್ಟಣ-ಹಳ್ಳಿಗಳ ನಡುವೆ ಹತ್ತಿರದ ಸಂಬಂಧವನ್ನು ಬೆಳೆಸಿಕೊಂಡಿತು.

೧೯೩೦ರ ನಂತರ ಬಂಡವಾಳದ ಅಭಾವ ಮತ್ತು ಕೈಗಾರಿಕಾ ರಂಗದಲ್ಲಿ ಮತ್ತು ಭೂಮಾಲೀಕರಿಗೆ ದೀರ್ಘಕಾಲದ ಹಣ ಹೂಡಿಕೆ ಸಾಧ್ಯವಾಗದ ಕಾರಣ, ಸ್ವತಃ ಸ್ಟೇಟ್ ಮುಂದೆ ನಿಂತು ಅನೇಕ ಕೈಗಾರಿಕಾ ಪ್ರಾಜೆಕ್ಟ್‌ಗಳನ್ನು ಪ್ರೋ ಮುಖ್ಯವಾಗಿ ದಿನಬಳಕೆಯ ವಸ್ತುಗಳನ್ನು ಸಿದ್ಧಪಡಿಸುವ ಘಟಕಗಳನ್ನು ತೆರೆಯಲು ಹೆಚ್ಚು ಅವಕಾಶಗಳನ್ನು ಸರಕಾರ ನೀಡಿತು. ಹತ್ತಿ, ಉಣ್ಣೆ ಮತ್ತು ಸಿಲ್ಕ್ ಫ್ಯಾಕ್ಟರಿಗಳನ್ನು, ಸಕ್ಕರೆ ಕಾರ್ಖಾನೆಗಳನ್ನು ಮತ್ತು ಆಹಾರ ಸಂಸ್ಕರಣ ಘಟಕಗಳಾದ ಬೇಕರಿ, ಕ್ಯಾನರಿಗಳು ಮತ್ತು ಬಿವಿರೇಜ್‌ಗಳನ್ನು ತೆರೆಯಲು ಹೆಚ್ಚು ಒತ್ತು ಕೊಡಲಾಯಿತು. ಮುಖ್ಯವಾಗಿ, ವಿದೇಶದಿಂದ ದಿನಬಳಕೆಯ ವಸ್ತುಗಳನ್ನು ಅಮದು ಮಾಡುವುದನ್ನು ತಡೆಯಲು, ಇಂತಹ ಯೋಜನೆಗಳನ್ನು ಸರಕಾರ ಬೆಂಬಲಿಸಿತು. ೧೯೪೧ರ ಹೊತ್ತಿಗೆ ಸೋಪ್, ಗ್ಲಾಸ್, ಕಾಗದ, ಬೆಂಕಿಪೆಟ್ಟಿಗೆ ಮತ್ತು ಸಿಗರೇಟ್ ಇತ್ಯಾದಿ ವಸ್ತುಗಳನ್ನು ಸ್ಥಳೀಯವಾಗಿ ಸರಕಾರಿ ಬೆಂಬಲಿತ ಫ್ಯಾಕ್ಟರಿಗಳಲ್ಲೆ ಉತ್ಪಾದಿಸಲಾರಂಭಿಸಲಾಯಿತು. ಇದಲ್ಲದೆ, ಸರಕಾರವೇ ದೇಶದ ವ್ಯಾಪಾರ ವಹಿವಾಟು ಮತ್ತು ವಿದೇಶಿ ವಿನಿಮಯದ ಮೇಲೆ ಹಿಡಿತವನ್ನು ಇಟ್ಟುಕೊಂಡಿತ್ತು. ೧೯೨೫ರಿಂದ ಚಹಾಪುಡಿ ಮತ್ತು ಸಕ್ಕರೆ ಆಮದಿನ ವಹಿವಾಟಿನಲ್ಲಿ ಸರಕಾರವೆ ಏಕಸ್ವಾಮಿತ್ವವನ್ನು ಹೊಂದಿತ್ತು. ಇದರಿಂದ ಸರಕಾರಕ್ಕೆ ವಿದೇಶಿಯರ ವಸಾಹತುಶಾಹಿ ಆಸಕ್ತಿಗಳನ್ನು ನಿಯಂತ್ರಿಸಲೂ ಸಾಧ್ಯವಾಗುತ್ತಿತ್ತು. ಹಾಗಾಗಿ, ೧೯೨೦ ಮತ್ತು ೩೦ರ ದಶಕಗಳಲ್ಲಿ ರಷ್ಯಾ ಮತ್ತು ಬ್ರಿಟಿಷರ ಚಟುವಟಿಕೆಗಳಲ್ಲಿ ಒಂದಷ್ಟು ಸಮತೋಲನವನ್ನು ಕಾಯ್ದು ಕೊಳ್ಳಲಾಯಿತು. ಇದು ಮುಖ್ಯವಾದುದು. ಏಕೆಂದರೆ, ರಷ್ಯಾ ಇರಾನ್‌ನೊಂದಿಗೆ ಪಾರ್ಟನರ್ ಆಗಿ ಕಾರ್ಯ ನಿರ್ವಹಿಸುತ್ತಿತ್ತು. ಬ್ರಿಟಿಷರು ಇರಾನಿನ ತೈಲ ಉತ್ಪಾದನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇವರಿಬ್ಬರನ್ನು ನಿಯಂತ್ರಿಸಲು ಇರಾನ್ ೧೯೩೦ರ ದಶಕದಲ್ಲಿ ಜರ್ಮನಿಯೊಂದಿಗೆ ವ್ಯಾಪಾರ ಸಂಪರ್ಕ ಬೆಳೆಸಿತು. ಜರ್ಮನಿಯ ಬಂಡವಾಳ ಮತ್ತು ತಂತ್ರಜ್ಞಾನವು, ಇರಾನ್ ಸರಕಾರ ರೂಪಿಸುವ ಹಲವು ಪ್ರಾಜೆಕ್ಟ್‌ಗಳಿಗೆ ಅನುಕೂಲಕರವಾಗಿತ್ತು. ಜರ್ಮನಿ ಕೂಡ ತನ್ನ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳಲು, ಇರಾನ್‌ನಲ್ಲಿ ಸಂಶೋಧನಾ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ತೆರೆದು, ಗುಪ್ತವಾಗಿ ಮಾಹಿತಿ ಪಡೆದು ರಾಜಕೀಯ ಭದ್ರತೆ ಕಂಡುಕೊಂಡಿತು. ಹಾಗಾಗಿ ೧೯೩೦ರ ದಶಕದಲ್ಲಿ ರಷ್ಯಾದ ಪಾಲು ಬಂಡವಾಳ ೩೪ ಶೇಕಡಾದಿಂದ ಒಂದು ಶೇಕಡಕ್ಕೆ ಇಳಿಮುಖವಾದರೆ ಜರ್ಮನಿಯದ್ದು ೨೦ ಶೇಕಡದಿಂದ ೪೨ ಶೇಕಡಕ್ಕೆ ಏರಿಕೆ ಕಂಡಿತು. ಅಲ್ಲದೆ, ಇರಾನಿ ಸರಕಾರ ಕೂಡ ಸುಮಾರು ೩೩ರಿಂದ ೪೦ ಶೇಕಡಾ ಆಮದು ಮತ್ತು ರಫ್ತು ವಹಿವಾಟನ್ನು ತನ್ನ ಸ್ವಾಧೀನಕ್ಕೆ ಪಡೆದು ನಿಯಂತ್ರಿಸುತ್ತಿತ್ತು.

ತೈಲ ಉತ್ಪಾದನೆ ಮತ್ತು ಅದರಿಂದ ಬರುವ ಆದಾಯ ಸರಕಾರಕ್ಕೆ ಅಮೂಲ್ಯವಾದುದು. ಆರ್ಥಿಕ ಅಭಿವೃದ್ದಿಯ ದೃಷ್ಟಿಯಿಂದಲೂ, ತೈಲ ಆದಾಯ ಮುಖ್ಯವಾದುದು. ೧೯೦೮ರಲ್ಲಿ ಮೊತ್ತ ಮೊದಲ ಬಾರಿಗೆ ಮಸ್ ಜಿತ್-ಇ-ಸುಲೈಮನ್ ತೈಲ ಕಂಪೆನಿಯನ್ನು ಆರಂಭಿಸಿ, ತೈಲ ಉತ್ಪಾದನೆಯನ್ನು ಇರಾನ್‌ನಲ್ಲಿ ಆರಂಭಿಸಲಾಯಿತು. ೧೯೧೪ರಲ್ಲಿ ಬ್ರಿಟಿಷ್ ಸರಕಾರ ಈ ತೈಲ ಘಟಕದ ನಿಯಂತ್ರಣದ ಹಕ್ಕನ್ನು ಪಡೆಯಿತು. ೧೯೧೫ರಲ್ಲಿ ಅಬ್ದಾನ್ ನಲ್ಲಿ ತೈಲ ಶುದ್ದೀಕರಣ ಘಟಕವನ್ನು ಆರಂಭಿಸಲಾಯಿತು. ತೈಲ ಉತ್ಪಾದನೆ ಒಂದು ಲೆಕ್ಕದಲ್ಲಿ, ಇರಾನ್ ಖಜನೆಗೆ ಆದಾಯವನ್ನು ತಂದಿತಾದರೂ, ಇನ್ನೊಂದು ದೃಷ್ಟಿಯಿಂದ ವಿದೇಶಿ ಕಂಪನಿಗಳು ಇರಾನಿ ಸರಕಾರಕ್ಕೆ ಅತ್ಯಂತ ಕಡಿಮೆ ರಾಯಲ್ಟಿಯನ್ನು ಕೊಡುತ್ತಿದ್ದು ದರಿಂದ ತೈಲ ಸಂಪತ್ತು ಸರಕಾರ ಮತ್ತು ಕಂಪನಿಗಳ ನಡುವೆ ವೈಷಮ್ಯ ಬೆಳೆಸುವ ವಸ್ತುವಾಗಿ ಕಂಡುಬಂತು. ಏಕೆಂದರೆ, ಇಡೀ ಉತ್ಪಾದನಾ ಪ್ರಕ್ರಿಯೆಯಲ್ಲಿ ಕೇವಲ ವಿದೇಶಿಯರದ್ದೆ ಕಾರುಬಾರು ಆಗಿದ್ದು ಇರಾನಿಯರ ಭಾಗವಹಿಸುವಿಕೆ ಇರಲಿಲ್ಲ. ಜೊತೆಗೆ ವಿದೇಶಿಯರು ಕೊಡುವ ಆದಾಯದ ಪಾಲು ಬಗ್ಗೆಯೂ, ಇರಾನ್ ಸರಕಾರಕ್ಕೆ ತಕರಾರು ಇತ್ತು. ಆ ಕಾರಣಕ್ಕಾಗಿ ೧೯೩೩ರಲ್ಲಿ ಇರಾನ್ ಸರಕಾರ ವಿದೇಶಿಯರ ತೈಲ ಉತ್ಪಾದನೆಗೆ ಬಳಸಿಕೊಳ್ಳುವ ಪ್ರದೇಶದ ವ್ಯಾಪ್ತಿಯನ್ನು ಕಡಿತಗೊಳಿಸಿತು. ಮತ್ತು ನಿಗದಿತ ಆದಾಯ ನೀಡಲು ಶರತ್ತು ಹಾಕಿತ್ತು. ಅಲ್ಲದೆ, ಈಗಾಗಲೇ ತೈಲ ಉತ್ಪಾದನೆಗೆ ನಿಗದಿಪಡಿಸಿದ ಪ್ರದೇಶಗಳಲ್ಲಿ ಕಂಪನಿಗಳ ಹಕ್ಕನ್ನು ೧೯೯೩ರವರೆಗೆ ಅನುಭವಿಸಬಹುದೆಂದು ನವೀಕರಿಸಿತು. ಹಾಗೆಯೇ ತೈಲ ಕಂಪೆನಿ ತೆರಿಗೆ ವಿನಾಯಿತಿ ಪಡೆಯಿತು. ಈ ನಿರ್ಧಾರಗಳು ನಂತರದ ದಿನಗಳಲ್ಲಿ, ಮುಖ್ಯವಾಗಿ, ಸರಕಾರ ಹಮ್ಮಿಕೊಂಡ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸಂಗ್ರಹಿಸುವ ಬಂಡವಾಳ ವಿಚಾರದಲ್ಲಿ, ಇರಾನಿ ಆಸಕ್ತಿಗಳಿಗೆ ವಿರುದ್ಧವಾಗಿ ಕಂಡುಬಂತು.

ಆಧುನೀಕೃತ ಇರಾನಿ ಸ್ಟೇಟ್ ತನ್ನ ಅಧಿಕಾರವು ನ್ಯಾಯ ಸಮ್ಮತವಾದುದೆಂದು ರಾಷ್ಟ್ರೀಯವಾದಿ ಹಾಗೂ ಸೆಕ್ಯುಲರ್ ನೆಲೆಯಲ್ಲಿ ಸಮರ್ಥಿಸಿಕೊಂಡಿತು. ಇದಕ್ಕೆ ಪೂರಕವಾಗಿ, ಪರ್ಶಿಯಾ ಇತಿಹಾಸ ಮತ್ತು ಪ್ರಾಚೀನ ಕಾಲದ ಬಂಧುತ್ವವನ್ನು ಬಳಸಿಕೊಂಡು ಸೈನ್ಯದ ಆಧುನೀಕರಣ, ಸರಕಾರದ ಪುನಾರಚನೆ ಮತ್ತು ಆರ್ಥಿಕ ಸಂಸ್ಥೆಗಳ ಪರಿವರ್ತನೆಯು ಕಾನೂನುಬದ್ಧವಾದುದು ಹಾಗೂ ರಾಷ್ಟ್ರದ ಹಿತರಕ್ಷಣೆಯ ಉದ್ದೇಶ ವನ್ನಿಟ್ಟುಕೊಂಡು ಮಾಡಿರುವುದೆಂದು ಘೋಷಿಸಿಕೊಂಡಿತು. ಆದಾಗ್ಯೂ, ಪಹಲವಿ ವಂಶದ ಅರಸೊತ್ತಿಗೆ ಹಮ್ಮಿಕೊಂಡ ರಾಜಕೀಯ ಯೋಜನೆಗಳು ವಿದೇಶಿ ತರಬೇತಿದಾರರು, ಪಶ್ಚಿಮದಲ್ಲಿ ಶಿಕ್ಷಣ ಪಡೆದ ಇರಾನಿನ ಆಡಳಿತಗಾರರು ಮತ್ತು ಚಿಂತಕರ ಬೆಂಬಲವನ್ನೆ ಅನಿವಾರ್ಯವಾಗಿ ಅವಲಂಬಿಸಿ ಕಾರ್ಯರೂಪಕ್ಕೆ ತರಬೇಕಾಯಿತು. ಈ ಬಗೆಯ ಅಭಿವೃದ್ದಿ ಕಾರ್ಯಕ್ರಮಗಳ ಪರಿಣಾಮವಾಗಿ, ಹಿಂದುಳಿದಂತಹ ಇರಾನಿನ ಸಮಾಜದಲ್ಲಿ ಒಂದು ಸಣ್ಣ ಆಧುನಿಕ ವಲಯದ ಉಗಮವಾಯಿತು. ಉತ್ಪಾದನೆ ಚಟುವಟಿಕೆ ಪಟ್ಟಣ ಕೇಂದ್ರೀಕರಿಸಿಕೊಂಡು, ಸಣ್ಣ ಜನಸಮುದಾಯ ಅದರ ಲಾಭ ಪಡೆಯಲಾರಂಭಿಸಿತು. ಕೃಷಿ ರಂಗ ಇನ್ನೂ  ಲಾಭದಾಯಕ  ಉದ್ದಿಮೆಯಾಗಿ ಪರಿವರ್ತನೆಗೊಂಡಿಲ್ಲ. ಸ್ಟೇಟ್‌ನ ಕೇಂದ್ರೀಕರಣ, ಆರ್ಥಿಕ ಆಧುನೀಕರಣ ಮತ್ತು ಆಧುನಿಕ ಶಿಕ್ಷಣ ಪದ್ಧತಿಯನ್ನು ಅನುಸರಿಸಿದ ಪ್ರಭಾವದಿಂದ ಹೊಸ ಸಾಮಾಜಿಕ ಗುಂಪುಗಳು ಹುಟ್ಟಿಕೊಂಡವು. ಅವರು ಹೊಸ ಸೈನ್ಯಾಧಿಕಾರಿಗಳು, ನೌಕರಶಾಹಿಗಳು, ವರ್ತಕರು, ಗುತ್ತಿಗೆದಾರರು, ವೈದ್ಯರು, ನ್ಯಾಯವಾದಿಗಳು, ಇಂಜಿನಿಯರ್‌ಗಳು, ಶಿಕ್ಷಕರು ಮತ್ತು ಬರಹಗಾರರು. ಈ ವರ್ಗಗಳು ಪಾಶ್ಚಾತ್ಯ ಜೀವನ ಶೈಲಿ ಮತ್ತು ಮಲ್ಯಗಳನ್ನು ಅಳವಡಿಸಿಕೊಂಡವರು. ಇವರು ನಿಧಾನವಾಗಿ ಉಲೇಮಾ ಬುಡಕಟ್ಟು ಸಮುದಾಯ ಮತ್ತು ಬಡ ರೈತರಿಗಿಂತ ಬಲಿಷ್ಠವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಟ್ಟರು.

ಈ ನಡುವೆ ಎರಡನೆಯ ಜಾಗತಿಕ ಯುದ್ಧವು ಸ್ಟೇಟ್ ಕೇಂದ್ರೀಕರಣ ಮತ್ತು ಆರ್ಥಿಕ ಅಭಿವೃದ್ದಿ ಪ್ರಕ್ರಿಯೆಗೆ ತಡೆವೊಡ್ಡಿತು. ಬ್ರಿಟನ್ ಮತ್ತು ರಷ್ಯಾ ತೈಲ ಉತ್ಪಾದನಾ ಹಕ್ಕನ್ನು ಉಳಿಸಿಕೊಂಡು ನಿಧಾನವಾಗಿ ಇರಾನಿ ಸರಕಾರದ ಮೇಲೆ ಒತ್ತಡ ಹೇರಿ ಜರ್ಮನ್ ಬಂಡವಾಳಶಾಹಿಗಳಿಗೆ ಮತ್ತು ಉದ್ದಿಮೆಗಾರರಿಗೆ ನೀಡಿದ ವಸಾಹತುಶಾಹಿ ಹಕ್ಕುಗಳನ್ನು ಹಿಂದೆ ಪಡೆಯಲು ಹೇಳಿದವು. ನಂತರ ಅವರನ್ನು ದೇಶದಿಂದ ಹೊರ ಹಾಕಲು ನಿರ್ದೇಶಿಸಿದವು. ಸಾಲದಕ್ಕೆ, ಇರಾನಿನಲ್ಲಿ ತಮ್ಮದೇ ಹಿಡಿತವನ್ನು ಸಾಧಿಸಿದವು. ರೇಜ ಶಾಹನನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿ ಅಧಿಕಾರದಿಂದ ಕೆಳಗಿಳಿಯಲು ಸೂಚಿಸಿದವು. ಮಾತ್ರವಲ್ಲ, ಅವನ ಮಗ ಮಹಮ್ಮದ್ ರೇಜ ಶಾಹ ಪಹಲವಿಯನ್ನು ನೇಮಿಸಲಾಯಿತು. ಪರಿಣಾಮ ವಾಗಿ ೧೯೪೧-೧೯೫೩ರ ನಡುವೆ ಇರಾನ್‌ನಲ್ಲಿ ಅರಾಜಕತೆ ರಾರಾಜಿಸುತ್ತಿತ್ತು. ಆಂತರಿಕವಾಗಿ ಪ್ರಭಾವಿ ಗುಂಪುಗಳು ಮತ್ತು ವಿದೇಶಿ ಬಂಡವಾಳಶಾಹಿ ಪರವಿದ್ದ ಇರಾನಿ ಸಾಮಾಜಿಕ ಗುಂಪುಗಳ ನಡುವೆ, ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿತು. ರಾಜಕೀಯ ಬಿಕ್ಕಟ್ಟಿನ ಲಾಭ ಪಡೆದು ಅಮೆರಿಕ ಸಾಮ್ರಾಜ್ಯಶಾಹಿ, ಇರಾನ್‌ನನ್ನು ಪ್ರವೇಶಿಸಿ, ಬ್ರಿಟನ್ ಮತ್ತು ರಷ್ಯಾವನ್ನು ಬದಿಗೊತ್ತಿತ್ತು. ಯುದ್ಧಾನಂತರ ರಚನೆಗೊಂಡ ಮಹಮ್ಮದ್ ರೇಝೊನ ಪ್ರಭುತ್ವಕ್ಕೆ ಮುಖ್ಯ ರಕ್ಷಕನಾಗಿ ಅಮೆರಿಕ ಪ್ರವೇಶ ಮಾಡಿತು. ಅಮೆರಿಕ ಸರಕಾರ ನೇರವಾಗಿ ಇರಾನಿ ಸರಕಾರದ ಅಭಿವೃದ್ದಿ ಕಾರ್ಯಕ್ರಮಗಳಿಗೆ, ಪೊಲೀಸ್ ಮತ್ತು ಸೈನಿಕ ಶಕ್ತಿ ಬಲಪಡಿಸಲು ಬೇಕಾದ ಹಣಕಾಸಿನ ನೆರವನ್ನು ಕೊಡುವುದಾಗಿ ಘೊಷಿಸಿತು. ರಕ್ಷಣೆಗೆ ಸಂಬಂಧಿಸಿ ಇರಾನ್ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಅವಲಂಬಿತ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸಲು ಆರಂಭಿಸಿತ್ತು. ಅಮೆರಿಕದ ಬೆಂಬಲವನ್ನು ಪಡೆದು ಇರಾನ್ ಸೋವಿಯತ್ ಒಕ್ಕೂಟ ಸಲ್ಲಿಸಿದ ಎಲ್ಲ ಬೇಡಿಕೆಗಳನ್ನು (ತೈಲ ಉತ್ಪಾದನಾ ಹಕ್ಕು)ಇರಾನ್ ತಿರಸ್ಕರಿಸಿತು. ಉತ್ತರ ಇರಾನ್‌ನ ಪ್ರತ್ಯೇಕತಾವಾದಿ ಚಳವಳಿ ಸೋವಿಯತ್ ಬೆಂಬಲವನ್ನೇ ನಿರೀಕ್ಷಿತು. ಅದನ್ನು, ಅಮೆರಿಕದ ಸೈನಿಕ ಸಹಾಯದಿಂದ ದಮನಿಸಿತು. ಮುಖ್ಯವಾಗಿ, ಅಝರ್ ಬೈದಾನ್ ಮತ್ತು ಕುರ್ದಿಸ್ಥಾನದಲ್ಲಿ ೧೯೪೦ರ ದಶಕ ಮತ್ತು ೫೦ರ ದಶಕದ ಆರಂಭದಲ್ಲಿ ಇರಾನಿಯರು ಬ್ರಿಟಿಷರ ಅಧೀನಕ್ಕೆ ಒಳಪಟ್ಟಿರುವ ಆಂಗ್ಲೋ-ಇರಾನಿಯನ್ ತೈಲ ಕಂಪನಿಯನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಸತತ ಹೋರಾಟವನ್ನು ನಡೆಸಲಾಗಿತ್ತು. ಮಹಮ್ಮದ್ ಮಸಾದಿಕ್ ಈ ಹೋರಾಟವನ್ನು ೧೯೫೧ರಲ್ಲಿ ತೀವ್ರಗೊಳಿಸುವ ಪ್ರಯತ್ನ ನಡೆಸಿದನು. ಇದಕ್ಕೆ ಅವನು ನ್ಯಾಶನಲ್ ಫ್ರಂಟ್ ಎಂಬ ರಾಜಕೀಯ ವೇದಿಕೆಯನ್ನು ರಚಿಸಿ ಭೂಮಾಲೀಕರನ್ನು, ವರ್ತಕರನ್ನು, ಬುಡಕಟ್ಟು ಸಮುದಾಯದ ಪ್ರತಿನಿಧಿಗಳನ್ನು, ಎಡಪಂಥೀಯ ಚಿಂತಕರನ್ನು, ಉಲೇಮಾಗಳನ್ನು ಆಕರ್ಷಿಸಿದನು. ಅವರೆಲ್ಲರ ಬೆಂಬಲದೊದಿಗೆ, ಪಾರ್ಲಿಮೆಂಟ್‌ನಲ್ಲಿ ತೈಲ ಘಟಕದ ರಾಷ್ಟ್ರೀಕರಣಕ್ಕೆ ಒಂದು ಮಸೂದೆಯನ್ನು ಮಂಡಿಸಿದನು ಮತ್ತು ಒಪ್ಪಿಗೆಯನ್ನು ಪಡೆದನು. ತದ ನಂತರದ ಮೂರು ವರ್ಷಗಳು ರಾಜಕೀಯ ಬಿಕ್ಕಟ್ಟನ್ನು ಎದುರಿಸ ಬೇಕಾಯಿತು. ಅಮೆರಿಕ ಇರಾನಿನ ತೈಲ ಘಟಕ ರಾಷ್ಟ್ರೀಕರಣಕ್ಕೆ ಸಮ್ಮತಿ ನೀಡಲಿಲ್ಲ. ಬ್ರಿಟನ್ ಹೆಚ್ಚು ನಷ್ಟ ಅನುಭವಿಸಬೇಕಾಗಿತ್ತು. ಏಕೆಂದರೆ, ೧೯೦೯ರಿಂದ ಬ್ರಿಟನ್ ಆಂಗ್ಲೋ-ಇರಾನಿಯನ್ ತೈಲ ಕಂಪನಿಯ ಯಜಮಾನಿಕೆಯನ್ನು ಹೊಂದಿದ್ದು, ಸುಮಾರು ೪೦ ವರ್ಷಗಳ ಅವಧಿಯಲ್ಲಿ ಬಿಲಿಯಗಟ್ಟಲೆ ಪೌಂಡನ್ನು, ಈ ಕಂಪನಿಯ ಅಭಿವೃದ್ದಿಗೆ ಹೂಡಿತ್ತು. ಇದ್ದಕ್ಕಿದಂತೆ ಇರಾನ್ ಆ ಘಟಕವನ್ನು ರಾಷ್ಟ್ರೀಕೃತಗೊಳಿಸಿರುವುದು, ಬ್ರಿಟಿಷರು ಭವಿಷ್ಯದ ವಸಾಹತುಶಾಹಿ ವೃದ್ದಿಯಲ್ಲಿ ಹಿನ್ನಡೆ ಕಂಡರು. ಹೂಡಿದ ಬಂಡವಾಳ ನಷ್ಟ ಅನುಭವಿಸಿತು. ಆದರೆ, ಬ್ರಿಟಿಷ್ ಬೆಂಬಲಕ್ಕೆ ಎಲ್ಲ ಬಂಡವಾಳಶಾಹಿ ರಾಷ್ಟ್ರಗಳು ನಿಂತವು ಮತ್ತು ಒಗ್ಗಟ್ಟಾಗಿ ಇರಾನಿನ ತೈಲ ಸಂಪತ್ತನ್ನು ಬಹಿಷ್ಕರಿಸಿದವು. ಬ್ರಿಟನ್ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದರೂ, ಅದು ಇರಾನ್ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಎತ್ತಿ ಹಿಡಿಯಿತು. ಅದು ಇರಾನಿಯರ ಹಕ್ಕು ಎಂದು ಪ್ರತಿಪಾದಿಸಿತು. ಆದಾಗ್ಯೂ, ಎಲ್ಲ ತೈಲ ಕಂಪನಿಗಳು ಇರಾನಿ ತೈಲವನ್ನು ಬಹಿಷ್ಕರಿಸಿರುವುದರಿಂದ, ಇರಾನಿ ಖಜನೆಗೆ ನಿರಂತರವಾಗಿ ಹರಿದು ಬರುತ್ತಿದ್ದ ತೈಲ ಆದಾಯ ಸ್ಥಗಿತಗೊಂಡಿತು. ಆರ್ಥಿಕ ಬಿಕ್ಕಟ್ಟು ಎದುರಾಯಿತು. ಅಭಿವೃದ್ದಿ ಕಾರ್ಯಗಳು ನಿಂತು ಹೋದವು. ಜನರು ಅರಾಜಕತೆಯನ್ನು ಪುನಃ ಎದುರಿಸುವ ಪರಿಸ್ಥಿತಿ ಉಂಟಾಯಿತು.

ಇದಕ್ಕೆಲ್ಲ ಮಹಮ್ಮದ್ ಮೊಸಾದಿಕ್ ಕಾರಣವೆಂದು ಚಿತ್ರಿಸಲಾಯಿತು. ಅವನನ್ನು ಅಧಿಕಾರದಿಂದ ಪದಚ್ಯುತಗೊಳಿಸುವ ಹುನ್ನಾರು ನಡೆಯಿತು. ಇದನ್ನು ಇರಾನಿ ಅರಸನೆ ಪ್ರೋ ಅದಕ್ಕಾಗಿ ಅಮೆರಿಕದವರ ಸೈನಿಕ ಸಹಾಯವನ್ನು ಪಡೆದನು. ಹೋರಾಟದ ಫಲಿತಾಂಶವಾಗಿ ತೈಲ ಕಂಪನಿ ರಾಷ್ಟ್ರೀಕರಣವನ್ನು ತಡೆಹಿಡಿಯಲಾಯಿತು. ೧೯೫೪ರಲ್ಲಿ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಇರಾನಿ ತೈಲ ಕಂಪನಿಯನ್ನು ರಚಿಸಲಾಯಿತು. ಹಾಗೇ, ವಿದೇಶಿ ತೈಲ ಕಂಪನಿಗಳನ್ನೊಳಗೊಂಡ ಘಟಕ ವನ್ನು ಸ್ಥಾಪಿಸಲಾಯಿತು. ಇವರಲ್ಲಿ, ಬ್ರಿಟಿಷರ ಆಂಗ್ಲೋ-ಇರಾನಿಯನ್ ತೈಲ ಕಂಪೆನಿ ಮತ್ತು ಹಲವು ಅಮೆರಿಕ ಕಂಪನಿಗಳು ಸೇರಿಕೊಂಡವು. ಈ ಘಟಕದ ಮೂಲಕ ತೈಲ ಉತ್ಪಾದನೆ, ಮಾರಾಟ ಮತ್ತು ಬಂದ ಆದಾಯ ಪರಸ್ಪರ ಹಂಚಿಕೊಳ್ಳುವ ತೀರ್ಮಾನ ಕೈಗೊಳ್ಳಲಾಯಿತು. ಜೊತೆಗೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿಗದಿ ಪಡಿಸುವ ಹಕ್ಕು ಕೂಡ ಈ ಘಟಕಕ್ಕೆ ನೀಡಲಾಯಿತು.

ಈ ಬಗೆಯ ತೀರ್ಮಾನದಿಂದ ನಿರಂತರವಾಗಿ ನಡೆಯಬಹುದಾದ ಸಂಘರ್ಷಕ್ಕೆ ತೆರೆಯೆಳೆಯಲಾಯಿತು. ರಾಜಕೀಯವಾಗಿ ರೇಜ ಶಾಹ ಪುನಃ ಕೇಂದ್ರೀಕೃತ ರಾಜಕೀಯ ಅಧಿಕಾರವನ್ನು ಬಲಪಡಿಸಿದನು. ಹೊಸದಾಗಿ ರಚಿಸಿದ. ರಚನೆ ಹೆಚ್ಚು ಕಡಿಮೆ ನಿರಂಕುಶ ಪ್ರಭುತ್ವವಾಗಿದ್ದು, ಅಮೆರಿಕ ಬೆಂಬಲವನ್ನು ಪಡೆದು ಇರಾನಿಯರ ಆಸಕ್ತಿಗಳನ್ನು ರಕ್ಷಿಸುವ ದೃಷ್ಟಿಯನ್ನು ಇಟ್ಟುಕೊಂಡು, ಆರ್ಥಿಕ ಅಭಿವೃದ್ದಿ ಮತ್ತು ಆಧುನೀಕರಣಕ್ಕೆ ಹೆಚ್ಚು ಮಹತ್ವ ಕೊಡುವುದಾಗಿ ಪುನರುಚ್ಚರಿಸಿತು. ಹೊಸದಾಗಿ ಪುನಾರಚನೆಗೊಂಡ ಮಹಮ್ಮದ್ ರೇಜ ಶಾಹನ ಅಧಿಕಾರವು, ಶಾಸನಬದ್ಧವಾದ ಅರಸೊತ್ತಿಗೆಯಾಗಿ ಮೇಲ್ನೋಟಕ್ಕೆ ತೋರಿ ಬಂದರೂ, ಶಾಹನೇ ಎಲ್ಲ ಅಧಿಕಾರವನ್ನು ಪಡೆದು ತನ್ನ ಏಕಸ್ವಾಮಿತ್ವವನ್ನು ಬಹಿರಂಗಪಡಿಸತೊಡಗಿದನು. ಇರಾನಿ ಸರಕಾರದ ಸೈನ್ಯ, ಪೊಲೀಸ್ ವ್ಯವಸ್ಥೆ, ಗುಪ್ತಚರ ಇಲಾಖೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡನು. ಮಂತ್ರಿಗಳನ್ನು ತಾನೇ ನೇಮಕ ಮಾಡಿಕೊಂಡನು, ಸೆನೆಟ್‌ಗೆ ಅರ್ಧದಷ್ಟು ಸದಸ್ಯರನ್ನು ತಾನೇ ನೇಮಿಸಿ ದನು ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ತನಗೆ ಬೇಕಾದಂತೆ ಅಧಿಕಾರವನ್ನು ದುರುಪಯೋಗ ಮಾಡಿಕೊಂಡನು. ಇರಾನಿನ ರಾಜಕೀಯದಲ್ಲಿ ಅರಸೊತ್ತಿಗೆ ಜೊತೆಗೆ ಒಂದಷ್ಟು ಇಲೈಟ್ ಕ್ಲಾಸನ ಅಧಿಕಾರಿಗಳು, ಭೂಮಾಲೀಕರು, ಶ್ರೀಮಂತ ವ್ಯಾಪಾರಿಗಳು ಮತ್ತು ಒಂದಷ್ಟು ಧಾರ್ಮಿಕ ಮುಖಂಡರು ಗುರುತಿಸಿಕೊಳ್ಳುತ್ತಾರೆ.

ಅಭಿವೃದ್ದಿ ಮತ್ತು ಆಧುನೀಕರಣ ಹೆಸರಲ್ಲಿ ಅರಸೊತ್ತಿಗೆ, ಅಮೆರಿಕದ ನವ ವಸಾಹತೀಕರಣಕ್ಕೆ ಹೆಚ್ಚು ಮಾನ್ಯತೆ ನೀಡಿತು. ಇದನ್ನು ಬಳಸಿಕೊಂಡ ಅಮೆರಿಕನ್ ಕಂಪನಿ ಗಳು, ಬಂಡವಾಳಶಾಹಿಗಳು, ಉದ್ದಿಮೆದಾರರು, ಬ್ಯಾಂಕರ್‌ಗಳು, ಹಣಕಾಸು ಸಂಸ್ಥೆಗಳು, ತರಬೇತಿದಾರರು, ಬೇಹುಗಾರರು, ಸೈನ್ಯಾಧಿಕಾರಿಗಳು ಇರಾನ್‌ನಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡರು. ಬಂಡವಾಳ ಹೂಡಿಕೆ, ತಂತ್ರಜ್ಞಾನ ಮತ್ತು ಯಂತ್ರೋಪಕರಣದ ಆಮದು, ಶಸ್ತ್ರಾಸ್ತ್ರಗಳ ಆಮದು ಇತ್ಯಾದಿ ವಿಚಾರದಲ್ಲಿ ಅಮೆರಿಕ ತನ್ನ ವಸಾಹತುಶಾಹಿ ಪ್ರಭುತ್ವವನ್ನು ವೃದ್ದಿಸಿಕೊಂಡಿತು. ಹೆಚ್ಚು ಕಡಿಮೆ ಇರಾನ್ ಅಮೆರಿಕ ಕೈಗೊಂಬೆಯಾಗಿ ಪರಿವರ್ತನೆಗೊಂಡಿತು. ಮತ್ತು ಅಮೆರಿಕ ತನಗೆ ಬೇಕಾದಂತೆ ವರ್ತಿಸಲು ಇರಾನಿಗೆ ಸಲಹೆ ನೀಡಲಾರಂಭಿಸಿತು. ಅಮೆರಿಕದ ಸಹಯೋಗವನ್ನು ಬಲಪಡಿಸಿಕೊಳ್ಳಲು ೧೯೫೫ರಲ್ಲಿ ಇರಾನ್ ಅಮೆರಿಕ ಕೈಗೊಂಬೆಯಾಗಿ ಪರಿವರ್ತನೆ ಗೊಂಡಿತು.ಮತ್ತು ಅಮೆರಿಕ ತನಗೆ ಬೇಕಾದಂತೆ ವರ್ತಿಸಲು ಇರಾನಿಗೆ ಸಲಹೆ ನೀಡಲಾರಂಭಿಸಿತು. ಅಮೆರಿಕದ ಸಹಯೋಗವನ್ನು ಬಲಪಡಿಸಿಕೊಳ್ಳಲು ೧೯೫೫ರಲ್ಲಿ ಇರಾನ್ ಬಾಗ್ದಾದ್ ಪ್ಯಾಕ್ಟ್ ಮತ್ತು ಸೆಂಟ್ರಲ್ ಟ್ರೀಟಿ ಆರ್ಗನೈಜೇಶನ್‌ಗೆ ಸೇರಿತು. ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮಿತ್ರನೆಂದೇ ಗುರುತಿಸಿಕೊಂಡ ಇಸ್ರೇಲ್ ರಾಜ್ಯದೊಂದಿಗೆ ಇರಾನ್ ಅರಸೊತ್ತಿಗೆ ಹೆಚ್ಚು ಹೆಚ್ಚು ಹತ್ತಿರವಾಯಿತು. ಅಮೆರಿಕದೊಂದಿಗಿನ ಈ ನಿಕಟ ಸಂಪರ್ಕದಿಂದಾಗಿಯೂ, ಇರಾನ್ ಸೋವಿಯತ್ ಒಕ್ಕೂಟದ ಜೊತೆಗೆ ಸಂಬಂಧವನ್ನಿಟ್ಟುಕೊಂಡು ಅಮೆರಿಕದಿಂದ ಭವಿಷ್ಯದಲ್ಲಿ ಬರ ಬಹುದಾದ ರಾಜಕೀಯ ಒತ್ತಡವನ್ನು ಎದುರಿಸಲು ಪೂರ್ವ ತಯಾರಿಯನ್ನೂ ಮಾಡಿ ಕೊಂಡಿತ್ತು.

ಇವೆಲ್ಲವುಗಳ ನಡುವೆ ಇರಾನಿ ಸರಕಾರಿ ಪ್ರಾಯೋಜಕತ್ವದಡಿಯಲ್ಲಿ ಅನುಷ್ಠಾನಗೊಂಡ ಹಲವು ಯೋಜನೆಗಳ ಫಲಿತಾಂಶಗಳು ೧೯೭೦ರ ದಶಕದಲ್ಲಿ ಹೊರಬೀಳಲಾರಂಭಿಸಿದವು. ಅದು ಮುಖ್ಯವಾಗಿ, ೧೯೭೯ರ ಇಸ್ಲಾಮಿಕ್ ಕ್ರಾಂತಿಗೆ ಪೂರಕವಾದ ಅಡಿಪಾಯವನ್ನು ಹಾಕಲು ಪೂರ್ಣ ಸಿದ್ಧತೆಯಾಗಿತ್ತು. ೧೯೫೦ರ ಮತ್ತು ೬೦ರ ದಶಕಗಳಲ್ಲಿ ಇರಾನ್ ಸರಕಾರ ಸೆಕ್ಯುಲರ್ ಮತ್ತು ರಾಷ್ಟ್ರೀಯವಾದಿ ನಿಲುವುಗಳನ್ನು ಪ್ರತಿಪಾದಿಸುತ್ತ ಹಲವು ಸುಧಾರಣೆಗಳನ್ನು, ಅಭಿವೃದ್ದಿ ಹೆಸರಲ್ಲಿ ಕಾರ್ಯರೂಪಕ್ಕೆ ತಂದಿತ್ತು. ಭೂಮಾಲೀಕತ್ವ ರಚನೆ, ಕೈಗಾರಿಕೀಕರಣ, ಸಾಮಾಜಿಕ ರಚನೆ, ಸೈನ್ಯಾಡಳಿತಕ್ಕೆ ಸಂಬಂಧಿಸಿ ತೆಗೆದುಕೊಂಡ ನಿರ್ಧಾರಗಳಿಂದ ಹಲವು ಬಗೆಯ ಬದಲಾವಣೆ ಇರಾನ್ ಸಮಾಜದಲ್ಲಿ ಕಂಡುಬಂತು. ಮತ ಚಲಾವಣೆ ಹಕ್ಕನ್ನು ಮಹಿಳೆಯರಿಗೂ ನೀಡಲಾಗಿದ್ದು, ಸರಕಾರಿ ನೌಕರಿಯನ್ನು ಪಡೆಯಲು ಅವರಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂಡವಾಳಶಾಹಿ ಉತ್ಪಾದನಾ ಕ್ರಮವನ್ನು ಪ್ರೋ ಸಾಹಿತ್ಯ ಮತ್ತು ಆರೋಗ್ಯ ವಲಯದಲ್ಲೂ ಆಧುನಿಕತೆಯ ಪ್ರಭಾವ ಬೀರತೊಡಗಿತು.