ಯಾವ ಕಾವ್ಯಕೇನು ಕಡಿಮೆ
ರೈತನ ಈ ಹಸುರು ದುಡಿಮೆ,
ಶಿಶುಪೈರಿನ ಪಚ್ಚೆಪಡಿಮೆ?

ನೋಡಿ ನೋಡಿ ನೋಡಿ ತಣಿದೆ;
ಮತ್ತೆ ಮತ್ತೆ ಸವಿದು ಮಣಿದೆ;
ಹೃದಯದಲ್ಲೆ ಹಿಗ್ಗಿ ಕುಣಿದೆ!

ಕವನ ಬರೆಯುವುದೇ ತಪ್ಪು,
ಬರಿದೆ ಇದನು ಓದುವವನೊ?
ಇನ್ನೂ ಬೆಪ್ಪು:
ಬಾ, ಕಾಣ್, ಒಲಿ, ಅಪ್ಪು!

೦೩. ೦೫. ೧೯೬೦