ಕಾಣಬಾರದಂತ ಶಿವನ ಕಂಡೇನಮ್ಮ ಎನ್ನ
ಪ್ರಾಣಕಾಂತ ಎನ್ನೊಳಗೆ ಪ್ರಾಣವಮ್ಮ || ಪ ||

ಕಣ್ಣಳ ಕೊನೆಯೊಳಗೆ ಲಿಂಗವಮ್ಮ
ಓ ಸಂಘ ಸುಖವ ಕೂಡಿ ಸಜ್ಜನರ ಸಂಗವಮ್ಮ
ಓಂಕಾರ ಪ್ರಣವ ಮೂಲ ಮಾಡಿತಮ್ಮ
ಒಂದೇ ಭಾವ ಒಂದೇ ಮನಸ್ಸು ಪ್ರಭೆಯೊಳು
ಸೇರಿತಮ್ಮ ಸೇರಿ ಪಂಚಜ್ಞಾನದೊಳಗೆ || ಕಾಣ ||

ಮಲಗಿತಮ್ಮ ಇಳೆಗೆ ಅಂತರಂಗದೊಳೆ ಸರಬನಮ್ಮ
ಗುರುಸರಬನಮ್ಮ ವನಳಪಿತನ ಕರುಣದಿಂದ
ಪಡೆದ ಮೋಕ್ಷವಮ್ಮ || ಕಾಣ ||