ಯಾರು ಕೊಟ್ಟರೋ ಬಾನಿಗೊಂದು ಬಂಗಾರದ ಮೆಡಲು !
ಸಂಜೆ ಬೆಳಕಿನಲಿ ಸಾಲು ಗುಡ್ಡಗಳು
ಅನಂತತೆಯ ತೊದಲು !
ತೆಂಗು ಅಡಕೆಗಳು ಜಿರಾಫೆ ಕೊರಳನು
ಮೇಲಕೆತ್ತಿ ನಿಲಲು,
ಪುಟ್ಟ ಕೈಗಳನು ನಭಕೆ ಚಾಚಿ ಮಗು
ಚಿಕ್ಕೆಗಣ್ಣ ತೆರೆದು !
‘ಚಂದುಮಾಮ ಬಾ’- ಎನುತಿಹುದದೋ
ತನ್ನ ತಾನೆ ಮರೆದು !