ಕೃಷ್ಣಪಕ್ಷ ತ್ರಯೋದಶಿ;
ವ್ಯೋಮಕೇಶ ಧನುಶ್ಯಶಿ;
ಮಾರ್ಗಶೀರ್ಷ ಇಂದ್ರದಿಶಾ
ಅರುಣಿಮ ಉರ್ವಶೀ ಉಷಾ!
ಗಿರಿಯ ಕೆರೆಯ ದೀಪಮಾಲೆ;
ವೃಕ್ಷವೃಂದ ಚಿತ್ರಶಾಲೆ.

ಮಾನಸಗಂಗೋತ್ರಿಯಲ್ಲಿ
ಸೌಂದರ್ಯ ಸಮಾಧಿಯಲ್ಲಿ
ಚಿದ್ಘನಾಗ್ನಿ ದೀಪ್ತನಾಗಿ
ಚೇತನಗಾಯತ್ರಿ ಯೋಗಿ
ಕವಿ ನಿಂತನು ಭೂರ್ವಶಿ:
ಕವಿ ನಿಂತನು ಭುವರ್ವಶಿ:
ಕವಿ ನಿಂತನು ಸುವರ್ವಶಿ!

೦೮. ೦೧. ೧೯೬೭