ತೂಗಾಡುತ್ತಿವೆ ತೆಂಗಿನ ಮರವೆರಡೂ ಗರಿಗೆದರಿ,
ಎದುರಿನ ದಿನ್ನೆಯ ಮೇಲೆಯೆ ಕೂಗುತ್ತಿದೆ ಒಂಟಿನರಿ !
ನರಿ ಕೂಗಿದರೇನ್, ಗರಿಯಾಡುತ್ತಿವೆ ಮರದಲ್ಲಿ
ನರಿಯನು ನಿರ್ಲಕ್ಷಿಪ ಭಾವದಲಿ
ಮೇಣ್, ಕರ್ತವ್ಯದ ಭಾರದಲಿ !
ನರಿಯೊರಲಿದರೇನ್ ಗರಿಯಾಡದೆ ಹೇಳ್ ಮರದಲ್ಲಿ ?
ನರಿ ಕೂಗುತ್ತಿದೆ ಗರಿಯಾಡುತ್ತಿವೆ ಲೋಕದಲಿ !