ಪಲ್ಲವಿ : ಓಂಕಾರ ಮಂತ್ರವು ಸುತ್ತಲೂ ಸುತ್ತುತಿದೆ
ಜೀವರಾಶಿಗಳನು ನಡೆಸುತ ನುಡಿದಿದೆ

ಚರಣ :  ಯಮನ ಕಾಲಕೆ ತಾಳವ ಹಾಕಿದೆ
ಕಾಲ ನಿರ್ಣಯ ತಾನೆ ಮಾಡಿದೆ    

ನನ್ನನು ಗೆಲ್ಲಲು ಅಸದಳ ಎಂದಿದೆ
ಸ್ಥೂಲ ಸೂಕ್ಷ್ಮದಿ ತಾನೇ ಮೆರೆದಿದೆ

ಕೈಗೆ ಕಣ್ಣಿಗೆ ಎಟುಕದೆ ಇರುತಿದೆ
ಗಾತ್ರವು ಬಣ್ಣವು ಇಲ್ಲದೆ ಆಗಿದೆ

ಸಾಧಕರೆಲ್ಲರ ಮನದಲಿ ನಿಂತಿದೆ
ಸಚ್ಚಿದಾನಂದರ ಯೋಗಕೆ ಒಲಿದಿದೆ