ಪಲ್ಲವಿ : ಓಡಬೇಡ ಮುದ್ದುಕೃಷ್ಣ ನಿಂತುಕೊಳ್ಳೋ ಬಾಲಕಷ್ಣ
ಕಾಡ ಬೇಡ ಕಂದ ಕೃಷ್ಣ ಸಚ್ಚಿದಾನಂದಾ

ಚರಣ :  ಅತ್ತ ಇತ್ತ ನೋಡಿ ಬಂದೆ ಸುತ್ತಲಲ್ಲಿ ಎಲ್ಲೂ ಇಲ್ಲ
ಕತ್ತಲಲ್ಲಿ ಮಾಯವಾದೆ ಸಚ್ಚಿದಾನಂದ

ಚಿತ್ತದಲ್ಲಿ ಬಂದು ನಿಲ್ಲು ಮತ್ತೆ ಎಲ್ಲೂ ಹೋಗಬೇಡ
ಇತ್ತೆ ನನ್ನ ಎಲ್ಲವನ್ನು ಸಚ್ಚಿದಾನಂದ

ನಿಷ್ಠೆಯಿಂದ ನಿನ್ನ ನಾಮ ಇಷ್ಟದಿಂದ ಹೇಳುವೆನು
ಕಷ್ಟವೆಲ್ಲ ದೂರಮಾಡು ಸಚ್ಚಿದಾನಂದ

ನಿನ್ನ ಬಿಟ್ಟು ಇರಲಾರೆ ಕೃಷ್ಣ ಕೃಷ್ಣ ಎಂದೆ ನಾನು
ನಿನಗೆ ಜಯವ ಹೇಳುವೆ ಸಚ್ಚಿದಾನಂದ