ಪವಿತ್ರ ವಸ್ತುಗಳು: ಎಲ್ಲ ಕಾಲೋನಿಗಳಲ್ಲಿ ಭಾತ್ರುಗಳು ಆಕಳನ್ನು ಪವಿತ್ರ ಪ್ರಾಣಿ ಎಂದು ತಿಳಿದಿದ್ದಾರೆ. ಪಕ್ಷಿಗಳಲ್ಲಿ ಕಾಗಿಯನ್ನು ಕೆಲವರು ಪವಿತ್ರವೆಂದು ತಿಳಿದಿದ್ದಾರೆ. ಅದು ಗುಡಿಸಲು ಮೇಲೆ ಬಂದು ಕುಳಿತರೆ ಸಂತೋಷ ಪಡುತ್ತಾರೆ. ಅದರರ್ಥ ಅವರು ಒಳ್ಳೆಯ ಸುದ್ದಿ ಕೇಳುತ್ತಾರೆ. ತೇರದಾಳದಲ್ಲಿ ನವಿಲು ಪವಿತ್ರ ಮಾಸ್ಟರ ಬಾಗಡೆ ಹೇಳುವಂತೆ ಅರಳಿಮರ ಪವಿತ್ರವಾಗಿದೆ. ಅದನ್ನು ಪೂಜೆ ಮಾಡುತ್ತಾರೆ. ಮತ್ತು ಅದರ ಬುಡದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಬೇವಿನ ಮರವು ಕೂಡಾ ಪವಿತ್ರವಾಗಿದೆ. ಕೆಲವು ಕಡೆ ತುಳಸಿ ಗಿಡ ಪವಿತ್ರವೆಂದು ತಮ್ಮ ಮನೆಯ ಮುಂದೆ ನೆಟ್ಟು ಪೂಜೆ ಮಾಡುತ್ತಾರೆ. ಮುಧೋಳದಲ್ಲಿ ಅರಳಿ ಮರವನ್ನು ಪವಿತ್ರವೆಂದು ತಿಳಿದಿದ್ದಾರೆ.

ಮುದ್ದೇಬಿಹಾಳದಲ್ಲಿ ಇವರು ದೀಪಾವಳಿ ಮತ್ತು ಮೊಹರಂನ್ನು ಆಚರಿಸುತ್ತಾರೆ. ಮುಸ್ಲಿಂ ಹಬ್ಬದ ಆಚರಣೆ ಆಶ್ಚರ್ಯಕರವಾಗಿದೆ. ತೇರದಾಳದಲ್ಲಿ ಉಗಾದಿ, ದೀಪಾವಳಿ ಮತ್ತು ಪಡು ಹಬ್ಬವನ್ನು ಆಚರಿಸುತ್ತಾರೆ.

ತೇರದಾಳದ ಕಾಲೋನಿಯಲ್ಲಿ ಹತ್ತಿರದ ಹನುಮಾನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಪ್ರಾಣಿ ಪೂಜೆ ಮಾಡುವ ಇವರು ಹೋಳಿ ಹುಣ್ಣಿಮೆಯಲ್ಲಿ ಕುರಿ ಬಲಿ ನೀಡುತ್ತಾರೆ.

೨೦ ವರ್ಷಗಳ ದರ್ಗಾದಲ್ಲಿರುವ ರಾಣಿ ಲಕ್ಷ್ಮೀ ದೇವಾಲಯವನ್ನು ನಿರ್ಮಿಸಲಾಗಿದ್ದು, ದೀಪಾವಳಿಯಲ್ಲಿ ಅದರ ಜಾತ್ರೆ ಮಾಡುತ್ತಾರೆ. ಮುದ್ದೇಬಿಹಾಳದಲ್ಲಿ ಬಾಲಾಜಿ ಮಂದಿರವಿದೆ. ಹುಬ್ಬಳ್ಳಿಯಲ್ಲಿರುವ ಕೃಷ್ಣನ ಗುಡಿಯಲ್ಲಿ ಗೋಕುಲಾಷ್ಟಮಿ ದಿನ ಆಚರಿಸುತ್ತಾರೆ.

ಅವರಲ್ಲಿ ಸ್ವಾಮಿಗಳು: ಹಿಂದ ಅವರಲ್ಲಿ ಸ್ವಾಮಿಗಳಿರಲ್ಲಿ. ಬೇರೆ ಧರ್ಮದ ಸ್ವಾಮಿಗಳನ್ನು ಗೌರವಿಸುತ್ತಿದ್ದರು. ಈಗ ಅವರ ಸ್ವಾಮಿಗಳಾಗಿದ್ದಾರೆ.

ನೂರು ವರ್ಷದ ಶಿವರಾಮ ಮಹಾರಾಜರ ೨ ಆಶ್ರಮಗಳು ಸೋಲಾಪುರದಲ್ಲಿವೆ. ಹಲವರು ಸೋಲಾಪುರಕ್ಕೆ ಭೇಟಿ ನೀಡುತ್ತಾರೆ. ಈ ಸ್ವಾಮಿಗಳು ಸದ್‌ಮಾರ್ಗದಲ್ಲಿ ನೆಡೆಯುವಂತೆ ಹೇಳುತ್ತಾರೆ. ಸ್ವಾಮಿಗಳು ತುಳಸಿ ಮಾಲೆಯನ್ನು ಧರಿಸುತ್ತಾರೆ. ಸುಮಾರು ಎರಡು ಲಕ್ಷ ಭಕ್ತಾಧಿಗಳಿದ್ದಾರೆ. ಸ್ವಾಮಿ ಶಿವರಾರು ಮಾತೆಯನ್ನು ಧರಿಸುತ್ತಾರೆ. ಸುಮಾರು ಎರಡು ಲಕ್ಷ ಭಕ್ತಧಿಗಳಿದ್ದಾರೆ. ಸ್ವಾಮಿ ರೇಡಿಯೋ ಮತ್ತು ದೂರದರ್ಶನದಲ್ಲಿ ಉಪದೇಶ ನೀಡುತ್ತಾರೆ. ಭಾತ್ರುಗಳ ಕಾಲೋನಿಗಳಿಗೆ ಭೇಟಿ ನೀಡುತ್ತಾರೆ. ಈ ಸ್ವಾಮಿಗಳು ಕೇಸರಿ ಬಟ್ಟೆಯನ್ನು ಧರಿಸುತ್ತಾರೆ. ಮಕ್ಕಳ ಪಂಡಿತರ ಪ್ರಕಾರದಲ್ಲಿ ಪೂಜಾ ಕ್ರಿಯಾಗಳನ್ನು ಮಾಡುತ್ತಾರೆ.

ಇವರ ಭಕ್ತರು ತುಳಸಿ ಮಾಲೆಯನ್ನು ಹಾಕುತ್ತಾರೆ. ಪ್ರತಿದಿನ ಭಕ್ತಾಧಿಗಳು ಪೂಜೆ ಸಲ್ಲಿಸುತ್ತಾರೆ. ಹಬ್ಬಗಳಂದು ಹೆಚ್ಚು ಜನ ಸೇರುತ್ತಾರೆ.

ಸ್ವಾಮಿಗಳು ಜನರ ಆಧ್ಯಾತ್ಮಿಕ ಜೀವನದತ್ತ ಗಮನಹರಿಸುತ್ತಾರೆ. ಬನಶಂಕರಿಯಲ್ಲಿನ ಜನರು ಈ ಸ್ವಾಮಿಗಳ ಬಗ್ಗೆ ಹೋದಿದ್ದಾರೆ. ಹುಬ್ಬಳ್ಳಿಯಲ್ಲಿಯೂ ಭಜನೆಗಳನ್ನು ಮಾಡುತ್ತಾರೆ.

ಒಂದು ಸಲ ಸ್ವಾಮಿ ಶಿಷ್ಯನಾದರೆ ಅಂದಿನಿಂದ ಆ ವ್ಯಕ್ತಿ ಸ್ವಾಮಿಯ ನಿಯಂತ್ರಣಕ್ಕೆ ಒಳಪಟ್ಟಂತೆ. ಆತ ಮದುವೆಯಾಗಬೇಕೆಂದರೆ ಸ್ವಾಮೀಜಿಯ ಅನುಮತಿ ಪಡೆಯಬೇಕು. ಶಿಷ್ಯರಾಗಬೇಕೆಂದರೆ ೧೮ ವರ್ಷ ತುಂಬಿರಬೇಕು. ಈ ಸ್ವಾಮೀಜಿಯನ್ನು ಹಬ್ಬಳ್ಳಿಗೆ ಆಹ್ವಾನಿಸಿದಾಗ ೪೦ ಜನ ಇವರ ಶಿಷ್ಯರಾದರು. ಸ್ವಾಮಿಯ ಭಕ್ತರಾಗಿ ತುಳಸಿ ಮಾಲೆ ಹಾಕಿದ ನಂತರ ಸಾರಾಯಿ ಕುಡಿಯುವಂತಿಲ್ಲ.

ಮಹಾರಾಷ್ಟ್ರದಲ್ಲಿ ಎಲ್ಲರೂ ತುಳಸಿ ಮಾಲೆ ಹಾಕಿಕೊಂಡು ಸಾರಾಯಿ ಕುಡಿಯುತ್ತಾರೆ. ಮತ್ತು ಮಾರಾಟ ಮಾಡುತ್ತಾರೆ. ಈ ಮಾಲೆ ಇವರಿಗೆ ಅಲಂಕರವಾಗಿದೆ. ದಾಂಡೇಲಿಗೂ ಬಂದು ಸ್ವಾಮೀಜಿ ದೇವಾಲಯಗಳಲ್ಲಿ ಪೂಜೆಗಳಲ್ಲಿ ನೆರವೇರಿಸುತ್ತಾರೆ. ಜನರಿಗೆ ಭೋದಿಸಿ ತುಳಸಿ ಮಾಲೆ ಹಾಕಿಕೊಳ್ಳಲು ಹೇಳುತ್ತಾರೆ. ಇಲ್ಲಿನ ಜನ ತಮ್ಮದೇ ಆದ ಗುಡಿಯನ್ನು ಹೊಂದಿದ್ದಾರೆ. ಏಳು ವರ್ಷಗಳ ಹಿಂದೆ ಇವರು ಪುಣೆಯಿಂದ ಮೂರ್ತಿಯನ್ನು ತಂದಿದ್ದಾರೆ. ಪ್ರತಿಯೊಬ್ಬರಿಗೆ ಮನೆ ದೇವರುಗಳಿವೆ. ಹೋಳಿ ಹುಣ್ಣಿಮೆಯಲ್ಲಿ ಕಾಳಿಕಾದೇವಿಯನ್ನು ಪೂಜಿಸುವುದು ವಿಶಿಷ್ಟವಾಗಿದೆ.

೪) ಆರ್ಥಿಕ ಜೀವನ

ಭಾತ್ರುಗಳು ಹೊಲ, ಮನೆ, ಆದಾಯ ತರುವ ಯಾವುದೇ ಉದ್ಯೋಗವನ್ನು ಹೊಂದಿಲ್ಲ. ತೇರದಾಳದಲ್ಲಿ ಇವರು ಬೇರೆ ಜಾಗೆಯಲ್ಲಿ ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಇದರ ಒಡೆಯ ಅವರನ್ನು ಜಾಗ ಬಿಡಿಸಲು ಪ್ರಯತ್ನಿಸುತ್ತಿದ್ದಾನೆ. ಮುಧೋಳದಲ್ಲಿ ಇವರಿಗೆ ಮುನ್ಸಿಪಾಲಿಟಿಯವರು ಮನೆ ಕಟ್ಟಿಕೊಳ್ಳಲು ಜಾಗೆ ನೀಡಿದ್ದಾರೆ. ಆದರೆ ಅವು ನೀರಲ್ಲಿ ಮುಳುಗುತ್ತಿದ್ದರಿಂದ ಮುನ್ಸಿಪಾಲಿಟಿಗೆ ಸೇರಿದ ಎತ್ತರದ ಜಾಗೆಯಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಈ ಜಾಗೆಯನ್ನು ಖಾಲಿ ಮಾಡುವಂತೆ ಇವರಿಗೆ ಹೇಳುತ್ತಿದ್ದಾರೆ.

ಮುದ್ದೇಬಿಹಾಳದಲ್ಲಿ ಬಿದಿರಿನ ಬಂಬುಗಳನ್ನು ನಿಲ್ಲಿಸಿ ತಟ್ಟಿ ಬಡಿದುಕೊಂಡು ಅದಕ್ಕೆ ಸಗಣಿ ಹಚ್ಚಿ ಮನೆ ಮಾಡಿಕೊಂಡಿದ್ದಾರೆ. ಇವರು ಬಿಜಾಪುರದಲ್ಲಿ ತಮ್ಮ ಸಂಬಂಧಿಗಳನ್ನು ಹೊಂದಿದ್ದಾರೆ. ಅವರು ಹೇಳುವಂತೆ ೩೨ ಮನೆಗಳನ್ನು ಪಾಪರ್ ಪೌಲೋಸರು ನಿರ್ಮಿಸಿದ್ದಾರೆ. ಮುಧೋಳದಲ್ಲಿಯು ಕ್ರಿಶ್ಚಿಯನ್‌ಪಾಧರ್ ಗಳು ಇವರಿಗೆ ಮನೆಗಳನ್ನು ನಿರ್ಮಿಸಿಕೊಡುವವರಿದ್ದಾರೆ. ಆದರೆ ಇವರಿಗೆ ಸ್ವಂತ ಭೂಮಿ ಇಲ್ಲ.

ರಾಯಭಾಗ ರೈಲ್ವೆ ನಿಲ್ದಾಣದ ಬಳಿ ೪೦ ಭಾತ್ರುಗಳ ಕುಟುಂಬಳಿದ್ದು, ೫೦೦ ಜನಸಂಖ್ಯೆ ಇದೆ. ಇಲ್ಲಿಯವರೆಗೆ ಇವರಿಗೆ ಸರಕಾರದಿಂದ ಯಾವುದೇ ಸಹಾಯ ದೊರೆತಿಲ್ಲ. ಆದರೆ ಅದೃಷ್ಟವಶಾತ್‌ಎಲ್ಲರಿಗೂ ಪಡಿತರ ಚೀಟಿ (ರೇಶನ್‌ಕಾರ್ಡ್‌) ದೊರೆತಿದೆ.

ಬಿಜಾಪುರದ ದರ್ಗಾದಲ್ಲಿ ೯೨ ಕುಟುಂಬಗಳಲ್ಲಿ ೪೦ ಒಳ್ಳೆಯ ಮನೆಯನ್ನು ಹೊಂದಿವೆ. ರಾಯಭಾಗದಲ್ಲಿ ಇವರಿಗೆ ಸ್ವಂತ ಜಾಗ ಇಲ್ಲ. ಗೌಡರ ಜಾಗೆಯಲ್ಲಿ ಗುಡಿಸಲು ಟೆಂಟಿನಲ್ಲಿದ್ದಾರೆ. ಮಳೆಯಲ್ಲಿ ತೀವ್ರ ತೊಂದರೆಗಳನ್ನು ಎದುರಿಸುತ್ತಾರೆ.

ಬಿಜಾಪುರದ ಬಡಿಕಮಾನದಲ್ಲಿ ಭಾತ್ರುಗಳು ಮೊದಲು ಗೋಲಗುಂಬಜದ ಬಳಿ ಇದ್ದರು. ಅಲ್ಲಿಂದ ಇವರನ್ನು ಖಾಲಿ ಮಾಡಿಸಿದ್ದರಿಂದ ಕೆಲವರು ಬಡಿಕಮಾನದ ಬಳಿ ವಾಸ ಮಾಡಿದರೆ, ಇನ್ನು ಕೆಲವರು ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಿಗೆ ವಲಸೆ ಹೋದರು. ಬಡಿಕಮಾನದಲ್ಲಿರುವವರಿಗೆ ರೇಶ್‌ಕಾರ್ಡ್‌ದೊರೆತಿಲ್ಲ. ಯಾವುದಾದರೂ ಯೋಜನೆ ಬಂದಾಗ ತಿಳಿಸುತ್ತೇವೆ. ಆಗ ಬನ್ನಿ ಎಂದು ಅಧಿಕಾರಿಗಳು ಹೇಳುತ್ತಾರೆ. ದರ್ಗಾದಲ್ಲಿನ ಜನರ ಸ್ಥಿತಿ ನೋಡಿ ಮುರುಕಗೊಂಡ ಫಾದರ್ ಫೌಲೋಸ್‌ಮೊದಲು ಅವರಿಗೆ ಶಿಕ್ಷಣ ಕೇಂದ್ರವನ್ನು ನಿರ್ಮಿಸಿ ನಂತರ ಅವರಿಗೆ ಸೂರನ್ನು ಒದಗಿಸುವ ವಿಚಾರವನ್ನು ಹೊಂದಿದ್ದರು.

ಸರರ್ಕಾರದವರು ಅವರಿಗೆ ಜಮೀನು ನೀಡಿದ್ದು ೩೨ ಮನೆಗಳನ್ನು ನಿರ್ಮಿಸಲಾಗಿದೆ. ದರ್ಗಾಕ್ಕೆ ೩ ಸಲ ಫ್ರೆಂಚ್‌ವಿದ್ಯಾರ್ಥಿಗಳು ಬಂದು ಕ್ಷೇತ್ರ ಕಾರ್ಯಮಾಡಿ ಮನೆ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ೯೨ ಕುಟುಂಬಗಳಿದ್ದು, ೪೦೦ ಜನರಿದ್ದಾರೆ. ತೇರದಾಳ ಮತ್ತು ಮುಧೋಳದಲ್ಲಿ ಯಾರೂ ಪಡಿತರ ಚೀಟಿ ಹೊಂದಿಲ್ಲ.

ಮುಧೋಳದಲ್ಲಿ ಸಾಲ ನೀಡುವವರು (ಬಡ್ಡಿ ಸಾಲ ನೀಡುವವರು) ಇಲ್ಲಿ ಭಾತ್ರುಗಳ ತಮ್ಮ ಸ್ನೇಹಿತರ ಕಡೆಯಿಂದ ಬಡ್ಡಿ ರಹಿತ ಹಣವನ್ನು ತೆಗೆದುಕೊಂಡು ಬರುತ್ತಾರೆ. ಕೆಲವು ಕಡೆ ಬಡ್ಡಿ ವ್ಯಾಪಾರಸ್ಥರು ಇದ್ದಾರೆ. ಆದರೆ ಅತಿಯಾದ ಬಡ್ಡಿಯನ್ನು ಹಾಕುತ್ತಾರೆ.

೮೫ ವರ್ಷದ ವಯೋವೃದ್ಧೆ ಗೋವಿಬಾಯಿ ಹೇಳುವಂತೆ ಹಿಂದಿನ ಕಾಲದಲ್ಲಿ ಸಾಲ ತೀರಿಸಲಾಗದಿದ್ದರೆ ತಮ್ಮ ಹೆಣ್ಣು ಮಕ್ಕಳನ್ನು ಮಾರುತ್ತಿದ್ದರು. ಸಾಮಾನ್ಯವಾಗಿ ೨,೦೦೦ ರೂ.ಗಳು ನೀಡುತ್ತಿದ್ದರು. ಹುಡುಗಿ ಸುಂದರವಾಗಿದ್ದರೆ ಹೆಚ್ಚಿನ ಹಣ ನೀಡುತ್ತಿದ್ದರು. ಇದು ತಾವು ಚಿಕ್ಕವಳಿದ್ದಾಗ ಅಸ್ತಿತ್ವದಲ್ಲಿತ್ತು ಎಂದು ಹೇಳುತ್ತಾರೆ. ಕೆಲವು ಕಡೆ ತಿಂಗಳಿಗೆ ಶೇಕಡ ೩ ರೂ. ರಿಂದ ೧೦ ರೂ. ಬಡ್ಡಿ ನೀಡುತ್ತಿದ್ದರು.

ಬಿಜಾಪುರದಲ್ಲಿ ದರ್ಗಾದ ಜನರು ೩೦% ಜನ ಸೈಕಲ್‌ರಿಕ್ಷ ಹೊಂದಿದ್ದಾರೆ. ಅವು ಅಂಗಡಿಕಾರರ ರಿಕ್ಷಗಳಾಗಿದ್ದರಿಂದ ದಿನಕ್ಕೆ ೨೦ ರೂಪಾಯಿ ಮಾಲಿಕರಿಗೆ ನೀಡುತ್ತಿದ್ದರು. ತಾವು ದಿನಕ್ಕೆ ೫೦ ರಿಂದ ೬೦ ರೂಪಾಯಿ ಗಳಿಸುತ್ತಿದ್ದರು.

ಕೆಲವರು ಹೇಳುವಂತೆ ಜೀತಪದ್ಧತಿ ಇದರಲ್ಲಿತ್ತು. ಮಹಾತ್ಮಗಾಂಧೀಜಿ ಅವಧಿಯಲ್ಲಿ ಇದು ನಿಂತು ಹೋಯಿತು. ಇವರ ಕೆಲವು ಕಾಲೋನಿಗಳಿಗೆ ಗಾಂಧಿಯವರು ಬಂದಿದ್ದನ್ನು ನೋಡಿದ್ದರು. ಗೋಪಿಬಾಯಿ ಆಂಧ್ರದ ನೆಲ್ಲೂರುದಲ್ಲಿದ್ದಾಗ ಗಾಂಧೀಜಿಯನ್ನು ನೋಡಿದ್ದರು. ಬೆಲ್ಲದ ಬಾಗೇವಾಡಿಯವರು ಹುಟ್ಟಿದಂತೆ ಅವರು ಪ್ರತಾಪಸಿಂಗ್‌ನ ಕಾಲದಲ್ಲಿ ರಾಜಸ್ತಾನದಲ್ಲಿ ಆರಾಮವಾಗಿದ್ದರು. ಪ್ರತಾಪಸಿಂಗ್‌ನ ಮಂತ್ರಿ ಪ್ರತಿ ಬಗೇಟಿಗೆ ೧ ರೂಪಾಯಿ ವಿಧಿಸಿದ್ದರಿಂದ ಇವರು ಜೈಪುರ ಬಿಟ್ಟು ಭಾರತದ ವಿವಿಧ ಕಡೆಗಳಿಗೆ ವಲಸೆ ಹೋದರು. ಮಾರುವಾಡಿಗಳು ಹೋಗಿ ವ್ಯಾಪಾರ ನಡೆಸತೊಡಗಿದ್ದರು. ಆದರೆ ಭಾತ್ರುಗಳಲ್ಲಿ ಕೆಲವರು ಭಿಕ್ಷೆ ಬೇಡುವುದನ್ನು ಪ್ರಾರಂಭಿಸಿದಾಗ ಇವರನ್ನು ನಗರಗಳಿಂದ ಹೊರಗೆ ಹಾಕಲಾಯಿತು. ಆದ್ದರಿಂದ ಇವರು ಪ್ರತ್ಯೇಕ ಕಾಲೋನಿಗಳಲ್ಲಿ ವಾಸ ಮಾಡುತ್ತಿದ್ದರು.

ರಾಜಾ ಪ್ರತಾಪಸಿಂಗ್‌ನ ರಾಜ್ಯದಲ್ಲಿ ಕತ್ತಿ (ಖಡ್ಗ)ಗಳನ್ನು ತಯಾರಿಸಿ ಸೈನಿಕರಿಗೆ ಸರಬರಾಜು ಮಾಡುತ್ತಿದ್ದರು. ಕಂಜರಾ ಎಂದರೆ ಖಡ್ಗ, ಖಡ್ಗ ತಯಾರಿಸುವವರನ್ನು ಕಂಜರಾ ಭಾತ್ರುಗಳೆಂದು ಕರೆಯಲಾಯಿತು.

ಬೆಲ್ಲದ ಬಾಗೇವಾಡಿಯವರು ಹೇಳುವಂತೆ ಇವರನ್ನು ಬ್ರಿಟಿಷರು ಸೋಪಾಪುರ ಮತ್ತು ಕೊಲ್ಹಾಪುರಗಳಿಗೆ ಕರೆದುಕೊಂಡು ಹೋದರು. ಇವರನ್ನು ಕೆಲಸಕ್ಕಾಗಿ ಕೈಬೇಡಿ ಹಾಕಿಕೊಂಡು ಮುಂಜಾನೆ ೮ರಿಂದ ರಾತ್ರಿ ೮ರವರೆಗೆ ದುಡಿಯಲು ಕರೆದುಕೊಂಡು ಹೋಗುತ್ತಿದ್ದರು.

ಭಾರತ ಸ್ವತಂತ್ರ್ಯಗೊಂಡನಂತರ ನಾವು ಕೆಲಸ ಕಳೆದುಕೊಂಡಿದ್ದೇವೆ. ನಮ್ಮನ್ನು ಯಾರು ಕೆಲಸಕ್ಕೆ ಕರೆಯುವುದಿಲ್ಲ. ಆದ್ದರಿಂದ ನಾವು ಭಿಕ್ಷೆ ಬೇಡಬೇಕಾಗುತ್ತದೆ. ಸರ್ಕಾರವು ಸಹಿತ ಯಾವುದೇ ಅನುಕೂಲವನ್ನು ಮಾಡಿಲ್ಲ ಎಂದು ಬೆಲ್ಲದ ಬಾಗೇವಾಡಿಯ ರಾಮ್‌ಸಿಂಗ್‌ಶಂಕರ್ ತಮ್ಮ ವಸ್ತು ಸ್ಥಿತಿಯನ್ನು ತೋಡಿಕೊಳ್ಳುತ್ತಾರೆ.

ಬ್ರಿಟಿಷರು ಇವರನ್ನು ಅಪರಾಧಿ (ಕ್ರಿಮಿನಲ್‌) ಜನಾಂಗದವರೆಂದು ಪರಿಗಣಿಸಿ ಅವರನ್ನಿಟ್ಟು ಕಾಲೋನಿಯ ಸುತ್ತಲೂ ಗೋಡೆ ನಿರ್ಮಿಸಿ ಪೊಲೀಸ್‌ಪಹರೆ ಇಡುತ್ತಿದ್ದರು. ಮತ್ತು ಇವರನ್ನು ಹೊರಗೆ ಕರೆದುಕೊಂಡು ಹೋಗುವಾಗ ಕೈಗಳಿಗೆ ಬೇಡಿಯನ್ನು ಹಾಕುತ್ತಿದ್ದರು ಎಂದು ಗೋಪಿಬಾಯಿ ನೆನಪಿಸಿಕೊಳ್ಳುತ್ತಾರೆ.

ಹಲವಾರು ಭಾತ್ರುಗಳು ಚಿಂದಿ ಆರಿಸುವ ಕಬ್ಬಿಣ ಚೂರುಗಳನ್ನು ಗಲ್ಲಿ-ಗಲ್ಲಿಗಳಲ್ಲಿ ಆರಿಸಿ ಅವುಗಳನ್ನು ಮಾರುತ್ತಾರೆ. ಪ್ರಸ್ತುತ ಇವರು ಸರ್ಕಾರಿ ನೌಕರಿ ಪಡೆದಿರುವುದನ್ನು ಕಾಣಬಹುದು. ಪೊಲೀಸ್‌ನವರಾಗಿದ್ದಾರೆ. ವಾಚ್‌ಮನ್‌ಗಳಾಗಿದ್ದಾರೆ. ಮಹಿಳೆಯರು ಮಾತ್ರ ಯಾವುದೇ ಕೆಲಸಕ್ಕೆ ಹೋಗದ ಭಿಕ್ಷೆ ಬೇಡುತ್ತಾರೆ. ಸುಗ್ಗಿ ದಿನಗಳಲ್ಲಿ ಮಹಿಳೆಯರು ಹಳ್ಳಿಗಳಿಗೆ ಹೋಗಿ ಗೋವಿನ ಜೋಳ, ಗೋಧಿ ಮತ್ತು ಇತರೆ ಧಾನ್ಯಗಳನ್ನು ತರುತ್ತಾರೆ. ಇವರು ಸ್ವಬಳಕೆಗಾಗಿ ಮತ್ತು ಮಾರಲು ಸಾರಾಯಿ ತಯಾರಿಸಿ ಹಲವಾರು ಸಲ ಪೊಲೀಸರ ಶಿಕ್ಷಗೆ ಗುರಿಯಾಗಿದ್ದಾರೆ.

ಸಾರಾಯಿ ವ್ಯಾಪಾರದಿಂದ ಆರ್ಥಿಕವಾಗಿ ಕೆಲವರು ಸುಸ್ಥಿತಿಯಲ್ಲಿದ್ದಾರೆ. ಕೆಲವರು ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಿದ್ದಾರೆ. ಸಾರಾಯಿ ತಯಾರಿಕೆಗೆ ಬೆಲ್ಲ, ಕಲೆಜಾಳ, ನವಸಾಗರ, ಗಿಡದ ತೊಗಟಿಯನ್ನು ಬಳಸುತ್ತಾರೆ.

ಬಿಜಾಪುರದ ಬಡಿಕಮಾನದಲ್ಲಿನ ಭಾತ್ರುಗಳು ಸೊಲ್ಲಾಪುರದ ಸ್ವಾಮಿಗಳ ಪ್ರಭಾವದಿಂದ ಸಾರಾಯಿಯನ್ನು ಕುಡಿಯುವುದಿಲ್ಲವೆಂದು ಪ್ರಮಾಣ ಮಾಡಿ ತುಲಸಿ ಮಾಲೆಯನ್ನು ಹಾಕಿಕೊಂಡಿದ್ದಾರೆ. ಸಾರಾಯಿ ಕುಡಿಯಬೇಡ, ಜಗಳ ಮಾಡಬೇಡ ಎಂಬ ಅಕ್ಷರಗಳನ್ನು ಹೇಳಿ ನಂತರ ಸ್ವಾಮಿಗಳು ಇವರಿಗೆ ದೀಕ್ಷೆಯನ್ನು ನೀಡುತ್ತಾರೆ. ಆದ್ದರಿಂದ ತುಲಸಿ ಮಾಲೆ ಹಾಕಿದವರು ಕುಡಿಯುವುದಿಲ್ಲ ಮತ್ತು ಜಗಳ ಮಾಡುವುದಿಲ್ಲ.

ಇವರು ಆತ್ಮಶುದ್ಧಿಗಾಗಿ ಆಶ್ರಮದಲ್ಲಿ ೫ ದಿನ ಇದ್ದು ಪ್ರಾರ್ಥನೆ ಮತ್ತು ಉಪವಾಸಗಳನ್ನು ಮಾಡುತ್ತಾರೆ. ಹುಬ್ಬಳ್ಳಿಯಲ್ಲಿನ ಭಾತ್ರುಗಳು ರೈಲ್ವೆಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಶ್ರೀಮಂತರಾಗಿದ್ದಾರೆ. ಇವರು ಭಾತ್ರುಗಳಲ್ಲಿಯೇ ಶ್ರೀಮಂತರು.ಇವರಲ್ಲಿ ಕೆಲವರು ಆಕಳು, ಆಡು ಮತ್ತು ಕೋಳಿಗಳನ್ನು ಸಾಕುತ್ತಾರೆ. ಕೆಲವು ಕಡೆ ಇವರು ನೀರಿಗಾಗಿ ಪರದಾಡಬೇಕಾಗುತ್ತದೆ. ಬಿಜಾಪುರದ ಬಡಕಮಾನ ದರ್ಗಾ ಮತ್ತು ರಾಯಭಾಗದಲ್ಲಿನ ಭಾತ್ರುಗಳು ನೀರಿಗಾಗಿ ಒಂದು ಕಿಲೋ ಮೀಟರ್ ದೂರ ಹೋಗಬೇಕಾಗುತ್ತದೆ.

ಬಡಿಕಮಾನದಲ್ಲಿರುವವರಿಗೆ ವಿದ್ಯುಚ್ಚಕ್ತಿಯಂತಹ ಮೂಲ ಸೌಕರ್ಯಗಳು ಸಹ ಇಲ್ಲ. ಸರ್ಕಾರದ ಭರವಸೆ ಹಾಗೆಯೇ ಮುಂದುವರಿದಿದೆ. ಇವರು ಇತರೆ ಜನರ ನಿರ್ಲಕ್ಷ್ಯಕ್ಕೆ ಒಳಗಾಗಿ ಸಾಮಾಜಿಕ ಅಂತಸ್ತನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇವರಲ್ಲಿ ಕೆಲವರಿಗೆ ಕಂಜರಾ, ಭಾತ್ರು ಎಂದು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ.

ಇವರಲ್ಲಿರುವ ಬಡತನ, ಅನಕ್ಷರತೆ ಇವರ ಮೇಲಿನ ಇತರರು ಹೊಂದಿದರುವ ಸಂಶಯಭಾವನೆ, ಸರ್ಕಾರದ ನಿರ್ಲಕ್ಷ್ಯ, ಪೊಲೀಸರಿಂದಾಗಿ ಭಾತ್ರುಗಳು ಸೀಮಿತ ಪರಿದಿಯಲ್ಲಿಯೇ ಜೀವಿಸಬೇಕಾಗಿದೆ.

ಕ್ಲಬಿನ ಸದಸ್ಯರು ಮಾಹಿತಿ ಸಂಗ್ರಹಿಸಲು ಹೋಗಾದ ” ೨೦ ವರ್ಷಗಳಿಂದಲೂ ಸಾಕಷ್ಟು ಜನ ಬಂದು ಮಾಹಿತಿ ಸಂಗ್ರಹಿಸಿಕೊಂಡು ಹೋಗಿದ್ದಾರೆ. ಆದರೆ ನಮಗೆ ಯಾವ ವ್ಯವಸ್ಥೆ ಅಥವಾ ಸೌಲಭ್ಯಗಳು ದೊರೆಯುವಂತೆ ಮಾಡಿಲ್ಲ. ಆದ್ದರಿಂದ ನಾವೇಕೆ ಮಾಹಿತಿ ನೀಡಬೇಕು” ಎನ್ನುತ್ತಾರೆ.

ನಂತರ ಕ್ಲಬ್ಬಿನ ಸದಸ್ಯರು ತಾವು ಇತರ ಜನಾಂಗದವರ ಬಗ್ಗೆ ಬರೆದ ಪುಸ್ತಕವನ್ನು ತೋರಿಸಿ ಇತರರು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಒಂದು ಪುಸ್ತಕ ಬರೆಯುತ್ತೇವೆಂದು ಹೇಳಿದಾಗ ಮಾಹಿತಿಗಳನ್ನು ನೀಡಿದರು.

ಇವರು ಸೈಕಲ್‌, ಕುದುರೆ, ಸ್ಪರ್ಧೆಗಳಲ್ಲಿ ಭಾಗವಹಿಸಿ ಹಣ ಗಳಿಸುತ್ತಾರೆ. ಮಹಿಳೆಯರು ಬವಾನ್‌, ಕ್ಲಿಫ್‌ಮುಂತಾದ ಸ್ಟೇಶನರಿ ವಸ್ತುಗಳನ್ನು ಮಾರಿ ದಿನಕ್ಕೆ ೨೦ ರೂಪಾಯಿ ಗಳಿಸುತ್ತಾರೆ. ಇವರು ಭಿಕ್ಷೆ ಬೇಡಲು ಕಾರಣ ಕೇಳಿದಾಗ ಅವರು ನಮ್ಮ ಸಂಪ್ರದಾಯ ಎನ್ನುತ್ತಾರೆ.

ಹಸಿದ ನಮಗೆ ತಿನ್ನಲು ಸಾಕಷ್ಟು ಇಲ್ಲದ್ದರಿಂದ ಭಿಕ್ಷೆ ಬೇಡಲಾರಂಭಿಸಿದೆವು ಎಂದು ಬೆಲ್ಲದ ಬಾಗೇವಾಡಿಯ ಭಾತ್ರುಗಳು ಮುಕ್ತವಾಗಿ ಹೇಳುತ್ತಾರೆ.

ಚಿಕ್ಕೋಡಿಯಲ್ಲಿರುವ ೮ ಕುಟುಂಬಗಳಿಗೆ ಸ್ವಂತ ಜಾಗೆ ಇದೆ. ಸರ್ಕಾರಿ ಅಧಿಕಾರಿಗಳಿಗೆ ೧೦,೦೦೦ ರೂ.ಗಳು ನೀಡಿದ್ದಾರೆ. ಅವರು ಭಾತ್ರುಗಳಿಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಆದರೆ ಅದು ಯಾವುದು ಆಗಿಲ್ಲ. ಇಲ್ಲಿರುವ ೮ ಕುಟುಂಬಗಳು ರೇಶನ್‌ಕಾರ್ಡನ್ನು ಹೊಂದಿವೆ. ಮತ್ತು ಇತರೆ ಹೆಸರುಗಳು ಮತದಾರರ ಪಟ್ಟಿಗೆ ಸೇರಿಕೊಂಡಿವೆ. ಇಲ್ಲಿನ ಕೆಲವರು ಮಹಿಳೆಯರು ಮತ್ತು ಮಕ್ಕಳು ಭಿಕ್ಷೆ ಬೇಡಿ ಹಣ ಕೊಟ್ಟು ಮತ್ತು ಕಾಳುಗಳನ್ನು ತರುತ್ತಾರೆ.

ಚಿಕ್ಕೋಡಿಯ ಭಾತ್ರುಗಳು ಹೇಳುವಂತೆ ಇವರು ಹಳ್ಳಿಗಳಿಗೆ ಹೋದಾಗ ಇವರನ್ನು ೩ ದಿನ ಮಾತ್ರ ತಮ್ಮ ಹಳ್ಳಿಯಲ್ಲಿರಿಸಿಕೊಳ್ಳುತ್ತಿದ್ದರು. ಆ ೩ ದಿನ ಇವರಿಗೆ ಆಹಾರವನ್ನು ನೀಡುತ್ತಿದ್ದರು. ನಂತರ ಊರಿನ ಮುಖಂಡರು ಇವರನ್ನು ಜಾಗ ಖಾಲಿ ಮಾಡಿಸುತ್ತಿದ್ದರು. ಆಗ ಭಾತ್ರುಗಳು ಬೇರೆ ಊರಿಗೆ ಹೋಗುತ್ತಿದ್ದರು.

ಇವರು ಯಾರನ್ನು ಕೆಲಸ ಕೇಳುವುದಿಲ್ಲ. ಕೇಳಿದರೂ ಯಾರು ಕೆಲಸ ನೀಡುವುದಿಲ್ಲ. ಇವರಿಗೆ ಕೆಲಸ ಮಾಡುವುದು ಗೊತ್ತಿಲ್ಲ. ಕೇವಲ ಭಿಕ್ಷೆ ಮಾಡುವುದನ್ನು ಮಾತ್ರ ಮಾಡುತ್ತಾರೆ. ಇವರನ್ನು ಅಸ್ಪೃಶ್ಯರನ್ನಾಗಿ ನೋಡಿದೆ. ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಸಂಚರಿಸುತ್ತಾರೆ. ಮೊದಲು ಇವರು ತಮ್ಮ ಮಕ್ಕಳಿಗೆ ಭಾತ್ರುಗಳ ಮನೆಗೆ ಹೋಗಲು ಬಿಡುತ್ತಿರಲಿಲ್ಲ.

ಕರ್ನಾಟದಕದಲ್ಲಿ ಮಾತ್ರ ಇವರು ಬಡವರಾಗಿದ್ದಾರೆ. ಜೈಪುರ, ಜೋದಪುರ ಮತ್ತು ಪುಣೆಗಳಲ್ಲಿ ಇವರು ಮೇಯರ್, ಕಾರ್ಪೋರೇಟರ್, ನ್ಯಾಯಾಧೀಶ, ಡಾಕ್ಟರ್ ರಾಗಿದ್ದಾರೆ. ಗದಗದ ಮಾಸ್ಟರ್ ಬಾಗಡೆ ಹೇಳುವಂತೆ ಇವರು ಸಾರಾಯಿ ತಯಾರಿಕೆಯಿಂದ ಶ್ರೀಮಂತರಾಗಿದ್ದಾರೆ. ಮತ್ತು ಇವರನ್ನು ಪರಿಶಿಷ್ಟ ಪಂಗಡ ಎನ್ನುವುದೇ ವರ್ಗ ಎಂದಿದ್ದಾರೆ. ಆದ್ದರಿಂದ ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸಿಗುವ ಸವಲತ್ತು ಸಿಗುತ್ತಿಲ್ಲ.

ಗುರುತಿನ ಚೀಟಿ: ಬ್ರಿಟಿಷರು ಉತ್ತಮ ನಡತೆಯ ಭಾತ್ರುಗಳಿಗೆ ಗುರುತಿನ ಚೀಟಿ ನೀಡಿದ್ದರು. ಗದಗದ ಬಾಗಡೆ ಅವರ ತಂದೆಯ ಚೀಟಿಯನ್ನು ನೆನಪಿಗಾಗಿ ಕಾಯ್ದಿಟ್ಟಿದ್ದಾರೆ. ೭ ಪುಟಗಳ ಪಾಸ್‌ಬುಕ್‌ನಂತಿರುವ ಇದನ್ನು ೨೨-೧೦-೧೯೪೭ರಲ್ಲಿ ನೀಡಲಾಗಿದೆ. ಹಳ್ಳಿಗಳಿಗೆ ಹೋದಾಗ ಈ ಚೀಟಿ ತೋರಿಸಿದರೆ ಇವರನ್ನು ಗೌರವಯುತವಾಗಿ ಕಾಣುತ್ತಿದ್ದರು.

ಮಹಾರಾಷ್ಟ್ರದ ಕೆಲವು ಕಡೆ ಇವರನ್ನು ಪರಿಶಿಷ್ಟ ಪಂಗಡಗಳೆಂದು ಪರಿಗಣಿಸಿದರೆ ಕೊಲ್ಹಾಪುರದಲ್ಲಿ “ವಿಮುಕ್ತ ಜಾತಿ”ಯವರು ಎಂದು ಪರಿಗಣಿಸಿದ್ದಾರೆ. ಬ್ರಿಟಿಷರು ಇವರನ್ನು ನಿರ್ಧಿಷ್ಟ ಪ್ರದೇಶದಲ್ಲಿ ಪೊಲೀಸ್‌ಪಹರೆಯಲ್ಲಿ ಇಟ್ಟಿದ್ದರು. ನಂತರ ಮುಕ್ತಿಗೊಳಿಸಲಾಯಿತು. ಆದರೆ, ಮುಕ್ತ ಜಾತಿಯವರೆಂದು ಕರೆದಿರಬಹುದು.

ಮಹಾರಾಷ್ಟ್ರದಲ್ಲಿ ಇವರ ಮಕ್ಕಳು ಆಂಗ್ಲ ಮಾದ್ಯಮ ಶಾಲೆಯಲ್ಲಿ ಓದುತ್ತಿದ್ದರು. ಸಾರಾಯಿ ವ್ಯಾಪಾರದಿಂದ ಶ್ರೀಮಂತರಾಗಿದ್ದಾರೆ. ಕೊಲ್ಹಾಪುರದಲ್ಲಿ ಕೆಲವರು ಬಡ್ಡಿ ವ್ಯವಹಾರ ಮಾಡುತ್ತಾರೆ.

ಕೊಲ್ಹಾಪುರದಲ್ಲಿ ಸಾವಿರಾರು ಕುಟುಂಬಗಳಿಗೆ ೫ ಜನರು ಮಾತ್ರ ಒಳ್ಳೆಯ ನೌಕರಿ ಹೊಂದಿದ್ದು, ಇವರು ತಮ್ಮ ಕಾಲೋನಿಗಳನ್ನು ಬಿಟ್ಟು ಹೋಗಿದ್ದಾರೆ. ಇನ್ನೂ ಕೆಲವರು ಭಿಕ್ಷೆ ಬೇಡುತ್ತಾರೆ.

ದಾಂಡೇಲಿಯಲ್ಲಿ ನಾಲ್ಕು ಕುಟುಂಬಗಳು ತಮ್ಮ ಶ್ರಮದಿಂದ ಒಳ್ಳೆಯ ಮನೆಯನ್ನು ಹೊಂದಿದೆ. ಸುಮಾರು ೪೦ ಜನರು ಸರ್ಕಾರದಿಂದ ತಲಾ ೨೫,೦೦೦ ರೂ.ಗಳನ್ನು ಪಡೆದುಕೊಂಡಿದ್ದಾರೆ. ಇವರು ಕಬ್ಬಿಣ ಸಂಗ್ರಹಿಸಿ ಅವನ್ನು ಮಾರುತ್ತಾರೆ.

೪೦ ವರ್ಷಗಳಿಂದ ಅಲೆಮಾರಿ ಜೀವನ ಬಿಟ್ಟು ಒಂದು ಕಡೆ ನೆಲೆನಿಂತಿದ್ದಾರೆ. ದಾಂಡೇಲಿಯಲ್ಲಿರುವವರಿಗೆ ರೇಶನ್‌ಕಾರ್ಡ್‌ದೊರೆತಿದೆ. ಸಾಲ ಮರಳಿ ನೀಡದಿದ್ದರೆ ತಮ್ಮ ಮಕ್ಕಳನ್ನು ಮಾರುವ ಪದ್ಧತಿಯನ್ನು ೫೦ ವರ್ಷಗಳ ಹಿಂದೆ ತಡೆಗಟ್ಟಲಾಗಿದೆ.

 

೬. ಆರೋಗ್ಯ

ಸಾಮಾನ್ಯವಾಗಿ ಬುಡಕಟ್ಟು ಜನಾಂಗ ಉತ್ತಮ ಆರೋಗ್ಯವನ್ನು ಹೊಂದಿದ್ದಾರೆ. ಯಾವುದೇ ರೋಗಗಳಿಲ್ಲ. ಬುಡಕಟ್ಟು ಜನಾಂಗಗಳು ಇತರೆ ಜನರ ಸಂಪರ್ಕದಿಂದಾಗಿ ತಮ್ಮ ಮೂಲಸ್ಥಾನವನ್ನು ಬಿಟ್ಟಿದ್ದಾರ. ಅಂದಮಾನಿ ಜನಾಂಗ ಇದರಿಂದಾಗಿ ಮಾಯವಾಗುತ್ತಿರುವುದನ್ನು ಕಾಣಬಹುದು. ಸ್ಥಳೀಯರು ಹೇಳುವಂತೆ ಇವರಲ್ಲಿ ಯಾರೂ ಟಿ.ಬಿ. (T.B) ರೋಗಿಗಳಿಲ್ಲ, ಕಷ್ಟ ರೋಗಿಗಳಿಲ್ಲ. ಭಾತ್ರುಗಳಲ್ಲಿ ಯಾರು “ಏಡ್ಸ್‌” ಸೋಂಕಿತರಿಲ್ಲ.

ಹಲವಾರು ಪ್ರದೇಶಗಳಲ್ಲಿನ ಮಾಹಿತಿಯ ಪ್ರಕಾರ ಇವರು ವಾಸಿಸುವ ಸ್ಥಳ ಆರೋಗ್ಯಕರವಿಲ್ಲ. ಬಹಳ ಕಡೆ ಕುಡಿಯಲು ನೀರು ಇಲ್ಲ. ಸ್ವಚ್ಚತೆಯ ಅವ್ಯವಸ್ಥೆಯಲ್ಲಿದೆ. ಹೊಲಸಾಗಿ ಕೊಳಗೇರಿಗಳಾಗಿ ಉಳಿದಿವೆ.

ಇವರಿಗೆ ತಿನ್ನಲು ಸರಿಯಾಗಿ ಆಹಾರವಿಲ್ಲದ್ದರಿಂದಾಗಿ ಖಾಲಿ ಹೊಟ್ಟೆಯಲ್ಲಿ ತಾವೇ ತಯಾರಿಸಿದ ಸಾರಾಯಿ ಕುಡಿದು ಅನಾರೋಗ್ಯ ಪೀಡಿತರಾಗಿದ್ದರು. ಯುನೆಸ್ಕೋ ಕ್ಲಬ್‌ಸದಸ್ಯರು ಹೇಳುವಂತೆ ಭಾತ್ರುಗಳಲ್ಲಿ  ಸಾಕಷ್ಟು ಹಣವಿಲ್ಲದ್ದರಿಂದಾಗಿ ಇವರಿಗೆ ಒಳ್ಳೆಯ ಹೋಟೆಲ್‌ಗಳಿಗೆ ಹೋಗಲು ಸಾಧ್ಯವಿಲ್ಲ. ಔಷಧಿ ತೆಗೆದುಕೊಳ್ಳಲು ಸಾಧ್ಯವಿಲ್ಲದ್ದರಿಂದಾಗಿ ಯುವಕರಿದ್ದಾಗಲೇ ಬಹಳ ಜನ ಸಾಯುವುದನ್ನು ಕಾಣುತ್ತೇವೆ. ಇದರ ಪರಿಣಾಮವಾಗಿ ಬಹಳಷ್ಟು ಮಹಿಳೆಯರು ವಿಧವೆಯರಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಮಕ್ಕಳು ಅನಾಥರಾಗಿದ್ದಾರೆ.

ಮುಧೋಳದಲ್ಲಿ ಭಾತ್ರುಗಳು ಅನಾರೋಗ್ಯ ಪೀಡಿತರಾದಾಗ ಆಸ್ಪತ್ರೆಗೆ ಹೋಗುತ್ತಾರೆ. ಇವರಲ್ಲಿ ಯಾರು ವೈದ್ಯರಿಲ್ಲ. ಆದರೆ ಬಹಳ ಕಡೆಗಳಲ್ಲಿ ಅವರ ವೈದ್ಯರಿದ್ದರು. ಅವರೀಗ ತೀರಿ ಹೋಗಿದ್ದಾರೆ. ಪ್ರಸ್ತುತದಲ್ಲಿ ಯಾರಲ್ಲಿಯೂ ವೈದ್ಯರಿಲ್ಲ. ತೇರದಾಳದಲ್ಲಿ ಜನರಿಗೆ ಕೆಲವು ದೇಶೀ ಔಷಧಿಗಳ ಪರಿಚಯವಿದೆ.

ರಾಯಭಾಗದ ಜನರಿಗೆ ಯುನೆಸ್ಕೋ ಕ್ಲಬ್ಬಿನವರು ಪೋಲಿಯೋ ಲಸಿಕೆ ಕುರಿತು ತಿಳಿ ಹೇಳಿದ್ದರಿಂದ ತಮ್ಮ ೫ ವರ್ಷದ ಒಳಗಿನ ಮಕ್ಕಳಿಗೆ ಈ ಲಸಿಕೆ ಹಾಕಿಸಿದ್ದಾರೆ. ಬೆಲ್ಲದ ಬಾಗೇವಾಡಿಯವರು ಹೇಳುವಂತೆ ಇವರಲ್ಲಿ ಡಾಕ್ಟರ‍್ಗಳಿದ್ದಾರೆ. ಅವರನ್ನು ವೈದ್ಯಕೀಯ ಎಂದು ಕರೆಯುತ್ತಾರೆ. ಇವರು ಗಿಡ ಮೂಲಿಕೆಗಳನ್ನು ಬಳಸುತ್ತಾರೆ.

ಚಿಕ್ಕೋಡಿಯಲ್ಲಿಯೂ ಪೋಲಿಯೋ ಲಸಿಕೆ ಶಿಬಿರ ಕೈಗೊಂಡು ಮಕ್ಕಳಿಗೆ ಲಸಿಕೆ ಹಾಕಿಸಿದ್ದಾರೆ. ಕೊಲ್ಹಾಪುರದವರು ತಮ್ಮದೇ ಆದ ಔಷಧಿಗಳನ್ನು ಹೊಂದಿದ್ದಾರೆ. ಅವರು ಹೇಳುವ ಔಷಧಿಗಳ ಹೆಸರುಗಳೆಂದರೆ.

೧)     ಒಂದು ವೇಳೆ ಚೇಳು ಕಡಿದರೆ, ಕಿವಿಯಲ್ಲಿ ತಂಬಾಕು ಹಾಕುತ್ತಾರೆ. ಕೆಲವು ಕಡೆ ಗಾಯಕ್ಕೆ ಹುಣಸೇ ಹಣ್ಣನ್ನು ಹಿಂಡುತ್ತಾರೆ.

೨)     ನಾಯಿ ಕಚ್ಚಿದರೆ ಗುಳಕಿ ಎನ್ನುವ ಕಾಯಿಯ ರಸವನ್ನು ಗಾಯದ ಮೇಲೆ ಹಚ್ಚುತ್ತಾರೆ. ಇತರ ಕಡೆಗಳಲ್ಲಿ ಗಾಯದ ಮೇಲೆ ನೀರನ್ನು ಹಚ್ಚುತ್ತಾರೆ.

೩)     ಸಣ್ಣ, ಪುಟ್ಟ ಗಾಯಗಳಿಗೆ ಬಟ್ಟೆ ಸುಟ್ಟು ಅದರ ಬೂದಿ ಹಚ್ಚುತ್ತಾರೆ.

೪)    ಜ್ವರ ಬಂದರೆ, ಏಳು ಕೆಂಪು ಕಲ್ಲುಗಳನ್ನು ಸುಟ್ಟು, ಅವುಗಳನ್ನು ತಾಟಿನಲ್ಲಿ ಇಟ್ಟು ನೀರು ಸುರಿಯುತ್ತಾರೆ. ಅದರಿಂದ ಬರುವ ಉಗಿಯನ್ನು ರೋಗಿಯು ಉಸಿರಿನಲ್ಲಿ ತೆಗೆದುಕೊಳ್ಳಬೇಕು. ಆಗ ಆತನನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿರುತ್ತಾರೆ.

೫)    ವಿಷಪೂರಿತ ಹಾವು ಕಡಿದರೆ, ಆತನಿಗೆ ಹಸಿ ಮೆಣಸಿನಕಾಯಿ ತಿನ್ನಿಸುತ್ತಾರೆ. ಅದು ಖಾರ ಹತ್ತಿದರೆ ಅದು ವಿಷಪೂರಿತ ಹಾವು ಅಲ್ಲವೆಂದು ತಿಳಿಯುತ್ತಾರೆ.

೬)     ಗಾಯಕ್ಕೆ ಎಲೆಯನ್ನು ಅರಿದು ಉಪ್ಪಿನೊಂದಿಗೆ ಬೆರೆಸಿ ಗಾಯದ ಮೇಲೆ ಹಚ್ಚುತ್ತಾರೆ.

೭)     ಕೆಮ್ಮಿಗೆ ಹಾಗಲಕಾಯಿ ರಸವನ್ನು ಕುಡಿಸುತ್ತಾರೆ.

೮)     ದಾಂಡೇಲಿಯಲ್ಲಿ ಉಸಿರಾಟದ ಸಮಸ್ಯೆಗೆ ಹಗಲಕಾಯಿ ರಸ ಕುಡಿಸುತ್ತಾರೆ.

೯)     ಮಗುವಿಗೆ ಕಬ್ಬಿಣ ಕಾಯಿಸಿ ಎದೆಯ ಮೇಲೆ ಮೂರು ಕಡೆಗಳಲ್ಲಿ “ಬರೆ” ಎಳೆಯುತ್ತಾರೆ. ಇದರಿಂದ ಮಗುವಿಗೆ ಉಸಿರಾಟದ ತೊಂದರೆ ಬರುವುದಿಲ್ಲ.

೭. ಶಿಕ್ಷಣ

ಪ್ರತಿಯೊಂದು ದೇಶ ಅಥವಾ ನಾಗರಿಕ ಬೆಳವಣಿಗೆ ಹೊಂದಬೇಕಾದರೆ ಶಿಕ್ಷಣ ಅತ್ಯವಶ್ಯಕ. ದೇಶ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಅಲ್ಲಿನ ಪ್ರಜೆಗಳು ಅಕ್ಷರಸ್ಥರಾಗಿರಬೇಕು. ಭಾರತ ಗ್ರಾಮಗಳ ದೇಶ. ಆದ್ದರಿಂದ ಬಹಳಷ್ಟು ಜನ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲಿ ಶಾಲೆಗಳು ಸ್ಥಾಪನೆಯಾಗಿ ಎಲ್ಲರಿಗೂ ಒಳ್ಳೆಯ ಶಿಕ್ಷಣ ದೊರೆಯಬೇಕು. ನಮ್ಮಲ್ಲಿ ಮಿಲಿಯನ್‌ಗಟ್ಟಲೇ ಆದಿವಾಸಿ ಜನಾಂಗವಿದ್ದಾರೆ. ಆದರೆ ಅವರಲ್ಲಿ ಕೇವಲ ಸ್ವಲ್ಪ ಜನರು ಮಾತ್ರ ಶಿಕ್ಷಿತರಾಗಿದ್ದಾರೆ. ಅವರಲ್ಲಿ ಬಹುಪಾಲು ಜನರು ಅಲೆಮಾರಿಗಳಾಗಿದ್ದರಿಂದ ಅವರಿಗೂ ಶಿಕ್ಷಣ ದೊರೆಯುವಂತಾಗಬೇಕು. ಇಟಲಿಯ ಫಾದರ್ ರೆನಟೊ ಈ ಅಲೆಮಾರಿಗಳಿಗೆ ಶಿಕ್ಷಣ ನೀಡುವ ನವೀನ ಪ್ರಯೋಗವನ್ನು ಆರಂಭಿಸಿದ್ದರು. ಈಜಿಪ್ಟ್‌ಗಳೊಡನೆ ಹೋಗಲು ರೆನಾಟೋರವರು ಜನರನ್ನು ತರಬೇತಿಗೊಳಿಸಿದರು. ಈ ಪದ್ಧತಿಯನ್ನು ಇವರು ಬ್ರೆಜಿಲ್‌ಮತ್ತು ಬಾಂಗ್ಲಾದೇಶಗಳಲ್ಲಿಯೂ ಪರಿಚಯಿಸಿದ್ದಾರೆ. ಅಲೆಮಾರಿಗಳ ಅನುಕೂಲಕ್ಕಾಗಿ ಈ ವ್ಯವಸ್ಥೆಯನ್ನು ಪರಿಚಯಿಸುವುದು ಸೂಕ್ತವಾಗುತ್ತದೆ.

ಫಾದರ್ ಪಾಲೋಸ್‌ರ ಪರಿಶ್ರಮದಿಂದಾಗಿ ಬಿಜಾಪುರ ದರ್ಗಾದಲ್ಲಿ ಮಕ್ಕಳು ಶಾಲೆಗೆ ಹಾಜರಾಗುತ್ತಾರೆ. ಬಿಜಾಪುರದ ಸ್ಟೇಶನ್‌ರಸ್ತೆಯಲ್ಲಿ ಕೊಳಗೇರಿಯಲ್ಲಿ ಶಾಲೆಯನ್ನು ಪಾಲೊಸ್‌ರು ಪ್ರಾರಂಭಿಸಿದ್ದಾರೆ. ಮತ್ತು ಪ್ರತಿನಿತ್ಯ ವಿದ್ಯಾರ್ಥಿಗಳನ್ನು ಕರೆತರಲು ಒಂದು ಶಾಲಾ ವಾಹನವಿದೆ. ಕಳೆದ ಎರಡು ವರ್ಷಗಳಿಂದ ಪ್ರಾರಂಭವಾದ ಈ ಶಾಲೆಯಿಂದಾಗಿ ಇವರ ಕಾಲೋನಿಗಳು ಸುಧಾರಣೆಯಾಗಿವೆ.

ಬಿಜಾಪುರದಲ್ಲಿನ ಯುನೆಸ್ಕೋ ಯೂತ್‌ಕ್ಲಬ್‌ನವರು ನಾಲ್ಕು ವರ್ಷಗಳಿಂದ ವಯಸ್ಕರ ಶಿಕ್ಷಣದ ವರ್ಗಗಳನ್ನು ನಡೆಸುತ್ತಿದ್ದಾರೆ. ಆದರೆ ಇನ್ನೂ ಹಲವಾರು ಯುವಕರು ಅನಕ್ಷರಸ್ಥರಾಗಿದ್ದಾರೆ.

ಬಡಿಕಮಾನದಲ್ಲಿ ಸುಮಾರು ೪೦% ಯುವಕರು ೧೦% ಯುವತಿಯರು ಅನಕ್ಷರಸ್ಥರಿದ್ದಾರೆ. ಮುದ್ದೇಬಿಹಾಳದಲ್ಲಿ ಒಬ್ಬ ಯುವಕನೂ ಶಿಕ್ಷಕರಾಗಿಲ್ಲ. ಮಕ್ಕಳು ಶಾಲೆಗೆ ಹೋಗುವುದಿಲ್ಲ. ಇವರು ಅನಕ್ಷರಸ್ಥರಾಗಿ ಅನಾಗರೀಕರಾಗಿ ಅಷ್ಟೇ ಅಲ್ಲದೆ ಪ್ರಸಕ್ತ ವಿದ್ಯಾಮಾನಗಳ ಜ್ಞಾನವಿಲ್ಲದೆ, ಇನ್ನೊಬ್ಬರೊಂದಿಗೆ ಹೇಗೆ ವರ್ತಿಸಬೇಕೆಂಬ ಜ್ಞಾನವಿಲ್ಲದೆ, ೪೦ ವರ್ಷಗಳು ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ ಇವರನ್ನು ನೋಡಿದರೆ ಮರುಕ ಹುಟ್ಟುತ್ತದೆ ಎಂದು ಯುನೆಸ್ಕೋ ಕ್ಲಬ್‌ಸದಸ್ಯರು ಹೇಳುತ್ತಾರೆ.

ಭಾರತ ಪ್ರಕಾಶಿಸುತ್ತದೆ ಎಂದು ರಾಜಕೀಯ ಮುಖಂಡರು ಗೊನಗುತ್ತಿದ್ದರೆ, ಜನತೆ ಸುಭಲರಾಗಿದ್ದಾರೆ ಎಂದು ಕರ್ನಾಟಕದ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಭಾತ್ರುಗಳ ಪರಿಸ್ಥಿತಿ ಈಗಲೂ ಹಾಗೆಯೇ ಮುಂದುವರಿದಿದೆ. ಬಿಜಾಪುರದ ದರ್ಜಾದಲ್ಲಿರುವ ೧೫ ವರ್ಷದ ಜ್ಯೋತಿ ಎಂಬುವವಳು ಆರ್ಥಿಕ ಪರಿಸ್ಥಿತಿಯಿಂದಾಗಿ ೮ನೇ ತರಗತಿಗೆ ಶಿಕ್ಷಣಕ್ಕೆ ವಿದಾಯ ಹೇಳಿದ್ದಾಳೆ. ನಮಗೆ ಬುದ್ಧಿ ಇಲ್ಲ ಎಂದು ತಿಳಿದು ಸರ್ಕಾರಿ ಅಧಿಕಾರಿಗಳು ಮತ್ತು ಇತರೆ ಶ್ರೀಮಂತ ವರ್ಗದವರು ನಮ್ಮನ್ನು ಶೋಷಿಸುತ್ತಿದ್ದಾರೆ. ನಮಗೆ ಯಾರ ಸಹಾಯವೂ ಇಲ್ಲ. ಆದ್ದರಿಂದ ನಮ್ಮಲ್ಲಿ ಯಾವುದೇ ಬದಲಾವಣೆಯಿಲ್ಲ. ಆದಾಗ್ಯೂ ನಮ್ಮ ಪ್ರದೇಶದ ೨೦ ಮಕ್ಕಳು ಲೊಯಾಲಾ ಹೋಮಿಯೂರಿ ಶಾಲೆಗೆ ಹೋಗುತ್ತಾರೆ ಎಂದು ಈ ೧೮ರ ಪ್ರಾಯದ ಜ್ಯೋತಿ ಹುಡುಗಿಯ ನೊಂದ ಮನಸ್ಸಿನ ಧ್ವನಿಯಾಗಿದೆ. ಫಾದರ್ ಪಾಲೊಸ್‌ರು ಬಡಿಕಮಾನದಲ್ಲಿ ವಯಸ್ಕರ ಶಿಕ್ಷಣ ವರ್ಗಗಳನ್ನು ಪ್ರಾರಂಭಿಸಿ ಸುಧಾರಣೆಗೆ ಸಾಕಷ್ಟು ಪ್ರಯತ್ನಿಸಿದ್ದಾರೆ. ಮುಧೋಳದಲ್ಲಿ ಕೇವಲ ೫ ಮಕ್ಕಳು ಶಾಲೆಗೆ ಹೋಗುತ್ತಿದ್ದು, ಉಳಿದ ಮಕ್ಕಳು ಹೋಟೆಲ್‌ಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿನ ಎಲ್ಲಾ ಯುವಕರು ಅವಿದ್ಯಾವಂತರಾಗಿದ್ದಾರೆ. ಆದರೆ ಆಶ್ಚರ್ಯವೆಂದರೆ, ೮೦ ವರ್ಷದ ಗುಲಾಬಿ ಬಾಯಿಗೆ ಓದಲು ಬರೆಯಲು ಬರುತ್ತದೆ.

ಭಾತ್ರುಗಳಿಗೆ ಈಗ ಶಿಕ್ಷಣ ಪಡೆಯಬೇಕು ಎಂಬ ಪ್ರಜ್ಞೆ ಮೂಡಿದೆ. ಆದರೆ ಯಾರು ಅವರಿಗೆ ಶಿಕ್ಷಣ ನೀಡಲು ಮುಂದೆ ಬರುತ್ತಿಲ್ಲ ಎಂಬುದೇ ಅವರ ನೋವಾಗಿದೆ.

ಭಾತ್ರುಗಳ ಮಕ್ಕಳು ಬಡತನದಿಂದ ಬಂದಿದ್ದರಿಂದಾಗಿ ಶಾಲೆಗಳಲ್ಲಿದ್ದ ಶ್ರೀಮಂತ ಕುಟುಂಬದ ಮಕ್ಕಳೊಂದಿಗೆ ಕೂಡಲಾಗುವುದಿಲ್ಲ. ಫಾದರ್ ಪೌಲೋಸರ್‌ಸಹಾಯದಿಂದಾಗಿ ಹಲವಾರು ಮಕ್ಕಳು ಪ್ರೌಢಶಾಲೆವೆರೆಗೆ ಓದಿದ್ದಾರೆ.

ರಾಯಭಾಗದಲ್ಲಿ ಇವರ ಮಕ್ಕಳು, ಯುವಕರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇವರ ತಾಯಂದಿರು ಭಿಕ್ಷೆ ಬೇಡುವುದೇ ತಮ್ಮ ಜೀವನವೆಂದು ತಿಳಿದ ತಮಗೂ ಮಾನವ ಹಕ್ಕುಗಳಿವೆ ಎಂಬುದು ಗೊತ್ತಿಲ್ಲ. ಶೈಕ್ಷಣಿಕ ಮಹತ್ವವಂತು ಇವರಿಗೆ ಗಗನಕುಸುಮ. ಬೆಲ್ಲದ ಬಾಗೇವಾಡಿಯಲ್ಲಿನ ಭಾತ್ರುಗಳು ಅಲೆಮಾರಿಗಳಾಗಿದ್ದರಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿಲ್ಲ. ಇವರಿಗೆ ಸರ್ಕಾರದ ಯಾವುದೇ ಸಹಾಯ ದೊರೆತಿಲ್ಲ.

ಚಿಕ್ಕೋಡಿಯಲ್ಲಿನ ಮಕ್ಕಳು ದೂರದ ಪ್ರದೇಶಗಳಿಗೆ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರಾಕರಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿನ ಜನರಲ್ಲಿ ಪ್ರತಿಶತ ೨೫ರಷ್ಟು ಯುವಕರು ನಿರಕ್ಷರಿಗಳಾಗಿದ್ದಾರೆ. ಸಂತೋಷದಾಯಕವೆಂದರೆ, ಇಲ್ಲಿನ ಮಕ್ಕಳು ಶಾಲೆಗೆ ಹೋಗುತ್ತಾರೆ. ಶೇ. ೫೦ ರಷ್ಟು ಬಾಲಕಿಯರು ಎಸ್‌ಎಸ್‌ಎಲ್‌ಸಿವರೆಗೆ ಅಧ್ಯಯನ ಮಾಡಿದ್ದಾರೆ. ಅವರಲ್ಲಿ ಶೇ. ೨೫ರಷ್ಟು ಯುವಕರು ಸುಶಿಕ್ಷಿತರಾಗಿದ್ದಾರೆ.

ಗದಗದಲ್ಲಿನ ಭಾತ್ರುಗಳ ಜನಾಂಗಕ್ಕೆ ಸೇರಿದ ಮಾಸ್ಟರ್ ಬಾಗಡೆ ಪ್ರಕಾರ ಕೆಲವು ಮಕ್ಕಳು ಇಂಗ್ಲಿಷ್‌ಮಾಧ್ಯಮ ಶಾಲೆಗೆ ಹೋಗುತ್ತಾರೆ. ಬಾಗಡೆಯವರು ಸಂಬಂಧಿಗಳ ಹತ್ತಿರದವರು ಒಳ್ಳೆಯ ಶಿಕ್ಷಣ ಪಡೆದುಕೊಂಡಿದ್ದಾರೆ. ಅದರಲ್ಲಿ ಕೆಲವರು ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.

೮. ಸಮುದಾಯ

ಇತರೆ ಜನಾಂಗದವರಂತೆ ಭಾತ್ರುಗಳು ಸಹ ಪ್ರತ್ಯೇಕವಾಗಿ ವಾಸಿಸುತ್ತಾರೆ. ಇವರು ವಿಭಕ್ತ ಕುಟುಂಬಗಳನ್ನು ಹೊಂದಿದ್ದಾರೆ. ವಿಜಯಕಾಮತ್‌ರು ಹೇಳುವಂತೆ ಸಮುದಾಯ ಜೀವಿಗಳಲ್ಲಿ ಅಂದರೆ, ಆದಿವಾಸಿಗಳ ಸಮುದಾಯಗಳಲ್ಲಿ ಸಾಕಷ್ಟು ಬಾಲಕಿಯರು, ಅನಾಥಾಲಯದಲ್ಲಿದ್ದಾರೆ ಮತ್ತು ಬಾಲಕರು ಆಸ್ಪತ್ರೆ ಮುಂತಾದ ಕಡೆ ಕೆಲಸಕ್ಕಿದ್ದಾರೆ. ಇದರರ್ಥ ಕೇವಲ ಗಂಡು ಮಕ್ಕಳಿಗೆ ಮಾತ್ರ ಪ್ರೋತ್ಸಾಹ ನೀಡಿ, ಹೆಣ್ಣು ಮಕ್ಕಳನ್ನು ನಿರ್ಲಕ್ಷಿಸಿದ್ದಾರೆ. ಇಂದಿಗೂ ಭಾರತದ ವಿವಿಧ ಕಡೆಗಳಲ್ಲಿ ಹೆಣ್ಣು ಶಿಶು ಹತ್ಯೆಯನ್ನು ಕಾಣಬಹುದು. ೧೯೯೭ರಲ್ಲಿ ಸರಾಸರಿ ಒಂದು ಸಾವಿರ ಪುರುಷರಿಗೆ ೯೨೭ ಸ್ತ್ರೀಯರಿದ್ದಾರೆ. ಆದಿವಾಸಿಗಳಲ್ಲಿ ಮಾತ್ರ ಈ ಪ್ರಮಾಣ ಸಮವಾಗಿದೆ. ಇಲ್ಲಿ ಯಾವುದೇ ರೀತಿಯ ಲಿಂಗಭೇದವಿಲ್ಲ.

ವಿಜಯ ಕಾಮತ್‌ರ ಪ್ರಕಾರ ಈ ಜನಾಂಗದ ವಿಶೇಷ ಲಕ್ಷಣಗಳೆಂದರೆ ಇವರಿಗೆ ಸಹಬಾಳ್ವೆ ಇದೆ. ಆತಿಥ್ಯ ಉಪಚಾರವಿದೆ. ಇತರರೊಡನೆ ಸೌಹರ್ದಯುತವಾಗಿ ಬಾಳುವ ಸ್ಪೂರ್ತಿ ಇದೆ. ಯಾವುದೇ ಗಲಭೆಗಳಿಲ್ಲದೆ ಶಾಂತಿ ಪ್ರಿಯರಾಗಿದ್ದಾರೆ. ದೈವಿ ನಿಷ್ಠರಾಗಿದ್ದಾರೆ.

ಯಾವಾಗ ಇವರು ಬೃಹತ್‌ಪ್ರಮಾಣದಲ್ಲಿ ಸಂಘಟಿತಗೊಂಡು ತಮ್ಮ ಆಕಾಂಕ್ಷೆಗಳ ಈಡೇರಿಕೆಗಾಗಿ ತಮ್ಮ ಗುರಿ ಸಾಧನೆಗಾಗಿ ಸಂಘಟಿತಗೊಂಡಾಗ ಇವರ ವೈಶಿಷ್ಟವನ್ನು ಗುರ್ತಿಸಬಹುದು.

ವಿಜಯ ಕಾಮತ್‌ರ ಭಾತ್ರುಗಳ ಆಂತರಿಕ ಶಕ್ತಿಯ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದಾರೆ. ಒಂದಲ್ಲ ಒಂದು ದಿನ ಶತಮಾನಗಳಿಂದ ಶೋಷಣೆಗೆ ಒಳಗಾದ ಈ ಭಾತ್ರುಗಳು ತಮ್ಮ ಶಕ್ತಿಯನ್ನು ಹೊರ ಜಗತ್ತಿಗೆ ತೋರಿಸುತ್ತಾರೆ. ಇವರು ದೈವಿ ಶಕ್ತಿಯ ಮೇಲೆ ವಿಶ್ವಾಸ ಹೊಂದಿದ್ದಾರೆ. ದೇವರು ಅವರಿಗೆ ಭದ್ರ ಬುನಾದಿಯನ್ನು ನೀಡಿದ್ದಾನೆ. ಆಸಕ್ತಿಯಿಂದ ಅವರು ಮುಂದೆ ಬರುತ್ತಾರೆ. ಆಶಾವಾದಿಗಳಾದ ಇವರಲ್ಲಿ ಆತ್ಮಹತ್ಯೆ ಮಹಾಪಾಪವಾಗಿದೆ. ಇತರ ಜನಾಂಗಕ್ಕೆ ಹೋಲಿಸಿಕೊಂಡಾಗ ಇದು ಇವರಲ್ಲಿಲ್ಲ.

ಪ್ರತಿಯೊಂದು ಕಾಲೋನಿಯಲ್ಲಿ ಇವರ ಮುಖಂಡರಿದ್ದಾರೆ. ಆತನನ್ನು ಚೇರ್ಮನ್‌, ಅಧ್ಯಕ್ಷ ಅಥವಾ ಸರಪಂಚ್‌ಎಂದು ಕರೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಇವರು ಸಮಾನ ಸ್ಥಾನವನ್ನು ನೀಡುತ್ತಾರೆ. ಹಿರಿಯ ಸಭೆಗಳಲ್ಲಿ ಇವರು ಭಾಗವಹಿಸುತ್ತಾರೆ.

ಬನಶಂಕರಿಯಲ್ಲಿ ಮೀರಾ ಹೇಳುವಂತೆ ಈಕೆಗೆ ತನ್ನ ಮಾವ ಮತ್ತು ಅತ್ತೆಯನ್ನು ಹೆಸರು ಹಿಡಿದು ಕರೆಯಲು ಅನುಮತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಮಹಿಳೆಯರು ಒಬ್ಬ ತಂದೆ ಮಕ್ಕಳಿಗೆ ನೀಡಬೇಕಾದ ಮತ್ತು ಮಾಡಬೇಕಾದ ಕಾರ್ಯ ಮಾಡುವಷ್ಟು ಸಮರ್ಥರಾಗಿದ್ದಾರೆ.

ಮಹಿಳೆ ಮತ್ತು ಪುರುಷರು ಈ ಜನಾಂಗಕ್ಕೆ ದೊಡ್ಡ ಆಸ್ತಿ. ಕೆಲವೊಂದು ಪ್ರದೇಶದಲ್ಲಿ ಮಹಿಳೆ ತಮ್ಮ ಸಮುದಾಯದ ಮುಖಂಡತ್ವ ಹೊಂದಿದ್ದಾಳೆ. ಮತ್ತು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾಳೆ.

ಆದರೆ, ಭಾತ್ರುಗಳಲ್ಲಿ ವಿಧವೆಯರಿಗೆ ಗೌರವವಿಲ್ಲ. ಅವರಿಗೆ ಆಭರಣ ಧರಿಸುವುದು, ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವುದು ನಿಷೇಧವಿದೆ.

ಭಾತ್ರುಗಳಲ್ಲಿ ವೈಯಕ್ತಿಕ ಅಥವಾ ಗುಂಪುಗಳಲ್ಲಿ ಸಂಘರ್ಷ, ವೈರುತ್ವಗಳು ಏರ್ಪಟ್ಟರೆ ಅವರ ಮುಖಂಡರು ತೀರ್ಮಾನ ತೆಗೆದುಕೊಂಡು ಬಗೆಹರಿಸುವ ಸಂಪ್ರದಾಯದ ಅಧಿಕಾರ ಪಡೆದುಕೊಂಡಿದ್ದಾರೆ. ಜನರು ಕೂಡಾ ಇವರ ಮೇಲೆ ನಂಬಿಕೆ ಹೊಂದಿದ್ದಾರೆ. ಅವರ ಮಾತುಗಳನ್ನು ನಿರ್ಣಯಗಳನ್ನು ಒಪ್ಪಿಕೊಳ್ಳುತ್ತಾರೆ. ಇವರು ಸಾಮಾನ್ಯ ರಾಜಕೀಯ ಜ್ಞಾನವನ್ನು ಹೊಂದಿದ್ದಾರೆ.

ಆದಿವಾಸಿಗಳ ಮುಖಂಡರು ಗ್ರಾಮಗಳಲ್ಲಿನ ತಕರಾರುಗಳನ್ನು ಮತ್ತು ಭಿನ್ನಮತಗಳನ್ನು ಹೊಂದಾಣಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ಎಲ್ಲ ಕುಟುಂಬಗಳು ಒಂದೇ ಎಂಬ ಭಾವನೆಯಿಂದಾಗಿ ಇದು ಸಾಧ್ಯವಾಗಿದೆ. ಪರಸ್ಪರರಲ್ಲಿ ವೈಷಮ್ಯವನ್ನು ಬಗೆಹರಿಸಿ, ಪ್ರಸಂಗ ಬಂದರೆ ಅಪರಾಧಗಳನ್ನು ಶಿಕ್ಷೆಗೆ ಗುರಿಪಡಿಸುವ ಮೂಲಕ ತಮ್ಮ ಏಕತೆಯನ್ನು ಉಳಿಸಿಕೊಳ್ಳುವ ಹೆಣಗಾಟ ಇವರದಾಗಿದೆ.

ಮುದ್ದೇಬಿಹಾಳದಲ್ಲಿನ ೯ ಕಾಲೋನಿಗಳಲ್ಲಿ ಒಬ್ಬನೆ ಮುಖಂಡನಿದ್ದಾನೆ. ಆತನನ್ನು ಮುಖದ್ದಮ್‌ಎಂದು ಕರೆಯುತ್ತಾರೆ. ೧೮ ಗೋತ್ರಗಳ ಪೈಕಿ ದೊಡ್ಡ ಗೋತ್ರದವರು ಮುಖಂಡರಾಗುತ್ತಾರೆ. ಮುದ್ದೇಬಿಹಾಳದಲ್ಲಿ ಪೈಕಿ ದೊಡ್ಡ ಗೋತ್ರದವರು ಮುಖಂಡರಿದ್ದಾರೆ. ಮುದ್ದೇಬಿಹಾಳದಲ್ಲಿ ಇಂದ್ರೇಶರ ಗೋತ್ರ ದೊಡ್ಡದಿದೆ. ಆದ್ದರಿಂದ ಅವರ ಮುಖಂಡನೆ ಎಲ್ಲರ ಮುಖಂಡನಾಗಿದ್ದಾನೆ.

ಬೆಲ್ಲದ ಬಾಗೇವಾಡಿಯಲ್ಲಿನ ಈತನನ್ನು ಪಂಚನೆಂದು ಕರೆಯುತ್ತಾರೆ. ರಾಣಸಿಂಗ್‌ನೆತಲೆ ಪಂಚನಾಗಿದ್ದಾನೆ. ಯಾರಾದರೂ ಅವರ ನಿಯಮ ಉಲ್ಲಂಘಿಸಿದರೆ, ಅಂಥವರನ್ನು ತಮ್ಮ ಸಮುದಾಯದ ಸಭೆ ಮುಂದೆ ಕರೆಯಿಸಿ ಉತ್ತಮ ಮಾರ್ಗದಲ್ಲಿ ಜೀವನ ನಡೆಸುವಂತೆ ತಿಳಿ ಹೇಳುತ್ತಾರೆ.

ದಾಂಡೇಲಿಯಲ್ಲಿನ ಮುಖಂಡರು ಎರಡು ಪಕ್ಷದವರ ವಾದಗಳನ್ನು ಅಥವಾ ಮಾತುಗಳನ್ನು ಕೇಳುತ್ತಾನೆ. ನಂತರ ಮುಂದೆ ಒಂದು ಬಿಳಿ ವಸ್ತ್ರವನ್ನಿಟ್ಟು ಬಹಳ ಹೊತ್ತಿನವರೆಗೆ ಅದನ್ನೇ ನೋಡಿ ನಂತರ ಆಕಾಶ ನೋಡಿ ನ್ಯಾಯ ನಿರ್ಣಯ ಕೊಡುತ್ತಾನೆ.

ಆಗ ದೇವರು ಹಾಜರಾಗಿದ್ದಾನೆ ಎಂದು ತಿಳಿದು ಈ ಸಂದರ್ಭದಲ್ಲಿ ೪ ಜನ ಹಿರಿಯರು ಇರುತ್ತಾರೆ. ಅವರನ್ನು ದೈವದ ಮಂದಿ ಎನ್ನುತ್ತಾರೆ. ಈ ಸಭೆಯು ಅಪರಾಧಿಯನ್ನು ಸಮಾಜ ಬಹಿಷ್ಕಾರ ಹಾಕಿ ನಂತರ ಸೇರಿಸಿಕೊಳ್ಳುವ ಅಧಿಕಾರ ಹೊಂದಿದೆ. ಮತ್ತು ಅಪರಾಧಿಗೆ ದಂಡವನ್ನು ಕೂಡಾ ವಿಧಿಸುತ್ತಾರೆ.

ಬನಶಂಕರಿಯಲ್ಲಿ ಪಂಚಾಯಿತಿ, ಪಂಚರು ಇಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ಬಗೆಹರಿಸಲು ಬಿಜಾಪರದ, ಬೆಲ್ಲದ ಬಾಗೇವಾಡಿಯಿಂದ ಮುಖಂಡರನ್ನು ಕರೆಯುತ್ತಾರೆ.

ಮುಧೋಳದಲ್ಲಿ ಬತುಂಗನು ಮುಖಂಡನಾಗಿದ್ದಾನೆ. ಈತನಲ್ಲಿಗೆ ತಕರಾರು ಬಂದಾಗ ನಿರ್ಣಯಿಸಿ ಅಪರಾಧಿಗೆ ೧೦೦ ಅಥವಾ ೨೦೦ ರೂ. ದಂಡ ವಿಧಿಸುತ್ತಾನೆ. ದೊಡ್ಡ ತಂಟೆ-ತಕರಾರುಗಳಿದ್ದರೆ ಅವುಗಳನ್ನು ಹುಬ್ಬಳ್ಳಿಗೆ ಕಳುಹಿಸಲಾಗುತ್ತದೆ. ಒಂದು ಕೊಲೆಯ ಅಪರಾಧ ಇದ್ದರೆ ೨೫ ಕಡೆಗಳಲ್ಲಿನ ಮುಖಂಡರು ಸೇರಿ ನ್ಯಾಯ ನಿರ್ಣಯ ಮಾಡುತ್ತಾರೆ.

ವ್ಯಕ್ತಿ ನಿರಪರಾಧಿ ಎಂದು ದೃಢಪಡಿಸಲು ಕುದಿಯುವ ಎಣ್ಣೆಯಲ್ಲಿ “ಕೈ” ಅದ್ದಿಸುತ್ತಾರೆ. ಆತನಿಗೆ ಏನು ಆಗದಿದ್ದರೆ ಆತ ನಿರಪರಾಧಿ, ಕೈಗೆ ಏನಾದರೂ ಆದರೆ ಆತನನ್ನು ಅಪರಾಧಿ ಎಂದು ತೀರ್ಮಾನಿಸಿ ಶಿಕ್ಷೆ ನೀಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಕಬ್ಬಿಣದ ಸಲಾಕೆಯನ್ನು ಕಾಯಿಸಿ ಅದರ ಮೇಲೆ ಒಂದು ಎಲೆಯನ್ನು ಇಟ್ಟು ಅದರ ಮೇಲೆ ಕೈ ಇಡುವಂತೆ ವ್ಯಕ್ತಿಗೆ ಹೇಳಲಾಗುತ್ತದೆ. ಆತನಿಗೆ ಏನೂ ಆಗಿರದಿದ್ದರೆ ಆತ ನಿರಪರಾಧಿ.

ರಾಯಭಾಗದಲ್ಲಿ ಪ್ರತಿ ಕುಟುಂಬಕ್ಕೆ ಒಬ್ಬನಂತೆ ೫ ಮಂದಿ ಮುಖಂಡರ ಸಂಘ ಇದೆ. ಅಪರಾಧಿ ೫೦೦ ರೂ. ದಂಡ ನೀಡಿದರೆ ಆತನನ್ನು ಸಮಾಜದ ಒಳಗೆ ಸೇರಿಸಿಕೊಳ್ಳುತ್ತಾರೆ.

ಬಿಜಾಪುರದಲ್ಲಿ ದರ್ಗಾ ಮತ್ತು ಬಡಿಕಮಾನ ಎರಡು ಕಾಲೋನಿಗಳಲ್ಲಿ “ಕಂಜರಾ ಬಸಾ ಸಮಾಜ” ಎಂಬ ಸಂಘ ಇದೆ. ಇದರ ೫ ಮಂದಿ ಸದಸ್ಯರ ಪೈಕಿ ೩ ಜನ ದರ್ಗಾದವರು ೨ ಬಹಿಕಮಾನದವರಿದ್ದಾರೆ. ಈ ಸಮಾಜದ ಸಭೆ ತಿಂಗಳಿಗೆ ಒಂದು ಸಲ ನಡೆಯುತ್ತದೆ. ಆಗ ಎಲ್ಲರ ಕುಟುಂಬದವರು ಹಾಜರಿರುತ್ತಾರೆ. ೧೦ ವರ್ಷದಿಂದ ಈ ಸಂಘ ಕಾರ್ಯ ನಿರ್ವಹಿಸುತ್ತಿದೆ. ಆಗ ತಮ್ಮ ಕಾಲೋನಿಗಳ ವಿಷಯ ಕುರಿತು ಮತ್ತು ಹಬ್ಬ-ಜಾತ್ರೆಗಳ ಕುರಿತು ಚರ್ಚಿಸುತ್ತಾರೆ. ಇಲ್ಲಿ ನಿರ್ದಿಷ್ಟ ಚಂದಾ ಇರುವುದಿಲ್ಲ. ಸ್ವ-ಇಚ್ಛೆಯಿಂದ ಪ್ರತಿಯೊಬ್ಬರು ೧೫, ೨೦, ೫೦ ಅಥವಾ ೧೦೦ ರೂ.ಗಳನ್ನು ನೀಡುತ್ತಾರೆ.

ಇವರಲ್ಲಿ ದೇವದಾಸಿ ಪದ್ಧತಿ, ಪತ್ನಿತ್ವ ಮತ್ತು ಬಹು ಪತ್ನಿತ್ವ ಪದ್ಧತಿ ಆಚರಣೆಯಿಲ್ಲ.

ಬೆಲ್ಲದ ಬಾಗೇವಾಡಿಯವರು ಹೇಳುವಂತೆ ಇವರಲ್ಲಿ ಇನ್ನು ಒಗ್ಗಟ್ಟು ಇಲ್ಲದ್ದರಿಂದಾಗಿ ಗ್ರಾಮಸ್ಥರು ಇವರನ್ನು ಹೊರಗೆ ಇಡುತ್ತಾರೆ. ಇವರನ್ನು ಅಸ್ಪೃಶ್ಯರು ಎಂದು ಪರಿಗಣಿಸಿದ್ದಾರೆ. ಯುನೆಸ್ಕೋ ತಂಡದವರು ಹೋದಾಗ ಗ್ರಾಮದ ಮಕ್ಕಳು ಮತ್ತು ಪಾಲಕರು ಇವರೊಂದಿಗೆ ಭಾತ್ರುಗಳ ಮನೆಗೆ ಬಂದು ಕುಳಿತು ಚಹಾ ಕುಡಿಯುತ್ತಿದ್ದರು. ಆದರೆ ಮನೆಗೆ ಹೋಗಿ ಸ್ನಾನ ಮಾಡುತ್ತಿದ್ದರು. ಚಿಕ್ಕೋಡಿಯ ಸದಾನಂದ ಹೇಳುವಂತೆ ಇತರರು ಇವರನ್ನು ಮುಟ್ಟುವುದಿಲ್ಲ.

ಚಿಕ್ಕೋಡಿಯಲ್ಲಿ ಜನರು ಪಂಚರ ನ್ಯಾಯ ನಿರ್ಣಯ  ಸರಿಬರದಿದ್ದರೆ ಆ ಕಾಲೋನಿಗಳಲ್ಲಿ ಒಬ್ಬ ಮುಖಿಯಾ ಎಂಬ ಮುಖಂಡನಿರುತ್ತಾನೆ. ಆತನಲ್ಲಿ ನ್ಯಾಯಕ್ಕಾಗಿ ಮೊರೆ ಹೋಗುತ್ತಾರೆ. ಮದುವೆ ಮತ್ತು ಜಾತ್ರೆಗಳ ಸಂದರ್ಭದಲ್ಲಿ ಮುಖಿಯಾ ಮಾರ್ಗದರ್ಶನ ನೀಡುತ್ತಾರೆ. ಆತನನ್ನು ಕರೆಯಿಸಿದವರು ಎಲ್ಲ ಖರ್ಚುಗಳನ್ನು ಭರಿಸುತ್ತಾರೆ.

ಹುಬ್ಬಳ್ಳಿಯ ಭಾತ್ರುಗಳು ಸ್ಫೂರ್ತಿಯ ಚೆಲುಮೆ ಎಂದಿದ್ದಾರೆ. ಪ್ರತಿ ರವಿವಾರ ಸಭೆ ಸೇರಿ ನ್ಯಾಯ ನಿರ್ಣಯ ಮಾಡುತ್ತಾರೆ.

ಇವರ ಕುಟುಂಬಗಳಲ್ಲಿ ೧೦ ಮಕ್ಕಳಿರುವುದು ಸಾಮಾನ್ಯ. ಮಾಸ್ತರ ಬಾಗಡೇವರು ಹೆಂಡತಿಯ ಕಡೆಯವರು ೧೨ ಮಕ್ಕಳನ್ನು ಹೊಂದಿದ್ದಾರೆ. ಇವರಲ್ಲಿ ಮಕ್ಕಳನ್ನು ಹೆರಲು ನಿಯಂತ್ರಣವಿಲ್ಲ.

ಕೊಲ್ಹಾಪುರದ ದಿಲೀಪ್‌ಮಾತುಂಗ ಹೇಳುವಂತೆ ಸರಪಂಚ್‌ಶ್ರೇಷ್ಠ ಮುಖಂಡನಾಗಿದ್ದಾನೆ. ಆದಿವಾಸಿಗಳ ಕಾಯ್ದೆ ಸಂಪ್ರದಾಯಗಳನ್ನು ಒಳಗೊಂಡ ದಿಲರ್ಕಾ ಪುಸ್ತಕದ ಬಗ್ಗೆ ಕೇಳಿದ್ದಾರೆ. ಆದರೆ ಈ ಪುಸ್ತಕ ಸಿಗುವುದಿಲ್ಲ.

ಈ ಕೆಳಗಿನವರು ನಳಗುಂಪಿನವರಿದ್ದಾರೆ.

೧. ಗಮಯಾಚಿ ೨. ಮೀನಾ ೩. ಗುಮಾನ ೪. ಬಾರಿ ೫. ಮಲಕಿಯ ೬. ಅಬವಾ ೭. ಕಂಬಳಾ ೮. ಬಾರಾರಂಗ ೯. ಗಾಸ್ಸಿ.

ಈ ಕೆಳಗಿನವರು ಬಾಗಡೆ ಗುಂಪಿನವರು

೧. ಇಂದ್ರ ೨. ಉಮಂದಿ ೩. ಕರಲ ೪. ನೆಲ್ಲಾ ೫. ಗಗಡೆ ೬. ಬಾತು ೭. ರಾವಲ ೮. ಧಿಡ್ಡಾ ೯. ಕವಡಿಯ ೧೦. ಮಚರಾ ೧೧. ಚುಸ್ಸಾ.

ಇವರಲ್ಲಿ ೨೦ ಗೋತ್ರಗಳಿವೆ. ಆದರೆ ಗಾಸ್ಸಿ ಮತ್ತು ಚುಸ್ಸಾ ಗೋತ್ರಗಳನ್ನು ಪರಿಗಣಿಸದಿರುವುದರಿಂದ ಕೇವಲ ೧೮ ಗೋತ್ರಗಳಿವೆ. ಸ್ವಾಮಿಗಳ ಪ್ರಕಾರ ಕರ್ನಾಟಕದಲ್ಲಿ ಸ್ವಲ್ಪ ಜನ, ಮಹಾರಾಷ್ಟ್ರದಲ್ಲಿ ೧೦ ಲಕ್ಷ, ದೆಹಲಿ ನಗರದಲ್ಲಿ ೧ ಲಕ್ಷ, ಸಂಪೂರ್ಣ ಭಾರತದಲ್ಲಿ ೨ ಕೋಟಿ ಭಾತ್ರುಗಳಿದ್ದಾರೆ. ಇವರನ್ನು ೫ ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ.

ಗುಜರಾತದಲ್ಲಿ ಚರಾ, ರಾಜಸ್ತಾನದಲ್ಲಿ ಅಡೋದಿಯಾ ಅಥವಾ ಸಂಸಿ, ಹರಿಯಾಣದಲ್ಲಿ ಬೆಡಕುಟೆ, ದೆಹಲಿಯಲ್ಲಿ ಬಾಜಿನಗರ ಎಂದು ಕರೆಯುತ್ತಾರೆ.