ಪೃಥ್ವಿಯ ಮುಖ ಸ್ವರ್ಗದ ಮುಖವಾಯ್ತು;
ಜ್ಯೋತಿಸ್ಸುಂದರ ಸುಖವಾಯ್ತು;
ಸಾಮಾನ್ಯತೆ ಸುರವೈಭವವಾಯ್ತು;
ರಜನಿಯೆ ಜ್ಯೋತ್ಸ್ನಾ ದಿವವಾಯ್ತು;
ರಸನಿಧಿ ಜಗದೀಶನ ದಯವಾಯ್ತು.
ಸಮಸ್ತ ಸೃಷ್ಟಿಗೆ ಜಯವಾಯ್ತು:
ಚಂದ್ರೋದಯವಾಯ್ತು!

೧೮. ೦೯. ೧೯೪೦