ಪ್ರಾಚೀನ ದಿನಗಳಲ್ಲಿ ನ್ಯಾಯ ನಿರ್ಣಯ ಪದ್ಧತಿ

ನ್ಯಾಯಾಧೀಶ ತನ್ನ ಕೈಯಲ್ಲಿ ಬಿಳಿ ವಸ್ತ್ರವನ್ನು ಹಿಡಿದುಕೊಂಡು ಸೂರ್ಯನನ್ನು ನೋಡುತ್ತಾ, ಓ ದೇವರೇ, ನಮಗೆ ಸತ್ಯ ಏನು ಹೇಳು ಎನ್ನುತ್ತಾರೆ. ನಂತರ ಬಿಳಿಬಟ್ಟೆ ಶುಭ್ರವಾಗಿಯೇ ಉಳಿದರೆ, ಅವರು ಇದು ಸತ್ಯ ಎಂದು ತಿಳಿಯುತ್ತಾರೆ. ಇದು ಹಳದಿ ಬಣ್ಣಕ್ಕೆ ತಿರುಗಿದರೆ ಇದು ಅರ್ಧ ಸತ್ಯ ಮತ್ತು ಅರ್ಧ ಸುಳ್ಳಾಗಿದೆ ಎಂದು ತಿಳಿಯುತ್ತಾರೆ. ಒಂದು ವೇಳೆ ಕಪ್ಪು ವರ್ಣಕ್ಕೆ ತಿರುಗಿದರೆ ಇದು ಸುಳ್ಳು ಎಂದು ಪರಿಗಣಿಸುತ್ತಾರೆ.

ಮಹಿಳೆಯರಿಗೆ ಸಮಾನವಾದ ಸ್ವಾ ತಂತ್ರ್ಯವಿದೆ. ಅವರು ಸಭೆ ಸಮಾರಂಭ, ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಫಾದರ್ ಲಾವರೆನ್ಸ್‌ರು ತಮ್ಮ ಜನಾಂಗಕ್ಕೆ ಪ್ರಚಾರ ನೀಡಲು ನಮ್ಮ ಸಂಸ್ಕೃತಿಯನ್ನು ಪೋಷಿಸಲು ಬಹಳ ತೊಂದರೆ ತೆಗೆದುಕೊಂಡಿದ್ದಾರೆ. ಅವರಿಗೆ ನಾವು ಋಣಿಯಾಗಿರಬೇಕು ಎಂದು ಸ್ವಾಮಿಗಳು ಹೇಳುತ್ತಾರೆ.

ಪ್ರತಿಯೊಂದು ಕುಟುಂಬದಲ್ಲಿನ ಹೆಣ್ಣು ಮಕ್ಕಳಿಗೆ ಅವರ ಬಾಲ್ಯದಿಂದಲೇ ಕತ್ತಿ, ಚಾಕು ಬಳಸುವುದನ್ನು ಸ್ವರಕ್ಷಣೆ ಮಾಡಿಕೊಳ್ಳುವುದನ್ನು ಕಲಿಸಲಾಗುತ್ತದೆ.

ಇನ್ನೋರ್ವ ಸ್ವಾಮಿ ಶಿವರಾಯರಂ ಸಹ ದೊಂಡು ಪಂತ ಮಹಾರಾಜರಿಂದ ದೀಕ್ಷೆ ಪಡೆದುಕೊಂಡು. ಭಾತ್ರುಗಳ ಮಕ್ಕಳನ್ನು ವಿದೇಶಿಗರು ಹಣ ನೀಡಿ ತೆಗೆದುಕೊಂಡು ಹೋದರು. ಹಲವಾರು ಬಾರಿ ಈ ಭಾತ್ರುಗಳು ತಾವು ಮಾಡಿದ ಸಾಲ ತೀರಿಸಲು ಸಾಧ್ಯವಾಗದಾಗ ತಮ್ಮ ಹೆಣ್ಣು ಮಕ್ಕಳನ್ನು ಮಾರುತ್ತಿದ್ದರು. ಇವರನ್ನು ಕಲ್ಕತ್ತಾ, ಪುಣೆ ಮತ್ತು ಇತರೆ ದೇಶಗಳಿಗೆ ಮಾರಲಾಗುತ್ತಿತ್ತು. ಕೆಲವು ಹೆಣ್ಣು ಮಕ್ಕಳನ್ನು ನೃತ್ಯ ತರಬೇತಿ ನೀಡಿ ನೈಟ್‌ಕ್ಲಬ್‌ಗಳಲ್ಲಿ ನರ್ತಕಿಯರನ್ನಾಗಿಸಿದರು ಎಂದು ಶಿವರಾಮ ಹೇಳುತ್ತಾರೆ.

ಗೋಲುಗುಂಬದ ನಿರ್ಮಾಣ ಕಾರ್ಯ ನಡೆದಾಗ ಭಾತ್ರುಗಳಲ್ಲಿ ಕಲ್ಲುಗಳನ್ನು ತರಲು ಬಳಸುತ್ತಿದ್ದರು. ಈ ನಿರ್ಮಾಣ ಕಾರ್ಯ ಮುಗಿದಾಗ ೯ ಲಕ್ಷ ದೀಪಗಳನ್ನು ಹಚ್ಚಲಾಗುತ್ತಿತ್ತು. ಅದರಿಂದ ಸೋರಿದ ಎಣ್ಣೆಯನ್ನು ಸಂಗ್ರಹಿಸಿ ಮನೆಗೆ ಹಚ್ಚಲಾಗುತ್ತದೆ. ಇದರಿಂದ ಸೋರಿದ ಎಣ್ಣೆಯನ್ನು ಸಂಗ್ರಹಿಸಿ ಬಾಗಿ ಮನೆಗೆ ತಂದು ಕುಡಿಯುತ್ತಿದ್ದರು.

ಭಾತ್ರುಗಳಿಗೆ ಹೆಣ್ಣು ಮಗ ಹುಟ್ಟಿದರೆ ಸಂತೋಷ ಪಡುತ್ತಾರೆ. ಯಾಕೆಂದರೆ ಮದುವೆ ಕಾಲದಲ್ಲಿ ತೆರವನ್ನು ಪಡೆಯುತ್ತಾರೆ. ಆದರೆ, ಪ್ರಸಕ್ತ ವರ್ಗದಲ್ಲಿ ವರದಕ್ಷಿಣೆ ಪದ್ಧತಿ ಪ್ರಾರಂಭವಾಗಿದ್ದರಿಂದ ಗಂಡು ಮಗುವಿಗೆ ಒತ್ತು ನೀಡುತ್ತಾರೆ.

ಇವರಲ್ಲಿಯೂ ವಿಧವೆ, ತಾಳಿ, ಬಳೆಗಳನ್ನು, ನೆಕ್ಲೆಸ್‌, ಕಾಲುಚೈನು, ಉಂಗುರ ಮತ್ತು ಹಣೆಯ ಕುಂಕುಮ ತೆಗೆಯುತ್ತಾರೆ. ಮಹಿಳೆಗೆ ಮಕ್ಕಳಾಗದಿದ್ದರೆ ಬಳಿ ಬಟ್ಟೆಗಳನ್ನು ಧರಿಸಬೇಕು. ವಿಧವೆ ವರ್ಷಕ್ಕೊಮ್ಮೆ ಆಭರಣಗಳನ್ನು ಹಾಕಿಕೊಳ್ಳಬಹುದಾಗಿತ್ತು. ಜ್ವರ ಬಂದರೆ ವಿಭೂತಿ ಹಚ್ಚುತ್ತಿದ್ದರು. ತಲೆನೋವಿಗೆ ಕರಿ ನೋವಿನಸಿನಪು ಮತ್ತು ಲವಂಗವನ್ನು ಮಿಶ್ರಣ ಮಾಡಿ ಮೂಗಿಗೆ ಇಡುತ್ತಿದ್ದರು. ಹೊಟ್ಟೆ ನೋವಿಗೆ ಹಜವಾನ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿಸುತ್ತಾರೆ.

ಚಳಿ ಜ್ವರ ಬಂದರೆ ಶುಂಠಿ ಅರೆದು ಪುಡಿ ಮಾಡಿ ಬಿಸಿ ನೀರಿನಲ್ಲಿ ಹಾಕಿ ಕುಡಿಯುತ್ತಾರೆ. ಗೋರಿಗೆ ಗಾಯವಾಗಿದ್ದರೆ ಗಾಯಕ್ಕೆ ಪುಡಿ ಮಾಡಿ ಕತ್ತಿ ನೀರಿನಲ್ಲಿ ಹಾಕಿ ಕುಡಿಸುತ್ತಾರೆ. ಗಾಗಿರದರ ರಾಜ್ಯವಾಗಿದ್ದರೆ, ಗಾಯಕ್ಕೆ ಕೈ ಕೈಸರನ್ನು ಮೆತ್ತುತ್ತಾರೆ. ಅವರು ಪರಿಣಾಮಕಾರಿಯಾಗುತ್ತದೆ ಎಂದು ಹೇಳುತ್ತಾರೆ.

ಹೆರಿಗೆ ಸಂದರ್ಭದಲ್ಲಿ ಸ್ತ್ರೀಗೆ ಅನಾರೋಗ್ಯ ಉಂಟಾಗುವುದಿಲ್ಲ. ಯಾಕೆಂದರೆ ಹೆರಿಗೆ ಆದ ನಂತರ ಅವಳಿಗೆ ತಣ್ಣೀರು ಸ್ನಾನ ಮಾಡಿಸುತ್ತಾರೆ.

ಇವರು ಬಿಜಾಪುರದಲ್ಲಿ ಮಹಾರಾಷ್ಟ್ರದಲ್ಲಿ ಕರವಾನ, ರೋಕಾಕದಲ್ಲಿ ಕೊಂದಗಲ, ಔರಂಗಬಾದ್, ಗೊವಂಡಾ, ಆಂಧ್ರಪ್ರದೇಶದ ಪೆಂಡಾರಿಗಳು ಮತ್ತು ಡಾಂಡಾಲಿಯಲ್ಲಿ ಇರಾನಿಗಳೆಂದು ಕರೆಯುತ್ತಾರೆ.

ಇವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಲೆದಾಡುತ್ತಾರೆ. ಇವರನ್ನು ಎಲ್ಲರೂ ಕಳ್ಳರೆಂದು ಕರೆಯುತ್ತಾರೆ. ಊರಿಂದ ಊರಿಗೆ ಹೋಗುವಾಗ ಅಲ್ಲಿಯ ಗೌಡ ಇವರು  ಹೊಂದಿದ ವಸ್ತುಗಳ ಪಟ್ಟಿಯನ್ನು ಮಾಡಿರುತ್ತಿದ್ದನು. ಆ ಪಟ್ಟಿಯಲ್ಲಿ ಯಾವುದಾದರೂ ವಸ್ತುಗಳು ಹೆಚ್ಚಾಗಿವೆ ಎಂಬುದನ್ನು ಪರೀಕ್ಷಿಸಿ ಊರಲ್ಲಿ ಪ್ರವೇಶ ನೀಡುತ್ತಿದ್ದರು. ಹೊಳ್ಳುರ, ಮಾಲೀಕ ಮತ್ತು ಹವಾಲ್ದಾರರು ಈ ಪತ್ರವನ್ನು ಪರೀಕ್ಷಿಸುತ್ತಾರೆ. ನಂತರ ಮುಂದಿನ ಊರಿನ ಗೌಡನಿಗೆ ನೀಡುತ್ತಾರೆ. ನಂತರ ಹೊಸ ಗೌಡ ಪತ್ರಕ್ಕೆ ಸಹಿ ಮಾಡುತ್ತಿದ್ದನು. ಈ ಪದ್ಧತಿಯನ್ನು “ಗ್ಯಾನಪಟ್ಟಿ” ಎನ್ನುತ್ತಿದ್ದರು.

೧೦. ಭಾತ್ರುಗಳ ಬಗ್ಗೆ ಸುದ್ದಿ ಪತ್ರಿಕೆಗಳಲ್ಲಿನ ಲೇಖನಗಳು
ಗದಗದ ಕಂಜರಾ ಭಾಟಗರು
, ಹೇಮಲತಾ ದೇಸಯಿ

ಇಂದಿನ ಆಧುನಿಕ ಯುಗದಲ್ಲಿಯೂ ಭಾಟರು ತಮ್ಮದೇ ವಿಶಿಷ್ಟ ಸಂಸ್ಕೃತಿ ಭಾಷೆಯನ್ನು ಹೊಂದಿದ್ದಾರೆ. ಬ್ರಿಟಿಷರು ಇವರನ್ನು ಕ್ರಿಮಿನಲ್‌ಟ್ರೈಬ್‌ಆಕ್ಟ್‌ಪ್ರಕಾರ ಇವರನ್ನು ಕ್ರಿಮಿನಲ್‌ಗಳೆಂದು ಪರಿಗಣಿಸಿ ಬಂಧಿಸಿ ಒಂದು ಪ್ರದೇಶದಲ್ಲಿಟ್ಟು ಸುತ್ತಲೂ ತಂತಿ ಬೇಲಿ ಹಾಕಿ ಕಾವಲಿಟ್ಟಿದ್ದರು.

ಹೇಮಲತಾ ದೇಸಾಯಿಯವರು ತಮ್ಮ ಈ ಲೇಖನದಲ್ಲಿ ಇವರ ಆಚಾರ-ವಿಚಾರ, ಉಡುಗೆ-ತೊಡುಗೆಗಳ ಬಗ್ಗೆ ಚರ್ಚಿಸಿದ್ದಾರೆ. ಇವರ ಸ್ಥಿತಿ-ಗತಿಗಳ ಉಲ್ಲೇಖವು ಇದೆ.

ಇವರಲ್ಲಿಯ ಒಬ್ಬ ವ್ಯಕ್ತಿ ದಿಲರಕಾ ಎಂಬುವವನು ಬರೆದಿಟ್ಟ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುತ್ತಾರೆ. ನ್ಯಾಯ ನಿರ್ಣಯ ವ್ಯವಸ್ಥೆಯನ್ನು ಹೊಂದಿದ್ದಾರೆ. ಇಂದಿಗೂ ಅಪರಾಧಿಗಳನ್ನು ಪರೀಕ್ಷೆಗೆ ಗುರಿಪಡಿಸುತ್ತಾರೆ.

ಕಾಳಿಕಾದೇವಿಯ ಆರಾಧಕರಾದ ಇವರು “ಪಾಲ್ಗುಣ” ಮಾಸದಲ್ಲಿ ರಕ್ತದ ಅಭಿಷೇಕ ಮಾಡುತ್ತಾರೆ. ಇದರ ರಕ್ತವನ್ನು ಸಾರಾಯಿಯೊಂದಿಗೆ ಮಿಶ್ರಣ ಮಾಡಿ ಕುಟುಂಬದ ಯಜಮಾನ ಕುಡಿಯುತ್ತಾನೆ.

ಭಾತ್ರುಗಳನ್ನು ವಿವಿಧ ಕಡೆಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಭಾಟ್ಯಾ, ಸನ್‌ಸಿಯಾ, ಚಾರು, ನಾಟ, ಬಾಂತು ದವರೆ, ಬಡಿಮಿ, ಕಪಾಡಿಯಾ, ಹಬುರಾ, ಬೆಡಕುಟ, ಕಂಜಾರ, ಅಡೋದಿಯಾ, ಲೆಬಲ್ಯಾರ್‌ಮತ್ತು ಮುಖೇರ್‌ಇವರು ತಮ್ಮ ಸ್ವ ಪ್ರಯತ್ನದಿಂದ ಹಲವಾರು ದೇಶಗಳಲ್ಲಿ ಹಾಕಿ ಆಡಿದ್ದಾರೆ.

ಸಂಸ್ಕೃತಿ

ಇವರ ಸಾಂಸ್ಕೃತಿಕ ಶ್ರೀಮಂತಿಕೆಯು ತಲೆ ತಲಾಂತರಗಳಿಂದ ಮುಂದುವರೆದುಕೊಂಡು ಬಂದಿದೆ. ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿ, ಬೆಳಸಿ, ಪೋಷಿಸಿಕೊಂಡು ಮುಂದಿನ ಪೀಳಿಗೆಗೆ ಮುಂದುವರಿಸಿದ್ದಾರೆ.

ತಮ್ಮ ಜನಾಂಗದ ಕಥೆಯನ್ನು ಅತ್ಯಂತ ಉತ್ಸಾಹ, ಹೆಮ್ಮೆ ಮತ್ತು ಭಕ್ತಿಯಿಂದ ಹೇಳುತ್ತಾರೆ. ಅನೇಕ ಕೌಟುಂಬಿಕ ಕಾರಣಗಳಿಂದಾಗಿಯೇ ಅಥವಾ ಸಮುದಾಯದ ದುರಂತಗಳಿಂದಾಗಿ ಇವರ ಸಾಂಸ್ಕೃತಿಕ ಮಾಹಿತಿಗಳು ನಂತರದ ತಲೆಮಾರಿನವರು ಮರೆತು ಬಿಟ್ಟಿದ್ದಾರೆ. ನೈಸರ್ಗಿಕ ವಿಕೋಪಗಳಿಂದಾಗಿ ಜನಾಂಗದ ಮೇಲಿನ ದಬ್ಬಾಳಿಕೆಯಿಂದಾಗಿ ಇವರ ಜೀವನ ಕ್ರಮ ತಪ್ಪಿ ಹೋಗಿದೆ. ಇದರಿಂದಾಗಿ ಇವರ ಸಂಸ್ಕೃತಿ ವೈಪರಿತ್ಯಕ್ಕೀಡಾಗಿದೆ.

ರಾಜಸ್ಥಾನದ ಈ ಭಾತ್ರುಗಳ ಹಲವಾರು ಕಾರಣಗಳಿಂದ ವಿವಿಧ ಕಡೆಗೆ ವಲಸೆ ಹೋಗಿ, ಇತರ ಜನಾಂಗಗಳೊಂದಿಗೆ ಮಿಶ್ರಣಗೊಂಡು ವಿಭಿನ್ನವಾದ ಸಂಪ್ರದಾಯವನ್ನು ಹೊಂದಿದ್ದಾರೆ. ಆದಾಗ್ಯೂ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಇದರಲ್ಲಿ ಮಹಿಳೆಯರು ಸಂಪೂರ್ಣ ಸಹಭಾಗಿತ್ವ ಮತ್ತು ಅಧಿಕಾರವನ್ನು ಹೊಂದಿದ್ದಾರೆ. ಮಹಿಳೆಯರು ತಮ್ಮ ನಾಯಕತ್ವವನ್ನು ಹೆದರಿಕೆ ಇಲ್ಲದೆ ಮತ್ತು ಜವಾಬ್ದಾರಿಯುತವಾಗಿ ನಡೆಸುತ್ತಾರೆ.

ಅವರ ಹಬ್ಬಗಳು

ಹೋಳಿ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಕಾಮಣ್ಣರ ಸುತ್ತಲೂ ಕುಳಿತು ನಂತರ ಕಾಮನನ್ನು ಸುಡುತ್ತಾರೆ.

ಹುಬ್ಬಳ್ಳಿಯಲ್ಲಿ ಈ ಹಬ್ಬ ಆಚರಿಸಲು ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕದ ಇತರ ಕಡೆಗಳಲ್ಲಿ ಭಾತ್ರುಗಳು ಸೇರಿ ೪ ದಿನಗಳ ಕಾಲ ಆಚರಿಸುತ್ತಾರೆ. ಭಜನೆ ಮಾಡುತ್ತಾರೆ. ಸುಮಾರು ೧೦,೦೦೦ ರೂ.ಗಳನ್ನು ಖರ್ಚು ಮಾಡುತ್ತಾರೆ. ಇದಕ್ಕೆ ಎಲ್ಲರಿಂದ ದೇಣಿಗೆ ಸಂಗ್ರಹಿಸುತ್ತಾರೆ. ಮತ್ತು ದಂಡದಿಂದ ಸಂಗ್ರಹಿಸಿದ ಹಣವನ್ನು ಸೇರಿಸುತ್ತಾರೆ. ಈ ಹೋಳಿ ಹುಣ್ಣಿಮೆಯನ್ನು ಮಂಡವ ಎನ್ನುತ್ತಾರೆ.

ಮೊದಲು ನೆಲಕ್ಕೆ ಸೆಗಣಿ ಸಾರಿಸಿ ರಂಗೋಲಿ ಹಾಕಿ ಕಾಳಿಕಾದೇವಿಯ ಚಿತ್ರವನ್ನು ಪ್ರದರ್ಶಿಸುತ್ತಾರೆ. ಮತ್ತು ಅದಕ್ಕೆ ಸುಣ್ಣ, ಅರಿಸಿಣ ಮತ್ತು ೯ ಅಡಿಕೆಗಳು ಜೊತೆಗೆ ಫೋಟೋ ಮತ್ತು ಗುಗ್ಗಳವನ್ನು ಇಡುತ್ತಾರೆ.

ಕುರಿಯ ಕುತ್ತಿಗೆಗೆ ಹಾರ ಹಾಕಿ ಕುಂಕುಮ ಹಚ್ಚಿ ಮತ್ತು ಅದರ ದೇಹಕ್ಕೆ ಸಾರಾಯಿ ಸುರಿಯುತ್ತಾರೆ. ಇದರಿಂದ ಕುರಿ ಮೈನಡುಗಿಸುತ್ತದೆ. ನಂತರ ಇದನ್ನು ಕುಡಿಯುತ್ತಾರೆ. ಈ ಸಮಯದಲ್ಲಿ ಪೂಜಾರಿಯ ಮೈಯಲ್ಲಿ ದೇವರು ಬರುತ್ತದೆ. ಆತ ನಡುಗಲು ಪ್ರಾರಂಭಿಸುತ್ತಾನೆ. ಮತ್ತು ಕುರಿಯ ರಕ್ತ ಕುಡಿಯುತ್ತಾನೆ ಎಂಬ ನಂಬಿಕೆ ಇದೆ. ಕುರಿಯ ತಲೆ ಮತ್ತು ಕಾಲುಗಳನ್ನು ಸ್ವಲ್ಪ ಹೊತ್ತು ದೇವರ ಮುಂದೆ ಇಟ್ಟು ನಂತರ ಅದರ ಅಡುಗೆ ಮಾಡಿ ಎಲ್ಲರೂ ಸೇವಿಸುತ್ತಾರೆ.

ಹಬ್ಬದ ಸಂದರ್ಭದಲ್ಲಿ ಇತರ ಹಲವಾರು ಜನರಲ್ಲಿ ದೇವರು ಬರುತ್ತದೆ. ಇತರರು ತಮ್ಮ ರೋಗ ಅಥವಾ ತಂಟೆಗಳ ಬಗ್ಗೆ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾರೆ.

ಸಂಗೀತ ವಾದ್ಯಗಳು: ಮದುವೆ, ಭಜನೆ ಮುಂತಾದ ಹಬ್ಬಗಳಲ್ಲಿ ಇವರು ಸಂಗೀತ ವಾದ್ಯಗಳನ್ನು ಉಪಯೋಗಿಸುತ್ತಾರೆ. ಅವುಗಳೆಂದರೆ ತಾಳ, ಡೋಲು (ಡ್ರಮ್‌) ಮೃದಂಗ, ಗೆಜ್ಜೆ, ಡೊಲ್ಕಾ, ಗಂಗಾಳ ಮುಂತಾದವುಗಳಾಗಿವೆ.

ಅವರ ಕ್ರೀಡೆಗಳು: ೧) ಚಿತ್‌ಪಟ್ಟಾ (ರಾಜಾರಾಣಿ), ೨) ಗೋಲಿಗುಂಡ, ೩) ಆನೆಕಲ್ಲು, ೪) ರೊಕ್ಕಾ (ಹಣವನ್ನು ಹಾಡುವುದು ತೀರದಾಳದಲ್ಲಿದೆ), ೫) ಕೋವ್‌(ರಾಯಭಾಗದಲ್ಲಿ ಆಡುತ್ತಾರೆ), ೬) ಪ್ರಗುಂಡಿ, ೭) ಹಲಾವಿ ಹಚ್ಚಿ ಮೆರೆನ ಟೋಕೋ, ೮) ಅರಸಿಣ, ಮದರಂಗಿ, ೯) ಕೈ ಕೈ ಗ ಓಡಿಸುವ ಆಟ, ೧೦) ಕವಾಟ (ತೆಂಗಿನ ಕಾಯಿ ಆಟ), ೧೧) ಗುಂಡಾಟ, ೧೨) ಕೋಲಾಟ, ೧೩) ಧಿಮ್ಮಾಯಾ ಆಟ, ೧೪) ಸರಪಳಿ ಆಟ, ೧೫) ಹಗ್ಗದ ಆಟ, ೧೬) ಲಡ್ಡು, ಲಡ್ಡು ತುಂಬಗ, ೧೭) ಮೊಸರಾಟ (ಮೊಸರು ಗಡಿಗಿ).

ಒಗಟುಗಳು: ೧) ಕಂಚ ಕವಡಿ ಕಂಚಲಕಪಾನಿ ಉಸಕಾಮು ದೋತಿ ರಾಣಿ (ಕಾಜಿನ ಬಾವಿ ಅದರ ಹೊಲಸು ನೀರು, ಆದರೂ ಮುಖ ತೊಳೆಯುವವಳು ರಾಣಿ).

೨) ಚಾಂದಕಿ ಊಟ ಉಸಮಾ ದಹಿ ಮಯಿರೆ, ಮಂಗಕಾ ಸೂತ್ರವು ಮಾಯಿರೆ ಮರದ್ದಕಾ ಸಾಹಿ (ಬಂಗಾರ ತುಂಬ ತಾಟು ಮತ್ತು ಅಲ್ಲಿ ಒಳಗಡೆ ಮೊಸರು ನನ್ನ ಮಾಂಗಲ್ಯದಲ್ಲಿ ನನ್ನ ಪತಿಯ ಹೆಸರು).

೩) ಚಲಾತಾತಾ ರಿಕ್ಷ ಉಡತಿತಿದುಲ ಮೆರದಕಾ ಹಾಲಮು ಗುಲಾಬಿಪೂಲ್‌(ರಿಕ್ಷಾ ಹೊರಟಿತ್ತು ಧೂಳ ಎದ್ದಿತು ಆಗ ನನ್ನ ಗೆಳೆಯನ ಮುಖ ಗುಲಾಬಿ ಎಂತಾಗಿತ್ತು).

ಅಂತರ್ ರಾಷ್ಟ್ರೀಯ ವ್ಯಕ್ತಿಗಳು: ಗದಗದ ಮಾಸ್ಟರ್ ಕಬಾಡೆ ತನ್ನ ಮಕ್ಕಳಿಂದಾಗಿ ಪ್ರಪಂಚ ಪ್ರನ್ಸು ಪಡೆದಿದ್ದಾನೆ. ೬೧ ವರ್ಷ ಈತ ೩೧ ವರ್ಷ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದ. ಈತನ ಮಗ ಸಣ್ಣವನಿದ್ದಾಗ ಕಟ್ಟಿಗೆ ಕೈಯಲ್ಲಿ ಹಿಡಿದು ಕಲ್ಲನ್ನು ಚೆಂಟು ಮಾಡಿ ಹೊಡೆಯುತ್ತಿದ್ದ. ನಂತರ ಶಾಲೆಗಳಲ್ಲಿ ಹಾಕಿ ಆಟಗಾರನಾಗಿ ಅಂತರ್ ರಾಷ್ಟ್ರೀಯ ಆಟಗಾರನಾಗಿ ಹಾಲೆಂಡ್‌, ಮಲೇಶಿಯಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಆಡಿದ್ದಾನೆ.

ಭಾರತದ ಎಲ್ಲ ಭಾತ್ರು ಜನಾಂಗ ಮಾಸ್ಟರ್ ಬಾಗಡೆಯವರಿಗೆ ಗೌರವ ನೀಡುತ್ತದೆ. ಇತನನ್ನು ಭಾರತದಾದ್ಯಂತ ಹಲವಾರು ಕಡೆಗಳಲ್ಲಿ ಆಹ್ವಾನಿಸುತ್ತಾರೆ. ಇತನನ್ನು ತಮ್ಮ ಒಳ್ಳೆಯ ಮುಖಂಡನೆಂದು ಒಪ್ಪಿಕೊಂಡಿದ್ದಾರೆ. ಹಾಕಿ ಆಟಗಾರನಾದ ಈತನ ಹಿರಿಯ ಮಗ ರಾಜುವಿಗೆ ಪತ್ರಿಕೆಗಳು ಪ್ರಚಾರವನ್ನು ನೀಡಿವೆ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ರಾಜುವಿನ ಮೇಲೆ ಸಂಶೋಧನೆ ಮಾಡಿದ್ದಾರೆ.

ಸೋಬಾನ ಪದಗಳು: ೧) ಗೋರಿ ಕೊಡ ಗೋರಾ ಆಯಾ, ಪಾನಿ ಆನನೇ ಚಾಲೂಪಾನಿಕೆ, ತಪರೆ, ನಾರೆ, ನಾರೆ ಸೋಬಾರನ (ಓ ಕನ್ನೆಯೇ ಹುಡುಗ ಬಂದಿದ್ದಾನೆ, ನೀರು ತರ ಹೋಗು ಹನಿ ಹನಿ ನೀರು ನನಗಾಗಿ ನಿನಗಾಗಿ).

೨) ಗೋರಿ ಬಚ್ಚಾ ಯೋಮಿಯಾ, ಪಾನಿ ನಲನಿ ಚಾವೊಒಟ್ಟಾರೆ ಟಪಕ ನಾರೆ ನಾರೆ ಸೋಬಾನ (ಓ ಕನ್ನೆ, ನಿನ್ನ ಮಗು ಬೇಕು ನಿನಗೆ ನೀರಿನ ಪೈಪ್‌ಬೇಕಾಗಿದೆಯೇ ನನಗೆ ಸಣ್ಣ, ಸಣ್ಣ ಮಕ್ಕಳು ಬೇಕು, ಸೋಬಾನವೆ).

ಬಾಷೆ ಮತ್ತು ಸಾಹಿತ್ಯ

ಭಾಷೆ: ಕಂಜರಬಾಟ ಸಮುದಾಯದ ಪೂರ್ವಿಕರು ಕಂಜರಬಾಟ ಭಾಷೆಯನ್ನು ಮನೆಯಲ್ಲಿ ಹಾಗೂ ಸಮುದಾಯದಲ್ಲಿ ಬಳಸುತ್ತಾ ಬಂದಿದ್ದಾರೆ. ಇವರು ಮಾತನಾಡುವ ಭಾಷೆ ಅರ್ಥ ಮಾಡಿಕೊಳ್ಳಲು ಬಹಳ ಸುಲಭವಾಗಿದೆ. ಯಾಕೆಂದರೆ ಈ ಭಾಷೆ ಹಿಂದಿಗೆ ಹೋಲುತ್ತದೆ. ಇವರು ಮಾತನಾಡುವ ಶೈಲಿ, ಶಬ್ದ ಇವುಗಳ ಬಳಕೆಯಿಂದ ಇದು ನಮ್ಮ ಭಾಷೆ ಇವರು ನಮ್ಮವರು ಎಂಬುದನ್ನು ಗುರುತಿಸಲು ಸಾಧ್ಯವಾಗಿದೆ. ಕಂಜರಬಾಟರು ತಮ್ಮ ಭಾಷೆಗೆ ಕರ್ನಾಟಕ, ಮಹಾರಾಷ್ಟ್ರದಲ್ಲಿ “ಕಂಜರಬಾಟ ಭಾಷೆ” ಗುಜರಾತದಲ್ಲಿ “ವ್ಯಾರಭಾಷೆ” ರಾಜಸ್ತಾನ ಹಾಗೂ ಉತ್ತರ ಭಾರತದ ಇನ್ನಿತರ ರಾಜ್ಯಗಳಲ್ಲಿ “ಸಾಂಸಿ ಬೋಲಭಾಎ” ಎಂದು ಕರೆಯುತ್ತಾರೆ. ಇದು ಇಂಡೋ ಆರ್ಯನ್‌ಭಾಷಾ ಗುಂಪಿಗೆ ಸೇರುವ ಭಾಷೆ ಆಗಿದೆ. ಈ ಭಾಷೆಗೆ ಲಿಪಿ ಇಲ್ಲ. ಹಾಗೂ ತನ್ನದೇ ಆದ ಸ್ವತಂತ್ರ ಇತಿಹಾಸವೂ ಇಲ್ಲ. ಆಯಾ ರಾಜ್ಯಗಳ ಭಾಷಾ ಪ್ರಭಾವಕ್ಕೆ ಒಳಗಾಗಿ ಅದೊಂದು ಮಿಶ್ರ ಭಾಷೆಯಾಗಿದೆ. ಅನೇಕ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ಅದೊಂದು ಮಿಶ್ರ ಭಾಷೆಯಾಗಿದೆ. ಅನೇಕ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ವಲಸೆ ಬಂದ ಈ ಜನರ ಮೇಲೆ ಉತ್ತರ ಭಾರತದ ಭಾಷೆಗಳ ಪ್ರಭಾವ ಹೆಚ್ಚು ಬಿದ್ದಿದೆ. ಈ ಭಾಷೆಯಲ್ಲಿ ಹಿಂದಿ ಭಾಷೆಯ ಬಳಕೆ ಹೆಚ್ಚಿನ ಪ್ರಮಾಣ ಕಂಡುಬರುತ್ತದೆ. ಶತ ಶತಮಾನಗಳಿಂದ ಮೌಖಿಕ ರೂಪದಲ್ಲಿಯೇ ಈ ಭಾಷೆ ಉಳಿದಿದೆ. ಆಯಾ ಪ್ರಾಂತಿಯ ಭಾಷೆಗಳ ಲಿಪಿಯಲ್ಲಿಯೇ ಅವರ ಸಾಹಿತ್ಯ ನಿರ್ಮಾಣವಾಗಿದೆ. ಅನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗಿದ್ದರೂ ತನ್ನದೇ ಆದ ವಿಶಿಷ್ಟ ಶಬ್ದ ಸಂಪತ್ತನ್ನು ಉಳಿಸಿಕೊಂಡಿದೆ.

ಆರ್ಯ ಪರಿವಾರ ಹಿಂದಿ ಭಾಷೆಯ ಉಪಭಾಷೆಗಳಾದ “ಮಾರವಾಡಿ” (ರಾಜಸ್ತಾನಿ) ಹಾಗೂ ಮಧ್ಯಪ್ರದೇಶ “ಮಾಳವಿ” ಭಾಷೆಗಳೊಂದಿಗೆ ಹೆಚ್ಚಾಗಿ ಹೋಲುತ್ತದೆ. ಧ್ವನಿ ಶಬ್ದಗಳ ಉಚ್ಚಾರಣೆ ಸಾಹಿತ್ಯದ ಹಿನ್ನೆಲೆ ಇವುಗಳೊಡನೆ ಉತ್ತರ ಭಾರತದ ಭಾಷೆಗಳಿಗೆ ಇವರ ಭಾಷೆ ಹೋಲುತ್ತದೆ. ರಾಜಸ್ತಾನಿ, ಗುಜರಾತಿ, ಹಿಂದಿ, ಮರಾಠಿ, ಲಂಬಾಣಿ, ಪಂಜಾಬಿ ಮುಂತಾದ ಭಾಷೆಗಳೊಂದಿಗೆ ನಿಕಟ ಸಂಬಂಧ ಕಂಡುಬರುತ್ತದೆ. ಪ್ರಾಂತೀಯ ಭಾಷೆ ಮಾತನಾಡಿದರೂ ಸಹ ಇವರು ತಮ್ಮ ಭಾಷೆಯ ಸ್ವತಂತ್ರತೆಯ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ಭಾರತದ ಯಾವುದೇ ಪ್ರದೇಶಗಳಲ್ಲಿ ವಾಸಿಸುವ ಈ ಸಮಾಜದವರು ಪರಸ್ಪರ ಮಾತನಾಡುವಾಗ ಇವರು ಇದೇ ಸಮಾಜದವರು ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಂದು ಸಮಾಜದಲ್ಲಿ ಭಾಷೆ ತನ್ನ ಸ್ಥಾನಮಾನವನ್ನು ಕಾಯ್ದುಕೊಂಡಿದೆ. ಸಮುದಾಯದ ಭಾಷೆ ಗುರುತಿಸುವುದು ಸಮುದಾಯದ ಸಂಸ್ಕೃತಿಯ ಮೊದಲನೆಯ ಮೆಟ್ಟಿಲು. ಆದ ಕಾರಣ ಭಾಷೆಯನ್ನು ಗುರುತಿಸುವುದು ಅತೀ ಅವಶ್ಯ ಇದೆ.

ಕಂಜರಭಾಟರು ಮನೆಯಲ್ಲಿ ಸಮುದಾಯದಲ್ಲಿ ತಮ್ಮದೇ ಆದ ಕಂಜರಭಾಟ ಭಾಷೆಯನ್ನು ಮಾತನಾಡುತ್ತಾರೆ. ಮಗು ಹುಟ್ಟಿದ ಕೂಡಲೇ ತನ್ನ ತಾಯಿಯ ಜೊತೆಗೆ “ಕಂಜರಭಾಟ ಭಾಷೆ” ಮೊದಲು ಮಾತನಾಡುತ್ತಾರೆ. ಆದ ಕಾರಣ ಇವರ ಮಾತೃಭಾಷೆ “ಕಂಜರಭಾಟ ಭಾಷೆ”.

ಕಂಜರಭಾಟ ಸಮಾಜದವರು ಬಳಸುವ ಶಬ್ದಗಳು

ಕೈ ಹಾತ
ಕಾಲು ಪಾಂವ
ಕಣ್ಣು ಆಂಖಿ
ಹೊಟ್ಟೆ ಪೇಟ್‌
ತಲೆ ಸೀರ
ಮೂಗು ನಾಕ
ಹಲ್ಲು ದಾಂತ
ನಾಲಿಗೆ ಜೀಬ
ಕೂದಲು ಬಾಳ
ಹುಡುಗ ಘೋರು
ಹುಡಿಗೆ ಫೋರಿ
ತಂದೆ ಬಾಪ
ತಾಯಿ ಮಾ
ಅಣ್ಣ-ತಮ್ಮ ಬಾಯಿ
ಅಕ್ಕ-ತಂಗಿ ಭಾಣ
ಅಜ್ಜ ದಾದಾ
ಅಜ್ಜಿ ದಾದಿ
ಚಿಕ್ಕಪ್ಪ ಕಕ್ಕಾ
ಚಿಕ್ಕಮ್ಮ ಕಾಕ್ಕಿ
ಮನೆ ಘರ
ನೀರು ಪಾಣಿ
ಊಠ ಖಾಣಾ
ಮಗ ಬೇಟಾ
ಮಗಳು ಬೇಟಿ
ಮದುಮಗ ಬನಡಾ
ಮದುಮಗಳ ಬನಡಿ
ರೂಪಾಯಿ ರಪಿಯಾ
ದುಡ್ಡು ಪೈಸೆ
ಅಂಗಡಿ ದುಕಾನ
ಗಾಡಿ ಗಾಡಿ
ಸೆರೆ ದಾರು
ಗುಡ್ಡ ಗುಂಡರ
ನದಿ ನಂದಿ
ಕೆರೆ ತಳಾವ
ಹೊಲ ಖೇತ
ಸಮುದ್ರ ಸಮುಂದ್ರ
ಊರು ಗಾಂವ
ಹಳ್ಳಿ ಖೇಡಾ
ಓಣಿ ಪೇಡು
ಅರಮನೆ ರಾಜವಾಡು
ಗಂಡಸು ಆದಮಿ
ಹೆಂಗಸು ಬಾಯರ
ಗಂಡ ಬಾಂತು
ಹೆಂಡತಿ ಭತಾಣಿ ಭಯರ
ಆಕಳು ಗಾಯ
ಹಂದಿ ಸುರ
ಇಲಿ ಮೂಸಾ
ತಗಣಿ ಖಟಮಲ್‌
ಚಿಗರೆ ಹರಣ
ಕಾಗೆ ಕಾಗ
ಹದ್ದು ಟೀಲ್‌
ಗಿಳಿ ಮೂಪಟ

ಕಂಜರಬಾಟ ಭಾಷೆಯ ಕೆಲ ವಾಕ್ಯಗಳು

ನಿನ್ನ ಹೆಸರೇನು ತೇರಾ ನಾಮ ಕ್ಯಾ
ನನ್ನ ಹೆಸರು ರಾಮಸಿಂಗ್‌ ಮೇರಾ ನಾಮ ರಾಮಸಿಂಗ್‌
ನಿಮ್ಮ ಮನೆಯಲ್ಲಿ ಎಷ್ಟು ಜನರಿದ್ದಾರೆ ಥೇರಾ ಘರಮೆ ಕಿತಣಿ ಆದಮಿ ಹೈ
ನಿನ್ನ ಮನೆ ಎಲ್ಲಿದೆ ತೇರಾ ಗಾಂವ ಕಿದರ್ ಹೈ
ಏನು ಕೆಲಸ ಮಾಡುತ್ತಿ ಕ್ಯಾ ಕ್ಯಾಮ್‌ಕರತಾ
ತಂದೆ ಹೆಸರೇನು ಬಾಪಕಾ ನಾಮ್‌ಕ್ಯಾ
ತಾಯಿಯ ಹೆಸರೇನು ಮಾ ಕಾ ನಾಮ್‌ಕ್ಯಾ
ಅವರು ಎಲ್ಲಿ ಹೋದರು ಜೋ ಲೋಗ ಕಿದರ್‌ಗಯೇ
ಅವರು ಎಷ್ಟು ಜನರಿದ್ದರು ಜೋ ಲೋಗ ಕಿತನಿ ಆದ್ಮಿತೆ
ನಿನಗೆ ಹಾಡು ಹಾಡಲು ಬರುತ್ತದೆಯೇ ತುಮ್‌ಕೊ ಗಾನಾ ಆತ ಕ್ಯಾ
ಹುಡಗ ಹುಡುಗಿ ಏನು ಮಾಡುತ್ತಾರೆ ಪೋರಾ ಪೋರಿ ಕ್ಯಾ ಕರತೆ
ಬಸ್ಸಿನಲ್ಲಿ ಹೋಗುತ್ತಿ ಏನು ಬಸ್ಸ್‌ಮೆ ಜಾಯೇಗಾ ಕ್ಯಾ
ಹೂವು ತೆಗೆದುಕೊಂಡು ಬಾ ಫೂಲ್‌ಲೇಕರ್‌ಆವ್‌
ನೀನು ಯಾವ ಆಟ ಆಡುತ್ತಿ ತುಂಕೋನ್‌ಸಾ ಖೇಲ್‌ಖೇಲೆಗಾ
ಯಾವ ಊರಿನ ಸರಪಂಚ ಕೋನ್‌ಸಾ ಗಾಂವಕಾ ಸರಪಂಚ
ಹೊಲದಲ್ಲಿ ಏನು ಬಿತ್ತೀರಿ ಖೇತ್‌ಮೆ ಕ್ಯಾ ಪೆರೋಡಾ
ನಾನು ಮತ್ತು ನೀನ್ನ ಹೆಂಡತಿ ಸೇರಿ ನಾಳೆ ಊರಿಗೆ ಹೋಗುತ್ತೇವೆ ಹುಂ ಜೋರ ಮೇರಿ ಬಯರ  ಮಿಲಕರ್‌ದೌತಗಾಂವ ಜಾಯಂತೆ
ಶಾಲಾ ಮಕ್ಕಳು ಗುರುಗಳೊಂದಿಗೆ ಮಕ್ಕಳ ಸಿನಿಮಾ ನೋಡಲು ಹೋದರು ಶಾಳಿಕೆ ಟಾಬರ ಗುರುಜಿಯಾಕೆ ಸಾತ ಟಾಬರ್ ಕಿ ಸಿನಿಮಾ ದೇಕನಾಗಯೇ.
ಸೀತಾ-ಗೀತಾ ಹೋದಲ್ಲಿ ಕೆಲಸ ಮಾಡಿ ಸಂಬಳ ತರುತ್ತಾರೆ ಸೀತ-ಗೀತಾ ಖೇತ್‌ಮೇ ಕಾಮ್‌ಕರಕೆ  ಪಗಾರ್‌ಲಾತಾಹೈ

ಕಂಜರಭಾಟ ಭಾಷೆಯಲ್ಲಿ ಗುಪ್ತ (ಪಾಸ್ಮಿ) ಭಾಷೆ

 

ಕನ್ನಡ ಭಾಷೆ ಕಂಜರಭಾಟ ಭಾಷೆ ಕಂಜರಭಾಟ ಗುಪ್ತ
ಹುಡುಗ ಫೋರಿ ಚುಬಕಾ
ಹುಡುಗಿ ಫೋರಿ ಚಾಬಕಿ
ಪೊಲೀಸ್‌ ಪೊಲೀಸ್‌ ಚಿವಡಿ
ಸುಮ್ಮಾನಿರು ಗ(ಗ)ತೆ ಟವಾರವಗ
ಕಲ್ಲು ಪತ್ತರ ವತ್ತರ
ಹೋದಲ್ಲಿ ಬೇತ್ತಾಮ ರೇಥ್ದಾಮ
ಮನೆಘರ ಖೌಲ್ಲಾ
ದುಡ್ಡು ಪೈಸೆ ಡೋಬಳೆ
ಒಂದು ಏಕ ದೇಕ
ಎರಡು ದೋ ಧೋರ
ಎಂಟು ಆಠ ಕೌಠ
ಹತ್ತು ದಸ್‌ ಖಸ
ಇಪ್ಪತ್ತು ಬೀಸ್‌ ಖಬೀಸ್‌
ಮೂವತ್ತು ತೀಸ್‌ ಖತೀಸ್‌
ನಲ್ವತ್ತು ಚಾಳಿಸ್‌ ನಾಳಿಸ
ಐವತ್ತು ಪಜಾಸ ನಚಾಸ
ನೂರು ಸೌ ನ್ಲವ
ಕಣ್ಣು ಆಂಖೆ ಕೌಂಖ
ಕೈ ಹಾಥ ಖೌತ
ಹೊಟ್ಟೆ ಪೇಟ್‌ ನೇಟ್‌
ಮುಂಜಾನೆ ಸವೆರೆ ನ್ಹವೇರ

ಹಾಡು

ಕಂಜರಭಾಟ ಸಮಾಜದಲ್ಲಿ ಇಂಪಾಗಿ ಹಾಡುವ ಗಾಯಕರಿದ್ದಾರೆ. ಪೂಜೆ ಲಗ್ನದಲ್ಲಿ, ಹೋಳಿ ಹುಣ್ಣಿಮೆ, ಪೂಜಾ ಸಮಾರಂಭಗಳಲ್ಲಿ ಒಳ್ಳೆ ತಾಳಬದ್ಧವಾಗಿ ಹಾಡುತ್ತಾರೆ. ಪ್ರಮುಖ ಗಾಯಕನು ಮೊದಲು ಹಾಡುತ್ತಾನೆ. ನಂತರ ಇನ್ನುಳಿದವರು ಹಿಂದೆ ಹಾಡುತ್ತಾರೆ. ಹಾಡು ಹಾಡುವಾಗ ಮುರಸುಗ ತಬಲಾ ಡೋಲಕ, ತಾಳ ಮುಂತಾದ ವಾದ್ಯಗಳನ್ನು ಉಪಯೋಗಿಸುತ್ತಾರೆ. ಇವರ ನೃತ್ಯ ಹಾಡು ವಾದ್ಯ ಬಾರಿಸುವುದು ಅತ್ಯಂತ ಪ್ರಿಯವಾಗಿವೆ. ಇವರಿಗೆ ಪ್ರೋತ್ಸಾಹ ದೊರೆಯದ ಕಾರಣ ಇವರು ಮುಂದುವರೆಯಲಿಲ್ಲ.

ಹೋಳಿ ಹಬ್ಬದ ಹಾಡು

೧.       ಮೈನಾ ಪಾಗಳಕೊ ಬಾಲಮಡಾ ಥಾರಿ ಹೋಳಿ ಆವರೆ
ಹೋಳಿ ಆವರೆ ಘರಕಿ ಘೋಳೂ ಆವರೆ… ಮೈನಾ ಪಾಗಳಕೋ
ಹಸಲ ಘಡಾವಣವಾಳೊ ಮಾರವಾಡ ಮೆ ಡೋಲೊರೆ
ಮೊ ಚುಕಾವಣವಾಳೊ ಥಳಿಯಾ ಉಟುರ್…. ಮೈನಾ ಪಾಗಲಕೊ
ಬಡೋಡಿ ಕಹರ ಮನ ಕೇವಟ ಘಡಾಯಿ ದೊ
ಛೋಟಿ ತೊ ಕಹರ ಮ್ಹಾರೊ ಜೀವ ಜಳೋರೆ…. ಮೈನಾ ಪಾಗಳ ಕೊ

೩.       ಶ್ರೀಯಾ ರಾಮಣ ಲಚ್ಚಮಣ ದೋಯ ಭಾಯರೆ ಶ್ರೀರಾಮಣ
ಶ್ರೀಯಾ ರಾಮಣ ಲಚ್ಚಮಣ ದೋಯ ಭಾಯರೆ
ಶ್ರೀರಾಮಣ…. ಶ್ರೀಯಾರಾಮಣ
ರಾಮರೆ ಲಚ್ಚಮಣ ದೋನೋರೆ ಭಾಯಿ
ರಾಮರೆ ಲಚ್ಚಮಣ ದೋನೋರೆ ಭಾಯಿ
ಭಾಥುಸೆ ಬಾಥ ಮಿಲಿಕೆ ಜೋಡಿರೆ ಶ್ರೀಯಾರಾಮಣ….. ಶ್ರೀಯಾ ರಾಮಣ
ರುಭಜರ ಪಕಡಕರ ಮಿಲಿಂಗೆ ದೋನೋ ಭಾಯಿ
ಭುಜರ ಪಕಡಕರ ಮಿಲಿಂಗೆ ದೋನೋ ಭಾಯಿ
ಭಬಾಥುಸೆ ಭಾಥ ಮಿಲಿಕಿ ಜೋಡಿಕಿ ಶ್ರೀಯಾರಾಮಣ…. ಶ್ರೀಯಾ ರಾಮಣ

ಮದುವೆ

೬        ಏ ಬನೆ ಬನೆಯಾ ಬಲೋಕಿ ನಡಲೋಯಾ
ಬಲೋಯಾ ಬಲೋರೆ ಮೋರೆ ಸರಿಯಾ
ಆರೆ-ಮ್ಹಾರೆ ಕಂಗೇ ಪಯರೆ ಬನಡೋಯಾ…. ಬತೋಯಾ ಬಲೋಸೆ….
ಏ ಉದಿಯಾ ಪಾರ ರಖೋರೆ ಸಚ ಮೋತಿಯಾ
ಬಲೋಯಾ ಬಲೋರೆ ಮೊರೆ ಸಂಯಾ…. ಏಬನೆ ಬನೆಯಾ
ಬನೇಕಾ ತೋ ಸೇಲಾ ಗಿರದ ಕರ ಲಾಯಿ
ಬನಾ ಮುಸರೆ ಖೋಲೋ ಲಡಿಕಾ ದಿಲ್‌ಖೋತೊ…. ಏಬನೆ
ಬನೆಯಾ
ಬನೆಕಿ ತೋ ಹಲದಿ ರುಮಾಲವಸೆ ಝಡಕತಿ
ಬನಾ ಮುಸಕಿ ಖೋಲೋ ಲಡಿಕಾ ದಿರ್ಲ ಬೋಲೋ… ಏಬನೆ ಬನೆಯಾ

 

ಸಾಮಾಜಿಕ ಗೀತೆ

೯        ಸಜನಾ ಹಮಸೆ ಕಂಗವಾ ಲಾದೇ
ಉಲಝ ಹಮಾರೆ ಬಾಲಾ ಕೀ ಸಂಯಾ ಉಲಝ ಹಮಾರೆ ಬಾ ಲಾರೆ
ಗಾಡಿ ಹೋ ತೇರಿ ರಂಗ ರಂಗೇಲ
ಪೈಯಾ ಲಾಲ ಗುಲಾಲರೇ
ಹಾಕ ಬೈರನೆ ವಾಲೆ ಫಾಲ ಛಬೀಲೆ
ಬೈಠ ವಾಲೆ ಜೋಡಿದಾರಕೀ…. ಸಜನಾ ಹಮಸೆ….

 

ಸಮುದಾಯ ಪ್ರದರ್ಶಕ ಕಲೆಗಳು

ಜನಪದ ಕಲೆಗಳಲ್ಲಿ ನೃತ್ಯ, ಸಂಗೀತ, ಶಿಲ್ಪ ಕಲೆ ಚಿತ್ರ ಹಾಡುವುದು ಮುಖ್ಯವಾಗಿರುತ್ತದೆ. ಈ ಕಲೆಗಳು ಜನಾಂಗದ ಜೀವನಾಡಿ ಇದ್ದಂತೆ. ಪ್ರತಿಯೊಂದು ಸಮುದಾಯ ತನ್ನದೇ ಆದ ರೀತಿಯಲ್ಲಿ ಕಲೆಗಳನ್ನು ಪ್ರದರ್ಶಿಸುತ್ತ ಬಂದಿದೆ. ಧಾರ್ಮಿಕ ಹಿನ್ನೆಲೆಯಲ್ಲಾಗಲಿ, ಮನರಂಜನೆಯ ಮುಖಾಂತರ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕಂಜರಭಾಟರು ಕುಣಿತ, ಹಾಡುವುದು, ಸಂಗೀತದಲ್ಲಿ ನಿಪುಣರಾಗಿದ್ದಾರೆ.

ನೃತ್ಯ: ಇವರ ನೃತ್ಯವನ್ನು ನೋಡಿದರೆ ಪುರಾತನ ಕಾಲದ ನೆನಪು ಬರುತ್ತೆ. ನೃತ್ಯವೆಂದರೆ ಇವರಿಗೆ ಬಲು ಇಷ್ಟ. ವಾದ್ಯಗಳ ತಾಳದೊಂದಿಗೆ ತಾಳಬದ್ಧವಾಗಿ ಕುಣಿಯುತ್ತಾರೆ. ಗುಂಪು ಕುಣಿತದಲ್ಲಿ ಅವರ ವೇಷಭೂಷಣಗಳು ಬಹು ಆಕರ್ಷಣಿಯವಾಗಿರುತ್ತದೆ. ಬಣ್ಣ-ಬಣ್ಣದ ಬಟ್ಟೆಗಳನ್ನು ಧರಿಸಿ ಕುಣಿಯುತ್ತಾರೆ. ನೃತ್ಯ ಇವರಿಗೆ ಒಲಿದ ಕಲೆಯಾಗಿದೆ. ನೃತ್ಯಕ್ಕಾಗಿ ಪೂರ್ವದಿಂದಲೂ ಡೋಲಕ ಉಪಯೋಗಿಸುತ್ತಾ ಬಂದಿದ್ದಾರೆ. ಈಗಲೂ ಡೋಲಕ ವಾದ್ಯವನ್ನು ಉಪಯೋಗಿಸಿ ನೃತ್ಯ ಕಲಿಸುತ್ತಾರೆ. ಪ್ರತಿಯೊಂದು ಊರಿನಲ್ಲಿ ಈ ಜನ ಕುಣಿಯುವುದು, ಹಾಡುವುದು ರೂಢಿ ಇಟ್ಟುಕೊಂಡಿದ್ದಾರೆ. ಹೆಣ್ಣು ಮಕ್ಕಳು ಗುಂಪು ನೃತ್ಯಗಳಲ್ಲಿ ಎತ್ತಿದ ಕೈ. ಹೋಳಿ ಹಬ್ಬದಲ್ಲಿ ಮದುವೆಯ ಸಮಯಕ್ಕೆ ನೃತ್ಯ ಮಾಡುತ್ತಾರೆ. ಭರತ ನಾಟ್ಯವನ್ನು ಯಾವ ತರಬೇತಿ ಇಲ್ಲದೇ ಮಾಡುತ್ತಾರೆ. ಕಂಜರಭಾಟರು ಕೋಲಾಟ ಕುಣಿತದಲ್ಲಿ ಯುವಕರು-ಯುವತಿಯರು ಸೇರಿ ಕುಣಿಯುತ್ತಾರೆ. ಸಂಗೀತದಲ್ಲಿ ಕೋಲಾಟ ಕುಣಿತ ಮಾಡುವುದರಲ್ಲಿ ಪ್ರಮುಖವಾಗಿ ಕಂಡು ಬರುತ್ತದೆ. ಕೋಲಾಟದಲ್ಲಿ ಯುವತಿಯರು ಲಂಗಾ, ಜಂಪರ, ಓಡಣಿಯನ್ನು ಉಪಯೋಗಿಸುತ್ತಾರೆ. ಭಜನೆಯ ಹಾಡುಗಳನ್ನು ಹಾಡುತ್ತಾರೆ. ಇವರು ದೈವ ಭಕ್ತರು. ದೇವರನ್ನು ಒಲಿಸುವುದರ ಸಲುವಾಗಿ ತಮ್ಮದೇ ಆದ ರೀತಿಯಲ್ಲಿ ಭಜನೆಯ ಹಾಡುಗಳನ್ನು ಹಾಡುತ್ತಾರೆ. ಢೋಲಕ, ಮೃದಂಗ, ತಬಲಾ ಬಾರಿಸುವುದರಲ್ಲಿ ಈ ಜನರಿಗೆ ಒಳ್ಳೇ ಸ್ಥಾನವಿದೆ. ಗಂಡಸರು ಈ ವಾದ್ಯಗಳನ್ನು ನುಡಿಸುತ್ತಾರೆ.

ರಂಗೋಲಿ ಕಸೂತಿ ಇವು ಹೆಣ್ಣುಮಕ್ಕಳ ಅತ್ಯಂತ ಪ್ರಿಯ ಕಲೆಗಳು. ಮನೆಯ ಅಂಗಳ, ದೇವಸ್ಥಾನ ಅಂಗಳ ಮುಂತಾದ ಕಡೆ ಬಣ್ಣದಿಂದ ಆಕರ್ಷಣೀಯ ರಂಗೋಲಿ ಹಾಕುತ್ತಾರೆ. ಹಬ್ಬಗಳಲ್ಲಿ ಅಥವಾ ಯಾವುದಾದರೂ ಶುಭ ದಿನವಿದ್ದಾಗ ರಂಗೋಲಿ ಹಾಕುವುದು ಕಂಡು ಬರುತ್ತದೆ. ಕಸೂತಿ ಮಹಿಳೆಯರು ಹಾಕುತ್ತಾರೆ. ಕಂಜರಭಾಟ ಸಮುದಾಯದ ಮಹಿಳೆಯರು ದಾರದ ಎಳೆಗಳಿಂದ ಕಸೂತಿ ಹಾಕುತ್ತಾರೆ. ಬಣ್ಣ-ಬಣ್ಣದ ದಾರಗಳನ್ನು ಉಪಯೋಗಿಸುತ್ತಾರೆ. ಬಟ್ಟೆಗಳ ಮೇಲೆ ನಾನಾ ರೀತಿಯ ಚಿತ್ರಗಳನ್ನು ತೆಗೆದು ಅದರಲ್ಲಿ ದಾರದ ಎಳೆಗಳಿಂದ ತುಂಬಿಸುತ್ತಾರೆ. ಈ ರೀತಿ ಈ ಜನ ಕಲೆಗಳಲ್ಲಿ ನಿಪುಣರಾಗಿದ್ದು, ಯಾವ ಪ್ರೋತ್ಸಾಹ ದೊರೆಯದ ಕಾರಣ ಈ ಕಲೆಗಳಲ್ಲಿ ಮುಂದುವರೆಯಲು ಸಾಧ್ಯವಾಗಿಲ್ಲ.

 

ಆಧುನಿಕತೆಯ ಪರಿಣಾಮಗಳು ಬದಲಾವಣೆಯ ಸ್ವರೂಪ

ಮಾನವ ಹುಟ್ಟಿದ ಮೇಲೆ ತನ್ನ ಸಮಾಜಕ್ಕೆ ಹೊಂದಿಕೊಂಡು ಜೀವನ ಸಾಗಿಸುತ್ತಾನೆ. ಹೊರಗಿನ ಪರಿಸರಕ್ಕೆ ಹೊಂದಿಕೊಂಡು ಬದಲಾವಣೆ ಹೊಂದುತ್ತಾನೆ. ಈ ಜನ ಅಲೆಮಾರಿಗಳು ಕತ್ತೆ-ಕುದುರೆಗಳ ಮೇಲೆ ತಮ್ಮ ಜೀವನಕ್ಕೆ ಬೇಕಾಗುವ ಜೀವನೋಪಾಯದ ಸಾಮಗ್ರಿಗಳನ್ನು ಹೇರಿಕೊಂಡು ಹಳ್ಳಿ ಹಳ್ಳಿ ಸಂಚರಿಸಿ ಜೀವನ ಸಾಗಿಸುವ ಒಂದು ಸಮುದಾಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಯಾವ ಅಭಿವೃದ್ಧಿ ಕಾಣದೆ ಬಡತನದಲ್ಲಿಯೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಇಂಥ ಜನಾಂಗಗಳ ಬಗೆಗೆ ಗಮನ ಕೊಡದ ಕಾರಣ ಪ್ರತಿಯೊಂದರಲ್ಲಿಯೂ ಹಿಂದುಳಿದಿದ್ದಾರೆ.

ಈ ಸಮಾಜದಲ್ಲಿರುವ ಸಮಸ್ಯೆಗಳನ್ನು ಸಮಾಜದವರೇ ಸೇರಿಕೊಂಡು ಅವುಗಳ ಪರಿಹಾರ ಕಂಡು ಹಿಡಿಯಬೇಕು. ಸಮಾಜದ ಲಗ್ನ, ನ್ಯಾಯ, ಮುಖಂಡತ್ವ, ಧಾರ್ಮಿಕ ಕಾರ್ಯಗಳು ಬಂದಾಗ ಸಮುದಾಯದಲ್ಲಿ ಸಮಸ್ಯೆಗಳು ಉದ್ಬವವಾಗುವವು. ಅವುಗಳನ್ನು ಸಮಾಜದ ಹಿರಿಯರೇ ಕೂಡಿ ಅವುಗಳ ಪರಿಹಾರ ಮಾರ್ಗವನ್ನು ಹುಡುಕಿ ಯಾರಿಗೂ ಯಾವ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಕುಂಜರಭಾಟ ಜನಾಂಗ ತಮ್ಮ ಸಮಸ್ಯೆಗಳನ್ನು ಹಿರಿಯರ ಮುಂದಿಟ್ಟು ಪರಿಹಾರ ಕೈಗೊಳ್ಳುತ್ತಾರೆ.

ಸಾಮಾಜಿಕವಾಗಿ ಹಿಂದುಳಿದಿರುವಿಕೆ

ಈ ಸಮಾಜದಲ್ಲಿ ಕೆಲ ಕುಟುಂಬಗಳು ತಮ್ಮ ಮಕ್ಕಳಿಗೆ ಅಲ್ಪ-ಸ್ವಲ್ಪ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಆದರೆ ಅವರು ಉದ್ಯೋಗ ಇಲ್ಲದೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಏನಾದರೂ ಪ್ರಗತಿ ಸಾಧಿಸಬೇಕೆಂದರೆ ಬಡತನ ಇವರನ್ನು ಕಾಡುತ್ತದೆ. ಸಮಾಜದಲ್ಲಿ ಒಬ್ಬಿಬ್ಬರು ಮುಂದುವರಿದಿರಬಹುದು. ಶೆ. ೯೯% ರಷ್ಟು ಜನ ಬಡತನದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈಗಿನ ಕಾಲದಲ್ಲಿ ತಮ್ಮ ಕುಟುಂಬದ ಪ್ರಗತಿ ಸಾಧಿಸುವುದು ಕಠಿಣವಿದ್ದಾಗ ಸಮಾಜದ ಬೇರೆಯವರನ್ನು ನೋಡುವುದು. ದೂರದ ಮಾತಾಗಿದೆ.

ಈ ಜನ ಎಷ್ಟು ಕಷ್ಟಪಟ್ಟು ದುಡಿದು ಗಳಿಸಿದರೂ ಸಹ ಅವರ ಕುಟುಂಬದ ಹೊಟ್ಟೆ ಬಟ್ಟೆಗೆ ಸಾಕಾಗುವುದಿಲ್ಲ. ಬೇರೆ ಸಮಾಜದವರನ್ನು ನೋಡಿದರೆ ಅವರಲ್ಲಿ ಶ್ರೀಮಂತರು, ವಿದ್ಯಾವಂತರು, ಅಧಿಕಾರಿಗಳು, ರಾಜಕಾರಣಿಗಳು, ಮಠಾಧೀಶರು, ಜಮೀನುದಾರರು ಸಾಕಷ್ಟು ಜನರಿದ್ದಾರೆ. ತಮ್ಮ ಸಮಾಜದಲ್ಲಿರುವ ಬಡತನ-ದಾರಿದ್ರತನ ದೂರ ಮಾಡಲು ಪ್ರಯತ್ನ ಮಾಡುವರು. ಆದರೆ ಕುಂಜರಭಾಟ ಸಮಾಜದಲ್ಲಿ ಶ್ರೀಮಂತರು, ವಿದ್ಯಾವಂತರು, ಅಧಿಕಾರಿಗಳು,ರಾಜಕಾರಣಿ, ಮಠಾಧೀಶರು, ಜಮೀನುದಾರರು ಇಲ್ಲದಂತಹ ಸಮಾಜ ಇದು. ಇವರು ತಮ್ಮ ಸಮಾಜದ ಪ್ರವೃತ್ತಿಗಳಾದ ಕಳ್ಳತನ, ಭಿಕ್ಷಾಟನೆ, ದರೋಡೆ, ಮದ್ಯ ಮಾರಾಟ, ಸುಲಿಗೆ ಮೊದಲಾದ ಕಾರ್ಯಗಳಲ್ಲಿ ತೊಡಗಿ ತಮ್ಮ ಕಾಲಿನ ಮೇಲೆ ಕಲ್ಲು ಹಾಕಿಕೊಂಡಿದ್ದಾರೆ. ಇಂಥ ಕಾರ್ಯಗಳನ್ನು ಮಾಡುವವರಿಗೆ ಬೇರೆ ಸಮಾಜಗಳಲ್ಲಿ ಸ್ಥಾನಮಾನ ದೊರೆಯುವುದಿಲ್ಲ. ಎಲ್ಲಿಯವರೆಗೆ ಬೇರೆ ಸಮಾಜದ ಜೊತೆಗೆ ಬೆರೆತು ಹೋಗುವುದಿಲ್ಲವೊ ಅಲ್ಲಿಯವರೆಗೆ ಜೀವನದಲ್ಲಿ ಸುಖ-ಶಾಂತಿ ಕಾಣಲು ಸಾಧ್ಯವಿಲ್ಲ. ಇವರು ಬೇರೆ ಸಮಾಜದ ಸಂಪರ್ಕ ಇಟ್ಟುಕೊಳ್ಳದೆ ತಮ್ಮದೇ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಬಲ ಇಲ್ಲದ ಕಾರಣ ಸಮಾಜದಲ್ಲಿ ಹಿಂದುಳಿದಿದ್ದಾರೆ.

ಆರ್ಥಿಕವಾಗಿ ಹಿಂದುಳಿದಿರುವಿಕೆ

ಈ ಜನ ಗುಡ್ಡಗಾಡು, ಹಳ್ಳಿ, ಹಳ್ಳಿ ಸಂಚರಿಸುವವರು. ಮಳೆ-ಗಾಳಿ, ಬಿಸಿಲು ಲೆಕ್ಕಿಸದೆ ಕತ್ತೆ, ಕುದುರೆಗಳನ್ನು ತಮ್ಮ ವಾಹನಗಳನ್ನಾಗಿ ಮಾಡಿ ಜೀವನ ಸಾಗಿಸುವರು. ಒಂದು ನೆಲೆ ಕಾಣದೆ ಇರುವಂತಹ ಸಮಾಜ. ಇವರಿಗೆ ಶಿಕ್ಷಣ ಇಲ್ಲ. ಶಿಕ್ಷಣ ಇಲ್ಲದ ಕಾರಣ ಉದ್ಯೋಗ ದೊರೆಯುವುದು ಸಾಧ್ಯವೇ ಇಲ್ಲ. ದುಡಿಯಲು ಉದ್ಯೋಗ ಇಲ್ಲ. ಊಳಲು ಭೂಮಿ ಇಲ್ಲ. ಈ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಹೇಗೆ? ಈ ಜನ ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯಬೇಕೆಂದರೆ ನೂರಕ್ಕೆ ನೂರು ಜನ ಬಡವರು, ಶ್ರೀಮಂತಿಕೆ ಇಲ್ಲ. ವ್ಯವಸಾಯ ಮಾಡಲು ಜಮೀನು ಇಲ್ಲ. ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ದೇಶ ಸ್ವತಂತ್ರವಾಗಿ ಅರವತ್ತು ವರ್ಷಗಳು ಕಳೆದರೂ ಭಿಕ್ಷಾಟನೆ ಮಾಡುವುದು ತಪ್ಪಲಿಲ್ಲ. ಮೂಲ ವೃತ್ತಿ ಭಿಕ್ಷಾಟನೆ ಬೆನ್ನು ಹತ್ತಿ ತಾತ್ಫೂರ್ತಿಕ ಸುಖಕಾಣುತ್ತಾರೆ. ಮಕ್ಕಳ ಭವಿಷ್ಯದ ಬಗೆಗೆ ಚಿಂತನೆ ಮಾಡುವುದಿಲ್ಲ. ಅಜ್ಞಾನ, ಅನಾಗರಿಕತೆ ತಿಳುವಳಿಕೆ ಇಲ್ಲದವರಿಗಾಗಿ ಇಂದಿನ ಸಮಾಜದಲ್ಲಿ ಬಹಳ ಹಿಂದುಳಿದಿದ್ದಾರೆ. ಹಳ್ಳಿಗಳಲ್ಲಿ ಸಣ್ಣ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುವ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಇವರ ಅಭಿವೃದ್ಧಿಗೆ ಗಮನ ಕೊಡದೇ ಇದ್ದ ಕಾರಣ ಆರ್ಥಿಕವಾಗಿ ಅತೀ ಹಿಂದುಳಿದಿದ್ದಾರೆ.

ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ

ಈ ಜನ ರಾಜಸ್ತಾನದಿಂದ ವಲಸೆ ಬಂದವರು. ಬರುವಾಗ ಕತ್ತೆ, ಕುದುರೆಗಳ ಮೇಲೆ ತಮ್ಮ ಜೀವನದ ವಸ್ತುಗಳನ್ನು ಹೇರಿಕೊಂಡು ಬಂದವರು. ಗುಡ್ಡ-ಗಾಡುಗಳಲ್ಲಿ ನೆಲೆಸುವವರು, ಹಳ್ಳಿ, ಹಳ್ಳಿ ಸಂಚರಿಸಿ ಜೀವನ ಸಾಗಿಸುವವರು. ಎಲ್ಲಿ ಬಯಲು ಜಾಗೆ ದೊರೆಯುವುದು ಅಲ್ಲಿಯೇ ತಮ್ಮ ಗುಡಿಸಲು (ತೆಂಬು) ನಿರ್ಮಾಣ ಮಾಡುವರು. ಎರಡು-ಮೂರು ದಿನ ಅಲ್ಲಿ ಇದ್ದು ಮುಂದಿನ ಊರಿಗೆ ಸಾಗುವವರು. ಇಡೀ ವರ್ಷ ಸಂಚರಿಸುವವರು. ಇವರು ಶಿಕ್ಷಣಕ್ಕೆ ಅನುಕೂಲವೇ ಆಗಲಿಲ್ಲ. ಶಿಕ್ಷಣದಲ್ಲಿ ನೂರಕ್ಕೆ ನೂರು ಹಿಂದುಳಿದಿದ್ದಾರೆ. ಮಕ್ಕಳು, ತಂದೆ, ತಾಯಿಗಳು ಮಾಡುವ ಉದ್ಯೋಗ (ಭಿಕ್ಷಾಟನೆ)ದಲ್ಲಿಯೇ ತೊಡಗಿಬಿಡುತ್ತಾರೆ. ತಂದೆ-ತಾಯಿಗಳು ಭಿಕ್ಷಾಟನೆಯಲ್ಲಿ ಮಕ್ಕಳಿಗೂ ಪಾಲು ದೊರೆಯುವುದೆಂದು ಅವರಿಗೂ ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಶಾಲೆಯ ಕಟ್ಟೆಯನ್ನೇರದ ಬಾಲಕ, ಬಾಲಕಿಯರಿಗೆ ಅಕ್ಷರ ಜ್ಞಾನ ಆಗುವುದು ಹೇಗೆ, ಕಂಜರಭಾಟರು ತಮ್ಮ ಚಿಕ್ಕ ಮಕ್ಕಳಿಗೆ ಮನೆಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಾರೆ. ಇರಲು ಮನೆ ಇಲ್ಲ. ಇಂಥ ಜನರು ಶಿಕ್ಷಣದ ಕಡೆಗೆ ಗಮನ ಹರಿಸುವುದಿಲ್ಲ. ನಿತ್ಯ ಜೀವನದ ಬಗೆಗೆ ವಿಚಾರಿಸುತ್ತಾರೆ. ಬಡತನ, ದಾರಿದ್ರ, ಅಜ್ಞಾನ ಪರಾವಲಂಬನೆ ಈ ಕಾರಣಗಳಿಂದ ಮಕ್ಕಳಿಗೆ ಶಿಕ್ಷಣ ಕೊಡಿಸದೆ ಅವಿದ್ಯಾವಂತರನ್ನಾಗಿ ಮಾಡಿದ್ದಾರೆ. ಕರ್ನಾಟಕ ನಗರ ಪ್ರದೇಶಗಳಲ್ಲಿ ಅಲ್ಪ-ಸ್ವಲ್ಪ ವಿದ್ಯಾವಂತರಿದ್ದು, ಅವರೂ ಉದ್ಯೋಗ ಇಲ್ಲದೆ ಅಲೆಯುತ್ತಿದ್ದಾರೆ. ಸರಕಾರ ಇಂಥ ಮಕ್ಕಳ ಶಿಕ್ಷಣದ ಬಗೆಗೆ ವಿಶೇಷ ಯೋಜನೆ ಹಾಕಿ ಅವರಿಗೂ ವಿದ್ಯಾವಂತರಾಗುವಂತೆ ಮಾಡಬೇಕು. ಬಡತನದಿಂದ ಇವರು ಶಿಕ್ಷಣದಲ್ಲಿ ಅತೀ ಹಿಂದುಳಿದಿದ್ದಾರೆ. ಸರಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಆಗ ಇವರ ಭವಿಷ್ಯ ಉಜ್ವಲವಾಗಬಹುದು.

ಕರ್ನಾಟಕದಲ್ಲಿ ಕಂಬರಭಾಟ ವಿದ್ಯಾವಂತರ ವಿವರಣೆ

ಪದವೀಧರರ ೫ ಜನ
ಇಂಜಿನಿಯರ್ ಒಬ್ಬರು
ಡಿಪ್ಲೋಮಾ ಇಂಜಿನಿಯರ್ ಒಬ್ಬರು
ಐ.ಟಿ.ಐ ೭ ಜನರು
ಎಸ್‌.ಎಸ್‌.ಎಲ್‌.ಸಿ. ೨೫ ಜನರು

ಇದು ಕಂಜರಭಾಟ ಶೈಕ್ಷಣಿಕ ವಿವರಣೆ ಬಡತನ ಹಾಗೂ ನೆಲೆ ಇಲ್ಲದ ಕಾರಣ ಶೈಕ್ಷಣಿಕವಾಗಿ ಅತೀ ಹಿಂದುಳಿದಿದ್ದಾರೆ. ಸರಕಾರದ ಯಾವ ಸವಲತ್ತು ಕಾಣದೇ ಇರುವುದು ಮುಖ್ಯ ಕಾರಣ. ೧೯೩೩ರಿಂದ ನಾವು ವಿಮಕ್ತ ಜಾತಿಯ ಪಟ್ಟಿಯಲ್ಲಿ ಇದ್ದು ಈಗಲೂ ಸಹ ಅಲ್ಲಿಯೇ ಇದ್ದೇವೆ.

ಪರಿಹಾರೋಪಾಯಗಳು

ಕುಂಜರಭಾಟರು ಸಂಚಾರಿ ಜನಾಂಗದ ಬಡತನದಲ್ಲಿ ತಮ್ಮ ಜೀವನ ಸಾಗಿಸುವ ಅವಿದ್ಯಾವಂತರು. ಇವರಿಗೆ ಸರಕಾರ ಮೊದಲು ಮನೆ ಕೊಡಬೇಕು. ಒಂದು ಕಡೆಗೆ ನೆಲೆಸಿದರೆ ಮಕ್ಕಳ ಶಿಕ್ಷಣದ ಬಗೆಗೆ ಅಭಿರುಚಿ ಹುಟ್ಟಬಹುದು. ಮಕ್ಕಳಿಗೆ ಹಾಸ್ಟೆಲ್‌ವ್ಯವಸ್ಥೆಯಾಗಬೇಕು. ಶಿಕ್ಷಣಕ್ಕೆ ಬೇಕಾಗುವ ಪ್ರತಿಯೊಂದು ಸೌಲತ್ತು ದೊರೆಯಬೇಕು. ವಿದ್ಯಾವಂತ ಮಕ್ಕಳಿಗೆ ನೌಕರಿ ದೊರೆಯಬೇಕು. ಈ ಜನ ತಮ್ಮ ಜೀವನದಲ್ಲಿ ಜಮೀನು ಕಾಣದ, ಸಮಾಜ ದುಡಿಯಲು ಉದ್ಯೋಗ ಇಲ್ಲದ ಕಾರಣ ಇವರಿಗೆ ೫ರಿಂದ ೧೦ ಎಕರೆಯಷ್ಟು ಜಮೀನು ಕೊಡಬೇಕು. ಈ ಜನರಿಗೆ ಸ್ವಂತ ಮನೆಗಳಾಗಬೇಕು. ನೀರು ಉಚಿತವಾಗಿ ದೊರೆಯಬೇಕು. ವಿದ್ಯುತ್‌ಮನೆಗೆ ಉಚಿತವಾಗಿ ದೊರೆಯಬೇಕು. ಶೌಚಾಲಯಗಳ ವ್ಯವಸ್ಥೆಯಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಾಡು ಕುಣಿತದ ತರಬೇತಿ ನೀಡಿ ಇವರ ಕಲೆಗೆ ಪ್ರೋತ್ಸಾಹ ದೊರೆಯಬೇಕು. ಸರಕಾರದಿಂದ ದೊರೆಯುವ ಪ್ರತಿಯೊಂದು ಮೂಲಭೂತ ಸೌಕರ್ಯಗಳು ದೊರೆಯಬೇಕು. ಈ ಜನ ಆರ್ಥಿಕ ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಅತೀ ಹಿಂದುಳಿದ ಜನ ಇವರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಬೇಕು.