ಸದ್ದಿಲಿಗತ್ತಲು, ಕತ್ತಲದೆತ್ತಲು!
ಸಿಂಹಗಡದಾ ಕೋಟೆಯ ಸುತ್ತಲು
ಕೃಷ್ಣಪಕ್ಷದ ಕತ್ತಲು! – ಕಗ್ಗತ್ತಲು!
ಚಳಿಗಾಲದ ಚಳಿ ಕೊರೆಯುತಲಿತ್ತು,
ಕುಳಿರ್ಗಾಳಿಯು ಸುಯ್ಯನೆ ಬೀಸಿತ್ತು;
ಮುದುಗಿಪ ಮಾಗಿಯ ಚಳಿಯಲಿ ಕಪ್ಪು
ಹೆಪ್ಪುಗಟ್ಟಿತ್ತು! – ಹೆಪ್ಪುಗಟ್ಟಿತ್ತು!
ನಿದ್ರಿತ ಭೂಮಿಯ ಮನದಲಿ ದುರ್ಗವು
ಸ್ವಪ್ನವಾಗಿತ್ತು! – ಸ್ವಪ್ನವಾಗಿತ್ತು!
ಘನತಿಮಿರಾವೃತ ನಿಶ್ಚಲನಭದಲಿ    ೧೦
ತಾರೆಗಳೆಸೆದುವು ಮೌನದಲಿ;
ಸದ್ದೊಂದಾದರು ಹೊರಮಡಲಿಲ್ಲ
ದುರ್ಗಮ ಕೇಸರಿದುರ್ಗದಲಿ!
ಸುತ್ತಲರಣ್ಯವು ಘೂರ್ಮಿಸುತಿತ್ತು,
ಕೋಟೆಯು ಬೆಟ್ಟದ ನೆತ್ತಿಯೊಳಿತ್ತು,
ಹತ್ತಲು ಹಾದಿಯು ಕಡಿದಾಗಿತ್ತು,
ಹತ್ತಲೆಳಸಿದರೆ ಬರುವುದು ಮಿತ್ತು!
ದುರ್ಗದ ರಕ್ಷಣೆಗರ್ಪಿತ ಪ್ರಾಣರು,
ವಿಕ್ರಮ ಕ್ಷತ್ರಿಯ ವಜ್ರತ್ರಾಣರು
ಸಾವಿರದಿನ್ನೂರಾಳುಗಳು   ೨೦
ಇದ್ದರಲ್ಲಿ ಕಟ್ಟಾಳುಗಳು!
ಉದಯಭಾನು ನಿರುಪಮ ರಣದಲ್ಲಿ;
ಉದಯಭಾನು ದಳವಾಯಿಯು ಅಲ್ಲಿ!
ಕ್ಷತ್ರಿಯ ಪೌರುಷಕುತ್ತಮ ತವನಿಧಿ;
ದಿಲ್ಲೀಶ್ವರನಿಗೆ ಅವನೇ ಪ್ರತಿನಿಧಿ!
ಭೀಮ ಪರಾಕ್ರಮಿಯಾತನ ವಶದಲಿ
ದುರ್ಗವಿದ್ದುದು ಗರ್ವದಲಿ,
ಕೃಷ್ಣಪಕ್ಷದ ಪರ್ವದಲಿ!


ಯಾರವರಲ್ಲಿ? ಕಗ್ಗತ್ತಲಲಿ
ಸಿಂಹಗಡದಾ ಹೊರವಳಯದಲಿ?    ೩೦
ನೀರಿನೊಳಲೆಯುವ ಮೀನುಗಳಂತೆ,
ಬಾನಿನೊಳಲೆಯುವ ಮೋಡಗಳಂತೆ,
ಮಸಣದೊಳಲೆಯುವ ಮರುಳ್ಗಳಂತೆ
ಸಾವಿನ ದೂತರ ನೆರಳ್ಗಳಂತೆ
ತಗ್ಗು ದಿಣ್ಣೆಗಳ ನಾಡಿನಲಿ
ಎದ್ದ ಕುರುಚಲು ಕಾಡಿನಲಿ
ಕದ್ದು ಮೆಲ್ಲನೆ ಬರುತಿಹರು! – ನುಗ್ಗಿ ಬರುತಿಹರು!
ಯಾರವರಲ್ಲಿ? ಕಗ್ಗತ್ತಲಲಿ
ಸಿಂಹಗಡದಾ ಹೊರವಳಯದಲಿ?
ಕೃಷ್ಣಪಕ್ಷದ ನವಮಿಯ ರಾತ್ರಿ,          ೪೦
ಮಾಘಮಾಸದ ನಡುರಾತ್ರಿ, – ನಟ್ಟನಡುರಾತ್ರಿ!
ಐನೂರಾಳ್ಗಳು, ಮಾವಳಿಯಾಳ್ಗಳು,
ತಾನಾಜಿಯ ಕಟ್ಟಾಳುಗಳು!
ಐನೂರಾಳ್ಗಳು, ಮಸೆದಿಹ ಬಾಳ್ಗಳು,
ಶಿವರಾಯನ ವೀರಾಳುಗಳು!
ತಾನಾಜಿಯ ಸೇನಾಧಿಪತನದಲಿ,
ಸೂರ್ಯಾಜಿಯ ಉಪದಳಪತಿತನದಲಿ,
ದುರ್ಗಮ ಕೇಸರಿದುರ್ಗವ ಜಯಿಸಲು
ಮೌನದಿ ಬಂದರು ರಾತ್ರಿಯಲಿ! – ಮಧ್ಯರಾತ್ರಿಯಲಿ?
ಪಿಸು ಮಾತೊಂದನು ನುಡಿಯಲೆ ಇಲ್ಲ          ೫೦
ಕೈದುಗಳೊಂದರ ಖಣಿ ಖಿಣಿ ಇಲ್ಲ.
ಐನೂರಾಳ್ಗಳು ಒಬ್ಬನೊಲು
ಹಿಂಬಾಲಿಸಿದರು ವೀರನನು!
ರಾಯನ ಬಲಗೈಬೀರನನು!
ಕಾಲಾಂತಕ ರಣಧೀರನನು!
ರಣವಿಕ್ರಮ ತಾನಾಜಿಯನು!
ಕಗ್ಗತ್ತಲು! ಕಗ್ಗತ್ತಲು ಸುತ್ತಲು!
ನೋಡಿದರೇನಿದೆ? ಕುರುಡಿಹುದೆತ್ತಲು!
ಮುಗ್ಗರಿಸಿದರೂ ಧೃತಿಗೆಡಲಿಲ್ಲ,
ನಡನಡುಗಿದರೂ ಎದೆಗೆಡಲಿಲ್ಲ;       ೬೦
ಭಟನೊಬ್ಬನು ಹುಬ್ಬಿಕ್ಕಲೆ ಇಲ್ಲ,
ತಾನಾಜಿಯ ಬಳಿಯಲಿ ಭಯವಿಲ್ಲ!
ಬಂಡೆ ಬಂಡೆಯಲಿ ಹೊದರು ಹೊದರಿನಲಿ
ನುಗ್ಗಿ ಬೆಟ್ಟವನೇರಿದರು!
ದುರ್ಗದ ಬುಡವನು ಸೇರಿದರು.
ಭಿತ್ತಿಯು ದುರ್ಗಮವಾಗಿತ್ತು,
ಚಳಿಯಲಿ ಹಿಮಗಿರಿಯಾಗಿತ್ತು! – ತಣ್ಣಗಾಗಿತ್ತು.


ಸದ್ದಿಲಿಗತ್ತಲು, ಕತ್ತಲದೆತ್ತಲು!
ಸಿಂಹಗಡದಾ ಕೋಟೆಯ ಸುತ್ತಲು
ಕೃಷ್ಣಪಕ್ಷದ ಕತ್ತಲು! – ಕಗ್ಗತ್ತಲು!       ೭೦
ನೂಲೇಣಿಯ ಕರದೊಳು ಹಿಡಿದೊಡನೆಯೆ
ತಾನಾಜಿಯು ಕೋಟೆಯನೇರಿದನು.
ಕಡಿದಾಗಿದ್ದುದು ಕೋಟೆಯ ಪೌಳಿಯು,
ಆದರು ಧೈರ್ಯದೊಳಡರಿದನು,
ತಾನಾಜಿಯು ಮೇಲಡರಿದನು!
ಏರುತಲೇರುತ, ಮೇಲ್ ಮೇಲೇರುತ
ಕಣ್ಮರೆಯಾದನು ಕತ್ತಲಲಿ!
ಮೂಡಿದನಾಳ್ಗಳ ಚಿತ್ತದಲಿ!
ಸೇನಾನಿಯ ಸಾಹಸವನು ನೆನೆದು
ಮಾವಳಿಯಾಳ್ಗಳು ಹಿಗ್ಗಿದರು! – ಹಿಗ್ಗಿದರು!     ೮೦
“ಎಂದಿಗೆ ಪೌಳಿಯ ಹತ್ತುವೆವು?
ಎಂದಿಗೆ ದುರ್ಗವ ಮುತ್ತುವೆವು?
ಎಂದಿಗೆ ವಿಜಯ ಸುವಾರ್ತೆಯನು
ಶಿವರಾಯಗೆ ಕೊಂಡೊಯ್ಯುವೆವು?”
ಎಂದಾ ಕೆಚ್ಚಿನ ಮಾವಳಿ ವೀರರು,
ಪಶ್ಚಿಮ ಘಟ್ಟದ ಅರಣ್ಯ ಶೂರರು
ಕುದಿದರು ಮನದಲ್ಲಿ! ಕುದಿದರು ತನುವಿನಲಿ!
ನೆನೆದರು ತಾನಾಜಿಯ ಪೂಣ್ಕೆಯನು,
ನೆನೆದರು ಶಿವರಾಯನ ಕಾಣ್ಕೆಯನು,
ನೆನೆದರು ತಮ್ಮಾ ಕೀರ್ತಿಯನು – ಆ –          ೯೦
ರಾಧಿಸಿದರು ಜಯಮೂರ್ತಿಯನು!
ಮಾವಳಿಯಾಳ್ಗಳು ಕೆಳಗಡೆ ಇಂತಿರೆ,
ವಿಜಯ ವನಿತೆಯನು ಭಾವಿಸಿ ನಿಂತಿರೆ,
ಕರಲಾಘವದಿಂ, ಪದಲಾಘವದಿಂ,
ತಾನಾಜಿಯು ಮೇಲೇರಿದನು:
ಪೌಳಿಯ ತುದಿಯನು ಸೇರಿದನು!
ದುರ್ಗದ ಭಿತ್ತಿಯ ಶಿಖರವ ಮುಟ್ಟಿ,
ನೂಲೇಣಿಯ ಬೇಗನೆ ಬಿಗಿಕಟ್ಟಿ
ಕಗ್ಗತ್ತಲಕಡೆ ನೋಡಿದನು! – ಸುಮ್ಮನೆ ನೋಡಿದನು.


ಪೂರ್ವಾಕಾಶದ ನೀಲದಿಗಂತದಿ,     ೧೦೦
ಕತ್ತಲ್ಗಡಲಿನ ದೂರಪ್ರಾಂತದಿ,
ಇರುಳ್ವೆಣ್ ನೆನೆಯುವ ಬೆಳಕಿನ ನೆನಸೋ?
ಕದ್ದಿಂಗಳು ಕಾಣುವ ಬೆಳ್ಗನಸೊ?
ಎಂಬಂದದಿ ಕಾಂತಿಯು ಮೈದೋರಿ,
ಒಯ್ಯನೆ ಹೊಂಬಣ್ಣವು ಹೊಗರೇರಿ,
ಜೊನ್ನರೆದುಂಬಿದ ಹೊಂಗೊಡದಂದದಿ,
ಕತ್ತಲೆಗೊದಗಿದ ಹಣೆಗಣ್ಣಂದದಿ,
ಕೊಂಕಿದ ಕುಂಕುಮದರೆ ಬಟ್ಟಂದದಿ,
ಕೃಷ್ಣಪಕ್ಷದ ನವಮಿಯ ಚಂದ್ರನು
ಮಂದರುಚಿಯಲಿ ಬಂದನು! – ಮೆಲ್ಲನೈತಂದನು!        ೧೧೦
ತೊಲಗಿದುದೊಯ್ಯನೆ ಕತ್ತಲುಬೀಡು,
ಕಪ್ಪಿನ ಬಸಿರಿಂದುಣ್ಮಿತು ನಾಡು;
ಬೆಟ್ಟದ ಮೇಲ್ ಬೆಳ್ದಿಂಗಳು ಹಬ್ಬಿತು
ಸಿಂಹಗಡವನು ತಬ್ಬಿತು! –
ಸಿಂಹಗಡವನು ತಬ್ಬಿತು,
ಮಾವಳಿಗಳ ಬಾಳುಬ್ಬಿತು!
ಶೈಶಿರಕಾಲದ ಚಳಿ ಕೊರೆದಿತ್ತು,
ಮಂದ ಸಮೀರಣ ಬೀಸಿತ್ತು.
ದುರ್ಗದಲೆಲ್ಲೆಡೆ ನೀರವವಿತ್ತು; – ಶಾಂತಿ ಹಬ್ಬಿತ್ತು!
ಎತ್ತ ನೋಡಿದರೆಲ್ಲ ಜಗತ್ತು  ೧೨೦
ನಿದ್ರಾಮುದ್ರಿತವಾಗಿತ್ತು!
ಪೌಳಿಯ ಬುಡದಲಿ ನಿಂತಾ ಸೇನೆಯು
ನೋಡಿತು ಮೇಗಡೆ ತಲೆಯೆತ್ತಿ;
ಭಿತ್ತಿಯ ನೆತ್ತಿಯೊಳಿದ್ದಾ ವೀರನು
ಸನ್ನೆಯ ಕೊಟ್ಟನು ಕೈಯೆತ್ತಿ:
ಗೋಡೆಯ ತುದಿಯಲಿ ನಿಂತಾ ಮೂರ್ತಿಯು,
ಬಿತ್ತರವಾದಾ ಬಾನಿನ ಪಟದಲಿ
ಕೆತ್ತಿ ಮೆತ್ತಿದ ಪುತ್ತಳಿಯಂದದಿ,
ನೋಟಕೆ ಚಿತ್ತರವಾಗಿತ್ತು! – ಧೀರವಾಗಿತ್ತು!
ಮೂರ್ತಿಯ ಕಂಡಾ ಮಾವಳಿಯಾಳ್ಗಳು         ೧೩೦
ಗಗನದೊಳವರಿಗೆ ಮೈದೋರಿದನೋ
ವೀರರ ದೇವನೆ ಎಂಬಂದದಲಿ,
ಕೈಮುಗಿದವನಿಗೆ ಬಾಗಿದರು,
ವೀರಪೂಜೆಯ ಮಾಡಿದರು!
ತಡಮಾಡದೆ ದನಿಗೈಯದೆ ಒಡನೆಯೆ
ನೂಲೇಣಿಯ ಕಡೆ ಸಾಗಿದರು,
ಮುನ್ನೂರಾಳ್ಗಳು ಸಾಗಿದರು!
ಇನ್ನೂರಾಳ್ಗಳು ಸೂರ್ಯಾಜಿಯ ಜೊತೆ
ಸಮಯಕ್ಕೊದಗಲು ಹಿಂದೆಯೆ ನಿಂತರು
ದುರ್ಗದ ಭಿತ್ತಿಯ ಮೂಲದಲಿ.          ೧೪೦
ಬೇಗಬೇಗನೆ ಹತ್ತಿದರೆಲ್ಲರು,
ಸಹ್ಯಗಿರಿಗಳ ಗರಡಿಯ ಮಲ್ಲರು;
ಇಂತು ಲಗ್ಗೆಯ ಹತ್ತುವ ಜವದಲಿ
ಕೈದುಗಳೊಲೆಯುವ ಖಣಿಖಿಣಿರವದಲಿ
ಇರುಳ ಮೌನವು ಬೆಚ್ಚಿತು! – ಸದ್ದು ಹೆಚ್ಚಿತು!


ಇರುಳ ಮೌನವು ಬೆಚ್ಚಿತು! – ಸದ್ದು ಹೆಚ್ಚಿತು!
ಜೋಂಪಿಸುತಿದ್ದಾ ಕಾವಲುಗಾರನ
ಕಿವಿಯ ತೆರೆಯನು ಚುಚ್ಚಿತು! – ಸದ್ದು ಹೆಚ್ಚಿತು!
ಪಹರಿಯು ಕಣ್ದೆರೆದೊಡನೆಯೆ ಮುಂದಕೆ
ಬೇಗನೆ ಶಂಕಿಸಿ ಸಾಗಿದನು;           ೧೫೦
ತಾನಾಜಿಯು ಬಿಟ್ಟಂಬಿನ ಪೆಟ್ಟಿಗೆ
ಬಿದ್ದನು ಜೀವವ ನೀಗಿದನು!
ಧೊಪ್ಪನೆ ಬಿದ್ದಾ ಪಹರಿಯ ಕಟಿಯಲಿ
ಖಡ್ಗಪಿಧಾನವು ಚೀರಿದುದು!
ಸದ್ದಿಲಿಯಿರುಳೂ ಚೀರಿದುದು!
ಸದ್ದನು ಕೇಳಿದ ಪಹರಿಗಳೆಲ್ಲರು
ಒಬ್ಬೊಬ್ಬರೆ ಬಂದರು ಆಯೆಡೆಗೆ;
ಸೇನಾನಿಯು ಎಚ್ಚಲುಗುಗಳೂಟಕೆ
ತುತ್ತಾದರು ಎಲ್ಲರು ಕಡೆ ಕಡೆಗೆ!
ಮಾವಳಿಗಳು ಮೇಲೇರಿದರು,         ೧೬೦
ಕೋಟೆಯ ನೆತ್ತಿಯ ಸೇರಿದರು.
ದುರ್ಗವ ಹಲ್ಲಾ ಹತ್ತಿದರು
ಸಿಂಹಗಡವನು ಮುತ್ತಿದರು!
ನಿದ್ದೆಯೊಳದ್ದಿದ ಕ್ಷತ್ರಿಯ ವೀರರ
ಎದೆಯಲಿ ಭೀತಿಯ ಬಿತ್ತಿದರು!
ಮಲಗಿದ ವೀರರು ತೆಕ್ಕನೆ ಎದ್ದು
ಅಸ್ತ್ರಶಸ್ತ್ರಗಳ ಕೈದುಡುಕಿ,
ಹಿಂದು ಮುಂದನು ನೋಡದೆ ನಡೆದರು
ಸದ್ದು ಬರುವಾ ಕಡೆ ಹುಡುಕಿ!
ಹಿಂದಕೆ ಮುಂದಕೆ ತಿರುಗುವ ಸದ್ದು,  ೧೭೦
ಮೊದಲಲಿ ತುಂಬಿತು ಹೆಜ್ಜೆಯ ಸದ್ದು.
ಒಡನೆಯೆ ಪಹರಿಗಳೆಲ್ಲರು ಬಿದ್ದು,
ಖಣಿಖಿಣಿ ಎಂದುದು ಒರೆಗಳ ಸದ್ದು,
ಕೂಡಲೆ ಮಾವಳಿಯಾಳ್ಗಳ ಸದ್ದು
ಕೇಳಿಸಿತೆಲ್ಲೆಡೆ ರೌಕುಳವೆದ್ದು;
ಅನ್ನೆಗಮಲ್ಲಿಗೆ ರಕ್ಷಕರೆದ್ದು
ನುಗ್ಗುತ ಬಂದರು! ಹೆಚ್ಚಿತು ಸದ್ದು!
ಮಾವಳಿಯಾಳ್ಗಳ ನುಗ್ಗಿನಲಿ
ಕಳಕಳವಾದುದು ದುರ್ಗದಲಿ – ಸಿಂಹದುರ್ಗದಲಿ!


ಮಿತ್ರರದಾರು? ಶತ್ರುಗಳಾರು?       ೧೮೦
ಸತ್ತವರಾರು? ಕೊಲ್ಲುವರಾರು?
ಎಂಬುದನರಿಯದೆ ರಕ್ಷಕರಾಗ
ಪಂಜುಗಳನು ಹೊತ್ತಿಸಿದರು ಬೇಗ;
ಕೂಡಲೆ ಕಾಂತಿಯು ಹೆಚ್ಚಿದುದು
ಕೋಲಾಹಲವೂ ಹೆಚ್ಚಿದುದು!
ಮಾವಳಿಯಾಳ್ಗಳು ಮುತ್ತಿದರು
ರಿಪುಮೋಹರವನು ಕುತ್ತಿದರು!
ಕ್ಷತ್ರಿಯ ವೀರರ ಪೆರ್ಬಡೆಯಲ್ಲಿ
ಕೆಲವರು ಬಿದ್ದರು, ಕೆಲವರು ಸತ್ತರು,
ಹಲವರು ಮುಂದಕೆ ನುಗ್ಗಿದರು;        ೧೯೦
ಜಯ! ಜಯ! ಎನ್ನುತ ಝಳಪಿಸಿ ಖಡ್ಗವ
ಮಾವಳಿಯಾಳ್ಗಳ ಮುಗ್ಗಿದರು!
ಸಂಘಟ್ಟಣೆಯಲಿ ಹೆಚ್ಚಿತು ಹೊಯ್ಲು;
ನೂರ್ಮಡಿಯಾಯಿತು ಕದನದ ಹುಯ್ಲು!
ತಾನಾಜಿಯು ಕಾಲಾಂತರನಂದದಿ
ಮುಂಬರಿದನು ಕರಖಡ್ಗದಲಿ;
ರಜಪೂತರು ನಿಲಲಾರದೆ ಹಿಂದಕೆ
ಸರಿದರು ಕುಗ್ಗುತಲೊಗ್ಗಿನಲಿ.
ಹಿಂದಕೆ ಮುಂದಕೆ ಯೋಧರು ನುಗ್ಗಿದ –
ರಿರಿದರು ಹಾಯ್ದರು ಯುಕ್ತಿಯಲಿ! – ಭೀಮಶಕ್ತಿಯಲಿ!    ೨೦೦
ಪ್ರಳಯ ಭಯಂಕರವಾದುದು ಧೀರರ
ಘೋರಕಠಾರಿಯ ತಾಡನವು! – ಚಂಡತಾಡನವು!
ತಾನಾಜಿಯೆ ರಣರಂಗದ ಜೀವವು
ಧೈರ್ಯವು ಬಲವಾವೇಶಗಳು;
ತಾನಾಜಿಯೆ ಮಾವಳಿಗಳ ಹೃದಯವು
ಸಂತಸಮುಲ್ಲಸ ಕೀರ್ತಿಗಳು!
“ಕಾದಿರಿ ವೀರರೆ! ರಾಜಶಿವಾಜಿಯ
ನಚ್ಚಿನ ಮೆಚ್ಚಿನ ಪಟುಭಟರೇ!
ನೆಚ್ಚಿದೆ ನಿಮ್ಮೊಳು, ಕೆಚ್ಚಿದೆ ನಿಮ್ಮೊಳು,
ಸೆರೆಹಿಡಿಯಿರಿ ಜಯಲಕ್ಷ್ಮಿಯನು!
ಸತ್ತರೆ ಸಗ್ಗವು! ಎಂತೂ ಕೀರ್ತಿಯು! ೨೧೦
ಬದುಕಲು ರಾಜನ ಮನ್ನಣೆಯು!
ನುಗ್ಗಿ ಮುಂದಕೆ ರಿಪುಗಳನಿರಿಯಿರಿ!
ನೆನೆಯಿರಿ ತಾಂಡವ ಮೂರ್ತಿಯನು!
ನೆನೆಯಿರಿ ಮಾತೆ ಭವಾನಿಯನು!”
ಇಂತು ದನಿಗೈದನು ತಾನಾಜಿಯು
ಮುಂಬರಿದಸಿಯನು ಝಳಪಿಸುತ!
ಸಾಯುವರೊರಲಿದರುಳಿದವರಳಿದರು,
ಖಣಿಖಿಟಲೆಂದುವು ಕೈದುಗಳು;
ಕಳದಲಿ ರಕ್ತದ ಕೆಸರಾಯ್ತು!            ೨೨೦
ಕೃಷ್ಣಪಕ್ಷದ ನವಮಿಯ ಚಂದ್ರನು
ಮೇಲೆಸೆದನು ಆಕಾಶದಲಿ; – ಮಂದ ಪ್ರಕಾಶದಲಿ!
ಮಾಘಮಾಸದ ಚಳಿ ಕೊರೆದಿತ್ತು,
ಮಂದ ಸಮೀರಣ ಬೀಸಿತ್ತು; – ಇಬ್ಬನಿ ಸೂಸಿತ್ತು


ಕೆಳಗಡೆ ನಿಂತಾ ಸೈನಿಕರೆಲ್ಲರು
ಕೋಲಾಹಲವನು ಕೇಳಿದರು,
ವೀರಾವೇಶವ ತಾಳಿದರು!
ಸಮರ ಧ್ವನಿಯನು ಕೇಳುತ ಕೇಳುತ
ಕುದಿದನು ಮನದಲಿ ಸೂರ್ಯಾಜಿ!
ಅಣ್ಣನಲ್ಲವೆ ತಾನಾಜಿ?       ೨೩೦
ಗೋಡೆಯನೇರಲು, ಕೋಟೆಯ ಸೇರಲು,
ಕದನವ ನೋಡಲು, ಕಲಿಗಳ ಕೂಡಲು,
ನೆರವನು ನೀಡಲು ಸೋದರಗೆ,
ಪೆಟ್ರೋಲೆಡೆಯಿಹ ಬೆಂಕಿಯ ತೆರದಲಿ,
ಕರವಾಲವ ತುಡುತುಡುಕುತ ಕರದಲಿ
ಕುದಿದನು ಮನದಲಿ ಸೂರ್ಯಾಜಿ!
ಅಣ್ಣನಲ್ಲವೆ ತಾನಾಜಿ?
“ನೂಲೇಣಿಯನೇರಿರಿ, ಓ ವೀರರೆ,
ಬನ್ನಿರಿ ಕಾಳೆಗದೌತಣಕೆ
ಬನ್ನಿರಿ ಕಲಿಗಳ ಬಲಿರಣಕೆ” ೨೪೦
ಎನ್ನುತ ಏಣಿಯನೇರಿದನು. – ಹಾದಿದೋರಿದನು.
ಯೋಧರು ಮುಂಬರಿದೇಣಿಯನಡರುತ
ಜಯ ಹಾಕಾರವ ಮಾಡಿದರು!
ಧಾವಿಸಿ ಹತ್ತಿ ಓಡಿದರು; ರಣವನು ನೋಡಿದರು!


ಎಲ್ಲಿ ಮೈನವಿರೇಳುವುದಲ್ಲಿ,
ಎಲ್ಲಿ ಖಡ್ಗದ ಖಣಿಖಣಿಲಲ್ಲಿ,
ಎಲ್ಲಿ ವೀರರ ಮುಂಡಗಳಲ್ಲಿ,
ಎಲ್ಲಿ ರಕ್ತದ ರಣಧುನಿಯಲ್ಲಿ – ಅಲ್ಲಿ ತಾನಾಜಿ!
ಎಲ್ಲರ ಮುಂದೆಯು ತಾನಾಜಿ:
ಕದನದಲೆಲ್ಲಿಯು ತಾನಾಜಿ!            ೨೫೦
ವೀರಪುಂಗವ ತಾನಾಜಿ: – ಕಲ್ಕಿ ತಾನಾಜಿ!
ಮಿಂಚುವ ಕತ್ತಿಗಳೆಲ್ಲವು ಅವನವೆ,
ಚಿಮ್ಮುವ ಬಾಣಗಳೆಲ್ಲವು ಅವನವೆ,
ಹೊಳೆಯುವ ಡಾಲುಗಳೆಲ್ಲವು ಅವನವೆ;
ಅವನೊಬ್ಬನೆ ರಣಧಾಮದಲಿ
ನೂರಾದನು ಸಂಗ್ರಾಮದಲಿ! – -ಉಗ್ರಭೂಮಿಯಲಿ!
ನುಗ್ಗುತ, ಕೊಲ್ಲುತ, ತಿವಿಯುತಲಿರಿಯುತ,
ತಂಡ ತಂಡಗಳ ತುಂಡರಿಸಿ,
ಕಾಲಾಂತಕನೊಲು ಸಂಹರಿಸಿ,
ಮುಂದಕೆ, ಮುಂದಕೆ, ಇನ್ನೂ ಮುಂದಕೆ         ೨೬೦
ಹಾಯ್ದನು ತಾನಾಜಿಯು ತಾನು.
ಚಂಡ ವಿಕ್ರಮಿ, ಗಂಡು ಪರಾಕ್ರಮಿ,
ಬಂದನು ಮುಂದೆ ಉದಯಭಾನು!
ನೋಡಿರಿ! ನೋಡಿರಿ! ತೊಡಗಿದರಿಬ್ಬರು
ಭೀಷಣ ಖಡ್ಗಾಖಡ್ಗಿಯಲಿ!
ರಣಧೌತಾಸಿಗಳಿಬ್ಬರು ವೀರರು!
ಸಮರೋನ್ಮತ್ತರು ಇಬ್ಬರು ಶೂರರು!
ಸಮಬಲ ಪಟುಭಟರಿಬ್ಬರು ಕಲಿಗಳು!
ನೆತ್ತರು ಹೀರುವ ಹಸಿದಿಹ ಹುಲಿಗಳು!
ಮಿಂಚಿನಂಚಿನ ಮೇಣ್ ಸಿಡಿಲೊಡಲಿನ          ೨೭೦
ಕಾರ್ಗಾಲದ ಜೀಮೂತಗಳಂದದಿ
ಒಬ್ಬರನೊಬ್ಬರು ನೋಡುತ್ತ,
ದೃಷ್ಟಿಯುದ್ಧವ ಮಾಡುತ್ತ,
ನಿಂತರು ಬಿಂಕದಲಿ! – ರಕ್ತಪಂಕದಲಿ!
ನೋಡಿರಿ! ನೋಡಿರಿ! ವೀರರ ಕದನವ!
ನೋಡಿರಿ ಮಿಂಚುವ ಖಡ್ಗಗಳ!
ಕೇಳಿರಿ! ಕೇಳಿರಿ! ಖಣಿಖಿಣಿನಾದವ!
ಗುಡುಗುವ ಸಿಡಿಲುವ ಡಾಲುಗಳ!
ಇಬ್ಬರು ತಿವಿದರು! ತಿವಿದು, ಗುರಾಣಿಯ
ವೈರಿಯ ತಿವಿತಕ್ಕೊಡ್ಡಿದರು!           ೨೮೦
ಖಂಡೆಯಗಳ ಸಂಘಟ್ಟಣೆಯಲ್ಲಿ,
ಡಾಲುಗಳುರ್ಚುವ ಢಣರವದಲ್ಲಿ,
ಬಂಡೆಯು ಬಂಡೆಗೆ ಬಡಿದಂದದಲಿ,
ಸಿಡಿಲಿಗೆ ಸಿಡಿಲೇ ಹೊಡೆದಂದದಲಿ
ಸದ್ದಿರಿಯಿತು ದಿಙ್ಮಂಡಲವ!
ಬಿರಿಯಿತು ಭೂಮಂಡಲವ!
ಇಬ್ಬರು ಬಿದ್ದರು, ಇಬ್ಬರು ಎದ್ದರು,
ಇಬ್ಬರು ತಿವಿದರು, ಇಬ್ಬರು ನೆಗೆದರು,
ಇಬ್ಬರು ರಕ್ತವ ಚೆಲ್ಲಿದರು –
ಸಮಗೈಯಾದರು ಬಲ್ಲಿದರು! – ಕಂಡರೆಲ್ಲವರು.
ಓಹೋ ಬಿದ್ದರು! ಓಹೋ ಗೆದ್ದರು!     ೨೯೦
ಬಿದ್ದವನಾವನೊ? ಗೆದ್ದವನಾವನೊ?
ಬಿದ್ದವನೊಮ್ಮೆ! ಎದ್ದವನೊಮ್ಮೆ!
ಕತ್ತಿಯದೊಮ್ಮೆ! ಗುರಾಣಿಯೊಮ್ಮೆ!
ಮಿಂಚಿದರಿಬ್ಬರು ಕಣ್ಗಳಿಗೆ,
ಭೀಷಣ ಖಡ್ಗಾಖಡ್ಗಿಯಲಿ,
ಭೈರವ ಢಖ್ಖಾಢಿಖ್ಖಿಯಲಿ!
ಮಿಂಚು ಮಿಂಚನು ಸೆಣಸುವ ತೆರದಿ,
ಸಿಡಿಲು ಸಿಡಿಲನು ಸೆಣಸುವ ತೆರದಿ,
ಆನೆಯಾನೆಯ ಕೆಣಕುವ ತೆರದಿ,
ಸಿಂಹ ಸಿಂಹವ ಕೆಣಕುವ ತೆರದಿ       ೩೦೦
ಕಾದಿದರಾ ವೀರಾಳುಗಳು! – ಕಟ್ಟಾಳುಗಳು!
ರಣ ನಿಂತುದು ಅವರಿಬ್ಬರೊಳೆ!
ಜಯ ನಿಂತುದು ಅವರೊಬ್ಬರೊಳೆ!
ಓಹೋ ನೋಡಿರಿ! ಅಯ್ಯೋ ನೋಡಿರಿ!
ಕೇಡಾದುದೆ ಹಾ! ಓಡಿರಿ! ಓಡಿರಿ!
ಭೀಮ ಪರಾಕ್ರಮಿ ಉದಯನ ಪೆಟ್ಟಿಗೆ
ಪುಡಿಪುಡಿಯಾಯಿತು ಕೈಯ ಗುರಾಣಿಯು,
ಕೆಟ್ಟನು ಓಹೋ ತಾನಾಜಿ!
ಇಲ್ಲಾ! ಇಲ್ಲಾ! ನೋಡಿರಿ, ನೋಡಿರಿ!
ವಜ್ರಹಸ್ತವನೊಡ್ಡಿದ ನೋಡಿರಿ!        ೩೧೦
ಅಯ್ಯೋ! ಅಯ್ಯೋ! ಮುರಿಯಿತು ಕೈ!
ನೆತ್ತರು ತುಂಬಿತು ವೀರನ ಮೈ! – ತಾನಾಜಿಯ ಮೈ!
ಬೆಚ್ಚಿದನೇನು? ಬೆದರಿದನೇನು?
ಕೆಚ್ಚೆದೆಗಲಿ ಹಿಂಜರಿದನೆ ಏನು?
ಹೊಡೆದನು ಉದಯನ ಪೇರೆದೆಗೆ!
ಹೊಡೆದನು ಉದಯನ ಪೇರೆದೆಗೆ;
ಮುನ್ನುಡಿ ಬರೆದನು ರಿಪುವಧೆಗೆ!
ಬೀಳುತ ಉದಯನು ರೋಷಾವೇಶದಿ
ತಿವಿದನು ತಾನಾಜಿಯ ಎದೆಗೆ:
ಬಿದ್ದರು ಇಬ್ಬರು ಬುವಿಯೆದೆಗೆ – ಸಿಂಹ ದುರ್ಗದಲಿ!       ೩೨೦
ನೆತ್ತರು ಹಾರಿತು, ನೆತ್ತರು ಕಾರಿತು,
ಇಬ್ಬರ ಪ್ರಾಣವು ಮೆಯ್ಯಿಂ ಪಾರಿತು;
ವೀರರಿಬ್ಬರು ಮಡಿದರು; – ಅಲ್ಲಿ ಮಡಿದರು!
ಕೂಡಿದರಿಬ್ಬರು ಸ್ವರ್ಗದಲಿ; – ಸಿಂಹ ದುರ್ಗದಲಿ!


ಹಿಂದು ಹಿಂದಕೆ – ಮಾವಳಿಯಾಳ್ಗಳು
ಸರಿದರು ಮಡಿಯಲು ತಾನಾಜಿ.
ಮುಂದು ಮುಂದಕೆ ನುಗ್ಗುತ ನಡೆದನು,
ಕರೆದನು ಸೇನೆಯ ಸೂರ್ಯಾಜಿ:
“ವೀರ ಶಿವಾಜಿಯ ನಚ್ಚಿನ ಭಟರೇ,
ತಾನಾಜಿಯ ಮೆಚ್ಚಿನ ಪಟುಭಟರೇ,
ಎಲ್ಲಿಗೆ ಓಡುವಿರಿಲ್ಲೇ ನಿಲ್ಲಿ!   ೩೩೦
ವೀರಸ್ವರ್ಗವು ನಮಗಿಂದಿಲ್ಲಿ!
ಜೀಜಾಮಾತೆಯ ಔತಣವೆಲ್ಲಿ?
ರಾಜ ಶಿವಾಜಿಯ ಭಕ್ತಿಯದೆಲ್ಲಿ?
ತಾನಾಜಿಯ ಆ ಪೂಣ್ಕೆಯದೆಲ್ಲಿ?
ಮಾವಳಿಯಾಳ್ಗಳ ಪೌರುಷವೆಲ್ಲಿ?
ವೀರಸತಿಯರ ಪತಿಯರದೆಲ್ಲಿ?
ಗಂಡರೆಂಬುವ ಗಂಡಸದೆಲ್ಲಿ?
ಎಲ್ಲಿಗೆ ಓಡುವಿರಿಲ್ಲೇ ನಿಲ್ಲಿ!
ವೀರಸ್ವರ್ಗವು ನಮಗಿಂದಿಲ್ಲಿ!
ತಂದೆಯಂದದ ಸೇನಾನಿಯನು      ೩೪೦
ಬಿಟ್ಟದೆಲ್ಲಿಗೆ ಓಡುವಿರಿ?
ಧೀರನ ದೇಹವ ಶತ್ರುಗಳೆಂಬಾ
ನಾಯಪಾಲಿಗೆ ಮಾಡುವಿರಿ?
ಛಿಃ ಸುಡು ಭಯದಿಂದೋಡುವ ಹೇಡಿಯ!
ಸ್ವಾಮಿಯನಗಲುವ ಪಾತಕಿಯ!
ಹಿಂಜರಿದುಳಿವುದೆ? ಛಿಃ ಸುಡು ಬಾಳನು.
ನೋಡಿರಿ ಖಂಡಿಪೆನೇಣಿಯನು!
ಕಾದಿ ಉಳಿಯಿರಿ! ಇಲ್ಲವೆ ಅಳಿಯಿರಿ!
ಕೀರ್ತಿಯು ಬರಲೇಕಪಕೀರ್ತಿ?”
ಇಂತು ನುಡಿಯುತಲಾ ಸೂರ್ಯಾಜಿಯು       ೩೫೦
ಖಂಡಿಸಿದನು ನೂಲೇಣಿಯನು!
ಧೈರ್ಯವನಾಂತರು ಮಾವಳಿಯಾಳ್ಗಳು
ಕೇಳಲು ವೀರನ ವಾಣಿಯನು!
“ಹರ ಮಹದೇವ್! ಹರ ಮಹದೇವ್!”
ಎನ್ನುತ ನುಗ್ಗಿದರುರುಬೆಯಲಿ.
ದೂರದ ಗಿರಿಕಾನನಗಳು ಮೊರೆದುವು
“ಹರಹರ ಮಹದೇವ್” ಎಂದೆನುತ.
ಸದ್ದಿಲಿಯಿರುಳೂ ಮರುದನಿಗೈದಿತು
“ಹರಹರ ಮಹದೇವ್” ಎಂದೆನುತ!
“ಹರ ಮಹದೇವ್! ಹರ ಮಹದೇವ್”            ೩೬೦
ಜಯರವ ರಿಪುಗಳ ಬೆದರಿಸಿತು!
ಕಾದಿದರಾವೇಶದಿ ಮಾವಳಿಗಳು,
ರಜಪೂತರ ಬಲ ಕ್ಷೀಣಿಸಿತು!
ಖಡ್ಗ ಬಿದ್ದಿತು! ಗದ್ದಲವೆದ್ದಿತು!
ಬೆಚ್ಚಿ ಬೈರಿಗಳೋಡಿದರು!
ಮಾವಳಿಗಳು ಕೈಮಾಡಿದರು! – ಕೈಮಾಡಿದರು!

೧೦
“ಗುಡಿಗಳ ಸುಡಿ!” ಎಂದನು ಸೂರ್ಯಾಜಿಯು!
ಬೆಂಕಿಯು ಬಾನಿಗೆ ಮುಟ್ಟಿದುದು!
ರಾಯಗಡದೊಳು ನಿಂತ ಶಿವಾಜಿಯು
ತಾನಾಜಿಯ ಜಯಸೂಚನೆ ಎನ್ನುತ ೩೭೦
ಜ್ವಾಲೆಯ ಕಂಡನು, ಹಿಗ್ಗಿದನು!
ನೋಡುತ, ನೋಡುತ, ನೋಡುತಲಿರೆಯಿರೆ,
ಇರುಳಿಳಿದೊಯ್ಯನೆ ಬೆಳಗೇಳುತಲಿರೆ,
ಮಾಗಿಯಿಬ್ಬನಿ ಸೋನೆಯು ಸುರಿದಿರೆ – ಮಬ್ಬು ಕವಿದಿರೆ;
ದೂತರು ಬಂದರು, ದೂತರು ತಂದರು
ದಳಪತಿಯಳಿದಾ ವಾರ್ತೆಯನು! ಕಠೋರ ವಾರ್ತೆಯನು!
ಕಣ್ಣೀರ್ಗರೆಯದ ಶಿವರಾಯನು ತಾ
ಕಂಬನಿಗರೆದನು ಇಂತೆಂದು:
“ಸಿಂಹದುರ್ಗವು ಕೈಸೇರ್ದುದು; ಹಾ
ಮಾಯವಾದುದೆ ಸಿಂಹವು! – ನನ್ನ ಸಿಂಹವು!”            ೩೮೦

> ತೆರದಲಿ
ತೋರಿಯೊಯ್ಯನೆ ಮಿಗದ ರೂಪವ –
ನಾಂತು ಮೆಲ್ಲನೆ ಮಾನವಾಕೃತಿ –
ವೆತ್ತು ಕೈಕಾಲುಗಳ ಪಡೆಯಿತು!       ೪೧೦
ದೊರೆಯು ಕಂಪಿಸಿದ!
ಹೆಜ್ಜೆ ಹೆಜ್ಜೆಗೆ ಭೀತಿ ಹೆಚ್ಚಿದು –
ದೆದೆಯ ಕಳವಳ ಮೇರೆದಪ್ಪಿದು –
ದುಸಿರು ಬಿಸುಸುಯ್ಲಾದುದೊಡನೆಯೆ
ನೃಪತಿ ಹಾಯೆಂದ!
ಅಲ್ಲಿ ಸರಯೂ ತೊರೆಯ ತೀರದೊ –
ಳಲ್ಲಿ ಪಾವನ ನದಿಯ ವೇಲೆಯೊ –
ಳಲ್ಲಿ ಸೈಕತ ಶಯನರಂಗದೊ –
ಳಲ್ಲಿ ತಿಂಗಳಿನಲರ ಬೆಳಕಿನೊ –       ೪೨೦
ಳಲ್ಲಿ ಕಾನನದಿಂಪು ತೆಕ್ಕೆಯೊ –
ಳಲ್ಲಿ ಮೌನದ ಮಡಿಲ ಶಾಂತಿಯೊ –
ಳಲ್ಲಿಯೊರಗಿದುದೊರ್ವ ಕೋಮಲ
ಬಾಲ ವಿಗ್ರಹವು!
ಎದೆಗೆ ನಾಟಿದ ಕಣೆಯ ಹಿಂಭಾಗ –
ಗವನು ಕೈಯಲಿ ಹಿಡಿದು, ವದನದೊ –
ಳಳಲ ಚಿತ್ರವ ತೋರಿ, ಕಂಬನಿ
ಗರೆದು ತೆರೆದಿಹ ಕಂಗಳೆವೆಗಳ –
ನಿನಿತು ಚಲಿಸದೆ, ನಟ್ಟದಿಟ್ಟಿಯ
ಬೀರಿ, ಸೂಸಿದ ರಕ್ತಪಂಕದ ೪೩೦
ಮೇಲೆ, ಬಾಡಿದ ಬಾಲಕುವಲಯ –
ದಂತೆ ಬಿದ್ದುದು ತರುಣ ಮೂರ್ತಿಯು
ದಶರಥನ ಮುಂದೆ!
ಮಾಯವಾದುದು ಬಗೆಯ ಕಳವಳ;
ಭೀತಿಯುಬ್ಬೆಗವಳಿದುವೆದೆಯಲಿ
ಕರುಣೆ ಪಶ್ಚಾತ್ತಾಪ ದಯೆಗಳು
ಚಿಗುರಿದುವು; ಮೂಡಿದುದು ಕಜ್ಜದ
ಕೆಚ್ಚು; ಪಾರ್ಥಿವ ಧರ್ಮದುರುತರ
ಕಾರ್ಯದಕ್ಷತೆ ಮೊಳೆತುದರಸಗೆ
ತನ್ನ ಮುಂಗಡೆ ವಿಗತ ಚೇತಸ –      ೪೪೦
ನಾಗಿಯೊರಗಿದ ಮುಗ್ಧ ಮಧುರ ಕಿ –
ಶೋರನನು ಕಂಡು!
ಲೀಲೆಯತಿಶಯದಲ್ಲಿ ಬಾಲ ಮ –
ರಾಳನೊಂದೇಕಾಂಗಸಾಹಸ –
ಕೆಳಸಿ ಬಳಿಯಿಹ ತಂದೆತಾಯ್ಗಳ –
ನಗಲಿ ಮಾನಸ ಸರಸಿಯಲೆಗಳ –
ನಡುವೆ ತೇಲುತಿರೆ,
ಶೈಶಿರದ ಹಿಮವೇರಿ ಚಳಿಯಲಿ
ಹೆಪ್ಪುಗಡಲಾ ಸಲಿಲವದರಲಿ
ಸಿಲ್ಕಿಬಿಳ್ದ ಕಿಶೋರ ಹಂಸವು           ೪೫೦
ಹಾರಲಾರದೆ ಮೆಯ್ಯ ಮರೆಯುವ
ತೆರದಿ ತಿಂಗಳ ಸೊದೆಯ ಕಡಲಿನೊ –
ಳಾಳ್ದ ಮರಳಿನ ಮೇಲೆ ಮಲಗಿದ –
ನಲ್ಲಿ ಬಾಲಕನು!
ಬಾಗಿ ಮೊಳಕಾಲೂರಿ ದಶರಥ
ನೃಪತಿ ನಾಟಿದ ಕಣೆಯನೀಚೆಗೆ
ತೆಗೆಯಲೆಳಸಿದನಾದರಾಹಾ!
ಬಾಲದೇಹದ ಮಿಂಚುಗೆಂಪಿನ
ನೆತ್ತರೊರತೆಯು ಚಿಮ್ಮಿಯರಸನ
ಕೆನ್ನೆಗಳ ಚುಂಬಿಸಿತು ಬೆಚ್ಚಗೆ!         ೪೬೦
ನಿಮಿರಿ ನಿಂತನು ದೊರೆಯು ಕಂಪಿಸಿ
ತೆಗೆಯಲಾರದೆ ಕುವರನೆದೆಯನು
ಹೊಕ್ಕ ಕೂರ್ಗಣೆಯ!
ನೋಡುತಿರೆ ಶೋಣಿತವ ಭೂಪತಿ,
“ಪಾಪಿ ನೀ ನಡೆ! ಮುಟ್ಟದಿರು ನಡೆ!”
ಎಂಬ ತೆರದಲಿ ಮೂಕ ರಕ್ತವು
ಹರಿದುದೆದೆಯಿಂದ!
ದೊರೆಯು ಬಿಸುಸುಯ್ದಂತರಿಕ್ಷವ
ನೋಡಲದು “ನಡೆ ಪಾಪಿ” ಎಂದಿತು!
“ಪಾಪಿಗಳು ನಾವಲ್ಲ ನೋಡದಿ –      ೪೭೦
ರೆಮ್ಮ ನೋಡದಿರೆಂ”ದು ಚುಕ್ಕಿಗ –
ಳೆಲ್ಲ ಮಿಣುಕಿದುವು!
ಸಾಕ್ಷಿಯಾಗುವ ಭಯದಿ, ಜವದಲಿ
ಬಳಿಯ ಸರಯೂ ನದಿಯು ಹರಿದುದು!
ಮುಂದೆ, ಧರ್ಮನ ಮುಂದೆ ನಿಲ್ಲಲು
ಬೆದರಿ ಬಂಡೆಗಳೆಲ್ಲ ತಳೆದುವು
ಜಡತನದ ವೇಷವನು! ಬನಗಳು
ಪಾಪಿಯರಸನ ಗೊಡವೆ ತಮಗೇ –
ಕೆಂದು ನಿದ್ದೆಯ ನಟಿಸಿ ಮೌನದೊ –
ಳಿದ್ದುವಾಯೆಡೆ! ಗಾಳಿಯೊಯ್ಯನೆ    ೪೮೦
ಕೊಲೆಯ ಪಾಪದ ಸೋಂಕಿಗಂಜುತ
ಸುಳಿಯದಡಗಿದುದು!
ನನ್ನಿಯನು ಮರೆಮಾಡಿ ಠಕ್ಕಿಸಿ –
ದಿರುಳು ತಪ್ಪಿಸಿಕೊಂಡು ತೆರಳಿತು.
ನಾದಕೆಡೆಗೊಟ್ಟಾ ತರಂಗಿಣಿ
ಅರಿಯದರಂದದಲಿ ಹರಿದುದು:
ಸದ್ದನೊಯ್ದಾ ಮಾರುತನು ಸ –
ದ್ದಿಲ್ಲದಂತೆಯೆ ಮಾಯವಾದನು;
ನೃಪತಿಯೊಬ್ಬನೆ ಪಾಪಿಯಾದನೆ
ಧರ್ಮದೃಷ್ಟಿಯಲಿ!            ೪೯೦

 

೧೨
ಬೊಗಸೆಗೈಯಲಿ ಬಳಿಯ ಸರಯೂ
ನದಿಯ ನೀರನು ತಂದು ಚಿಮುಕಿಸಿ,
ಸುರಿವ ನೆತ್ತರವೊರಸಿ, ಬಿಜ್ಜಣ –
ವಿಕ್ಕಿದನು ತನ್ನುತ್ತರೀಯದ
ಸಿರಿಯ ಸೆರಗಿನಲಿ.
ಶಬ್ದವೇಧಿಯ ಕಲೆಯ ನಿಂದಿಸಿ,
ಮನದಿ ಬೇಂಟೆಯ ಹಳಿದು, ಶೋಕಿಸಿ,
ಭಕ್ತಿಯಲಿ ತನ್ನಿಷ್ಟದೈವವ
ನೆನೆದು “ಮಿಂಚಿದ ಕಜ್ಜವನು ಹಿಂ –
ತಿರುಗಿಸುವರಿಹರಾರು? ಬಲ್ಲಿರೆ?       ೫೦೦
ನೆಲವನೀಯುವೆ ನಿಮಗೆ! ದಶರಥ –
ತನವದೇಕೆಂ”ದ!
ರಘುಕುಲಾಧಿಪನಿಂತು ಬಿಜ್ಜಣ –
ವಿಕ್ಕುತಿರೆ ಮೈತಿಳಿದು ಬಾಲಕ –
ನುಸಿರನೆಳೆದನು: ತಂದೆತಾಯ್ಗಳ;
ಕಂಗಳನು ಚಲಿಸುತ್ತ ನೋಡಿದ –
ನವನಿಪಾಲನನು.
ನೆಚ್ಚುದಿಸಿ ಬಿಸುಸುಯ್ಯುತರಸನು:
“ಬಾಲ ನೀನಾರವನು? ನೋಡಿದ –  ೫೧೦
ರಮಲ ಮುನಿಗಳ ಕುವರನಂತಿಹೆ!
ಪರ್ಣಶಾಲೆಯದೆಲ್ಲಿ? ಕತ್ತಲೊ –
ಳಿಲ್ಲಿಗೈತಂದೇತಕೆನ್ನನು
ಪಾಪಕಿಳಿಸಿದೆ? ಮುದ್ದುಕುವರನೆ,
ಹೇಳು, ಹೆದರದೆ ಹೇಳು! ದಶರಥ
ನೃಪತಿ ನಾನೆಂ”ದ!
ಶೋಕವಾಣಿಯ ಕೇಳಿ ಬಾಲಕ –
ನೊರೆದನಿಂತೆಂದರಸನುಮ್ಮಳ –
ವಿಮ್ಮಡಿಸೆ, ನೋವಿನಲಿ ಗದ್ಗದ
ಕಂಠ ಗದಗದಿಸೆ:  ೫೨೦
“ಕೇಳು ದಶರಥ ನೃಪತಿ, ಪಿಂಗಳ
ಮುನಿವರನ ಮಗ ನಾನು. ಮುದುಕನು
ತಂದೆ, ಮುದುಕಿಯು ತಾಯಿ, ಅವರಿಗೆ
ಕಣ್ಣು ಕಿವಿ ಕಾಲೆದೆಯು ಜೀವಗ –
ಳನಿತು ನಾನಹೆ! ನಡೆಯಲಾರರು!
ನೋಡಲಾರರು! ಕೇಳಲಾರರು!
ಸಿಂಧುವೆಂಬುದು ನಾಮವೆನಗಿಹು –
ದವರ ಸೇವೆಯೆ ನನ್ನ ಪೂಜೆಯು!
ಪಿತೃಗಳೇಕಾದಶಿಯ ಉಪವಾ –
ಸದಲಿ ಬಳಲಿಹರೆಂದು ಸಲಿಲವ –     ೫೩೦
ನೊಯ್ಯಬಂದೆನು ನಿಶೆಯೊಳಿಲ್ಲಿಗೆ.
ಬಳಲಿ ಬಾಯಾರಿಹರು; ನನ್ನನೆ
ಕಾಯುವರು. ನೋಯುವರು ತಳುವಿದ –
ರಾನು. ಸಲಿಲವ ಕೊಂಡು ಬೇಗನೆ
ಹೋಗಿ ಬಾಯಾರಿಕೆಯ ನೀಗಿಸು!
ಕಡೆಯ ನಿನ್ನುಪಕಾರವೆನಗಿದು!
ನನ್ನ ಬಿಡು, ನಡೆ. ಬಳಿಯ ಕಣಿವೆಯ
ನಡುವೆ ಮರಗಳ ಕರಿಯ ನೆರಳಲಿ
ಪರ್ಣಶಾಲೆಯದಿಹುದು. ನಡೆ, ನಡೆ,
ತಂದೆತಾಯಿಗಳೊರಲುತಿರುವರು;  ೫೪೦
ತೆರಳಿ ಸಂತವಿಸು!”

೧೩
ಇಂತೊರೆದು ಮುನಿಸುತನು ಕಂಗಳ
ಮುಚ್ಚಿದನು; ದಿನಮಣಿಯು ಮುಳುಗಲು
ಬಿರಿದ ತಾವರೆ ದೀನ ದುಃಖದಿ
ಮುಗುಳುವಂದದಲಿ!
ಮುಗಿಲಿನಲಿ ಮೈದೋರಿ, ಮೋಹನ
ಮಧುರ ಮಹಿಮೆಯ ಮೆರೆದು, ಮರಳುವ
ಮಳೆಯ ಬಿಲ್ಲಿನೊಲು
ಜೀವವಡರಿತು ತನ್ನ ನಿಲಯಕೆ,
ತಾವರೆಯ ಸೆರೆಯಲ್ಲಿ ಸಿಲುಕಿದ       ೫೫೦
ದುಂಬಿ ಇನನುದಯದಲಿ ಮುಕ್ತಿಯ
ಹೊಂದಿ, ಪರಮಾನಂದದತಿಶಯ –
ದಿಂದ ಹಲ್ಲೆಯ ನೆನೆದು ಬೀಡಿಗೆ
ಹಾರುವಂದದಲಿ!
ಕಾಂತಿ ಮೊಗದಲಿ ಮಸುಳೆ, ಹರಿದಿಹ
ಕವನದಂದದಿ ತರಳನೊರಗಿರೆ,
ಮರಣ ಚಿಹ್ನೆಯನರಿತು ದಶರಥ
ನೃಪತಿ, ತನ್ನನು ಕೊಲೆಗೆ ನೂಂಕಿದ
ಬಿದಿಯನತಿ ಶೋಕದಲಿ ನಿಂದಿಸಿ,
ನಿಶ್ಚಯಿಸಿದನು ಮನದಿ ಸಲ್ಲಿಸೆ        ೫೬೦
ತನ್ನ ಕೂರ್ಗಣೆ ಬೇಳ್ದ ಬಾಲನ
ಕೊನೆಯ ಕೋರಿಕೆಯ.

ಮೋಹ ಮಿತಿಮೀರೊಡೆದ ನೆಚ್ಚನು
ಮರಳಿಯಾಲಿಂಗಿಸುವ ಕಾಮುಕ –
ನಂತೆ ಬಾಗುತ ನೆಗಹಿದನು ದಶ –
ರಥನು ನೆತ್ತರು ಸೋರುತಿರ್ದಾ
ಕೋಮಲಾಕೃತಿಯ!
ನೇಸರಿನ ಬಳಿಯರಸನಾ ಸಿಸು –
ಹೆಣವನೆತ್ತಿದ ಘೋರ ದೃಶ್ಯವ
ಕಂಡು ಕಂಪಿಸಿತಿರುಳು, ನಡುಗಿತು   ೫೭೦
ನದಿಯು, ಬೆದರಿತು ಬನವು, ಸೆಡೆತುದು
ಬನದ ಕೌಮುದಿಯು!

ನೆಗಹಿ ತರುಣನ, ದೊರೆಯು ಬಳಿಯಿಹ
ಸಲಿಲ ಕಲಶವ ಕೊಂಡು ಕೈಯಲಿ
ಮುಂದೆ ನಡೆದನು ಜವದ ಜವದಲಿ;
ಪುಣ್ಯಪುರುಷನ ಮುಡಿದು ಮೈಯಲಿ,
ಪಾಪ ಭಾರದಿ ಕುಸಿದು ಗುರುವಿನ
ಬಳಿಯನೈದುವೆ ಶಿಷ್ಯನಂದದಿ
ಬಳಿಗೆ ಪಿಂಗಳನ!

೧೪
ಮುತ್ತಿ ಬಹ ತಣ್ಗದಿರನಾಟೋ –        ೫೮೦
ಪವನು ಹಿಂಗಿಸೆ, ತಿಮಿರ ರಾಕ್ಷಸಿ
ಬನದ ರಕ್ಷಣೆಗಿಟ್ಟ ಪಹರೆಯ
ರಕ್ಕಸರ ಪಡೆಯಂತೆ ನಿಂತಾ
ಹೆಮ್ಮರಗಳೆಡೆಯಲ್ಲಿ ನುಸುಳುತ
ತೋರಿ ಮರೆಯಾಗಿ,
ಗಗನ ದುರ್ಗವ ಲಗ್ಗೆಯೇರಲು
ಕಿಕ್ಕಿರಿದ ಕಾಲಾಳುಗಳ ದಳ –
ದಂತೆ ಪರ್ವತ ಪಕ್ಷದೋರೆಯ
ಮುತ್ತಿ, ಮುಚ್ಚಿ, ಮುಸುಂಕಿ ಕವಿಯುತ,
ಹೆಜ್ಜೆ ಹೆಜ್ಜೆಗೆ ಹೆಣೆದುಕೊಂಡಿಹ         ೫೯೦
ಗುಲ್ಮಗಳ ನಡುಹೊಕ್ಕು ಹೊಮ್ಮುತ,
ತಡವುತೆಡುವುತ್ತ,
ದಿಣ್ಣೆಯೇರುತ ತಗ್ಗನಿಳಿಯುತ –
ಲೊಮ್ಮೆ, ಬೆಳಕಿನೊಳೊಮ್ಮೆ ನೆರಳಿನೊ
ಳೊಮ್ಮೆ, ಕಾಣುತಲೊಮ್ಮೆ ಕಾಣದೆ –
ಯೊಮ್ಮೆ, ತರಗೆಲೆಗಳಲಿ ಹಾರುತ
ಇನಕುಲೇಶನು ಮುಂದೆ ನಡೆದನು
ತನ್ನ ಸೂಡನು ತಾನೆ ಹುಡುಕುತ
ಮಸಣದಲಿ ತಿರುತಿರುಗಿ ಮೌನದಿ
ಬರಿದೆ ತೊಳಲುವ ಮಾಯದಿರುಳಿನ            ೬೦೦
ಮರಳಿನಂದದಲಿ!

೧೫
ಸುತ್ತ ನೋಡುತ ಪರ್ಣಶಾಲೆಯ –
ನರಸಿ ಬರುತಿರೆ ದೊರೆಯು ಕಂಡನು,
ಮರದ ಕರಿನೆರಳಲ್ಲಿ ದೂರದಿ,
ಬೊಮ್ಮಗಬ್ಬದೊಳುರಿಯುವೊಲ್ಮೆಯ
ಮಂಗಳಾರತಿಯಂತೆ ಮಿನುಗುವ
ಸೊಡರ ಕುಡಿಯನು. ಬಗೆಯು ಬೆಚ್ಚಿತು;
ಜನಪ ನಡುಗಿದನು!
ಅಲ್ಲಿ ಹಣತೆಯ ಸೊಡರಿನೆಡೆಯಲಿ,
ನಿಶೆಯೊಡನೆ ಮಾರಾಂತು ಬಳಲಿದ            ೬೧೦
ಬೆಳಕಿನಲಿ, ಮುದಿದವಸಿ ಪಿಂಗಳ –
ನವನ ಸಹಧರ್ಮಿಣಿಯ ಬಳಿಯಲಿ
ಮೆಲು ನುಡಿಯ ಮಾತುಗಳಲಿರ್ದನು,
ಬಣ್ಣದಲಿ ಬರೆದಿರುವ ದೂರದ
ಮಬ್ಬುಗನಸಂತೆ!
ಕಾಲ ಸಮೆದಿಹ ಮೆಯ್ಯ ಮುದುಕರು,
ಕಣ್ಣ ಬೆಳಕಳಿದಿರುವ ಹಳಬರು,
ಸದ್ದನಗಲಿದ ಕಿವಿಯ ವೃದ್ಧರು,
ಶಕ್ತಿ ಕುಂದಿದ ಗತಿಯ ಮುನಿಗಳು
ಹಸಿದು ಬಾಯಾರವರ ಕುವರನ      ೬೨೦
ಬರವ ಹಾರೈಸುತ್ತ, ತಳುವಿದ –
ನೇತಕೆಂಬುದನರಿಯಲಾರದೆ
ಹಿರಿಯ ಕಳವಳದಿಂದಲಿರ್ದರು
ಮಗನ ಮೋಹದಲಿ!
ಪರ್ಣಶಾಲೆಯ ಬಳಿಗೆ ಮೆಲ್ಲನೆ
ರಘುಕುಲೇಶನು ಬರಲು ಮುನಿಸತಿ
ತರಗೆಲೆಯ ಮರ್ಮರವನಾಲಿಸಿ,
ಹೆಜ್ಜೆ ಸಪ್ಪುಳವರಿತು, ಕುಂದಿದ
ಮಂದ ದೃಷ್ಟಿಯ ಬೀರಿ ಕಂದನ
ಕೂಗಿ ಕರೆದಳು: “ಮಗನೆ ಬಂದೆಯ?            ೬೩೦
ಎನ್ನ ಮುದ್ದಿನ ಕಂದ ಬಂದೆಯ?
ಎನ್ನ ಬಾಳಿನ ಕಣ್ಣೆ ಬಂದೆಯ?
ಎನ್ನ ಜೀವನದುಸಿರೆ ಬಾ, ಬಾ,
ನೀರ ತಂದೆಯ, ತಂದೆ? ಹೆತ್ತೊಡ –
ಲುರಿಯ ನಂದಿಸು; ನೊಂದ ತಾತನ
ಸಂತವಿಸು ಬಾ! ಕಂದ ಬಾ, ಬಾ!”
ಎಂದಳಾ ತಾಯಿ!
ಕೇಳಲದು ದಶರಥನು ಮಮ್ಮಲ
ಮರುಗಿದನು; ಕಂಬನಿಯ ಕರೆದನು;
ಹೊತ್ತ ಹೆಣವನು ಹಿಡಿದು ಕೈಯಲಿ,   ೬೪೦
ಜೀವವನು ಸೆಳೆದೊಯ್ವ ಸಾವಿನ
ತೆರದಿ ಮುನಿಗಳ ಪರ್ಣಶಾಲೆಯ
ಹೊಕ್ಕು ನಿಂತನು, ಧರ್ಮನೆದುರಲಿ
ತನ್ನ ಪಾಪವನೊಪ್ಪಿಕೊಳ್ಳುವ
ವೀರನಂದದಲಿ!
ಬೇಟೆಗಾರನು ಕೊಂದು ತಂದಿಹ
ಹರಿಣ ಶಿಶುವಿನ ತೆರದಿ ಸಿಂಧುವು
ದಶರಥನ ತೆಕ್ಕೆಯಲಿ ಸಿಲುಕಿರೆ
ರಕ್ತಪಂಕದಲಿ,
ಘೋರ ದೃಶ್ಯವ ಕಂಡು ನಡ ನಡ     ೬೫೦
ನಡುಗಿ ಹಾಯೆಂದೊರಲಿದನು ಮುನಿ;
ಚೀರಿದಳು ಮುನಿಸತಿಯು; ಜನಪನು
ಹೊತ್ತ ಕುವರನ ಕೆಂಪು ಕಾಯವ
ನೆಲದೊಳಿಳುಹಿದನು!
ಸಿಡಿಲ ಬಡಿತಕೆ ಹಳೆಯ ಹೆಮ್ಮರ
ತಿರೆಗುರುಳುವಂದದಲಿ ಮುನಿಸತಿ
ತನ್ನ ಕಂದನ ಮೇಲೆ ದೊಪ್ಪೆಂ –
ದುರುಳಿ ಬಿದ್ದಳು! ಮುನಿಯು ಜನಪನ
ನೋಡುತಿರೆ ಕೈಮುಗಿದು ದಶರಥ –
ನಾತಗಿಂತೆಂದ:   ೬೬೦
“ಕತ್ತಲಲಿ ಕಂಗಾಣದೆಸಗಿದ
ತಪ್ಪ ಮನ್ನಿಸು ದೇವ! ಕಂದನ
ಕೊಂದ ಪಾತಕಿ ನಾನು! ದಶರಥ –
ನೆಂಬರೆನ್ನನು! ಯೋಗದೃಷ್ಟಿಯೊ –
ಳಾದುದೆಲ್ಲವ ಬಲ್ಲೆ ನೀನೆಲೆ
ಗುರುವೆ! ನಿನಗಿನ್ನೇನನರುಹಲಿ?
ಮುಡಿಯಿಡುವೆ ನಿನ್ನಡಿಯೊಳೆನ್ನನು
ಕಾಯ್ದುಕೊಳ್ಳೈ” ಎನುತ ಬಿದ್ದನು,
ಪುಣ್ಯಕೆರಗುವ ಪಾಪದಂದದಿ,
ಋಷಿಯ ಚರಣದಲಿ!         ೬೭೦

೧೬
ಬಿದ್ದ ಭೂಪನ ತಲೆಯ ನೆಗಹುತ
ಶಾಂತ ವಾಣಿಯಲೆಂದನಾ ಮುನಿ:
“ಏಳು! ನೃಪತಿಯೆ ಏಳು! ಶಪಿಸೆನು
ನಿನ್ನನಾದರೆ ಕಾಲಗರ್ಭವ
ಹೊಕ್ಕ ದೃಷ್ಟಿಗೆ ತೋರುತಿದೆ: ನೀ –
ನಳಿವ ಸಮಯದಿ ನಿನ್ನ ಪುತ್ರರು
ಬಳಿಯೊಳಿರದೆ ವನಾಂತರದಿ ಸಂ –
ಚರಿಸುತಿರುವರು! ಸುತರನಗಲಿದ
ನೀನು ದುಃಖದಿ ಮಡಿವೆ! ಕರ್ಮದ
ಧರ್ಮ ಶೃಂಖಲೆಯಿದನು ಕಂಡೆನು   ೬೮೦
ದಿವ್ಯ ದೃಷ್ಟಿಯಲಿ!
ಕೇಳು ನುಡಿವೆನು, ಕಡೆಯ ಮಾತಿದು:
ಬಾಳಿನಳಲಿಗೆ ಶಾಂತಿಯೊಂದಿಹು –
ದೊಂದಿಹುದು ಬೇರಿಲ್ಲ: ಬದುಕಿದು,
ಸುಖವೊ ದುಃಖವೊ? ದೇವನೆಂಬುವ –
ನಮಿತ ಕರುಣಾಸಿಂಧುವಾತನ
ಸೃಷ್ಟಿಯಿದು; ತುದಿಯಲ್ಲಿ ಮಂಗಳ –
ವಪ್ಪುದಾತನ ಮುತ್ತು ಮಲಗಿಹು –
ದೆಲ್ಲರೆದೆಗಳ ಮೇಲೆ -ಎಂಬುದೆ
ನಿಜದ ನಂಬುಗೆಯು!”       ೬೯೦

೧೭
ಇಂತು ನುಡಿದಾ ಮುನಿಯು, ಕಂಗಳ
ಮುಚ್ಚಿ, ಯೋಗದ ದೀರ್ಘನಿದ್ರೆಯೊ –
ಳೈಕ್ಯವಾದನು! ದೊರೆಯು ಮಸಣದ
ಗಾಳಿಯಂದದಿ ನಿಂತನೊಬ್ಬನೆ
ಪರ್ಣಶಾಲೆಯಲಿ!
ನಿಶೆಯ ಮೌನವು ಹರಡಿತೆಲ್ಲೆಡೆ
ಅಲ್ಲಿ ಬನದಲಿ ಮಲಗಿ ನಲಿದುದು
ಮಧುರ ಮೋಹನ ಸಾಂದ್ರ ಸುಂದರ
ವಿಪಿನ ಚಂದ್ರಿಕೆಯು!