ದೃಶ್ಯ 13

ಚೆನ್ನನನ್ನು ಹಿಡಿದು ತರುತ್ತೇವೆಂದು ಹೋಗಿದ್ದ ಪೋಲೀಸರು ಹಿಂದಿರುಗಿ ತಮ್ಮ ಮೇಲಧಿಕಾರಿಯಲ್ಲಿಗೆ ಬಂದರು. ಚೆನ್ನ ಮತ್ತು ಅವರ ಗೆಳೆಯರಿಂದ ಪೋಲೀಸರು ತಿಂದ ಪೆಟ್ಟಿನ ಆಘಾತ ಇನ್ನೂ ಅವರ ಮುಖದಲ್ಲಿ ಹಸಿ ಹಸಿಯಾಗಿದೆ. ಅವರಿಗೆ ಎಷ್ಟೊಂದು ಅಘಾತವಾಗಿದೆಯೆಂದರೆ ತಮ್ಮ ಸಾಹೇಬರು ಏನೇ ಅನ್ನಲಿ ನೌಕರಿಗೆ ರಾಜಿನಾಮೆ ಕೊಡಬೇಕೆಂದು ನಿಶ್ಚಯಿಸಿದ್ದಾರೆ. ಚೆನ್ನ ಮತ್ತು ಅವನ ಗೆಳೆಯರಿಂದ ತಮಗಾದ ಗತಿಯನ್ನು ಸಾಹೇಬರೆದುರುಅಬ್ದುಲ್ ಕಾಸೀಮರು ವಿವರಿಸುತ್ತ ತಾಯಿಯ ಪುಣ್ಯದಿಂದ ಪಾರಾಗಿ ಬಂದಿದ್ದೇವೆ ಅನ್ನುತ್ತಾರೆ. ತಮ್ಮ ಡಗಳಿಹರಿದು ಮಾನವನ್ನು ಕಳೆದರು ಎಂದು ಹಲಬುತ್ತಾರೆ ತಮ್ಮನ್ನು ಒದ್ದು ಮೈಯನ್ನು ಹಣ್ಣಣ್ಣು ಮಾಡಿದರೆಂದು ನರಳುತ್ತಾರೆ. ಯಾವ ಕಾಲಕ್ಕೂ ಇಂಥ ನೌಕರಿಯನ್ನು ಮಾಡಬಾರದು. ತಮಗೆ ನೌಕರಿ ಸಾಕು, ರಾಜಿನಾಮೆ ಕೊಡುತ್ತೇವೆಂದು ಸಾಹೇಬರೆದುರು ಸ್ಪಷ್ಟವಾಗಿ ಸಾರಿಬಿಡುತ್ತಾರೆ.

ಪೋಲೀಸರಿಗೆ ಸಮಾಧಾನ ಹೇಳಿದ ಫೌಜದಾರನು ಸೊಪ್ಪಡ್ಲದಿಂದ ಗೌಡನನ್ನು ಕರೆಸಿ. ಪೋಲೀಸರಿಗಾದ ಸ್ಥಿತಿಯನ್ನು ತಿಳಿಸಿ ಮುಂದೆ ಚೆನ್ನನನ್ನು ಹಿಡಿಯುವ ಉಪಾಯ ಕೇಳುತ್ತಾನೆ. ಜೂಲಗಟ್ಟಿ ನಿಂಗವ್ವನಲ್ಲಿ ಚೆನ್ನನಿಗೆ ಸ್ನೇಹವಿರುವುದಾಗಿಯೂ ಅವಳ ಮನೆಗೆ ಅವನು ಆಗಾಗ ಹೋಗುವುದಾಗಿಯೂ ಅಲ್ಲಿಯೇ ಅವನನನ್ನು ಹಿಡಿಯುವುದು ಸಾಧ್ಯವಿರುವುದಾಗಿಯೂ ಗೌಡ ಸುಳುಹು ನೀಡುತ್ತಾನೆ. ನಿಂಗವ್ವನಿಗೆ ಕರೆಹೋಯಿತು.

ಸಿಪಾಯಿಗಳು

ಸುಬೇದಾರಾ ಮಾಡತೇವಿ ಮುಜರಿಯನಾ
ಸಾಕಾತ್ರಿ ಸರಕಾರಿ ನೌಕರಿನಾ
ಎಂದೆಂದಿಗೂ ಮಾಡಬಾರದೋ ಸೀಪಾಯಿಗೇರಿನಾ ॥ ಪ ||

ಸಿಕ್ಕ ನಾವು ಚೆನ್ನನ ಕೈಯಾಗಿನ್ನಾ
ಪಾರಾಗಿ ಬಂದದ್ದು ನಮ್ಮ ಪುಣ್ಯಾ
ತಾಯಿಹೊಟ್ಟೆ ತಣ್ಣಗಿತ್ತರಿ ಇನ್ನಾ

ಜನದಾಗ ಉಳಿಯಲಿಲ್ಲೊ ನಮ್ಮ ಮಾನಾ
ಡಗಳಿ ಹರಿದು ಮಾಡಿದಾ ಫಜೂತಿಯನಾ
ಒದ್ದ ಒದ್ದ ಮಾಡಿದಾರೋ ಮೈಯ ಹಣ್ಣಾ

* * *

ದೃಶ್ಯ 14

ಕರೆ ಕಳುಹಿಸಿದಂತೆ ನಿಂಗವ್ವ, ಗೌಡರೊಂದಿಗೆ ಫೌಜದಾರರಿರುವಲ್ಲಿಗೆ ಬಂದಳು. ಯಾಕೆ ಕರೆಸಿದ್ದಾರೋ ಎನ್ನುವ ಭೀತಿ ಅವಳ ಮುಖದ ತುಂಬ ಆವರಿಸಿಕೊಂಡಿದೆ.

ಒಂದು ಮಹತ್ವದ ಕೆಲಸ ನಿನ್ನಿಂದ ಆಗಬೇಕಾಗಿದೆ. ವಚನಕೊಡು ಎನ್ನುತ್ತಾನೆ ಗೌಡ : ನಿಂಗವ್ವನಿಗೆ. ಯಾವ ಕಾರ್ಯ? ಏನು? ಎಂತು? ತಿಳಿಯದೆ ಹಾಗೇ ಹೇಗೆ ವಚನ ಕೊಡಲಿ ಎನ್ನುತ್ತಾಳೆ ಅವಳು. ಗೌಡ ಬಹಳ ಕೇಳಿಕೊಂಡ ಮೇಲೆ ಅವಳು ಅನಿವಾರ್ಯವಾಗಿ ವಿಷಯ ತಿಳಿಯದೆ ವಚನ ಕೊಟ್ಟಳು. ಚೆನ್ನನು ನಿನ್ನ ಮನೆಗೆ ಬಂದರೆ ಅದನ್ನು ಪೋಲೀಸರಿಗೆ ತಿಳಿಸಬೇಕೆಂದು ಗೌಡ ನಿಂಗವ್ವನಿಗೆ ಹೇಳುತ್ತಾನೆ. ನಿಂಗವ್ವನಿಗೆ ಕುತ್ತಿಗೆಗೆ ಬಂದಿತು. ತಾನು ಪೋಲೀಸರಿಗೆ ಸುದ್ದಿ ಮುಟ್ಟಿಸಿದರೆ ಚೆನ್ನ ತನಗೆ ಕೊಡುವ ಶಿಕ್ಷೆಯನ್ನು ಕಲ್ಪಿಸಲೂ ಸಾಧ್ಯವಾಗುವುದಿಲ್ಲ. ಅವಳ ಅಂಜಿಕೆಯನ್ನು ಅರ್ಥಮಾಡಿಕೊಂಡ ಗೌಡ ಹಣದ ಜಾಲವೊಡ್ಡುತ್ತ ಚೆನ್ನನನ್ನು ಹಿಡಿದುಕೊಟ್ಟರೆ ಸಾವಿರ ರೂಪಾಯಿ ಬಹುಮಾನದ ಭರವಸೆ ಹುಟ್ಟಿಸುತ್ತಾನೆ. ನಿಂಗವ್ವನಿಗೆ ಈಗ ಹೊಯ್ದಟ ಪ್ರಾರಂಭವಾಯಿತು. ಒಂದು ಕಡೆಗೆ ಗೌಡನ ಅಂಜಿಕೆ, ಇನ್ನೊಂದು ಕಡೆಗೆ ವಿಶ್ವಾಸದ್ರೋಹ, ಮತ್ತೊಂದು ಕಡೆಗೆ ಹಣದ ಆಮಿಷ. ಕೊನೆಗೂ ನಿಂಗವ್ವ ಹಣದ ಕಡೆಗೇ ವಾಲಿ, ಚೆನ್ನನನ್ನು ಪೋಲೀಸರ ವಶಕ್ಕೆ ಒಪ್ಪಿಸುವ ಮಾತು ಕೊಟ್ಟಳು.

ನಿಂಗವ್ವ ಮುಂದಿನ ಕಾರ್ಯಕ್ಕೆ ಅಣಿಯಾಗಿ, ಚೆನ್ನನನ್ನು ಕರೆತರುವಂತೆ ಹೇಳಿ ಮುದುಕಿಯೊಬ್ಬಳನ್ನು ಸೊಗಲದ ಗುಡ್ಡಕ್ಕೆ ಕಳುಹಿಸಿದಳು.

ಜೂಲಗಟ್ಟಿ ನಿಂಗವ್ವ

ಸಾಹೇಬರ ಮಾಡತೇವರಿ ನಿಮಗ ಶರಣಾ
ಏನ ಕಾರಣ ಕರಸಿದಿರಿ ನಮ್ಮನ್ನಾ

ಗೌಡ್ರನ ಕಳಿಸೀರಿ ಮನಿತನಾ
ಹಂತಾ ತಪ್ಪಾ ಮಾಡಿದ್ದು ನಾಯೇನಾ

ಕಾಲಿಗೆ ಬಿದ್ದ ಮಾಡತೇವರಿ ನಿಮಗ ಶರಣಾ
ನಮ್ಮ ಮ್ಯಾಲೆ ಮಾಡರಿ ದಯ ಕರುಣಾ

* * *

ದೃಶ್ಯ 15

ಸೊಗಲದಗುಡ್ಡ; ಚೆನ್ನನಿರುವಲ್ಲಿಗೆ ಮುದುಕಿ ಬಂದು ನಿಂಗವ್ವ ಬರ ಹೇಳಿದ ಸುದ್ದಿಯನ್ನು ಮುಟ್ಟಿಸುವಳು. ಬಂದ ಮುದುಕಿಗೆ ಒಂದಿಷ್ಟು ಹಣಕೊಟ್ಟು ಕಳುಹಿಸಿದ ಮೇಲೆ ಚೆನ್ನನು ತನ್ನ ಗೆಳೆಯರೆದುರು ತನ್ನ ಆಶೆಯನ್ನು ವ್ಯಕ್ತಪಡಿಸುತ್ತಾನೆ : ನಿಂಗವ್ವ ತನಗೆ ಬರಲು ಹೇಳಿಕಳುಹಿಸಿದ್ದಾಳೆ. ಅವಳ ಅಪೇಕ್ಷೆಯನ್ನು ಕೇಳಿದಾಗಿನಿಂದ ಮನಸ್ಸಿಗೆ ಚೈನವಿಲ್ಲವಾಗಿದೆ. ಸೋಮವಾರ ಒಂದು ದಿವಸ ಹೋಗಿ ಬರುವುದಾಗಿ ಹೇಳುತ್ತಾನೆ. ಆದರೆ ಹುಸೇನಿ ಸಿದ್ಧರು ಗೆಳೆಯನ ಈ ಆತುರವನ್ನು ಅಷ್ಟು ಬೇಗನೆ ಒಪ್ಪಿಕೊಳ್ಳುವ ಸ್ಥಿತಿಯಲಿಲ್ಲ.

ಚೆನ್ನನನ್ನು ಹಿಡಿದುಕೊಟ್ಟವರಿಗೆ ಸಾವಿನ ಹೊನ್ನು ಬಹುಮಾನ ಕೊಡುವುದಾಗಿ ಸರಕಾರದವರು ಈಗಾಗಲೇ ಸಾರಿದ್ದಾರೆ. ಸರಕಾರದ ಈ ಘೋಷಣೆಯನ್ನು ನೆನಪಿಸಿಕೊಟ್ಟು ಗೆಳೆಯರಿಬ್ಬರೂ ನಿಂಗವ್ವನನ್ನು ನಂಬಬಾರದಾಗಿ ಚೆನ್ನನನ್ನು ಕೇಳಿಕೊಳ್ಳುತ್ತಾರೆ. ನಿಂಗವ್ವ ಈಗ ಹೇಳಿಕಳಿಸಿದ್ದು ಹಣದ ಆಸೆಗೆಯೇ ಹೊರತು ನಿನ್ನ ಮೇಲಣ ಪ್ರೀತಿಯಿಂದಲ್ಲ : ಅನ್ನುತ್ತಾರೆ ಗೆಳೆಯರು. ತಮಗಂತೂ ಇದರಲ್ಲಿ ಸಂಪೂರ್ಣ ಸಂಶಯವಿದೆ ಹೋಗಬೇಡವೆಂದು ತಡೆಯಲೆತ್ನಿಸುತ್ತಾರೆ.

ಗೆಳೆಯುರ ಮಾತನ್ನು ತಳ್ಳಿ ಹಾಕುತ್ತಾನೆ ಚೆನ್ನ. ತನ್ನ ಮತ್ತು ನಿಂಗವ್ವನ ಗೆಳೆತನ ಮುಂಚಿನಿಂದಲೂ ನಡೆದು ಬಂದುದರಿಂದ ಅವನಿಗೆ ಅವಳಲ್ಲಿ ವಿಶ್ವಾಸವಿದೆ. ಆದ್ದರಿಂದ ಅಂಥ ಯಾವ ಸಂಶಯಕ್ಕೆ ಕಾರಣವಿಲ್ಲವೆಂದೂ ತಾನು ಬೇಗನೆ ಹಿಂದಿರುವುದಾಗಿಯೂ ಗೆಳೆಯರಿಗೆ ಭರವಸೆಕೊಟ್ಟು ಚೆನ್ನ ಜೂಲಗಟ್ಟಿಗೆ ಹೊರಡುತ್ತಾನೆ.

ಚೆನ್ನ

ಸಿದ್ದಾ ಹುಸೇನಿ ಕೇಳರೋ ಹೇಳುವೆ ಬ್ಯಾಗ ॥ ಪ ||

ಜೂಲಗಟ್ಟಿಯತನಾಹೋಗಿ ಬರತೆನೋ ನಾನಾ
ಹೇಳಿಕಳಿಸ್ಯಾಳೊ ನಾರಿ ಸೋಮವಾರ ದಿನಾ

ಕೇಳಿ ಆಕಿ ಸುದ್ದಿಯನಾಇಲ್ಲೊ ಮನದಾಗ ಚೈನಾ
ಹೋಗಿ ಬರತೇನೋ ನಾನು ಒಂದು ರಾತ್ರ್ಯಾಗ

ಹೆಂಗಸೂರ ಸಂಗತಿಯನಾಹೋಗದ ಬಾಳ ದಿನಾ
ಆದೀತೋ ಮನದಾಗ ಇಲ್ಲೋ ಚೈನಾ

ಸಿದ್ದ : ಹುಸೇನಿ

ಹೋಗಬ್ಯಾಡೊ ಚೆನ್ನಪ್ಪಣ್ಣಾ ಇಂದಿನ ದಿನಾ ॥ಪ ||

ಸರಕಾರ ಹುಕಮಾಆಗಿತೋ ಹಿಂಗ ನೇಮಾ
ಹಿಡದ ಕೊಟ್ಟವರಿಗೆ ಸಾವಿರ ಹೊನ್ನಾ

ರೊಕ್ಕದ ಆಸೆಕಕಳಿಸ್ಯಾಳೋ ಈ ಕ್ಷಣಕ
ಸೌಂಶೆ ಬರತೈತೋ ನಮಗ ತಿಳಿಯೋ ನೀನಾ

ಹೆಂಗಸುರ ಗೆಳಿತಾನತರವಲ್ಲೋ ಸುಗಜಾಣಾ
ನಂಬಿಗಿ ಇಟ್ಟ ಕೊಯ್ಯುರ ಕುತಗಿಯನಾ

* * *

ದೃಶ್ಯ 16

ಚೆನ್ನನ ದಾರಿಯನ್ನು ನಿಂಗವ್ವ ಕಾಯುತ್ತಿದ್ದಾಳೆ. ಚೆನ್ನನು ಯಾವಾಗ ಬಂದಾನೋ ಅವನನನ್ನು ಬಂಧಿಸಿಕೊಟ್ಟು ಯಾವಾಗ ಸಾವಿರ ಹೊನ್ನು ಪಡೆದೇನೋ ಎಂಬ ಕಾತುರದಲ್ಲಿದ್ದಾಳೆ ನಿಂಗವ್ವ. ತನ್ನ ಬಯಕೆ ಈಡೇರಿದರೆ ಹೊನ್ನ ಕಳಸದ ಕಾಣಿಕೆ ಕೊಡುವುದಾಗಿ ನಿಂಗವ್ವ ದೇವರಿಗೆ ಹರಕೆಹೊರುತ್ತಾಳೆ. ತರುವಾಯ ಪರಮ್ಮನೊಂದಿಗೆ ಬೀಸಲು ಕುಳಿತುಕೊಳ್ಳುತ್ತಾಳೆ. ಬೀಸುಕಲ್ಲಿನ ಹಾಡಿನ ತುಂಬ ಕಟ್ಟಿ ಚೆನ್ನನ ವರ್ಣನೆಯೇ ತುಂಬಿಕೊಂಡಿದೆ. ಬೀಸುವುದಾದ ಮೇಲೆ ಪರಮ್ಮ ನಿರ್ಗಮಿಸುತ್ತಾಳೆ.

ನಿಂಗವ್ವ ದಾರಿಕಾಯುತ್ತಿರಲು ಚೆನ್ನ ಬಂದ. ಅವರಿಬ್ಬರ ಶೃಂಗಾರದ ಮಾತು : ಕತೆ ನಡೆಯುತ್ತಿರುವಂತೆ ಪೋಲೀಸರು ಬಂದು ಚೆನ್ನನನ್ನು ಬಂಧಿಸಿದರು. ಪೋಲೀಸರು ಕೈಗೆ ಸಿಕ್ಕ ಚೆನ್ನನಿಗೆ ಅಣಕದ ಮಾತುಗಳನ್ನಾಡುತ್ತಾರೆ. ಸೊಗಲದ ಗುಡ್ಡದಲ್ಲಿ ತೋರಿದ ಪರಾಕ್ರಮವನ್ನು ಈಗ ತೋರಿಸು ನೋಡೋಣ ಎಂದು ಹಂಗಿಸುತ್ತಾರೆ. ಇಂದು ನಮ್ಮ ಕೈಯಿಂದ ಪಾರಾಗಿ ಹೋಗೋ ಬಾಹದ್ದೂರಾ ಎಂದು ಚುಚ್ಚುತ್ತಾರೆ.

ಬಯಲಲ್ಲಿ ಬಿಟ್ಟು ತನ್ನ ಕೈಚಮತ ನೋಡುವಂತೆ ಚೆನ್ನನು ಪೋಲೀಸರಿಗೆ ಸವಾಲು ಹಾಕುತ್ತಾನೆ. ಕೈಯಲ್ಲಿ ಬೇಡಿಹಾಕಿ ನಡುವಿನ ಸರಪಳಿ ಬಿಗಿದು ಚೆನ್ನನನ್ನು ನಾಡಮೇಲೆ ಮೆರೆಸುತ್ತ ನಡೆಯಿರೆಂದು ಫೌಜದಾರನು ಪೋಲೀಸರಿಗೆ ಆಜ್ಞಾಪಿಸುತ್ತಾನೆ.

ಮಿತ್ರರು ಬೇಡವೆಂದರೂ ಅವರ ಮಾತು ಕೇಳದೆ ಜೂಲಗಟ್ಟಿಗೆ ಬಂದು ಇವಳನ್ನು ನಂಬಿ ಕೆಟ್ಟೆನೆಂಬುದು ಚೆನ್ನನ ಪಶ್ಚಾತ್ತಾಪ, ಪಕ್ಕ ಕಿತ್ತ ಹಕ್ಕಿಯಾದೆನೆಂದು ಚಡಪಡಿಕೆ.

ನಿಂಗವ್ವ

ಸುಂದರ ಚೆನ್ನನು ಎಂದಿಗ ಬರುವನು
ಹೊಂದುವೆ ಸಾವಿರ ಹೊನ್ನಾ ॥ ಪ ||

ಬಂದು ಸರಕಾರಕ್ಕ ಇಂದು ಕೊಟ್ಟಿನೋ ವಚನಾ
ತಂದ ಕೊಡುವೆನು ನಾನಾ
ಸೋಮವಾರ ದಿನಾ ನೇಮದಿ ಬಾಯೆಂದು
ಪ್ರೇಮದಿ ಹೇಳಿ ಕಳವೇನಾ
ಕೋಮಲಾಂಗಿಯ ಮಾತು ಸ್ವಾಮಿ ನಡಸಿದರ
ಹೇಮದಿ ಕಳಸಾನಿಡುವೇನಾ
ಪೊಡವಿಯೊಳ ದುರ್ವೆಪುರ ಒಡೆಯ ಪತ್ರೇಶ್ವರಾ
ಬಿಡದೆ ನಡಿಸೆಮ್ಮ ವಚನಾ
ಸೆಡಗರ ಧಾರವಾಡ ಕಡಕ ಹಾವೇರಿ ಪ್ಯಾಟಿ
ಹಿಡದೇವಿ ಸ್ವಾಮಿ ಚರಣಾ

ನಿಂಗವ್ವ : ಪರಮ್ಮ

ಬೀಸನು ಬಾ ಗೆಳತಿ ಕಾಶಿ ಈಶನ ನೆನಸಿ
ಬೀಸಾಕ ಕುಂತೇವಿ ಬಿಳಿಗೋದಿ
ಗೆಳೆತವ್ವಾ ನಗಿ ನಮಗ್ಯಾತಕ

ಹಂಡ ಹೋರಿಯ ಮ್ಯಾಲ ಹತ್ತಿಹೋಗವನವನ್ಯಾರ
ಕಾಸ ನಮ್ಮ ಮಾವ ಚೆನ್ನನ
ಗೆಳೆತವ್ವಾ ನಗಿ ನಮಗ್ಯಾತಕ

ಕುಸ್ತಿಯ ಕಣದಾಗ ಕೂಡಿದ ಜನದಾಗ
ವಸ್ತಾದಿ ಒಗದ ಬರತಾನ
ಗೆಳೆತವ್ವಾ ನಗಿ ನಮಗ್ಯಾತಕ

ಚೆನ್ನ

ಬಾ ಸಖಿ ತಡವ್ಯಾತಕ
ಮನ ನಿಲ್ಲದೊ ಕಾಮನಾಟಕ ॥ ಪ ||

ವಿರಹ ತಾಪಾ ಸೈರಿಸಲಾರೆ
ಬಾರೆ ಮೋಹದ ಬಾಲೆ ನೀ
ವಾರಿಜಮುಖಿ ಬ್ಯಾಗನಾ

ಕಂದರ್ಪ ಕದನಾನಂದದಿ ಮಾಡುನ
ಚಂದ್ರವಾರದಿ ನಿಂದ್ರದೆ ಬಾರೆಂದು
ಹೇಳಿ ಕಳವೆ ನಾ

ಜೀವದ ಗೆಳಿಯತನಾ ಬಿಟ್ಟ ಬಂದೆನೀ ನಾನಾ
ಗಡಾನಡಿ ತಡಮಾಡದೆ
ಒಡಗೂಡದೆ ಬಡವಾದೆನು

ನಿಂಗವ್ವ

ಬಾ ಪ್ರಿಯಾ ಸ್ಮರನಾಟಕ
ಹಿಡಿ ಶಾಂತೊಗೆ ಮಂದಿರಕ

ಕನಸು ಮನಸಿನೊಳು ನೆನಸಿ ನಿಮ್ಮನ್ನಾ
ಪ್ರಾಣನಾಥನ ಕಾಣದೆ ನಾ

ಪೋರ ವಿಲಾಸ ತೋರೋ ನೀ ವೇಷಾ
ವೀರನೆ ಮನೋಹರನೆ ಗುಣಸಾಗರನೆ ಗಂಭೀರನೆ

ಚೆನ್ನ

ಸುಕವಾಣಿ ರಾಣಿ ಜಾಣಿ ಸರಸಿದಲನಯನೆ ॥ ಪ ||

ರಮಣೀ ವಿಮಲಾ ಕಮಲಾವದನೆ
ನಲಿಯುತ ಕಲೆಯುತ ಸಲಹುತ ಬಾರೆ

ಮಾರಬಾಧೆ ಶಾಂತಗೊಳಿಸೆ ಜಗದೊಳು
ದೀರನಾಗಿ ಬಂದೆ ಕಲಹಂಸ ಗಮನಿಯಳೇ

ನಿಂಗವ್ವ

ರಣಧೀರ ಶೂರ ಮಾರ ಬಾರೊ ಹುಣವಿಯ ಶಶಿವದನಾ ॥ ಪ ||

ಕ್ಷೀರಪೂರಕೆ ಕರವತಾರೊ ತೋಳಗಳನ್ನಾ
ತಳಕಿಸಿ ಎದೆಯೊಳು ಕಡಿಯುತ ಗಲ್ಲವನಾ

ಸುರತ ಸುಖವ ಸವಿದು ಸುಗುಣಾ ಬಿಡದೆನ್ನ ಮುನ್ನ
ರನ್ನಾ ನನ್ನ ಸಲಹುತ ಸಖಿಯಳನಾ

ಪೋಲೀಸರು

ವಹವ್ವರೇ ಚೆನ್ನಾ ಸಿಕ್ಕಲ್ಲೊ ನಮ್ಮ ಕೈಯಾಗ ॥ ಪ ||

ಸೊಗಲದ ಗುಡ್ಡದಾಗ
ಬರತಿದ್ಯೊ ಮೈಮ್ಯಾಗ
ತಿಳಿಯಲೊ ನಿನ್ನ ಬಂಟಸ್ತಾನಾ

ಬಂದೂಕ ಬಾರ ಮಾಡಿ
ಹೊಡಿತೇವಿ ನಿನಗ ನೋಡಿ
ತಪ್ಪಿಸಿಕೊಳೊ ಬ್ಯಾಗನಾ

ನಮ್ಮ ಕೈಯಾಗಿಂದ
ಪಾರಾಗಿ ಹೋಗ ಇಂದ
ಹೌದ ಅಂತೇವೋ ಬಹಾದ್ದೂರಾ

ಚೆನ್ನ

ಬಪ್ಪರೆ ಬಂಟ ಸಿಪಾಯಿ ಕೇಳ್ರೋ ನೀವಿನ್ನಾ

ಕತ್ತಿಯವರ ಗಂಡ ನಾ
ಗುಂಡಿನವರ ಮಗ ನಾನಾ
ಹೊಡಿಯಬ್ಯಾಡರೋ ನಮ್ಮನ್ನಾ

ಹೊರಗಬಿಟ್ಟ ನನ್ನ ನೋಡರೋ
ಬೈಲಾಗ ಕೈಯ ಚಮತ
ತೋರಿಸುವೆ ನಾನಾ

ಧಾರವಾಡದೀಶsನ
ಆತನ ದಯಾ ಕರುಣಾ
ಇರವದೋ ಎಲ್ಲಾರ ಮ್ಯಾಗ ಸಂಪೂರ್ಣಾ

ಫೌಜದಾರ

ತುಡುಗ ಚೆನ್ನನ ಹಿಡಿಯರೋ
ಕಟ್ಟಿ ಕಟ್ಟಿ ಬಿಗಿಯರೋ
ಕುಂಡಿ ಮ್ಯಾಗ ಒದ್ದ ಇವನ
ಬಂಡಮಾಡಿ ಎಳಿಯರೋ

ಚಂಡ ಹಿಡಿದ ದೂಡರೋ
ಕೈಕಾಲ ಒತ್ತಿ ಮುರಿಯರೋ
ಸೊಕ್ಕಿಲಿಂದ ಉಕ್ಕಿ ಮೆರದಾನ
ಕಕ್ಕುಹಾಂಗ ಗುದ್ದರೋ

ಕೈಯಾಗ ಬೇಡಿ ಹಾಕರೋ
ನಡುವಿನ ಸರಪಳಿ ಹಚ್ಚರೋ
ದೇಶದಮ್ಯಾಗ ಮೆರಸುತ ಅವಗ
ಬೆಳಗಾಂವ ಕೋರ್ಟಿಗೆ ಒಯ್ಯರೋ

ಚೆನ್ನ

ಅಯ್ಯೋ ಮಾಡಲಿ ಇನ್ನೇನಾ
ಜಾಲದೊಳಗ ಬಿದ್ದೇನಾ ॥ ಪ ||

ಸಿದ್ದಾ ಹುಸೇನಿ ಮಾತನಾ
ಮೀರಿ ಬಂದ ಸಿಕ್ಕೆ ನಾ

ಕೆಟ್ಟ ಹೆಂಗಸ ರಂಡಿನಾ
ನಂಬಿಕೆಟ್ಟ ಹೋದೆನಾ

ಅಗಲಿಬಂದ ಗೆಳೆಯರನಾ
ಮಾರಿನೋಡದೆ ಹೋದೆ ನಾ

ಹುಲಿಗೆ ನರಿಯು ಹಿಡಿದಾಂಗ
ಆತೊ ನೆರೆದ ಜನದಾಗ

ಕತ್ತಿ ಇಲ್ಲೋ ಕೈಯಾಗ
ಪಕ್ಕಾ ಕಿತ್ತ ಹಕ್ಕಿ ಹಾಂಗ

* * *

ದೃಶ್ಯ 17

ಚೆನ್ನನನ್ನು ಹಿಡಿದುಕೊಂಡು ಹೋದರೆಂಬ ಸುದ್ದಿಯನ್ನು ಹುಸೇನಿ ಸಿದ್ಧರು ದನಕಾಯುವವ ನಿಂದ ಕೇಳುವರು. ತಮ್ಮ ಮಾತು ಮೀರಿ ಹೋಗಿ ಗೆಳೆಯನುಸಿಕ್ಕಿಹಾಕಿಕೊಂಡನೆಂದು ಮರಗುವರು. ಇದುವರೆಗೆ ಜೀವನ ಗೆಳೆಯರಾಗಿದ್ದವರು ಈಗ ಚೆನ್ನನನ್ನು ಆಗಲಿ ಬಾಳುವ ಪ್ರಸಂಗ ಪ್ರಾಪ್ತವಾದುದಕ್ಕಾಗಿ ಒಂದೇ ಸಮನೆ ದುಃಖಿಸುವರು. ಇಷ್ಟೆಲ್ಲ ಅನಾಹುತಕ್ಕೆ ಜೂಲಗಟ್ಟಿ ನಿಂಗವ್ವನೇ ಕಾರಣವೆಂದು ನಿಶ್ಚಯಿಸಿ ಅವಳು ತಮ್ಮ ಕುತ್ತಿಗೆಯನ್ನೇ ಕೊಯ್ದಳು ಎಂದು ಅವಳ ಮೇಲೆ ಉರಿಯುತ್ತಾರೆ. ಈಗ ಅವರಿಗೆ ಎದುರಾಗಿರುವ ಇನ್ನೊಂದು ಸಮಸ್ಯೆ ಮಾನದ್ದು. ಇದುವರೆಗೆ ಎಲ್ಲರೂ ಒಗ್ಗಟ್ಟಿನಿಂದಿದ್ದು, ಅನೇಕರನ್ನು ಎದರು ಹಾಕಿಕೊಂಡು ಬಾಳಿದವರು ಈಗ ಚೆನ್ನನಿಂದ ಆಗಲಿ ಹೇಗೆ ಮುಖ ತೋರೋಣ ಎನ್ನುತ್ತಾರೆ.

ಗೆಳೆಯರಿಬ್ಬರನ್ನೂ ನಿರಾಶೆ ಗಾಢವಾಗಿ ಕವಿದಿದೆ. ಬದುಕಿನ ಅಸ್ತಿತ್ವವನ್ನು ಕುರಿತು, ಬಾಳುವುದರ ಗುರಿಯನ್ನು ಕುರಿತು ದೀರ್ಘವಾಗಿ ಆಲೋಚಿಸುತ್ತಾರೆ, ದೇವರು ನಮ್ಮ ಮೇಲೆ ಮುನಿಸಿಕೊಂಡಿದ್ದಾನೆ ಎಂಬ ನಿರಾಶೆ ಇನ್ನೊಮ್ಮೆ ಕವಿಯುತ್ತದೆ.

ಕೊನೆಗೆ, ಆಗಿರುವ ಅನಾಹುತಕ್ಕೆ ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಂಡು ಜೂಲಗಟ್ಟಿಗೆ ಹೋಗಿ ನಿಂಗವ್ವನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾರೆ.

ಸಿದ್ದ : ಹುಸೇನಿ

ಘಾತ ಮಾಡಿದೋ ಚೆನ್ನಣ್ಣಾ
ಮೀರಿ ನಮ್ಮ ವಚನಾ ॥ ಪ ||

ನಂಬಿ ಹೆಂಗಸ ರಂಡಿನಾ
ಕೋದ ನಮ್ಮ ಕುತಗಿನಾ

ಜನದಾಗ ಮುಖವನಾ
ಹ್ಯಾಂಗ ತೋರುನೊ ಈ ಕ್ಷಣಾ
ಭೂಮಿ ಮ್ಯಾಲ ನಾವಿನ್ನಾ
ಹುಟ್ಟಿ ಏನ ಫಲವೇನಾ

ಗುಡ್ಡದಾಗ ನಾವಿನ್ನಾ
ಕೊಡತೇವಿ ಪ್ರಾಣನಾ

ಮುನಿದ ಸ್ವಾಮಿ ಭಗವಾನಾ
ಬಂತೊ ಜೀವದ ಕಟಿಣಾ

* * *

ang=K�”:=ye�?��_�ze:12.0pt;font-family:Tunga’> ಹುಕಮಕೊಟ್ಟ ನೋಡೋ ಎಣ್ಣಾ ಮಾಡಬ್ಯಾಡೋ ಅನುಮಾನಾ
ಈ ಕ್ಷಣದಾಗ ಕೆಡುತೇವಿ ವೈರಿಗಳ ಹೆಣಾ

 

ಪೋಲೀಸರು

ನೋಡರ‌್ಯೋ ಬ್ಯಾಗಾ
ಬಂದಾರೋ ಇಲ್ಲೇ ಮೂವರಾ

ಇವರು ಕಾಣತಾರೋ ಭಾರಿ ತುಡಗರಾ
ತರಬೂನು ಹೋಗಿ ತೀವರಾ
ಮಾಡಿ ಮುಂಗೈ ಜೋರಾ

ಮುಂದಿನ್ಯಾವ ಕಾಣಸ್ತಾನೊ ಕಟ್ಟಿ ಚೆನ್ನ ಧೀರಾ
ದೊಡ್ಡ ಮುಂಡಾಸ ಸುತ್ತಿದಾನ ಹಳದಿ ದುಂಡಕಾರಾ
ಎಷ್ಟ ಇವನ ಅಹಂಕಾರಾ

ನಮ್ಮನ ಕಂಡ ಮಾಡವಾ ಏಟ ದರಕಾರಾ
ಹಿಡಿದ ಮಾಡಬೇಕೊ ಇವರಿಗೆ ಸುಮಾರಾ
ಎಲ್ಲಾ ಪೋಲೀಸರಾ

ಚೆನ್ನ : ಹುಸೇನಿ : ಸಿದ್ಧ

ಯಾಕಲೆ ತುಡಗ ಸಿಪಾಯಿ ಬಾರೊ ಬ್ಯಾಗನಾ ॥ ಪ ||

ಒಂದ ಕಡತಕ್ಕ ತಗೊ :
ತೇವಿ ಪ್ರಾಣಾ
ತುಣಕಮಾಡಿ ಹೆಣಾ
ಹತ್ತಾಕಿಲೊ ಕೂನಾ

ದೂರದಿಂದ ನೀವು ನಗತೀರರೋ
ನೋಡಿ ನಮ್ಮನಾ
ಪಾರಾಗಿ ಹೋಗರೋ
ನೀವು ಈ ಕ್ಷಣಾ
ಒದ್ದ ಕೆಡುವತೇವ ನಿಮ್ಮನಾ
ಮಾಡತೇವಿ ಅಪಮಾನಾ

ಕಲ್ಲಹೊತ್ತ ಕಚ್ಚತೀರೋ
ಹುಲ್ಲಕಡ್ಡಿಯನಾ
ಅಂದರ ಬಿಡತೇವಿ ನಿಮಗ
ಜೀವದಾನಾ
ಇಲ್ಲದಿದ್ರ ಹೆಣಾ ಹತ್ತಾ ಕಿಲ್ಲೋ ಕೂನಾ

ಪೋಲೀಸರು

ಚೆನ್ನಪ್ಪಣಾ ಹಿಡದೇವಿ ನಿಮ್ಮ ಚರಣಾ
ಧರಮ ಸರಿ ಬಿಡರಪ್ಪಾ ನಮ್ಮನ್ನಾ
ಮಕ್ಕಳಂತ ತಿಳಿರೆಪ್ಪಾ ನೀವಿನ್ನಾ

ಕಲ್ಲ ಹೊತ್ತು ಕಚ್ಚತೇವ್ರಿ ಹುಲ್ಲಕಡ್ಡಿಯನಾ
ಹತಿಯಾರ ಒಗದು ಮಾಡತೇವ್ರಿ ಮುಜರಿಯನಾ
ನಮ್ಮ ಮ್ಯಾಲೆ ಮಾಡರಿ ಅಂತಃಕರುಣಾ

ಹಡದ ಹೆಸರ ಇಡತೇವಿ ನಿಮ್ಮನ್ನಾ
ಹಚ್ಚು ದೀಪಾ ನಿಮ್ಮದಂತ ತಿಳಿಯರಿನ್ನಾ
ಹೆಂಗಸರು ಸರಿಮಾಡಿ ಬಿಡರೋ ನಮ್ಮನ್ನಾ

* * *