ಪಲ್ಲವಿ : ಕಥೆಯ ಕೇಳಿರಮ್ಮಾ ಕೃಷ್ಣನ ಕಥೆಯ ಕೇಳಿರಮ್ಮಾ
ಕಥೆಯ ಕೇಳಿರಮ್ಮಾ ನಿಮ್ಮಯ ವ್ಯಥೆಯ ಮರೆಯಿರಮ್ಮಾ

ಚರಣ :  ಚಿಕ್ಕ ವಯಸಿನಲ್ಲೇ ಇವನು ಪೂತನ ಕೊಂದನಂತೆ
ಅಚ್ಚರಿ ಪಟ್ಟರಂತೆ ಜನರು ಮೂಕರಾದರಂತೆ

ಮಣ್ಣು ತಿಂದನೆಂದು ಯಶೋಧ ಕೋಪಪಟ್ಟಳಂತೆ
ಬಾಯಿ ತೆರೆದನಂತೆ ಕೃಷ್ಣನು ಗೋಳ ಕಂಡಳಂತೆ

ಬೆಣ್ಣೆ ಕದ್ದನೆಂದು ಗೋಪರು ದುಃಖ ಪಟ್ಟರಂತೆ
ಬೆಣ್ಣೆ ಕದಿಯಲಿಲ್ಲಾ ಮನಸಿನ ಪಾಪ ಕದ್ದನಂತೆ

ಕಾಳಿ ಮಡುವಿನಲ್ಲಿ ಕೃಷ್ಣನು ದೊಡ್ಡ ಸರ‍್ಪ ತುಳಿದ
ಪುರರು ಸುರರು ನೋಡಿ ಅಚ್ಚರಿ ಕೈಯ್ಯಮುಗಿದರಂತೆ

ಗೋಪಿಯರೊಡನೆ ಸೇರಿ ನಡಿಸಿದ ರಾಸಕ್ರೀಡೆ ಕೃಷ್ಣಾ
ಮೈಯ್ಯ ಮರತೆರಂತೆ ಭಕ್ತರು ಸ್ವಾಮಿಯೊಡನೆ ಸೇರಿ

ಅಷ್ಟು ಇಷ್ಟು ಅಲ್ಲ ಕೃಷ್ಣನ ಕಥೆಯು ಮುಗಿಯಲಿಲ್ಲ
ಜಯವು ಜಯವು ಹೇಳಿ ಕಥೆಯನು ಮತ್ತೆ ಹೇಳಿಕೊಳ್ಳಿ