ಹೂವ ಚೆಲ್ಲಾಡುವೆನು ಸದ್ಗುರುವಿನ ಮೇಲೆ
ಕಮಲ ಚೆಲ್ಲಾಡುವೆನು || ಹೂವ ಚೆಲ್ಲಾಡುವೆ
ಹುಟ್ಟಿದ ಕ್ಷಣ ಬಂದು ದೇವನತಿಳಿದಿಹ
ಜೀವನ್ ಮುಕ್ತರ ಮೇಲೆ ಒಳಗೊರಗೆನ್ನದೆ
ಹೊಳೆಯುವ ಜ್ಯೋತಿಯು ಕಳೆಯುಳ್ಳ ಮಹಿಮನ
ತಿಳಿದ ಪ್ರಕಾಶದ ಮೇಲೆ || ಹೂವ || ಕರಣ ಸಂಕಲ್ಪವ
ಕರುಣದಿ ಕಂಡ್ರಿಸಿ ನುಡಿವ ಷಡಾಕ್ಷರಿ ದೃಢಮೂರ್ತಿ
ಗುರುವಿನ ಮೇಲೆ ಮಾನುನಿ ಮೂರುತಿ
ಚಿನ್ಮಯ ರೂಪಿಣಿ ಸು ಸುನ್ಮುನಿ ವಂದಿತ ಲಿಂಗಾಂಬ
ದೇವರ ಮೇಲೆ ಕರಸ್ಥಳಬ್ರಹ್ಮನ ನಿರ್ವಾಣ
ತೀರ್ಥ ವರತತ್ವ ಹೃದಯನ ಪರಮಪ್ರಕಾಶದ ಮೇಲೆ
ಹರಿಹರ ರೂಪಗೆ ಆರೂಢ ದೇವಗೆ ಗುರು
ಸರ್ವೋತ್ತಮಾ ಪ್ರಣವ ಮೂರ್ತಿಯ ಮೇಲೆ
|| ಹೂವ ಚೆಲ್ಲಾಡುವೆನು ||