ಪಲ್ಲವಿ : ಓಂ ನಮೋ ನಾರಾಯಣ ಕೃಷ್ಣಾ !

ಓಂ ನಮೋ ನಾರಾಯಣ ಕೃಷ್ಣಾ !

ಚರಣ :  ನಂದ ನಂದನಾ ಕೃಷ್ಣಾ ! ರಕ್ಷಕ ನೀನೇ ಕೃಷ್ಣಾ !
ಮೋಕ್ಷದಾಯಕ ನೀನೇ ಮೋಹ ಹರಿಸೋ ಕೃಷ್ಣಾ !    …೧

ನಾರದಾದಿ ವಂದ್ಯ ನಾದಲೋಲ ಕೃಷ್ಣಾ !
ರಾಜೀವಾಕ್ಷ ನೀನೇ ರಾಮಕೃಷ್ಣ ನೀನೇ       …೨

ಯದುವಂಶತಿಲಕ ನೀನೇ ಕೃಷ್ಣಾ ! ಯಮನ ಭಯವ ಬಿಡಿಸೋ
ಣಂ ಬೀಜ ಮಂತ್ರ ನೀನೇ ಜಯವು ನಿನಗೆ ಕೃಷ್ಣಾ !    …೩