ಕರುಣಾ ಕೃಪಾಸಾಗರ, ಹೇ ಗುರುದೇವ,
ಬಾಳಿಸಿ ನಮ್ಮಿಬ್ಬರನೂ ನೀ ಬಲ್ಲಂದದಲಿ
ಕರೆದುಕೊ ನಿನ್ನಲರಡಿಗೆ:

ಒಲವಿನ ವರವನು ನೀಡೆಮಗೆ;
ಅಗಲಿಕೆ ಎಂದೂ ಬೇಡೆಮಗೆ;
ಕಷ್ಟವೊ, ನಷ್ಟವೊ, ಬಡವೊ, ಸಿರಿಯೊ,
ಗಂಜಿಯೊ ನೀರೋ ಸಾಕೆಮಗೆ;
ಪ್ರೇಮ ಕೃಪಾಬಲ ಬೇಕೆಮಗೆ!

೭.೩.೧೯೩೮