ಕ
ಕಂಕೆಲ್ಲಿ – ಅಶೋಕವೃಕ್ಷ ೮ – ೨೯
ಕಂಟಣಿಸು – ಹೇಸಿಗೆಪಡು ೧೦ – ೪೨ವ
ಕಂಠೀರವ – ಸಿಂಹ ೭ – ೫೬
ಕಂಚುಕಿ – ರಾಣಿವಾಸದ ಅಕಾರಿ ೧ – ೭೧
ಕಂಡರಸು – ಕೆತ್ತು, ಚಿತ್ರಿಸು, ಪ್ರತಿಮೆಯನ್ನು ಕೊರೆ ೬ – ೩೩
ಕಂತು – ಮನ್ಮಥ ೧ – ೧೮
ಕಕ್ಷ – ಮಹಲು, ತೊಟ್ಟಿ ೨ – ೮೮
ಕಚ – ಕೂದಲು ೩ – ೧೪೮
ಕಟಕ – ಪಾಳೆಯ, ಸೇನಾನಿವೇಶ ೭ – ೫೫
ಕಡವು – ಕಡಹದ ಮರ, ಕದಂಬವೃಕ್ಷ ೭ – ೨೩
ಕಡುಕೆಯ್ – ಶಕ್ತಿಯನ್ನು ತೋರಿಸು, ಸಾಹಸಮಾಡು ೧ – ೧೩೪
ಕಡುಗೊರ್ಬು – ಬಹಳ ದಪ್ಪ ೮ – ೧ವ
ಕಡುಪು – ಕ್ರೋಧ ೩ – ೮
ಕಡುಸೇವೆ – ಹೆಚ್ಚಾದ ಶ್ರಮ ೧ – ೧೫೬
ಕಣ್ಗುಡಿತೆ – ಬೊಗಸೆಗಣ್ಣು, ಅಗಲವಾದ ಕಣ್ಣು ೯ – ೭
ಕಣ್ಗೆಡ್ಡಮಾಗು – ಶೋಭಿಸು ೨ – ೮೯
ಕಣ್ಗೆಯ್ – ನಿದ್ರೆಮಾಡು ೮ – ೧೧
ಕಣ್ಗೆಸೆ – ಕಣ್ಣಿಗೆ ಒಪ್ಪು, ಶೋಭಿಸು ೧೨ – ೯೦
ಕಣ್ಣಲಾಗೆನೆ – ಕ್ಷಣಮಾತ್ರದಲ್ಲಿ ೮ – ೩೪
ಕಣ್ಣರಿವು – ಕಣ್ಣಿನ ಓಟ ೫ – ೮೩
ಕಣ್ಮಲರ್ – ಹೂವಿನಂತಿರುವ ಕಣ್ಣು, ವಿಶಾಲವಾದ ಕಣ್ಣು ೨ – ೮೪
ಕದಂಬ – ಗುಂಪು ೧೦ – ೯೭
ಕದಪು – ಕೆನ್ನೆ ೫ – ೧೫೦
ಕದರ್ಥನೆ ಕಾಟ ೭ – ೭
ಕದಿರ್ – ಕಿರಣ ೫ – ೧೫೮
ಕನಕಾಚಲ – ಚಿನ್ನದ ಬೆಟ್ಟ, ಮೇರುಪರ್ವತ ೮ – ೫೭ವ
ಕನ್ನಡವಕ್ಕಿ – ಗಿಳಿ ೧ – ೭೦
ಕನ್ನೆಮಾಡ – ರಾಜಪುತ್ರಿಯರು ವಾಸಿಸುವ ರಾಣಿವಾಸ, ಕನ್ಯಕಾಂತಪುರ ೬ – ೧೬೦
ಕಬರಿ – ಕೇಶಪಾಶ, ತಲೆಗೂದಲು ೬ – ೨೪ ಕಬಳಿತ – ನುಂಗಲ್ಪಟ್ಟುದು ೮ – ೧೦೧
ಕಯ್ಗಣ್ಣು – ಹೆಚ್ಚು ೯ – ೪೦ವ
ಕರಂಜ – ಹುಲುಗಿಲಿ ಮರ ೮ – ೧ವ
ಕರದೀಪಿಕೆ – ಕೈದೀವಿಗೆ ೨ – ೮೮
ಕರಿಕಲಭ – ಆನೆಮರಿ ೩ – ೬
ಕರಿಣಿ – ಹೆಣ್ಣಾನೆ ೨ – ೬೯
ಕರು – ಮೂಲಸ್ತಂಭ ೧೦ – ೪೨
ಕರುಮಾಡ – ಉಪ್ಪರಿಗೆಮನೆ ೩ – ೩೨
ಕರುವಿಡು – ಎರಕಹೊಯ್ಯು ೩ – ೮೬
ಕರ್ಚು – ತೊಳೆ, ಪ್ರಕ್ಷಾಳಿಸು ೧ – ೨೩೪
ಕರ್ಣಪೂರ – ಕರ್ಣಾಭರಣ, ಓಲೆ ೨ – ೪೦
ಕರ್ಬೊನ್ – ಕಬ್ಬಿಣ ೧ – ೧೩೮
ಕವರ್ – ದೋಚು, ಸುಲಿಗೆಮಾಡು ೮ – ೧೨೮
ಕವಾಟ – ಬಾಗಿಲು, ಕದ ೮ – ೨, ೧ – ೧೩
ಕವಿ – ೧ ಕವಿತ್ವಮಾಡುವವನು, ೨ ನೀರು ಹಕ್ಕಿ ೧ – ೨
ಕವಿಲ್ಗೆಂಪು – ಮಾಸಲುಕೆಂಪು ೮ – ೬೯
ಕಷಾಯಿತ – ೧ಒಗಚಾದ, ೨ ವಿಕಾರಗೊಂಡ ೩ – ೭೦
ಕಳ್ – ಹೆಂಡ, ಮದ್ಯ ೩ – ೮೦
ಕಳತ್ರ – ಹೆಂಡತಿ ೩ – ೫೮
ಕಳಕಂಠ – ಕೋಕಿಲೆ ೧ – ೭೨
ಕಱಂಗು – ಕಪ್ಪಾಗು ೪ – ೧೪
ಕಱುತ್ತು(ಧಾ, ಕಱು) – ದಂಡಿಸು ೫ – ೨೦೨
ಕೞ್ – ಸಡಿಲವಾಗು ೧ – ೧೧೧
ಕಾಕಲಿ – ಮಧುರಗೀತ ೪ – ೩೧
ಕಣ್ಕೆ – ನೋಡುವಿಕೆ ೬ – ೧೩೮
ಕಾದಂಬಿನಿ – ಮೋಡಗಳ ಸಾಲು ೨ – ೭೭
ಕಾದಲ – ಇನಿಯ, ಪ್ರಿಯ ೫ – ೧೪೯
ಕಾರ್ – ಮಳೆಗಾಲ ೧ – ೭೭
ಕಾರ್ಪಾಸ – ಹತ್ತಿ, ಅರಳೆ ೧ – ೧೦೩ವ
ಕಾರ್ಬೊನ್ ಕಬ್ಬಿಣ ೯ – ೮೭
ಕಾಲಾಯಸ – ಕಬ್ಬಿಣ ೯ – ೧೩
ಕಾವಣ – ಚಪ್ಪರ ೭ – ೨೦ವ
ಕಾಶ್ಮೀರ – ಕುಂಕುಮ, ಕುಂಕುಮ ಕೇಸರ ೨ – ೨೮
ಕಿಂಕರ್ತವ್ಯತಾಮೂಢೆ – ಏನು ಮಾಡಬೇಕೆಂದು ತಿಳಿಯದವಳು ೫ – ೧೩೧
ಕಿಂಕಿಣಿ – ಕಿರುಗಂಟೆ ೭ – ೨೧ವ
ಕಿಂಚಿತ್ಕರ – ಅಲ್ಪ, ಸಣ್ಣವಿಷಯ ೧೦ – ೮೬
ಕಿಂಜಲ್ಕ – ಹೂವಿನ ಕೇಸರ ೯ – ೬
ಕಿನಿಸು – ಕೋಪ ೮ – ೮೫
ಕಿನ್ನರ – ಕುದುರೆಯಂತೆ ಮುಖವೂ ಮನುಷ್ಯರಂತೆ ಶರೀರವೂ ಉಳ್ಳ ಒಂದು ಅಮಾನುಷ ಜಾತಿ ೪ – ೧
ಕಿಳಿರು – ಕೆನೆಯುವುದು, ಹೇಷಾರವ ೩ – ೫
ಕಿಳ್ವಾಳವಳ್ – ಬಿಚ್ಚುಗತ್ತಿಯವಳು ೧ – ೬೯
ಕಿಱುಕವ್ವರೆಗೊಳ್ – ಸ್ವಲ್ಪಮಟ್ಟಿಗೆ ಮುತ್ತಿಕೊಳ್ಳು ೧೦ – ೪೧ವ
ಕಿಱುಕುಳ – ಕಮ್ಮಿಯಾದವನು, ಕೀಳ ೯ – ೯೦
ಕಿಱುಳ – ಸಾಮಾನ್ಯ ಮನುಷ್ಯ, ನಾಡಾಡಿ ೧೦ – ೨೧
ಕೀರ – ಗಿಳಿ ೧೦ – ೧೦೪
ಕೀಳಿಡು – ಕಿರುಚು ೧ – ೧೫೨
ಕೀೞ್ – ಕಡಿವಾಣ ೩ – ೪
ಕುಂಚಿಕೆ – ಚಿತ್ರವನ್ನು ಬರೆಯುವ ಕುಂಚ ೪ – ೪೪
ಕುಂತ – ಭರ್ಜಿ, ಈಟಿ ೮ – ೧೦೧
ಕುಂದ – ಮೊಲ್ಲೆಹೂ ೯ – ೧೭
ಕುಂಬಿಡು – ನಮಸ್ಕರಿಸು ೫ – ೧೧
ಕುಂಭ – ಆನೆಯ ತಲೆಯ ಮೇಲುಭಾಗ ೩ – ೧೦೭
ಕುಜಾತ – ಮರ ೫ – ೧೦
ಕುಟುಕು – ಗ್ರಾಸ, ಆಹಾರ ೧ – ೧೧೨ವ
ಕುಟಜ – ಬೆಟ್ಟಮಲ್ಲಿಗೆ ೯ – ೧೭
ಕುಟ್ಟಿಮ – ನೆಲಗಟ್ಟು ೨ – ೬೧
ಕುಟ್ಮಳ – ಮೊಗ್ಗು ೧ – ೨೩೧
ಕುಡುವಿಲ್ – ಬಾಗಿದ ಬಿಲ್ಲು ೧೦ – ೫೫
ಕುತ್ತು – ಏಟು, ಹೊಡೆತ ೧೦ – ೩೦
ಕುನ್ನಿ – ಯಾವುದಾದರೂ ಪ್ರಾಣಿಯ ಮರಿ ೧ – ೧೩೯
ಕುಮುದ – ಬಿಳಿನೈದಿಲೆ ೧ – ೧೮೪
ಕುಮುದಿನಿ – ನೈದಿಲೆಬಳ್ಳಿ ೪ – ೬೧
ಕುರರ – ಒಂದು ಜಾತಿಯ ಹಕ್ಕಿ ೧ – ೮೨
ಕುವಲಯ – ೧ ಭೂಮಂಡಲ, ೨ ಕನ್ನೆ ದಿಲೆ ೯ – ೮೫
ಕುಶ – ದರ್ಭೆ ೨ – ೬೫
ಕುಸುಮಾಸ್ತ್ರ – ಮನ್ಮಥ ೧ – ೧೮೮
ಕುಸುರಿ – ಕಾಲಿನ ಆಭರಣ ೬ – ೧೪೧
ಕುಳಿರ್ – ತಣ್ಣಗಿರು ೧ – ೨೩೯
ಕೂರ್ಗಣೆ – ಚೂಪಾದ ಬಾಣ ೮ – ೫೫ವ
ಕೂರ್ಚ – ಕುಂಚ ೯ – ೩೪ವ
ಕೂರ್ತ(ಕೂರಿ) – ಪ್ರೀತಿಸಿದ ೬ – ೮೩
ಕೂರ್ಮೆ – ಪ್ರೀತಿ ೧ – ೭೧
ಕೃಪಾಣ – ಕತ್ತಿ ೧ – ೧೨
ಕೃಷ್ಣಿಕೆ – ಕಪ್ಪು ೬ – ೧೬೯
ಕೆಂದಳ – ಕೆಂಪಾದ ಅಂಗೈ, ಕರತಲ ೩ – ೨೫ವ
ಕೆಕ್ಕರಿಸು – ಹೆದರು ೧ – ೧೩೪ವ ಕೆಟ್ಟುದು – ಕಳೆದುಹೋದುದು ೮ – ೧೧೭
ಕೆತ್ತು – ಮುಚ್ಚು ೧೦ – ೪೪ವ
ಕೆತ್ತು,ಅದುರು, ಹಾರು ೨ – ೮೭, ೫ – ೧೪೪
ಕೆಲ – ಹತ್ತಿರ ೭ – ೫೫ವ
ಕೇಗು – ನವಿಲಿನ ಧ್ವನಿ, ಕೇಕಾರವ ೭ – ೧೩
ಕೇಣ – ದೀರ್ಘವಿಚಾರ, ಆಲೋಚನೆ ೫ – ೧೨೪
ಕೇಯೂರ – ತೋಳುಬಂದಿ, ಅಂಗದ ೧ – ೧೬
ಕೇರ್ – ತಡಿಕೆ ೮ – ೧೨೨
ಕೇರ್ಗಟ್ಟು – ತಡಿಕೆ ೧೦ – ೬೫ವ
ಕೇಸಡಿ – ಕೆಂಪಾದ ಕಾಲು, ಹೆಜ್ಜೆ ೧೦ – ೫೮
ಕೇಸರಫಲ – ವಕುಳವೃಕ್ಷದ ಕಾಯಿ, ಹಣ್ಣು ೫ – ೨೫
ಕೇಸರಿಕಿಶೋರ – ಸಿಂಹದ ಮರಿ ೨ – ೧೧೮
ಕೈಗಣ್ಮು – ಹೆಚ್ಚಾಗು ೭ – ೧ವ
ಕೈವಾರ – ಸ್ತೋತ್ರ ೭ – ೫೪
ಕೈವಿಡಿ – ಮದುವೆಯಾಗು ೬ – ೧
ಕೊರ್ವು – ಹೆಚ್ಚಾಗು, ಅತಿಶಯವಾಗು, ಕೊಬ್ಬು ೧ – ೧೨೭
ಕೋಟರ – ಪೊಟರೆ ೧ – ೧೦೪
ಕಾರಹೊಗೆ – ಕಂಟುರಾಸನೆ ಬರುವ ಹೊಗೆ ೧೦ – ೪೧
ಕಾಲೇಯಕ – ನಾಯಿ ೧೦ – ೪೧
ಕೌಂಗು – ಅಡಕೆಮರ ೧ – ೮೩ವ
ಕೌತುಕಾವಹ – ಆಶ್ವರ್ಯವನ್ನುಂಟು ಮಾಡುವುದು ೪ – ೬೮
ಕೌಶೇಯ – ರೇಶ್ಮೆವಸ್ತ್ರ ೧ – ೧೮೩ವ
ಕೌಸ್ತುಭ – ವಿಷ್ಣುವಿನ ವಕ್ಷಸ್ಥಳವನ್ನು ಅಲಂಕರಿಸಿರುವ ರತ್ನ ೬ – ೧೩೦
ಕೌಳುಡೆ – ದಿಂಬು ೬ – ೩೧
ಕೌಳೇಯ – ನಾಯಿ ೧ – ೧೮೦
ಕ್ಷುಣ್ಣ – ಪರಿಚಿತವಾದ ೨ – ೧೦೬
ಖ
ಖಂಜ – ಕುಂಟ ೨ – ೧೧೫
ಖುರಮಣಿಕ – ಕುದುರೆ ಕಾಲನ್ನು ಕಟ್ಟುವ ಗೂಟ ೭ – ೯ವ
ಖಲೀನ – ಕಡಿವಾಣ ೩ – ೮
ಖೇಚರ – ಆಕಾಶಚಾರಿ, ದೇವತೆ ೪ – ೬೯
ಗ
ಗಂಡಸ್ಥಳ – ಕಪೋಲಪ್ರದೇಶ, ಕೆನ್ನೆ ೧ – ೧೦೧ಗಂಧವಹ – ವಾಯು, ಗಾಳಿ ೧೦ – ೧೨
ಗಂಧಸಿಂಧುರ – ಮದ್ದಾನೆ ೩ – ೧೧೭
ಗಜನಿಮೀಲನ – ಆನೆಯಂತೆ ಮದದಿಂದ ಕಣ್ಣುಮುಚ್ಚುವಿಕೆ ೩ – ೭೮
ಗಡಪ – ವೇಗ ೪ – ೪
ಗರ – ಗ್ರಹ ೩ – ೯೬
ಗರ್ಹಿಸು – ನಿಂದಿಸು ೬ – ೯೨
ಚರ್ಚೆ – ಲೇಪನ ೫ – ೧೪೦ವ
ಚಾರ್ಟುಪ್ರಿಯವಚನ ೫ – ೧೭೬ವ
ಚಾಮೀಕರ – ಚಿನ್ನ ೬ – ೧೦ವ
ಚುಬುಕ – ಗಲ್ಲ ೩ – ೩೮
ಜ
ಜಂಝಾಸಮೀರ – ಮಳೆಯಿಂದ ಕೂಡಿದ ಬಿರುಗಾಳಿ ೯ – ೧೫
ಜಂಬೂಫಳ – ನೇರಳೆಹಣ್ಣು ೫ – ೨೦೯
ಜಘನ – ಸೊಂಟ ೬ – ೪೧
ಜಡಿ – ಗದರಿಸು ೩ – ೮೯
ಜಡಿಪ – ತರ್ಜನೆ, ಬೆದರಿಕೆ ೮ – ೪೬ವ
ಜವ್ವನಿಗ – ತರುಣ ೫ – ೪೫
ಜಾಗರ – ಅಂಕುರಾರ್ಪಣದ ಸಸಿ, ಪೈರು ೩ – ೧೦೫ವ
ಜಾತಿಸ್ಮರತೆ – ಹಿಂದಿನ ಜನ್ಮದ ನೆನಪು ೧೦ – ೫
ಜಾದಿ – ಹೆಜ್ಜಾಜಿ ಹೂವು ೧ – ೨೯
ಜಾನುಚಂಕ್ರಮಣ – ಅಂಬೆಗಾಲಿಕ್ಕುವಿಕೆ ೨ – ೫೮
ಜಿಗಿಲ್ – ಅಂಟಿಕೊಳ್ಳು ೧ – ೧೦೧
ಜೂಟ – ಕೂದಲಿನ ಗುಂಪು, ಮುಡಿಕಟ್ಟು ೧ – ೧
ಜೋಗವಟ್ಟಿಗೆ – ತಪಸ್ಸು ಮಾಡುವಾಗ ಬೆನ್ನು ಮೊಳಕಾಲುಗಳಿಗೆ ಕಟ್ಟಿಕೊಳ್ಳುವ ಬಟ್ಟೆ, ಯೋಗಪಟ್ಟಿಕೆ ೪ – ೬೫
ಜೇವಡ – ಬಿಲ್ಲಿನ ಟಂಕಾರ ೧೦ – ೫೫ವ
ಜೋವೇಱು – ಬೆಂಡಾಗು ೮ – ೪೫
ಝ
ಝಂಪಾಳ – ಮುಸುಕ ೬ – ೨೫
ಝೋಂಪಿಸು – ಮೈಮರೆ ೮ – ೧೧೪
ಡ
ಡವಕೆ – ಒಂದು ಬಗೆಯ ವಾದ್ಯ ೩ – ೨೮
ಡಾವರ – ಕ್ಷೋಭೆ ೫ – ೫೭
ಡಿಂಡಿಮ – ಒಂದು ಬಗೆಯ ಚರ್ಮವಾದ್ಯ ೧ – ೧೨೩
ತ
ತಗುಳ್ – ಆರಂಭಿಸು ೧ – ೨೪೧ವ
ತಗುಳ್ – ಮುತ್ತು, ಆವರಿಸು ೨ – ೧೩
ತಗುಳ್ಚು – ಪ್ರಾರಂಭಿಸು ೫ – ೩೧
ತಗೆ – ಅಡ್ಡಿ, ತಡೆ ೧೦ – ೪೯
ತನಿಗೆತ್ತು – ಬಹಳವಾಗಿ ನಡುಗು ೮ – ೫೩
ತನುಜಾತ – ಮಗ ೨ – ೫೨
ತಮಾಲ – ಹೊಂಗೆಮರ ೧ – ೭೯
ತರ – ಗುಂಪು, ಸಾಲು, ವ್ಯಾಪನೆ ೨ – ೧೨
ತರ್ಜಿತೆ – ಕ್ಕರಿಸಲ್ಪಟ್ಟವಳು ೬ – ೯೨
ತಲೆವಟ್ಟಿರು – ಆಸಕ್ತವಾಗು ೩ – ೯೧
ಗವಿಲ – ಹಳದಿಮಿಶ್ರ ಕೆಂಬಣ್ಣ ೫ – ೧೮
ಗವ್ಯೂತಿ – ಎರಡು ಕ್ರೋಶ, ಸುಮಾರು ನಾಲ್ಕು ಮೈಲಿ ೮ – ೧೦೪ವ
ಗಾಂಪ – ಮೂಢ, ದಡ್ಡ ೩ – ೮೨
ಗಾಡಿ – ಸೊಬಗು, ಚಲುವು ೬ – ೧೧
ಗಾಳಿ – ದೆವ್ವ, ಪಿಶಾಚಿ ೩ – ೯೬
ಗಾವರ – ಧ್ವನಿ ೪ – ೩೧
ಗೀರ್ವಾಣಮಾರ್ಗ – ಆಕಾಶ ೯ – ೯೬ವ
ಗುಂಡಿಗೆ – ಕಮಂಡಲು ೧ – ೧೭೨
ಗುಣ – ದಾರ ೫ – ೫೬
ಗುಣ್ಪು – ಆಳ ೧ – ೯೭
ಗುಲ – ಕಾಲಿನ ಹರಡು ೧ – ೩೬
ಗೃಹಮಹತ್ತರ – ಮನೆವಾರ್ತೆಯ ಅಕಾರಿ ೩ – ೬೧
ಗೆಂಟು – ದೂರ, ಹತ್ತಿರ ೩ – ೪೦
ಗೆತ್ತು – ತಿಳಿದುಕೊಂಡು ೫ – ೬೪ವ
ಗೋರಿಗೊಂಡ ಎರಳೆ – ಬೇಟೆಗಾರರ ಸಂಗೀತಕ್ಕೆ ಮೋಹಿಸಿ ಅವರ ಬೆನ್ನು ಹಿಂದೆ ಓಡಿಹೋಗುವ ಜಿಂಕೆ ೫ – ೯೭
ಗೋವಿ – ಕೊಳಲು ೩ – ೮೫
ಗೋಳಿಗೆ – ಹೆಣ್ಣುಕುದುರೆ ೩ – ೧೩
ಗೋತ್ರಸ್ಖಲನ – ಒಬ್ಬರ ಹೆಸರಿಗೆ ಬದಲಾಗಿ ಮತ್ತೊಬ್ಬರ ಹೆಸರನ್ನು ಬಾಯಿತಪ್ಪಿ ಹೇಳುವುದು ೬ – ೧೩೫
Leave A Comment