ಕೆಂಪು ಕುದುರೆಗಳನ್ನೇರಿದ ಒಂದು ಸೈನಿಕರ ತಂಡವು ತಾಣ ಗುಂದೂರಿನ ಹೆದ್ದಾರಿಯ ಮೇಲೆ ಧಾವಿಸಿ ಬಂದಿತು. ಕುದುರೆಗಳು ಪ್ರಣವೇಶ್ವರ ದೇವಾಲಯ ಸಮೀಪ ಬಂದಾಗ, ದೇವಾಲಯದಿಂದ ಕೆಲವು ಬ್ರಾಹ್ಮಣ ವಟುಗಳು ರಸ್ತೆಗೆ ಇಳಿದಿದ್ದರು. ದೇವಾಲಯದಲ್ಲಿ ಪಾಠ-ಪ್ರವಚನಗಳನ್ನು ಮುಗಿಸಿಕೊಂಡು ಇವರು ಮನೆಗಳಿಗೆ ಹೊರಟಿದ್ದರು. ದೇವಾಲಯದ ಜಗುಲಿಯ ಮೇಲೆ ನಿಂತಿದ್ದ ಆಚಾರ್ಯ ವೀರಶರ್ಮರು ಕುದುರೆಗಳು ಬರುತ್ತಿರುವುನ್ನು ನೋಡಿದರು. ನಡು ರಸ್ತೆಯಲ್ಲಿ ಹೋಗುತ್ತಿದ್ದ ಶಿಷ್ಯರನ್ನು ನೋಡಿದರು. ಆಚಾರ್ಯರ ಎದೆ ಒಡೆದಂತಾಯಿತು. ಕುದುರೆ ದಂಡು ವಟುಗಳ ಮೇಲೆ ನುಗ್ಗುತ್ತದಲ್ಲಾ ಎಂದವರು ಗಾಬರಿಯಾರು. ವಟುಗಳ ನಡುವೆಮಯೂರು ಅವರ ಕಣ್ಣಿಗೆ ಬಿದ್ದಾಗ ಅವರಿಗೆ ಕೊಂಚ ಸಮಾಧಾನವಾಯಿತು.

“ಮಯೂರಾ, ಮಯೂರಾ ,ದಂಡು ಬರುತ್ತಿದೆ ಎಚ್ಚರ” ಎಂದು ಅವರು ಧ್ವನಿ ಏರಿಸಿ ಕೂಗಿದರು.

ಯುವಕ ಮಯೂರ ಹಿಂದಿನಿಂದ ನುಗ್ಗಿ ಬರುತ್ತಿದ್ದ ಕುದುರೆಗಳನ್ನು ನೋಡಿದ.  ಗುರುಗಳ ದನಿ ಕೇಳಿದ. ನಾಲ್ವರು ಬಾಲಕರು ನಡುದಾರಿಯಲ್ಲಿ ಸಾಗಿದ್ದಾರೆ. ಕುದುರೆ ದಂಡು ಬರುತ್ತಿರುವದನ್ನು ಅವರು ಗಮನಿಸಲಿಲ್ಲ. ಇನ್ನೊಂದು ಕ್ಷಣ ದಲ್ಲಿ ಕುದುರೆಗಳು ಅವರ ಮೇಲೆ ನುಗ್ಗಲಿವೆ! ಮಯೂರ ನಿಂತಲ್ಲಿಂದ ಮುಂದೆ ನೆಗೆದ,. ಆ ನಾಲ್ವರನ್ನೂ ಎರಡೂ ಕೈಗಳಲ್ಲಿ ಬಳಸಿ ಹಿಡಿದು ರಸ್ತೆಯ ಪಕ್ಕಕ್ಕೆ ಹಾರಿಬಿಟ್ಟ. ಕುದುರೆಗಳು ಕೆನೆಯುತ್ತಾ ಮುಂದೆ ನಡೆದವು. ಆಚಾರ್ಯ ವೀರಶರ್ಮರು ಓಡಿ ಬಂದರು.

ಹುಡುಗರಿಗೆ ಏನೂ ಆಗಿರಲಿಲ್ಲ. ಅವರ ಮೈ ಮೇಲೆ ಬಿಳಿ ಉಡುಪು ಕೂಡ ಹೆಬ್ಬೆರಳು ಒಡೆದು ರಕ್ತ ತೊಟ್ಟಿಕುತ್ತಿತ್ತು.,

“ಭಲೇ ಮಯೂರ ಭಲೆ!”

ಆಚಾರ್ಯರು ಮಯೂರನನ್ನು ಅಪ್ಪಿಕೊಂಡರು. ಮಯೂರ ಆ ನಾಲ್ವರ ಕಿರಿಯರನ್ನು ಕರೆ ತಂದು ರಸ್ತೆಯ ಮೇಲೆ ಬಿಟ್ಟ. ಕುದುರೆಯ ದಂಡು ಹೋದ ದಿಕ್ಕನ್ನು ಕೆಂಗಣ್ಣಿನಿಂದ ನೋಡಿ. ಅವನ ಮುಖದ ಮೇಲೆ ಸಿಟ್ಟು ಕುಣಿಯುತ್ತಿತ್ತು. ಗುರುಗಳೊಡನೆ ಹೆಜ್ಜೆ ಹಾಕುತ್ತಾ ಮಯೂರ ಕೇಳಿದ-

” ಗುರುಗಳೇ, ಅವರು ಯಾರ ಸೈನಿಕರು”?
“ಅವರು ಪಲ್ಲವರ ಸೈನಿಕರು:.
“ಪಲ್ಲವರು ಈ ದೇಶದ ರಕ್ಷಕರಲ್ಲವೇ ಗುರುಗಳೇ?”
“ಹೌದು ಮಯೂರ, ಬನವಾಸಿ ನಾಡು ಅವರ ವಶದಲ್ಲಿಯೇ ಇದೆ”.

ಮಯೂರ ನಾಲ್ವರು ಬಾಲಕರನ್ನೂ ಎರಡೂ ಕೈಗಳೋಲ್ಲಿ ಬಳಸಿ ರಸ್ತೆಯ ಪಕ್ಕಕ್ಕೆ ಹಾರಿದ.

ಮಯೂರ ಕೋಪದಿಂದ ಬುಸುಗುಟ್ಟುತ್ತ ಕೇಳಿದ: “ಆದರೆ ಊರ ನಡುವೆ ಇಷ್ಟ ವೇಗವಾಗಿ ಕುದುರೆಗಳ್ನು ಓಡಿಸುವುದು  ಎಂತಹ ರಕ್ಷಣೆ, ಗುರುಗಳೇ?”

ಆಚಾರ್ಯರು ಶಿಷ್ಯ ಬೆನ್ನು ತಟ್ಟಿದರು.

“ಮಯೂರಾ, ಅಧಿಕಾರ ಬಂದಾಗ ಕೆಲವರು ತಮ್ಮ ಕರ್ತವ್ಯವನ್ನು ಮರೆಯುವುದುಂಟು.  ಹೋಗಲಿ ಬಿಡು, ನೀನಂತೂ ಈ ಕಿರಿಯರ ಪ್ರಾಣ ಉಳಿಸಿ ಒಳ್ಳೆಯ ಕೆಲಸ ಮಾಡಿ” ಎಂದರು ಆಚಾರ್ಯರು ಹೃದಯತುಂಬಿ ಬಂದು.

ಅಗ್ರಹಾರದ ಮನೆಗಳು ಹತ್ತಿರ ಬಂದವು. ವಟುಗಳೆಲ್ಲ ಗುರುಗಳಿಗೆ ಕೈಮುಗಿದು ತಮ್ಮ ತಮ್ಮ ಮನೆಗಳತ್ತ ತಿರುಗಿದರು.  ವೀರಶರ್ಮರು ಮಯೂರನ ಕೈ ಹಿಡಿದುಕೊಂಡು ಅವ ಮನೆಗೆ ಬಂರು. ಮನೆಯ ಜಗುಲಿಯನ್ನೇರುತ್ತ.

“ಶರ್ಮಾ… ಏನು ಮಾಡುತ್ತೀರುವಿ?”

ಎಂದು ಮಯೂರನ ತಂದೆಯ್ನು ಕೂಗಿ ಕರೆದರು. ಶರ್ಮ ಒಳಗೆ ಏನೋ ಮಾಡುತ್ತಿದ್ದವನು ಓಡಿ ಬಂದ. ಗುರುಗಳು ಮಯೂರನ್ನು ಅವನ ಎದುರು ನಿಲ್ಲಿಸಿ-

“ಇವನೊಂದು ಸಾಹಸದ ಕೆಲಸ ಮಾಡಿದ್ದಾನೆ. ಏನುಗೊತ್ತೇ? ಎಂದು ಕೇಳಿದರು. ಮಯೂರನು ಮಾಡಿದ ಸಾಹಸದ ಕಾರ್ಯವನ್ನು ಬಣ್ಣಿಸಿದರು. ಕೊನೆಯಲ್ಲಿ-ಬನವಾಸಿ ನಾಡಿನ ಪುಣ್ಯವೇ ಮಯೂರನ ರೂಪದಲ್ಲಿ ಹುಟ್ಟಿ ಬಂದಿದೆ: ಎಂದು ನುಡಿದು, ಆಚಾರ್ಯರು ಮಯೂರನಿಗೆಂದರು-“ಹೋಗು ಮಯೂರ, ಕಾಲಿನ ಗಾಯಕ್ಕೆ ಮದ್ದು ಮಾಡಿಕೋ ಹೋಗು”.

ಮಯೂರನ ತಂದೆ ಮಗನ ಸಾಹಸವನ್ನು ಕೇಳಿ ಮೂಕನಾಗಿ ನಿಂತರು.

“ಆಚಾರ್ಯರೇ, ನಮ್ಮ ಮಯೂರ ಅದೇನೇ ಮಾಡಿರಲಿ…. ಅದಕ್ಕೆ ಕಾರಣ ನೀವೇ… ” ಎಂದನು.

“ಎಲ್ಲ ಆ ದೇವರ ದಯೆ…. ನಮ್ಮದೇನಿದೆ ಇದರಲ್ಲಿ?” ಎಂದು ನುಡಿದ ಆಚಾರ್ಯರು ಹೊರಟರು. ಮಯೂರ ಗುರುಗಳಿಗೆ ಕೈಮುಗಿದನು. ಆಚಾರ್ಯರು “ಚಿರಂಜೀವಿಯಾಗಿ ಬಾಳು”  ಎಂದು ಮಯೂರನಿಗೆ ಆಶಿರ್ವದಿಸಿ ರಸ್ತೆಗೆ ಇಳಿದರು. ಮಯೂರನು ತಂದೆಯೊಡನೆ ಒಳಗೆ ನಡೆದನು. ಕಾಲಿಗೆ ಮದ್ದು ಹಾಕಿಕೊಳ್ಳಲು.

ಅಧ್ಯಯನದಲ್ಲಿಯೂ ಮೊದಲು, ಸಾಹಸದಲ್ಲಿಯೂ ಮೊದಲು:

ತಾಣಗುಂದೂರು ಬನವಾಸಿ ನಾಡಿನ ಒಂದು ಸಣ್ಣ ಅಗ್ರಹಾರ. ಈ ಅಗ್ರಹಾರದ ಬ್ರಾಹ್ಮಣ ಮನೆಗಳಲ್ಲಿ ಚಂದ್ರ ಶರ್ಮನ ಮನೆಯೂ ಒಂದು. ಬಹಳ ಹಿಂದೆ ಇವರ ಮನೆಯ ಬಳಿ ಒಂದು ಕಂಬ ಮರವಿತ್ತಂತೆ. ಆದುದರಿಂದ ಇವರು ಕದಂಬವನವಾಸಿಗಳಾದರು. ಕ್ರಮೇಣ ಕದಂಬರು ಎನಿಸಿಕೊಂಡರು.  ಬನವಾಸಿಯ ಮಧುಕೇಶ್ವರ ಇವರ ಮನೆ ದೇವರು.

ಮಯೂರಶರ್ಮ ಚಂದ್ರಶರ್ಮನ ಪ್ರೀತಿಯ ಮಗ. ಅಗ್ರಹಾರದ ಬ್ರಾಹ್ಮಣ ತರುಣರಲ್ಲಿಯೇ ಅತಿ ಬುದ್ಧಿವಂತ ಮಯೂರ. ವೇದಾಭ್ಯಾಸದಲ್ಲಿ ಎಷ್ಟು ಮುಂದೋ ಆಟ ಸಾಹಸಗಳಲ್ಲಿಯೂ ಅಷ್ಟೇ ಮುಂದೆ.

ತಾಣಗುಂದೂರಿನ ಪ್ರಣವೇಶ್ವರ ದೇವಾಲಯದ ಹೊರ ಅಂಗಳದಲ್ಲಿ ಅಗ್ರಹಾರದ ಎಲ್ಲ ತರುಣರಿಗೆ ದಿನ ನಿತ್ಯ ವೇಧಭ್ಯಾಸ, ಪಾಠ ಪ್ರವಚನ, ಮುಂಜಾನೆಯಿಂದ ಹೊತ್ತು ನೆತ್ತಿಗೇರುವರೆಗೆ ವೀರಶರ್ಮರಿಂದ ತರುಣರಿಗೆ ಬೋಧನೆ.  ಹೊತ್ತು ನೆತ್ತಿಗೇರಿದ ಮೇಲೆ ಎಲ್ಲರೂ ಮನೆಗಳಿಗೆ ಹಿಂತಿರುಗುತ್ತಾರೆ. ಊಟ ಮುಗಿದ ಮೇಲೆ ಮತ್ತೇ ಎಲ್ಲರೂ ಮನೆಗಳಿಂದ ಹೊರ ಬೀಳುತ್ತಾರೆ. ಈಗ ಎಲ್ಲರೂ ಸೇರುವುದು ಪ್ರಣವೇಶ್ವರ ದೇವಾಲಯದ ಹಿಂದಿನ ಗುಡ್ಡದ ಮೇಲಿನ ಮರದ ತೋಪಿನಲ್ಲಿ.

ಮಯೂರನ ನಾಯಕತ್ವದಲ್ಲಿ ಆಟ. ಹತ್ತಿರದ ಕೊಳದಲ್ಲಿ ಈಜಾಟ. ಇಲ್ಲವೇ ಹತ್ತಿರದ ಕಾಡಿಗೆ ನುಗ್ಗಿ ವಿವಿಧ ಬಗೆಯ ಹಣ್ಣುಗಳಿಗಾಗಿ ಹುಡುಕಾಟ. ಇದೂ ಬೇಸರವಾದರೆ ನೋಡಲು ಗಿಳಿ, ಕಾಜಾಣ, ಗೊರವಂಕ, ನವಿಲುಗಳೀವೆ.  ಕೇವಲ ಈ ಹಕ್ಕಿಗಳ ದನಿ ಇದೆ.  ಮೈ ನವಿರೇಳಿಸಲು ಯಾವುದೋ ಮರಕ್ಕೆ ಸುತ್ತು ಹಾಕಿಕೊಂಡ ಹೆಬ್ಬಾವಿವಿದೆ. ಊರದ ಬೆಟ್ಟದ ಬೆನ್ನಮೇಲೆ ಮೇಯುವ ಕಾಡು ಕೋಣಗಳ ಹಿಂಡಿದೆ. ಆಗಾಗ ಕಾಡಿನೊಳಗೆ ಗುಹೆಯಿಂದ ಹುಲಿಯ ಕೂಗೂ ಕೇಳಿಸುತ್ತದೆ.

ಮಯೂರ ಗೆಳೆಯರನ್ನು ಕಟ್ಟಿಕೊಂಡು, ಅವರನ್ನು ನಗಿಸುತ್ತಾ, ಹೆದರಿಸುತ್ತಾ, ಧೈರ್ಯ ಹೇಳುತ್ತಾ ಇಲ್ಲೆಲ್ಲಾ ಆಲೆಯುತ್ತಾನೆ. ತಾನು ದರ್ಬೆ ಹುಲ್ಲನ್ನು ಕೀಳಲು ಒಂಟಿಯಾಗಿ ಹೋದ ಕಥೆ ಹೇಳುತ್ತಾನೆ.  ಆಗ ಹುಲಿ ಎದುರಾದುದು, ಆನೆಯ ಹಿಂಡು ಹಾದು ಹೋದುದು ಇತ್ಯಾಧಿ ವರ್ಣಿಸುತ್ತಾನೆ.

ನಿಧಾನವಾಗಿ ಸಾಯಂಕಾಲವಾಗುತ್ತದೆ. ಬೆಟ್ಟದ ಸಾಲಿನ ಹಿಂದೆ ಸೂರ್ಯನು ಮರೆಯಾಗುತ್ತಾನೆ. ಗೆಳೆಯರನ್ನು ಕರೆದು ಕೊಂಡು ಮಯೂರ ಊರಿಗೆ ಹಿಂತಿರುಗುತ್ತಾನೆ.

ಪಲ್ಲವರ ರಾಜಧಾನಿ :

ಆಚಾರ್ಯ ವೀರಶರ್ಮರು ತಮಗೆ ಗೊತ್ತಿರುವುದೆಲ್ಲವಹ್ನೂ ಮಯೂರನಿಗೆ ಕಲಿಸಿದರು. ಮುಂದು ಕೂಡ ಹೆಚ್ಚಿನದನ್ನು ಕಲಿಯಬೇಕೆಂಬ ಆಸೆ ಮಯೂರನಿಗೆ. ಶಿಷ್ಯನನ್ನು ಮತ್ತು ವಿದ್ಯಾವಂತನನ್ನಾಗಿ ಮಾಡಬೇಕು  ಅನ್ನುವ ಇಚ್ಛೇ  ವೀರ ಶರ್ಮರಿಗೆ.

ಮಯೂರ ಎಲ್ಲ ಯುವಕರಂತಲ್ಲ. ಎಲ್ಲವನ್ನೂ ಬೇಗನೇ ಕಲಿಯುತ್ತಾನೆ. ಅರ್ಥಮಾಡಿಕೊಳ್ಳುತ್ತಾನೆ. ಪ್ರತಿಯೊಂದನ್ನು ಅದು ಏಕೆ ಹಾಗೆ, ಇದು ಏಕೆ ಹೀಗೆ ಎಂದು ಪ್ರಶ್ನಿಸುತ್ತಾನೆ. ಅನುಮಾನಗಳು ಬಗೆಹರಿಯುವವರೆಗೂ ಅವರಿಗೆ ಸಮಾಧಾನವೆನಿಸುವುದಿಲ್ಲ.

ಇಷ್ಟೇ ಅಲ್ಲದೆ ಮಯೂರ ದುರ್ಬಲರಿಗೆ ನೆರವಾಗುತ್ತಾರೆ. ಅಹಂಕಾರಿಗನ್ನು ಸೋಲಿಸುತ್ತಾನೆ.  ಕಿರಿಯರನ್ನು ಪ್ರೀತಿಸುತ್ತಾನೆ. ಹಿರಿಯರನ್ನು ಗೌರವದಿಂದ ಕಾಣುತ್ತಾನೆ.

ಅವನ ಈ ಎಲ್ಲಾ  ಗುಣಗಳನ್ನು ವೀರಶರ್ಮರು ಮೆಚ್ಚಿಕೊಂಡಿದ್ದಾರೆ.  ನಾಳೆ ಮಯೂರ ದೊಡ್ಡ ಮನುಷ್ಯನಾಗುತ್ತಾನೆ ಅನಿಸುತ್ತದೆ ಅವರಿಗೆ. ಇವನಿಗೆ ಎಷ್ಟು ಶಿಕ್ಷಣ ನೀಡಿದರೂ ಸಾಲದು. ವ್ಯಾಕರಣ, ಇತಿಹಾಸ, ಸಂಗೀತ ಎಲ್ಲವನ್ನು ಇವನಿಗೆ ಕಲಿಸಬೇಕು. ದೊಡ್ಡ ಪಂಡಿತರನ್ನಾಗಿ ಮಾಡಬೇಕು. ಆದರೆ ಹೇಗೆ ?

ಒಂದು ದಿನ ಈ ಬಗ್ಗೆ ಯೋಚಿಸುತ್ತಾ ಆಚಾರ್ಯರು ಚಂದ್ರಶರ್ಮ ಮನೆಗೆ ಬಂದರು.

ತಮ್ಮ ಮನಸ್ಸಿನಲ್ಲಿದ್ದುದನ್ನು ಚಂದ್ರಶರ್ಮನಿಗೆ ಹೇಳಿದರು-

“ಮಯೂರನ್ನು ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಯಾವುದಾದರೂ ಘಟಿಕಾಸ್ಥಾನಕ್ಕೆ ಕಳುಹಿಸಬೇಕೆಂಬುವುದು ನನ್ನಾಸೆ”.

ಘಟಿಕಾಸ್ಥಾನವೆಂದರೆ ಹೆಚ್ಚಿನ ವಿದ್ಯಾಭ್ಯಾಸವನ್ನು ನೀಡುವ ಒಂದು ಸಂಸ್ಥೆ, ಆಶ್ರಮ.

ಆಚಾರ್ಯರ ಈ ಮಾತಿಗೆ ಚಂದ್ರಶರ್ಮ, ಎಲ್ಲಿಗೆ ಕಳುಹಿಸಿದರೆ ಅನುಕೂಲ, ನೀವೇ ಹೇಳಿ” ಎಂದ

“ಬನವಾಸಿ ನಾಡಿನಲ್ಲಿ ಎಲ್ಲೂ ಘಟಿಕಾಸ್ಥಾನಗಳಿಲ್ಲ. ಕಾಂಚಿಪೂರದಲ್ಲಿ ಇಂತಹ ಘಟಿಕಾಸ್ಥಾನಗಳಿವೆ ಎಂದು ಕೇಳಿದ್ದೇನೆ. ಅಲ್ಲಿಗೆ ಮಯೂರನನ್ನು ಕಳುಹಿಸಿದರೆ ಅವನು ಮುಂದೆ ದೊಡ್ಡ ಪಂಡಿತನಾಗುವುದರಲ್ಲಿ ಸಂದೇಹವಿಲ್ಲ”.

ಕಾಂಚೀಪುರ ಪಲ್ಲವ ದೊರೆಗಳ ರಾಜಧಾನಿ. ಅಲ್ಲಿ ಹಲವು ಘಟಿಕಾಸ್ಥಾನಗಳಿದ್ದವು. ಊಟ ವಸತಿಗೆ ತಕ್ಕ ವ್ಯವಸ್ಥೆಯೂ ಇತ್ತು. ಆದರೆ ಚಂದ್ರಶರ್ಮನಿಗೆ ಮಗನನ್ನು ಅಷ್ಟು ದೂರ ಒಂಟಿಯಾಗಿ ಕಳುಹಿಸಬೇಕಲ್ಲ ಎಂಬ ಚಿಂತೆ.  ಮಗ ಮೊದಲೇ ತಂಟ. ಅಲ್ಲಿ ಏನಾದರೂ ಆಚಾತುರ್ಯ ಮಾಡಿಕೊಂಡರೆ? ಚಂದ್ರಶರ್ಮ ಆಚಾರ್ಯರನ್ನು ಕುರಿತು ಹೇಳಿದ-

“ಆಚಾರ್ಯರೇ, ನಿಮ್ಮ ಮಾತಿಗೆ ನನ್ನ ಒಪ್ಪಿಗೆ ಇದೆ. ಆದರೆ ಅಷ್ಟು ದೂರದ ಕಾಂಚಿಪೂರಕ್ಕೆ ಒಂಟಿಯಾಗಿ ಮಯೂರನನ್ನು ಕಳುಹಿಸುವುದು ಹೇಗೆ ?”

“ಶರ್ಮರೇ, ನಾನು ಈ ಬಗ್ಗೆ ಯೋಚಿಸಿದ್ದೇನೆ. ಮಯೂರನ ಜೊತೆಯಲ್ಲಿ ನಾನು ಹೋಗುತ್ತೇನೆ. ಅಲ್ಲಿಯ ಅವನ ವ್ಯಾಸಂಗ ಮುಗಿಯುವವರೆಗೂ ನಾನವನ ಜೊತೆಯಲ್ಲಿರುತ್ತೇನೆ. ಅವನ ರಕ್ಷಣೆಯ ಹೊಣೆ ನನಗಿರಲಿ.

ಆಚಾರ್ಯರ  ಈ ಮಾತನ್ನು ಕೇಳಿದಾಗ ಚಂದ್ರಶರ್ಮನ ಮನಸ್ಸಿಗೆ ಸಂತೋಷವಾಯಿತು. ಮಯೂರನಲ್ಲಿ ಆಚಾರ್ಯರ ಪ್ರೀತಿಯನ್ನು  ಕಂಡು ಹೃದಯ ಕೃತಜ್ಞತೆಯಿಂದ ತುಂಬಿತು.

ಮಯೂರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಾಂಚೀಪೂರಕ್ಕೆ ಹೋಗುವ ದಿನ ಬಂದಿತ್ತು. ಊರಿನ ಹಿರಿಯರೆಲ್ಲ ಬಂದು ಮಯೂರನಿಗೆ ಆಶಿರ್ವಧಿಸಿದರು. ಹೆಂಗಳೆಯರು ಮಯೂರಿಗೆ ಆರತಿ ಬೆಳಗಿದರು.

ಮನೆಯ ಎಲ್ಲರಿಗೆ, ಊರಿನ ಎಲ್ಲರಿಗೆ ಹೋಗಿ ಬರುವುದಾಗಿ ಹೇಳಿ ಮಯೂರ ಆಚಾರ್ಯರೊಡನೆ ಮೇನೆಯನ್ನೇರಿದ. ಊರ ಹೊರಭಾಗದವರೆಗೂ ಜನ ಮೇನೆಯನ್ನು ಹಿಂಬಾಲಿಸಿದರು. ಅನಂತರ ಮೇನೆಯೊಂದೇ ಮುಂದೆ ನಡೆಯಿತು. ಜನ ನಿಂತಲ್ಲಿಯೇ ನಿಂತರು.

ಕಾಂಚೀಪುರ :

ಪಲ್ಲವರ ರಾಜಧಾನಿ ಕಾಂಚೀಪುರ ದೊಡ್ಡ ಪಟ್ಟಣ, ವಿಶಾಲವಾದ ಹೆದ್ದಾರಿಗಳು. ಅರಮನೆಗಳು, ಶ್ರೀಮಂತರ ಸೌಧಗಳು. ಹಲವಾರು ದೇವಾಲಯಗಳು. ದೇವಾಲಯಗಳ ಹತ್ತಿರವೇ ಪುಷ್ಕರಣಿಗಳೂ. ನಗರದ ತುಂಬ ಯಾವಾಗಲೂ ಸೈನಿಕರನ್ನೋ, ರಾಜಪರಿವಾರದವರನ್ನೊ ಹೊತ್ತು ಓಡಾಡುವ ಆನೆ, ಕುದುರೆ, ಮೇನೆಗಳು. ಇವುಗಳೆಲ್ಲ ಕಾಂಚಿಪುರದ ವೈಶಿಷ್ಟ್ಯಗಳು.

ಕಾಂಚೀಪುರದಲ್ಲಿ ಘಟಿಕಾಸ್ಥಾನಗಳು ಹೆಚ್ಚು ಸಂಖ್ಯೆಯಲ್ಲಿದ್ದವು. ಪ್ರತಿಯೊಂದು ಘಟಿಕಾಸ್ಥಾನದಲ್ಲಿಯೂ ಎಲ್ಲ ವಿದ್ಯೆಗಳನ್ನೂ ಹೇಳಿಕೊಡಲು ಪಾರಂಗತರಾಗಿದ್ದವರು ಇದ್ದರು. ಸಂಗೀತ, ನೃತ್ಯ, ಇತ್ಯಾದಿಗಳಿಗೂ ಕಾಂಚೀಪುರದಲ್ಲಿ ಸಾಕಷ್ಟು ಪ್ರೋತ್ಸಾಹವಿತ್ತು.

ಮಯೂರಶರ್ಮನು ತನ್ನ ಗುರುಗಳ ಜೊತೆಯಲ್ಲಿ ಕಾಂಚೀಪೂರಕ್ಕೆ ಬಂದವನೇ ಒಂದು ಘಟಿಕಾಸ್ಥಾನದಲ್ಲಿ ಸೇರಿಕೊಂಡು. ಆಶ್ರಮದ ಹಾಗಿದ್ದ ಈ ಘಟಿಕಾಸ್ಥಾನದಲ್ಲಿ ಸಂಸ್ಕೃತವನ್ನು, ವೇದ ಶಾಸ್ತ್ರಗಳನ್ನು ವ್ಯಾಕರಣ ಸಾಹಿತ್ಯಗಳನ್ನು ಹೇಳಿಕೊಡಲು ಪಂಡಿತರಿದ್ದರು. ದೂರ ದೂರದ ದೇಶಗಳ ವಿದ್ಯಾರ್ಥಿಗಳು ಇಲ್ಲಿ ಉಳಿದುಕೊಂಡು ಕಲಿಯುತ್ತಿದ್ದರು.  ಎಲ್ಲರಿಗೂ ಉಳಿಯಲು ಪರ್ಣ ಕುಟಿರಗಳಿದ್ದವು. ಊಟದ ವ್ಯವಸ್ಥೆಯೂ ಇತ್ತು.

ಮಯೂರನು ಇಲ್ಲಿ ಕೂಡ ಬುದ್ಧಿವಂತನೆನಿಸಿಕೊಂಡನು. ತನ್ ಸಹಪಾಠಿಗಳ ಮಧ್ಯೆ ಪ್ರೀಯನೆನಿಸಿಕೊಂಡು. ದಷ್ಟಪುಷ್ಟೂ, ತೇಜಸ್ವಿಯೂ, ಸರಳ ಸ್ವಭಾವದವನೂ, ಸದಾ ಹಸನ್ಮುಖಿಯಾಗಿಯೂ ಆಗಿರುತ್ತಿದ್ದ ಮಯೂರನು ಕಾಂಚೀಪುರದ ಎಲ್ಲರ ವಿಶ್ವಾಸಕ್ಕೆ ಪಾತ್ರನಾಗಿ ಬೆಳೆಯತೊಡಗಿದು.

ದಿನಗಳು ಉರುಳಿದವು.

ಚಾಟಿಯ ಏಟು

ಒಂದು ದಿನ ಮಯೂರಶರ್ಮನು ಎಂದಿನಂತೆ ಎದ್ದನು. ದೇವಸ್ಥಾದ ಪುಷ್ಕರಣಿಗೆ ಬಂದು ಸ್ನಾನವನ್ನು  ಮುಗಿಸಿ ಆಶ್ರಮಕ್ಕೆ ಹಿಂತಿರುಗುತ್ತಿದ್ದನು. ಆಗ ಬೆನ್ನ ಹಿಂದೆ ಕುದುರೆಯ ಗೊರಸಿನ ಶಬ್ದ ಕೇಳಿಸಿತು. ಕುದುರೆಯೊಂದು ಮೈಮೇಲೆ ನುಗ್ಗುತ್ತಿರುವುದು ಅರಿವಾಯಿತು. ಮಯೂರ ಶರ್ಮ ವೇಗವಾಗಿ ಪಕ್ಕಕ್ಕೆ ಸರಿದನು. ಕುದುರೆ ಸವಾರ ಕೂಗಿದ್ದು ಕೇಳಿಸಿತು. ಮರುಕ್ಷಣದಲ್ಲಿ ಕುದುರೆ ಮುಂದೆ ಸಾಗಿ ಹೋಯಿತು.

ಆದರೆ ಸುಯ್ಯೆಂದು ಗಾಳಿಯಲ್ಲಿ ತೇಲಿತು.ಕುದುರೆ ಸವಾರು ಬೀಸಿದ ಚಾಟಿ, ಅದು ಮರುಕ್ಷಣದಲ್ಲಿ ಬಂದು ಮಯೂರನ ಬೆನ್ನ ಮೇಲೆ ಚಟೀರನೇ ಅಪ್ಪಳಿಸಿತು.

ನಿಮಿಷಾರ್ಧದಲ್ಲಿ ಇದೆಲ್ಲಾ ನಡದೆದು ಹೋಯಿತು. ಕುದುರೆ ಸವಾರನೊಡನೆ ಅಷ್ಟು ದೂರದ ತಿರುವಿನಲ್ಲಿ ಮಾಯವಾಯಿತು.

ಮಯೂರನ ಮೈ ತುಂಬ ಬೆಂಕಿ ಹೊತ್ತಿಕೊಂಡಿತು. ಅವಮಾನದಿಂದ ಆತ ಸೆಟೆದು ನಿಂತ. ಸಿಟ್ಟಿನಿಂದ ಹಲ್ಲು ಕಚ್ಚಿದ. ಹೆಗಲ ಮೇಲೆ ಹೊದ್ದಿದ್ದ ವಸ್ತ್ರವನ್ನು ತೆಗೆದು ನೋಡಿದ. ಬೆನ್ನ ಮೇಲಿನ ಬಾಸುಂಡೆಯಿಂದ ಹೊರ ಹರಿದ ರಕ್ತ ಆ ವಸ್ತ್ರಕ್ಕೆ ಅಂಟಿಕೊಂಡಿತ್ತು.

ಉದ್ದೇಶಪೂರ್ವಕವಾಗಿ ಆ ಕುದುರೆ ಸವಾರ ತನ್ನನ್ನು ಹೊಡೆದು ಹೋದ. ತನ್ನ ಪಾಡಿಗೆ ತಾನು ರಸ್ತೆಯ ಮೇಲೆ ಹೋಗುತ್ತಿದ್ದೆ. ಕುದುರೆ ಹೋಗಲೆಂದು ಪಕ್ಕಕ್ಕೆ ಸರಿದೂ ನಿಂತೆ. ಆದರೂ ಚಾಟಿಯ ಏಟು ತಿನ್ನಬೇಕಾಯಿತೇ? ಆ ಸೈನಿಕ ಈಗ ಹೊರಟು ಹೋಗಿದ್ದಾನೆ. ಅವನ ಮುಖವನ್ನು ನೋಡಲೂ ಆಗಿಲ್ಲ. ಈಗ ಈ ನೋವನ್ನು ನುಂಗಿಕೊಳ್ಳುವುದೇ? ಅವಮಾನವನ್ನು ಸಹಿಸುವೇ? ಇಲ್ಲವೇ, ಆ ಸೈನಿಕನಿಗೆ ತಕ್ಕ ಶಿಕ್ಷೆ ಆಗುವಂತೆ ದೊರೆಯ ತನಕ ದೂರು ಒಯ್ಯುವುದೇ?

ಯೋಚಿಸುತ್ತ ಮಯೂರ ಆಶ್ರಮಕ್ಕೆ ಬಂದ. ಆಚಾರ್ಯ ರಿಗೆ ಬೆನ್ನು ತೋರಿಸಿ ನಡೆದುದನ್ನು ಹೇಳೀದ. ಆಚಾರ್ಯರು ತುಂಬಾ ನೊಂದರು. ಮಯೂರನಿಗೆ ಸಮಾಧಾನ ಹೇಳೀದರು.

“ಮಯೂರ, ಕುದುರೆಗೆ ಬೀಳುವ ಏಟು ನಿನಗೆ ಬಿದ್ದಿರಬೇಕು… ಮೊದಲು ಬೆನ್ನಿಗೆ ಮದ್ದು ಹಚ್ಚುತ್ತೇನೆ, ಬಾ” ಎಂದರು.

ಮಯೂರ, “ಇಲ್ಲ ಗುರುಗಳೇ, ಬೇಕೆಂದೇ ಸೈನಿಕ ನನ್ನತ್ತ ಚಾಟಿ ಬೀಸಿದ್ದಾನೆ.  ಈ ಅವಮಾನದ ಸೇಡನ್ನು ನಾನು ತೀರಿಸಿಕೊಳ್ಳದೆ ಬಿಡುವವನಲ್ಲ”, ಎಂದು ನುಡಿದ ಆಶ್ರಮದಿಂದ ಹೊರಟುಬಿಟ್ಟ.

“ಮಯೂರ, ನಿಲ್ಲು… ನಿಲ್ಲು”… ಎಂದು ಆಚಾರ್ಯರು ಕೂಗಿ ಕರೆದರೂ ಮಯೂರ ನಿಲ್ಲದೇ ಹೊರಟುಬಿಟ್ಟ.

“ಮಹಾರಾಜ ನನಗೆ ಅನ್ಯಾಯವಾಗಿದೆ:

ಮಯೂರ ನೇರವಾಗಿ ಪಲ್ಲವೇಂದ್ರನ ಅರಮನೆಗೆ ಬಂದ. ಅರಮನೆಯಲ್ಲಿ ರಾಜಸಭೆ ಸೇರಿತ್ತು.  ದೊರೆಯ ಬಳಿ ದೂರು ಹೇಳುವುದಿದೆ ಎಂದು ಮಯೂರ ಒಳನಡೆದ.

ದೊರೆ ಎತ್ತರವಾದ ಸಿಂಹಾಸನದ ಮೇಲೆ ಕುಳಿತ್ತಿದ್ದ. ಅವನ ಅಕ್ಕಪಕ್ಕಗಳಲ್ಲಿ ಮಂತ್ರಿಗಳು, ಚಿಕ್ಕಪುಟ್ಟ ರಾಜ ಮಹಾರಾಜರು ಕುಳಿತ್ತಿದ್ದರು. ಪುರಜನರು ನೂರಾರು ಮಂದಿ ಆ ಸಭೆಯಲ್ಲಿ ಸೇರಿದ್ದರು.

ಮಯೂರ ದೊರೆಯ ಎದುರು ಹೋಗಿ ನಿಂತ ದಿಟ್ಟತನದಿಂದ ತಲೆ ಎತ್ತಿ,

“ಮಹಾರಾಜ…ನನಗೆ ನಿನ್ನ ಸೈನಿಕರಿಂದ ಅನ್ಯಾಯವಾಗಿದೆ” ಎಂದು ನುಡಿದು ತನ್ನ ಬೆನ್ನ ಮೇಲಿನ ಗಾಯವನ್ನು ತೋರಿಸಿದ.

ದೊರೆ ಏನಾಯಿತು ಎಂದು ಕೇಳಿದಾಗ ಮಯೂರ ನಡೆದುದನ್ನು ಹೇಳೀದ.  ದೊರೆ ಮಂತ್ರಿಯತ್ತ ತಿರುಗಿ “ಮಂತ್ರಿ ಗಳೇ, ಏನು ಹೇಳುತ್ತೀರಿ”? ಎಂದು ಕೆಳೀದ. ಮಂತ್ರಿ ಹೇಳಿದ: “ಪ್ರಭು, ಈ ಬ್ರಾಹ್ಮಣ ದಾರಿಗೆ ಅಡ್ಡ ಬಂದಿರಬೇಕು. ಕುದುರೆ ಸವಾರ ಚಾಟಿ ಬೀಸಿದ್ದಾನೆ.ಸವಾರನದೇನೂ ತಪ್ಪಿಲ್ಲ…”

ದೊರೆ ತಲೆ ಯಾಡಿಸಿದ. ಮಗುಳುನಗುತ್ತ ಮಯೂರನ ಮುಖ  ನೋಡಿದ.  ಮಂತ್ರಿಯ ಮಾತು ಅವನಿಗೆ ಒಪ್ಪಿಗೆಯಾಯಿತು.

ಮಯೂರ ಹೇಳಿದ ” ಇಲ್ಲ ಪ್ರಭುಗಳೇ, ನಾನು ರಸ್ತೆಯ ಪಕ್ಕದಲ್ಲಿಯೇ ಹೋಗುತ್ತಿದ್ದೆ”.

ಮಂತ್ರಿ ಎಂದ: ” ಹಾಗಿದ್ದರೆ ಕುದುರೆ ಸವಾರ ನಿನ್ನನ್ನು ಹೊಡೆಯುತ್ತಿದ್ದನೇ? ಅವನಿಗೆ ಹುಚ್ಚೇ?

ಮತ್ತೇ ರಾಜ ಒಪ್ಪಿಗೆಯಿಂದ ತಲೆಯಾಡಿಸಿದ.

ತನಗೆ ಅನ್ಯಾಯವಾಗಿ ಎಂದು ಮಯೂರ ಎಷ್ಟು ಹೇಳಿದರೂ ಕೇಳುವವರು ಯಾರು?

“ನಿನ್ನ ಸೊಕ್ಕನ್ನು ಅಡಗಿಸುತ್ತೇನೆ”.

ಮಯೂರನಿಗೆ ತಾಳ್ಮೆ ತಪ್ಪಿತು.

“ಮಹಾರಾಜ, ಆ ಸೈನಿಕನನ್ನು ಪತ್ತೆ ಹಚ್ಚಿ ಅವನನ್ನು ದಂಡಿಸಲು ನಿನ್ನಿಂದ ಆಗುತ್ತದೋ ಇಲ್ಲವೋ ಹೇಳು. ನಿನ್ನಿಂದ ಆಗುವುದಿಲ್ಲವೆಂದರೆ ಆ ಕೆಲಸವನ್ನು ನಾನು ಮಾಡುತ್ತೇನೆ” ಎಂದ.

ಸಭೆಗೆ ಸಭೆಯೇ ಗೊಳ್ಳನೆ ನಕ್ಕಿತು. ದೊರೆ ನಗುವನ್ನು ತಡೆಯುತ್ತಾ,

“ಬ್ರಾಹ್ಮಣ, ವೇದ ಹೆಳುವ ಬಾಯಿ ನಿನ್ನದು. ನೀನು ಯುದ್ಧ ಘೋಷಣೆ ಮಾಡುವೆಯಾ? ದರ್ಭೆ ಹುಲ್ಲನ್ನು ಹಿಡಿಯುವ ನಿನ್ನ ಕೈ ಕತ್ತಿ ಹಿಡಿಯಬಲ್ಲದೇ?” ಎಂದು ಸವಾಲು ಹಾಕಿದ.

ಸಭೆಯಲ್ಲಿ ಕುಳೀತ ಹಲವರು ದೊರೆಯ ಮಾತಿಗೆ ತಲೆ ಹಾಕಿದರು.

ಮಯೂರನ ಮುಖಕ್ಕೆ ಗುದ್ದಿದಂತಾಯಿತು. ಅವನ ರೋಮ ರೋಮಗಳು ಎದ್ದು ನಿಂತವು. ಮಯೂರ ಮತ್ತೂ ಸೆಟೆದು ನಿಂತ. ಕೈಮುಷ್ಟಿ ಬಿಗಿದುಕೊಂಡ. ಎದೆ ಮುಂದೆ ಚಾಚಿದ.

 

ನಿನ್ನ ಈ ಅಟ್ಟಹಾಸವನ್ನು, ನಿನ್ನ ಸೈನಿಕರ ಸೊಕ್ಕನ್ನು ಅಡಗಿಸದಿದ್ದರೆ ನಾನು ಮಯೂರ ಶರ್ಮನೇ ಅಲ್ಲ"

“ಮಹಾರಾಜ… ನಾನು ಬ್ರಾಹ್ಮಣ ಹೌದು. ಆದರೆ ಮನಸ್ಸು ಮಾಡಿದರೆ ನಾನು ಕ್ಷತ್ರೀಯನೂ ಆಗಬಲ್ಲೆ. ಯಜ್ಞ  ಮಾಡಬಲ್ಲ ನಾನುಯುದ್ಧಕ್ಕೂ ಇಳಿಯಬಲ್ಲೆ, ದರ್ಭೆ ಹುಲ್ಲನ್ನು ಹಿಡಿಯಬಲ್ಲ ನಾನು ಕತ್ತಿಯನ್ನು ಝಳಪಿಸಬಲ್ಲೆ. ನಿನ್ನ ಸವಾಲಿಗೆ ನಾನು ಉತ್ತರ ಕೊಡುತ್ತೇನೆ. ನಿನ್ನ ಈ ಅಟ್ಟಹಾಸಸವನ್ನು, ನಿನ್ನ ಸೈನಿಕರ ಸೊಕ್ಕನ್ನು ಅಡಗಿಸದಿದ್ದರೆ ನಾನು ಮಯೂರಶರ್ಮನೇ ಅಲ್ಲ”.

ಎಂದು ನುಡಿದು ಮಯೂರ ಅರಮನೆಯಿಂದ ಹೊರ ಬಿದ್ದ ಮಯೂರನ ಗುಡುಗಿನಂತಹ ದನಿ ಅರಮನೆಯಲ್ಲಿ ಚೆಂಡಿನಂತೆ ಪುಟಿದಾಡಿತು. ಪಲ್ಲವೇಂದ್ರವನು ಕೂಡ ಚಕಿತವಾಗಿ ಕುಳಿತ. ಕ್ರಮೇಣ, ಬಡ ಬ್ರಾಹ್ಮಣ ಏನು ಮಾಡಿಯಾನು ಎಂದು ನಸುನಕ್ಕ. ಆ ವಿಷಯವನ್ನು ಅಲ್ಲಿಯೇ ಮರೆತ.

ಕತ್ತಿ ಹಿಡಿದ ಕೈ:

ಕಾಂಚೀಪುರದಲ್ಲಿ ಆಡಳಿತ ಸರಿಯಾಗಿರಲಿಲ್ಲ. ದೊರೆಯಿಂದ ಕೆಲವರಿಗೆ ಕಿರುಕುಳ ವಾಗುತ್ತಿತ್ತು. ಸೈನಿಕರು ಪ್ರಜೆಗಳನ್ನು ಹಿಂಸಿಸುತ್ತಿದ್ದರು.  ಬಹಳ ಜನರಿಗೆ ಪಲ್ಲವ ದೊರೆಯ ವಿಷಯದಲ್ಲಿ, ಅವನ ಮಂತ್ರಿಗಳು- ಸೈನಿಕರ ವಿಷಯದಲ್ಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ.

ಮಯೂರಶರ್ಮನಿಗೆ ಈ ವಿಷಯ ಮೊದಲೇ ತಿಳಿದಿತ್ತು. ಆದರೆ ಯಾವಾಗ ಮಯೂರ ರಾಜನ ಎದುರು ನಿಂತು ಶಪಥ ತೊಟ್ಟು ಬಂದನೋ ಆ ಗಳಿಗೆಯಿಂದ ಇದೆಲ್ಲವನ್ನೂ ಕುರಿತು ಆಳವಾಗಿ ಯೋಚಿಸಿದ.

ದೊರೆಯು ಪ್ರಥಮವಾಗಿ ದುರ್ಬಲರನ್ನು, ಮಕ್ಕಳನ್ನು, ಸ್ತ್ರೀಯರನ್ನು ರಕ್ಷಿಸಬೇಕು. ನಿರಪರಾಧಿಗಳನ್ನು, ದೇಶದ ಕಾನೂನಿನಂತೆ ನಡೆಯುವವರನ್ನು ರಕ್ಷಿಸಬೇಕು. ಸಾಮಾನ್ಯ ಸೈನಿಕನೋರ್ವನು ರಸ್ತೆಯಲ್ಲಿ  ಹೋಗುತ್ತಿರುವ ನಿರಾಪರಾಧಿಗಳನ್ನು ಸೊಕ್ಕಿನಿಂದ ಹೊಡೆಯುತತಾನೆಂದರೆ ಈರಾಜ್ಯದಲ್ಲಿಯೇ ದೊರೆತ ಇಲ್ಲವೆಂದು ಅರ್ಥ. ಇಂತಹ ರಾಜ್ಯದಲ್ಲಿ ತಾನೂ ಇರಲೂಬಾರದು. ಇಂತಹ ರಾಜನ ವಿರುದ್ಧ ದಂಗೆ ಎದ್ದರೂ ತಪ್ಪಲ್ಲವೆಂದು ನಿರ್ಧರಿಸಿದ. ಮಯೂರ.

ಮಯೂರ ಎಂದಿನಂತೆ ತನ್ನ ವ್ಯಾಸಂಗವನ್ನು ಮುಂದುವರೆಸಿದ. ಆದರೆ ಯಾರಿಗೂ ತಿಳಿಯದಂತೆ ಪಲ್ಲವ ದೊರೆಯ ವಿರುದ್ಧ ಒಂದು ಸೈನ್ಯವನ್ನು ಕಟ್ಟತೊಡಗಿದ. ಅನೇಕರು ದೊರೆಯ ಅನ್ಯಾಯಕ್ಕೆ, ಸೈನಿಕರ ಸೊಕ್ಕಿಗೆ ಬೇಸತ್ತಿದ್ದರು.ಅವರೆಲ್ಲ ಈ ಕಾರ್ಯದಲ್ಲಿ ಮಯೂರನಿಗೆ ಸಹಾಯ ಮಾಡಲು ಮುಂದೆ ಬಂದರು. ಹಲವರು ಸೈನಿಕರಾಗಿ ಮಯೂರನ ಪಡೆಯನ್ನು ಸೇರಿಕೊಂಡರು.

ಮಯೂರ ಕುದುರೆ ಸವಾರಿಯನ್ನು ಕಲಿತ, ಕತ್ತಿವರಸೆ ಯನ್ನು ಕೆಲವು ದಿನಗಳಲ್ಲಿಯೇ ಕಲಿತುಕೊಂಡ. ಮುಷ್ಟಿಯುದ್ಧದಲ್ಲಿಯೂ ಮಯೂರ ಪಳಗಿದ. ಇತರರಿಗೂ ಕತ್ತಿವರಸೆ ಹಾಗೂ  ಕುದುರೆ ಸವಾರಿಗಳನ್ನು ಕಲಿಸಿದ.

ಕೆಲವೇ ದಿನಗಳಲ್ಲಿ ಕಾಂಚೀನಗರದಲ್ಲಿ ಮಯೂರನ ಸೈನಿಕರು ಕಿರುಕುಳವನ್ನು ಆರಂಭಿಸಿದರು. ಪಲ್ಲವನ ಸೈನಿಕರ ಮೇಲೆ ಒಂದು ಕಡೆ ಯಾರೋ ಬಾಣಗಳನ್ನು ಬಿಟ್ಟರು. ಮತ್ತೊಂದು ಕಡೆಯಲ್ಲಿ ಕವಣೆಯ ಕಲ್ಲುಗಳನ್ನು ತೂರಿದರು. ಮಂತ್ರಿಗಳ ಮೇನೆಯ ಮೇಲೆ ಮಯೂರನ ದಾಳಿಯಾಯಿತು. ಮೇನೆ ಹೊತ್ತ ಬೋವಿಗಳು ಹೆದರಿ ಓಡಿ ಹೋದರು. ಅರಮನೆಯ ಗೋವುಗಳು ಅರಮನೆಗೆ ಹಿಂತಿರುಗಲಿಲ್ಲ. ಅರಮನೆ ಕುದುರೆಗಳು ಮಾಯವಾವದವು. ಹೀಗೆಯೇ ಹಲವು ತೊಂದರೆಗಳೂ ತಲೆದೋರಿದವು.

“ಕೂಡಲೇ ಹಿಡಿದುಕೊಂಡು ಬನ್ನಿ”:

ಪಲ್ಲವ ದೊರೆಯು ಮಂತ್ರಿಗಳನ್ನು ಅರಮನೆಗೆ ಕರೆಸಿಕೊಂಡ.

ರಾಜಧಾನಿಯಲ್ಲಿ ಯಾರೋ  ನಮ್ಮ ಸೈನಿಕರಿಗೆ ಕಿರುಕುಳ ಕೊಡುತ್ತಿದ್ದಾರೆ. ಅವರು ಯಾರೂ ಎಂಬುವುದನ್ನು ಪತ್ತೇ ಮಾಡಿ” ಎಂದು ಅಪ್ಪಣೆ ನೀಡಿದನು.

ಕೆಲವು ದಿನಗಳು ಕಳೆದವು. ಒಂದು ಬೆಳಿಗ್ಗೆ ಪ್ರಧಾನ ಮಂತ್ರಿಯು ಪಲ್ಲವೇಂದ್ರನ ಬಳಿ ಬಂದು,.

“ಮಹಾಪ್ರಭು, ವೈರಿ ಬಲಶಾಲಿಯಾಗುತ್ತಿದ್ದಾನೆ” ಎಂದ.

“ಯಾರು ವೈರಿ? ವಿಷಯವನ್ನು ವಿವರಿಸಿ ಹೇಳಿ”.

“ಅದು ಒಬ್ಬ ಬ್ರಾಹ್ಮಣ ಅರಮನೆಗೆ ಬಂದು ಅದೇನೋ ಶಪಥಟೊಟು ಹೋಗಿದ್ದನಲ್ಲ… ಅವನದೇ ಈ ಕಿರುಕುಳ ಬೇಗನೇ ತಡೆಯದಿದ್ದರೆ ಅವನು ಕೊಬ್ಬಿಹೋದಾನು.

ಮಹಾರಾಜನು “ಕೂಡಲೇ ಮಯೂರಶರ್ಮನನ್ನು ಹಿಡಿದುಕೊಂಡು ಬನ್ನಿ,” ಎಂದು ಆಜ್ಞೆ ಮಾಡಿದ. ದೊರೆಯ ಈ ಆಜ್ಞೆಯನ್ನು ಕಾರ್ಯರೂಪಕ್ಕೆ ಇಳಿಸಲು ಪಲ್ಲವ ರಾಜನ ಒಂದು ದಂಡೇ ಹೊರಟಿತು.

ಒಂದು ಬೆಳಿಗ್ಗೆ-

ಮಯೂರನು ಒಂದು ದಿನ ಕಾಂಚೀಪುರದಲ್ಲಿ ಹೊರಗಿನ ಬೆಟ್ಟದ ತಪ್ಪಲಿನಲ್ಲಿ ತನ್ನ ಸೈನಿಕರಿಗೆ ತರಬೇತಿಯನ್ನು ನೀಡುತ್ತಿದ್ದಾನೆ.

ಇದ್ದಕಿದ್ದಂತೆಯೇ ಪಲ್ಲವ ಸೈನ್ಯ ಮಯೂರನ ಸೈನ್ಯವನ್ನು ಸುತ್ತುಗಟ್ಟಿತ್ತು. ಎರಡೂ ಪಡೆಗಳ ನಡುವೆ ಹೋರಾಟ ನಡೆಯಿತು. ಮಯೂರನ ಸೈನಿಕರು ಸಿದ್ಧರಾಗಿರಲಿಲ್ಲ ವಾದ್ದರಿಂದ ಅವರು ಸೋತು ಹಿಂದೆ ಸರಿದರು. ಹಲವರು ಓಡಿ ಹೋದರು. ಕೆಲವು ಸೆರೆ ಸಿಕ್ಕರು. ಅವರಲ್ಲಿ ಮಯೂರನೂ ಒಬ್ಬ.

ಸಿಂಹ ತಪ್ಪಿಸಿಕೊಂಡಿತು!

ಪಲ್ಲವ ಸೈನ್ಯಕ್ಕೆ ಹಿಗ್ಗೋಹಿಗ್ಗು-ಮಯೂರನು ಸೆರೆಸಿಕ್ಕ ಸಂತಸದಲ್ಲಿ ಓಲಾಡುತ್ತ ಅವನ ಕೈಗಳಿಗೆ ಹಗ್ಗ ಕಟ್ಟಿ ಕರೆದು ಕೊಂಡು ಅರಮನೆಯತ್ತ ಹೊರಟಿತು.

ಆದರೆ ಪಲ್ಲವ ಸೈನ್ಯದ ಈ ಸಂತಸದಿಂದ ಮಯೂರನಿಗೆ ಲಾಭವೇ ಆಯಿತು. ಸೊರಗಿ ಹೋದವನಂತೆ ಒರಗಿದ. ಸಮಯ ನೋಡಿ, ಯಾರಿಗೂ ಅರಿಯದಂತೆ ತನ್ನ ಕೈಗಳೀಗೆ ಕಟ್ಟಿದ ಹಗ್ಗಗಳನ್ನು ಕತ್ತರಿಸಿಕೊಂಡ. ಪಲ್ಲವ ಸೈನ್ಯರಮನೆಯ ಹತ್ತಿರ ಬರುತ್ತಿದೆ ಅನ್ನುವಾಗ ಹುಚ್ಚೆದ್ದು ಕುಣಿಲಾರಂಭಿಸಿತು. ಇದೇ ಸಮಯ ಸೂಕ್ತವೆಂದು ನಿರ್ಧರಿಸಿ ಮಯೂರ ಚಂಗನೆ ಮೇಲಕ್ಕೆ ಹಾರಿದ. ಸೈನಿಕರನೊಬ್ಬನ ಕತ್ತಿಯನ್ನು ಎಳೆದುಕೊಂಡು ಪಲ್ಲವ ಸೈನಿಕರ ಮಧ್ಯದಿಂದ ನುಸುಳಿ ಪಾರಾದ. ಹಲವರನ್ನು ಸದೆಬಡಿದ. ಹಲವರು ಇವನ ಆವೇಶವನ್ನು ನೋಡಿಯೇ ದೂರ ಸರಿದರು. ಅಂತೂ ಮಯೂರ ತಪ್ಪಿಸಿಕೊಂಡ.

ಕಾಂಚೀಪುರದಲ್ಲಿಯೇ ಇರುವುದು ಅಪಾಯ ಎನಿಸಿತು. ಪಲ್ಲವ ದೊರೆಯ ಕಣ್ಣೀಗೆ ಬಿದ್ದುದಾಯ್ತು, ಮತ್ತೇ ಅವನ ವಶವಾಗಬಾರದು. ಅವನಿಗೆ ಸೋಲಾಗಬಾರದು. ಅವನನ್ನು ಸೋಲಿಸಬೇಕು. ದೊಡ್ಡ ಸೈನ್ಯವನ್ನು ಕಟ್ಟಬೇಕು. ಅಂದರೆ ಮೊದಲು ಕಾಂಚೀಪುರವನ್ನು ಬಿಡಬೇಕು ಎಂದು ನಿರ್ಧರಿಸಿದ ಮಯೂರ.

ಆಚಾರ್ಯ ವೀರಶರ್ಮರನ್ನು ಭೇಟಿ ಮಾಡಲು ಅವಕಾಶ ಸಿಕ್ಕಲಿಲ್ಲ. ಮಯೂರ ತಲೆಮರೆಸಿಕೊಂಡು ಕಾಂಚಿಪೂರದಿಂದ ಹೊರಟುಬಿಟ್ಟ.

ಸೋತ ಪಲ್ಲವ ರಾಜ :

ಮಯೂರಶರ್ಮನು ಕಾಂಚೀಪುರದಿಂದ ಹೊರಟು ಶ್ರೀ ಪರ್ವತವೆಂಬಲ್ಲಿಗೆ ಹೋಗಿ ಸೇರಿಕೊಂಡನು. ಶ್ರೀ ಪರ್ವತದ ತಪ್ಪಲಲ್ಲಿ ದಟ್ಟವಾದ ಕಾಡು. ಇಲ್ಲಿ ಮಯೂರ ಸುರಕ್ಷಿತ. ಈ ಕಾಡಿನಲ್ಲಿ ಒಂದೆರಡು ಬಿಲ್ಲಾಳುಗಳ ಜನಾಂಗವಿತ್ತು. ಈ ಬಿಲ್ಲಳುಗಳು ಸ್ನೇಹವನ್ನು ಮಯೂರಶರ್ಮನು ಗಳಿಸಿಕೊಂಡನು. ಇವರಿಗೆ ಸೈನಿಕ ತರಬೇತಿಯನ್ನು ನೀಡಿದನು.

ಕೆಲವೇ ದಿನಗಳಲ್ಲಿ ಮಯೂರಶರ್ಮನು ಬಲಾಢ್ಯನಾದನು. ಅವನ ಸೈನ್ಯವು ಎಲ್ಲ ಬಗೆಯ ಯುದ್ಧಗಳನ್ನು ಮಾಡಲು ಸಿದ್ಧವಾಯಿತು. ಮಯೂರಶರ್ಮನು ಪಲ್ಲವ ದೊರೆಗಳ ಪ್ರೀತಿ- ವಿಶ್ವಾಸವನ್ನು ಗಳಿಸಿಕೊಂಡಿದ್ದ ಚಿಕ್ಕಪುಟ್ಟ ರಾಜರುಗಳ ಮೇಲೆ ಮೊದಲು ಯುದ್ಧ ಸಾರಿದನು. ಈ ಯುದ್ಧದಲ್ಲಿ  ಅವನು ವಿಜಯಿಯಾದನು. ಆ ರಾಜರುಗಳ ಸೈನ್ಯ. ಯುದ್ಧ ಸಾಮಗ್ರಿಗಳು ಅವನ ವಶವಾದವು.

ಬೃಹದ್‌ಬಾಣನೆಂಬ ಒಬ್ಬ ದೊರೆಯು ಪಲ್ಲವರ ರಕ್ಷಣೆಯಲ್ಲಿ ರಾಜ್ಯವಾಳಿಕೊಂಡಿದ್ದನು. ಮಯೂರಶರ್ಮನು ಬೃಹದ್ ಬಾಣದ ಮೇಲೆ ದಂಡೆತ್ತಿ ಹೋದನು. ಸೋತ ಬೃಹದ್ ಬಾಣನು ಕಾಂಚೀಪುರಕ್ಕೆ ಓಡಿ ಹೋಗಿ ಪಲ್ಲವ ದೊರೆಯ ಮೊರೆಹೊಕ್ಕನು.

ಬೃಹದ್‌ಬಾಣನ ಕಥೆ ಕೇಳಿ ಪಲ್ಲವ ದೊರೆ ಬೆರಗಾದ, ಮನಸ್ಸಿನಲ್ಲಿ ಕಳವಳ ತೋರಿತು.

“ಆ ಬ್ರಾಹ್ಮಣ ಇಷ್ಟು ಮುಂದುವರಿಯುತ್ತಾನೆ ಎಂದು ನಾನು ತಿಳಿದಿರಲಿಲ್ಲ” ಎಂದನು ಪಲ್ಲವ ದೊರೆ.

“ಇರಲಿ. ಈಗಲೂ ನಾವು ಅವನಿಗೆ ಹೆದರಬೇಕಾಗಿಲ್ಲ. ನಮ್ಮ ಆಶ್ರಯದಲ್ಲಿದ್ದ ಚಿಕ್ಕಪುಟ್ಟ ದೊರೆಗಳನ್ನು ಅವನು ಸೋಲಿಸಿರಬಹುದು. ಹಾಗೆಂದು ಅವನು ನಮ್ಮನ್ನು ಎಂದಿಗೂ ಸೋಲಿಸಲಾರ” ಎಂದು ಪಲ್ಲವ ದೊರೆಯು ಮೀಸೆಗಳನ್ನು ಹುರಿಮಾಡಿದನು. ಹಾಗೂ ಬೃಹತದ ಬಾಶಣನ ರಾಜ್ಯವನ್ನು ಮತ್ತೇ ಕೊಡಿಸುವುದಾಗಿ ಭರವಸೆ ನೀಡಿದನು.

ಅಂದೇ ಪಲ್ಲವ ದೊರೆಯ ದೊಡ್ಡದೊಂದು ಸೈನ್ಯ ಮಯೂರನ ಮೇಲೆ ದಂಡೆತ್ತಿ ಹೊರಟಿತು.

ಆನೆ, ಕುದುರೆಗಳನ್ನು ಏರಿ, ಕತ್ತಿ, ಗುರಾಣಿ, ಬಿಲ್ಲು ಬಾಣಗಳನ್ನು ಹಿಡಿದು ಸೈನಿಕರು, ಬಿಚ್ಚುಗತ್ತೆಗಳನ್ನು ಹಿಡಿದ ಕಾಲಾಳುಗಳು, ಕವಣೆಗಳಿಂದ, ಭರ್ಜಿಗಳಿಂದ ಯುದ್ಧ ಮಾಡುವವರು ಪಲ್ಲವ ರಾಜನ ಸೈನ್ಯದಲ್ಲಿದ್ದರು.  ಈ ಸೈನ್ಯ ಬೃಹತದ ಬಾಣನ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಮಯೂರ ಶರ್ಮನ ಸೈನ್ಯ ಈಸೈನ್ಯದ ಮೇಲೆ ಬಿದ್ದಿತು.

ಯುದ್ಧ ಭೀಕರವಾಗಿ ನಡೆಯಿತು.  ವಿಷದ ಬಾಣಗಳು ಹಾರಾಡಿದವು. ಕವಣೆ ಕಲ್ಲುಗಳು ಸುಂಯ್ ಗುಟ್ಟಿದವು. ಭರ್ಜಿಗಳು ತೂರಾಡಿದವು. ಕತ್ತಿಗಳ ಚಕಮಕದಿಂದ ಕಿಡಿಗಳು ಹಾರಿದುವು.

ಯುದ್ಧ ಧೀರ್ಘವಾಗಿ ನಡೆಯಿತು. ಮಯೂರ ಶರ್ಮನು ಕತ್ತಿ ಹಿಡಿದು, ಕುದುರೆಯೊಂದನ್ನು ಏರಿ ತನ್ನ ಸೈನಿಕರಲ್ಲಿ ಉತ್ಸಾಹ ತುಂಬ ತೊಡಗಿದನು. ನಿಧಾನವಾಗಿ ಪಲ್ಲವ ಸೈನಿಕರು ಹಿಂದೆ ಸರಿಯಲಾರಂಭಿಸಿದರು. ಕಡೆಗೆ ಮಯೂರ ಶರ್ಮನೇ ಗೆದ್ದ.

“ಜೈ ಮಯೂರ ಶರ್ಮ ! ಜೈ ಮಧುಕೇಶ್ವರ!” ಎಂಬ ಜಯಘೋಷ್ ಎಲ್ಲೆಲ್ಲೂ  ಕೇಳೀ ಬಂದಿತು.

“ಯುದ್ಧದ ದಾರಿಯನ್ನು ಬಿಡಬೇಕು:”

ಪಲ್ಲವ ಸೈನ್ಯ ಸೋತು ಬಂದ ಸುದ್ಧಿ ದೊರೆಯ ಕಿವಿಗೆ ಬಿದ್ದಿತು. ಪಲ್ಲವ ದೊರೆ ಅವಮಾನಿತನಾಗಿ ತಲೆಯ ಮೇಲೆ ಕೈಹೊತ್ತು ಕುಳಿತ.

ಅಂದು ಆಸ್ಥಾನಕ್ಕೆ ಬಂದ ಬ್ರಾಹ್ಮಣ ವಿನಯದಿಂದಲೇ ತನಗಾದ ಅನ್ಯಾಯವನ್ನು ಹೇಳಿದ್ದನಲ್ಲವೇ? ಆಗ ಅವನನ್ನು ಗೌರವದಿಂದ ಕಂಡಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಅಂದು ಅವನನ್ನು ಅವಮಾನ ಪಡಿಸಿದ್ದೇ ಮೂಲ ಕಾರಣವಾಯಿತು. ತಾನೂ ಸೋತೆ. ಮುಂದೇನು ಮಾಡುವುದು?

ಪಲ್ಲವ ದೊರೆ ಪ್ರಧಾನಮಂತ್ರಿಯೊಡನೆ ಸಮಾಲೋಚನೆಯನ್ನು ನಡೆಸಿದನು.

“ಮಂತ್ರಿಗಳೇ, ಏನು ಮಾಡಿದರೆ ಮಯೂರ ಶರ್ಮ ನಮ್ಮ ಮಾತನ್ನು ಕೇಳಬಹುದು?” ಪಲ್ಲವ ದೊರೆ ಚಿಂತ್ರಾಕ್ರಾಂತನಾಗಿಯೇ ಕೇಳಿದ ತನ್ನ ಮಂತ್ರಿಯನ್ನು.

ಮಂತ್ರಿ ಉತ್ತರಿಸಿದ :” ಇನ್ನು ನಾವು ಯುದ್ಧದ ಮಾತನ್ನು ನಿಲ್ಲಿಸಬೇಕು ಪ್ರಭು”.

ಯುದ್ಧದ ಮಾತನ್ನು ನಿಲ್ಲಿಸಬೇಕು ಎಂದಾಗ ದೊರೆಗೆ ಸಿಟ್ಟು ಬಂತು. ಅಂದರೆ ಮಯೂರಶರ್ಮನೊಡನೆ ಸಂಧಾನ ಮಾಡಿಕೊಳ್ಳಬೇಕೆ? ದೊರೆ ಮಂತ್ರಿಗೆ ಹೇಳಿದ, “ನಿಮ್ಮ ಮಾತಿನ ಅರ್ಥ ನನಗೆ ಆಗಲಿಲ್ಲ”.

“ಪ್ರಭು, ಮಯೂರಶರ್ಮ ಬಲಶಾಲಿಯಾಗಿದ್ದಾನೆ. ವೈರಿಯು ಶಕ್ತಿಶಾಲಿಯಾಗಿರುವಾಗ ನಾವು ಸಮಾಧಾನದ ದಾರಿಯನ್ನು ಹಿಡಿಯಬೇಕು. ಯುದ್ಧವನ್ನು ಬಿಡಬೇಕು”.

ದೊರೆಗೆ ಈ ಮಾತು ಕಹಿಯೇ. ಆದರೆ ಯೋಚಿಸಿದಷ್ಟೂ ಇದೇ ಸರಿ ಎನಿಸಿತು. ಮಯೂರ ಶರ್ಮ ಶಕ್ತಿಶಾಲಿಯಾಗಿರುವುದಂತೂ ನಿಜ. ಬೃಹತದ ಬಾಣನ್ನನು ಅವನು ಸೋಲಿಸಲಿಲ್ಲವೇ? ಉಳಿದ ಸಣ್ಣ ಸಣ್ಣ ದೊರೆಗಳನ್ನು ಸೋಲಿಸಲಿಲ್ಲವೇ? ಅಲ್ಲೊಂದು ರಾಜ್ಯವನ್ನು ಕಿತ್ತುಕೊಂಡ. ಇಲ್ಲಿಷ್ಟು ಸೈನ್ಯವನ್ನು ಮಾಡಿಕೊಂಡ. ಈಗ ದೊಡ್ಡವನಾಗಿ ಬೆಳೆದಿದ್ದಾನೆ. ಪಲ್ಲವ ದೊರೆಯಾದ ನನ್ನನ್ನೇ ಬೆದರಿಸುತ್ತಾನೆ.

“ಮಂತ್ರಿಗಳೇ, ಅವನ ಮನಸ್ಸಿನಲ್ಲಿ ಏನಿದೆ ಮೊದಲು ತಿಳಿಯಿರಿ:” ಎಂದ ದೊರೆ ಮಂತ್ರಿಗಳಿಗೆ.

ಮಹಾರಾಮ ಮಯೂರ ಶರ್ಮ:

ಮಯೂರ ಶರ್ಮ ಶ್ರೀ ಪರ್ವತದಲ್ಲಿ ವಾಸಿಸುತ್ತಿದ್ದ. ಪರ್ವತದ ತಪ್ಪಲಲ್ಲಿ ಅವನ ಮನೆ. ಸುತ್ತ ಸೈನಿಕರು, ಆನೆ, ಕುದುರೆಗಳು. ಒಂದು ದಿನ ಇದ್ದಕ್ಕಿದ್ದ ಹಾಗೆಯೇ ಪಲ್ಲವ ಸೈನ್ಯದ ಒಂದು ದಂಡು ಕಾಣಿಸಿಕೊಂಡಿತು. ವೈರಿಗಳು ಮುತ್ತಿಗೆ ಹಾಕಿದ್ದಾರೆ ಅವರನ್ನು ಕೊಲ್ಲಿರಿ ಎಂದು ಮಯೂರನ ಸೈನಿಕರು ಕೂಗತೊಡಗಿದರು. ಆದರೆ ದೂರದಿಂದಲೇ ಅವರ ನಾಯಕರು “ನಾವು ಯುದ್ದಕ್ಕೆ ಬಂದಿಲ್ಲ. ಮಾತುಕತೆಗಾಗಿ ಬಂದ್ದಿದ್ದೇವೆ” ಎಂದು ಸ್ಪಷ್ಟಮಾಡಿದರು. ಸುದ್ಧಿ ಮಯೂರನಿಗೂ ತಲುಪಿತು.

“ಅವರ ನಾಯಕರನ್ನು ಕರೆತನ್ನಿ” ಎಂದು ಮಯೂರ ಆಜ್ಞಾಪಿಸಿದ.  ಪಲ್ಲವ ದೊರೆಯ ಪ್ರತಿನಿಧಿಯೊಬ್ಬ ಬಂದು ಎದುರು ನಿಂತ. ಮಯೂರನಿಗೆ ನಮಸ್ಕರಿಸಿದ. “ಪಲ್ಲವ ದೊರೆ ಗಳ ವಿರೋಧವಾಗಿ ನೀವು ಏಕೆ ಯುದ್ಧ ಮಾಡುತ್ತಿರುವಿರಿ ಎಂಬುವುದನ್ನು ದೊರೆಗಳು ತಿಳಿಯಬಯಸಿದ್ದಾರೆ ಈ ರಕ್ತದ ಚೆಲ್ಲಾಟ ಅರಸರಿಗೆ ಇಷ್ಟವಿಲ್ಲ. ಅವರ ಮನಸ್ಸಿಗೆ ನೋವಾಗಿದೆ. ಯಾವ ಭಿನ್ನಭಿಪ್ರಾಯ ಇದ್ದರೂ ಸ್ನೇಹವಾಗಿ ಪರಿಹರಿಸಿಕೊಳ್ಳೋಣ ಎಂದು  ಪ್ರಭುಗಳೂ ತಮಗೆ ಹೇಳಲು ಬಯಸುತ್ತಾರೆ:”, ಎಂದ ಅ ಪಲ್ಲವ ಪ್ರತಿನಿಧಿ.

ಮಯೂರಶರ್ಮ ಶಾಂತವಾಗಿ ಕುಳಿತು ಯೋಚಿಸಿದ. ಪಲ್ಲವ ದೊರೆ ಸ್ನೇಹಹಸ್ತವನ್ನು ಮುಂದೆ ಚಾಚಿದ್ದಾನೆ. ಯುದ್ಧ ಸಾಕು,ಸಂದಾನಕ್ಕೆ ಬಾ ಎಂದಿದ್ದಾನೆ. ಪಲ್ಲವ ದೊರೆಯ ಮಾತಿನಲ್ಲಿ ಅವನು ಸಿಂಹಾಸನದ ಮೇಲೆ ಕುಳಿತು ಆಡಿದ ಮಾತಿನಲ್ಲಿ ಅವನು  ಸಿಂಹಾಸನದ ಮೇಲೆ ಕುಳಿತು ಆಡಿದ ಮಾತಿಗೆ ಕ್ಷಮೆ ಕೇಳುವ ಧಾಟಿ ಇದೆ. ಹೌದು, ಇನ್ನೂ ಯುದ್ಧ ಸಾಕು. ಹಾಗಾದರೆ ಪಲ್ಲವ ದೊರೆಯ ಹತ್ತಿರ ಏನು ಕೇಳುವುದು?

ತನ್ನ ಊರಾದ ತಾಣಗುಂದೂರು ಬನವಾಸಿ ನಾಡಿನಲ್ಲಿದೆ. ಬನವಾಸಿ ನಾಡು ಇದೇ ಪಲ್ಲವನ ವಶದಲ್ಲಿದೆ. ದೂರದ ಆ ನಾಡನ್ನು ಪಲ್ಲವ ಇಲ್ಲಿಂದ ಆಳುತ್ತಾನೆ. ಅಲ್ಲಿ ತನ್ನ ಪ್ರತಿನಿಧಿಯನ್ನು ಇರಿಸಿದ್ದಾನೆ. ಬನವಾಸಿ ನಾಡಿನ ಜನರಿಗೆ ಪಲ್ಲವ ಸೈನಿಕರಿಂದ ಆಗಾಗ ಕಿರುಕುಳ, ತೊಂದರೆ ಆಗುತ್ತಿರುತ್ತದೆ, ಬನವಾಸಿ ನಾಡನ್ನು ಪಲ್ಲವರು ಸ್ವತಂತ್ಯ್ರಗೊಳಿಸಿದರೆ ಒಳ್ಳೆಯದು. ಅದನ್ನು ತನ್ನ ವಶಕ್ಕೆ ಕೊಟ್ಟರೆ ಮತ್ತೂ ಒಳ್ಳೆಯದು. ಅಲ್ಲಿಯ ಜನರ ಸುಖಕ್ಕಾಗಿ ತಾನು ದುಡಿಯಬಹುದು.

ಮಯೂರ ಶರ್ಮ ತನ್ನ ಮನಸ್ಸಿನಲ್ಲಿರುವುದನ್ನು ಪಲ್ಲವ ಪ್ರತಿನಿಧಿಗೆ ಹೇಳಿದ. “ಇನ್ನು ಮುಂದೆಯಾದರೂ ನಿರಾಪರಧಿ ಗಳನ್ನು, ನ್ಯಾಯ ಬೇಡಿದವರನ್ನು ಕೀಳಾಗಿ ಕಾಣಬಾರದೆಂದು ದೊರೆಗಳಿಗೆ ಹೇಳಿ” ಎಂದ. ಪಲ್ಲವ ದೊರೆ ಮಯೂರ ಶರ್ಮನ ಷರತ್ತಿಗೆ ಒಪ್ಪಿಕೊಂಡನು. ಪಶ್ಚಿಮದಲ್ಲಿರುವ ಸಮುದ್ರ ತೀರದಿಂದ ಹಿಡಿದು ಮಲಪ್ರಭಾ ನದಿಯವರೆಗಿನ ಪ್ರದೇಶವನ್ನು ಪಲ್ಲವರು ಮಯೂರಶರ್ಮನಿಗೆ ಒಪ್ಪಿಸಲು ಸಿದ್ಧರಾದರು.

ಮಯೂರ ಶರ್ಮ ತಾಣಗುಂದೂರಿಗೆ ಹಿಂತಿರುಗಿದನು. ಕಾಂಚೀಪುರದಲ್ಲಿದ್ದ ತನ್ನ ಗುರುಗಳಿಗೂ ಹಿಂತಿರುಗುವಂತೆ ಹೇಳಿ ಕಳುಹಿಸಿದನು. ಒಂದು ಶುಭ ಮೂಹೂರ್ತದಲ್ಲಿ ಬನವಾಸಿಯಲ್ಲಿ ಕದಂಬ ಮಯೂರ ಶರ್ಮನಿಗೆ ಪಟ್ಟಾಭಿಷೇಕವಾಯಿತು.  ಪಲ್ಲವ ದೊರೆಗಳ ವಿಶೇಷ ಪ್ರತಿನಿಧಿಯೊಬ್ಬನು ಕಾಂಚಿಪೂರದಿಂದ ಬಂದು ಮಯೂರ ಶರ್ಮನನ್ನು ಕಿರಿಟ ದಿಂದ ಅಲಂಕರಿಸಿದನು. ಈ ಮಹೋತ್ಸವಕ್ಕೆ ಅಕ್ಕಪಕ್ಕದ ದೊರೆಗಳೆಲ್ಲ ಬಂದಿದ್ದರು.  ತಾಣ ಗುಂದೂರಿನ ಎಲ್ಲ ಜನ ಅಂದು ಸಂತಸ ಸಂಭ್ರಮಗಳಿಂದ ಕುಣಿದಾಡಿದರು. ಮಧುಕೇಶ್ವರ ದೇವಾಲಯದಲ್ಲಿ ಅಂದು ಮಹಾಪೂಜೆ ನಡೆಯಿತು.  ಮಯೂರ ಶರ್ಮನು ಮಲೆನಾಡಿನಲ್ಲಿ ಪ್ರಥಮ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಪ್ರಥಮ ಸಾಮ್ರಾಟನೆನಿಸಿಕೊಂಡನು. ಬ್ರಾಹ್ಮಣನಾಗಿ ಹುಟ್ಟಿದವನು ಕ್ಷತ್ರೀಯನಂತೆ ಕತ್ತಿ ಹಿಡಿದ. ರಾಜ್ಯ ಕಟ್ಟಿದ.

ಹೀಗೆ ವೇದಗಳ ಅಧ್ಯಯನದಲ್ಲಿ ನಿರತನಾಗಿದ್ದ ಮಯೂರಶರ್ಮ ದೊರೆಯಾದ. ಆದರೆ “ಶರ್ಮ ಎಂಬ ಶಬ್ದ ಬ್ರಾಹ್ಮಣ ವರ್ಗದ ಸೂಚಕವಾಗಿತ್ತು. ಅಲ್ಲದೇ ರಾಜ್ಯಾಡಳಿತ ಕೇವಲ ಕ್ಷತ್ರೀಯರಿಗೆ ಮೀಸಲು ಎಂಬ ಅಭಿಪ್ರಯ ಜನರಲ್ಲಿ ಇತ್ತು. ಈ ಕಾರಣಕ್ಕಾಗಿ ಮಯೂರಶರ್ಮನ ಅನಂತರ ಅವನ ವಂಶಜರಾದ ದೊರೆಗಳೂ ಶರ್ಮ ಅನ್ನುವುದನ್ನು ಬಿಟ್ಟರು. ಹಾಗೂ ಕ್ಷತ್ರೀಯರಿಗೆ ತಕ್ಕುದಾದ “ವರ್ಮ” ಎಂಬ ಶಬ್ದವನ್ನು ತಮ್ಮಹೆಸರಿನೊಡನೆ ಸೇರಿಸಿಕೊಂಡರು.

ಕದಂಬ ದೊರೆಗಳು :

ಇಂದಿಗೆ ಸುಮಾರು ಸಾವಿರದ ಆರುನೂರ ವರ್ಷಗಳ ಹಿಂದೆ ಮಯೂರ ಶರ್ಮನು ಆಳಿದನು. ಈ ಕಾರಣದಿಂದಾಗಿ ಮಯೂರ ಶರ್ಮನ ವಿಷಯ ಹೆಚ್ಚು ತಿಳಿದು ಬಂದಿಲ್ಲ. ಇವನು ಕ್ರಿ.ಶ. ೩೨೫ ರಿಂದ ೩೫೪ರವರೆಗೆ ಸುಮಾರು ಇಪ್ಪತ್ತು ವರ್ಷ ಕಾಲ ರಾಜನಾಗಿ ಆಡಳಿತ ನಡೆಸಿದ.

ಇವನ ರಾಜ್ಯವು ಬಹು ವಿಶಾಲವಾಗಿತ್ತು. ದಕ್ಷಿಣದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಕಾಂಚೀಫುರದವರೆಗೂ ಹಬ್ಬಿತು. ಉತ್ತರದಲ್ಲಿ ಮಾಳವದಿಂದ ಗಯಾ ಕ್ಷೇತ್ರದವರೆಗೂ ಇತ್ತು. ಮಯೂರಶರ್ಮನು ಒಂದು ಅಶ್ವಮೇಧಯಾಗವನ್ನು ಕೂಡ ಮಾಢಿದನಂತೆ.

ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿ ಎಂಬಲ್ಲಿ ಒಂದು ದೊಡ್ಡ ಕೆರಯಿದೆ. ಈ ಕೆರೆಯನ್ನು ಮಯೂರ ಶರ್ಮನು ಕಟ್ಟಿಸಿದನೆಂಬುದಾಗಿ ಅಲ್ಲಿಯೆ ಇರುವ ಒಂದು ಶಿಲಾ ಶಾಸನವು ಹೇಳುತ್ತದೆ.  ಅವನು ಉತ್ತರ ಹಾಗೂ ದಕ್ಷಿಣ ಭಾರತಳಿಗೆ ದಂಡೆತ್ತಿ ಹೋಗಿದ್ದನಂತೆ.

ದಕ್ಷಿಣ ಭಾರತದಲ್ಲಿ ಆಗ ಬಹಳ ರಾಜಮನೆತನಗಳಿದ್ದವು. ಸಣ್ಣ ಸಣ್ಣ ರಾಜ್ಯಗಳನ್ನು ಕಟ್ಟಿಕೊಂಡು ಇವರೆಲ್ಲರೂ ರಾಜ್ಯವಾಳುತ್ತಿದ್ದರು.

ಪುನ್ನಾಟ ಅನ್ನುವುದು ಮೈಸೂರಿನ ದಕ್ಷಿಣಕ್ಕಿದ್ದ ಒಂದು ಪ್ರಾಚೀನ ರಾಜ್ಯ. ಈ ರಾಜ್ಯವನ್ನು ದೊರೆ ಮಯೂರ ಶರ್ಮನು ತನ್ನ ಕಾಲದಲ್ಲಿ ಸೋಲಿಸಿದನು.

ಹೀಗೆಯೇ ತ್ರೈಕೂಟರೆಂಬುವವರು, ಅಭಿರರು, ಸೇಂದ್ರಕರು ಮೊದಲಾದವರನ್ನು ಜಯಿಸಿದರು. ಇವನು ಉತ್ತರ ಭಾರತದ ಶಕಸ್ಥಾನ, ಪಾರಿಯಾತರೆ, ಮುಖಾರಿ ಮುಂತಾದ ಪ್ರದೇಶಗಳಿಗೆ ಸೇನೆಯೊಡನೆ ಹೋಗಿ ಯುದ್ಧ ಮಾಡಿ ಗೆದ್ದು ಬಂದು ಎಂದೂ ಹೇಳುತ್ತಾರೆ. ಈ ವಿಷಯ ಖಚಿತವಾಗಿ ತಿಳಿದಿಲ್ಲ.

ದೊರೆಯಾದ ಮಯೂರಶರ್ಮ ತಾನೂ ಕಲಿತ ಶಾಲೆಯನ್ನು ಮರೆಯಲಿಲ್ಲ. ತಾಣಗುಂದೂರನ್ನು ದೊರೆಯುವ ಅಭಿವೃದ್ಧಿಪಡಿಸಿದನು.  ಈ ಅಗ್ರಹಾರದ ಬ್ರಾಹ್ಮಣರು ವೇದ, ವೇದಾಂಗ, ಮೀಮಾಂಸೆ, ತರ್ಕ ,ಸ್ಮೃತಿ, ಪುರಾಣಗಳನ್ನು ಅಧ್ಯಯನ ಮಾಡಲು ಸಾಧ್ಯವಾಗುವಂತೆ ಅವರಿಗೆ ಸಹಾಯ ಮಾಡಿದ.

ಇವನ ನಂತರ ಇವನ ಮಗನು ಪಟ್ಟಕ್ಕೆ ಬಂದನು. ಅವನ ಹೆಸರು ಕೊಂಗುಣಿ ವರ್ಮ. ಮಯೂರ ಶರ್ಮನ ಕುಲದವರು ಬನವಾಸಿ ನಾಡನ್ನು ಸುಮಾರು ಮುನ್ನೂರು ವರ್ಷಗಳವರೆಗೆ ಆಳೀದರು.

ಕದಂಬರು ವೀರರಾಗಿ ಮೆರೆದರು. ಆದರೆ ಶಕ್ತಿಯಿಂದ, ಅಧಿಕಾರದಿಂದ ಮದಿಸಲಿಲ್ಲ. ಅಧಿಕಾರದಿಂದ ಉನ್ಮತ್ತರಾಗಿದ್ದ ಪಲ್ಲವ ರಾಜನಿಗೆ ಬುದ್ಧಿ ಕಲಿಸಿದ. ಇವರು ಹಲವು ಜನೋಪಯೋಗಿ ಕಾರ್ಯಗಳನ್ನು ಮಾಡಿದರು. ಮೊಟ್ಟ ಮೊದಲನೆಯದಾಗಿ ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದವರು ಕದಂಬರೇ.

ಇವರು ಜಾರಿಗೆ ತಂದ ಚಿನ್ನದ ನಾಣ್ಯಕ್ಕೆ ಪದ್ಮಟಂಕ ಎಂಬುವುದಾಗಿ ಕರೆಯುತ್ತಿದ್ದರು.

ಕದಂಬರು ವೇದ ಶಾಸ್ತ್ರಗಳನ್ನು ಅರಿತವರಾಗಿದ್ದರು. ಶಾಸ್ತ್ರದ ಮೇಲೆ ಇವರಿಗೆ ಹೆಚ್ಚಿನ ಗೌರವವಿತ್ತು. ಮಯೂರ ಶರ್ಮನಿಂದ ಹಿಡಿದು ಎಲ್ಲ ದೊರೆಗಳೂ ವೇದ ಸಂಪ್ರದಾಯ ಗಳಿಗೆ ತಕ್ಕ ಹಾಗೆಯೇ ರಾಜ್ಯಭಾರವನ್ನು ನಡೆಸಿಕೊಂಡು ಹೋದರು. ದೊರೆಗಳು ವೇದ ಪಠನದಲ್ಲಿ, ವ್ಯಾಖ್ಯಾನಗಳಲ್ಲಿ ನಿಪುಣರಾಗಿದ್ದರೆಂದು ಒಂದು ಬಿರುದು ಹೇಳುತ್ತದೆ.

ಈ ರಾಜರ ದೃಷ್ಟಿ ಬಹು ವಿಶಾಲವಾದದ್ದು,ತಮ್ಮ ರಾಜ್ಯದಲ್ಲಿ ಬೌದ್ಧ, ಜೈನ, ಶೈವ, ವೈಷ್ಣವ ಧರ್ಮಗಳೀಗೆ ಆಶ್ರಯ ವನ್ನು ನೀಡಿದ್ದರು. ಹಾನಗಲ್ಲು,. ಪುಲಿಗೆರೆ ಮುಂತಾದ ಸ್ಥಳಗಳಲ್ಲಿರುವ ಜೈನ ದೇವಾಲಯಗಳೀಗೆ ಕದಂಬ  ದೊರೆಗಳು ಅನೇಕ ದಾನಗಳನ್ನು ಕೊಟ್ಟರು. ಜೈನ ಪಂಡಿತರು ಕೂಡ ಕದಂಬ ದೊರೆಗಳಿಂದ ಬಹುಮಾನಿತರಾಗಿದ್ದರು.

ಚೀನಾದೇಶದ ಪ್ರವಾಸಿಯಾದ ಹ್ಯುಯೆನ್ ತ್ಸಾಂಗನು ಏಳಣೆಯ ಶತಮಾನದಲ್ಲಿ ಬನವಾಸಿಗೆ ಭೇಟಿ ಕೊಟ್ಟಿದ್ದನು. ಆಗ ಅಲ್ಲಿ ಬೌದ್ಧ ಸಂಘಗಳಿದ್ದುದ್ದನ್ನು ಬೌದ್ಧ ಬಿಕ್ಷಗಳು ಇದ್ದುದದನ್ನು ಅವನು ವರ್ಣಿಸಿದ್ದಾನೆ.

ಪಲ್ಲವ ಪ್ರತಿನಿಧಿ ಮಯೂರ ಶರ್ಮನನ್ನುಕಿರಿಟದಿಂದ ಅಲಂಕರಿಸಿದ.

ತಾಣಗುಂದೂರು :

ಮಯೂರ ಶರ್ಮನ ಮನೆ, ಅವನ ವಿಧ್ಯಾಭ್ಯಾಸ ಮಾಡಿದ ಪಾಠಶಾಲೆ ಇದ್ದ ತಾಣಗುಂದೂರು ಇಂದು ತಾಳಗುಂದವಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿರುವ ತಾಳಗುಂದದವನ್ನು ಶಾಸನಗಳಲ್ಲಿ ಸ್ಥಾನಕುಂದೂರು ಎಂಬುವುದಾಗಿ ಕರೆದಿದ್ಧಾರೆ. ಈ ಹಳ್ಳಿಯಲ್ಲಿ ಹಳೆಯದಾದ ಪ್ರಣವೇಶ್ವರ ದೇವಾಲಯವಿದೆ. “ಪ್ರಣವನ ಕೆರೆ ” ಎಂಬ ಕೆರೆ ಇದೆ. ಇದನ್ನು ಕದಂಬ ಕುಲದ ಐದನೆಯ ದೊರೆಯಾದ ಕಾಕುತ್ಸವರ್ಮನು ಕಟ್ಟಿಸಿದ.

ಪ್ರಣವೇಶ್ವರ ದೇವಾಲಯದ ಹತ್ತಿರವೇ ಒಂದು ಶಿಲಾಕಂಬವಿದೆ. ಈ ಕಂಬದ ಮೇಲೆ ತಾಳಗುಂದ ಶಾಸನ ಎಂಬುವುದಾಗಿ ಕರೆಯಲಾಗುವ ಶಾಸನವಿದೆ. ಈ ಶಾಸನ ಕಂಬವನ್ನು ಕೆತ್ತಿಸಿ ನಿಲ್ಲಿಸಿದನು. ಕುಬ್ಜನೆಂಬ ಕವಿಯು ಸಂಸ್ಕೃತ ಕವನವನ್ನು ಕಲ್ಲಿನ ಮೇಲೆ ಬರೆದನು.

ಈ ಶಾಸನವು ಶಿವಸ್ತುತಿತಯೊಡನೆ ಪ್ರಾರಂಭವಾಗುತ್ತದೆ.  ಕದಂಬರ ಕುಲಗೋತ್ರಗಳನ್ನು ಹೇಳುತ್ತದೆ. ಅವರಿಗೆ ಕದಂಬರು ಎಂಬ ಹೆಸರು ಬರಲು ಏನು ಕಾರಣ ಎನ್ನವುದನ್ನು ತಿಳಿಸುತ್ತದೆ. ಅನಂತರ ಮಯೂರ ಶರ್ಮನ ಕಥೆ ಬರುತ್ತದೆ,. ಅವನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಾಂಚಿಪೂರಕ್ಕೆ ಹೋದುದು, ಅಲ್ಲಿ ಪಲ್ಲವ ದೊರೆಯೊಡನೆ ವಾದವಿವಾದ ನಡೆದುದು, ಮಯೂರನು ಸೈನ್ಯ ಕಟ್ಟಿದ್ದು, ಪಲ್ಲವರನ್ನು ಸೋಲಿಸಿದ್ದು, ಎಲ್ಲವನ್ನೂ ಕವಿ ಹೇಳಿದ್ದಾನೆ.

ಮಯೂರಶರ್ಮನ ಅನಂತರದ ದೊರೆಗಳ ವಿಷಯವೂ ಬರುತ್ತದೆ. ಈ ಶಾಸನದಲ್ಲಿ, ಈ ದೊರೆಗಳನ್ನು ಕವಿಯು ದಾನಶೂರರೆಂದು, ಪರಾಕ್ರಮಿಗಳೆಂದು ನಿಪುಣಿಯರೆಂದು ಹೊಗಳಿದ್ದಾರೆ.  ಅವರು ಸಾಧಿಸಿದ ಕಾರ್ಯ ಗಳನ್ನು ವರ್ಣಿಸುದ್ದಾನೆ. ಕದಂಬ ಮಯೂರಶರ್ಮನ ವಿಷಯವಾಗಿ ಇಲ್ಲವೆ,  ಇತರೆ ಕದಂಬ ದೊರೆಗಳ ವಿಷಯವಾಗಿ ತಿಳೀಯಬೇಕೆನ್ನುವವರು ಈ ತಾಳಗುಂದದ ಶಾಸನದಲ್ಲಿ ಅಗತ್ಯವಾಗಿ ನೋಡಬೇಕು.

ತಾಳಗುಂದದಲ್ಲಿ ಮತ್ತೂನ ಒಂದೆರಡು ದೇವಾಲಯಗಳಿವೆ. ಇಂದಿಗೂ ಈ ಊರು ನೋಡಬೇಕಾದ ಸ್ಥಳ.

ಕದಂಬರ ರಾಜಧಾನಿಯಾಗಿದ್ದ ಬನವಾಸಿಯು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಅಶೋಕ ಚಕ್ರವರ್ತಿಯು ಬೌದ್ಧ ಸನ್ಯಾಸಿಗಳನ್ನು ವನವಾಸಕ್ಕೆಂದು ಈ ಪ್ರದೇಶಕ್ಕೆ ಕಳುಹಿಸಿದ್ದನಂತೆ. ಈ ಕಾರಣದಿಂದಾಗಿಯೇ ಈ ಪ್ರದೇಶಕ್ಕೆ ಬನವಾಸಿ ನಾಡು ಎಂಬ ಹೆಸರು ಬಂತು ಎಂದು ಹೇಳುತ್ತಾರೆ. ಬನವಾಸಿಗಳಿಗೆ ಕೊಂಕಣಪುರ, ಎಂಬ ಹೆಸರೂ ಸಹ ಇತ್ತು. ಕದಂಬರು ಇದನ್ನು ಜಯಂತಿಪುರ, ವೈಜಯಂತಿಪುರ ಎಂದೂ ಕರೆಯುತ್ತಿದ್ದರು.

ಹ್ಯೂ ಯೆನ್-ತ್ಸಾಂಗನುಬನವಾಸಿಯಲ್ಲಿ ಅರಮನೆ ದೇವಾಲಯ ಬೌದ್ಧ ಮಠಗಳಿದ್ದ ವಿಷಯವನ್ನು ಹೇಳಿದ್ದಾರೆ. ಇಂದು ಬನವಾಸಿ ಒಂದು ಹಳ್ಳಿ ಅಷ್ಟೇ. ಇಲ್ಲಿ ಸುಂದರವಾದ ಮಧುಕೇಶ್ವರ ದೇವಾಲಯವಿದೆ. ಈದೇವಾಲಯದಲ್ಲಿ ಜೇನುತಪ್ಪದ ಬಣ್ಣದ ಶಿವಲಿಂಗವಿದೆ. ದೇವಾಲಯದ ಸುತ್ತಲೂ ಬೇರೆ ಬೇರೆ ದೇವತೆಗಳ ಶಿಲಾಮೂರ್ತಿಗಳಿವೆ. ಬನವಾಸಿಯಲ್ಲಿರುವ ಕಲ್ಲು ಮಂಚ  ಹಾಗೂ ಕಲ್ಲಿನ ಮಂಟಪಗಳು ಅದ್ಭುತವಾಗಿವೆ.

ಬನವಾಸಿ ಪ್ರಕೃತಿ ಸೌಂಧರ್ಯದ ತೌರು ಮನೆ, ಕನ್ನಡದ ಮಹಾಕವಿ ಪಂಪನು ಬನವಾಸಿ ದೇಶದ ಸೌಂಧರ್ಯವನ್ನು ತನ್ನ ಕಾವ್ಯದಲ್ಲಿ ವರ್ಣಿನಿಸಿದ್ದಾನೆ. ಆನೆಗೆ ಅಂಕುಷದಿಂದ ತಿವಿದ ಹಾಗೆಯೇ ತನ್ನನ್ನು ಯಾರೂ ಬೇಕಾದರೂ ಅಂಕುಷದಿಂದ ತಿವಿಯಲಿ. “ನಾನು ಮಾತ್ರ ಬನವಾಸಿ ದೇಶವನ್ನು ನೆನೆಯುತ್ತೇನೆ” ಎಂದು ಹೇಳುತ್ತಾನೆ. ಪಂಪ, ದುಂಬಿಯಾಗಿ, ಕೋಗಿಲೆಯಾಗಿ ಮತ್ತೇ ಮತ್ತೇ ಬನವಾಸಿ ದೇಶದಲ್ಲಿ ಹುಟ್ಟಬೇಕು ಎನ್ನುವ ಅಪೇಕ್ಷೆ ಅವನದು.

ಇತರರಿಗೆ ಎಚ್ಚರಿಕೆ- ತಾನೇ ಮೇಲ್ಪಂಕ್ತಿ:

ತಾಳಗುಂದದ ಬ್ರಾಹ್ಮಣ ತರುಣ ಯಾವುದೋ ಒಂದು ಅವಮಾನಕ್ಕೆ ಗುರಿಯಾಗಿ ಪಲ್ಲವ ದೊರೆಯನ್ನೇ ಎದುರಿಸಿದ. ಮಹಾರಾಜ್ಯದ ದೊರೆಯಾದ.ತನ್ನ ನಾಡನ್ನು ಸ್ವತಂತ್ಯ್ರ ಗೊಳಿಸಿದ. ಸಾವಿರದ ಆರುನೂರ ವರ್ಷಗಳ ಹಿಂದೆ ನಡೆದ ಸಂಗತಿ ಇದು. ಶಕ್ತಿಯನ್ನು. ಅಧಿಕಾರವನ್ನು ತನ್ನ ಪ್ರತಿಷ್ಠೆಗೆ ಅನ್ಯಾಯ ಮಾಡುವುದಕ್ಕೆ ಉಪಯೋಗಿಸಬಾರದು ಎಂಬುವುದನ್ನು ಪಲ್ಲವ ರಾಜನಿಗೆ ಶಿಕ್ಷೆಮಾಡಿ ಕಲಿಸಿ, ಅವನ್ನು ಇತರರ ಹಿತಕ್ಕೆ ಉಪಯೋಗಿಸಬೇಕು ಎಂಬುವುದನ್ನು ತಾನೂ ರಾಜನಾದಾಗ ತೋರಿಸಿದ ವೀರ ತರುಣನ ಚರಿತ್ರೆಯನ್ನು ತಾಳಗುಂದ, ಬನವಾಸಿಗಳು ಇಂದಿಗೂ ಹೇಳುತ್ತ  ನಿಂತಿವೆ.