ಪಲ್ಲವಿ : ಕಣ್ಣಾ ಮುಚ್ಚೇ ಕಾಡೇ ಗೂಡೇ ಕೃಷ್ಣನ ಕೂಡಿ ಆಡೋಣ
ಕರುಗಳ ಬಿಟ್ಟು ಹಾಲನು ಉಣಿಸಿ ಮಿಕ್ಕ ಹಾಲನು ಕುಡಿಯೋಣ

ಚರಣ :  ಮನೆ ಮನೆ-ಗೋಗಿ ಕಾಣದ ಹಾಗೆ ಬೆಣ್ಣೆ ಮುದ್ದೆ ತಿನ್ನೋಣ
ಎದ್ದು ಬಿದ್ದು ಓಡೋಣ ದೊಣ್ಣೆ ಏಟನು ತಪ್ಪೋಣ

ಸಿಡುಕು ಮೂತಿ ಬಲರಾಮಣ್ಣ ಆಟವ ಕೆಡಿಸಲು ಬಂದಣ್ಣ
ಆಟಕೆ ಉಂಟು ಲೆಕ್ಕಕ್ಕ ಇಲ್ಲ ಸನ್ನೆ ಮಾಡಿದ ಕೃಷ್ಣಣ್ಣ

ಬುಗುರಿ ದಾರ ಸುತ್ತೋಣ ಚಿನ್ನಿ ದಾಂಡು ಆಡೋಣ
ನದಿಯಲಿ ಇಳಿದು ಈಜೋಣ ಮೀನಿನ ಹಿಂದೆ ಓಡೋಣ

ಬೆಟ್ಟ ಗುಡ್ಡ ಹತ್ತೋಣ ನೆಲ್ಲಿಕಾಯಿ ಕೀಳೋಣ
ಜಿಂಕೆಮರಿಗಳ ಹಿಡಿಯೋಣ ಹುಲಿಯು ಬಂದರೆ ಓಡೋಣ

ಮತ್ತೆ ನಾಳೆ ಸೇರೋಣ ಕೃಷ್ಣನ ಕೂಡಿ ಆಡೋಣ
ಆಟಕೆ ಜಯವನು ಹೇಳೋಣ ಕೃಷ್ಣನೇ ಗೆದ್ದ ಅನ್ನೋಣ