ಸಾಲ್‌ಮರದ ನಿಡುನೆಳಲುಗಳ್ ಮಾಗಿಯೆಳವಿಸಿಲಲ್ಲಿ
ಮಲಗಿಹವು ರಸ್ತೆಯಲಿ ಮತ್ತೆ ಮೈದಾನದಲ್ಲಿ.
ಬೆಳಕ ತಡೆಯುವುದೊಂದೆ ನೆಳಲಿಗರ್ಥ
ಎಂಬ ಭೌತಜ್ಞಾನವಿಲ್ಲಿ ವೈರ್ಥ:
ಕಾಣಲ್ಲಿ
ಜಟಿಲ ಛಾಯ ಕೃತಿಗಳಲ್ಲಿ
ಮರೆಹೊಂಚಿದೊಂದು
ಬುದ್ಧಿಗೆ ಅತೀತವಹ ನಿದ್ವಂದ್ವ ಚಿಂತೆ
‘ಸೆರೆಯನೊಡೆ’ ಎಂದು
ಸನ್ನೆಗೈಯುತಿದೆ ಸ್ವಪ್ನಸಂಕೇತಲಿಪಿಯಂತೆ!

೦೪. ೦೧. ೧೯೪೨