ಅಂತರಂಗದಲಿ ಶ್ರೀ ಘನಶ್ಯಾಮೆಯ
ಆದರಿಸೆಲೆ ಮನವೇ.
ನಮ್ಮಿಬ್ಬರ ಹೊರತಿನ್ನಾರೂ ತಿಳಿಯದ
ರೀತಿಯೊಳವಳೆಡೆ ಸಾಗುವೆವೇ !

ಬಯಕೆ ಸಂಕುಲವ ಬಾಗಿಲಾಚೆಗೇ
ನಿಲಿಸಿ ಬಾರೊ ಮನವೇ,
ಏಕಾಂತದಿ ನೀನಾಕೆಯ ಕಾಣಲು,
‘ಓ ತಾಯೀ’ ಎಂತೆನ್ನುವ ರಸನೆಯ
ಜೊತೆಗೆ ಮಾತ್ರ ಕರೆತಾರೋ.

ಕುರುಚಿ, ಕುಮಂತ್ರವ ದೂರ ತಳ್ಳಿ, ನೀ
ಬಾ ನಮ್ಮನು ನೋಡು.
ಜ್ಞಾನ ನಯನವನು ಪಹರೆ ನಿಲಿಸಿ ನೀ
ಒಳಗೆ ಬಂದು ಕೂಡು.