LISTEN KANAJA IN KANNADA ಕಣಜವನ್ನು ಕನ್ನಡದಲ್ಲೇ ಕೇಳಿ!

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_aspect_ratio=”16:9″ video_loop=”yes” video_mute=”yes” overlay_opacity=”0.5″ border_style=”solid”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_size=”” border_color=”” border_style=”solid” border_position=”all” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”small-visibility,medium-visibility,large-visibility” center_content=”no” last=”no” min_height=”” hover_type=”none” link=””][fusion_text]

ಇಂಜಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಅಂಗವಾಗಿ ಸಿದ್ದಪಡಿಸುವ ಪ್ರಾಜೆಕ್ಟ್ ಕಾರ್ಯದಲ್ಲಿ ಕನ್ನಡ ಭಾಷೆ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಹಲವು ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರ ಜೊತೆ ಚರ್ಚಿಸಲಾಗಿದ್ದು, ಹಲವು ಕಾಲೇಜುಗಳು ಈ ನಿಟ್ಟಿನಲ್ಲಿ ಒಡಂಬಡಿಕೆ ಮಾಡಿಕೊಂಡಿವೆ.

ಅದರಂತೆ ೨೦೧೬ನೆಯ ಸಾಲಿನಲ್ಲಿ ಕರ್ನಾಟಕ ಅರವತ್ತನೆಯ ವರ್ಷಾಚರಣೆಯ ಸಾಲಿನ ನೆನಪಿಗೆ ಕೆ.ಎಸ್.ಐ.ಟಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಓದುಗರ ಅನುಕೂಲತೆಗಾಗಿ ಅಭಿವೃದ್ಧಿಪಡಿಸಿರುವ ‘ಅಕ್ಷರ ದನಿ’ (Text to speech) ಬೀಟಾ ವರ್ಷನ್ ತಂತ್ರಾಂಶವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುತ್ತದೆ.  ಈ ತಂತ್ರಾಂಶದ ಬಗ್ಗೆ ನಿಮ್ಮ ಸಲಹೆ ಮತ್ತು ಅಭಿಮತವನ್ನು ಈ ವಿಳಾಸಕ್ಕೆ ಕಳುಹಿಸಬಹುದು. aksharadani.kannada@gmail.com.

TTS ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಆಸಕ್ತರು ಬಳಸಬಹುದು ಮತ್ತು ತಂತ್ರಜ್ಞರು ನಮ್ಮ ಜೊತೆ ಕೈ ಜೋಡಿಸಿ ಇದನ್ನು ಮತ್ತಷ್ಟು ಬೆಳೆಸಬಹುದು.

ಉಪಯೋಗಕ್ಕೆ ಮೊದಲು:
1. ಈ ಅಕ್ಷರದನಿ ತಂತ್ರಾಂಶವು UTF-8 ಅಥವಾ ಯೂನಿಕೋಡ್-8 ಅನ್ನು ಮಾತ್ರ ಸಂಸ್ಕರಿಸುತ್ತದೆ.
2. ತಂತ್ರಾಂಶವು ಕನ್ನಡ ಭಾಷೆಯಲ್ಲಿರುವ ಲಿಪಿ (UTF-8) ಅನ್ನು ಉಚ್ಚಾರಣೆಗೆ ಪರಿವರ್ತಿಸಿ ಕೇಳುಪಡಿಸುತ್ತದೆ
3. ಅಕ್ಷರದನಿ ತಂತ್ರಾಂಶವು ಸದ್ಯಕ್ಕೆ windows based ಕಂಪ್ಯೂಟರ್ ಗಳಲ್ಲಿ ಮಾತ್ರ ಉಪಯೋಗಿಸಬಹುದಾಗಿದೆ. (x86 & x64)

ಉಪಯೋಗದ ಬಗ್ಗೆ ಮಾಹಿತಿ:
1. ಉಚ್ಚಾರಣೆಗೆ ಪರಿವರ್ತಿಸಲು ಕನ್ನಡ ಲಿಪಿಯನ್ನು ಒಂದು ಫೈಲ್ ನಲ್ಲಿ ಸಂಗ್ರಹಿಸಬೇಕು.
2. ಮೊದಲು “ಕನ್ನಡ ಅಕ್ಷರದನಿ” ಎಂಬ ಫೈಲ್ ಅನ್ನು ಕ್ಲಿಕ್ ಮಾಡಿ ಅಕ್ಷರದನಿ ತಂತ್ರಾಂಶವನ್ನು ಜಾಗೃತಗೊಳಿಸಬೇಕು.
3. ಕನ್ನಡ ಲಿಪಿ ಇರುವ ಫೈಲ್ ಅನ್ನು “Select Input File” ಬಟನ್ ಒತ್ತಿ ಆರಿಸಿಕೊಳ್ಳಬೇಕು.
4. ನಂತರ “synthesize” ಬಟನ್ ಅನ್ನು ಒತ್ತಬೇಕು.
5. ಲಿಪಿಯು ಶಬ್ದಕ್ಕೆ (ಉಚ್ಚಾರಣೆಗೆ) ಪರಿವರ್ತನೆಗೊಂಡ ಬಳಿಕ ಪರಿವರ್ತಿತ ಪದಗಳ ಸಂಖ್ಯೆಯನ್ನು ಒಂದು ಮೆಸೇಜ್ ಬಾಕ್ಸ್ ನಲ್ಲಿ ತಿಳಿಸುತ್ತದೆ. ಅದರ ok ಬಟನ್ ಅನ್ನು ಒತ್ತಬೇಕು.
6. ಪರಿವರ್ತಿತ ಲಿಪಿಯನ್ನು ಕೇಳಲು “Play Sound” ಬಟನ್ ಅನ್ನು ಒತ್ತಬೇಕು. (ಕೇಳುವ ಮುನ್ನ ಕಂಪ್ಯೂಟರ್ ನಲ್ಲಿ ಧ್ವನಿ ಕೇಳಲು ಸೌಂಡ್ ಕಾರ್ಡ್ ಮತ್ತು ಅಗತ್ಯ ಸಲಕರಣೆಗಳಿವೆಯೇ ಎಂದು ಪರಿಶೀಲಿಸಿ).

ನಿರ್ಬಂಧನೆಗಳು:
ಅಕ್ಷರದನಿ ತಂತ್ರಾಂಶದ ಎಲ್ಲಾ ಹಕ್ಕುಗಳು ಕೆ.ಎಸ್.ಐ.ಟಿ. ಸಂಸ್ಥೆ ಮತ್ತು ತಂತ್ರಾಂಶದ ಅಭಿವೃದ್ಧಿ ಪಡಿಸಿದವರದ್ದಾಗಿರುತ್ತದೆ.
ಅಕ್ಷರದನಿ ತಂತ್ರಾಂಶವನ್ನು ಎಲ್ಲರಲ್ಲಿಯೂ ಮುಕ್ತವಾಗಿ ಹಂಚಬಹುದಾಗಿರುತ್ತದೆ.
ಅಕ್ಷರದನಿ ತಂತ್ರಾಂಶ ಅಥವಾ ಅದರ ಯಾವುದೇ ಭಾಗವನ್ನು ಅನುಮತಿಯಿಲ್ಲದೆ ಉಪಯೋಗಿಸುವುದನ್ನು ನಿಷೇಧಿಸಲಾಗಿರುತ್ತದೆ.
ಅಕ್ಷರದನಿ ತಂತ್ರಾಂಶದ ಉಪಯೋಗವು ವಾಣಿಜ್ಯೇತರ ಉದ್ದೇಶಗಳಿಗಾಗಿ ಮಾತ್ರ ಸೀಮಿತವಾಗಿರುತ್ತದೆ.
ಈ ತಂತ್ರಾಂಶವು ಯಾವುದೇ ಖಾತರಿ(guaranty)ಯನ್ನು ಹೊಂದಿರುವುದಿಲ್ಲ ಮತ್ತು ಇದರ ಉಪಯೋಗದಿಂದ ಆಗುವ ಯಾವುದೇ ತೊಂದರೆಗಳಿಗೆ ತಂತ್ರಾಂಶಕ್ಕೆ ಸಂಬಂಧಪಟ್ಟ ಯಾವ ಸಂಸ್ಥೆಯೂ ಜವಾಬ್ದಾರಿಯಲ್ಲ.


You can listen to Kannada, using E-SPEAK Text to Speech Software. Please download the software from the following link: https://kanaja.karnataka.gov.in/nvda.zip. You have to unzip the file into a folder of your choice. Then, inside the  folder, double click the NVDA.EXE file. This will activate the TTS and an icon will appear on hte System Tray. By right clicking, you can chose options and configure it as per your needs.

ಕನ್ನಡದಲ್ಲಿ ಅಕ್ಷರಗಳನ್ನು ಓದುವ ತಂತ್ರಾಂಶಗಳ ಬೆಳವಣಿಗೆ ಈಗಷ್ಟೇ ಆರಂಭವಾಗಿದೆ. ಕಣಜದಲ್ಲಿ ಈಗ ಆರಂಭಿಕವಾಗಿ ಈ-ಸ್ಪೀಕ್ ಎಂಬ ಮುಕ್ತ ತಂತ್ರಾಂಶವನ್ನು ಓದುಗರ ಅನುಕೂಲಕ್ಕಾಗಿ ಕೊಡುತ್ತಿದ್ದೇವೆ.

ಇದನ್ನು ರೂಪಿಸಿದವರು ಶ್ರೀ ಜೊನಾಥನ್ ಡಡ್ಡಿಂಗ್ಟನ್ ಎಂಬುವವರು. ಈ ತಂತ್ರಾಂಶಕ್ಕೆ ಕನ್ನಡ ಭಾಷೆಗೆ ಬೇಕಾದ ಅಗತ್ಯಗಳನ್ನು ರೂಪಿಸಿಕೊಟ್ಟವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಬಸೆ ಗ್ರಾಮದಲ್ಲಿ ಕೃಷಿಕರಾಗಿರುವ ದೃಷ್ಟಿಸವಾಲಿನ ಯುವಕ ಶ್ರೀ ಶ್ರೀಧರ್ ರವರು. ಅವರೇ ಕಣಜದಲ್ಲಿ ಇದನ್ನು ಬಳಸಿಕೊಳ್ಳಿ ಎಂದು ಕರೆಮಾಡಿ ತಿಳಿಸಿ ನೆರವು ನೀಡಿದ್ದಾರೆ.  ಅವರಿಗೆ `ಕಣಜ’ ತಂಡದ ಹೃತ್ಪೂರ್ವಕ ವಂದನೆಗಳು.

ಈ-ಸ್ಪೀಕ್ ತಂತ್ರಾಂಶವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

———————————————————————————————————————

ಈ ತಂತ್ರಾಂಶದ ಬಗ್ಗೆ ಶ್ರೀಧರ್ ರವರೇ ಹೇಳಿದ ಮಾತುಗಳನ್ನು ಓದಿ ಈ ತಂತ್ರಾಂಶವನ್ನು ತಿಳಿಯಿರಿ.

ಎಲ್ಲರಿಗೂ ನನ್ನ ನಮಸ್ಕಾರ. ಇದು ನನ್ನ ಮೊದಲ ಕನ್ನಡ ಬರಹ. ಈಗ ನಾನೂ ಕನ್ನಡದಲ್ಲಿ ಬರೆಯಬಲ್ಲೆ. ಇದಕ್ಕೆ ಸಹಾಯ ಮಾಡಿದ್ದು ಈಸ್ಪೀಕ್ ಎಂಬ ಕನ್ನಡ ಟೆಕ್ಸ್ಟ್ ಟು ಸ್ಪೀಚ್ (text to speech) ಅಂದರೆ ಕನ್ನಡದಲ್ಲಿ ಬರೆದ ಅಕ್ಷರಗಳನ್ನು ಧ್ವನಿ ಅಥವ ಮಾತಿನ ರೂಪಕ್ಕೆ ಬದಲಾಯಿಸುವ ಒಂದು ತಂತ್ರಾಂಶ. ಇದರ ಸಹಾಯದಿಂದಾಗಿ ನಾನೂ ಕನ್ನಡ ಬರೆಯಲು ಸಾಧ್ಯವಾಗಿದೆ. ಕನ್ನಡವಲ್ಲದೇ ಈ ತಂತ್ರಾಂಶದಲ್ಲಿ ಇನ್ನೂ ಅನೇಕ ಭಾಷೆಗಳಿವೆ. ಅವುಗಳಲ್ಲಿ ನಾಲ್ಕೈದು ಭಾರತೀಯ ಭಾಷೆಗಳೂ ಸೇರಿವೆ.

ತಾಂತ್ರಿಕವಾಗಿ ಹೇಳುವುದಾದರೆ ಈ ತಂತ್ರಾಂಶವು ಫಾರ್‌ಮೆಂಟ್ ಸಿಂಥೆಸಿಸ್ ಮೆಥಡ್ (forment synthesis method) ಅನ್ನು ಬಳಸುತ್ತದೆ. ಇದರಲ್ಲಿ ಧ್ವನಿ ತರಂಗಗಳನ್ನು ಕಂಪ್ಯೂಟರೆ ಉತ್ಪತ್ತಿ ಮಾಡುತ್ತದೆ. ಆದುದರಿಂದ ಇದರ ಧ್ವನಿ ಮನುಷ್ಯರ ಧ್ವನಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಆದರೆ ಅತಿ ಕಡಿಮೆ ಕಂಪ್ಯೂಟರ್ ಮೆಮೋರಿಯನ್ನು ಇದು ಉಪಯೋಗಿಸಿಕೊಳ್ಳುವುದರಿಂದ ಇದನ್ನು ಮೊಬೈಲ್ ಫೋನುಗಳಲ್ಲಿಯೂ ಬಳಸಬಹುದು. ಈ ನಿಟ್ಟಿನಲ್ಲಿ ಈಗಾಗಲೆ ಕೆಲಸ ಆರಂಭವಾಗಿದೆ. ಈ ತಂತ್ರಾಂಶವು ಎಸ್.ಎಸ್.ಎಂ.ಎಲ್ [SSML (Speech Synthesis Markup Language)] ಅನ್ನು ಸ್ವಲ್ಪ ಮಟ್ಟಿಗೆ ಬಳಸಿಕೊಂಡಿರುವುದರಿಂದ ಇದರ ಉಚ್ಚಾರಣೆಗಳನ್ನು ಸುಲಭವಾಗಿ ಬದಲಾಯಿಸಬಹುದು. ಈ ತಂತ್ರಾಂಶವನ್ನು ಇತರೆ ಧ್ವನಿ ಜನಕ ತಂತ್ರಾಂಶಗಳಿಗೆ ಫ್ರಂಟ್-ಎಂಡ್ (Front-end) ತಂತ್ರಾಂಶವಾಗಿಯೂ ಸಹಾ ಬಳಸಬಹುದಾಗಿದೆ. ಇದು “ವಿಂಡೋಸ್” (Windows) ಮತ್ತು “ಲೈನಕ್ಸ್” (Linux) ಕಂಪ್ಯೂಟರ್ ತಂತ್ರಾಂಶಗಳಲ್ಲಿ (operating systems) ಲಭ್ಯವಿದೆ. ಇದನ್ನು ಯಾವುದೇ ಸ್ಕ್ರೀನ್‌ರೀಡರ್‌ಗಳ ಜೊತೆಗೂ ಉಪಯೋಗಿಸಬಹುದು.

ಈ ತಂತ್ರಾಂಶವನ್ನು ಶ್ರೀ ಜೊನಾಥನ್ ಡಡ್ಡಿಂಗ್‌ಟನ್ ಎಂಬ ಒಬ್ಬ ಆಂಗ್ಲ ವ್ಯಕ್ತಿ ಅಭಿವೃದ್ಧಿ ಪಡಿಸಿದ್ದಾರೆ. ಇದೊಂದು ಉಚಿತ ಹಾಗು ಓಪನ್‌ಸೋರ್ಸ್ ತಂತ್ರಾಂಶವಾಗಿದೆ. ಇದರ ಕನ್ನಡ ರೂಪವನ್ನು ಸಿದ್ಧಪಡಿಸುವಲ್ಲಿ ನಾನು ನನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಶ್ರೀ ಡಡ್ಡಿಂಗ್‌‌ಟನ್ ಅವರೇ ಎಲ್ಲಾ ಭಾಷೆಗಳನ್ನೂ ಈಸ್ಪೀಕ್ ತಂತ್ರಾಂಶದಲ್ಲಿ ಸೇರಿಸುತ್ತಾರೆ. ಆದರೆ ಅದಕ್ಕೆ ಆ ಭಾಷೆಯನ್ನು ಮಾತನಾಡುವವರ ನೆರವನ್ನು ಪಡೆದುಕೊಳ್ಳುತ್ತಾರೆ. ಇದುವರೆಗೆ ಈ ತಂತ್ರಾಂಶದಲ್ಲಿ ಸುಮಾರು ೭೪ ಭಾಷೆಗಳಿವೆ. ಇವುಗಳಲ್ಲಿ ಹಲವು ಭಾಷೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಂಧರೇ ಡಡ್ಡಿಂಗ್‌ಟನ್ ಅವರಿಗೆ ನೆರವಾಗಿದ್ದಾರೆ.

ಈ ತಂತ್ರಾಂಶವು ಎಲ್ಲಾ ಅಂಧರಿಗೂ ಉಚಿತವಾಗಿ ಸಿಗಬೇಕೆಂಬುದು ನನ್ನ ಆಶಯ. ಆದುದರಿಂದ ನಾನು  ಇದನ್ನು ಎನ್‌ವೀಡೀಏ ಎಂಬ ಉಚಿತ ಹಾಗು ಓಪನ್‌ಸೋರ್ಸ್ ಸ್ಕ್ರೀನ್‌ರೀಡರ್ ತಂತ್ರಾಂಶದೊಂದಿಗೆ ನೀಡುತ್ತಿದ್ದೇನೆ. ಇದು ಬರೀ ಅಂಧರಿಗಾಗಿ ಮಾತ್ರವಲ್ಲ. ಕನ್ನಡ ಭಾಷೆಯಲ್ಲಿ ಕಂಪ್ಯೂಟರನ್ನು ಮಾತನಾಡಿಸುವ ಆಶೆ ಹೊಂದಿರುವ ಎಲ್ಲರಿಗಾಗಿ.

ಕನ್ನಡ ಮಾತನಾಡಿಸಲು, ಇಲ್ಲಿರುವ ಜಿಪ್ ಫೈಲನ್ನು ನಿಮ್ಮ ಗಣಕದಲ್ಲಿ ನಿಮಗೆ ಬೇಕಾದ ಜಾಗದಲ್ಲಿ ಎಕ್ಷ್ಟ್ರಾಕ್ಟ್ ಮಾಡಿಕೊಳ್ಳಿ ಮತ್ತು “NVDA.exe” ಅನ್ನು ರನ್ ಮಾಡಿ. ನಿಮ್ಮ ಕಂಪ್ಯೂಟರ್ ಕನ್ನಡದಲ್ಲಿ ಮಾತನಾಡುತ್ತದೆ!

ಗಮನಿಸಿ: ಈಸ್ಪೀಕ್ ಯುನಿಕೋಡ್ ಅಕ್ಷರಗಳನ್ನು ಮಾತ್ರ ಓದುತ್ತದೆ.

ಈ ಬಗ್ಗೆ ಹೆಚ್ಚಿನ ತಾಂತ್ರಿಕ ಮಾಹಿತಿಗೆ ಶ್ರೀ ಶ್ರೀಧರರನ್ನು ಸಂಪರ್ಕಿಸಿ tss.abs@gmail.com ಈಮೈಲ್ ವಿಳಾಸದಲ್ಲಿ ಸಂಪರ್ಕಿಸಿ ಅಥವಾ ೯೯೮೦೯೮೯೧೭೧ ಸಂಖ್ಯೆಯ ಮೊಬೈಲ್ ದೂರವಾಣಿಗೆ ಕರೆ ಮಾಡಿ. ಕಣಜಕ್ಕೆ ನೆರವಾದ ಅವರನ್ನು ಅಭಿನಂದಿಸಲು ಮರೆಯಬೇಡಿ!

ಮುಂದಿನ ದಿನಗಳಲ್ಲಿ ಈ ತಂತ್ರಾಂಶಕ್ಕಿಂತ ಹೆಚ್ಚು ಉಪಯುಕ್ತವಾಗುವ ತಂತ್ರಾಂಶವು ಅಭಿವೃದ್ಧಿಯಾದರೆ ಅದನ್ನು ಖಂಡಿತ ಕಣಜದಲ್ಲಿ ನೀಡುತ್ತೇವೆ.

ವಂದನೆಗಳು.

ಕಣಜ ತಂಡ

[/fusion_text][/fusion_builder_column][/fusion_builder_row][/fusion_builder_container]