ಈ ಶಾದ್ವಲ ….!
ಇದೇನು ಬರಿಯ ಹಸುರು ಹತ್ತಿದೆ ನೆಲ?
ನಂದನದ ಚೂರೊಂದು ನಮ್ಮಿಳೆಗೆ ಬಿದ್ದುದಲಾ!
ವರವೊ? ಶಾಪವೊ?
ಉರ್ವಶಿಯೆ ಹಸುರಾಗಿ ಇಳಿಯುತಿಲ್ಲಿ
ನಮ್ಮ ಮನೆ ‘ಉದಯರವಿ’ಯುದ್ಯಾನದಲ್ಲಿ
ತಾನಾದಳೈಸೆ ಉರ್ವರಾ — ಶಾದ್ವಲಾ!
ಭಾವಗೀತೆಯ ಪ್ರಾಣಕೇಂದ್ರದಲಿ ಕುಳಿತು, ಕವಿ
ತನ್ನ ಸೃಷ್ಟಿಗೆ ತಾನೆ ಮಾರುಹೋಗುವವೋಲೆ
ಮನೆಯ ಉದ್ಯಾನದೀ ಶಿಲೆಯ ಪೀಠದ ಮೇಲೆ
ದೇವನಾಗುತ್ತಿಹೆನು, ಮೆಯ್ಯೆಲ್ಲ ಮಿಂಚಿ! ರವಿ
ಪಚ್ಚೆಯೀ ಶಾದ್ವಲದಿ ಮೃಣಾಳಮರಕತಚ್ಛವಿ! ….
ಅಗ್ನಿಗಂಗೆಯ ಧರಿಸೆ ಧೂರ್ಜಟಿಯೆ ವ್ಯೋಪಕೇಶ,
ಉಸಿರೆಳದೆ ಹಸುರ ಮೇದದು ಕವಿಪ್ರಾಣಕೋಶ!
೨೬. ೦೧. ೧೯೬೧
Leave A Comment