ಅಗಶ್ಯಾಗ = ಊರ ಮುಂದಿನ ದ್ವಾರ ಬಾಗಿಲು

ಅಗ್ಗೀನ = ಉಗಿ

ಅಬ್ಬರಲೆ = ವೇಗದಿಂದ

ಅಂತಕ = ಯಮ

ಅಂಟ = ಅಟ್ಟ

ಅಂಬರಾಗಿ = ಆಕಾಶಕ್ಕೆ ಮುಖಮಾಡಿ

ಅಗಾಯ = ಅಸಾಧ್ಯ

ಆಯೇರಿ = ಮುಯ್ಯ, ತಿರುಗಿ ಕೊಡುವ ವಸ್ತು ಅಥವಾ ಹಣ ಕೊಟ್ಟದು

ಇಟ್ಟ = ಇಷ್ಟು

ಇಟ್ಟ ಮಂದಿ = ಇಷ್ಟು ಮಂದಿ (ಜನ)

ಇಣಿ = ಎತ್ತಿನ ಕುತ್ತಿಗೆ ಮೇಲಿನ ಅಂಗ

ಇಂಬು = ವಿಶಾಲವಾದ

ಈಡ = ಕುರಿಗಳ ದೊಡ್ಡಿ, ದೊಡ್ಡದಾದ

ಈಡ್ಡಂಗ = ಹೆಚ್ಚಾಗಿ, ದೊಡ್ಡದಾಗಿ

ಈದ = ಕರುಹಾಕಿದ

ಈಳ್ಯಾ = ಆಮಂತ್ರಣ

ಉಸ್ತರ = ವ್ಯವಸ್ಥೆ

ಉಸ್ತಾರೇನ = ಶೃಂಗಾರ

ಉಗ್ಗು = ಎರಚು

ಉಗ್ಗರಗಣ್ಣ = ಉಗ್ರಕಣ್ಣು

ಉಡಿತುಂಬು = ಉಡಿಯಲ್ಲಿ ಫಲಗಳನ್ನು ಹಾಕುವುದು

ಎಳಗರ = ಎಳೆಯಕರ (ಸಣ್ಣಕರ)

ಐರಾಣಿ = ಐದು ಮಣ್ಣಿನ ಮಡಿಕೆಗಳು

ಐಶಾಲಿ = ಐದು ಸೊಲಿಗೆ

ಐಗೋಳ = ಐದು ಸೊಲಿಗೆ; ಮಠದವರು

ಕಡಪಟ್ಟಿ = ಗ್ರಾಮದ ಹೆಸರು, ಜಂಬುಖಂಡಿ ಬದಿ ಊರು

ಕವಟಗಿ = ಗ್ರಾಮದ ಹೆಸರು

ಕಂಡಗ = ಬಹಳಷ್ಟು, ಖಂಡಗ

ಕಾಟರಲೆ = ತಳವಾರ

ಕಾಟರಲೆ ಕಾವಲಿ = ತಳವಾರರ ಕಾವಲು

ಕಾಲ = ಯಮ

ಕಕ್ಕಡ (ಕಕ್ಕಡಿ) = ದೊಡ್ಡದೀಪ ಅರಬಿಯ ಹುರಿಯಿಂದ ತಯಾರಾದ ದೀಪ

ಕಬರ = ಜೀವ

ಕಬಲ = ಒಪ್ಪಿಗೆ

ಕಾಲಿ = ಕೇವಲ

ಕ್ವಾಟ = ಕೋಟೆ

ಕಿಂವರಕ್ತ = ಕೀವುರಕ್ತ

ಕುದ್ದಲ = ದುಷ್ಟ

ಕುರಜಾವ = ಅಂದವಾದ ಕುರ್ಚಿ

ಕಸುಲದ = ಅಂದವಾದ, ಚೆಲುವು

ಕುಂದಳ = ಎಡಕ್ಕೆ ತೆಗೆಯುವ ಬೈತಾಲಿ

ಕುಣಕಿ = ದನಗಳಿಗೆ ಕಟ್ಟುವ ಹಗ್ಗದ ಗಂಟು

ಕುನಸಿ = ಗುರಿ

ಕೊಮರ = ಕುಮಾರ

ಕೋರಿ = ಹೊದ್ದುಕೊಳ್ಳುವ ವಸ್ತ್ರ ಹರಕು ಕಂಬಳಿ

ಖರಿಯ = ನಿಜ

ಖರೇನ = ನಿಜವಾಗಿ

ಖಾನಿ = (ಕೋಸಿ), ಮೂಲಿ

ಖಾಲಿ = ಬರಿದಾದದ್ದು, ಬರಿದು.

ಖ್ಯಾಲ = ಆಸೆ, ಆಸೆಯಿಡು.

ಖೇಚರ = ಗಂದರ್ವ ಪಕ್ಷಿ, ಸದಾ ಆಕಾಶದಲ್ಲಿ ಹಾರಾಡುವ ಪಕ್ಷಿ

ಖೋಡ = (ಕೋಡ) ಕೊಂಬು

ಗಟರ‍್ಯಾನ = ದವಡೆ ಕಚ್ಚುವುದು

ಗದ್ದರಕಿ = ಗುಡಗಿನ ಸಪ್ಪಳ

ಗಲ್ಲೀಪ = ಶೃಂಗಾರ ಮಾಡಿದ ಅರಿವೆ (ಎತ್ತುಗಳಿಗೆ ಹಾಕುವ ಅರಿವೆ)

ಗ್ವಾದಲಿ = ದನ ಕಟ್ಟುವ ಕೊಟ್ಟಿಗೆ

ಗತ್ತ = ಯೋಜನೆ

ಗಪಲಿ = ಖಪಲಿ, ಕಪಲಿ, ಮೊಟ್ಟೆ

ಗಪ್ಪೊರಸಿ = ಅಡ್ರಾಸಿ, ಒಮ್ಮಿಂದೊಮ್ಮೆ

ಗುಗ್ಗಳ = ಸುವಾಸನೆವುಳ್ಳ ಒಂದು ಮರದ ತೊಗಟೆ

ಗೊಂಗಡಿ = ಕಂಬಳಿ

ಗೋಲಾ = ಮುಂಗೋಸಿ

ಗೊಡ್ಡ = ಬಂಜರ, ಸಂತಾನ ಇಲ್ಲದ

ಗೋರಮಳಿಯ = ಘೋರಮಳಿ ಹೆಚ್ಚಿನ ಮಳೆ

ಚವರಾಡಿ = ಬೀಸಣಿಕೆ

ಚರಗಿ = ತಂಬಿಗೆ

ಚಾಡಿ = ಮಾಟವಿದ್ಯೆ

ಚಾಚೀಲಿ = ಹಲ್ಲುಪುಡಿ

ಚಾಲು = ಪ್ರಾರಂಭ; ಸುರುಮಾಡು

ಚೌಗಡ = ಕಂಬಳಿ ಮುಸುಕು; ಒಂದು ಚರ್ಮವಾದ್ಯ

ಚೌಗಡಗ = ದಿಮ್ಮಿ

ಛತುರ = ಕೊಡೆ

ಚಕ್ರಕೋಟೆ = ಪದ್ಮವ್ಯೂಹ

ಜಲ್ದಿ = ಅವಸರ

ಜಾತಂಬಿ ಹೂ = ಜಾಜಿಯ ಹೂವು

ಜಾಚೀಲಿ = ಹಲ್ಲು ಕಪ್ಪು ಪುಡಿ

ಜಾಲಹಾಕು = ಬಲಿಗೆ ಹಾಕು

ಜಿಂಜರಿ = ಕೂದಲು

ಜಿಡ್ಡಿ = ದಿಡ್ಡಿ

ಜಿಲ್ಲಿ = ತೂತು

ಟಕ್ಕೆ = ಸಣ್ಣ ಗುಂಡುಗಳುಳ್ಳ ಬಂಗಾರದ ಕೊರಳ ಆಭರಣ

ಟಿಳ್ಯಾ = ಟಿಕಳಿ

ಠಾಣ್ಯಾ = ಸೊಕ್ಕಿದ

ಠೊಣಪ = ಸೊಕ್ಕಿದ ಮನುಷ್ಯ

ಠೊಣಪಿ = ಸೊಕ್ಕಿದ ಹೆಂಗಸು

ತರಬ್ಯಾರ = ತಡೆಯುವುದು

ತಾಡಪಿತ್ತೂರಿ = ತಾಡ ಎಲೆಗಳು

ತಾರಿನ ಅಂಗಿ = ಬಿಳಿಯ ತಿಳು ಅಂಗಿ

ತೆಪ್ಪ = ಹಲಗೆ ಆಕಾರದ ತಟ್ಟೆ ತೇಲುವ ತಟ್ಟೆ

ಥಡ = ತಡ; ವೇಳೆ ಮೀರಿ; ಕೊಟ್ಟ ವೇಳೆಗೆ ತಪ್ಪುವುದು

ಥಂಡ = ನೂಕು; ಒತ್ತುವುದು

ದಕ್ಕು = ದೊರಕು; ಆಸ್ತಿ ಕೈವಶವಾಗು

ದವುಳಂವ = ಶ್ರೀಮಂತ, ಸಾಹುಕಾರ

ದವುಳಾಕಿ = ಶ್ರೀಮಂತಿ, ಶ್ರೀಮಂತನ ಹೆಂಗಸು ಸಾವಕಾರತಿ

ಧಡಕಿ = ತೆರೆ, ಅಲೆ

ಧಡಶೀರಿ = ಧಡಿಸಿರೆ, ನಾಲ್ಕು ಅಂಗಲ

ಅಂಚರ ಇರುವ ಕೆಂಪು ಬಣ್ಣದ ಸೀರೆ

ಧಡಿ = ಅಂಚು

ಧನಿಯಾ = ನಾದ

ಧರಣಿ = ಭೂಮಿ; ಭೂಮಿತಾಯಿ

ನವಿ = ಸವಿ

ನಶೀಬ = ಹಣೆಬರಹ

ನಾಡ ಪರಿಗಂಡ = ದೇಶಾಂತರ

ನಾಟಿಕಾರ = ತಳವಾರ

ನಿಂಬಿಗಗುಳ = ನಿಂಬಿಗಿಕುಳ, ವಿಶ್ವಾಸಿ

ನೆದರ = ದೃಷ್ಟಿ

ನೆದರ ಹತ್ತು = ದೃಷ್ಟಿತಾಗು; ನಂಜಾಗು

ಪನಿವಾರ = ನೈವೇದ್ಯ, ಫಳಾರ

ಪವಳ್ಯಾಗಿ = ಗುಡಿಯ ಸುತ್ತ ಮುತ್ತಿನ ಜಾಗ

ಪಡಗ = ದೊಡ್ಡಗಡಿಗೆ

ಪರಿ = ವಿವಿಧ

ಪರಿಪರಿ = ವಿವಿಧತೆ

ಪರ್ಷಿ = ಪವಳಿ, ಗುಡಿಯ ಅಂಗಳ

ಪಾವುಂಟಿಗೆ = ಗುಡಿಯ ಹತ್ತವನೆಡೆ

ಪಾರ್ಯಾ = ಪಹರೆ, ಕಾವಲು

ಘೋರ = ಹುಡುಗ

ಘೋರಿ = ಹುಡುಗಿ

ಪುರಮಾಸಿ = ತೀಕ್ಷಣ

ಪೋಲಕ = ಪೋಲಕಾರ, ಜಂಪರ, ಕುಬ್ಬಸ

ಬಳ್ಳೂರ = ಗ್ರಾಮದ ಹೆಸರು

ಬಾಜಾರ = ಸಂತೆ

ಬಾಳಾ = ಬಾಲ

ಬಾಳುವೆ = ಕುರಿಗಳು

ಬಿಂಡಿ = ಗೊಂಚಲು

ಬಿಂದಿಗಿ = ಸಣ್ಣ ಕೊಡ

ಬೀಳ = ಬೆಳೆಯದ ಹೊಲ; ಬಂಜರ ಭೂಮಿ

ಬೆಚ್ಚರ = ಎಚ್ಚರ

ಬೆಚ್ಚರ ಹೊಡಿ = ಎಚ್ಚರಿಕೆ ಮೂಡಿಸು

ಬೈಲ ಬಾಗಕ = ಬಯಲು ಕಡೆ; ಬಹಿರ್ದೆಸೆಗೆ

ಬೂತಗ್ಯಾ = ತಿಂದು ತೇಗಿದವ, ಲಕ್ಷಣವಾಗಿವುಳ್ಳ

ಭಾಗ್ಯ =  ಕುರಿ, ಸಂಪತ್ತು

ಭಾಳ = ಬಹಳ; ಉತ್ತಮ; ಒಳ್ಳೆಯ

ಮಲಕು = ತಿರುವು

ಮಾಡಲಿ = ಮಾದುಲಿ, ಗೋದಿಯ ಸಿಹಿ ಪದಾರ್ಥ

ಮಂಜನ = ಕಾಡು

ಮುಂಜಾನ = ಒಂದು ಬಗೆಯ ಚರ್ಮವಾದ್ಯ

ಮಡಗಲ್ಲು = ಮಾಳಿಗೆ ಏರಲು ಹಾಕಿದ ಕಲ್ಲು

ಮಾಪ = ಅಳತೆ, ಅಳತೆಗೋಲು

ಮನಾರ = ಬಹಳ

ಮಾಫಿ = ಕ್ಷಮಿಸು

ಮಾಮುರಿ = ಮರೆ

ಮಾರಾಯ = ಮಹಾರಾಯ; ಒಡೆಯ

ಮಿಜಡ = ಮಿದುಳು

ಮುಕ್ಕ =          ಊನವಾದ; ಒಡೆದ

ಮುತಾಳ = ಬಿತ್ತುವ ಕೂರಿಗೆಯ ಮೂರು ತಾಳುಗಳು

ಮುಕರಿ = ಮುಕರು; ಸುತ್ತಗಟ್ಟು

ಮುಸಲತ್ತು = ಮಸಲತ್ತು; ಮೋಸ

ಮುಡಿ = ಮಡಿ; ಜರತಾರಿ ಅರಿವೆ

ಮುಡಿ = ತಲೆಗೆ ಹಾಕಿಕೊಳ್ಳು

ಮೋಡಿ = ಮಾಟವಿದ್ಯೆ

ಮೇವು = ಸಾಕು ದನಗಳ ಆಹಾರ; ಹುಲ್ಲು

ಯುಗತಿ = ಯುಕ್ತಿ, ಉಪಾಯ

ಯಾದಿ = ಪಟ್ಟಿಮಾಡು, ಕುದಿ; ಚಿಂತೆ

ಯಾಸಿಗೈ = ಬಂಕಾದ ಕೈ

ಲತ್ತಿ = ಬಡೆತ ಹೊಡೆ

ರಂಪ = ಜಗಳ

ರಟ್ಟಿ = ತೋಳ; ಗಟ್ಟಿ

ರಾಯಮಾರ್ಗ = ರಾಯರ ಮಾರ್ಗ (ರಾಜಮಾರಗ)

ರೇವಗಿ = ಕಡಗೋಲು

ಲಗತ = ಹೊಂದಾಣಿಕೆ; ವಶವಾಗು

ಲಗ್ಗಿ = ಲಗ್ಗ್ಯಾ; ಲಗೋರಿ, ಚಂಡಿನಾಟ

ಲಾಬಾನ = ಊದು

ವರಗಿ = ವಾರಗಿ; ಸಮ ವಯಸ್ಸು

ವಜನ = ಭಾರ

ವಡಮುರಿ = ಗಟ್ಟಿಯಾದ ತಿರುವು

ವಾಜಮಿ = ಸರಿ

ವ್ಯಾಳೇಕ = ವೇಳೆಗೆ ಸರಿಯಾಗಿ

ವಾಲಗ = ಓಲಗ; ಗೊಟ್ಟಿ; ಗೋಷ್ಠಿ

ವಾಯಿ ಗಂಗಾಳ = ದೊಡ್ಡ ಗಂಗಾಳ

ವಾಯಿನ = ಹೆಸರುವಾಸಿ

ವಾರಿ = ಇಳಿಜಾರ ಹೊಲ

ವಾರಿಸಿದ್ದ = ವಾರಿಭಾಗದ ಸಿದ್ಧ

ವಾಸರ = ಆಸರ

ವೈತಾಳ = ಒಯ್ಯುತ್ತಾಳೆ

ವಟ್ಟತನ = ಹಟಮಾರಿ; ಒಟ್ಟತನ

ವಿಪರ‍್ಯಾಸ = ನಕಲಿ ಬಾಜಿ ಹೆಣ್ಣು

ಶರಮಂತ = ಸಿರಿಮಂತ, ಬುದ್ಧಿವಾನ

ಶಾವಂತ್ರಿ ಹೂವು = ಸೇವಂತಿಗೆ ಹೂವು

ಶಾಯ = ಸೇವೆ

ಸಕಣ = ಶಕುನ; ಭವಿಷ್ಯ

ಸದಿ = ಸೆದೆ; ಕಸ-ಕಡ್ಡಿ, ರವದಿ

ಸಮದೂತ = ಸಮಾಧಾನ

ಸದ್ಯಾಣಾಗು = ವಶವಾಗು

ಸದಮೂಲ = ನಿರ್ಮಲ

ಸನಮಂತ = ಶಾಂತಯುತವಾದ

ಸಬ್ಬನೆ = ಆರಾಮವಾಗಿ, ಶಾಂತಿಯಿಂದ

ಸೋಜಿಗ = ಆಶ್ಚರ್ಯ

ಸ್ವಾರುತ = ಸ್ವಾರ್ಥ

ಸೀತಾಳ = ನೀರು

ಸೀತಾಳ ಬಿಂದಿಗಿ = ನೀರು ತರುವ ಪಾತ್ರೆ

ಸುಳುವು = ಗುರುತು

ಸೂಳಿ = ವೇಶ್ಯೆ; ದೇವದಾಸಿ

ಸೈತಾನ = ರಾಕ್ಷಸ

ಸೈಯ್ಯ = ನಿಜ; ಸರಿ

ಸೋಲ = ಹಗ್ಗ

ಹಡಸಿ = ಹಾದರ

ಹರಳಿ = ಅಪವಾದ

ಹರೆಯಲೆದ್ದು = ಮುಂಜಾನೆ ಎದ್ದು

ಹಲಗ = ಹಲಗು; ಕತ್ತಿ

ಹವನ = ರೀತಿ; ಮಾಡುವ ಬಗೆ

ಹ್ಯಾವ = ಪಂಥ; ಹಟ

ಹ್ಯಾಂಗ = ಯಾವ ರೀತಿ

ಹಿಂಗ = ಇದೇ ರೀತಿ; ಸರಿ ರೀತಿ

ಹಂಗನೂಲು = ಕೊರಳಲ್ಲಿ ಹಾಕಿಕೊಳ್ಳುವ ನೂಲು; ನಾಯಿ ಕೊರಳಲ್ಲಿ ಕಟ್ಟುವ ಬೆಳ್ಳಿ ಗೆಜ್ಜೆ ಪಟ್ಟಿ

ಹಂತೇಲಿ = ಹತ್ತರ

ಹಿಪ್ಪರಗಿ = ಊರ ಹೆಸರು

ಹುಡದಿ = ಗದ್ದಲ

ಹುಡೇದ = ಕಾವಲಗಾರನ ಎತ್ತರ ಸ್ಥಳ

ಹುಲ್ಲುಗುಂಪಿ = ಹುಲ್ಲಿನ ಗುಂಪ, ಗುಡಿಸಲು

ಹೂಲ = ಹಕಾರಿ

ಹೂಳು = ತಗ್ಗಿನಲ್ಲಿ ಹಾಕಿ ಮಣ್ಣು ಮುಚ್ಚು

ಹೆಗರು = ಜಿಗಿ

ಹೊಂಡ = ದುಂಡಗಿನ ತಗ್ಗು ಭಾಗ

ಹೊಯಿಸು = ಹಾಕಿಸು

ಹೊಳ್ಳಿ = ತಿರುಗಿ

ಹೌವ್ವನಾರಿ = ಹೌಹಾರಿದ ನಾರಿ; ಗಾಬರಿಯಾದ ಸ್ತ್ರೀ

ಹೋಳಮಗ್ಗಲ = ಒಂದೇ ಮಗ್ಗಲು (ಮಲಗುವ ಕ್ರಿಯೆ)

ಹಿಂಚಾಳಿಸು = ಅನುಮಾನಿಸು

ಹೊರಿಯಾಕ = ಹೊರಗೆ

ಹೋಳು = ಭಾಗ; ಮಗ್ಗಲು

ಹೌರರು = ಸೇವಕರು

ಳತ್ತಿ = ಲತ್ತಿ ಬಡಿತ

ಕ್ಷೋಣಿಯೊಳಗೆ = ಜಗದೊಳಗೆ

ಕ್ಷೋಣಿಗ = ಜಗದೊಡೆಯ

 


ಆಕರಗಳು                   

ಕ್ರ ಸಂ.

ಕಥೆಯ ಗೀತೆಯ ಶೀರ್ಷಿಕೆ

ಸಂಪಾದಕರು

ಸಂಕಲನದ ಹೆಸರು

ಪ್ರಕಾಶಕರ ವಿವರ

ಪ್ರಕಟಗೊಂಡ ವರ್ಷ

ಪುಟಗಳು

೧. ಡೊಳ್ಳಿನ ಹಾಡು ಸಂ|| ಎಂಎಸ್. ಸುಂಕಾಪುರ ಜೀವನ ಜೋಕಾಲಿ ಭಾಗ-೬ ಕನ್ನಡ ಅಧ್ಯಯನ ಪೀಠ, ಧಾರವಾಡ ೧೯೭೩ ೧ ರಿಂದ ೧೫೪
೨. ಜನಪದ ಹಾಲುಮತ ಮಹಾಕಾವ್ಯ ಡಾ. ವೀರಣ್ಣ ದಂಡೆ ಡೊಳ್ಳಿನ ಹಾಡು ಕನ್ನಡ ಪುಸ್ತಕ ಪ್ರಾಧಿಕಾರ ಆವೃತ್ತಿ ೨೦೦೦ ೧ ರಿಂದ ೪೮ ಮತ್ತು ೬೩೧ ರಿಂದ ೬೮೮
೩. ಡೊಳ್ಳಿನ ಹಾಡು ಡಾ. ಶಿವಾನಂದ ಗುಬ್ಬಣ್ಣವರ ದೇವssರ್ ಬಂದಾವ್ ಬನ್ನೀssರೆ ೧-೨ ವ್ಯಾಸಂಗ ವಿಸ್ತರಣ ಪ್ರಕಟನ ವಿಭಾಗ ಕರ್ನಾಟಕ ವಿ.ವಿ. ಧಾರವಾಡ ೧೯೭೯ ೧ ರಿಂದ ೧೯೮
೪. ಡೊಳ್ಳಿನ ಹಾಡುಗಳು ಸಂ|| ಬಸವನಗೌಡ ಪಾಟೀಲ ತೂಕ ಮಾಡಿ ಹೇಳತೀನಿ ನ್ಯಾಯ ಒಕ್ಕಲ ಮಕ್ಕಳ ಪ್ರಕಾಶನ, ಯಳವತ್ತಿ ರಾಯಚೂರು ಜಿಲ್ಲೆ. ೧೯೮೦ ೧ ರಿಂದ
೫. ಡೊಳ್ಳಿನ ಪದಗಳು ಸಂ. ಜೆ.ಬಿ. ಖಾಡೆ ಕಾಡು ಹೂವುಗಳು ಮೈಸೂರು ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಸಂಸ್ಥೆ ೧೯೭೩ ೮೩ ರಿಂದ ೧೯೮
೬. ಬಳ್ಳಾರಿ ಜಿಲ್ಲೆಯ ಡೊಳ್ಳಿನ ಪದಗಳು ೧.ಕೆ. ವಿರುಪಾಕ್ಷಗೌಡ         ಮತ್ತು ೨. ಮೇಟಕೊಟ್ರಪ್ಪ ನಡಿಯಪ್ಪ ನಮ್ಮ ನಾಡಿಗೆ ಯುವಕ ಸಂಘ ರಾಮನಗರ, ಹಗರಿಬೊಮ್ಮನಹಳ್ಳಿ ೧೯೮೧ ೧ ರಿಂದ ೫೯
೭. ಡೊಳ್ಳಿನ ಹಾಡುಗಳು ಸಂ|| ನಿಂಗಣ್ಣ ಸಣ್ಣಕ್ಕಿ ಗಂಡಸರ ಜನಪದ ಹಾಡುಗಳು ಸಮಾಜ ಪುಸ್ತಕಾಲಯ ಧಾರವಾಡ ೧೯೭೮ ೯೫ ರಿಂದ ೧೦೯