ಮೂಡುಬೆಳಕಿನ ಹೆಡೆಯ ತೆರೆಯಿತು
ಕೆರಳಿದಿರುಳಿನ ನಾಗರ !
ಕತ್ತಲೆಯ ಕದ ತೆರೆದು ತೋರುವು-
ದಾವ ನೋವಿನ ಸಾಗರ ?
ಯಾವ ಮುಳ್ಳಿನ ಹಾದಿ ತೆರೆವುದೊ,
ಮುಂದಾವ ಭೀತಿಯ ಕಂದರ ?
ಇರುಳ ನೆಮ್ಮದಿ ಹೊದಿಕೆ ಹರಿಯಿತು.
ಈ ಬಾನು ಬೆಂಕಿಯ ಹಂದರ !

ನೂರು ಹದ್ದಿನ ನೆರಳ ನಾಟಕ
ಭಯವ ಬಿತ್ತುವ ಚೀರುಲಿ !
ಕಾವಲಾಗುವ ಬಂದ ಭರವಸೆ
ಕರಗೀತೇತಕೆ ಬಯಲಲಿ ?