ಬಂಚ – ಕೊಳಲು ೬ – ೧೬೭

ಬಂಟುತನ – ಪರಾಕ್ರಮ ೩ – ೯೮

ಬಂಡು – ಹೂವಿನ ರಸ, ಮಕರಂದ ೧ – ೯೭ವ

ಬಂಬಲ್ – ಗುಂಪು, ಸಮೂಹ ೧ – ೯೭

ಬಗೆಗೆಡು – ಮನಸ್ಸು ಕೆಡು ೩ – ೧೮೬

ಬಟ್ಟೆ – ದಾರಿ ೧ – ೧೪೫

ಬಡತನ – ಕೃಶವಾಗಿರುವಿಕೆ ೨ – ೯೯

ಬಡಬಾಗ್ನಿ – ಸಮುದ್ರದೊಳಗೆ ಹೆಣ್ಣಾನೆಯ ಬಾಯಲ್ಲಿದ್ದು ಸಮುದ್ರದ ಹೆಚ್ಚುವರಿ ನೀರನ್ನು ಹೀರುವ ಬೆಂಕಿ ೭ – ೨೩

ಬಣ್ಣವುರ – ನಾನಾ ಬಣ್ಣ, ವರ್ಣಪೂರ ೯ – ೧೧ವ

ಬರಿತ – ಕಿವುಡಾದ ೩ – ೧೧೬

ಬನ್ನ – ವಿಘ್ನ, ಉಪದ್ರವ, ಕಷ್ಟ ೩ – ೯೯

ಬಯಲ್ದಾವರೆ – ನೆಲದಾವರೆ ೮ – ೪೫ವ

ಬರಿ – ಪಕ್ಕ ೧ – ೧೯೮

ಬಲವರ್ – ಪ್ರದಕ್ಷಿಣೆಮಾಡು ೨ – ೬೭

ಬಲಾಕೆ – ಬೆಳ್ಳಕ್ಕಿ ೭ – ೨೧ವ

ಬಲಾಕೃತ – ಸೇನಾಪತಿ, ದಳವಾಯಿ ೩ – ೧ವ

ಬಲಿಕೆಯ್ – ಬಿಗಿಹಿಡಿ ೮ – ೧೫೬

ಬಲಿಭುಕ್ – ಕಾಗೆ ೨ – ೬೭

ಬವಸೆ – ಉದ್ಯೋಗ, ವ್ಯವಸಾಯ, ಪ್ರಯತ್ನ ೮ – ೭೭ವ

ಬಸವೞ – ಶಕ್ತಿಗುಂದು, ಮೈಮರೆ ೧ – ೧೪೯

ಬೞಯಟ್ಟು – ದೂತನನ್ನು ಕಳುಹಿಸು ೩ – ೧

ಬೞಸಲ್ – ಜೊತೆಯಲ್ಲಿರು, ಹಿಂಬಾಲಿಸು ೧೦ – ೮೯

ಬಾಂದೊ – ಆಕಾಶಗಂಗೆ, ದೇವಗಂಗೆ ೩ – ೧೧೭

ಬಾಡುಂದಳಿರ್ – ಬಾಡಿದ ಚಿಗುರು ೮ – ೧ವ

ಬಾಯೞ – ಬಾಯಿ ಸೋಲು ೫ – ೧೭೦

ಬಾಯ್ದೆ – ತುಟಿ ೫ – ೧೬೪

ಬಾಸಣಿಗೆ – ಹೊದ್ದಿಕೆ ೭ – ೩

ಬಾಸಣಿಸು – ಮುಚ್ಚು ೧ – ೬೦ವ

ಬಾಸೆ – ಭಾಷೆ ೮ – ೭೨

ಬಾಸೆ – ಹೆಗಸರ ಹೊಕ್ಕಳಿಂದ ಎದೆಯವರೆಗೆ ಬೆಳೆದಿರುವ ಕೂದಲ ಗೆರೆ, ಸಾಲು ೨ – ೯೮

ಬಾಳ್ – ಕತ್ತಿ, ಖಡ್ಗ ೧ – ೧೩೪ವ

ಬಾಳ – ಲಾಮಂಚ ೮ – ೧೨೩

ಬಾೞ್ಕೆ – ಜೀವನ ೫ – ೧೯೨

ಬಾೞ್ಮೊದಲ್ – ಮೂಲಭೂತ ೫ – ೧೮೩ ಬಿಂದುಬಿಡು – ಬೆವರುವುದರಿಂದ ನೀರನ್ನು ಹನಿಸು ೮ – ೪೭

ಬಿಕ್ಕಿರಿ – ಸೊಳ್ಳೆ ೮ – ೩ರ

ಬಿಕ್ಕೆ – ಭಿಕ್ಷೆ ೫ – ೯೩

ಬಿಗುರ್ – ಭಯಪಡು ೧೦ – ೫೫ವ

ಬಿಡೆ – ಹೆಚ್ಚಾಗಿ ೧೦ – ೪೭ವ

ಬಿತ್ತರಿಸು – ಹರಡು, ವಿಸ್ತರಿಸು ೫ – ೪೩

ಬಿದಿ – ಬ್ರಹ್ಮ, ವಿ ೫ – ೧೪೪

ಬಿಜ್ಜಣಿಗೆ – ಬೀಸಣಿಗೆ ೭ – ೨೨

ಬಿಣ್ಪು – ಅತಿಶಯ ೬ – ೧೨೧

ಬಿದಿರ್ – ಕೊಡಹು ೮ – ೪೫ವ

ಬಿಯದ – ಬೇಡ,ವ್ಯಾಧ ೧ – ೧೪೬

ಬಿಪ್ಪಂಡಿಸು – ದ್ವೇಷಿಸು ೩ – ೮೨

ಬಿಸುಸುಯ್ – ನಿಟ್ಟುಸಿರು ಬಿಡು ೧ – ೧೪೯

ಬಿಸಕಾಂಡ – ತಾವರೆದಂಟು ೧ – ೪೪

ಬೀಡುಗೆಯ್ – ವಸತಿಮಾಡು, ಬಿಡಾರಹಾಕು ೯ – ೧ವ

ಬೀಡುದಾಣ – ವಾಸಸ್ಥಾನ ೮ – ೧೨೦

ಬೀೞ್ಜೊಂಪ – ಇಳಿಬಿದ್ದಿರುವ ಮಂಟಪ, ಲತಾಗೃಹ ೮ – ೧೧೨

ಬೂತಾಟ – ಬೂಟಾಟಿಕೆ ೬ – ೮೩

ಬೃಂಹಿತ – ಆನೆಯ ಕೂಗು, ಗರ್ಜಿತ

ಬೆಂಡೇೞು – ಜಡವಾಗು ೯ – ೧೦

ಬೆಟ್ಟವಟ್ಟನೆ – ಒರಟಾಗಿ ೧೦ – ೪೦ವ

ಬೆಟ್ಟಿದ – ಕ್ರೂರಿ, ಕೆಟ್ಟವ ೧ – ೧೬೫

ಬೆಳ್ಳರಿಸು – ಬಿಳುಪಾಗು ೫ – ೧೪೫

ಬೆಳ್ಕಱು – ಹೆದರು ೬ – ೯೩

ಬೆಱಂಟು – ನೆಲವನ್ನು ಕೆರೆ ೩ – ೧೫

ಬೇಟ – ಪ್ರೀತಿ, ಪ್ರಣಯ ೫ – ೩೮

ಬೇಟಕಾರ್ತಿ – ಕಾಮ ಉಳ್ಳವಳು, ಕಾಮಿನಿ ೭ – ೧೬೩

ಬೇಡವಟ್ಟ – ಬೇಡರ ಬೀಡು ೧೦ – ೪೧ವ

ಬೇವಸ – ವಿರಹವ್ಯಥೆ ೭ – ೩೧

ಬೈಗು – ಸಂಜೆ ೧ – ೧೨೯

ಬ್ರಹ್ಮಸೂತ್ರ – ಜನಿವಾರ ೪ – ೫೩

ಬೊಬ್ಬುಳಿಕೆ – ಗುಳ್ಳೆ ೮ – ೧೦೩ವ

ಭವ – ಶಿವ ೨ – ೩

ಭವಸ್ಮ ತಿ – ಹಿಂದಿನ ಜನ್ಮದ ನೆನಪು ೧ – ೭೭

ಭವಾದ್ರಿ – ಕೈಲಾಸ ೪ – ೬೦

ಭವ್ಯ – ಕ್ಷೇಮ ೬ – ೭೪

ಭವ್ಯೇತರ – ನೀಚ, ದುರ್ಜನ ೩ – ೭೪

ಭಸಿತಪುಂಡ್ರಕ – ಮೂರೆಳೆ ವಿಭೂತಿ ೧ – ೧೭೧

ಭಾವೋದ್ಭವ – ಕಾಮ, ಮನ್ಮಥ ೫ – ೩೩

ಭೂಜ – ಮರ ೨ – ೬೭

ಭೂಭುಜ – ರಾಜ ೧ – ೮

ಭೂಭೃತ್ಸುತೆ – ಹಿಮವಂತನ ಮಗಳು, ಪಾರ್ವತಿ ೧ – ೩೮

ಭೃಂಗಾರು – ಚಿನ್ನದ ಪಾತ್ರೆ, ಬಟ್ಟಲು ೮ – ೧೨೦

ಭೋಗ – ಹಾವಿನ ಹೆಡೆ ೧ – ೧

ಭೈತ್ರ – ಹಡಗು ೮ – ೧೨೫

ಭ್ರುಕುಟಿ – ಹುಬ್ಬುಗಂಟು ೨ – ೧೧

ಮಂಡಳಾಗ್ರ – ಕೊಂಕುಕತ್ತಿ, ಅಡಾಯುಧ ೮ – ೩ರ

ಮಂದುರ – ಕುದುರೆಲಾಯ, ವಾಜಿಶಾಲೆ ೭ – ೯ವ

ಮಂಜೀರ – ಕಾಲ್ಗಡಗ ೨ – ೫೯

ಮಕರಕುಂಡಲ – ಕಿವಿಯ ಕಡುಕು ೫ – ೧೮೪ವ

ಮಕರದ್ವಜ – ಮನ್ಮಥ ೧೦ – ೫೫

ಮಕರಿಕಾಪತ್ರ – ಹೆಂಗಸರ ಕೆನ್ನೆ ಮೊದಲಾದ ಕಡೆ ಬರೆಯುವ ಚಿತ್ರರಚನೆ ೨ – ೪೧

ಮಗುಳ್ಚು – ತಿರುಗಿಸು ೧ – ೧೯೯

ಮಗುಳ್ಚು – ವಾಂತಿಮಾಡು, ಕಕ್ಕು ೩ – ೪೯

ಮಗ್ಗಲಿಸು – ಕಡಮೆಮಾಡು ೪ – ೭೧

ಮಚ್ಚು – ಉಡುಗೊರೆ ೨ – ೧೧೫ವ

ಮಡ – ಹಿಮ್ಮಡಿ ೪ – ೪

ಮಡಲ್ – ಅತಿಯಾಗಿ ಬೆಳೆ, ಚಿಗುರು ೧ – ೧೦೫

ಮತಂಗಜ – ಆನೆ ೧ – ೧೨೯

ಮಧುವ್ರತ – ದುಂಬಿ ೪ – ೩೩ವ

ಮನುಮತ – ಮನ್ಮಥ ೭ – ೨೩

ಮನುಮಿಕ್ಕು – ಮನಸ್ಸುಮಾಡು ೮ – ೫೩

ಮನ್ಯು – ಕೋಪ ೯ – ೧೦೯

ಮಯೂಖ – ಕಿರಣ, ಕಾಂತಿ ೫ – ೧೩೮

ಮರಕತ – ಪಚ್ಚೆಮಣಿ ೬ – ೮೧

ಮರಗಟ್ಟು – ಪಾತಿ ೧ – ೯೯

ಮರಳ್ – ಗಿರಿಗಿರನೆ ಸುತ್ತು, ತಿರುಗು ೧ – ೧೬೫

ಮರವಡು – ಮೈಮರೆ, ನಿಷ್ಚೇಷ್ಟಿತನಾಗು, ಪ್ರಜ್ಞಾಹೀನನಾಗು ೮ – ೬೪

ಮರೀಚ – ಮೆಣಸು ೬ – ೨೫

ಮಹನೀಯ – ಶ್ರೇಷ್ಠ, ಉತ್ತಮ ೨ – ೧೦೬

ಮಹಾಪ್ರಾಣತೆ – ಬಹಳಶಕ್ತಿ ೨ – ೧೨೧

ಮಹಾಭಾಗ – ಗಂಚಸರನ್ನು ಸಂಬೋಸುವಾಗ ಬಳಸುವ ಪದ, ಅದೃಷ್ಟವಂತ, ಶ್ರೀಯುತ ೪ – ೬೩

ಮಹಾಮಹತ್ತರೆ – ಅಂತಪುರದ ಪ್ರಧಾನ ಸೇವಕಿ ೨ – ೮೦

ಮಸಗು – ಹರಡು, ವ್ಯಾಪಿಸು ೧ – ೯೭ವ ಮಱುಕ – ಮೋಹ ೩ – ೭೦ವ

ಮಱುಮೆಯ್ – ಬೇರೆ ಶರೀರ, ಮತ್ತೊಮ್ಮೆ ಹುಟ್ಟುವ ದೇಹ ೬ – ೭೦ವ

ಮಱುವುಟ್ಟು – ಪುನರ್ಜನ್ಮ ೯ – ೪೫

ಮಾತಂಗ – ೧ ಆನೆ ೨ ಅಂತ್ಯಜ, ಚಂಡಾಲ ೧ – ೪೫ವ

ಮಾತಂಗಿ – ಚಂಡಾಲರ ಹೆಂಗಸು ೧ – ೪೭

ಮಾಧವಿ – ಮಲ್ಲಿಗೆ ಬಳ್ಳಿ ೯ – ೫೩

ಮಾನಸಸಂಭವ – ೧ ಮನಸ್ಸಿನಲ್ಲಿ ಹುಟ್ಟಿರುವ ೨ ಮಾನಸಸರೋವರದಲ್ಲಿ ಹುಟ್ಟಿರುವ ೫ – ೭೯

ಮಾಮಸಕ – ಮಹಾರಭಸ, ದೊಡ್ಡಕ್ಷೋಭೆ ೧ – ೫೮ವ

ಮಾಯ್ದ – ಕೆಟ್ಟ, ನೀಚನಾದ, ಹಾಳಾದ, ಶೋಚನೀಯ, ಬಡಪ್ರಾಣಿ, ವರಾಕ, ಪಾಪಿಷ್ಠ ೩ – ೯೫

ಮಾರ್ದನಿ – ಪ್ರತಿಧ್ವನಿ ೧ – ೫೮

ಮಾಲೆಗುಂಡಿಗೆ – ಮಾಲೆಯಂತೆ ಜೋಡಿಸಿದ ಗಡಿಗೆ ೭ – ೨೧

ಮಿಡುಕು – ಚಲಿಸು, ಅಲುಗಾಡು ೧ – ೧೨೬

ಮಿಥುನ – ಹೆಣ್ಣುಗಂಡು ಜೋಡಿ ೪ – ೧

ಮಿಸಿಸು – ಅಭಿಷೇಕಮಾಡು, ಸ್ನಾನಮಾಡಿಸು ೮ – ೧೫೬

ಮಿಸುಗು – ಪ್ರಕಾಶಿಸು, ಶೋಭಿಸು ೨ – ೫೬

ಮಿಳಿ – ಚರ್ಮದ ಹಗ್ಗ ೮ – ೧ವ

ಮಿಳಿರ್ – ಹಾರಾಡು ೩ – ೯೦

ಮಿಳ್ಳಿಸು – ಚಲಿಸು ೯ – ೧೪

ಮೀನಾಂಕ – ಮನ್ಮಥ ೫ – ೨೯

ಮುಂಜಮೇಖಲೆ – ನೊದೆಹುಲ್ಲಿನ ಉಡಿದಾರ ೧ – ೧೮೬

ಮುಂದುಱುವರಿ – ಮುನ್ನುಗ್ಗು ೬ – ೭೯ವ

ಮುಕುಳಿತಾಕ್ಷ – ಮುಚ್ಚಿದ ಕಣ್ಣುಳ್ಳವನು ೫ – ೧೧೧

ಮುಕ್ತಾತ್ಮ – ೧ ಮುತ್ತುಗಳಿಂದ ಮಾಡಲ್ಪಟ್ಟಿರುವ, ೨ ಮೋಕ್ಷವನ್ನು ಪಡೆದಿರುವ, ಜೀವನ್ಮುಕ್ತನಾದ ೭ – ೩೨

ಮುತ್ತಂಚೆ – ಮುದಿಹಂಸ ೧ – ೭೧

ಮುನ್ನೇಸಱು – ಮುಂಜಾನೆ. ಅರುಣೋದಯ ೧ – ೧೮೮

ಮುಪ್ಪುರಿಗೂಳ್ – ಹೊಳೆ ೯ – ೧೪

ಮುಯ್ಪು – ರೆಕ್ಕೆಗಳ ಮೂಲ, ಹೆಗಲು, ಭುಜ ೧ – ೧೧೧

ಮುರಜ – ಮದ್ದಳೆ ೨ – ೮

ಮುರಿಗೇಶ – ಗುಂಗುರುಕೂದಲು ೮ – ೨

ಮುಸುರು – ಮುತ್ತು ೧ – ೯೭ವ

ಮುಱ – ತುಣುಕು, ತುಂಡು, ಚೂರು ೧ – ೨೬

ಮುೞ್ಗು – ಬೀಳು ೬ – ೧೨೦

ಮೂಗುವಡೆ – ಮೌನವನ್ನು ತಾಳು ೧ – ೧೩೫

ಮೃಗಮದ – ಕಸ್ತೂರಿ ೨ – ೨೭

ಮೃಗಲಾಂಛನ – ಚಂದ್ರ ೨ – ೩೯

ಮೃಗಾಜಿನ – ಜಿಂಕೆಚರ್ಮ ೧ – ೧೮೬

ಮೃಣಾಳ – ತಾವರೆದಂಟು ೪ – ೧೩

ಮೆಯ್ವೞ – ಶರೀರಾವಲಂಬನ ೫ – ೧೯೩

ಮೆಯ್ವೞ – ಅನುನಯ ೮ – ೧೩೪

ಮೆಲ್ಪು – ಮೃದುತ್ವ ೨ – ೧೧೨

ಮೆಲ್ಲುಲಿ – ಮೃದುಧ್ವನಿ ೧ – ೫೮ವ

ಮೇಖಳೆ – ಬೆಟ್ಟದ ಮಧ್ಯಪ್ರದೇಶ ೪ – ೪೮

ಮೇಲುದು – ಹೊದೆಯುವ ಬಟ್ಟೆ ೩ – ೨೪

ಮೇಳಾಪಕ – ಸೇರುವಿಕೆ ೩ – ೨೪

ಮೊಗಸು – ಆಕ್ರಮಿಸು, ಆವರಿಸು ೧೦೫೫ವ

ಮೊ – ಆರ್ಭಟಿಸು ೩ – ೭೮

ಮೌಹೂರ್ತಿಕ ಜೋಯಿಸ ೩ – ೧೦೫

ಯಮ – ಯೋಗದ ಒಂದು ಅಂಗ, ಯೋಗಮಾರ್ಗ ೫ – ೧೧೪

ಯಾಮಿಕ – ಕಾವಲುಗಾರ, ಪಹರೆಯವನು ೩ – ೫೧

ಯೂಧಪತಿ – ಸಲಗ ೮ – ೧೦೬ವ

ರಂಕು – ಒಂದು ಜಾತಿಯ ಜಿಂಕೆ ೧ – ೧೧೩

ರಕ್ಕೆವಣಿ – ರಕ್ಷಾಸೂತ್ರದಲ್ಲಿ ಕಟ್ಟಿರುವ ಮಣಿ ೨ – ೫೬

ರಜತಾದ್ರಿ – ಬೆಳ್ಳಿಬೆಟ್ಟ, ಕೈಲಾಸ ೩ – ೧೧೪

ರಜ್ಜು – ಹಗ್ಗ ೧ – ೧೯೭

ರಣರಣಕ – ವಿರಹವ್ಯಥೆ ೬ – ೧೭೭

ರತ್ನಾಭೋಗ – ರತ್ನದ ಆಭರಣ ೮ – ೧೦೧

ರಥಾಂಗಯುಗ – ಚಕ್ರವಾಕದಂಪತಿ ೫ – ೮೭

ರಥ್ಯಾ – ಮನೆಗಳ ಸಾಲು, ಬೀದಿ ೬ – ೩೦

ರನ್ನವಟ್ಟಿಗೆ – ರತ್ನದ ಪಟ್ಟಿ ೧ – ೬೭ವ

ರಲ್ಲಕ – ಕಂಬಳಿ ೩ – ೧೨೧

ರಸಾತಳ – ಪಾತಾಳ ೯ – ೪೧

ರಾಜಕೀರ – ಅರಗಿಳಿ ೧ – ೨೨

ರುಜೆ – ರೋಗ ೫ – ೬೭

ರುರು – ಕಪ್ಪು ಚುಕ್ಕೆಯುಳ್ಳ ಜಿಂಕೆ ೧ – ೧೩೦

ರೂವು – ರೂಪು, ಆಕಾರ ೬ – ೩೨

ರೋಚನೆ – ಗೋರೋಚನ ೨ – ೫೬

ರೋದೋಂತ – ಭೂಮ್ಯಂತರಿಕ್ಷಗಳ ಮಧ್ಯ ೬ – ೧೧೬

ರೋಮಂಥೆ – ಮೆಲಕು ೪ – ೩೩

ಲಂಬಣ – ಹಾರ ೩ – ೧೦೯

ಲತಾಂತ – ರೂವು ೧ – ೬೯

ಲಾಜ – ಅರಳು (ಬತ್ತದ) ೩ – ೧೧೨

ಲುಬ್ಧಕ – ಬೇಡ, ವ್ಯಾಧ ೧ – ೧೪೧

ಲೆಪ್ಪ – ಪುತ್ತಳಿ ೯ – ೧೦೪

ಲೋಲುಪ – ಆಸೆಯುಳ್ಳವನು ೧ – ೧೪೬

ವಂದನಮಾಲೆ – ಬಾಗಿಲಿಗೆ ಕಟ್ಟುವ ತೋರಣ ೮ – ೧೨೦

ವತ್ರಭಣಿತಿ – ವ್ಯಂಗ್ಯವಾದ ಮಾತು ೬ – ೯೧

ವಿಗತಚಿತ್ತ – ಪ್ರಜ್ಞೆಇಲ್ಲದವನು ೫ – ೬೧

ವಧೂವಿಲೋಕನ – ಸೊಸೆಯನ್ನು ನೋಡುವುದು ೮ – ೯೪

ವನರುಹನಾಭ – ಶ್ರೀಮಹಾವಿಷ್ಟು ೯ – ೯೦

ವನೇಚರ – ಬೇಡ, ವ್ಯಾಧ ೧ – ೯೬

ವಯಸ್ಯ – ಗೆಳೆಯ, ಮಿತ್ರ ೫ – ೯೮

ವರಾಟಕ – ಕವಡೆ ೨ – ೧೦೩ವ

ವರುಷವರ – ನಪುಂಸಕ, ಷಂಡ ೭ – ೧೦೩ವ

ವಲಭಿ – ಚಂದ್ರಶಾಲೆ ೨ – ೧೦

ವಲ್ಕಲ – ಮರದ ತೊಗಟೆ, ನಾರು ೧ – ೧೦೪

ವಲ್ಕಾಂಚಲ – ನಾರುಬಟ್ಟೆಯ ಸೆರಗು ೧೦ – ೧೯

ವಸ್ತುಬಂಧ – ಕಥಾಪ್ರಧಾನವಾದ ಕಾವ್ಯ ೧೦ – ೯೮

ವಳಿತ್ರಯ – ಹೊಟ್ಟೆಯ ಮೇಲಿನ ಚರ್ಮದ ಹೊದಿಕೆ ೧ – ೯೯

ವಾಗುರೆ – ಬಲೆ ೧೦ – ೪೧

ವಾಚಸ್ಪತಿ – ಬೃಹಸ್ಪತಿ ೨ – ೨೪

ವಾಜಿ – ಕುದುರೆ ೧ – ೧೦

ವಾತಾಯನ – ಕಿಟಕಿ ೨ – ೩೦

ವಾಮಜಾನು – ಎಡಮೊಳಕಾಲು ೨ – ೯೧

ವಾಮನ – ಕುಳ್ಳ, ಗುಜ್ಜಾರಿ ೨ – ೧೧೫

ವಾರವಿಲಾಸಿನಿ – ಸೂಳೆ ೮ – ೧೨೧

ವಾರುವ – ಕುದುರೆ ೮ – ೬೦ವ

ವಾಹ – ಕುದುರೆ ೯ – ೭೦

ವಾಹಳಿ – ಕುದುರೆ ಸವಾರಿ ೧ – ೧೧೬

ವಿಕಚ – ಅರಳಿರುವ ೮ – ೭೮ವ

ವಿಕ್ರಮ – ೧ ಪರಾಕ್ರಮ, ೨ ಪಾದ ವಿನ್ಯಾಸ (ಹೆಜ್ಜೆಯಿಡುವಿಕೆ) ೧ – ೧೦

ವಿಟಪಿ – ಮರ ೧ – ೮೭

ವಿಡಂಬನ – ಅಪಹಾಸ್ಯ ೨ – ೩೧

ವಿಗ್ರಹ – ೧ ಯುದ್ಧ, ೨ ಶರೀರ ೨ – ೧೬

ವಿಂಡಬಿಸು – ಅನುಕರಿಸು ೬ – ೮

ವಿನಿದ್ರ – ಅರಳಿರುವ ೨ – ೯

ವಿಪಾಕ – ಕೆಟ್ಟ ಪರಿಣಾಮ ೩ – ೯೫

ವಿದಗ್ಧವೃತ್ತಿ – ಜಾಣತನ ೬ – ೬೮

ವಿದ್ದಂಬರೆ – ಆಕೃತಿಯನ್ನು ಬರೆ ೬ – ೧೦೧

ವಿದ್ರುಮ – ಹವಳ ೫ – ೧೩೮

ವಿನ್ನಾಣ – ಗುರುತು, ಅಭಿಜ್ಞಾನ ೭ – ೩ವ

ವಿಪಂಚಿ – ವೀಣೆ ೪ – ೩೧

ವಿಪಣಿ – ಅಂಗಡಿಬೀದಿ ೨ – ೪

ವಿಪ್ರಲಂಭ – ಅಗಲಿಕೆ, ವಿರಹ ೨ – ೧೩

ವಿಭೂತಿ – ಸಮೃದ್ಧಿ ೧೦ – ೮೫

ವಿಷಮಾಸ್ತ್ರ – ಮನ್ಮಥ ೫ – ೧೨೧

ವಿಹ್ವಲ – ಕಳವಳಗೊಂಡವನು ೮ – ೧೦೬

ವೇತ್ರಾಸನ – ಬೆತ್ತದ ಪೀಠ ೬ – ೧೬೬

ವೈಜಯಂತಿ – ಬಾವುಟ ೨ – ೧೨

ವೈಪಥಪಾಂಸು – ಕೆಟ್ಟದಾರಿಯ ಧೂಳು ೯ – ೮೧

ವೈಭಾತಿಕ – ಬೆಳಗಿನ ಜಾವದ ೧ – ೧೨೧

ವ್ಯಗ್ರ – ಕಳವಳಗೊಂಡವನು, ಆಸಕ್ತನಾದವನು ೪ – ೭೧

ವ್ಯತಿಕರ – ಸಂದರ್ಭ ೫ – ೫೪ವ

ವ್ಯಾಳ – ದುಷ್ಟಮೃಗ ೮ – ೧೨೯

ವ್ಯಾಳೇಭ – ಮದ್ದಾನೆ ೧ – ೧೨೨

ಶಕುನಿ – ೧ ಹಕ್ಕಿ, ೨ ದುರ್ಯೋಧನದ ಸೋದರಮಾವ ೧ – ೧೦೧

ಶಕ್ರಧನು – ಕಾಮನ ಬಿಲ್ಲು ೧ – ೧೨೬

ಶತಪತ್ರ – ಕಮಲ ೧೦ – ೫೬ವ

ಶರನಿ – ಸಮುದ್ರ ೨ – ೫೨

ಶಾಕಿನಿ – ಪಿಶಾಚಿ ೪ – ೭೩

ಶಾಡ್ವಲ – ಹಸಿರುಹುಲ್ಲು ಬೆಳೆಯುವ ಸ್ಥಳ, ಹುಲ್ಲುಗಾವಲು ೧ – ೯೩

ಶಾಡ್ವಲಿತ – ಹಸುರುಹುಲ್ಲಿನ ಪ್ರದೇಶ ೬ – ೮೧

ಶಾತ – ಹರಿತವಾದ ೨ – ೨೫

ಶಾತಕುಂಭ – ಚಿನ್ನ ೧ – ೬೫

ಶಾಬ – ಮರಿ ೨ – ೫೯

ಶಾರಿಕೆ – ಮೈನಾಹಕ್ಕಿ, ಹೆಣ್ಣುಗಿಳಿ ೧ – ೫೫

ಶಾಲಿವನ – ಬತ್ತದ ಗದ್ದೆ ೯ – ೭೯

ಶಾಲೀನತೆ – ನಮ್ರತೆ, ವಿನಯ ೭ – ೪೪ವ

ಶಾಲೂಕ – ತಾವರೆಗೆಡ್ಡೆ – ಬೇರು ೪ – ೧೩

ಶಾಲೂರ – ಕಪ್ಪೆ ೯ – ೧೫

ಶಾಲ್ಮಲಿ –  ಬೂರುಗದ ಮರ

ಶಿಖಂಡ – ಜುಟ್ಟು ೭ – ೫೦

ಶಿಂಖಡಶೇಖರ – ತಲೆಮಣಿ, ಶಿಖಾಮಣಿ ೭ – ೫೦

ಶಿಖಂಡಿ – ನವಿಲು ೧ – ೯೭ವ

ಶಿದ್ಗ – ವಿಟ ೩ – ೧೦೨

ಶಿರೀಷ – ಬಾಗೆಹೂವು ೬ – ೧೬೮

ಶೀಕರ – ನೀರುಹನಿ ೧ – ೧

ಶೀತಮಯೂಖ – ಚಂದ್ರ ೯ – ೪೦

ಶುದ್ಧಾಂತ – ಅಂತಪುರ ೮ – ೪೫

ಶ್ಮಶ್ರು – ಮೀಸೆ ೧ – ೧೩೮

ಶ್ರುತ – ಶಾಸ್ತ್ರ, ವಿದ್ಯೆ ೩ – ೨೪

ಷಟ್ಟರಣ – ಆರಡಿ, ದುಂಬಿ ೬ – ೭೪

ಷೋಡಶ – ಹದಿನಾರು ೨ – ೧೨೯

ಸಂಗಡಿಸು – ಒಟ್ಟುಗೂಡಿಸು ೫ – ೧೮೪

ಸಂಧ್ಯಾರಾಗ – ಸಂಜೆಗುಂಪು ೫ – ೨೦೯

ಸಂಬಳಿಕೋಲ್ – ಬಿದಿರುದೊಣ್ಣೆ ೧ – ೩೧

ಸಂವರಿಸು – ಸಮಾಧಾನ ಪಡಿಸಿಕೊಳ್ಳು ೫ – ೧೧೭

ಸಕ್ಕಿ – ಸಾಕ್ಷಿ ೫ – ೧೭೪

ಸನ್ನಿದ – ಹತ್ತಿರ, ಸಮೀಪ ಸನ್ನಿಹಿತ ೯ – ೭೬

ಸಪ್ತತಂತು – ಯಾಗ ೨ – ೧೬

ಸಂಮಾರ್ಜಿನಿ – ಕಸಪೊರಕೆ ೩ – ೮೬

ಸಂಮೃಷ್ಟ – ಸಾರಿಸಿದ ೮ – ೧೨೦

ಸಟಾವಳಿ – ಕೊರಳು ಕೂದಲ ಸಾಲು ೧ – ೧೨೭

ಸನ್ನೆಗಾಳೆ – ಆಗಮನ, ಮುಹೂರ್ತ ಮೊದಲಾದ ಸನ್ನಿವೇಶವನ್ನು ಸೂಚಿಸಲು ಊದುವ ತುತ್ತೂರಿ ೩ – ೨೨ವ

ಸಮಕಟ್ಟು – ಏರ್ಪಡಿಸು ೩ – ೬೧ವ

ಸಮಕಟ್ಟು – ಏರ್ಪಾಡು ೮ – ೮೧ವ

ಸಮವಯಸ – ಒಂದೇ ವಯಸ್ಸಿನವನು ೧ – ೧೬೭

ಸರ್ಗ – ಸೃಷ್ಟಿ ೬ – ೧೯

ಸರಿಗೆ – ಕಂಠಾಭರಣ ೧೦ – ೬೭ವ

ಸವಡಿಸು – ದ್ವಿಗುಣಿತವಾಗು ೩ – ೯

ಸಹಕಾರ – ಸಿಹಿಮಾವಿನ ಮರ ೪ – ೩೩ವ

ಸಾದಿ – ಕುದುರೆ ಸವಾರ ೯ – ೯೯ವ

ಸಾಧ್ವಸ – ಭಯ ಸಾಭ್ಯುಪಗಮ – ಅಂಗೀಕಾರದಿಂದ ಕೂಡಿರುವ ೮ – ೫೧ವ

ಸಾರಿಕೆ – ಮೈನಾಹಕ್ಕಿ, ಹೆಣ್ಣುಗಿಳಿ ೬ – ೮೪

ಸಾರ್ಚು – ಹತ್ತಿರಕ್ಕೆ ಹೋಗು ೧ – ೧೩೪

ಸಾಲಭಂಜಿಕೆ – ಪುತ್ತಳಿ, ಬೊಂಬೆ ೬ – ೨೫

ಸಾವಗಿಸು – ಸರಿಮಾಡು ೩ – ೨೯

ಸಾವಷ್ಚಂಭ – ಗರ್ವದಿಂದ ಕೂಡಿರುವ ೮ – ೫೧ವ

ಸಿಂಧುರ – ಚಂದ್ರ ೧ – ೨೩೭

ಸಿಂಧುರಾರ – ಲಕ್ಕಿಹೂವು ೧ – ೬೦

ಸಿಂಪಿಸು – ಚಿಮುಕಿಸು, ಚೆಲ್ಲು ೧ – ೧೧೭

ಸಿಂಪು – ಚಿಪ್ಪು ೧ – ೩೫

ಸಿಗ್ಗು – ನಾಚಿಕೆ ೫ – ೯೯

ಸಿಚಯ – ಬಟ್ಟೆ, ವಸ್ತ್ರ ೩ – ೨೯

ಸಿತಾತಪತ್ರ – ಬಿಳಿಯ ಕೊಡೆ ೩ – ೨೧

ಸಿದ್ಧಾಂಜನ – ಸಾಧಕರು ನಿರ್ಮಿಸುವ ಅಮಾನುಷ ಶಕ್ತಿಯನ್ನು ಕೊಡುವ ಅಂಜನ, ಕಾಡಿಗೆ ೮ – ೩ರ

ಸಿರಿಕಂಡ – ಶ್ರೀಗಂಧ, ಚಂದನ ೭ – ೩ವ

ಸಿರಿಸ – ಬಾಗೆಹೂವು, ಶಿರೀಷ ೭ – ೨೦ವ

ಸೀಗುರಿ – ಚಾಮರ ೧ – ೩೪

ಸೀಕರ – ನೀರಿನ ಹನಿ, ತುಂತುರು ೩ – ೧೩

ಸೀರ್ಪನಿ – ತುಂತುರುಹನಿ ೧ – ೨೩೨

ಸೀರ್ಪು – ಅಂದ, ಅಚ್ಚುಕಟ್ಟು ೩ – ೯

ಸೀರ್ಪುಲ್ – ಹುಲ್ಲುಕಡ್ಡಿ ೯ – ೨೪

ಸೀಱು – ಕೆದರು ೯೮೧

ಸುಟ್ಟಂಬೆ – ತೋರುಬೆರಳು, ತರ್ಜನಿ ೬ – ೧೩೯

ಸುಟ್ಟು – ಸುಂಟರಗಾಳಿ ೩ – ೬೯

ಸುತ್ತು – ರೀತಿ, ಪ್ರಕಾರಾಂತರ ೫ – ೫೨

ಸುಧಾಸೂತಿ – ಚಂದ್ರ ೧೦ – ೭೨

ಸುಧೆ – ಸುಣ್ಣ ೨ – ೮೮

ಸುಧೆ – ಅಮೃತ ೨ – ೯೬

ಸುರಗೋಪ – ಮಿಂಚುಹುಳು ೯ – ೧೬

ಸುರತರು – ಕಲ್ಪವೃಕ್ಷ ೧ – ೦೦

ಸುರಭೂಜ – ಕಲ್ಪವೃಕ್ಷ ೪ – ೬೫

ಸುಲಿಪಲ್ – ಶುಭ್ರವಾದ ಹಲ್ಲು ೩ – ೧೦೯

ಸುಷುಮ್ನೆ – ಸುಷುಮ್ನ ಎಂಬ ಹೆಸರಿನ ಸೂರ್ಯಕಿರಣ ೫ – ೩೨

ಸುಸಿಲ್ – ಸಂಭೋಗ –  ೯ – ೯

ಸೂಕರ – ಹಂದಿ ೧ – ೧೩೦

ಸೂಸಕ – ಕುಚ್ಚು ೭ – ೨೦

ಸೃಕ್ವ – ಕಟವಾಯಿ ೨ – ೬೯

ಸೆಜ್ಜೆವನೆ – ಮಲಗುವ ಮನೆ ೬ – ೧೬೨

ಸೆಡೆ – ಅಂಜು, ಹೆದರು ೧೦ – ೨೫

ಸೆರೆ – ನರ ೧ – ೧೪೫

ಸೇದೆ – ದಣಿವು ೧ – ೧೦೦

ಸೇದೆವಡು – ಆಯಾಸಗೊಳ್ಳು ೧೦ – ೨೦

ಸೇವ – ಕ್ಷೇಮ ೬ – ೭೫

ಸೈಂಹಿಸೇಯ – ರಾಹು ೧ – ೧೪೪

ಸೈತಿಕ್ಕು – ನೇರ್ಪಡಿಸು ೬ – ೭೪

ಸೈಪು – ಪುಣ್ಯ ೧ – ೨೦೫

ಸೈರಿಭ – ಕೋಣ ೧ – ೧೨೯

ಸೊಡರ್ – ದೀಪ ೩ – ೮೪

ಸೋಪಾಲಂಭ – ನಿಂದೆಯಿಂದ ಕೂಡಿರುವ ೮ – ೫೧ವ

ಸೋರ್ಮುಡಿ – ಜೋಲಾಡುವ ಕೂದಲು ೩ – ೨೯

ಸೋಲ್ – ಪರವಶನಾಗು ೪ – ೩೦

ಸೌಧ – ಉಪ್ಪರಿಗೆಮನೆ ೨ – ೬೯

ಸೌವಿದಲ್ಲ – ಸೇನೆ ಬೀಡುಬಿಡುವ ಸ್ಥಳ, ಪಾಳೆಯ ೭ – ೪೭

ಸ್ತ್ರೈಣ – ಸ್ತ್ರೀಸಂಬಂಧವಾದ ೧ – ೧೭

ಹಂದರ – ಚಪ್ಪರ ೭ – ೨೭

ಹರಿ – ಕುದುರೆ ೩ – ೮

ಹರಿ – ವಿಷ್ಣು ೬ – ೧೩೦

ಹರಿಚಂದನ – ಕೆಂಪುಗಂಧ ೧ – ೧೨ರ

ಹರಿದಶ್ವ – ಸೂರ್ಯ ೧ – ೧೧೬

ಹರಿಣ – ಜಿಂಕೆ ೫ – ೧೩೮

ಹರ್ಮ್ಯಾಂಗಣ – ಅರಮನೆಯ ಹಜಾರ ೨ – ೫೮

ಹಸಾದ – ಪ್ರಸಾದ, ಅನುಗ್ರಹ ೭ – ೫೩

ಹಿಳಿ – ಹಿಂಡು, ಮರ್ದಿಸು, ನಿಷ್ಪೀಡಿಸು ೫ – ೭೫

ಹಾರೀತಕ – ಹಸುಬನ ಹಕ್ಕಿ ೬ – ೧೧೫

ಹುತವಹ – ಅಗ್ನಿ ೫ – ೨

ಱೂಟಳ – ರಾಟೆ ೭ – ೨೧

ಬ್ಬ – ಹಿಮದ ಗಡ್ಡೆ ೧೦ – ೫೮