ಮುತ್ತು ಕಂಡೆನಮ್ಮ ನಾನೊಂದ ಮೂಗಿನೊಳಗಿರುವಂಥಾ ರತ್ನಾ ಕಂಡೆನಮ್ಮ ನಾನೊಂದ | ಒಂದು ವರ್ಣದ ಮುತ್ತು ಓಂಕಾರದೊಳಗಿತ್ತು ಎರಡು ವರ್ಣದ ಮುತ್ತು ಎಡಬಲದೊಳಗಿತ್ತು | (ಮುತ್ತು ಕಂಡೆನಮ್ಮ ನಾನೊಂದ) ||

ಮೂರು ವರ್ಣದ ಮುತ್ತು ಮೂಲ ತಿಳಿದವರಿಗೆ ಗೊತ್ತು ನಾಲ್ಕು ವರ್ಣದ ಮುತ್ತು ನಾದ ತಿಳಿದವರಿಗೆ ಗೊತ್ತು || ಮುತ್ತುಕಂಡೆನಮ್ಮ ಗೊತ್ತು ||

ಐದು ವರ್ಣದಾ ಮುತ್ತು ಐಕ್ಯಸ್ಥಳದೊಳಗಿತ್ತು ಆರು ವರ್ಣದ ಮುತ್ತು ಆರೂಡಾನಿಗೆ ಗೊತ್ತು || ಮುತ್ತು ಕಂಡೆನಮ್ಮಾ ನಾನೊಂದ ||

ಏಳು ವರ್ಣದಾ ಮುತ್ತು ವೇಳ್ಯಾತಿಳಿದವರಿಗೆ ಗೊತ್ತು ಎಂಟು ವರ್ಣದಾ ಮುತ್ತು ಮಂಟಪದೊಳಗಿತ್ತು || ಮುತ್ತು ಕಂಡೆನಮ್ಮಾ ನಾನೊಂದ ||

ಒಂಬತ್ತು ವರ್ಣದಾ ಮುತ್ತು ತುಂಬಿ ತುಳುಕುತಲಿತ್ತು ಹತ್ತು ವರ್ಣದಾ ಮುತ್ತು ತತ್ವ ತಿಳಿದವನಿಗೆ ಗೊತ್ತು || ಮುತ್ತು ಕಂಡೆನಮ್ಮ ನಾನೊಂದ ||

ಹನ್ನೊಂದು ವರ್ಣಾದ ಮುತ್ತು ಇನ್ನೊಂದಿಲ್ಲದಿತ್ತು ಹನ್ನೆರಡು ವರ್ಣದ ಮುತ್ತು ರಂಭಾ ಪುರದೋಳಗಿತ್ತು || ಮುತ್ತು ಕಂಡೆನಮ್ಮಾ ನಾನೊಂದ ||

ಹದಿಮೂರು ವರ್ಣಾದ ಮುತ್ತು, ಗುರು ರೇಣುಕನಿಗೆ ಗೊತ್ತು ಹದಿನಾಲ್ಕು ವರ್ಣದ ಮುತ್ತು ಗುರು ಪಾದದೊಳಗಿತ್ತು ||

ಮುತ್ತು ಕಂಡೆನಮ್ಮ ನಾನೊಂದು ಮೂಗಿನೊಳನಿರುವಂತ ರತ್ನಾ ಕಂಡೆನಮ್ಮ ||

ಮುತ್ತು ಕಂಡೆನಮ್ಮ ನಾನೊಂದ ||