ಇದು ನನ್ನ ಆಯ್ದ ಐದು ಏಕಾಂಕ ನಾಟಕಗಳ ಸಂಗ್ರಹ. ಹಲವಾರು ವರ್ಷಗಳ ಹಿಂದೆಯೇ ಇವು ಪ್ರಕಟಗೊಂಡು – ಪ್ರಚಲಿತವಾದುವು. ಕನ್ನಡದಲ್ಲಿ ಏಕಾಂಕಗಳ ಕೊರತೆ, ಈ ನಾಟಕಗಳನ್ನು ಪುನಃ ಸಂಗ್ರಹಿಸಿ ಪ್ರಕಟಿಸುವಂತೆ ಪ್ರೇರೇಪಿಸಿದೆ. ಇದನ್ನು ಪ್ರಕಟಿಸಲು ಮುಂದಾದ ಪ್ರಕಾಶಕರನ್ನು ಕೃತಜ್ಞತೆಯಿಂದ ಸ್ಮರಿಸುವೆ.

 – ಚಂದ್ರಶೇಖರ ಕಂಬಾರ
ಬೆಂಗಳೂರು
೨೫ – ೧೦ – ೧೯೮೪