ಸಿಡಿದೊಡೆವುವು ಹೊಂಗನಸುಗಳೆನಿತೋ:
ಅವರೊಳು ನೀನೊಂದು!
ಬಿರಿವುವು ನಚ್ಚಿನ ನೆಚ್ಚುಗಳೆನಿತೋ:
ಅವರೊಳು ನೀನೊಂದು!
ಇದೆಕೋ ಕಂಬನಿತರ್ಪಣವೀಯುವೆ
ಕುದಿಕುದಿದೆದೆ ನೊಂದು;
ಚಿರವೆಂದಿರ್ದಾ ಪ್ರೇಮದ ಮೋಹಕೆ
ಋಣ ತೀರಲಿ ಇಂದು!

೨೧.೧.೧೯೩೭