ಮುರಿಯಯ್ಯ ಮುಳ್ಳುಗಳನಲರನುಳಿಸಿ;
ಪ್ರೇಮವನ್ನುಳುಹಯ್ಯ ಕಾಮವನ್ನಳಿಸಿ.
ಸಂಧ್ಯೆಯಾ ಗಗನವೂ ಸುಂದರಿಯ ವದನವೂ
ಒಂದೆ ತೆರದಲಿ ಮನವ ಮೋಹಿಪಂತೆ,
ಸೌಂದರ್ಯ ಸಾನ್ನಿಧ್ಯಕೆದೆಯರಳಿ ನಲಿದರೂ
ಆತ್ಮ ನೈರ್ಮಲ್ಯ ತಾನುಳಿಯುವಂತೆ.
ಮುರಿಯಯ್ಯ ಮುಳ್ಳುಗಳನಲರನುಳಿಸಿ;
ಪ್ರೇಮವನ್ನುಳುಹಯ್ಯ ಕಾಮವನ್ನಳಿಸಿ!

೧೫.೧.೧೯೩೩