ಘನಮಾರ್ಗ – ಆಕಾಶ ೮ – ೧೦೧

ಘನಸಮಯ – ಮಳೆಗಾಲ ೭ – ೨೨

ಘರ್ಮಬಿಂದು – ಬೆವರುಹನಿ ೧ – ೬೦

ಘೂರ್ಣಿಸು – ಅಲ್ಲೋಲ ಕಲ್ಲೋಲವಾಗು ೨ – ೧೦೨

ಘೋಣ – ಮೂಗು ೩ – ೫

ಚಂಚರೀಕ – ದುಂಬಿ ೭ – ೯ವ

ಚಂಚು ಕೊಕ್ಕು ೧ – ೧೪೭

ಚಂಡಿಕೆ – ಮುಡಿಗಂಟು, ಜುಟ್ಟು ೧ – ೩೪

ಚಟೂರಿಸು – ಮುಖಸ್ತುತಿಮಾಡು, ಮೋಸಗೊಳಿಸು ೩ – ೧೦೪

ಚಪ್ಪರಿಸು – ಹೆದರಿಸು ೮ – ೪೬ವ

ಚಮರೀಜ – ಚಾಮರ ೩ – ೨೨

ಚಮ್ಮಟಿಗೆ – ಚಾವಟಿ ೧೦ – ೩೦ವ

ಚರು – ಹೋಮ ಮಾಡಲು ಉಪಯೋಗಿಸುವ ಅನ್ನ ೧ – ೧೮೫

ಚಾಗವಿಕ್ಕು – ಹರಡು ೯ – ೧೦ವ

ಚೆಂಬಿಸಿಲ್ – ಕೆಂಬಿಸಿಲು ೨ – ೩೫

ಚಚ್ಚರ – ಬೇಗ ೪ – ೮

ಚತುಷ್ಪಥ – ನಾಲ್ಕು ಬೀದಿ ಕೂಡುವ ಸ್ಥಳ, ಚೌಕ ೨ – ೬೬

ತವಂಗ – ಬಾಗಿಲ ಜಗುಲಿ ೮ – ೮

ತಳವೆಳವಾಗು – ಬೆರಗಾಗು ೯ – ೪

ತಳಿರ್ಗಾಸೆ – ಕಾವಿಬಟ್ಟೆ ೧ – ೯೭ವ

ತಳಿರ್ವಾಸು – ಚಿಗುರಿನ ಹಾಸಿಗೆ ೮ – ೩೮

ತಳೆ – ಧರಿಸು, ಅನುಭವಿಸು ೫ – ೫೪

ತಳ್ಕು – ಲೇಪನ ೧ – ೨೬

ತಳ್ಕೆ ಸು – ಅಪ್ಪು, ಆಲಿಂಗಿಸು ೨ – ೧೧೫

ತಳ್ಪೊಯ್ – ಸೇರು, ಕೂಡು ೨ – ೧೨೩

ತಾಂಬೂಲಕರಂಕವಾಹಿನಿ – ಸಂಚಿನವಳು, ಹಡಪವಳಿತಿ ೨ – ೪೪ವ

ತಾಣ – ಸ್ಥಾನ, ಸ್ಥಳ ೧ – ೧೦೩

ತಾರನಗೇಂದ್ರ – ಕೈಲಾಸಪರ್ವತ ೬ – ೧೦೯

ತಾರಾಗ – ಕೈಲಾಸ ೪ – ೧೬

ತಾರಾಚಲ – ಕೈಲಾಸ ೪ – ೫

ತಾಳವೃಂತ – ಬೀಸಣಿಗೆ ೧ – ೨೪೧

ತಿಂತಿಣಿ – ಗುಂಪು ೪ – ೯

ತಿಗ್ಮರೋಚಿ – ಸೂರ್ಯ ೭ – ೨೫

ತಿಣ್ಣ – ತೀಕ್ಷ , ಉಗ್ರ ೧ – ೧೬೪

ತಿಣ್ಪು – ಹೆಚ್ಚಳ, ಅತಿಶಯ ೮ – ೧೨೫ವ

ತಿಮಿರ – ಕಣ್ಣಿಗೆ ಬರುವ ಒಂದು ಬಗೆಯ ರೋಗ, ಪರೆ ೩ – ೬೪

ತಿರಸ್ಕರಿಣಿ – ಪರದೆ, ತೆರೆ ೮ – ೧೦೪

ತಿರು – ಬಿಲ್ಲಿನ ಹುರಿ, ಮೌರ್ವಿ ೯ – ೧೪

ತಿರ್ಯಗ್ಜಾತಿ – ಮನುಷ್ಯೇತರ ಪ್ರಾಣಿಯ ಜಾತಿ ೯ – ೪೩

ತಿಳಿಪು – ಸಮಾಧಾನಪಡಿಸು ೧ – ೫೧

ತಿಱ – ಕೊಯ್ಯು (ಹೂವು ಮೊದಲಾದುವನ್ನು) ೮ – ೪೬ವ

ತಿಱಕಲ್ – ಅಣೆಕಲ್ಲು ೬ – ೫೮

ತುರಂಗವದನ – ಕಿನ್ನರ ೪ – ೪

ತುರಗಬ್ರಹ್ಮಚರ್ಯ ಹೆಣ್ಣು ಕೊಡುವವರು ಇಲ್ಲದುದರಿಂದ ಗತಿಯಿಲ್ಲದೆ ತಾಳಿರುವ ಬ್ರಹ್ಮಚರ್ಯೆ ೮ – ೩ವ

ತುರಿಪ – ತ್ವರೆ, ವೇಗ ೩ – ೨೭

ತುಱುಂಬು – ತುರುಬು, ಮುಡಿಕಟ್ಟು ೧ – ೨೯

ತುಱುಗಲ್ – ಗುಂಪು ೩ – ೧೧೯

ತುಱುಗೆಮೆಗಣ್ – ಒತ್ತಾಗಿರುವ ರೆಪ್ಪೆಗಳುಳ್ಳ ಕಣ್ಣು ೨ – ೧೦೯

ತೂಗುಂದೊಟ್ಟಲ್ ತೂಗಾಡುವ ತೊಟ್ಟಲು ೨ – ೫೬

ತೂಱಲಗೊಂಬು – ಸಣ್ಣಕೊಂಬೆ ೧ – ೧೦೦

ತೃಣಪುಲೀ – ಹುಲ್ಲಿನ ಉಕ್ಕಡ ೮ – ೧ವ

ತೆರದಿರಿ – ಅವಕಾಶ ಮಾಡಿಕೊಳ್ಳು ೧ – ೨೪೦

ತೆರಳ್ಚು – ಹೋಗುವಂತೆ ಮಾಡು, ಹೊರಡಿಸು ೧ – ೧೩೪

ತೆರೆ – ಚರ್ಮದ ಸುಕ್ಕು ೧ – ೧೪೫

ತೆಳ್ವಸಿರ್ – ತೆಳುವಾದ ಗರ್ಭ ೨ – ೯೭

ತೆಱಂಬೊಳೆ – ಚೆನ್ನಾಗಿ ಪ್ರಕಾಶಿಸು ೩ – ೧೧೮

ತೊಂಗಲ್ – ಗಂಟು ೨ – ೫೮

ತೊಳ್ತು – ದಾಸಿ, ಸೇವಕಿ ೫ – ೧೭೪

ತೊಡರ್ಚು – ಮುಡಿಸು, ಜೋಡಿಸು ೫ – ೫೧ವ

ತೊಡರ್ಪು – ತೊಡಕು ೯ – ೨೩

ತೋರಣ – ಹೆಬ್ಬಾಗಿಲು, ಹೊರಬಾಗಿಲು ೬ – ೧೭ವ

ತೊರೆ – ಮೊಲೆಯಲ್ಲಿ ಹಾಲು ತುಂಬಿಕೊಳ್ಳು ೮ – ೧೫೬

ತೊವಲ್ಪೊರಜ – ಚರ್ಮದ ಹುರಿಯನ್ನು ಕಟ್ಟುವಿಕೆ ೧೦ – ೩೦ವ

ತೋರ್ಕೆಗೊಡು – ಕಾಣಿಕೆಯಾಗಿ ಒಪ್ಪಿಸು ೬ – ೮೦

ತ್ರಯೀ – ಮೂರು ವೇದಗಳು ಋಕ್, ಯಜು, ಸಾಮ ೪ – ೪೦

ತ್ರಿಪಥಗೆ – ಗಂಗಾನದಿ ೧ – ೧೯೨

ತ್ರಿವರ್ಗ – ಧರ್ಮ, ಅರ್ಥ, ಕಾಮಗಳು ೨ – ೨೩

ದಂದುಗ – ದುಖ ೫ – ೧೫

ದಂಡತೋರಣ – ಅರೆಕಾಲು ೭ – ೨೧

ದಂತಪತ್ರ – ದಂತದ ಓಲೆ ೮ – ೭೦

ದಂತುರ – ವ್ಯಾಪ್ತವಾದ ೧೦ – ೩೦

ದಡ್ಡಿ – ಹಚ್ಚಡ ೭ – ೨೩ವ

ದಡ್ಡು – ಜಡ್ಡು ೧೦ – ೩೦ವ

ದಳಿಂಬ – ಮೆತ್ತೆ ೯ – ೮ವ

ದಾಂಗುಡಿವರಿ – ಹಬ್ಬು ೩ – ೧೦೮

ದಾನಲೇಖೆ – ಮದೋದಕದ ಗೆರೆ ೮ – ೯೧

ದಾವದಹನ – ಕಾಡುಕಿಚ್ಚು ೫ – ೧೧೬

ದಿನಮುಖ – ಸೂರ್ಯೋದಯ ಕಾಲ ೧ – ೧೨೫

ದೀತಿ – ಕಿರಣ ೫ – ೧೫೮

ದೀರ್ಘಿಕೆ – ಕೊಳ, ಜಲಾಶಯ ೩ – ೫೧ವ

ದುಗುಲ – ೧ ರೇಶ್ಮೆಬಟ್ಟೆ ೨ ಉತ್ತಮವಾದ ಬಟ್ಟೆ ೫ – ೨೦೦

ದುರಾವೇಶ – ಕೆಟ್ಟ ತೂಳ ೫ – ೮೦

ದುರೋದರ – ಜೂಜಾಟ ೬ – ೯೨

ದುರ್ವಿದಗ್ಧ – ಮೂಢ, ದಡ್ಡ ೭ – ೪೧

ದುಶ್ಚ ವನ – ಇಂದ್ರ ೩ – ೮೦

ದುಶ್ರವ – ಕೇಳಲು ಕಷ್ಟಕರವಾದುದು ೮ – ೩೧ವ

ದೂದವಿ – ದೂತಿ ೮ – ೩೫ವ

ದೂಸಱು – ಕಾರಣ, ನಿಮಿತ್ತ ೯ – ೫೧

ದೆಪ್ಪಳಿಸು – ಬೆರಗಾಗು ೧ – ೧೩೬ವ

ದೋಷಾಕರ – ಚಂದ್ರ ೫ – ೧೫೨

ದೇವಕುಲ – ದೇವಾಲಯ ೨ – ೬

ದೋಣಿವೋಗು – ಕುಳಿಬೀಳು ೮ – ೩ರ

ದೌವಾರಿಕ – ಬಾಗಿಲುಕಾಯುವವನು ೩ – ೧ವ

ದ್ರೋಣಿ – ದೊನ್ನೆ ೩ – ೧೦೫

ಧವಳಾತಪತ್ರ – ಬಿಳಿಕೊಡೆ ೩ – ೧೧೪

ಧಾಮ – ಹೊಳಪು, ಕಾಂತಿ ೨ – ೩ರ

ಧಾರ್ಮಿಕ – ಉಪಾಸಕ, ಸಾಧಕ ೮ – ೩ರ

ಧಾಷ್ಟ  – ದಿಟ್ಟತನ ೬ – ೧೨೩

ಧೂಸರ – ಮಲಿನ, ಕೊಳಕಾದ ೬ – ೧೦ವ

ಧೌತ – ತೊಳೆಯಲ್ಪಟ್ಟ, ಒಗೆಯಲ್ಪಟ್ಟ ೨ – ೪೧

ಧ್ರುವ – ೧ ಧ್ರುವನಕ್ಷತ್ರ, ೨ ಒಂದು ಬಗೆಯ ತಾಳ ೪ – ೫೪ವ

ನಡಪು – ಕಾಪಾಡು, ಪೋಷಿಸು ೧ – ೨೨೦ವ

ನಣ್ಪು – ಸ್ನೇಹ ೭ – ೭

ನನೆಯಂಬು – ಹೂವಿನ ಬಾಣ ೮ – ೩೧ವ

ನಯನತ್ರಿಭಾಗ – ಕುಡಿನೋಟ, ಕಟಾಕ್ಷ ೬ – ೧೦೫

ನರ್ಮಾಲಾಪ – ಹಾಸ್ಯಕರವಾದ ಮಾತುಕತೆ ೮ – ೯೪

ನಲವರಿಕೆ – ಪ್ರೀತಿ ೩ – ೪೧

ನಾಗೇಂದ್ರ – ಆದಿಶೇಷ ೧ – ೧

ನಾಡಾಡಿ – ಸಾಮಾನ್ಯ ೬ – ೧೧

ನಾಣೆಱಕ – ಲಜ್ಜೆಯಿಂದ ಕೂಡಿದ ಪ್ರೀತಿ ೫ – ೧೨೭

ನಾರಂಗವಟ್ಟೆ – ಕೆಂಪುಬಟ್ಟೆ, ಕಿತ್ತಲೆಹಣ್ಣಿನ ಬಣ್ಣದ ಬಟ್ಟೆ ೮ – ೬೯ವ

ನಾರದತನಯೆ –  ನಾರದಮಹರ್ಷಿಯ ಸಾಕು ಮಗಳಾದ ಭದ್ರೆ ಎಂಬುವಳು ೬ – ೧೬೭

ನಾರಾಚ – ಬಾಣ ೨ – ೨೬

ನಾಳಡಿಗಳೆ –  ಗಡೀಪಾರು ಮಾಡು ೩ – ೮೯

ನಿಕ್ಕುವಂ – ನಿಜವಾಗಿಯೂ, ಸತ್ಯವಾಗಿಯೂ ೯ – ೫೨

ನಿಚ್ಚೆ ದೆ – ದೀರ್ಘ ಸುಮಂಗಲಿ ೯ – ೧೧೨

ನಿತಂಬ – ಬೆಟ್ಟದ ಮಧ್ಯಪ್ರದೇಶ ೯ – ೧೧ವ

ನಿತ್ತರಿಸು – ಸಹಿಸು, ತಾಳು ೮ – ೨೭

ನಿಮಿರ್ – ಪ್ರಸರಿಸು, ಹರಡು ೧ – ೮೧

ನಿಮಿರ್ – ಮೇಲಕ್ಕೆತ್ತು, ಮೇಲುಮುಖವಾಗು ೧ – ೧೭೨

ನಿಮಿರ್ಕೆ – ಆಕ್ಯ, ವಿಸ್ತಾರ ೬ – ೧೩೦

ನಿಮಿರ್ಚು ಬಿಚ್ಚು ೫ – ೭೭

ನಿರ್ಮೋಕ – ಹಾವಿನ ಪರೆ ೧ – ೬೮

ನಿರ್ಲಕ್ಷಣೆ – ಅಮಂಗಳಸ್ವರೂಪಳು ೫ – ೧೯೯

ನಿಲಿಂಪನಿಕಾಯ – ದೇವತೆಗಳ ಗುಂಪು ೬ – ೩೨

ನಿಶಾವಸಾನ – ಬೆಳಗಿನ ಜಾವ ೨ – ೭೨

ನಿಷ್ಪಂದಗಾತ್ರ – ಅಲುಗಾಡದ ಶರೀರವುಳ್ಳವನು ೮ – ೧೧೪

ನಿಸದಂ – ನಿಜವಾಗಿಯೂ ೫ – ೧೯೧

ನಿಸ್ತ್ರಿಂಶ – ಹಿಂಸಕ, ಘಾತಕ ೫ – ೧೫೨

ನಿಳ್ಕು – ಚಾಚು ೨ – ೧೪ ನೀಡ – ಗೂಡು ೧ – ೧೪೭

ನೀರದ ಮೇಘ ೯ – ೭೯

ನೀರಿೞ – ಸ್ನಾನಮಾಡು ೫ – ೧೯೩

ನೀರೇರುಹ – ಕಮಲ ೧ – ೩೯

ನೀರ್ಗೊಡು – ತರ್ಪಣವನ್ನು ಕೊಡು ೯ – ೩೭ವ

ನಿರ್ಜೊಂಪ – ಜಲಮಂಟಪ ೮ – ೧೨೪ವ

ನೀರ್ದಾಣ – ಜಲಾಶಯ ೪ – ೧೯

ನೀಹಾರ – ಹಿಮ ೭ – ೨೭

ನೀ – ಮಹಿಳೆ ೩ – ೫೨

ನುಣ್ಚರ – ಇಂಪಾದ ಧ್ವನಿ ೮ – ೬೦

ನೂಪುರ – ಕಾಲ್ಗಡಗ, ಕಾಲಂದಿಗೆ ೧ – ೫೮ವ

ನೂಲ್ – ಉಡಿದಾರ, ಒಡ್ಯಾಣ ೩ – ೨೭

ನೂಲ್ದೆಗೆ – ಸೂತ್ರಹಿಡಿದು ಸಮಮಾಡು ೩ – ೯

ನೃಶಂಸ – ಕ್ರೂರ, ಹಿಂಸಕ ೩ – ೧೦೩ವ

ನೆಗಪು – ಎತ್ತು ೫ – ೧೧೫

ನೆಗೞು – ಮಾಡು, ಏರ್ಪಡಿಸು ೫ – ೩೧

ನೆಗೞ್ಚು – ಮಾಡು ೨ – ೧೧೬

ನೆಲ್ – ಬತ್ತ ೧ – ೧೦೨

ನೆಲನನುಘ್ಘಡಿಸು – ಹಸ್ತಲಾಘವವನ್ನು ಕೊಡು ೬ – ೧೧೭ವ

ನೆಲಮಾಡ – ಮಹಡಿ ೩ – ೨೫

ನೆಲೆವರ್ಚು – ದಡವನ್ನು ಮೀರು ೨ – ೧೦೨

ನೆೞಲಿಕ್ಕು – ಪ್ರತಿಬಿಂಬಿಸು ೯ – ೧೧ವ

ನೇತ್ರದುಕೂಲ – ಸೂಕ್ಷ ವಾದ ರೇಶ್ಮೆಬಟ್ಟೆ, ಉತ್ತಮವಾದ ಬಟ್ಟೆ ೧ – ೬೮ವ

ನೇತ್ರಸೂತ್ರ – ಮಂಗಳಸೂತ್ರ ೫ – ೧೯

ನೇಣ್ – ಹಗ್ಗ ೩ – ೪

ನೇಲ್ – ನೇತುಹಾಕು ೪ – ೬೫

ನೇಸಱು – ಸೂರ್ಯ ೧ – ೧೧೮

ನೈಷ್ಠುರ್ಯ – ಕಠಿನತ್ವ, ಎರಟುತನ ೩ – ೮೦

ನೋಂಪಿ – ವ್ರತ, ತಪಸ್ಸು ೬ – ೬೧

ಪಂಜರಿಸು – ಪಂಜರದಂತೆ ವಿರಳವಾಗು ೧ – ೧೯೮

ಪಂದಲೆ – ಆಗ ತಾನೆ ಕತ್ತರಿಸಿದ ಹಸಿತಲೆ ೮ – ೨೮

ಪಂದೊವಲ್ – ಹಸಿಯ ಚರ್ಮ ೧೦ – ೪೪ವ

ಪಕ್ಕಣ – ಬೇಡರ ಬೀಡು, ಶಬರಾಲಯ ೧೦ – ೪೯

ಪಕ್ಕರೆ – ಪಕ್ಷರಕ್ಷೆ ೩ – ೬

ಪಕ್ಷದ್ವಾರ – ಪಕ್ಕದ ಬಾಗಿಲು, ದಿಡ್ಡಿಬಾಗಿಲು ೫ – ೧೪೬

ಪಗಿಲ್ – ಅಂಟಿಕೊಳ್ಳು ೧ – ೧೨೪

ಪಟಚ್ಚರ – ಜೀರ್ಣವಸ್ತ್ರ ೯ – ೮೧

ಪರಿಲಂಬ – ವಿಳಂಬ ೯ – ೧ವ

ಪರಿವಱಯಾಗು – ಚೂರು ಚೂರಾಗು ೮ – ೪೮

ಪರಿವ್ರಾಜಿಕೆ – ಸನ್ಯಾಸಿನಿ ೬ – ೧೬೬ವ

ಪರಿಷ್ವಂಗ – ಆಲಿಂಗನ ೨ – ೪೯

ಪರ್ಚು – ಪಿಸುಮಾತಾಡು ೮ – ೧೪೭

ಪರ್ಣಪುಟ – ದೊನ್ನೆ ೧ – ೧೭೭ವ

ಪರ್ಯಂಕ – ಮಂಚ ೧ – ೨೭

ಪರ್ಯಾಣ – ಜೀನು ೯ – ೨೦ವ

ಪರ್ಯುಷಿತ – ಮಾಸಿಹೋದ, ಒಣಗಿ ಹೋದ ೬ – ೧೦ವ

ಪಲ್ಲಣ – ಜೀನು ೪ – ೨೫

ಪಲ್ಲಣಿಸು – ಜೀನುಹಾಕು ೮ – ೧೦೧ವ

ಪಲ್ಪಗುಟ್ಟು – ಹಲ್ಲುಮೊರೆ ೭ – ೨೩ವ

ಪವಣ್ – ಅಳತೆ, ಪ್ರಮಾಣ ೨ – ೮೫

ಪವಣ್ಗೞ – ಅಳತೆ, ಮೀರು ೯ – ೭

ಪಸದನಂಗೊಳ್ – ಅಲಂಕಾರವನ್ನು ಹೊಂದು, ಸಿಂಗರಿಸಲ್ಪಡು ೫ – ೬೯

ಪಸಾದ – ಅನುಗ್ರಹ, ಪ್ರಸಾದ ೮ – ೯

ಪಸಾಯಿತ – ಪ್ರೀತಿಪಾತ್ರ, ವಿಶ್ವಾಸಪಾತ್ರ ೮ – ೪ವ

ಪಸಿಯ ಬಣ್ಣ – ಶ್ಯಾಮಲವರ್ಣ ೧ – ೩೫

ಪಸುರ್ಪು – ಹಸುರುಬಣ್ಣ ೧ – ೩೫

ಪಸೆ – ಹಾಸಿಗೆ ೧೦ – ೮೫ವ

ಪಳಂಚಲೆ – ತಾಗು, ತಗುಲು, ಬಡಿ ೪ – ೩೧

(ಪಳಂಟು ಅಲೆ)

ಪಳಂಚಿಸು – ಕುಟ್ಟು ೧ – ೩೧

ಪಳಚ್ಚನಾಗು – ನಿರ್ಮಲವಾಗು, ಸ್ವಚ್ಛವಾಗು ೯ – ೭೯

ಪಳವಿಸು – ಅಳು, ಪ್ರಲಾಪಿಸು ೯ – ೭೩

ಪಳವು – ಕಾಡು, ಅರಣ್ಯ ೧ – ೮೧

ಪಳುಕು – ಸಟಿಕ ೧ – ೬೦ವ

ಪಳ್ಳ – ಕಿರುಹೊಳೆ ೮ – ೧ವ

ಪೞವಾವಿಗೆ – ಹಳೆಯ ಬಾವಿ ೮ – ೧ವ

ಪೞವಿಸು – ಪ್ರಲಾಪಿಸು ೫ – ೧೬೯

ಪಱವಡು – ಬಿಟ್ಟುಹೋಗು ೮ – ೧೧೮

ಪಱವಱಯಾಗು – ಚೆಲ್ಲಾಪಿಲ್ಲಿಯಾಗು, ಚದುರು ೧೧ – ೫ವ

ಪ – ತಮ್ಮಟೆ ೩ – ೨೨

ಪಾಂಗು – ರೀತಿ, ಬಗೆ ೫ – ೧೭೮

ಪಾಡಿವ – ಪಾಡ್ಯ ೨ – ೧೧೮ವ

ಪಾಡೞ – ಆಯಾಸಗೊಳ್ಳು ೧೦ – ೧೯

ಪಾಪೆ – ಕಿವಿಯ ಹೊರಭಾಗ, ಕಿವಿಯ ಹಳ್ಳ ೬ – ೫೨

ಪಾಲ್ಗಡಲ್ – ಕ್ಷೀರಸಮುದ್ರ ೩ – ೫೬

ಪಟುಮಂಟಪ – ಗುಡಾರ, ಡೇರೆ ೩ – ೧೨೭ವ

ಪಟವಾಸ – ಸುವಾಸನೆ ಪುಡಿ, ಬುಕ್ಕಿಹಿಟ್ಟು ೨ – ೨೬

ಪಟ್ಟವಣೆ – ಸಿಂಹಾಸನ, ರಾಜಯೋಗ್ಯವಾದ ಪೀಠ ೩ – ೧೦೫

ಪಟ್ಟಸ – ಈಟಿ ೮ – ೩ರ

ಪಡಿಕೆ – ಬಂಧನ ೧೦ – ೪೪

ಪಡಿಗ – ಮುಖ ತೊಳೆಯುವ ನೀರಿನ ಪಾತ್ರೆ ೨ – ೩೪

ಪಡಿಯಱ – ಬಾಗಿಲು ಕಾಯುವವನು, ಪ್ರತೀಹಾರಿ ೭ – ೧ವ

ಪಡಿಯಱತಿ – ಬಾಗಿಲು ಕಾಯುವವಳು, ಪತ್ರೀಹಾರಿ ೧ – ೨೨ವ

ಪಡಿಯಱಕೆ – ಬಾಗಿಲು ಕಾಯುವುದು ೨ – ೩೪

ಪಡಿವರಿಜ – ಪ್ರತಿಮೆ, ವಿಗ್ರಹ ೫ – ೧೧ವ

ಪಡೆವಳ್ಳ – ದಳವಾಯಿ, ಸೇನಾಪತಿ ೩ – ೮೯

ಪತಂಗ – ಸೂರ್ಯ ೧ – ೧೦೦

ಪತ್ತುಗೆವಿಡು – ಬಾಯಿತೆರೆ ೧ – ೧೧೭

ಪತ್ತುವಿಡು – ಕಳೆ, ಬಿಡು, ತೊರೆ ೫ – ೯ವ

ಪತ್ರಭಂಗ – ಹೆಂಗಸರ ಕೆನ್ನೆ ಮೊದಲಾದ ಸ್ಥಳಗಳಲ್ಲಿ ಬರೆಯುವ ಚಿತ್ರ ೬ – ೨೫ವ

ಪದಂಪು – ಪ್ರೀತಿ ೮ – ೬೨

ಪದಪು – ಸಂಭ್ರಮ, ಉತ್ಸಾಹ, ಒಲವು, ಪ್ರೀತಿ ೨ – ೧೧

ಪದವೆಱು – ಅವಕಾಶವನ್ನು ಪಡೆ ೮ – ೩೪

ಪದಾತಿ – ಕಾಲಾಳು ೩ – ೧ವ

ಪದಿರ ಪ – ವಿವಿಧ ಶಬ್ದಗಳನ್ನುಂಟು ಮಾಡುವ ಚರ್ಮವಾದ್ಯ ೩ – ೨೨ವ

ಪನೆ – ಹಲ್ಲು ೨ – ೫೬

ಪರದಾರ – ಪರಸ್ತ್ರೀ ೩ – ೯೮

ಪರಭಾಗ – ವರ್ಣೋತ್ಕರ್ಷ ೧ – ೨೧೫

ಪರಭೃತ – ಕೋಗಿಲೆ ೫ – ೧೦೦ವ

ಪರಶು – ಕೊಡಲಿ ೮ – ೩ರ

ಪರಾಸು – ಮೃತ ೯ – ೩೭

ಪರಿಕಣಿ – ಕಾಲುವೆ ೩ – ೨೭

ಪರಿಗ್ರಹ – ಪರಿಹಾರ ೪ – ೩

ಪರಿಜು – ಆಕಾರ, ರೂಪು ೧೦ – ೩೦ವ

ಪರಿಡೋಣಿ – ನೀರು ಹರಿಯುವ ದೋಣಿ ೭ – ೨೧

ಪರಿಣತವಯಸ – ಮುದುಕ, ವೃದ್ಧ ೮ – ೧೫೮

ಪರಿಣತಿ – ಕೊನೆಯ ಅವಸ್ಥೆ ೨೫೨

ಪರಿಣತೆ – ಪಾರಂಗತೆ, ಕುಶಲೆ ೬ – ೯೨ವ

ಪರಿನಾಳಿಕೆ – ನೀರು ಹರಿಯುವ ನಲ್ಲಿ ೭ – ೨೮

ಪರಿಪಡು – ಓಡಿಬರು ೧೦ – ೧೯

ಪರಿಭವಿಸು – ಅವಮಾನಗೊಳಿಸು ೩ – ೯೮

ಪರಿರಂಭಣ – ಆಲಿಂಗನ ೧ – ೭೨

ಪಾವಸೆ – ಪಾಚಿ ೬ – ೧೬೮

ಪಾವುಡ – ಕಾಣಿಕೆ ೬ – ೧೫೭

ಪಾಸ – ಹಾಸುಗಲ್ಲು ೫ – ೧೫

ಪಿಂಗಳಿ – ಸಿಂಹ? ೧ – ೧೧೮

ಪಿಂಗು – ಹಿಂಗು, ಬತ್ತು ೧ – ೨೩೫

ಪಿಡಿ – ಹೆಣ್ಣಾನೆ ೩ – ೧೧೩

ಪಿಪಾಸೆ – ನೀರಡಿಕೆ ೧ – ೧೫೬

ಪೀಲಿ – ನವಿಲುಗರಿಯ ೧ – ೯೭

ಪೀಲಿದೞೆ – ನವಿಲುಗರಿಯ ಛತ್ರಿ ೮ – ೬೧

ಪುಂಖ – ಗರಿ ೫ – ೧೦೬

ಪುಂಡರೀಕ – ಬಿಳಿಯ ಕಮಲ ೨ – ೭೨

ಪುಟವೇಱು – ಬೆಳೆ, ವೃದ್ಧಿಹೊಂದು ೨ – ೭೭

ಪುಣಂಬು – ಬಾಣ ೫ – ೧೦೮

ಪುತ್ರಿಕೆ – ಪುತ್ತಳಿ ೧ – ೩೫

ಪುದಿ – ಸೇರು, ಕೂಡು ೧ – ೨೨೬

ಪುದುವು – ಗುಂಪು ೧ – ೧೦೫

ಪುಯ್ಯಲ್ಚು – ಗೋಳಾಡು ೫ – ೧೬೯

ಪುರುಡು – ಅಸೂಯೆ, ಮತ್ಸರ, ಪೈಪೋಟಿ, ಸ್ಪರ್ಧೆ ೫ – ೧೩೮

ಪುರೋಡಾಶ – ಒಂದು ಬಗೆಯ ಹೋಮ ದ್ರವ್ಯ ೧ – ೧೮೫

ಪುಷ್ಪದಾಮ – ಹೂವಿನ ಮಾಲಿಕೆ ೬ – ೨೩

ಪುಷ್ಕರ – ಸೊಂಡಲಿನ ತುದಿ ೧ – ೧೮೪

ಪುಳಕ – ರೋಮಾಂಚ ೨ – ೨೫

ಪುಳಿಂದ – ಬೇಡ, ವ್ಯಾಧ ೧ – ೯೭ವ

ಪುೞಲ್ – ಮರಳು ೫ – ೨೦

ಪೂಗದ್ರುಮ – ಅಡಕೆಯ ಮರ ೧ – ೧೭೯

ಪೂಣ್ – ಪ್ರತಿeಮಾಡು ೬ – ೯೬

ಪೂರ್ಣಪಾತ್ರ – ಉಡುಗೊರೆ, ಬಹುಮಾನ ೨ – ೫೪

ಪೆಂಪು – ಹಿರಿಮೆ ೩ – ೧೦೦

ಪೆಪ್ಪಳಿಸು – ಹೆದರು, ಗಾಬರಿಗೊಳ್ಳು ೧೦ – ೬೮

ಪೆರ್ಬೊನಲ್ – ದೊಡ್ಡ ಪ್ರವಾಹ ೬ – ೨೯

ಪೆಳಱು – ಹೆದರು ೩ – ೧೨೦

ಪೆ – ಬಾಲಚಂದ್ರ ೨ – ೧೦೯

ಪೆಱಪಿಂಗಿಸು – ಹಿಂದಕ್ಕೆ ಸರಿಸು ೮ – ೧೦೪

ಪೇರಡವಿ – ದೊಡ್ಡ ಕಾಡು ೮ – ೧ವ

ಪೈಶಾಚಕ – ದೆವ್ವಹಿಡಿದವನು ೫ – ೮೦

ಪೊಂಪುೞ – ಆಕ್ಯ, ಹೆಚ್ಚಳ ೧ – ೯೭

ಪೊಂಬೞೆ – ಹೊಂಬಾಳೆ ೧೦ – ೬೨

ಪೊಚ್ಚರಿಸು – ಉಬ್ಬಿಸು ೩ – ೧೦೨

ಪೊಡಮಡು – ನಮಸ್ಕರಿಸು ೩ – ೪೩ ಪೊಡರ್ – ಚಲಿಸು ೧ – ೧೬೫

ಪೊಡರ್ – ಕಾಣಿಸಿಕೊಳ್ಳು, ಹುಟ್ಟು ೧ – ೧೨೬

ಪೊಡರ್ಪು – ಚಲನೆ ೫ – ೪೪ವ

ಪೊಣರ್ವಕ್ಕಿ – ಚಕ್ರವಾಕಪಕ್ಷಿ ೪ – ೨೦

ಪೊಣ್ಮು – ಹೊಮ್ಮು, ಪ್ರಕಟವಾಗು ೧ – ೫೮

ಪೊದೞು – ಪ್ರಕಟವಾಗು, ಹೊರಪಡು, ವ್ಯಾಪಿಸು ೫ – ೬೩

ಪೊನಲ್ – ಪ್ರವಾಹ ೧ – ೧೯೨

ಪೊನ್ನೀರ್ – ಚಿನ್ನದ ರಸ ೮ – ೭೦

ಪೊರೆ – ಪದರ ೫ – ೨೦೦

ಪೊರೆ – ವೃದ್ಧಿಹೊಂದು ೧ – ೨೪

ಪೊರ್ಕುಳಿ – ಹೊಡೆತ ೧ – ೧೫ವ

ಪೊಲೆವಟ್ಟು – ಹೊಲಗೇರಿ ೧೦ – ೩೭

ಪೊೞಲ್ – ನೆಲೆ, ಆಶ್ರಯ ಪಟ್ಟಣ ೧ – ೧೫೧

ಪೊೞ್ತರೆ – ಮುಂಜಾನೆ ೧೦ – ೨೭

ಪ್ರಕೋಷ್ಠ – ಮೊಳಕೈಯಿಂದ ಕೆಳಗೆ ಮಣಿ ಕಟ್ಟಿನವರೆಗೆ ಇರುವ ಭಾಗ ೩ – ೩೧

ಪ್ರಚ್ಛದ – ಹೊದೆಯುವ ಬಟ್ಟೆ, ಹಚ್ಚಡ ೬ – ೭೨ವ

ಪ್ರಜಾಪತಿ – ಬ್ರಹ್ಮ ೬ – ೬೮ವ

ಪ್ರಣಾಳ – ನೀರುಕಂಡಿ, ಬಿಡುಗಂಡಿ, ಹೊರಕ್ಕೆ ನೀರು ಹೋಗಲು ಮಾಡಿರುವ ರಂಧ್ರ ೫ – ೧೪೫

ಪ್ರತತಿ – ಸಮೂಹ ೧ – ೧೮

ಪ್ರತಾರಿಸು – ಮೋಸಗೊಳಿಸು ೩ – ೯೭

ಪ್ರತಿಪತ್ತಿ – ಮಾಡಬೇಕಾದ ಕೆಲಸ ೯ – ೧೧೧

ಪ್ರತಿಪಾದ್ಯ – ಕೊಡಬೇಕಾದ್ದು, ಒಪ್ಪಿಸುವುದು ೬ – ೧೨೪

ಪ್ರತಿಸರ – ಕಂಕಣ ೫ – ೧೬೨

ಪ್ರತೀಹಾರಿ – ಬಾಗಿಲು ಕಾಯುವವಳು ೧ – ೨೧

ಪ್ರತ್ಯಭಿಜ್ಞೆ- ಗುರುತು ೮ – ೧೦೬

ಪ್ರತ್ಯಾನಯನ – ಕರೆತರುವುದು ೮ – ೧೨೨ವ

ಪ್ರತ್ಯಾಶೆ – ಆಸೆ, ಮನೋರಥ ೯ – ೭೪

ಪ್ರತ್ಯಾಸನ್ನ – ಸಮೀಪ, ಹತ್ತಿರ ೧ – ೧೬೬

ಪ್ರತ್ಯುದ್ಗಮ – ಎದುರುಗೊಳ್ಳುವುದು ೮ – ೯೪ವ

ಪ್ರತ್ಯಾತ್ಥಾನ – ಇದಿರೇಳುವುದು ೧ – ೩೪ವ

ಪ್ರತ್ಯೂರ್ಜತ – ಮರಳಿ ಜೀವವನ್ನು ಪಡೆಯುವವನು ೯ – ೮೫ವ

ಪ್ರವೃತ್ತಿ – ವೃತ್ತಾಂತ ೫ – ೨೦೮

ಪ್ರಸೂತಿ – ಹೆರಿಗೆ ೧ – ೧೧೦

ಪ್ರಸ್ಥಾನ – ಪ್ರಯಾಣಕಾಲ ೩ – ೧೧೧

ಪ್ರಾಗಲ್ಭ  – ದಿಟ್ಟತನ ೮ – ೩೪ವ

ಪ್ರಾದೇಶ – ಚೋಟುದ್ದ ೩ – ೧೬ವ

ಪ್ರಾಭಾತಿಕ – ಬೆಳಗಿನ ಜಾವದಲ್ಲಿ ಮಾಡಬೇಕಾದ ೬ – ೧೦ವ

ಪ್ರಾಲಂಬ – ಜೋಲಾಡುವ, ಇಳಿಬಿದ್ದಿರುವ ೮ – ೩

ಪ್ರಾಲೇಯಾಂಶ – ಚಂದ್ರ ೧ – ೨೩೮