ಪುಷ್ಯಮಾಸದೊಂದು ಪ್ರಥಮ ಪ್ರಾತಃಕಾಲ;
ಮೋಡವಿಲ್ಲ, ಎಲ್ಲಿ ನೋಡಲಲ್ಲಿ ನೀಲ:
ಶುದ್ಧ ನವಮಿಯಾಕಾಶದ ಶುಭ್ರಶೀಲ!

ತೆಂಗುಮರದ ಹಿಂಗಾರದ ಹೂಗಳಲ್ಲಿ
ಹಾಡುತಿತ್ತು ಹಕ್ಕಿ ‘ಟುವ್ವಿ’ರಾಗದಲ್ಲಿ,
ಹುಳುಹಪ್ಪಟೆ ಹಿಡಿದು ತಿನುವ ಭೋಗದಲ್ಲಿ!

ಉಲಿವ ಹಕ್ಕಿ ಕೊಲುತಲಿಹುದೆ? ಅಮೃತಮಾಯೆ:
ಓರೆ ಬಿಸಿಲಿಗುದಿಸಿದೆನ್ನ ದೀರ್ಘಛಾಯೆ
ತಾರಸಿಯಿಂದುರುಳ್ದರೇನ್? — ನೋಯೆ, ಸಾಯೆ!

೨೪. ೧೨. ೧೯೪೧