ಯಾರೋ ದ್ರುತಗತಿಯಲ್ಲಿ ನುಡಿಸುವ
ಸಿತಾರ್ ವಾದನದ ಸ್ವರ ತುಂತುರಾಗಿದೆ ಈ
ಚಿಕ್ಕೆ ಕಿಕ್ಕಿರಿದಿರುವ ಆಕಾಶ.
ಕಿಡಿಕಿಡಿ ಸಿಡಿದು ವಿಜೃಂಭಿಸಿದೆ
ದೀಪಕರಾಗ ನಭೋ ಭವನದಲಿ
ಪಡಿನುಡಿಯುತ್ತ
ಕೆಳಗೆ ಮಲಗಿದೆ ತಪ್ತ ನೀರವ ಪೃಥುವಿ
ಕನಸು ಕಾಣುತ್ತ.