ಕಣಜವನ್ನು ಕನ್ನಡದಲ್ಲಿ ಕೇಳಿ!

ದೃಷ್ಟಿ ಸವಾಲು ಹೊಂದಿರುವರು (ಅಂಧರು) ಮತ್ತು ಅನಕ್ಷರಸ್ತರು ಕೂಡಾ ಕಣಜದಲ್ಲಿ ಇರುವ ಮಾಹಿತಿಗಳನ್ನು ತಮ್ಮ ಕಲಿಕೆಗೆ ಬಳಸಿಕೊಳ್ಳಬೇಕು ಎಂಬುದು ನಮ್ಮ ಆಶಯ. ಅಲ್ಲದೆ ಅವರು ಕೂಡಾ ಕಣಜದ ಬೆಳವಣಿಗೆಯಲ್ಲಿ, ಮಾಹಿತಿ ಸೃಷ್ಟಿಯಲ್ಲಿ ಪಾಲ್ಗೊಳ್ಳಬೇಕು ಎಂಬುದೂ ನಮ್ಮ ನಿರೀಕ್ಷೆ. ಅದಕ್ಕಾಗಿ ಕಣಜ ಜಾಲತಾಣದಲ್ಲಿ ಪಠ್ಯವನ್ನು ಕನ್ನಡ ಭಾಷೆಯಲ್ಲಿ ಧ್ವನಿಯ ಮೂಲಕ ಓದಿ ಹೇಳುವ ತಂತ್ರಜ್ಞಾನವನ್ನು ಅಳವಡಿಸಲು ತಾತ್ವಿಕವಾಗಿ ನಿರ್ಧರಿಸಿದ್ದೇವೆ.

ಆದರೆ ಈ ತಂತ್ರಜ್ಞಾನವು ಕನ್ನಡದಲ್ಲಿ ಇನ್ನೂ ಪ್ರಾಥಮಿಕ ಸಂಶೋಧನೆಯ ಹಂತದಲ್ಲಿದೆ. ಹೀಗಿದ್ದೂ ನಾವು ಈ ಬಗ್ಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈ ಕುರಿತು ಆದಷ್ಟು ಬೇಗ ನಿಮಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಸಲು ನಾವು ಉತ್ಸುಕರಾಗಿದ್ದೇವೆ.

ದಯವಿಟ್ಟು ಈ ಪುಟವನ್ನು ಆಗಾಗ ವೀಕ್ಷಿಸುತ್ತಿರಿ.

ಕಣಜಕ್ಕೆ ಭೇಟಿ  ನೀಡಿದ ನಿಮಗೆ ವಂದನೆಗಳು.