ಬಂತೋ ಬಂತು ಚಿರತೆ. ಪಂಜವನೊತ್ತಿ
ಸಂಜೆಯ ಕೊರಳ ಕೆನ್ನೆತ್ತರನು ಹೀರುತ್ತ
ಮಲಗಿದೆ ಕಪ್ಪು ಮೈ ಚಿಕ್ಕೆಗಳ ಹೊಳೆಯಿಸುತ್ತ.
ಮರ-ಗಿಡ ಮನೆ-ಮಠವೆಲ್ಲ ಜೋಲುಮೈ
ಸೋಲುಗಣ್ಣಿನ ಬಾಲ ಮುದುರಿದ ನಾಯಿ ಮಬ್ಬಿನ
ಮೌನ. ನರಿಯೂಳಿಟ್ಟಂತೆ ಕೂ ಎನ್ನುತಿದೆ
ದೂರದ ರೈಲು. ಬೆವರಿ ನಡುಗಿದೆ ಬಯಲು.