ಭಾರತದ ಪ್ರಜಾಕೋಟಿ ತನ್ನ ಅನೇಕಾನೇಕ ಶಾಖೋಪಶಾಖೆಗಳಲ್ಲಿನ ವಿವಿಧ ಜನಾಂಗಗಳನ್ನೊಳಗೊಂಡ ಅತಿ ನಿಕಟವಾದ ಜಾತಿಸಂಕರಗಳ ಪರಿಣಾಮ ಫಲ. ಈ ಭಿನ್ನಜನಾಂಗಗಳಲ್ಲಿ ಪ್ರತಿಯೊಂದು ಜನಾಂಗವೂ ಮತ್ತು ಅವುಗಳಲ್ಲಿನ ಕೆಲವು ಶಾಖೆಗಳೂ ತಮ್ಮದೇ ಆದ ಒಂದು ಪ್ರತ್ಯೇಕ ಭಾಷೆ ಹಾಗೂ ಆದಕ್ಕೆ ಸಂಬಂಧಪಟ್ಟ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿವೆ. ಈ ಎಲ್ಲ ಜನರೂ ಹೊರಗಿನಿಂದ ಬಂದವರು. ಭಾರತದ ಹೊರಗೆ ಅವರು ಎಲ್ಲೆಲ್ಲಿ ಬೆಳೆದು ಬಂದಿದ್ದರೂ ಆ ಸಾಂಸ್ಕೃತಿಕ ಪರಿಸರಗಳು ಸಹಜವಾಗಿಯೇ ಬೇರೆ ಬೇರೆಯಾಗಿದ್ದುವು. ಅವರವರ ಜನಾಂಗಿಕ, ಭೌಗೋಳಿಕ ಹಾಗೂ ಆರ್ಥಿಕ ಹಿನ್ನಲೆಯಲ್ಲಿ ಭಿನ್ನತೆಯಿದ್ದುದೇ ಇದಕ್ಕೆ ಮೂಲ ಕಾರಣ. ಆದರೆ ಈ ಉಪಖಂಡದೊಳಗೆ ಹೆಚ್ಚು ಕಡಿಮೆ ಏಕಪ್ರಕಾರದ ಆರ್ಥಿಕ ಹಿನ್ನಲೆ ನೆಲಸಿತ್ತು. ರಕ್ತ ಸಮ್ಮಿಶ್ರಣದ ಮೂಲಕ ಸರಿಸುಮಾರಾಗಿ ಸರ್ವಸಾಧಾರಣವಾದ ಆರ್ಥಿಕ ಹಾಗೂ ಸಾಂಸ್ಕೃತಿಕ ಜೀವನ ಸುಲಭಸಾಧ್ಯವಾಯಿತು. ಇದರಿಂದ ಮೊದಲು ವಿವಿಧ ಮನೋವೃತ್ತಿಗಳನ್ನೂ, ಪ್ರವೃತ್ತಿಗಳನ್ನೂ ಪಡೆದಿದ್ದ ಜನರು ಪ್ರಮೇಣ ಸರ್ವಸಮಾನವಾದ ರೀತಿಯಲ್ಲಿ ರೂಪುಗೊಳ್ಳುವುದು ಅನಿವಾರ್ಯವಾಯಿತು. ಅದರಲ್ಲಿಯೂ ವೈದಿಕ ಹಿಂದೂಧರ್ಮ ಸ್ಥಾಪಿತವಾದ ಮೇಲೆ ಒಂದೇ ರೀತಿಯ ಆದರ್ಶ ಅಂಗೀಕೃತವಾಗತೊಡಗಿತು. ನಮ್ಮ ಮನೋಧರ್ಮದಲ್ಲಿಯೂ ಪ್ರವೃತ್ತಿಗಳಲ್ಲಿಯೂ ಸರ್ವಸಾಧಾರಣವಾದ ಭಾರತೀಯತೆ ಏನೆಂಬುದನ್ನು ವಿವರಿಸುವುದೂ ನಿರ್ದೇಶಿಸುವುದೂ ಕಷ್ಟಕರವಾದರೂ ಅದೇನೆಂಬುದರ ಅರಿವು ಇಂದು ನಮಗಿದೆ. ಸರ್. ಹರ್ಬರ್ಟ್‌ರಿಸ್ಲೆ ಎಂಬಾತ ಭಾರತೀಯ ಮಾನವವಿಜ್ಞಾನದಲ್ಲಿ ಅಧಿಕಾರವುಳ್ಳ ವ್ಯಕ್ತಿ. ಆತ ಹಿಮಾಲಯದಿಂದ ಕನ್ಯಾಕುಮಾರಿಯವರಿಗೆ ಒಂದು ನಿರ್ದಿಷ್ಟವಾದ ಅಂತರಿಕ ಏಕರೂಪತೆಯುಳ್ಳ ಜೀವನವಿರುವುದನ್ನೂ ಒಂದು ಸಾಮಾನ್ಯ ಭಾರತೀಯ ವ್ಯಕ್ತಿತ್ವವಿರುವುದನ್ನೂ ಒಪ್ಪಿದ್ದಾನೆ.

ಭಾರತೀಯ ಸಂಸ್ಕೃತಿಯಲ್ಲಿ ಏಕತೆ

ಆರ್ಯರ ರೀತಿಯ ಮೈಕಟ್ಟಿನ ಚೆಲುವ ಕಾಶ್ಮೀರೀ ಬ್ರಾಹ್ಮಣ : ಮಂಗೋಲರ ಸ್ವಷ್ಟ ಲಕ್ಷಣಗಳನ್ನು ಪಡೆದ ಗೂರ್ಖ : ಕಪ ಚರ್ಮ ಹಾಗೂ ಚಪ್ಪಟೆ ಮೂಗಿನ ‘ನಿಷಾದ’ ಅಥವಾ ಆಸ್ಟ್ರಿಕ್ ಲಕ್ಷಣಗಳನ್ನು ಹೊಂದಿದ ಪೂರ್ವ ಭಾರತದ ಆದಿವಾಸಿ ಇಂಥ ಅತಿಶಯ ಸ್ವರೂಪದ ಜನವರ್ಗಗಳನ್ನು ಬಿಟ್ಟರೆ, ದೈಹಿಕ ಲಕ್ಷಣ ವಿಚಾರದಲ್ಲಿ ಭಾರತದ ಜನಸಮುದಾಯದ ಸಾಧಾರಣ ಮಾದರಿಗಳೆನ್ನಬಹುದಾದ ಜನರಲ್ಲಿ ಒಂದು ನಿರ್ದಿಷ್ಟ ಭಾರತೀಯಯತ್ವದ ರೂಪಮುದ್ರೆ ಕಂಡು ಬರುತ್ತದೆ. ಇದೆ ಇರಾನಿನ ಅಥವಾ ಇಂಡೋ-ಚೀನೀಯರ ರೀತಿಗಿಂತಲೂ ಭಿನ್ನವಾಗಿದ್ದು ಸುಲಭವಾಗಿ ಗುರುತಿಸಬಹುದಾಗಿದೆ. ಪಂಜಾಬಿನ ಇತ್ತೀಚಿನ ತಲೆಮಾರುಗಳ ಜನರಲ್ಲಿ ಪಾಶ್ಚಾತ್ಯ ರೀತಿಯ ಉಡುಪು ಧರಿಸುವ ಪದ್ಧತಿ ಸ್ವಷ್ಟವಾಗಿ ಕಂಡುಬರುತ್ತದೆ. ಇಂಥ ಸಂದರ್ಭಗಳನ್ನು ಬಿಟ್ಟರೆ, ಶ್ರೇಷ್ಟವಾದ ಅಖಿಲ ಭಾರತೀಯ ವೇಷ-ಭೂಷ ಪದ್ಧತಿ ರೂಢಿಗೆ ಬಂದಿದೆ. ಈ ಉಡುಪು ಹೊಲಿಗೆಯಿಲ್ಲದ ಮೂರು ಪ್ರತ್ಯೇಕ ವಸ್ತ್ರಗಳಿಂದ ಕೂಡಿದೆ. ಇವುಗಳಲ್ಲಿ ಒಂದನ್ನು ಸೊಂಟದ ಸುತ್ತ ಸುತ್ತಿಕೊಳ್ಳುವ ‘ಧೋತಿ’ ಅಥವಾ ಸೀರೆಯ ಹಾಗೆ (ಅಧೋವಾಸ, ಧೋತ್ರ ಅಥವಾ ಸಾಟಿಕಾ) ಸುತ್ತಿಕೊಂಡಿರುತ್ತಾರೆ. ಇನ್ನೊಂದನ್ನು ದೇಹದ ಮೇಲುಭಾಗದ ಉಡುಪಾಗಿ (ಮೇಲುದವಾಗಿ) ಉತ್ತರೀಯ ಅವವೇಷ್ಟನೀ ಅಥವಾ ಓಢನೀ ಹಾಕಿಕೊಂಡಿರುತ್ತಾರೆ. ಮತ್ತೊಂದನ್ನು ಪುರುಷರು ಪೇಟ ಅಥವಾ ರುಮಾಲಾಗಿ ತಲೆಗೆ ಸುತ್ತಿಕೊಳ್ಳುತ್ತಾರೆ (ಉಷ್ಣೀಷ), ಪಾಶ್ಚಾತ್ಯ ಪ್ರಭಾವಗಳು ಈ ಉಡುಪುಗಳನ್ನು ಬಹುವಾಗಿ ಮಾರ್ಪಡಿಸಿವೆ. ಆದರೆ ತೀರ ಉತ್ತರದಲ್ಲಿ ಕೂಡ, ಪಂಜಾಬು, ಕಾಶ್ಮೀರ ನೇಪಾಳಗಳಲ್ಲಿ ವಿಪರೀತ ಚಳಿಯಲ್ಲಿ ಕೂಡ, ಬ್ರಾಹ್ಮಣ ಅಥವಾ ಉತ್ತಮ ಜಾತಿಯವನು ಸಮಾರಂಭಗಳಲ್ಲಿಯಾಗಲಿ, ಮನೆಗಳನ್ನಾಗಲಿ ಊಟ ಮಾಡುವಾಗ ತನ್ನ ದೈನಂದಿನ ಉಡುಪಾದ ಕೋಟು ಷರಾಯಿಗಳನ್ನು ತೆಗೆದು, ಪಂಚೆ ಮತ್ತು ಉತ್ತರೀಯಗಳನ್ನು ಧರಿಸಿಯೇ ಊಟದ ಮನೆಯ ಪವಿತ್ರ ಸ್ಥಳವನ್ನು ಪ್ರವೇಶಿಸುತ್ತಾನೆ.

ಹಿಂದೂಗಳು (ಭಾರತೀಯರು) ರೊಟ್ಟಿ ಅಥವಾ ಅಕ್ಕಿಯನ್ನು ಮಾಂಸದೊಡನೆ ತಿನ್ನುವ ಬದಲು ಎರಡು ಬಗೆಯ ಧಾನ್ಯಗಳನ್ನು ಒಟ್ಟಿಗೆ ಸೇರಿಸಿ ತಿನ್ನುವುದನ್ನು ವಾಯುವ್ಯ ದಿಕ್ಕಿನಿಂದ ಬಂದ ಪಾರಸೀ ಭಾಷೆಯಾಡುವ ಇರಾನಿಗಳು ಮತ್ತು ತುರ್ಕಿಗಳು ಗಮನಿಸಿದರು. ಹಿಂದೂಗಳು ತಮ್ಮ ಆ ಆಹಾರವನ್ನು ‘ದಾಲ್ ರೋಟಿ’ (ಬೇಳೆಯ ತೊವೆ ಮತ್ತು ರೊಟ್ಟಿ) ‘ಹಿಂದೂ ಆಣ್ ಘಲ್ಲ-ರಾಬ-ಘಲ್ಲಮಿ-ಖೊರ್ದಂದ್, ವಮಿ-ಗೊಯಂದ್ ದಾಲ್-ರೋಟೀ) ಎಂದು ಕೆರಯುವರು, ದಾಲ್-ರೋಟೀ (ಹುದುಗು ಹಾಕಿ ಉಬ್ಬಿಸುವ ರೊಟ್ಟಿ ಹಾಗೂ ದ್ವಿದಳಧಾನ್ಯಗಳೂ) ಅಥವಾ ‘ದಾಲ್-ಬಾತ್’ (ಅಕ್ಕಿ ಮತ್ತು ದಿದಳ ಧಾನ್ಯ)ಗಳು ಸಮಗ್ರ ಭಾರತದ ಜೀವನದ ಆದಾರಭೂತವಾದ ಆರ್ಥಿಕ ಪರಿಸ್ಥಿಯ ಸಂಕೇತ ಸ್ವರೂಪವಾಗಿ ನಿಲ್ಲುತ್ತವೆ. ಸಹಸ್ರಾರು ಪ್ರಂತೀಯ ಪ್ರಭೇದಗಳಿದ್ದರೂ ಭಾರತೀಯ ಆಹಾರದ ತಿರುಳು ಒಂದೇ ಬಗೆಯದು, ಅನ್ನ ಅಥವಾ ಚಪಾತಿ, ಬೇಳೆ ಅಥವಾ ದ್ವಿದಳಧಾನ್ಯ ಮತ್ತು ತರಕಾರಿ ಸಾರು, ಪಲ್ಯ ಅಥವಾ ಚಟ್ನಿ ಮತ್ತು ಮಜ್ಜಿಗೆ ಮುಂತಾದ ಪದಾರ್ಥಗಳು, ಜೊತೆಗೆ ಬೆಣ್ಣೆಯಿಂದ ಮಾಡಿದ ಸಿಹಿ ತಿಂಡಿ, ಮಾಂಸವನ್ನು ತೆಗೆದುಕೊಳ್ಳುವರಾದರೂ ಅದು ತರಕಾರಿ ಪಲ್ಯಗಳ ಬದಲಾಗಿ ಮಾತ್ರ. ಅಲ್ಲದೆ ಭಾರತದ ಹವಾಗುಣದ ಪ್ರಕೃತಿಯಿಂದ ಮತ್ತು ಆರ್ಥಿಕ ಸ್ಥಿತಿಗತಿಯ ದೃಷ್ಟಿಯಿಂದ ಅರ್ಜೆಂಟೈನಾದ ಜನರ ಅಥವಾ ಮಂಗೋಲರ ಹಾಗೆ ಮಾಂಸ ಇಲ್ಲಿನವರ ಮುಖ್ಯ ಆಹಾರವಾಗಿರಲು ಸಾಧ್ಯವಿಲ್ಲ.

ಆಹಾರ ಉಡಿಗೆ ತೊಡಿಗೆ ಮತ್ತು ಲೌಕಿಕ ಜೀವನವ್ಯವಹಾರಕ್ಕೆ ಸಂಬಂಧಿಸಿದ ಇತರ ಪದಾರ್ಥಗಳನ್ನು ಬಿಟ್ಟರೆ ಭಾರತೀಯ ಮನೋಧರ್ಮದ ವೈಲಕ್ಷಣ್ಯವು ಎಲ್ಲ ಬಗೆಯ ಪ್ರಾಂತೀಯ ಹಾಗೂ ಮತೀಯ ಸಂಕುಚಿತತೆಗೆ ಅತೀತವಾಗಿನಿಂತ ಕೆಲವು ವಿಚಾರಗಳೊಡನೆ ಸಂಬಂಧಪಟ್ಟಿರುವಂತೆ ತೋರುತ್ತದೆ. ಭಾರತೀಯ ನಾಗರಿಕತೆಯ ವೈಶಿಷ್ಟ್ಯವೆನಿಸಿದ ಐಕ್ಯನಿಷ್ಠ ವೈವಿಧವ್ಯವು ವಿರೋಧಗಳಲ್ಲಿರುವ ಸಾಮರಸ್ಯವನ್ನು ಬಿಂಬಿಸುತ್ತದೆ. ಈ ಸಾಮರಸ್ಯ ಕೆಳಗೆ ವಿವರಿಸುವ ವಿಷಯಗಳನ್ನಾಧರಿಸಿದೆ, ವೈವಿಧ್ಯಾಂತರ್ಗತ ಐಕ್ಯವು ಸರ್ವಾಂತರ‍್ಯಾಮಿಯಾಧರೂ ಸರ್ವಾತೀತವಾದ ಅಗೋಚರ ಸತ್ಯದ ವ್ಯಕ್ತರೂಪವೆನಿಸಿದ ಎಲ್ಲ ಜೀವರಾಶಿಯೂ ಒಂದೇ ಎಂಬ ಮನೋಭಾಗ ಜೀವನದಲ್ಲಿಯೂ ಅನುಭವದಲ್ಲಿಯೂ ಒಂದಕ್ಕೊಂದು ಸ್ವಷ್ಟವಾಗಿ ಸಂಬಂಧಪಡದೆ ಖಂಡಖಂಡವಾಗಿ ಕಾಣುವ ಭಾಗಗಳನ್ನು ಅಖಂಡವಾಗಿ ಒಂದುಗೂಡಿಸಬೇಕೆಂಬ ತುಂಬು ಹಂಬಲ, ಅವುಗಳನ್ನು ಭಾವುಕವಾಗಿ ಒಂದುಗೂಡಿಸಲು ಪ್ರಯತ್ನಿಸುವಾಗ ಬೌದ್ಧಿಕ ನಿಷ್ಠೆಯಿಂದ ನಡೆದುಕೊಳ್ಳುವುದು, ಜೊತೆಜೊತೆಯಾಗಿ ಸಾಗುವ ಜೀವನದ ದುಃಖ ದಾರಿದ್ರ್ಯಗಳನ್ನು ಗಮನಿಸಿ, ಅವುಗಳ ಮೂಲಕಾರಣಗಳನ್ನು ಮೂಲೋತ್ಪಾಟನ ಮಾಡಲು ಪ್ರಯತ್ನಿಸುವುದು ಎಲ್ಲ ಜೀವರಾಶಿಯೂ ಪವಿತ್ರಬೆಂಬ ಭಾವನೆ, ಎಲ್ಲ ಪ್ರಾಣಿಗಳಲ್ಲೂ (ಕ್ರಿಯಾರಹಿತ ತಾತ್ವಿಕ ರೂಪದ) ಅಹಿಂಸೆ ತೋರುವುದು (ಅಥವಾ ಹಿಂಸಿಸದಿರುವುದು) ಕ್ರಿಯಾತ್ಮಕವಾದ ಕರುಣೆ ಮತ್ತು ಮೈತ್ರಿ-ಅಂದರೆ ಕಾರ್ಯರೂಪದ ಅನುಕಂಪೆ ಹಾಗೂ ಸೇವಾಬುದ್ದಿ ಮತ್ತು ಎಲ್ಲಕ್ಕೂ ಮಿಗಿಲಾಗಿ ಇತರರ ನಂಬಿಕೆ ಹಾಗೂ ಅಭಿಪ್ರಾಯಗಳ ವಿಚಾರದಲ್ಲಿ ಹಿರಿದಾದ ಸಹನೆ ತೋರುವುದು.

ಭಾಷಾ ಸಂಸ್ಕೃತಿಕ ವರ್ಗಗಳ ಮೂಲಸ್ವಭಾವವನ್ನು ಮೀರಿ ಭಾರತೀಯ ಜನಜೀವನ ಮತ್ತು ಭಾರತೀಯ ಮನೋಧರ್ಮವನ್ನು ಸರ್ವತ್ರ ವ್ಯಾಪಿಸಿದ ಪೂರ್ವೋಕ್ತ ಆದರ್ಶವನ್ನು ರೂಪಿಸಲು ನಿಷಾದ ಮತ್ತು ಕಿರಾತ, ಆರ್ಯ ಮತ್ತು ದ್ರಾವಿಡ ಸಂಸ್ಕೃತಿಗಳೆಲ್ಲಾ ಒಟ್ಟಿಗೆ ಸೇರಿದುವು. ಪ್ರತಿಯೊಂದು ಗುಂಪಿನ ಮಾನಸಿಕ ಪ್ರವೃತ್ತಿಯನ್ನು ಖಚಿತವಾಗಿ ಉಲ್ಲೇಖಿಸಲು ಸಾಧ್ಯವಿಲ್ಲ. ಆದರೆ ಮೂಲ ಅಂಶದ ಆಧಿಕ್ಯ ಎಲ್ಲಿದೆಯೋ ಅಲ್ಲಿ -ನಿಷಾದ, ಕಿರಾತ, ದ್ರಾವಿಡ ಅಥವಾ ಯಾವುದೇ ಪ್ರಕಾರದ್ದಾಗಿರಲಿ-ಇತರ ಕಡೆಗಳಲ್ಲಿ ಪ್ರಧಾನವಾಗಿರದ ಕೆಲವು ವಿಶಿಷ್ಟವಾದೆ ಎತ್ತಿ ತೋರಿಸಬಹುದಾದ ಲಕ್ಷಣಗಳನ್ನು ನಾವು ಸುಲಭವಾಗಿ ಊಹಿಸಬಹುದು ಅಥವಾ ಅನುಮಾನಿಸಬಹುದು.

ನೀಗ್ರೋ ಮಾದರಿಯ ಜನ (ನೀಗ್ರೋಯ್ಸ್ ಜನ)

ಒಂದು ಪ್ರತ್ಯೇಕ ಅಸ್ತಿತ್ವವುಳ್ಳ ಜನಾಂಗದವರಾಗಿ ಭಾರತಕ್ಕೆ ಹೊರಗಿನಿಂದ ಮೊಟ್ಟಮೊದಲು ಬಂದವರೆಂದರೆ ನೀಗ್ರೋ ಮಾದರಿಯ ಜನ. ಅವರು ಮಾನವ ಸಂಸ್ಕೃತಿಯ ಅತ್ಯಂತ ಕೆಳಗಿನ ಮಟ್ಟದಲ್ಲಿದ್ದವರು, ಮಾನವನು ಇನ್ನೂ ಆಹಾರವನ್ನು ಬೆಳೆಯದೆ ಅದನ್ನು ಹುಡುಕಿಕೊಂಡು ಅಲೆಯುತ್ತಿದ್ದ ಕಾಲಕ್ಕೆ ಸೇರಿದವರಾಗಿದ್ದರು. ಭಾರತೀಯ ಕಲೆಯಲ್ಲಿ (ಶಿಲ್ಪ ಹಾಗೂ ಚಿತ್ರಕಲೆಗಳೆರಡರಲ್ಲೂ, ಉದಾ : ಅಜಂತಾದಲ್ಲಿ) ಏಳನೆಯ ಮತ್ತು ಎಂಟನೆಯ ಶತಮಾನದವರೆಗೂ ನೀಗ್ರೋ ಮಾದರಿಯ ಲಕ್ಷಣಗಳು ಕಂಡುಬಂದಿವೆ. ಆದರೆ ಇಂದು ಅಸ್ಸಾಮಿನ ಮಂಗೋಲೀಯ ನಾಗಾಗಳನ್ನು ಬಿಟ್ಟರೆ ಆ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತಿಲ್ಲ. ಆದರೆ ಇಂದು ದ್ರಾವಿಡ ಭಾಷೆಯ ಉಪಭಾಷೆಗಳನ್ನು ಆಡುತ್ತಾ ಬಹಳ ಕಡಿಮೆ ನೀಗ್ರೋ ಮಾದರಿಯ ಜನರು ದಕ್ಷಿಣ ಭಾರತದ ಕಾಡು-ಮೇಡುಗಳಲ್ಲಿದ್ದಾರೆ. ಮೊಟ್ಟಮೊದಲಲ್ಲಿ ಭಾರತಕ್ಕೆ ಮೂಲತಃ ಬಂದ ನೀಗ್ರೋ ಮಾದರಿಯ ಜನವನ್ನು ಹೋಲುವ ಪೂರ್ತಿ ನೀಗ್ರೋ ಮಾದರಿಯ ಜನ ಅಂಡಮಾನ್ ದ್ವೀಪಗಳಲ್ಲಿ ಮಾತ್ರ ಕಂಡುಬಂದಿದ್ದಾರೆ, ಭಾರತೀಯತನದ ಮತ್ತು ಭಾರತೀಯ ರೀತಿಯ ವಿಚಾರಪ್ರವೃತ್ತಿಯ ವಿಕಾಸದಲ್ಲಿ ನೀಗ್ರೋ ಮಾದರಿಯ (ನೀಗ್ರೋಯ್ಸ್) ನೀಗ್ರೀಟೊಗಳ (ನೀಗ್ರೋ ಜನರ) ಸರಿಯಾದ ಕಾಣಿಕೆ ಏನೆಂಬುದು ಇಂದಿಗೂ ಊಹಾಪೋಹಗಳ ಸಂದಿಗ್ಧ ವಿಚಾರವಾಗಿಯೇ ಉಳಿದೆದೆ.

ಮಾನವ ಶಾಸ್ತ್ರಜ್ಞರು ಲೌಕಿಕ ಕ್ಷೇತ್ರದಲ್ಲಿ ನೀಗ್ರೋಮಾದರಿಯವರಿಗೆ ಬಿಲ್ಲನ್ನು ಕಂಡು ಹಿಡಿದವರೆಂಬ ಗೌರವವನ್ನು ಆರೋಪಿಸಬಹುದೆಂದು (ಬಿಲ್ಲನ್ನು ಇತರ ಜನಾಂಗಗಳೂ ಸ್ವತಂತ್ರವಾಗಿ ಕಂಡುಹಿಡಿದರಾಧರೂ) ಅಭಿಪ್ರಾಯಪಟ್ಟಿದ್ದಾರೆ. ಗರ್ಭಧಾರಣೆ ಮತ್ತು ಸತ್ತವರ ಪ್ರೇತ-ಇವುಗಳಿಗೂ ಅಶ್ವತ್ಥವೃಕ್ಷಕ್ಕೂ ಪ್ರಪಂಚದ ಬಹುಭಾಗಗಳಲ್ಲಿ ವಿಶೇಷವಾಗಿ ಭಾರತದಲ್ಲಿ ಒಂದು ಸಂಬಂಧವನ್ನು ಕಲ್ಪಸಲಾಗಿದೆ. ಈ ಕಲ್ಪನೆ ನೀಗ್ರೋ ಮಾದರಿಯವರಿಂದ ವಂಶಪಾರಂಪರ್ಯವಾಗಿ ಬಂದುದಿರಬೇಕೆಂದು ಭಾವಿಸಲಾಗಿದೆ. ಇಂಡೋನೇಷಿಯಾ ಮತ್ತು ಅದರ ನೆರೆಯಲ್ಲಿರುವ ಭಾಗಗಳಲ್ಲಿ ಸಿಗುವ, ಸತ್ತವರು ಸ್ವರ್ಗಕ್ಕೆ ಹೋಗುವ ದಾರಿಯನ್ನು ಪ್ರತೀಕಾರ ಮನೋಭಾವದ ಭೂತವು ಕಾವಲು ಕಾಯುತ್ತಿದೆಯೆಂಬ ದಂತಕಥೆ ಸಹ ಮೂಲದಲ್ಲಿ ನೀಗ್ರೋ ಮಾದರಿಯವರ ನಂಬಿಕೆಯಿರಬೇಕೆಂದು ಅನುಮಾನಿಸಲಾಗಿದೆ.[1] ಮೀನುಗಳೂ. ಪ್ರಾನಿಗಳು, ಗಿಡಗಳು-ಇವುಗಳಿಗೆ ಸಂಬಂಧಿಸಿದ ಕುಲದೇವತಾಪೂಜಾ ಪದ್ಧತಿಯ ಕೆಲವು ನಂಬಿಕೆಗಳು ಕೂಡ ಪ್ರಾರಂಭದಲ್ಲಿ ನೀಗ್ರೋಮಾದರಿಯವರಿಗೆ ಸೇರಿದ್ದಿರಬೇಕು ಮತ್ತು ಅವರನ್ನ ನಿರ್ಮೂಲ ಮಾಡಿದ ಜನರಿಗೆ ಆ ಪದ್ಧತಿಗಳು ದತ್ತವಾಗಿರಬೇಕು.

ಆಸ್ಟ್ರಿಕ್ ಜನರು

ಭಾರತಕ್ಕೆ ಸೇರಿದ ‘ಆಸ್ಟ್ರಿಕ್’ ವರ್ಗದ ಜನರ ಪ್ರತಿನಿಧಿಗಳೆಂದರೆ, ಇಂದಿನ ಕೋಲ್ ಅಥವಾ ಮುಂಡಾ ಜನವರ್ಗಗಳು. ಇವರೇ ವೇದಕಾಲೀನ ನಿಷಾದರು. ೧೫೦೦ ವರುಷಗಳ ಹಿಂದಿನ ಕೊಲ್ಲರು ಹಾಗೂ ಭಿಲ್ಲರು ಮತ್ತು ಶಬರರು ಹಾಗೂ ಪುಳಿಂದರು. ಇಂದು ನಾವು ಕಾಣುವ ಈ ಜನರಿಂದ ಮೂಲ ಆಸ್ಟ್ರಿಕ್ ಮಾದರಿಯ ಜನರೂ ಆಹಾರಾನ್ವೇಷಕರಾಗಿ ಭಾರತಕ್ಕೆ ಬಂದಿರಬಹುದು. ಅವರು ತಮ್ಮೊಡನೆ ಪುರಾತನ ಶೀಲಾಯುದ ಸಂಸ್ಕೃತಿಯನ್ನೂ ತಂದಿರಬಹುದು, ಆದರೆ ಅವರು ಭಾರತದ ನೆಲದ ಮೇಲೆ ವಿಶಿಷ್ಟವಾದ ಸಂಸ್ಕೃತಿಯೊಂದನ್ನು ಕ್ರಮೇಣ ಬೆಳಸಿದಂತೆ ತೋರುತ್ತದೆ. ಅಗೆಯುವ ಕೋಲಿನಿಂದ ನಡೆಸುತ್ತಿದ್ದ ಆದಿಕಾಲದ ವ್ಯವಸಾಯ (ಪೂರ್ವ ಭಾರತದಲ್ಲಿ ಅಸ್ಸಾಂ ಮತ್ತು ಇತರ ಬೆಟ್ಟಪ್ರದೇಶದಲ್ಲಿ ಕಾಣುವ ಝೂಮ್ ಸಾಗುವಳಿ). ಕೈಗುದ್ದಲಿಯ ಸಾಗುವಳಿ (ನೇಪಾಳದ ನೇವಾರರಲ್ಲಿ ಇಂದಿಗೂ ಬಳಕೆಯಲ್ಲಿದೆ) ಇವು ಆಸ್ಟ್ರಿಕ್ ಮಾದರಿಯವರ ಸಂಸ್ಕೃತಿಯಲ್ಲಿ ಸೇರಿಕೊಂಡಿದ್ದುವು.

ಆಸ್ಟ್ರಿಕರ ತರುವಾಯದ ವಂಶಜರು ಇಲ್ಲವೆ ಅನೇಕ ಕೋಲರು, ಕೆಲವು ನಿರ್ದಿಷ್ಟ ಮಾನಸಿಕ ಲಕ್ಷಣಗಳನ್ನು ತೋರಿಸುವರು. ಈ ಲಕ್ಷಣಗಳು ಇಂದಿಗೂ ಭಾರತೀಯರ ಬಹುಸಂಖ್ಯೆಯ, ಅದರಲ್ಲಿಯೂ ಆಸ್ಟ್ರಿಕ್ ಅಂಶ ಅಧಿಕವಾಗಿರುವ, ಉತ್ತರಕ್ಕಿರುವ, ಗುಂಪಿನ ವೈಲಕ್ಷಣ್ಯವಾಗಿವೆ. ಅವರು ಇತರ ಜನರೊಡನೆ ವ್ಯವಹರಿಸುವಲ್ಲಿ ಸಾಮಾನ್ಯವಾಗಿ ಆಕ್ರಮಣಕಾರಿಯಾಗಿದೆ ತಟಸ್ಥರಾಗಿರುತ್ತಿದ್ದರು. ಆದರೆ ಅವರು ಹೊರಗಿನ ಆಕ್ರಮಣಕಾರಿ ಶಕ್ತಿಯನ್ನು ದಮನಗೊಳಿಸಬಲ್ಲ ಒಂದು ಆತ್ಮ ಶಕ್ತಿಯನ್ನೂ ಛಲ ಸ್ವಭಾವವನ್ನೂ ಪಡೆದಿದ್ದರು. ಅವರು ಹೊರಗಿನವರ ಪ್ರಭಾವಕ್ಕೆ ಒಳಗಾಗವ ಪ್ರವೃತ್ತಿಯುಳ್ಳವರಾದರೂ ತಾವು ಏನನ್ನು ಸ್ವೀಕರಿಸುವರೋ ಅದನ್ನು ತಮ್ಮದನ್ನಾಗಿ ಸೇರ್ಪಡೆ ಮಾಡಿಕೊಳ್ಳಬಲ್ಲ ಶಕ್ತಿ ಪಡೆದಿದ್ದರು. ಅವರು ಪ್ರತಿಯೊಂದನ್ನೂ ಪ್ರಶ್ನಿಸದೆ ಸುಲಭವಾಗಿ ನಂಬುವರು. ಅವರ ಕಲ್ಪನಾಶಕ್ತಿ ಕಾವ್ಯಪರವಾಗಿರದೆ, ಅವರನ್ನು ಮೂಢನಂಬಿಕೆಯುಳ್ಳವರನ್ನಾಗಿ ಮಾಡಿತ್ತು. ಹೊಂದಿಕೆಯಿಂದ ಮಾಡಬೇಕಾದ ಕೆಲಸದಲ್ಲಿಯೂ ಹಬ್ಬ-ಹುಣ್ಣಿಮೆ ಹಾಗೂ ನರ್ತನಗಳಲ್ಲಿಯೂ ಅವರು ಸಂಘಜೀವಿಗಳಾಗಿದ್ದು. ಸಹವಾಸಪ್ರಿಯರಾಗಿದ್ದರು. ಸಾಮಾಜಿಕ ವ್ಯವಹಾರದಲ್ಲಿ ಕೆಲವು ಕಟ್ಟುಪಾಡಿಗೊಳಪಟ್ಟು, ಒಳಪಂಗಡಗಳ ನಡುವೆ ಸ್ವತಂತ್ರ ವರ್ತನೆಗೆ ಅವಕಾಶ ಕೊಡುವರು. ಅವರು ಪ್ರಣಯಶೀಲಪ್ರವೃತ್ತಿ ಪಡೆದವರಾದರೂ ಕುಟುಂಬಜೀವನನಿಷ್ಠೆ ಅವರ ಗುರಿಯಾಗಿತ್ತು. ಭಾರತೀಯ ಜನಾಂಗದ ಇತರ ಅನೇಕ ಗುಂಪುಗಳಿಗಿಂತಲೂ ಆಸ್ಟ್ರಿಕ್ ಜನರ ಸಮಾಜ ರಚನೆಯಲ್ಲಿ ಒಂದು ಬಗೆಯ ಸಮಾನತ್ವದ ಪ್ರಜ್ಞೆ ವ್ಯಾಪಿಸಿದೆ.[2] ತಮಗಿಂತಲೂ ಹೆಚ್ಚು ಶಕ್ತಿಸಂಪನ್ನರೂ ಆಕ್ರಮಣಶೀಲರೂ ಆದ ದ್ರಾವಿಡರು, ಆರ್ಯರು ಮತ್ತು ಸಮ್ಮಿಶ್ರ ದ್ರಾವಿಡಾರ್ಯರಿಗೂ ಹಾಗೂ ಕಿರಾತರಿಗೂ ಬಹುಶಃ ಆಸ್ಟ್ರಿಕ್ ಜನರ ಮೃದುಸ್ವಭಾವದ ಮನೋಭಾವವೇ ಮೇಲ್ಗೈಯಾಗುವ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟಿರಬೇಕು.

ಐಹಿಕ ಜೀವನವನ್ನು ಗಮನಿಸಿದರೆ ಮಾನವಶಾಸ್ತ್ರಜ್ಞರ ಅಭಿಪ್ರಾಯದಂತೆ, ಗಟ್ಟಿ ಮರದಿಂದ ಮಾಡಿದ ಎಸೆಯುವ ಆಯುಧ ಮತ್ತು ಸಿಡಿಮದ್ದು-ಪುರಾತನ ಆಯುಧಗಳಲ್ಲಿ ಎರಡು- ಪೂರ್ವ ಆಸ್ಟ್ರೋ ಮಾದರಿಯವರ ಮೂಲದಿಂದ ಬಂದದ್ದು. ಭಾರತೀಯ ಸಾಹಿತ್ಯ ಪ್ರಕಾರಗಳಲ್ಲೊಂದಾದ ಪ್ರಾಣಿಕಥಾಪರಂಪರೆಗೆ ಬಹುಶಃ ಆಸ್ಟ್ರಿಕ್ ಕಲ್ಪನೆಯೊಂದಿಗೆ ಕುಲ ಇವುಗಳ ಮೂಲ ಬಹಳ ದೂರ ಆಸ್ಟ್ರಿಕ್ ಜಗತ್ತಿಗೆ ಹೋಗುತ್ತದೆಂದು ಸಕಾರಣವಾಗಿ ಪರಿಗಣಿಸಬಹುದು.

ಕೆಲವು ತಾತ್ವಿಕ ವಿಚಾರಧಾರೆಗಳ ನೆಲೆ ಆಸ್ಟ್ರಿಕ್ ಮೂಲ ಪಡೆದಿರುವಂತೆ ತೋರುತ್ತವೆ. ಭಾರತದ ಹೊರಗಿನ ಭಾರತೀಯ ಆಸ್ಟ್ರಿಕ್ ಜನರ ಬಂಧುಗಳ, ಅದರಲ್ಲಿಯೂ ಪಾಲಿನೇಷಿಯಾದವರ ‘ಮನ’ ಇಲ್ಲದೆ ದೈವಿಕ ಸಾರದ ವಿಚಾರ ಹೊಂದಿದ್ದಾರೆ. ‘ಮನ’ವೆಂಬುದು ವೈಯಕ್ತಿಕ ವಸ್ತುಗಳನ್ನೂ ಜೀವಿಗಳನ್ನೂ ಇಡೀ ವಿಶ್ವವನ್ನೂ ವ್ಯಾಪಿಸಿರುತ್ತದೆ. ‘ಮನ’ದ ಈ ವಿಚಾರ ಭಾರತದ ಪುರಾತನ ಆಸ್ಟ್ರಿಕ್ ಜನರಲ್ಲಿ ಪ್ರಚಾರದಲ್ಲಿತ್ತೆಂದು ನ್ಯಾಯವಾಗಿ ನಿರೀಕ್ಷಿಸಬಹುದು. ಬ್ರಹ್ಮನು ವಿಶ್ವಾತೀತನಾಗಿ ಹಾಗೂ ವಿಶ್ವಾಂತರ್ಯಾಮಿಯಾಗಿ ವ್ಯಾಪಿಸಿದ್ದಾನೆಂಬ ಅನಂತರದ ಹಿಂದೂ ಕಲ್ಪನೆ ಬಹುಶಃ ಈ ‘ಮನ’ದ ವಿಚಾರವನ್ನು ಅವಲಂಬಿಸಿರಬೇಕು. ಭಾರತೀಯ ಸೃಷ್ಟಿ ಸಿದ್ಧಾಂತಕ್ಕೂ[3] ಪಾಲಿನೇಷಿಯನರ, ಮವೋರಿಗಳ ಮತ್ತು ಇತರರ ಸೃಷ್ಟಿ ಸಿದ್ದಾಂತಕ್ಕೂ ಆಶ್ಚರ್ಯಕರ ಹೊಂದಾಣಿಕೆಯಿದೆ. ಅನಾದಿಕಾಲದ ರೂಪರಚನೆಯಿಲ್ಲದೆ ತಮಸ್ಸಿನಿಂದಲೂ ಅಸತ್ತಿನಿಂದಲೂ ಬೌತಿಕ ಪ್ರಪಂಚ ವಿಕಾಸವಾಯಿ ತೆಂದು ಈ ಸಿದ್ಧಾಂತ ವಿವರಿಸುತ್ತದೆ. ವಿಶ್ವವೊಂದು ಅತಿ ದೊಡ್ಡದಾದ ತತ್ತಿ (ಬ್ರಹ್ಮಾಂಡ, ಪರಮ ಚೇತನಸ್ವರೂಪನಿಗೆ ಸೇರಿದ ಅಧ್ಯಾತ್ಮಿಕ ತತ್ತಿ) ಎಂಬ ಕಲ್ಪನೆ ಹಾಗೂ ಅನಂತಾತೀತ ಶಕ್ತಿ ತನ್ನಷ್ಟಕ್ಕೆ ತಾನೇ ಪ್ರಾಣಿದೇಹಗಳಲ್ಲಿ ( ಮೀನು, ಆಮೆ, ವರಾಹ) ಕಾಣಿಸಿಕೊಳ್ಳುವ (ಅವತಾರ) ನಂಬಿಕೆ, ಮೀನಿನ ದೇಹದ ವಾಸನೆ ಪಡೆದಿದ್ದವಳ (ಮತ್ಸ್ಯಗಂಧಾ) ಸತ್ಯವತಿಯ ಕಥೆಯೇ ಮೊದಲಾದ ಕೆಲವು ಪೌರಾಣಿಕ ಹಾಗೂ ಪ್ರಣಯಾತ್ಮಕ ಕಥೆಗಳೂ, ದಿವಸ ಹಾಗೂ ಮಾಸಗಳನ್ನು ಚಂದ್ರನ ಗತಿಯ (ತಿಥಿಗಳ) ಮೂಲಕ ಎಣಿಕೆ ಮಾಡುವುದು – ಇವೆಲ್ಲಕ್ಕೂ ಪಾಲಿನೇಷಿಯಾದ ಆಸ್ಟ್ರಿಕ್ ಜನರಲ್ಲಿ ಸಮಾನ ಕಲ್ಪನೆಗಳಿವೆಯೆಂಬುದನ್ನು ನಾವು ಗಮನದಲ್ಲಿಡಬೇಕು.

ಪೂರ್ಣಿಮಾಚಂದ್ರ (ರಾಕಾ)ನಿಗೆ ಮತ್ತು ಅಮಾವಾಸ್ಯೆ (ಕುಹೂ)ಗಳಿಗೆ ಇರುವ ಸಂಸ್ಕೃತ ಹೆಸರುಗಳ ಪದಗಳು ಅವಕ್ಕೆ ಸಮಾನ ಧ್ವನಿಯ ಸದೃಶ ಪದಗಳನ್ನು ಪಾಲಿನೇಷಿಯಾದ ಆಸ್ಟ್ರಿಕ್ ಭಾಷೆಗಳಲ್ಲಿ (ಮಓರಿ, ರಕಉ-ನುಇಅ, ಮಂಗೈಯನ್, ರಕೌ ತೈಹಿತಿಆನ್, ರ’ಅಉ, ಮುಅ ಮತ್ತು ಹವಾಯಿಯನ್) ಇಅ’ ಅಉ-ಇವು ಹುಣ್ಣಿಮೆಯ ರಾತ್ರಿಗೆ ಇರುವ ಪದಗಳು ಮತ್ತು ಮಾರ್ಕ್ಸೋಸನ್, ಕು’ಉ ಎಂಬುದು ಹದಿನೇಳನೆಯ ರಾತ್ರಿಗೆ, ಅಮಾವ್ಯಾಸೆಯ ಮೊದಲ ರಾತ್ರಿಗೆ)[4] ಪಡೆದಿವೆಯೆಂಬುದು ಆಶ್ಚರ್ಯವನ್ನುಂಟುಮಾಡುತ್ತದೆ. ಮರಣಾನಂತರದ ಮಾನವನ ಆತ್ಮದ ಬಗೆಗಿದ್ದ ಆಸ್ಟ್ರಿಕ್ ವಿಚಾರಗಳು ಸಂಸಾರ ಅಥವಾ ದೇಹಾಂತರದ ಕಲ್ಪನೆಗೆ ಇರುವ ಮುಖ್ಯ ಆಧಾರಗಳಲ್ಲಿ ಒಂದಾಗಿದೆ. ಮುಂದೆ ಹಿಂದೂ ಧರ್ಮದಲ್ಲಿ ಇದಕ್ಕೆ ನೈತಿಕ ಹಾಗೂ ತಾತ್ವಿಕಾಂಶಗಳನ್ನು ಮತ್ತೆ ಸೇರಿಸಲಾಯಿತು

ದ್ರಾವಿಡರು

ಭಾರತದ ರಂಗದ ಮೇಲೆ ಮುಂದೆ ಬಂದ ಭಾಷಾ-ಸಂಸ್ಕೃತಿ ಜನವರ್ಗವೆಂದರೆ ದ್ರಾವಿಡರದು. ಮೆಡಿಟರೇನಿಯಾದ ಮಾನವ ತನ್ನ ಮೂರು ಬಗೆಯಲ್ಲಿ ವಿಕಾಸಗೊಂಡ ಅನಂತರದ ಆಕಾರವನ್ನು ದ್ರಾವಿಡರು ಪ್ರತಿನಿಧಿಸಿದರು. ಅವರೆಲ್ಲ ಮೂಲ ದ್ರಾವಿಡ ಭಾಷೆಯ ರೂಪವನ್ನು ಆಡುತ್ತಿದ್ದರೆಂದು ಭಾವಿಸಲಾಗಿದೆ. ಸಂಸ್ಕೃತದಲ್ಲಿ ನಮಗೆ ಸಿಗುವಂತೆ ದ್ರವಿಡ ಅಥವಾ ದ್ರವಿಡ ಎಂಬುದು ಈ ಜನರ ಕೇವಲ ರಾಷ್ಟ್ರೀಯ, ಜಾತೀಯ ಅಥವಾ ಬುಡಕಟ್ಟಿನ ಹೆಸರಿನೊಂದು ಮಾರ್ಪಾಟು. ಇದು ದ್ರವಿಱ ಎಂಬ ರೂಪದಲ್ಲಿ ಕ್ರಿ.ಪೂ.ದ ಮೊದಲ ಸಾವಿರ ವರುಷದ ಪ್ರಥಮಾರ್ಧದಲ್ಲಿಯೇ ದಕ್ಷಿಣದಲ್ಲಿ ಬಳಕೆಯಲ್ಲಿದ್ದಿತು ಕ್ರಮೇಣ ಈ ಪದದಿಂದ ಹಳೆಯ ತಮಿಳಿನಲ್ಲಿ ತಮಿೞ್ ಎಂಬುದೂ, ಅದರಿಂದ ತಮಿಳ್ ಎಂಬ ಪದವೂ ಬಂದಿದೆ.[5]

ದ್ರಾವಿಡ ಭಾಷೆಯಲ್ಲಿ ಆಡುವ ಜನರು ಇರಾನಿನಿಂದ ಭಾರತದವರೆಗೆ ವ್ಯಾಪಿಸಿದರು. ಮೊದಲು ಅವರು ಆರ್ಯನರಿಗೆ ದಾಸ ಮತ್ತು ದಸ್ಸು (ಇರಾನಿನಲ್ಲಿ ಈ ಹೆಸರುಗಳು ದಹ ಮತ್ತು ದಹ್ಯು ಎಂಬ ಪರಿವರ್ತಿತವಾದುವು) ಎಂಬ ಎರಡು ಹೆಸರುಗಳಿಂದ ಪರಚಯವಾಗಿದ್ದಂತೆ ತೋರುತ್ತದೆ. ಹರಪ್ಪಾ ಅಥವಾ ಮೊಹೆಂಜೊದರೊಗಳಲ್ಲಿರುವಂತೆ ವಿಭವಾನ್ವಿತವಾದ, ಮುಂದುವರಿದ ಬರವಣಿಗೆಯ ವ್ಯವಸ್ಥೆಯನ್ನು ಕೂಡ ಪಡೆದ ನಗರ ನಾಗರಿಕತೆಯ ಅವಶೇಷಗಳನ್ನು ಬಹುಶಃ ದ್ರಾವಿಡರಿಗೇ ಆರೋಪಿಸಬೇಕು. ವೇಧರ್ಮಕ್ಕೆ ವಿರುದ್ಧವಾದ ಶಿವ ಮತ್ತು ಉಮಾ, ವಿಷ್ಣು ಮತ್ತು ಶ್ರೀಯರ ಪೂಜೆ ಮುಂತಾದ ಬ್ರಾಹ್ಮಣ ಹಿಂದೂ ಧರ್ಮದಲ್ಲಿನ ಕೆಲವು ಮೂಲಾಚರಣೆಗಳು ಹಾಗೂ ಅನುಭಾವ ಮತ್ತು ಯೋಗತತ್ವದ ವಿಚಾರ. ಆಚರಣೆ -ಇವೆಲ್ಲಾ ಭಾರತದಲ್ಲಿ ನೆಲಸಿದ ದ್ರಾವಿಡ ಭಾಷೆಯ ಮೆಡಿಟರೇನಿಯನರಿಂದ ಬಂದಿರುವಂತೆ ತೋರುತ್ತದೆ. ಆರ್ಯನರೇ ತಮ್ಮ ಮೂಲ ಸ್ಥಿತಿಯಲ್ಲಿ ವ್ಯವಸಾಯಕ್ಕಿಂತಲೂ ಹೆಚ್ಚಾಗಿ ತಮ್ಮ ಕುರಿಯ ಹಿಂಡು ಮತ್ತು ದನದ ಮಂದೆಯನ್ನೇ ಅವಲಂಬಿಸಿದ ಅರೆ ಅಲೆಮಾರಿಗಳಾಗಿದ್ದವರು. ಅವರು ನಗರಗಳನ್ನು ಪಡೆದವರಲ್ಲ. ಅವರ ದಳವಾಯಿಯ ವಾಸಸ್ಥಾನದ ಸುತ್ತ ಪುಟ್ಟ ದಸಿಗೋಡೆಗಳ ಗೋಡೆ ಕಟ್ಟಿರುತ್ತಿತ್ತು. ತಮ್ಮ ದನ ಕುರಿಗಳೊಡನೆ ಯುದ್ಧಕಾಲದಲ್ಲಿ ಇಂಥ ಕಡೆಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಈ ಕಾಪು ಗೋಡೆಗಳಿಗೆ ಪುರ ಅಥವಾ ಪುರೀ (ಗ್ರೀಕಿನಲ್ಲಿ ಪೊಲಿಸ್ ಎಂಬ ರೂಪದಲ್ಲಿ ಬರುವ ಆರ್ಯ ಭಾಷೆಯ ಪದ) ಎಂಬ ಹೆಸರಿದ್ದಿತು.

ಆದರೆ ದ್ರಾವಿಡರು ನಗರಗಳನ್ನು ಪಡೆದಿದ್ದರು. ಕಟ್ಟಿದ ಮನೆಗಳಿಂದ ಕೂಡಿದ ಪಟ್ಟಣವೆಂಬ ಅರ್ಥವನ್ನು ಸೂಚಿಸುವ ನಗರ ಎಂಬ ಪದವನ್ನು ದ್ರಾವಿಡವೆಂದು ವಿವಿರಿಸಲಾಗಿದೆ. ವ್ಯವಸ್ಥೆಯಲ್ಲೂ ದೈಹಿಕ ಶಕ್ತಿಯಲ್ಲೂ ದ್ರಾವಿಡರು ಹಾಗೂ ನಿಷಾದರಿಗಿಂತಲೂ ಬಹುಶಃ ಆರ್ಯನರು ಬಲಶಾಲಿಗಳಾಗಿದ್ದರು. ಆದರೆ ಸಾಮಾನು ಸಂರಂಜಾಮಿಗೆ ಸಂಬಂಧಿಸದ ಸಂಸ್ಕೃತಿಯಲ್ಲೂ ಬಹುಶಃ ಭಾವಾವೇಶ ಗುಣದಲ್ಲೂ ಅದರಲ್ಲಿಯೂ ಕಲೆ ಮತ್ತು ಆಧ್ಯಾತ್ಮ ಯೋಗದ ಕ್ಷೇತ್ರದಲ್ಲಿ – ಆರ್ಯರಿಗಿಂತ ದ್ರಾವಿಡರು ಶ್ರೇಷ್ಠರಾಗಿದ್ದರು. ಕಲೆಯ ವಿಚಾರದಲ್ಲಿ ಆರ್ಯರು ಭಾರತಕ್ಕೆ ಬರುವಾಗ ತಮ್ಮೊಡನೆ ಸಹಪ್ರವಾಸಿಕರಾಗಿದ್ದ ಪುರಾತನವಾದ ಋಗ್‌‌‌ವೇದ ದ್ರಾವಿಡ ಮತ್ತು ಇತರ ಆರ್ಯೇತರ ಪ್ರಭಾವದ ಲಕ್ಷಣಗಳನ್ನು ಸಾಕಷ್ಟು ತೋರಿಸುತ್ತದೆ. ವೇದಭಾಷೆ ಸಾಕಷ್ಟು ಸಂಖ್ಯೆಯು ಆರ್ಯೇತರ ಪದಗಳನ್ನು ಪಡೆದಿದೆ. ಇಂಡೋ ಆರ್ಯಭಾಷೆಯಲ್ಲಿ ಮೂರ್ಧನ್ಯ ಧ್ವನಿಗಳ ಬೆಳವಣಿಗೆಗೆ ಮೂರ್ಧನ್ಯಗಳೇ ವಿಶಿಷ್ಟ ಧ್ವನಿಗಳಾಗಿರುವ ದ್ರಾವಿಡಭಾಷೆಯೊಂದಿಗೆ ಸಮೀಪ ಸಂಪರ್ಕವನ್ನು ಬಹುಶಃ ಕಾರಣವೆಂದು ಆರೋಪಿಸಬಹುದು. ದ್ರಾವಿಡರ ಅನುಭಾವಪ್ರಜ್ಞೆ ದ್ರಾವಿಡರ ಧಾರ್ಮಿಕ ಪೂಜೆ ಮತ್ತು ದೈವದೊಡನೆ ಐಕ್ಯ ಪಡೆಯುವ ವಿಧಾನವಾದ ಅವರ ಯೋಗ -ಇವೆರಡರಲ್ಲಿ ಅವರ ಅನುಭಾವ ಜೀವನ ತನ್ನ ಅಭಿವ್ಯಕ್ತಿಯನ್ನು ಪಡೆದಿದೆ. ಹೀಗೆಯೇ ಕರ್ಮಾಚರಣೆಯ ಮೂಲಕ ಸತ್ತವರೊಡನೆ ನಿರಂತರ ಸ್ಪರ್ಶ ಪಡೆಯುವ ಅಭೀಪ್ಸೆಯಲ್ಲೂ ದ್ರಾವಿಡ ಪ್ರಜ್ಞೆ ವ್ಯಕ್ತವಾಗಿದೆ. ಅನಂತರದ ಹಿಂದೂ ಆಚರಣೆಯಾದ ಶ್ರಾದ್ದಕ್ಕೂ ಇದೇ ಆಧಾರ.

ಬದುಕಿನ ಹಿಂದೆ ಇರುವ ಕಾಣದ ಶಕ್ತಿಗಳ ಬಗ್ಗೆ ಆರ್ಯ ದೃಷ್ಟಿ ಸರಳ ಹಾಗೂ ಪುರಾತನವಾಗಿತ್ತು. ಮುವ್ವತ್ತಮೂರು ಸಂಖ್ಯೆಯಲ್ಲಿದ್ದ ದೇವರುಗಳು ಕೆಲವು ಸ್ವರ್ಗೀಯ ಪ್ರದೇಶಗಳನ್ನು ಪಡೆದವರಾಗಿದ್ದರು. ಅವರು ಮನುಷ್ಯತ್ವಾರೋಪಣೆಯವರಾಗಿರಲಿಲ್ಲ ಭಾಗಶಃ ಮನುಷ್ಯತ್ವದ ಭಾವನೆಯವರಾಗಿದ್ದರು ಮತ್ತು ಪ್ರಕೃತಿಯ ಶಕ್ತಿಗಳಾಗಿ ತಮ್ಮ ಮೂಲಾಂಶದ ಬಹುಭಾಗವನ್ನು ಉಳಿಸಿಕೊಂಡರು. ಆಗಿನ್ನೂ ಅವರು ವಿಗ್ರಹಗಳನ್ನಾಗಲಿ, ಪ್ರತೀಕಗಳನ್ನಾಗಲಿ ಹೊಂದಿರಲಿಲ್ಲ. ಆರ್ಯರವನು ಎತ್ತು, ಕುರಿ, ಆಡು ಅಥವಾ ಕೆಲವೊಮ್ಮೆ ಕುದುರೆಯನ್ನು ಕೊಂದು ಅದರ ಮಾಂಸವನ್ನೂ ಕೊಬ್ಬನ್ನೂ ಹಾಲು, ಬೆಣ್ಣೆ ಬಾರ‍್ಲಿರೊಟ್ಟಿ (ಪುರೋಡಾಶ) ಗಳೊಡನೆ ಮತ್ತು ಸೋಮಪಾನೀಯಗಳೊಡನೆ ಅಗ್ನಿಯ ಮೂಲಕ ದೇವರಿಗೆ ಅರ್ಪಿಸುತ್ತಿದ್ದನು. ದೇವರು ಈ ಆಹಾರ ಮತ್ತು ಮದ್ಯದ ಅರ್ಪಣೆಯಿಂದ ಸಂಪ್ರೀತನಾಗುತ್ತಿದ್ದ. ಇದಕ್ಕೆ ಪ್ರತಿಯಾಗಿ ದೇವರು ಪೂಜಕರಿಗೆ ಐಶ್ವರ್ಯ, ಮಕ್ಕಳು, ದೀರ್ಘ ಜೀವನ ಮತ್ತು ಶತ್ರುಗಳ ಮೇಲೆ ವಿಜಯ ಮುಂತಾದ ಅಪೇಕ್ಷೆಗಳನ್ನು ಸಲ್ಲಿಸುತ್ತಿದ್ದನು. ಇದೇ ಆರ್ಯರ ಹೋಮ ಅಥವಾ ಅಗ್ನಿಪೂಜೆಯೆಂಬ ಮತಾಚರಣೆ. ಇಂಡೋ-ಯುರೋಪೀಯ ಜಗತ್ತಿನ ತುಂಬ ಈ ಅಗ್ನಿಪಜೆಯನ್ನು ಕಾಣುತ್ತೇವೆ.

ಈ ಪದ್ಧತಿಗೆ ತೀವ್ರ ವ್ಯತಿರಿಕ್ತವಾಗಿದ್ದುದು ‘ಪೂಜಾ’ ಮತೀಯ ಪದ್ಧತಿ, ಹಿಂದೂಗಳ ಮತೀಯಾನುಸಾರ ಮಾಡುವ ಪಜಾವಿಧಿಯಲ್ಲಿ ಇಂದಿಗೂ ಹಿಂದೂಗಳಿಗೆ ಈ ಪದ್ಧತಿ ವೈಶಿಷ್ಟ್ಯ ಪರ್ಣವೂ ಸಾರ್ವಜನಿಕವೂ ಆಗಿದೆ. ಇದು ಬಹುಶಃ ಆರ್ಯೇತರವಾಗಿದ್ದು ಮೂಲದಲ್ಲಿ ದ್ರಾವಿಡರ ಮತಾಚರಣೆಯಾಗಿದೆ. ‘ಪೂಜಾ’ ಎಂಬ ಪದ ಮತ್ತು ಅದು ನಿರ್ದೇಶಿಸುವ ಮತೀಯ ಪ್ರಕ್ರಿಯೆ ಇವೆರಡೂ ಭಾರತಕ್ಕೆ ವಿಶಿಷ್ಟವಾಗಿವೆ. ಭಾರತದ ಹೊರಗಿರುವ ಭಾರತದ ಆರ್ಯರ ಜ್ಞಾನಿಗಳಲ್ಲಿ ಇವು ಸಿಗುವುದಿಲ್ಲ. ಪೂಜಾ ವಿಧಿಯ ವಿಧಾನ ಹೀಗಿದೆ. ಇಡೀ ವಿಶ್ವವೇ ದೇವರ ಚೈತನ್ಯರೂಪದಿಂದ ತುಂಬಿದೆ. ಒಂದು ಮೂರ್ತಿ ಚಿತ್ರ. ಮಡಕೆ ಮುತ್ತು ಅಥವಾ ಕಲ್ಲಿನ ಚೂರು, ಮರದ ಒಂದು ಶಾಖೆ-ಮುಂತಾದ ಕೆಲವು ವಿಶೇಷ ವಸ್ತುಗಳಲ್ಲಿ ಆ ಪರಮ ಚೈತನ್ಯವನ್ನು ಮಾಂತ್ರಿಕ ಪೂಜಾಚರಣೆಯಿಂದ ಆಹ್ವಾನಿಸಲಾಗುತ್ತದೆ. ಪ್ರಾಣಪ್ರತಿಷ್ಠಾ ಎಂದು ಕರೆಯಲಾದ ಈ ಪೂಜಾವಿಧಿ ನೆರವೇರಿಸಿದ ಮೇಲೆ ಸ್ಥಾಯೀ ಅಥವಾ ತಾತ್ಕಾಲಿಕವಾಗಿ ಆ ವಿಗ್ರಹ ಇಲ್ಲವೇ ವಸ್ತು ದೈವತ್ವದ ನೆಲೆಯಾಗುತ್ತದೆ. ಆನಂತರದ ವಿಗ್ರಹ ಇಲ್ಲವೆ ಪ್ರತೀಕವನ್ನು ಗೌರವಾನ್ವಿತ ಅತಿಥಿಯಂತೆ ಸತ್ಕರಿಸಲಾಗುವುದು. ಸಂಗೀತ ನರ್ತನಗಳಿಂದ ಮತ್ತು ಇತರ ರಾಜಯೋಗ್ಯ ವೈಭವಗಳಿಂದ ಅದನ್ನು ಕಾಣುವುದು. ಈ ಸಂಕೇತದ ಮೂಲಕ ಯಾವೊಬ್ಬ ಪಜೆ ಮಾಡುವವನೇ ಆಗಲಿ. ಆತನೂ ಸಹ ದೈವತ್ವದೊಡನೆ ಗಂಭೀರ ವೈಯಕ್ತಿಕ ಆಧ್ಯಾತ್ಮಿಕ ಸಂಬಂಧವನ್ನು ಪಡೆಯಬಹುದು. ವಾಸ್ತವವಾಗಿ ಮತದ ಅಳವಾದ ದೃಷ್ಟಿಯಲ್ಲಿ ಈ ದ್ರಾವಿಡ ಅಥವಾ ಆರ್ಯೇತರ ಮತಾಚರಣೆಯ ‘ಪೂಜಾ’ ವಿಧಾನ ದೈವತ್ವದೊಡನೆ ಆರ್ಯರ ಹೋಮಕ್ಕಿಂತಲೂ ಹೆಚ್ಚು ನಿಕಟವಾದ ಬಾಂಧವ್ಯಕ್ಕೆ ನೆರವಾಗುತ್ತದೆ. ಹೋಮದ ಪ್ರಕ್ರಿಯೆ ಮೂಲತಃ ‘ತೆಗೆದುಕೋ ಮತ್ತು ಅದರ ಪ್ರತಿಫಲವನ್ನು ಕೊಡು’ ಎಂಬ ತತ್ವವಾಗಿದೆ. ಪೂಜಾ ವಿಧಾನದಲ್ಲಿ ಹೋಮಕ್ರಮದಲ್ಲಿ ಇಲ್ಲದಿರುವ, ಭಕ್ತಿಯ ಮೂಲಕ ಪರಿತ್ಯಜನದ ಚಿತ್ತವೃತ್ತಿಯನ್ನು ಕಾಣುತ್ತೇವೆ ತರುವಾಯದ ಹಿಂದೂಧರ್ಮದಲ್ಲಿ ಈ ಎರಡೂ ಮತೀಯ ಪ್ರಕ್ರಿಯೆಗಳನ್ನು ಸಂಗಮಿಸಲಾಯಿತು, ಬ್ರಾಹ್ಮಣ ಹಿಂದೂಧರ್ಮದಲ್ಲಿ ಪೂಜಾ ಮತ್ತು ಹೋಮಗಳೆರಡೂ ಸ್ಥಾನ ಪಡೆದಿದೆ.

ಸಮಸ್ತ ವೇದಸಾಹಿತ್ಯದಲ್ಲಿ ಹೋಮ ಮಾತ್ರ ದೊರೆಯುತ್ತದೆ ಮತ್ತು ಈ ಮತಾಚರಣೆಗಿರುವ ಹೆಸರುಗಳಲ್ಲಿ ‘ಪಶುಕರ್ಮ’ ಅಂದರೆ ಪ್ರಾಣಿಗಳ ಸಮೇತ ಮಾಡುವ ಮತಪ್ರಕ್ರಿಯೆ ಎಂಬುದೂ ಒಂದು ದ್ರಾವಿಡಭಾಷೆಯಲ್ಲಿ ‘ಪೂ’ ಎಂದರೆ ಪುಷ್ಪ ಮತ್ತು ಚೆಯ್ ಅಥವಾ ಗೆಯ್ ಎಂಬ ಧಾತುವಿಗೆ ‘ಮಾಡು’ ಎಂಬರ್ಥವಿದೆ, ಆದುದರಿಂದ ಒಂದು ವಿವರಣೆಯಂತೆ ಪೂಚೆಯ್ ಅಥವಾ ಪ-ಗೆಯ್ ಅರ್ಥಾತ್ ಪುಷ್ಪಕರ್ಮವು ಆರ್ಯರ ಪಶುಕರ್ಮಕ್ಕೆ ದ್ರಾವಿಡರ ಪ್ರತಿರೂಪವಾಗಿ ತೋರುತ್ತದೆ. ಪೂಜಾ ಎಂಬ ಪದಕ್ಕೆ ಕೊಟ್ಟಿರುವ ಮತ್ತೊಂದು ನಿಷ್ಪತ್ತಿಯೆಂದರೆ ದ್ರಾವಿಡ ಪೂಸು (-ಬಳೀ) ಎಂಬ ಪದ ಈ ವ್ಯುತ್ಪತ್ತಿಯಂತೆ ಪೂಜೆಯೆಂಬುದು ರಕ್ತವನ್ನು ಪ್ರತಿನಿಧಿಸುವ ಗಂಧ ಅಥವಾ ಕುಂಕುಮವನ್ನು ಸಂಕೇತದ ಮೇಲೆ ಬಳಿಯಲಾಗುತ್ತಿದ್ದ ಒಂದು ಮತಾಚರಣೆಯೆಂದು ತಿಳಿಯುತ್ತದೆ. ಪ್ರಾಣಿವಧೆಯನ್ನು ಒಳಕೊಂಡ ಪೂಜೆಯ ಕೆಲವು ರೂಪಗಳಲ್ಲಿ ಯಜ್ಞಪಶುವಿನ ತಲೆ ಕಡಿಯಲಾಗುತ್ತಿತ್ತು. ಅದರ ರಕ್ತವನ್ನು ಮಡಕೆಯಲ್ಲಿ ತೆಗೆದುಕೊಂಡು ವಿಗ್ರಹ ಇಲ್ಲವೆ ಸಂಕೇತದ ಮುಂದಿಡುತ್ತಿದ್ದರು. ಕೆಲವೊಮ್ಮೆ ವಿಗ್ರಹಕ್ಕೆ ಅದರಿಂದ ಬಳಿಯುತ್ತಿದ್ದರು (ಹೋಮದಲ್ಲಿ ಯಜ್ಞಪಶುವನ್ನು ಸಾಮಾನ್ಯವಾಗಿ ಕುತ್ತಿಗೆ ಹಿಸುಕಿ ಕೊಲ್ಲುತ್ತಿದ್ದರಲ್ಲದೆ ಅದರ ಮಾಂಸ ಕೊಬ್ಬುಗಳನ್ನು ಯಜ್ಞವೇದಿಯ ಮೇಲೆ ಸುಡುತ್ತಿದ್ದರು) ಮುಂದೆ ದೈವತ್ವದೊಡನೆ ಅದರ ಅವತಾರವೆಂದು ಸಮೀಕರಣವಾದ ಕೃಷ್ಣ-ವಾಸುದೇವ ಮೊದಲ ಬಾರಿಗೆ ‘ಪೂಜಾ’ ಪದ್ಧತಿಗೆ ತನ್ನ ಬೆಂಬಲ ಕೊಟ್ಟಂತೆ ತೋರುತ್ತದೆ. ಭಗವದ್ಗಿತೆಯಲ್ಲಿ (ix-೨೬) ಈ ಕೆಳಗಿನ ಪದ್ಯವನ್ನು ನೋಡಬಹುದು.

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾಪ್ರಯಚ್ಛತಿ
ತದ್ ಅಹಂ ಭಕ್ತ್ಯುಪಹೃತಂ ಅಶ್ನಾಮಿ ಪ್ರಯತಾತ್ಮನಃ

‘ಯಾರೇ ಆಗಲಿ ಭಕ್ತಿಯಿಂದ ನನಗೆ ಪತ್ರ ಪುಷ್ಪ ಫಲ ಅಥವಾ ಜಲವನ್ನು ಅರ್ಪಿಸಿದರೆ ಅದನ್ನು ಶುದ್ಧ ಮನಸ್ಸಿನ ಭಕ್ತನ ಕಾಣಿಕೆಯೆಂದು ನಾನು ಸ್ವೀಕರಿಸುತ್ತೇನೆ. ಈ ಶ್ಲೋಕ ಹಿಂದೂ ಧರ್ಮದ ಇತಿಹಾಸದಲ್ಲಿ ಅತ್ಯಂತ ಮಹತ್ವ ಪೂರ್ಣವಾಗಿದೆ. ಏಕೆಂದರೆ ಮಧ್ಯದೇಶ ಅಥವಾ ಗಂಗಾನಧಿಯ ಕಣಿವೆಯ ಮೇಲಿನ ಪ್ರದೇಶದಲ್ಲಿ ಆರ್ಯ ಮತ್ತು ಆರ್ಯೇತರ ವಿಚಾರ ನಾಯಕರಿಂದ ಹಿಂದೂ ಸಮಾಜಕ್ಕೆ ಒಂದು ಶಾಶ್ವತ ಸ್ವರೂಪವನ್ನು ಕೊಡುವ ಕಾಲದಲ್ಲಿ ಇದು ಸನ್ನದನ್ನೂ, ಅಧಿಕೃತ ಅಧಿಕಾರವನ್ನೂ ಅವೈದಿಕ ಆರ್ಯೇತರ ಮತಾಂತರಣೆಗೆ ನೀಡಿತು.

ಅಂದಿನಿಂದ ಮೂಲದಲ್ಲಿ ಯಾವುದು ಜನಾಂಗೀಕ ಅಥವಾ ರಾಷ್ಟ್ರೀಯ ದೃಷ್ಟಿಯ ಪೂಜಾ ವಿಧಾನವಾಗಿತ್ತೋ ಅದನ್ನು ಹಿಂದೂ ಸಂಪ್ರದಾಯ ಎರಡು ಪ್ರತ್ಯೇಕ ಆದರ್ಶ ಧ್ಯೇಯಗಳ ವಿಭಾಗವಾಗಿ ವಿಭಜಿಸಿದೆ. ವೈದಿಕ ಮತ್ತು ಪೌರಾಣಿಕ-ತಾಂತ್ರಿಕ ಅಥವಾ ಹಿಂದೂ ಮಾತಿನ ರೀತಿಯಲ್ಲಿ ನಿಗಮ ಮತ್ತು ಆಗಮ ಇವು ಪರಸ್ಪರ ಪ್ರತ್ಯೇಕ ಹಾಗೂ ಪೂರಕವಾಗಿದ್ದುವು. ನಿಮಗ ಎಂಬುದು ಶುದ್ಧ ವೈದಿಕ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ. ವೇದಾಂತವೆಂಬುದು ನಿಗಮಾಂತ ವಿದ್ಯಾ. ಆಗಮವೆಂಬುದು ಆಧ್ಯಾತ್ಮಿಕ ಬೋಧನೆ. ಇದು ಯೋಗ ಮತ್ತು ಮತಾಚರಣೆಯ ಪೂಜೆಯನ್ನೊಳಗೊಂಡ ಆಧ್ಯಾತ್ಮಿಕ ಆಚರಣೆ. ಇವನ್ನು ಬೋಧಿಸಿದವನು ಶಿವ. ಶಿವ ಮೂಲತಃ ಆರ್ಯರ ದೇವಾಲಯಗಳ ಚೌಕಟ್ಟಿನೊಳಗೆ ಇರಲಿಲ್ಲ. ಭಾರತದಲ್ಲಿ ಶಿವ ಮತ್ತು ಉಮಾ ಒಂದು ಕಡೆ. ವಿಷ್ಣು ಮತ್ತು ಶ್ರೀ ಇನ್ನೊಂದು ಕಡೆ ಹೀಗೆ ಜೋಡಿರೂಪದಲ್ಲಿ ಇರುವುದಕ್ಕಿಂತಲೂ ಮೂಲ ಆಸ್ತಿತ್ವದ ವಿಶಾಲವಾದ ಅಥವಾ ಹೆಚ್ಚು ಗಂಭೀರವಾದ ಕಲ್ಪನೆ ಬೇರೆ ಯಾವುದೇ ಧರ್ಮ ಅಥವಾ ಪುರಾಣ ಸಾಹಿತ್ಯದ ವ್ಯವಸ್ಥೆಯಕಲ್ಲಿರುವಂತೆ ನನ್ನ ಬುದ್ಧಿಗೆ ತಿಳಿದುಬಂದಿಲ್ಲ. ಈ ಕಲ್ಪನೆಗಳು ಆರ್ಯ ಮತ್ತು ಆರ್ಯೇತರರ ಸಹಸೃಷ್ಟಿ.

ಕಡೆಯ ಪಕ್ಷ ಭಾರತದ ಬಹುಭಾಗದಲ್ಲಿ ದ್ರಾವಿಡರು ನಾಗರಿಕರಾದ ಪಟ್ಟಣವಾಸಿಗಳು, ಸಂಸ್ಕೃತಪದ ‘ನಗರ’ (-ಪಟ್ಟಣ) ಎಂಬುದನ್ನು ದ್ರಾವಿಡ ಮೂಲದ ಪದವೆಂದು ವಿವರಿಸಲಾಗಿದೆ. ಆದರೆ ಅವರು ಆರ್ಯರೊಡನೆ, ಅದರಲ್ಲಿಯೂ ಉತ್ತರದಲ್ಲಿ ಬಹಳ ನಿಕಟವಾಗಿ ಬೆರೆತಿದ್ದರು. ಆದರೂ ವೈದಿಕ ಪ್ರಪಂಚದ ಮನೋಧರ್ಮ ಹಾಗೂ ವಾತಾವರಣ ಶ್ರೇಷ್ಠ ಹಿಂದೂ ಜಗತ್ತಿನೊಡನೆ ಅದರಲ್ಲಿಯೂ ದ್ರಾವಿಡ ಭಾಷೆಯಾಡುವ ನೆಲದಲ್ಲಿ ಇರುವ ಕೆಲವು ಅಳವಾದ ವ್ಯತ್ಯಾಸಗಳನ್ನು ಗಮನಿಸಿದರೆ ದ್ರಾವಿಡರ ಪ್ರಜ್ಞೆ ಆರ್ಯರದಕ್ಕಿಂತಲೂ ಹೆಚು ಅಂತರ್ಮುಖಿಯಾಗಿಯೂ ಅದೇ ಕಾಲದಲ್ಲಿ ಹೆಚ್ಚು ಆಧ್ಯಾತ್ಮಿಕವಾಗಿಯೂ ಇತ್ತೆಂದು ನಾವು ಹೇಳಬಹುದು. ಆರ್ಯರ ಪ್ರಜ್ಞೆ ಬಹುವಾಗಿ ವಿಷಯವೆಷ್ಟೂ ಅಷ್ಟಕ್ಕೆ ಮಾತ್ರ ಸೀಮಿತ ಮತ್ತು ಹೆಚ್ಚು ಕಾರ್ಯಶೀಲ. ದ್ರಾವಿಡ ಪ್ರಜ್ಞೆ ಇನ್ನೂ ಹೆಚ್ಚಾಗಿ ಚಿಂತನಾತ್ಮಕ ಮತ್ತು ವಿಚಾರಮಂಥನದ ಸೂಕ್ಷ್ಮ ಪ್ರವೃತ್ತಿಯನ್ನು ಪಡೆದುದು. ಆರ್ಯರದಕ್ಕಿಂತಲೂ ದ್ರಾವಿಡಪ್ರಜ್ಞೆ ಭಕ್ತ್ಯಾತ್ಮಕ ನಿಷೇಧದ ಕೆಲವಂಶವನ್ನು ವಿಶಿಷ್ಟೀಕರಿಸುತ್ತದೆ, ಶೈವ ನಾಯನಾರರ ಮತ್ತು ವೈಷ್ಣವ ಆೞ್ವಾರರ (ಆಳ್ವಾರರ) ಕ್ರಿ.ಶ. ಮೊದಲ ಸಾವಿರ ವರುಷದ ದ್ವಿತೀಯಾರ್ಧದಲ್ಲಿ ಬಾಳಿದ ಸಂನ್ಯಾಸಿಗಳು-ಸ್ತೋತ್ರಗಳಲ್ಲಿ ನಾವು ಕಾಣುವ ಶಿವ ಮತ್ತು ವಿಷ್ಣುವನ್ನು ಕುರಿತ ಭಾವೋದ್ವೀಪ್ತ ಭಕ್ತಿಯೊಡನೆ ಹೋಲಿಸಹುದಾದುದು ಆರಂಭದ ಆರ್ಯಸಾಹಿತ್ಯದಲ್ಲಿ ಏನೇನೂ ಇಲ್ಲ. ಸಾಮಾಜಿಕ ಮನೋಭಾಗ ಹಾಗೂ ಬಳಕೆಯ ವಿಚಾರದಲ್ಲಿ ಮತವನ್ನು ವ್ಯವಸ್ಥೆಯಾಗಿ ದ್ರಾವಿಡರು ಸೃಷ್ಟಿಸಿದ್ದೆಂದು ನಿರ್ದಿಷ್ಟವಾಗಿ ಒತ್ತಿಹೇಳುವಂತಿಲ್ಲ.

ಆರ್ಯರಲ್ಲೂ ದ್ರಾವಿಡರಲ್ಲೂ ವರ್ಗಗಳಿದ್ದುವು. ಆದರೆ ಅದರ ಬುನಾದಿಯಾಗಿ ಅನೇಕಾಂಶಗಳನ್ನು (ಒಂದು ನಿರ್ದಿಷ್ಟ ಗುಂಪನ್ನು ಪರಿಶುದ್ಧವಾಗಿಡುವ ಬಯಕೆಯೊಡನೆ ಬಂದ ಮೂಲ ಜನಾಂಗಿಕ ವ್ಯತ್ಯಾಸಗಳು, ವೃತ್ತಿವೈವಿಧ್ಯ, ಸಾಮಾಜಿಕ ಅಂತಸ್ತು, ವಿದ್ಯೆ, ಸಂಸ್ಕೃತಿ ಇತ್ಯಾದಿ) ಪಡೆದಿದ್ದ ಮತಗಳ ಕಟ್ಟುನಿಟ್ಟೇನಿದ್ದರೂ ಭಾರತದಾದ್ಯತ ಹಿಂದೂಗಳಲ್ಲಿ ತರುವಾಯ ಕ್ರಮೇಣ ಬೆಳೆಯಿತು. ಇದು ತಾತ್ವಿಕ ನಂಬಿಕೆಗಳಾದ ಕರ್ಮ ಮತ್ತು ಸಂಸ್ಕಾರದ ಹಿನ್ನಲೆಯ ವಿರುದ್ಧವಾಗಿ ಸಿದ್ದರಾದ, ಗುಣ ಮತ್ತು ಅಂತಸ್ತುಗಳಲ್ಲಿ ವೈವಿಧ್ಯ ಹೊಂದಿದ, ಜನರಿಂದ ಬಂದ ಕೆಲವು ತೀರ್ಮಾನಗಳನ್ನು ತಮ್ಮ ತರ್ಕದ ಕಡೆಗೇ ತಳ್ಳುವ ಆಕಾಂಕ್ಷೆಯಿಂದ ಹುಟ್ಟಿದ ಸಮಾಜದ ನಿರ್ದಿಷ್ಟ ಸಿದ್ಧಾಂತದ ಫಲ, ತುರ್ಕೀಯರಿಂದ ಉತ್ತರ ಭಾರತದ ಆಕ್ರಮಣವಾದ ಮೇಲೆ ಕಾರ್ಯೋದ್ಯುಕ್ತ ಜೀವನದಲ್ಲಿ ಮತವೆಂಬುದು ಕಟ್ಟುನಿಟ್ಟಾಯಿತು. ನಿರ್ದಿಷ್ಟ ಗುಂಪಿನವರ ಪರಂಪರೆಯ ರಕ್ಷಣೆಯೆಂಬ ಸನ್ನಿವೇಶವೊಂದು ಆಗ ಉದ್ಭವಿಸಿತು. ದ್ರಾವಿಡ ಭಾಷೆಯಾಡುವವರು ವಿಶೇಷವಾಗಿ ಮಾತೃಪ್ರಾಧಾನ್ಯದ ಜನಾಂಗವಾದರೆ ಆರ್ಯರು ಪಿತೃಪ್ರಧಾನವಾದವರಾಗಿದ್ದರು. ಈ ವಿಚಾರದಲ್ಲಿ ಆರ್ಯ ಮನೋಭಾವವೇ ಗೆದ್ದಿತು. ‘ತಾಯಾಳಿಕೆ” ಕೇರಳದಂಥ ಭಾರತದ ಪೃಥಕ್ಕಾದ ಭಾಗಗಳಲ್ಲಿ ಮಾತ್ರ ಉಳಿದಿದೆ. ಆರ್ಯರಿಗಿಂತಲೂ ದ್ರಾವಿಡರಲ್ಲಿ ಕಲೆ ಧಾರ್ಮಿಕ ಮತ್ತು ಸಾಮಾಜಿಕ ಜೀವನದ ಹೆಚ್ಚು ಭಾಗವನ್ನು ಅವರಿಸಿತ್ತು. ವಾಸ್ತವವಾಗಿ ಬ್ರಾಹ್ಮಣಧರ್ಮದ ವೈದಿಕ ವಿಭಾಗದಲ್ಲಿ ಕಲೆ ಅತಿ ಕಡಿಮೆ.

ಆರ್ಯರು

ಆರ್ಯರು ಭಾರತಕ್ಕೆ ಕ್ರಿ.ಪ. ೧.೫೦೦ ಆದಮೇಲೆ ಏಷಿಯಾ ಮೈನರ್, ಮೆಸೊಪಟಮಿಯಾ ಮತ್ತು ಅನಂತರ ಇರಾನಿನ ಮೂಲಕ ಬಂದರು, ಅಲ್ಲಿ ಮೂಲ ಇಂಡೋ-ಯುರೋಪ್ ಸಂಸ್ಕೃತಿಯ ಪ್ರತ್ಯೇಕ ಇಂಡೋ-ಆರ್ಯನ್ ರೂಪ ಬೆಳೆದಿತ್ತು. ಅದರ ವಿಕಾಸದಲ್ಲಿ ಅನೇಕ ಏಷಿಯಾನಿಕ್ (ಏಷಿಯಾ ಮೈನರ್) ಮತ್ತು ಮೆಸೊಪಟಮಿಯಾ ಅಂಶಗಳಿರುವುದನ್ನು ಧರ್ಮ, ಪುರಾಣ, ಸಾಹಿತ್ಯ ಹಾಗೂ ನಾಗರಿಕತೆಯ ಹೊರಗಿನ ಸಾಧನೆ ಸಾಮಗ್ರಿಗಳಲ್ಲಿ ನಾವು ಒಪ್ಪಿಬೇಕು. ಆಐರು ತಾವು ಶತಮಾನಗಳ ತನಕ ಸಹಪ್ರಯಾಣ ಮಾಡಿದ ಪಶ್ಚಿಮ ಏಷಿಯಾದ ಅತ್ಯಂತ ನಾಗರಿಕರಾದ ಜನಾಂಗದೊಡನೆ ಈ ಸಂಪರ್ಕವಿದ್ದರೂ ತಮ್ಮ ಪ್ರಾಚೀನ ಗುಣಗಳ ಬಹ್ವಂಶವನ್ನು ಉಳಿಸಿಕೊಂಡು ಭಾರತವನ್ನು ಪ್ರವೇಶಿಸಿದರು. ಅರೆ ಅಲೆಮಾರಿ ಜನಾಂಗವಾಗಿದ್ದ ಅವರಿಗೆ ಸಂಪತ್ತೆಂದರೆ ಅವರ ದನಕುರಿಗಳೂ, ಆದರೆ ಅವರು ಸಂಪೂರ್ಣ ಅಭಿವ್ಯಕ್ತಿಯನ್ನು ಭಾರತದಲ್ಲೇ ಪಡೆದಿದ್ದು. ಅದೂ ದ್ರಾವಿಡ, ನಿಷಾದ ಮತ್ತು ಕಿರಾತರ ಸಂಪರ್ಕದ ಫಲವಾಗಿ ಉಪಕರಣಗಳ ನಾಗರಿಕತೆಯಲ್ಲಿ ಅವರು ಹಿಂದುಳಿದುದನ್ನು ತಮ್ಮ ಸ್ವಂತ ಶಕ್ತಿ ಮತ್ತು ಒರಟುತನದಿಂದ ಬಹುಮಟ್ಟಿಗೆ ಸರಿದೂಗಿಸಿದರು. ಅಲ್ಲದೆ ಅವರು ಸಂಯೋಜನೆ ಮತ್ತು ಕಲ್ಪನೆಯ ಮೂಲಕ ಭಾರತದಲ್ಲಿನ ಪ್ರತ್ಯೇಕ ಸಂಸ್ಕೃತಿಯ ಅಂಶಗಳಿಂದ ಒಂದು ಸಂಶ್ಲಿಷ್ಟ ಹಿಂದೂ ಸಂಸ್ಕೃತಿಯನ್ನೇ ಕಟ್ಟಿದರು. ವೇದಗಳನ್ನೂ, ಅವೆಸ್ತಾವನ್ನೂ ಮತ್ತು ಹಳೆಯ ಪರ್ಷಿಯನ್ ಶಾಸನಗಳನ್ನೂ ನಿಕಟವಾಗಿ ಅಭ್ಯಾಸ ಮಾಡುವುದರ ಮೂಲಕ ಸ್ಥಳೀಯ ಆರ್ಯರ ಮನೋಭಾವವನ್ನು ಸಂಶೋಧಿಸಲು ವ್ಯವಸ್ಥಿಸುವುದು ಕುತೂಹಲಕಾರಿಯಾಗಿರುತ್ತದೆ. ಹೀಗಿದ್ದೂ ಎಲ್ಲ ವಿಚಾರಗಳನ್ನೂ ತೀರ್ಮಾನಗಳು ಸಮಗ್ರವಾಗಿ ಖಾತರಿ ಕೊಡಲಾರವು. ಆದರೆ ಕೆಲವು ವಿಚಾರಗಳು ಸುವ್ಯಕ್ತ ರೀತಿಯಲ್ಲಿ ಎದ್ದು ನಿಲ್ಲುತ್ತವೆ.

ಹೆಂಗಸರ ವಿಚಾರದಲ್ಲಿ ಆರ್ಯರ ಮನೋಭಾವವು ವಿವೇಕಯುಕ್ತ ಹಾಗೂ ಆರೋಗ್ಯಕರ ಲಕ್ಷಣ ಪಡೆದುದಾಗಿತ್ತು. ಆರ್ಯರ ಸಮಾಜ ಏಕಪತೀತ್ವ ಪದ್ಧತಿಯನ್ನು ಹೊಂದಿತ್ತು. ಶಾಸ್ತ್ರಬದ್ಧವಾಗಿ ವಿವಾಹವಾದ ಪತ್ನಿ ತನ್ನ ಪತಿಯ ಸಂಗಾತಿ (ಸಹಧರ್ಮಿಣಿ) ಸ್ನೇಹಿತೆ ಮತ್ತು ಜೊತೆಗಾತಿಯಾಗಿದ್ದಳು. ತನ್ನ ಹೆಂಡತಿಯಿಲ್ಲದೆ ಪುರುಷನು ಯಾವುದೇ ಗಂಭೀರವಾದ ಸಾಮಾಜಿಕ ಅಥವಾ ಧಾರ್ಮಿಕ ಕರ್ತವ್ಯಗಳನ್ನು ಕೈಗೊಳ್ಳುವಂತಿರಲಿಲ್ಲ. ಭಾರತದಲ್ಲಿ ಸಾಮಾಜಿಕ ಪರಿಸರದ ಪರಿವರ್ತಿತ ಸನ್ನಿವೇಶ ಆರ್ಯರ ಮನೋಧರ್ಮದಲ್ಲಿ ಬದಲಾವಣೆಯನ್ನು ತಂದಿತು. ಏಕೆಂದರೆ ಆರ್ಯಪತ್ನಿಗೆ ಮೀಸಲಾಗಿದ್ದು ಹುಡುಗ ಹುಡುಗಿಯರಿಬ್ಬರನ್ನೂ ವೇದಾಧ್ಯಯನಕ್ಕೆ ಅಧಿಕಾರಿಗಳನ್ನಾಗಿಸಲು ಮಾಡುತ್ತಿದ್ದ ಉಪನಯನವೇ ಮುಂತಾದ ವ್ರತಾಚರಣೆಯ ಧಾರ್ಮಿಕ ಮತ್ತು ಸಾಮಾಜಿಕ ಹಕ್ಕುಗಳನ್ನು (ಹೆಂಡತಿಯಾದವಳು ಬಹುಶಃ ಆರ್ಯೇತರ ಗುಂಪಿನಿಂದ ಬಂದಾಗ) ಕ್ರಮೇಣ ಬಿಟ್ಟುಬಿಡಲಾಯಿತು. ಪವಿತ್ರ ಹಾಗೂ ಅಧ್ಯಾತ್ಮಿಕ ಅಧ್ಯಕ್ಷರವಾದ ಓಂ ಎಂಬುದು ಸ್ರೀಯರಿಗೂ ಶೂದ್ರರಿಗೂ ನಿಷಿದ್ಧವಾಯಿತು. ಒಟ್ಟಿನಲ್ಲಿ ಬಹು ಪತ್ನೀತ್ವವು ಶ್ರೀಮಂತ ಜನರಲ್ಲಿ ಕೆಲವೊಮ್ಮೆ ಮೇಲುಗೈ ಪಡೆದರೂ ಕೂಡ ಹಿಂದೂ ಸಮಾಜದಲ್ಲಿ ಬಹು ಸಾರ್ವತ್ರಿಕವಾಗಿ ಆರ್ಯರ ಏಕಪತ್ನೀತ್ವದ ಆದರ್ಶವನ್ನೇ ಅನುಸರಿಸಲಾಗುತ್ತಿದೆ.

ಆರ್ಯರ ಬುದ್ಧಿಗೂ, ಆರ್ಯೇತರರು (ದ್ರಾವಿಡರು, ನಿಷಾದರು ಮತ್ತು ಕಿರಾತರು) ಭಾವಗಳಿಗೂ ವಿಶೇಷ ಮಹತ್ವವನ್ನಿತ್ತರೆಂದು ಹೇಳಬಹುದು. ಆರ್ಯರಿಂದ ಬೋಧಿತವಾದ ಅತ್ಯುಚ್ಛ ಪ್ರಾರ್ಥನೆಯಾದ ಮತ್ತು ಬ್ರಾಹ್ಮಣ ಧರ್ಮದ ಪರಮ ಪವಿತ್ರ ಪ್ರಾರ್ಥನೆಯೆಂದು ಪರಿಗಣಿತವಾದ ಪೂಜ್ಯ ಗಾಯತ್ರಿ ಶ್ಲೋಕವು ದೇವರನ್ನು ನಮ್ಮ ಬುದ್ಧಿಯನ್ನು ನಿರ್ದೇಶಿಸುವಂತೆ ಕೇಳುತ್ತದೆ (ಧಿಯೋ ಯೋ ನಃ ಪ್ರಚೋದಯಾತ್) ಮಾನವನ ಅಧ್ಯಾತ್ಮಿಕ ಸಾಧನೆಯ ಕಾರ್ಯಸಿದ್ಧಿಯಲ್ಲಿ ವಿವೇಕ ಮತ್ತು ಭಾವಕ್ಕೆ ಸಮಾನ ಸ್ಥಾನಮಾನವನ್ನು ಕೊಟ್ಟಿದೆ. ಜ್ಞಾನ ಮತ್ತು ಭಕ್ತಿಗಳು ಮಾನವನ ಆಧ್ಯಾತ್ಮಿಕ ಜೀವನದಲ್ಲಿ ಎರಡು ಕೇಂದ್ರ ಬಿಂದುಗಳಾಗಿವೆ. ಇವಕ್ಕೆ ಕೃಷ್ಣ-ವಾಸುದೇವನು ಕರ್ತವ್ಯ ಪ್ರಜ್ಞೆಯಿಂದ ಮಾಡಿದ ನಿರಾಸಕ್ತ ಕಾರ್ಯ ಮತ್ತು ಪೂಜೆಯ ಒಂದು ರೂಪವಾಗಿ ಕರ್ಮವನ್ನು ಸೇರಿಸಿದನು. ಋಷಿಗಳೂ, ಸನ್ಯಾಸಿಗಳೂ ಭಕ್ತರೂ ವೈಯಕ್ತಿಕ ಅಭಿರುಚಿ ಹಾಗೂ ಒಲವಿಗೆ ಅನುಗುಣ ಕರ್ಮವನ್ನೇ ಆಶ್ರಯಿಸಿದ್ದಾರೆ. ಆದರೆ ಬ್ರಾಹ್ಮಣರ ಸ್ಪೂರ್ತಿಯ ಅಡಿಯಲ್ಲಿ ಹಿಂದೂಗಳ ಸಾರ್ವತ್ರಿಕ ಜನಸಮುದಾಯ ಗುರಿಯಾಗಿಟ್ಟುಕೊಂಡ ಆದರ್ಶವೆಂದರೆ ಈ ಎರಡರ ಸಾಮಾರಸ್ಯದ ಹೊಂದಾಣಿಕೆಯಾದ ಜ್ಞಾನಮಿಶ್ರ ಭಕ್ತಿ. ಎಲ್ಲಕ್ಕಿಂತಲೂ ಹೆಚ್ಚಾಗಿ ಇದರಲ್ಲಿ ವಿಭಿನ್ನ ಜನಾಂಗಿಕ ಹಾಗೂ ಸಾಂಸ್ಕೃತಿಕ ಮನೋಭಾವ ಅಥವಾ ಆದರ್ಶಗಳ ಮಧುರ ಮೈತ್ರಿಯನ್ನು ಕಾಣುತ್ತೇವೆ.

ಭಾರತದ ಸಂಸ್ಕೃತಿಯಲ್ಲಿ ಐತಿಹಾಸಿಕವಾಗಿ ಬೆಳೆದುಬಂದು ಕಾಣುವ ಇನ್ನೊಂದು ಲಕ್ಷಣವೆಂದರೆ, ಅಹಿಂಸೆ ಅಥವಾ ಸಮಸ್ತ ಜೀವಕೋಟಿಯನ್ನೂ ನೋಯಿಸದಿರುವ ಕಲ್ಪನೆ ಭಾರತೀಯತ್ವದ ಪ್ರಕಾರಗಳಾದ ಜೈನ ಮತ್ತು ಬೌದ್ಧಮತಗಳಿಂದ ಇದಕ್ಕೆ ಪರಮೋಚ್ಚ ಮೌಲ್ಯ ಆರ್ಯರಿಗೆ ಜೀವನದ ಪರಿಶುದ್ಧತೆಯ ವಿಚಾರದಲ್ಲಿ ವಿಶೇಷ ಕಲ್ಪನೆಯೇನೂ ಇರಲಿಲ್ಲ. ಅಲ್ಲದೆ ಅವರ ಧಾರ್ಮಿಕ ಮತಾಚರಣೆ ಪ್ರಾಣಿವಧೆಯನ್ನೊಳಗೊಂಡಿತ್ತು. ಕಿರಾತರೂ, ನಿಷಾದರೂ ತಮ್ಮ ಯಜ್ಞ ಯುಗಾದಿ ಮತಾಚರಣೆಯಲ್ಲಿ ಇಷ್ಟೇ ಕ್ರೂರ ಹಾಗೂ ನಿರ್ಧಯರಾಗಿದ್ದರು. ಪ್ರಾಣಿವಧೆಯ ಧಾರ್ಮಿಕ ಸಮಂಜಸತೆಯನ್ನು ಪ್ರಶ್ನಿಸಿದಾಗ ಮತ್ತು ಅದರ ಆಚರಣೆಗೆ ಅಸಮ್ಮತಿ ತೋರಿಸಿದಾಗ ವಾಸ್ತವವಾಗಿ ಅದನ್ನು ಮಾನವತೆಯ ಶ್ರೇಷ್ಠ ವಿಜಯವೆನ್ನಬುದು. ಮಾಂಸ ತಿನ್ನುವ ಪರಿಣಾಮವಾಗಿ ಧಾರ್ಮಿಕ ಮತಾಚರಣೆಗಳಲ್ಲಿ ಪ್ರಾಣಿ ವಧೆ ಮಾಡಿ ಅರ್ಪಿಸುವುದರ ಬಗೆಗೆ ವಿಮರ್ಶಾತ್ಮಕ ಮನೋಭಾವವನ್ನು ಮಹಾಭಾರತದಲ್ಲೇ (ಅನುಶಾಸನಪರ್ವ) ಕಾಣುತ್ತೇವೆ. ವೈದಿಕ ಮತ್ತು ಇತರ ಪಶುಬಲಿಯ ರೂಪಗಳ ಅವಹೇಳನೆ ಅಹಿಂಸೆಯ ತತ್ವದ ಸಂಸ್ಥಾಪನೆಯೊಡನೆ ಜೊತೆಜೊತೆಯಲ್ಲೇ ನಡದುವು. ಆದರೂ ಪ್ರಾಚೀನತೆಗಿದ್ದ ಪೂಜ್ಯತೆ ಮತ್ತು ಮತಾಚರಣೆಗಳ ಮಾಂತ್ರಿಕ ಗುಣಗಳ (ವೈದಿಕೀ ಹಿಂಸಾ, ಹಿಂಸಾನ ಭವತಿ, ತಸ್ಮೀನ್ ಯಜ್ಞೇ ವಧೋ ವಧಃ) ಮೂಲಕ ಈ ಕ್ರೌರ್ಯವನ್ನು ಸಹಿಸಿಕೊಳ್ಳಲಾಯಿತು. ಏನೇ ಆದರೂ ಭಾರತದಲ್ಲಿ ದವಸ ಧಾನ್ಯ ಹಾಲು ಮತ್ತು ಬೆಣ್ಣೆಯ ಸಮೃದ್ಧಿಯಿದ್ದುದರಿಂದ ಅಹಿಂಸೆಯ ತತ್ವ ಬೆಳೆಯಿತು. ಏಕೆಂದರೆ ಅವು ಭಾರತದಲ್ಲಿ ಅದರಲ್ಲಿಯೂ ಬಯಲುಪ್ರದೇಶದ ಉಷ್ಣವಾತಾವರಣದಲ್ಲಿ, ಮಾಂಸಾಹಾರ ಸ್ವೀಕಾರವನ್ನು ಅನವಶ್ಯಕವಾಗಿ ಮಾಡಿದುವು. ನಿಷೇಧರೂಪದ ಅಹಿಂಸೆ ಅಥವಾ ಹಿಂಸೆ ಪಡಿಸದಿರುವಂತೆ ಕಾರ್ಯಶೀಲ ತತ್ವವಾದ ಕರುಣೆ ಅಥವಾ ಸರ್ವರಲ್ಲೂ ಬೌದ್ಧಿಕ ಮೈತ್ರಿ ಅಥವಾ ಒಳ್ಳೆಯದನ್ನು ಮಾಡುವುದರಲ್ಲಿ ಕಾರ್ಯತತ್ವರತೆ ಈ ತತ್ವಗಳ ವಿಕಾಸದಲ್ಲಿ ಭಾರತೀಯ ಜನಾಂಗದಲ್ಲಿನ ಯಾವುದೇ ಒಂದು ಅಂಗದ ವಿಶೇಷ ಕಾಣಿಕೆ ಏನೆಂಬುದನ್ನು ಗುರುತಿಸುವುದು ಸುಲಭವಲ್ಲ.

ಆದರೆ ವೈಯಕ್ತಿಕ ನೆಲೆಗಟ್ಟಿನಮೇಲೆ ಮಾನವನ ಜೀವನದಲ್ಲಿ ನಾಲ್ಕು ಆಶ್ರಯಗಳು ಅಥವಾ ಘಟ್ಟಗಳ ಆಕಾರದಲ್ಲಿ ಶ್ರೇಷ್ಠ ಸಮಂಜಸವಾದ ಯೋಜನೆ ರೂಪಗೊಂಡುದನ್ನು ಕಾಣುತ್ತೇವೆ. ಬಲಾತ್ಕಾರದ ಬ್ರಹ್ಮ ಚರ್ಯಾಚರಣೆಯನ್ನು ಸ್ಥಾಪಿಸಿದ ಧಾರ್ಮಿಕ ಸಮರ್ಪಣೆಯ ಅತಿರೇಕ ಸತ್ವಗಳಿಂದ ಆರ್ಯರ ಸ್ವತಂತ್ರರಾಗಿದ್ದರು. ಎಲ್ಲರ ಆದರ್ಶ ನಿರೀಕ್ಷೆಯಾಗಿದ್ದ ನೂರು ವರ್ಷದ ಮಾನವ ಜೀವಿತದಲ್ಲಿನ ಮೊದಲ ಇಪ್ಪತ್ತೈದು ವರ್ಷಗಳನ್ನು ವ್ಯಾಸಂಗ ಮತ್ತು ಸಿದ್ಧತೆ (ಬ್ರಹ್ಮ ಚರ್ಯ) ಗಳಲ್ಲಿ ಕಳೆಯಬೇಕಿತ್ತು. ಅದರ ಮುಂದಿನ ಇಪ್ಪತ್ತೈದು ವರ್ಷಗಳನ್ನು ಗೃಹಸ್ಥ (ಗಾರ್ಹಸ್ಥ್ಯ) ಜೀವನವನ್ನು ನಡಸುವುದರಲ್ಲೂ ಮೂರನೆಯ ಇಪ್ಪತ್ತೈದು ವರ್ಷಗಳನ್ನು ನಿವೃತ್ತ ಜೀವನದಲ್ಲೂ (ವಾನಪ್ರಸ್ಥ) ಕೊನೆಯ ಘಟ್ಟದಲ್ಲಿ ಪ್ರಪಂಚದ ವ್ಯವಹಾರದಿಂದ ಸಂಪೂರ್ಣ ದೂರವಿದ್ದು ಪರಮಾತ್ಮನ ಧ್ಯಾನದಲ್ಲೂ (ಸಂನ್ಯಾಸ) ಕಾಲಕಳೆಯಬೇಕಿತ್ತು. ಯಾರಿಗಾದರೂ ಶ್ರೇಷ್ಠ ಆಧ್ಯಾತ್ಮಿಕತೆಯ ಅಗ್ನಿ ಅಂತರಂಗದಲ್ಲಿ ಪ್ರಜ್ವಲಿಸಿದರೆ ಆಗ ಆತ ಅವಿವಾಹಿತ ಭಕ್ತನಾಗಿ ಪ್ರಪಂಚ ವ್ಯವಹಾರದ ಸಂಪರ್ಕವಿಲ್ಲದೆ ಆಧ್ಯಾತ್ಮಿಕ ಜೀವನಕ್ಕೆ ಮೀಸಲಾಗಿದ್ದು ಜೀವನ ಸಾಗಿಸಲು ಸರ್ವಸ್ವಾತಂತ್ರ್ಯವಿತ್ತು. ಅಸಾಂಪ್ರದಾಯಿಕ ಲೈಂಗಿಕ ಜೀವನವನ್ನು ಮಾನವನಲ್ಲಿ ಆಧ್ಯಾತ್ಮಿಕ ಪ್ರಜ್ಞೆಯ ಉದ್ಧಾರಕ್ಕಾಗಿ ನಿಯಮಗೊಳಿಸಲು ತಾಂತ್ರಿಕಧರ್ಮವಾದ ‘ವಾಮಾಚಾರ ಪದ್ಧತಿ’ಯಲ್ಲಿ ಪ್ರಯತ್ನ ನಡೆದಿದೆ. ಇದು ಕೂಡ ಕೆಲಮಟ್ಟಿಗೆ ಜನಾಂಗಿಕ (ಬಹುವಾಗಿ ಕಿರಾತ) ಆಧಾರವನ್ನು ಹೊಂದಿದೆ, ಆದರೆ ಇದು ಹಿಂದೂ ಧರ್ಮದ ಸಾಮಾನ್ಯ ಜೀವಸ್ಥಿತಿಯನ್ನು ನಿರ್ದೇಶಿಸುವುದಿಲ್ಲ.

ಮಂಗೋಲಿಯನರ ಲಕ್ಷಣಗಳನ್ನುಳ್ಳವರು

ಹಿಂದೂ ಮನೋಭಾವ ಹಾಗೂ ಸಂಸ್ಕೃತಿಯ ನಿರ್ಮಾಣದಲ್ಲಿ ನೆರವಾದ ಐದನೆಯ ಮೂಲಾಂಶವನ್ನು ಈಗ ನಾವು ಪರಿಶೀಲಿಸಬಹುದು. ಭಾರತ ಪ್ರಜಾಕೋಟಿಯಲ್ಲಿ ಇದು ಕಿರಾತ ಅಥವಾ ಮಂಗೋಲಿಯನರ ಲಕ್ಷಣದವರ ಅಥವಾ ಖಚಿತವಾದ ಇಂಡೋ-ಮಂಗೋಲಿಯನರ ಅಂಶ. ಸಂಘಟಿತ ಹಿಂದೂ ಅಥವಾ ಭಾರತೀಯ ಸಂಸ್ಕೃತಿಯ ವಿಕಾಸದಲ್ಲಿ ಮಂಗೋಲಿಯನರ ಲಕ್ಷಣ ಪಡೆದ ಜನರ ಪಾತ್ರದ ಅಂದಾಜು ಮಾಡುವುದನ್ನು ಭಾರತೀಯ ನಾಗರಿಕತೆಯ ಇತಿಹಾಸ ಶೋಧನೆಯಲ್ಲಿ ಒಂದು ಮುಖ್ಯ ವಿಚಾರರೇಖೆಯೆಂದು ಪರಿಗಣಿಸಬೇಕು. ಮಂಗೋಲಿಯನ್ ವರ್ಗದ ಜನರು ವಹಿಸಿದ ಪಾತ್ರವೆನಿದ್ದರೂ ವಿಶೇಷ-ವಾಗಿ ಭಾರತದ ಈಶಾನ್ಯ ದಿಕ್ಕಿನ ಗಡಿಗಳಿಗೆ, ಮಧ್ಯ ಮತ್ತು ಪರ್ವ ನೇಪಾಳ, ಉತ್ತರ ಬಿಹಾರ, ಉತ್ತರ ಮತ್ತು ಪೂರ್ವ ಬಂಗಾಳ ಮತ್ತು ಆಸಾಮುಗಳಿಗೆ ಸೀಮಿತವಾಗಿತ್ತು. ಭಾರತದ ನಾಗರಿಕತೆಯ ಮತ್ತು ಇತಿಹಾಸದ ಕೇಂದ್ರಸ್ಥಾನದಿಂದ ಅಂದರೆ ಗಂಗಾನದಿಯ ಕಣೀವೆಯ ಮೇಲ್ಬಾಗ, ಪಂಜಾಬು, ಪಶ್ಚಿಮ ಭಾರತ, ದಕ್ಷಿಣ ಮತ್ತು ತಮಿಳುನಾಡುಗಳಿಂದ -ಇವು ಹೆಚ್ಚಾಗಿ ದೂರವಾಗಿರುವ ಪ್ರದೇಶಗಳು. ಮಂಗೋಲಿಯನ್ ಮಕ್ಷಣದ ಅಂಶ ಅದು ತಡವಾಗಿ ಬಂದುದರಿಂದ (ಮಂಗೋಲಿಯನರು ಬಹುಶಃ ಆರ್ಯನರಿಗಿಂತ ತರುವಾಯದವರು) ಆಸ್ಟ್ರಿಕ್ ಜನರು, ದ್ರಾವಿಡರು ಮತ್ತು ಆಯ್ರು ಮಾಡಿದಂತೆ ಒಳಭಾಗ-ಗಳಿಗೆ ಹೆಚ್ಚಾಗಿ ಪ್ರವೇಶಿಸಿ ಸಮಸ್ಥ ಭಾರತದ ತುಂಬ ವ್ಯಾಪಿಸಲಾಗಲಿಲ್ಲ. ನಾವು ತಿಳಿದಿರು-ವಂತೆ ಈ ಜನಾಂಗದ ಜನರಿಂದ ಸಮಗ್ರ ಭಾರತದ ಪ್ರಾಮುಖವಾದ ಕೆಲವು ವಿಚಾರಗಳನ್ನು ಆಚರಿಸಲಾಗಿದ್ದರೂ ಅಥವಾ ಪರಿಭವಿಸಲಾಗಿದ್ದರು ಇವರ ಗುಂಪಿನ ಮೂಲದವನೆಂದು ಸಾಧಿಸಲಾದ ಯಾವ ವ್ಯಕ್ತಿಯೂ ಸಮಗ್ರ ಭಾರತದ ಪ್ರಮುಖ್ಯ ಪಡೆಯಲಾಗಲಿಲ್ಲ. ಇದಕ್ಕೂ ಹೆಚ್ಚಾಗಿ ಅವರ ಸಾಧನೆಯ ಮಹತ್ವದ ಕಾಲ ಅನಂತರದ್ದು, ತುರ್ಕೀಯರು ಮತ್ತು ಅಪ್ಘನರು, ರಜಪೂತರು ಮತ್ತು ಉತ್ತರ ಭಾರತದ ಮುಸಲ್ಮಾನರು, ಮರಾಠರು ಮತ್ತು ಕನ್ನಡಿಗರು, ತೆಲುಗರು ಮತ್ತು ಕನ್ನಡಿಗರು – ಇವರೆಲ್ ಪರಸ್ಪರ ಯುದ್ಧ ಮತ್ತು ಶಾಂತಿಯ ನಾಟಕದಲ್ಲಿ ನಿರತವಾದ ಕಾಲಕ್ಕೆ ಸೇರಿದುದು. ಸಮಗ್ರ ಭಾರತದ ಸಾಂಸ್ಕೃತಿಕ ಸ್ವೀಕರಣ ಕಾರ್ಯದಲ್ಲಿ ನೇಪಾಳದ ನೇವಾರ್ ಮತ್ತು ಕಿರಂತಿಗಳು, ಬಂಗಾಳ ಮತ್ತು ಅಸ್ಸಾಮಿನ ಉತ್ತರ ಮತ್ತು ಪೂರ್ವದ ಬೋಡೊಗಳು, ಪಾತ್ರವನ್ನು ನಿರ್ವಹಿಸಲಿಲ್ಲ. ಅವರ ಆರಂಭದ ಇತಿಹಾಸ ಇಂದಿಗೂ ಅಸ್ಪಷ್ಟವಾಗಿಯೇ ಉಳಿದಿದೆ. ಅಲ್ಲದೆ ಅವರು ಉತ್ಕೃಷ್ಟ ಸಂಸ್ಕೃತಿಯೊಂದನ್ನು ಪಡೆದಂತೆಯೂ ತೋರುವುದಿಲ್ಲ. ಹಿಂದೂಧರ್ಮದ ಮೇಲೆ ಈಶಾನ್ಯಭಾಗದಲ್ಲಿ ಅವರು ತಮ್ಮ ಪ್ರಭಾವ ಬೀರಿದವರಾದರೂ ಅದು ಬಹುವಾಗಿ ಆಸ್ಟ್ರಿಕ್, ದ್ರಾವಿಡ ಮತ್ತು ಆರ್ಯಮೂಲದ ಮಿಶ್ರ ಹಿಂದೂ ನಾಗರಿಕತೆಯ ಸ್ವೀಕರಣ ಮತ್ತು ಐಕ್ಯ ಮಾಡಿಕೊಳ್ಳುವ ಲಕ್ಷಣವಾಗಿತ್ತು.

ಕ್ರಿ.ಪೂ. ೧೦೦೦ದ ಸರಿಸುಮಾರಿಗೆ ಆಗಲೇ ದಕ್ಷಿಣ ಹಿಮಾಲಯದ ಇಳಿಜಾರಿನಲ್ಲೂ ಪೂರ್ವಭಾರತದಲ್ಲೂ ಮಂಗೋಲಿಯನರ ಲಕ್ಷಣದವರು ನೆಲೆಗೊಂಡಂತೆ ತೋರುತ್ತದೆ. ಏಕೆಂದರೆ ಯಜುರ್ವೇದ ಅಥರ್ವವೇದಗಳಲ್ಲಿ ಕಿರಾತ ಜನರ ಉಲ್ಲೇಖವಿದೆ. ಹ್ಯಾಂಗ್-ಹೊ ಕಣಿವೆಯಪೂರ್ವ ಪ್ರದೇಶದಲ್ಲಿ ಅಥವಾ ಯಂಗ್-ತ್ಸ್-ಜೇ-ಕಿಯಾಂಗ್ ನದಿಯ ಮೂಲದ ಸುತ್ತಮುತ್ತಲ ಪೆದೇಶಕ್ಕೆ ಸೇರಿದಂತೆ ಪೂರ್ವ ಚೈನಾದಲ್ಲಿ ಎಲ್ಲಿಯೋ ಬೆಳೆದು ಬಂದ ಸಂಸ್ಕೃತಿಯ ರೀತಿಯನ್ನು ಪಡೆದವರು ಸಿನೊ-ಟಿಬೆಟನ್ನರು. ಮಂಗೋಲಿಯ ಲಕ್ಷಣದವರೂ ಈ ಸಿನೊ-ಟಿಬೆಟನ್ನರ ಗುಂಪಿಗೆ ಸೇರಿದ ಭಾಷೆಗಳನ್ನಾಡುವ, ಜನಾಂಗಿಕವಾಗಿ ಪ್ರತ್ಯೇಕವಾದ, ಎರಡು ಮೂರು ಜನಾಂಗವನ್ನು ಪ್ರತಿನಿಧಿಸುತ್ತಾರೆ. ಅವರು ಭಾರತಕ್ಕೆ ಅನೇಕ ಗುಂಪುಗಳಲ್ಲಿ ಬಂದವರು. ಈ ಕೆಳಗಿನ ವರ್ಗೀಕರಣಕ್ಕೆ ಅಳಪಡುತ್ತಾರೆ: ೧. ಟಿಬೆಟೋ-ಬರ್ಮನ್ ಮಂಗೋಲೀಯರು. ಮುಂದೆ ಹೇಳುವ ಬುಡಕಟ್ಟಿನವರು ಇವರನ್ನು ಪ್ರತಿನಿಧಿಸುವರು. (ಅ) ಶುದ್ಧ ಟಿಬೆಟನ್ನರು (ಲಡಖಿಗಳೂ. ಲಹೌಲರು ಮತ್ತು ಸ್ವತಿ ಟಿಬೆಟನರು, ಸಿಕ್ಕಿಮರು, ಭೂತಾನರು)

ಇವರಲ್ಲಿ ಎಲ್ಲರೂ ಭಾರತಕ್ಕೆ ತಡವಾಗಿ ಬಂದವರು, (ಇ) ಭಾರತಕ್ಕೆ ಬಂದವರಲ್ಲಿ ಬಹಳ ಮೊದಲಿನ ಗುಂಪೆಂದು ತೋರುವ ಮತ್ತು ನೇಪಾಳದ ಮೂಲವಾಸಿಗಳಾದ ನೇವಾರರು ಮತ್ತು ಇತರರಿಂದ ಪ್ರತಿನಿಧಿಸಲಾದ ಹಿಮಾಲಯದ ಟಿಬೆಟೊ-ಬರ್ಮನರು, ಗುರ್ಖಾಗಳಂತೆ ಹಿಂದೂಗಳಾಗುತ್ತಿರುವ ( ಈ ಮಾತನ್ನು ಸರಳವಾಗಿ ಬಳಸಿದೆ) ಮಗರ್ ಮತ್ತು ಗುರುಂಗಳು ಮತ್ತು ಕಿರಂತಿಗಳು, ಲೆಪ್ಪಗಳು, ಧಿಮಾಲರು, ಕನೊವರಿಗಳು ಮುಂತಾದ ಬುಡಕಟ್ಟಿನವರು ಇವರಲ್ಲಿ ಸೇರುತ್ತಾರೆ. (ಉ) ಅಕ, ಮಿರಿ, ಅಬೊರ್, ಮಿಶ್ಮಿ, ದಫ್ಲ ಆದಿವಾಸಿಗಳನ್ನೊಳಗೊಂಡ ಬೋಡೊ-ನಾಗಾಗುಂಪನ್ನು ಪ್ರತಿನಿಧಿಸುವ ಬೋಡೊ ಬುಡಕಟ್ಟು (ಒ) ಪೂರ್ಣ ಬಮೀಯರಿಂದ ಪ್ರತಿನಿಧಿಸಿದ ಬಮೀಸ್-ಕುಕಿ-ಚಿನ್-ಕಚಿನ್-ಲೊಲೊ ಗುಂಪು, ಕುಕಿ-ಚಿನ್ ಬುಡಕಟ್ಟುಗಳು (ಕುಕಿಯರು, ಮೈಥೀಯರು ಅಥವಾ ಮಣಿಪುರಿಗಳೂ ಮತ್ತು ಲುಷೇಯರನ್ನು ಒಳಗೊಂಡು) ಮತ್ತು ಕಚಿನ್ ಅಥವಾ ಸಿಂಲಪ ಜನರು. ಲೊಲೊಗಳೂ -ಕಡೆಯ ಎರಡು ಗುಂಪಿನವರು ಬರ್ಮೀಯರೊನೆ ಭಾರತದ ಹೊರಗೆ ವಾಸಿಸುತ್ತಿದ್ದಾರೆ (ಕ) ನಾಗಾಗಳು ಮತ್ತು ಕುಕಿಚಿನ್ ಗಳು ನಡುವೆ ಒಂದು ತೆರನಾದ ಅರೆದಾರಿಯ ಮನೆ ಮಾಡಿರುವ ಅಸ್ಸಾಮಿನ ಮಿಕಿರರು. ೨. ಸಹಾನದಿಂದ ಪ್ರತಿನಿಧಿಸಲಾದ ಸಯಾಮೀ ಚೀನೀಯರು. ಕ್ರಿ. ಶ. ೧೨೨೮ರಲ್ಲಿ ಭಾರತಕ್ಕೆ ಬಂದ ಅಹೋಮರು ಇದರ ಒಂದು ಶಾಖೆ. ಅಹೋಮರು ಪೂರ್ವದ ಅಸ್ಸಾಮನ್ನು ಆಕ್ರಮಿಸಿದರಲ್ಲದೆ ಕ್ರಮೇಣ ಬ್ರಹ್ಮ ಪುತ್ರಾ ಕಣಿವೆಯ ಒಡೆಯರಾದರು.

ಚೀನೀಯರಿಗೆ ಸದೃಶವಾಗಿ ಪೀತವರ್ಣದ ಜನಾಂಗದವರ ಮತ್ತು ಪೂರ್ವದ ಪ್ರದೇಶದಲ್ಲಿ ವಾಸಿಸುವರೂ ಆದ ಕಿರಾತರ ವಿಚಾರವನ್ನು ಸಂಸ್ಕೃತ ಬಳಸುವ ಹಿಂದೂಗಳು ಸಂಬಂಧ ಈ ಎರಡು ಜನಾಂಗಗಳಲ್ಲಿ ಇದ್ದಿರುವ ಸಂಭವವಿದೆ. ಕುರುಕ್ಷೇತ್ರ ಯುದ್ಧದ ವೀರರಲ್ಲಿ ಅಸ್ಸಾಮಿನ ದೊರೆಯಾದ ಭಗದತ್ತನನ್ನು ಮ್ಲೇಚ್ಛರ ಪ್ರಭುವೆಂದು ಮತ್ತೆ ಮತ್ತೆ ವರ್ಣಿಸಲಾಗಿದೆ. ಆತನ ಸೈನ್ಯ ಕಿರಾತರಿಂದಲೂ ಚೀನೀಯರಿಂದಲೂ ಕೂಡಿತ್ತು. ನೇಪಾಳದಲ್ಲಿ ಇಂಧಿಗೂ ಧರ್ಮ ಮತ್ತು ಸಂಸ್ಕೃತಿಗಳಲ್ಲಿ ಆರ್ಯವಾರೂ ಮೂಲದಲ್ಲಿ ಮಂಗೋಲಾಯ್ಡರಾಗಿದ್ದ ಜನರನ್ನು ಕಾಣಬಹುದು. ೨೫೦೦ ವರ್ಷಗಳ ಹಿಂದೆ ನೇಪಾಳ ಮತ್ತು ಕರೈಗಳ ಪ್ರದೇಶದಲ್ಲಿ ಬಹುಮಟ್ಟಿಗೆ ಇದೇ ರೀತಿ ಇದ್ದಿರಬೇಕು. ಲಿಚ್ಛವಿಯವರೂ, ಬುದ್ಧನು ಸೇರಿದ್ದ ಕೌಲಿಯ ಬುಡಕಟ್ಟಿನವರೂ ಅವರ ಭಾಷೆ ಆರ್ಯಭಾಷೆಯಾಗಿದ್ದರೂ, ಅವರು ಕ್ಷತ್ರಿಯರಾಗಿದ್ದರೆಂದು ಹೇಳಿದ್ದರೂ -ಮೂಲದಲ್ಲಿ ಶುದ್ಧ ಇಲ್ಲವೇ ಮಿಶ್ರ ಟಿಬೆಟೊ-ಬರ್ಮನರಾಗಿದ್ದರೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆಯೇ ತಿಳಿಸಿರುವಂತೆ ಇಂಡೋ-ಮಂಗೋಲಾಯ್ಡ್ ರಿತಿಹಾಸವೂ ಪ್ರಮುಖವಾಗಿ ಹಿಂಧೂಗಳ ತೆಕ್ಕೆಯಲ್ಲಿ ಸೇರಿಹೋದುದೇ ಆಗಿದೆ. ಅವರಲ್ಲಿನ ಬಹುಪಾಲಿನ ಜನರು ಕಡೆಗೆ ಉತ್ತರ ಬಿಹಾರ್, ಉತ್ತರ ಮತ್ತು ರ್ಪೂ ಬಂಗಾಳ ಮತ್ತು ಅಸ್ಸಾಮುಗಳಲ್ಲಿ ಆರ್ಯಭಾಷೆಯಾಡುವ ಆರ್ಯನರೇ ಆದರು. ಕ್ರಿಸ್ತಾನಂತರದ ಮೊದಲ ಒಂದು ಸಾವಿರ ವರ್ಷ ಪೂರ್ಣವಾಗಿ ಇದು ನಿಶ್ಯಬ್ದವಾಗಿ, ಆದರೆ ಸಾಕಷ್ಟು ಪರಿಣಾಮಕಾರಿಯಾಗಿ ನಡೆಯುತ್ತಲೇ ಇತ್ತು. ನೇಪಾಳದಲ್ಲಿ ಇದೇ ರೀತಿ ಮೂಲ ನೇಪಾಳಿಗಳು ಬಂಗಾಳ ಮತ್ತು ಬಿಹಾರದಿಂದ ತಾಂತ್ರಿಕ ಬೌದ್ಧಮತವನ್ನು ತಮ್ಮ ಧರ್ಮವನ್ನಾಗಿ ಮಾಡಿಕೊಂಡು ತಮ್ಮ ಸಂಸ್ಕೃತಿಯಲ್ಲಿ ಭಾರತೀಯರಾದರು, ಆದರೆ ಬಂಗಾಳ ಮತ್ತು ಅಸ್ಸಾಮಿನಲ್ಲಿ ಬೋಡೊ ಜನರು ನಿಧಾನವಾಗಿ ತಮ್ಮ ಭಾಷೆಯನ್ನು ಬಿಟ್ಟು ಅರ್ಯಭಾಷೆಯನ್ನು ಅಭಿವೃದ್ಧಿಪಡಿಸಿದರು, ಬೌದ್ಧಸಾಹಿತ್ಯದ ವಾಹನವಾಗಿ ಈ ನೇವಾರೀ ಭಾಷೆ ಇಂದು ಮತ್ತೊಮ್ಮೆ ಪುನರುಜ್ಜೀವನ ಪಡೆದಿದೆ.

ಹದಿನೈದನೆಯ ಶತಮಾನದಿಂದ ಮಂಗೋಲಾಯ್ಡರ ಬಹುಮಟ್ಟಿಗೆ ಜನರಲ್ಲಿ ಒಂದು ಬಲವಾದ ಹಿಂದೂ ದೇಶಾಭಿಮಾನ ತುಂಬಿತು. ಕೊಚ್ ಆದಿವಾಸಿಗಳಿಂದ ಪ್ರತಿನಿಧಿಸಲಾದ ಉತ್ತರ ಬಂಗಾಳದ ಬೋಡೊಗಳು ಬಿಡು ಅಥವಾ ವಿಶ್ವನಾಥಸಿಂಹ ಮತ್ತು ಆತನ ಮಗ ನಾರಾಯಣಸಿಂಹನ ಸೋದರ ಶುಕ್ಲಧ್ವಜ ದೊಡ್ಡ ಸೇನಾಧಿಪತಿಯಾಗಿದ್ದನು. ಇವರು ಅಸ್ಸಾಮಿನ ಅಹೋಮ್ ದೊರೆಗಳೊಡನೆಯೂ, ದೆಹಲಿ ಮತ್ತು ಆಗ್ರಾಗಳಿಂದ ಮೊಗಲರೊಡನೆಯೂ ಯುದ್ಧಮಾಡಿದರು.

ನಾರಾಯಣ ದೊರೆಯ ಆಡಳಿತಕಾಲದಲ್ಲಿ ದಕ್ಷಿಣ ಬಂಗಾಳದಿಂದ ಬಂದ ಬ್ರಾಹ್ಮಣ ವಿದ್ವಾಂಸರ ಸಹಾಯದಿಂದ ಕೋಚ್ ಜನರು ವಿಶೇಷವಾಗಿ ಹಿಂದೂಗಳಾದರು. ಹದಿನೇಳನೆಯ ಶತಮಾನದಲ್ಲಿ ಅಸ್ಸಾಮಿನಲ್ಲಿ ಅಹೋಮರು ಸೌರ್ವಬೌಮರಾದರು. ಗದಾಧರಸಿಂಹ (೧೬೬೧ರಲ್ಲಿ ನಿಧನವಾದ ಸು-ಪತ್-ಫ) ಮತ್ತು ಆತನ ಬಲಿಷ್ಠ ಪುತ್ರ ೧೬೬೧ರಿಂದ ೧೭೧೪ರವರೆಗೆ ಆಳಿದ ರುದ್ರಸಿಂಹ (ಸು-ಕ್ರುಂಗ್-ಫ)ರ ಆಡಳಿತ ಕಾಲದಲ್ಲಿ ಇವರು ಹಿಂದೂಗಳಾಗುವ ಕಾರ್ಯ ಬಹುವಾಗಿ ಮುಂದುವರಿಯಿತ್ತು ಸ್ವತಂತ್ರರಾದ ದಕ್ಷಿಣ ಅಸ್ಸಾಮಿನ ಇಂಡೋ-ಮಂಗೋಲಾಯ್ಡ್ ದೊರೆಗಳನ್ನೂ, ಕಚರಿ ಮತ್ತು ಜಯಂತಿಯ ದೊರೆಗಳನೂ ನಿಗ್ರಹಿಸಿದ ಧುಲೇ ರುದ್ರಸಿಂಹನು ಮುಸ್ಲಿಮರ ಆಡಳಿತದಿಂದ ಅಸ್ಸಾಂ, ಬಂಗಾಳ ಮತ್ತು ಪೂರ್ವಭಾರತವನ್ನು ಸ್ವತಂತ್ರ ಗೊಳಿಸಲೂ, ಮೊಗಲರೊಡನೆ ಯುದ್ಧಮಾಡಲು ತನ್ನೊಡನೆ ಸಹಕರಿಸುವಂತೆ ಉತ್ತರ ಭಾರತದಲ್ಲಿ ಹಿಂದೂ ರಾಜರ ಸಂಘಟನೆಯಲ್ಲಿ ನಿರತರಾದನು. ಪೂರ್ವ ಭಾರತದಲ್ಲಿನ ಮತ್ತೊಂದು ಮುಖ್ಯ ಕಿರಾತ ಮನೆತನವೆಂದರೆ ತ್ರಿಪುರಕ್ಕೆ ಸೇರಿದುದು. ಇದು ಕೂಡ ೧೫ನೆಯ ಶತಮಾನದಲ್ಲಿ ಪ್ರಾಮುಖ್ಯ ಪಡೆದುದಲ್ಲದೆ ಬಂಗಾಳದ ಮುಸ್ಲಿಮ್ ದೊರೆಗಳೊಡನೆ ಶತಮಾನದವರೆಗೆ ಯುದ್ಧವನ್ನು ಮುಂದುವರಿಸಿತು. ಇದಲ್ಲದೆ ಭಾರತೀಯ ಸಂಸ್ಕೃತಿಯ ಮತ್ತೊಂದು ವೀರ ನಾಯಕ ಮನೆತನವೆಂದರೆ ಮಣಿಪುರದ ಅಳರಸರದು. ತ್ರಿಪುರ ಅಥವಾ ತಿಪ್ಪೆರಹ್ ರಾಜಮನೆತನದಂತೆ ಮಣಿಪುರಿಯವರೂ ಕ್ಷತ್ರಿಯರೆಂದು ಹೇಳೂವರು. ಅಸ್ಸಾಂ ಮತ್ತು ಮಣಿಪುರಗಳ ಮೂಲಕ ಉತ್ತರ ಭಾರತದಿಂದ ನಿರಂತರವಾದ ಕ್ಷತ್ರಿಯ ಪ್ರವಾಹ ವಲಸೆ ಹೋದುದನ್ನು ಬಮೀ ಸಂಪ್ರದಾಯವು ಉಲ್ಲೇಖಿಸುವುದರಿಂದ ಈ ಪ್ರದೇಶವನ್ನು ಬ್ರಾಹ್ಮಣ್ಯದ ಪ್ರಭಾವ ಬಹಳ ಹಿಂದೆಯೇ ವ್ಯಾಪಿಸಿರುವ ಸಾಧ್ಯತೆಯಿದೆ. ವೈಷ್ಣವಧರ್ಮ ಕ್ರಿ.ಶ. ೧೫೦೦ ರ ಹೊತ್ತಿಗೆ ಮಣಿಪುರದಲ್ಲಿ ನೆಲಸಿತ್ತಲ್ಲದೆ ೧೭೫೦ರ ವೇಳೆಗೆ ಸಿಲ್ಹೆತ್ ನಿಂದ ಚೈತನ್ಯ ವೈಷ್ಣವ ರಧರ್ಮದ್ದಾಗಿ ಪರಿವರ್ತಿಸುವುದರ ಮೂಲಕ ಮಣಿಪುರ ಮತ್ತು ಬಂಗಾಳಗಳ ನಡುವೆ ಸಂಬಂಧವೇರ್ಪಡಿಸಿದರು. ಮಣಿಪುರ ಸಂಸ್ಥಾನದಲ್ಲಿ ಸುಮಾರು ಐದು ಲಕ್ಷ ಜನರ ಸಾಹಿತ್ಯಭಾಷೆಯಾಗಿದೆ. ಬಂಗಾಳಿ ಲಿಪಿಯಲ್ಲಿ ಬರೆಯುವ ಮಣಿಪುರಿಭಾಷೆ. ಇದು ನಾಗಾಗಳು, ಕುಕಿಗಳು ಮತ್ತು ಇತರ ಅದಿವಾಸಿಗಳಲ್ಲಿ ಸಂಸ್ಕೃತಿಯ ಇಂಡೋ-ಮಂಗೋಲಾಯ್ಡ್ ವ್ಯಾಪಾಕವಾಗಿ ಬೆಳೆಯುತ್ತಿದೆ.

ಅಸಂದಿಗ್ಧವಾಗಿ ಕೆಲವು ಮಾತುಗಳಲ್ಲಿ ಸಮಗ್ರ ಇಂಡೋ-ಮಂಗೋಲಾಯ್ಡ್ ಜನರ ವೈಶಿಷ್ಟ್ಯಗಳನ್ನು ಹೆರಸಿಟ್ಟು ನಿರ್ದೇಶಿಸುವುದು ಬಹಳ ಕಷ್ಟವಾಗುತ್ತದೆ. ಅದರೂ ಹಿರಿದಾದ ಆಶಾವಾದ, ಸ್ವಚ್ಛಂದ ಪ್ರವೃತ್ತಿ ಮತ್ತು ಸ್ವಾತಂತ್ರ್ಯ ಪ್ರೇಮಗಳಿಂದ ಸಂಜನಿಸಿದ ಸ್ನೇಹ ಸೌಹಾರ್ದಭಾವಗಳೊಡನೆ ಸೇರಿದ ಉಲ್ಲಾಸದ ಮನೋಧರ್ಮ – ಇವು ಮಂಗೋಲಾಯ್ಡ್ ಜನರ ಬಹು ಮುಖ್ಯ ಲಕ್ಷಣಗಳೆಂದು ಹೇಳಬಹುದು. ಸ್ಥಾವಲಂಬನೆ, ಸ್ಥೈರ್ಯ ಹಾಗೂ ವ್ಯಾವಹಾರಿಕ ಜಾಣತನಗಳು ಮಂಗೋಲಾಯ್ಡ್ ವೈಲಕ್ಷಣ್ಯಗಳಲ್ಲಿನ ಇತರ ಒಳ್ಳೆಯ ಅಂಶಗಳು ಹಾಗಿದ್ದರೂ ಅವರ ವಿರುದ್ಧವಾಗಿ ಹೇಳಬಹುದಾದ ಸಂಗತಿಗಳೆಂದರೆ, ಅವರು ಇತರರನ್ನು ಸುಲಭವಾಗಿ ನಂಬುವವರಾಗಿದ್ದಂತೆ ತೋರುತ್ತದೆ. ಕೆಲವೊಮ್ಮೆ ಅವರು ಮಾನವರಿಗೂ ಪ್ರಾಣಿಗಳಿಗೂ ತೀರ ನಿರ್ದಯರಾಗುತ್ತಿದ್ದರು. ಇದಲ್ಲದೆ ಅವರಿಗೆ ಅಳವಗಿ ವಿಚಾರ ಮಾಡುವ ಶಕ್ತಿಯೂ ಮತ್ತು ಬಹುಶಃ ಗಾಢ ಸಂವೇದನಾಶಕ್ತಿಯೂ ಇರಲಿಲ್ಲ. ಅವರು ವಾಸ್ತವವಾದಿಗಳೆ ಹೊರತು ತತ್ವಜ್ಞರಲ್ಲ. ಅವರು ಕಾರ್ಯಪ್ರಯೋಜನ ದೃಷ್ಟಿಯುಳ್ಳವರುಮ ಮತ್ತು ಕಾರ್ಯ ತತ್ಪರರು, ವಾದಶೀಲರಲ್ಲ, ಅಲಂಕಾರಪ್ರಿಯರು, ನಾದಲಯ ಹಾಗೂ ವರ್ಣಗಳಲ್ಲಿ ಸಹಜಪ್ರಜ್ಞೆಯುಳ್ಳವರು, ಕೆಲವು ವಿಚಾರಗಳಲ್ಲಿ ಆದರಲ್ಲಿಯೂ ಕಲೆಯಲ್ಲಿ ಅವರು ತುಂಬ ಒಳ್ಳೆಯ ಅಭ್ಯಾಸಿಗಳು, ಅದರೂ ಅವರು ಸಾಂಪ್ರದಾಯಿಕ ಮಾರ್ಗವನ್ನೂ ಎಂದೂ ಉಲ್ಲಂಘಿಸುವವರಲ್ಲ.

ಮಂಗೋಲಾಯ್ಡ್ ಜನರು ಬಯಲು ಪ್ರದೇಶದ ಹಿಂದೂಗಳಿಂದ ಪಡೆದ ಸಂಸ್ಕೃತಿಯನ್ನು ಬಹುವಾಗಿ ಪ್ರಸಾರ ಮಾಡಿದರು. ಪಾಲವಂಶದ ಕಲೆಯನ್ನು ನೇವಾರರು ಟಿಬೆಟ್ಟಿಗೂ ಮತ್ತು ಅದರಾಚೆಗೂ ಸಾಗಿಸಿದರು. ಸುಮಾರು ಕ್ರಿ. ಶ. ೧೦೦೦ ದಿಂದ ೧೫೦೦ ವರೆಗೆ ಭೂಮಾರ್ಗಗಳ ಮೂಲಕ ವೈದಿಕ ಮತ್ತು ಬೌದ್ದ ಧರ್ಮದ ಸಂಸ್ಕೃತಿಯನ್ನು ಬರ್ಮಾ ಮತ್ತು ಅಲ್ಲಿಂದಾಚೆಗೆ ಕೊಮಿಲ್ಲದ ಪಟ್ಟಿಕೆರೆ ರಾಜಮನೆತನದವರಿಗೂ ಕೆಲವು ಹಿಂದೂ ಅಥವಾ ಹಿಂದೂ ಆಗಿ ಪರಿವರ್ತಿತವಾದ ಚಿತ್ತಂಗಾಂಗ್ ಮತ್ತು ಅರಕನ್ ನ ರಾಜಮನೆತನದವರಿಗೂ ಒಯ್ಡು ಮುಟ್ಟಿಸುವಲ್ಲಿ ಪೂರ್ವ ಬಂಗಾಳದ ಬೋಡೊಗಳು ಸಂಪರ್ಕ ಮಾಧ್ಯಮವಾಗಿದ್ದಂತೆ ತೋರುತ್ತದೆ.

ಕ್ರಿಸ್ತನ ಜನನಾನಂತರದ ಕೆಲವು ಶತಮಾನಗಳಾದ ಮೇಲೆ ಪೂರ್ವ ಹಿಂದೂ ಧಾರ್ಮಿಕ ಪದ್ಧತಿಗಳನ್ನೂ, ಸಂಪ್ರದಾಯಗಳನ್ನೂ ಹಾಗೂ ಶುದ್ಧ ಹಿಂದೂ ಮತದ ಶಾಕ್ತ ಸಂಪ್ರದಾಯಗಳನ್ನೂ ತತ್ವಗಳನ್ನು ಪರಸ್ಪರ ಹತ್ತಿರಕ್ಕೆ ತರುವ ಕಾರ್ಯವು ಪ್ರಾರಂಭವಾಗತೊಡಗಿತು. ತಿಪ್ಪೆರಹ್ ಮತ್ತು ಕೂಚ್-ಬಿಹಾರದ ದೊರೆಗಳಿಂದ ಆ ಕಾರ್ಯಪ್ರಯತ್ನಕ್ಕೆ ಅಂತಿಮರೂಪ ದೊರೆಯಿತು. ಕಾಮಾಖ್ಯ ಎಂಬ ಭವ್ಯ ದೇವಾಲಯವನ್ನು ಕ್ರಿ.ಶ. ೧೫೬೪ರಲ್ಲಿ ಕಟ್ಟಿದ ಮೇಲೆ ನರನಾರಾಯಣ ದೊರೆ ಹಿಂದೂ ಧರ್ಮವನ್ನು ಪ್ರಾರಂಭದ ಬೋಡೊ ಮತ್ತು ಸಂಪ್ರದಾಯ ಮತ್ತು ಆ ಭೂಭಾಗದ ಇತರ ಟಿಬೆಟೊ-ಬರ್ಮನ್ ಆರಾಧನಾ ಪದ್ಧತಿಗಳೊಡನೆ ಸಮನ್ವಯ ಮಾಡಿ ವ್ಯವಸ್ಥೆಗೊಳಿಸಿದರು. ಇದರ ಪರಿಣಾಮವಾಗಿ ಬಹುಶಃ ೧೬ನೆಯ ಶತಮಾನದಲ್ಲಿ ರಚಿತವಾದ ಯೋಗಿನೀತಂತ್ರದಂತ ಗ್ರಂಥವೊಂದು ಅಸ್ಸಾಂ ಪ್ರದೇಶದಲ್ಲಿನ ಧರ್ಮಕಿರಾತಮೂಲದಿಂದ ರಕ್ತಪಾತಕ್ರಿಯ ತಾಂತ್ರಿಕ ಮತಾಚರಣೆಯೊಂಡನೆ ಹೊಂದಿರುವ ವಿಚಿತ್ರ ಮಿಶ್ರಣವನ್ನು ವ್ಯಕ್ತಪಡಿಸುತ್ತದೆ. ಪೌರಾಣಿಕ ಶ್ರದ್ಧೆ ಮತ್ತು ಕಾರ್ಯಚರಣೆಯಲ್ಲಿಯೂ ಯೋಗದಲ್ಲಿಯೂ ನೆಲೆಗೊಂಡ ಉತ್ತರೋತ್ತರ ಹಿಂದೂ ಧರ್ಮದ ತಾಂತ್ರಿಕ ಸ್ವರೂಪವೂ ತಾನು ಮೂಲೋತ್ಪಾಟನೆ ಮಾಡಿದ ಮಂಗೋಲ ಮತಪಂಥಗಳಿಂದಲೇ ತನ್ನ ಅಂತಿಮ ಬಾಹ್ಯಲಕ್ಷಣವನ್ನು ಹೊಂದಿದಂತೆ ಕಾಣೂತ್ತದೆ. ಮಂಗೋಲಾಯ್ಡ್ ಬುಡಕಟ್ಟುಗಳಲ್ಲಿ ಸ್ತ್ರಿಯರು ಹಿಂದೂ ಸಮಾಜದಲ್ಲಿ ನಾವು ಕಾಣೂವುದಕ್ಕಿಂತಲೂ ಹೆಚ್ಚಾದ ಸ್ವಾತಂತ್ರ್ಯವನ್ನು ವಿವಾಹ, ವಿವಾಹವಿಚ್ಚೇದನ ಮತ್ತು ಇತರ ವಿಚಾರಗಳಲ್ಲಿ ಪಡೆದಿದ್ದರು. ಇಂಡೋ-ಮಂಗೋಲಾಯ್ಡ್ ಜೀವನ ವ್ಯವಹಾರಗಳ ಈ ಭಾಗದಲ್ಲಿ ವಾಮಾಚಾರ ತಾಂತ್ರಿಕತ್ವದ ಕೆಲವಂಶಗಳ ಮೂಲವನ್ನು ಸ್ವಷ್ಟವಾಗಿ ಕಾಣಬಹುದು. ವಾಸ್ತವವಾಗಿ ಅಸ್ಸಾಂ ಮತ್ತು ಪೂರ್ವ ಬಂಗಾಳದ ಅನೇಕ ದೇವಲಯಗಳಲ್ಲಿ ಅದರಲ್ಲಿಯೂ ಗೌಹಾತಿಯ ಬಳಿಯ ಕಾಮಾಖ್ಯ ದೇವಾಲಯದಲ್ಲಿ ಮಹಾಮಾತೆಯ ಪೂಜೆ ಮೂಲತಃ ಕಿರಾತ ಇಲ್ಲವೆ ಟಿಬೆಟೋ-ಬರ್ಮನ್ ಆಗಿರಬೇಕೆಂದು ಪರಿಗಣಿಸಲಾಗಿದೆ.

ಹಿಂದೂ ಸಂಸ್ಕೃತಿ, ವಿಶೇಷವಾಗಿ ಅದರ ಧರ್ಮದ ಕ್ಷೇತ್ರದಲ್ಲಿ, ವಿಚಿತ್ರ ರಚನೆಯ ಬಣ್ಣಬಣ್ಣದ ಎಳೆಗಳ ನೇಯ್ಗೆಯ ವಸ್ತ್ರ. ಆ ವಿವಿಧ ವರ್ಣಗಳ ಸಾಮಾರಸ್ಯವನ್ನು ವಿಶ್ಲೇಷಣೆ ಮಾಡುವುದಕ್ಕೂ ಪ್ರತ್ಯೇಕವಾಗಿ ಪರಿಶೀಲನೆ ಮಾಡುವುದಕ್ಕೂ ಸಾಧ್ಯವಾಗುವಂತಿದೆ. ಅನೇಕ ಅಂಶಗಳಿಂದ ಈ ಪ್ರಯತ್ನಗಳನ್ನು ನಡಸುವ ಪ್ರಯತ್ನಗಳಾಗಿವೆ, ತೀರ ಇತ್ತೀಚಿನ ವರೆಗೆ ಜನಾಂಗಿಕ ಮೂಲಗಳನ್ನೂ ಅಂತರಂಗವನ್ನೂ ಅರ್ಥಮಾಡಿಕೊಂಡು ಅವುಗಳನ್ನು ಮೆಚ್ಚಿಕೊಳ್ಳಲು ಸಾಧ್ಯವಾಗಿರಲಿಲ್ಲ. ನಮ್ಮ ವ್ಯಾಸಂಗ ವಿಧಾನದಲ್ಲಿ ನಾವು ಯಾವಾಗಲೂ ಖಚಿತವಾಗಿರಲು ಸಾಧ್ಯವಿಲ್ಲ. ಆದುದರಿಂದ ಕೆಲವೊಮ್ಮೆ ವಿಚಿತ್ರವಾಗಿ ತೋರುವ ತೀರ್ಮಾನಗಳನ್ನು ತಳೆಯುವುದು ತೀರ ಸಹಜ. ಇತಿಹಾಸಪೂರ್ವದ ಮತ್ತು ಅರ್ಧ ಐತಿಹಾಸಿಕ ಕಾಲದ ಸಮಸುಕಿನಲ್ಲಿ ರಾಜಕೀಯ ಘಟನೆಗಳ ಹಾಗೂ ಕಾಲಮಾನಗಳ ಇತಿಮಿತಿಯಿಲ್ಲದೆ ಸ್ವತಂತ್ರವಾಗಿ ಪ್ರವರ್ತಿಸಿದ ಕಾಐಶಕ್ತಿಗಳ ಬಗೆಗೆ ಸ್ವಷ್ಟ ಸೂಚನೆಯಿಲ್ಲ. ರಾಷ್ಟ್ರೀಯ ಸ್ಮೃತಿಯಲ್ಲಿ ಮಾತ್ರ ಅವುಗಳ ಅಸ್ಪಷ್ಟ ನೆನಹಿದೆ. ಹೀಗಿದ್ದೂ ಶತ ಶತಮಾನಗಳ ಅಥವಾ ಒಂದೆರಡು ದಶಲಕ್ಷ ವರುಷಗಳ ತನಕ ಹರಡಿದ ವಿಸ್ತಾರವಾದ ಅವಧಿಯಲ್ಲಿ ಈ ಸಂಯೋಗ ಸಾಧ್ಯವಾಗಿದೆ. ನಾವು ಇಲ್ಲಿ ಈ ಸಂಯೋಗವನ್ನು ಅದರ ವಿಶಾಲವಾದ ರೂಪರೇಖೆಗಳಲ್ಲಿ ವಿಶ್ಲೇಷಿಸಲು ಪ್ರಯತ್ನಿಸಿದ್ದೇವೆ. ಭಾರತ ಮಾತೆ ಸಂಕೀರ್ಣ ಸಂಸ್ಕೃತಿಯ ಭಂಡಾರ ಆ ಸಂಸ್ಕೃತಿಯ ಅಭಿವ್ಯಕ್ತಿಯ ವಾಹನವೆಂದರೆ ಆರ್ಯಭಾಷೆ ಆದರೆ ನಿಷಾದರು, ಕಿರಾತರು ಮತ್ತು ದ್ರಾವಿಡರಿಂದ ಬಂದ ಕಾಣಿಕೆಗಳೂ ಆರ್ಯನರ ಕಾಣಿಕೆಯಷ್ಟೇ ಪ್ರಮುಖವಾಗಿವೆ. ಹಲವು ನದಿಗಳು ತಮ್ಮ ನೀರನ್ನು ಸೇರಿಸಿರುವ ಈ ಸಂಕೀರ್ಣ ಸಂಸ್ಕೃತಿ ಒಂದು ಮಹಾಸಾಗರ.

ಮೂಲಲೇಖನ : ಸುನೀತಿಕುಮಾರ್ ಚಟರ್ಜಿ
ಯುಗಯಾತ್ರೀ ಭಾರತೀಯ ಸಂಸ್ಕೃತಿ ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೨೦

 

* * *

[1] ನೋಡಿ Census of India 1931, ಸಂಪುಟ – ೧ ಜೆ. ಎಚ್, ಹಟ್ಟನ್ನರ ವರದಿ ದೆಹಲಿ ೧೯೩೩, ಭಾಗ ೧, ಪುಟ ೪೩

[2] ಛೋಟಾ ನಾಗಪುರದ ಅದಿವಾಸಿಗಳಲ್ಲಿ ಅಪಾರ ಅನುಕಂಪೆಯುಳ್ಳ ಅಭ್ಯಾಸಿಯೊಬ್ಬರು ಒರಾ ಓನರ (ಇವರು ದ್ರಾವಿಡ ಭಾಷೆಯನ್ನಾಡುವವರಾದರೂ ಆಸ್ಟ್ರಿಕ್ ಇಲ್ಲವೇ ಕೋಲ್ ಭಾಷೆಯಾಡುವ ಸಂತಾಲರು, ಮುಂಡಾಗಳು ಮತ್ತು ಇತರ ಹಲವರ ಸಾಂಸ್ಕೃತಿಕ ಪರಿಸರದಲ್ಲಿ ವಾಸಿಸುವವರು) ಬಗ್ಗೆ ಹೇಳಿದ ಕೆಳಕಂಡ ಅಭಿಪ್ರಾಯವು ಕೋಲ್ ಭಾಷೆಯಾಡುವ ಆಸ್ಟ್ರಿಕ್ ಜನರಿಗೂ ಸಮಾನವಾಗಿ ಅನ್ವಯಿಸುತ್ತದೆ. ‘ಉರಾಓನ್ (ಒರಾ ಓನ್)ರ “ಲಕ್ಷಣ” ಗಳನ್ನು ಕುರಿತು ಕೆಲವು ಟಿಪ್ಪಣಿಗಳನ್ನು ಅವಶ್ಯ ಸೇರಿಸಬೇಕು: ಆತ್ಯಾರಂಭದ ಪರಿಶೀಲಕರಿಗೆ ಉರಾಓನರ ಪ್ರಧಾನ ಗಮನಾರ್ಹ ಲಕ್ಷಣವಾಗಿ ಕಂಡದ್ದು ಕಠಿಣ ಕೆಲಸವನ್ನು ನಗುನಗುತ್ತಾ ಮಾಡುವ ಅವರ ಸಾಮತ್ಯ ಸದೃಢ ಗಮನ ದೇಹ ಸೌಷ್ಠನ ಮತ್ತು ಹಾಸ್ಯ ಪ್ರವೃತ್ತಿ ಇವು ಇಂದಿಗೂ ಅವರ ಸುಸ್ಪಷ್ಟ ಗುಣಗಳಾಗಿವೆ. ಇವು ಮೂಲಭೂತವಾದ ಸರಳತೆಯೊಡನೆ ಸೇರಿಕೊಂಡಿವೆ, ಭಾವಾವೇಗವನ್ನು ಮುಂದೂಡುವುದರ ಮೂಲಕ ಇಲ್ಲವೆ ಚಿಂತನೆ ಮಾಡುವುದರ ಮೂಲಕ ಜಟಿಲಗೊಳಿಸದೆ ಅದನ್ನು ಒಂದು ಚರ್ಯೆಯೆಂದು ನೋಡುವ ಪ್ರವೃತ್ತಿಯವರದು, ಉರಾಓನ್ ಅದನನ್ನು ತನ್ನನ್ನು ಕುರಿತು ಯಾವಾಗಲೂ ಯೋಚಿಸುವುದಿಲ್ಲ, ಈ ಕಾರಣದಿಂದಾಗಿ ಕೋಪ ಪ್ರಸಂಗವನ್ನು ಮೇಲೆ ಬೀಳುವ ಕ್ರಿಯೆಯಿಂದ ಪ್ರತ್ಯೇಕವಾಗಿ ಕಾಣಲು ಕಷ್ಟ ಇದೇ ರೀತಿಯಲ್ಲಿ ಏನನ್ನೂ ಮಾಡದೆ ಸುಮ್ಮನಿರುವುದನ್ನು ಅವರು ಇಷ್ಟಪಡುವುದಿಲ್ಲ. ಉರಾಓನರು ವರ್ಷದ ಚಟುವಟಿಕೆಯಿಲ್ಲದ ಕಾಲದಲ್ಲಿ ಪದೇ ಪದೇ ಮಾಡುವ ನರ್ತನವನ್ನು ಮತ್ತು ಒಬ್ಬರನೊಬ್ಬರು ಮತ್ತೆ ಮತ್ತೆ ಸಂದರ್ಶಿಸುವುದನ್ನು ಈ ಪ್ರವೃತ್ತಿ ಬಹುಶಃ ವಿವರಿಸುತ್ತದೆ. ಹಾಗೆಯೇ ಉರಾಓನ್ ಏಕಾಂಗಿಯಾಗಿರುವುದನ್ನು ಇಷ್ಟಪಡುವುದಿಲ್ಲ, ಉಲ್ಲಾಸಪೂರ್ಣೆಯಾದ ಪತ್ನಿ ಮೂರು ನಾಲ್ಕು ಮಕ್ಕಳು, ಒಂದು ನಾಯಿ -ಇವುಗಳಿಂದ ಕೂಡಿದ ಸಂತೋಷಮಯ ಕುಟುಂಬ ಜೀವನದಲ್ಲಿ ಆತ ಆನಂದಿಸುತ್ತಾನೆ, ಮಾರುಕಟ್ಟೆ ಮದುವೆ, ಮದಿರಾಪಾನ ಮಂದಿರಗಳೂ ಬಹಳ ಜನಪ್ರಿಯ ಉರಾಓನರನ್ನು ಅವು ಬಹಳ ಹತ್ತಿರದವರನ್ನಾಗಿ ಮಾಡುತ್ತವೆ. ಇನ್ನು ಅವರ ಒಟ್ಟು ಚಿತ್ರವೆಂದರೆ ಪ್ರೀತಿಯಿಂದ ಕೂಡಿದ ಋಜುತ್ವ ಮತ್ತು ಮುಗುಳುನಗೆಯ ಶಕ್ತಿ, ಡಬ್ಲೂ, ಜಿ ಆರ್ಚರ್, The Blue Grove – The poetry of uraons, George Allen & unwin, London, 1940. p.19.

[3] ಋಗ್ ವೇದ, ೧೨೯.

[4] ಪಂಚಾನನಮಿತ್ರ A Vedic Night of the Moon from Polynesia ಕಲಕತ್ತಾಪ್ರಾಚ್ಯ ಪತ್ರಿಕೆ, ಜುಲೈ ೧೯೩೪ ಸುನೀತಕುಮಾರ ಚಟರ್ಜಿ, India and Polynesia, Austric Bases of Indian Civilization and thought; ಭಾರತ ಕೌಮುಧೀ (ಡಾ|| ರಾಧಕುಮಾದ್ ಮುಖರ್ಜಿಯವರ ಗೌರವಾರ್ಥವಾಗಿ ರಚಿತವಾದ ಭಾರತೀಯ ಶಾಸ್ತ್ರದ ಮೇಲಿನ ಲೇಖನಾವಳಿ) ಎಂಬುದರಲ್ಲಿದೆ.

[5] ಮೇಡಿಟರೇನಿಯಾದ ಪ್ರಾಚೀನರಲ್ಲಿ ಪ್ರಮುಖರಾದ ಕ್ರೀಟನರು ತಮ್ಮನ್ನು ತೆರ್ಮಿಲೈ ಎಂದು ಕರೆದುಕೊಂಡಿದ್ದಾರೆ (ಕ್ರಿ. ಪೂ. ಐದನೆಯ ಶತಮಾನದ ಹೆರೊಡೋಟಸನ ಅಭಿಪ್ರಾಯ) ಮತ್ತು ಇದೇ ಯುಗಕ್ಕೆ ಸೇರಿದ ಪಿಸಿಯಾದ ಲಿಕಿಯನರು ತಮ್ಮ ಶಾಸನಗಳನ್ನು ತಮ್ಮನ್ನು ‘ತ್ರಮ್ಮಲಿ’ ಎಂದು ವಿವರಿಸಿಕೊಂಡಿದ್ದಾರೆ. ಸರಿಸುಮಾರು ಕ್ರಿಸ್ತನ ಕಾಲಕ್ಕೆ ದ್ರಮಿೞ ಪದವು ದಮಿೞ ಎಂದಾಯಿತು. ಇದು ಸಿಂಹಳಿಯರಿಂದ ದಮಿಲ ಎಂದೂ, ಗ್ರೀಕರಿಂದ ದಮಿರ್ ಎಂದೂ (ದಮರಕೆ- ತಮಿಳು ದೇಶ – ಎಂಬ ಪದದಲ್ಲಿರುವಂತೆ) ರೂಪಾಂತರ ಪಡೆಯಿತು. ಕ್ರಿ.ಶ. ಒಂದು ಸಾವಿರ ವರುಷದ ಮಧ್ಯಕಾಲದ ಹೊತ್ತಿಗೆ ತಮಿಳರನ್ನು ತೆಲುಗರು ಅರವಲು ಎಂದು ಬಣ್ಣಿಸಿದ್ದಾರೆ. ಅರವಲು ಎಂದರೆ ಮಾತಿಲ್ಲದೆ ಜನರೆಂದು (ಸಂಸ್ಕೃತ ಅ -ಇಲ್ಲದ್ದು + ರವ ಧ್ವನಿ, ಕಂಠ)    ವಿವರಿಸಲಾಗಿದೆ. ಆದರೆ ಅದು ಹಳೆಯ ದ್ರಾವಿಡರ ಆದಿವಾಸಿಗಳ ಹೆಸರಾಗಿರುವ ಸಂಭವವೇ ಹೆಚ್ಚು; ಗ್ರೀಕರಿಂದ ಅರಬಿತೈ ಎಂದು ಹೆಸರಿಸಲಾಗಿರುವ ಜನಾಂಗವೊಂದು ಸಿಂದ್ ನ ದಕ್ಷಿಣಕ್ಕೆ ಸಿಗುತ್ತದೆ.