ಅರಳು, ಕುಸುಮವೆ, ಅರಳು:
ಅರಳುವುದೆ ಧರ್ಮ.
ದೇಹದಲಿ ಬಲವಿರಲಿ;
ಎದೆಯಲ್ಲಿ ಒಲವಿರಲಿ.
ಗೆಲುವಿರಲಿ ಬಗೆಯಲ್ಲಿ;
ಚೆಲುವಿರಲಿ ಮೊಗದಲ್ಲಿ.
ಶಿವನೆ ಗುರಿಯಾಗಿರಲಿ:
ನನ್ನಿ ಸೊಬಗಾಗಿರಲಿ.
ಅರಳು, ಕುಸುಮವೆ, ಅರಳು:
ಅರಳುವುದೆ ಮರ್ಮ!

೯.೧೧.೧೯೩೨