ಏನೋ ಒಂದು ಸಂದಿಗ್ಧದಲ್ಲಿ ಹೇಗೋ ಸಾಗುತ್ತಿರುವ
ಕಂಟ್ರಾಕ್ಟು. ನನ್ನ ಪಾಲಿಷ್ಟು, ನಿನ್ನ ಪಾಲಿಷ್ಟು. ಅದ-
ಕ್ಕನುಸಾರವಾಗಿ ಮಾಡಿ ಮುಗಿಸೋಣ ನಮ್ಮ ದಿನ-
ದುದ್ಯೋಗ. ಇದ್ದಷ್ಟು ದಿನ ಹೇಗೋ ಬದುಕಿ
ಒಂದಿರುಳು ‘ಗುಡ್ ಬೈ’ ಎನ್ನುವುದರ ಹೊರತು
ಬೇರೆ ಗುರಿಯೇನಿದೆ? ಈ ಸಿಡಿಮದ್ದಿನುಗ್ರಾಣ-
ದಲ್ಲಿ ಪರಸ್ಪರ ಕಡ್ಡಿಗೀಚುವುದು ಬೇಡ. ಸುತ್ತ
ಹಸಿರು ಹೊಲವಿದೆ. ಮೊಳೆವ ಪೈರಿನ ಮೇಲೆ ಬೆಂಕಿ
ಮಳೆಗರೆದು ಹಾಳುಮಾಡದಿರೋಣ. ಸಾಧ್ಯವಾದಷ್ಟು
ನೀರೆರೆದು ಬೆಳೆದು ಇಬ್ಬರೂ ಮನೆಯಂಗಳದ
ಕಣದಲ್ಲಿ ಬಣವೆ ಒಟ್ಟೋಣ. ತೂರಿಕೊಳ್ಳಲಿ ನಾಳೆ
ಇದರ ಜಳ್ಳು-ಕಾಳುಗಳನ್ನು ಈ ನಮ್ಮ ಮಕ್ಕಳೇ.