ರೈತನಾ ಕಣ್ಣಿನಲಿ
ಹೊನ್ನಾದಿ ಮಣ್ಣಿನಲಿ
ಹಣ್ಣಾದ ಗದ್ದೆಯಲ್ಲಿ,
ಧಾನ್ಯದ ಮನೆಯಲ್ಲಿ
ಪೈರಿನ ಕೊನೆಯಲ್ಲಿ
ಬತ್ತದ ತೆನೆಯಲ್ಲಿ,
ಹಳದಿ ಕಾಳನು ಹಕ್ಕಿ
ಕುಳಿತು ಜೋಲುವ ಹಕ್ಕಿ
ನಿನ್ನ ಸಗ್ಗಕೆ ಸಿಕ್ಕಿ
ಹೃದಯದಮೃತವನುಕ್ಕಿ
ಕೃತಕೃತ್ಯನಾದೆ;
ಹೊಂದೆನೆಯ ಉಯ್ಯಲೆಯ
ತುದಿಯಿಂದೆ ನಿನ್ನಿಂದೆ
ಚಿತ್ತಕವತರಿಸಿದೀ
ಸೌಂದರ್ಯಬೋಧೆ
ಶಿವಸತ್ಯವಾಗಿ ನಾ
ಭಗವಂತನಾದೆ!

೨೨. ೦೨. ೧೯೫೧