ಕೆನ್ನೆಯ ಮೇಲಣ ಮುತ್ತಿನ ಮುದ್ರೆಯು
ನೀನಿತ್ತುದು ಎಂದೊರಸುವುದಿಲ್ಲ:
ದಿನದಿನವೂ ಅದ ನೆನೆಯುತ ನಲಿಯುವೆ,
ನಾನೆಂದೂ ಆದ ಮರೆಯುವುದಿಲ್ಲ.

ಚಿರನವ ಪ್ರೇಮದ ಶಾಶ್ವತ ಚಿಹ್ನೆಯು
ನಮೊಲಿದೆದೆಗಳಿಗದೆ ಸಾಕ್ಷಿ:
ಮುತ್ತನು ಹೊತ್ತಿರುವೆನ್ನೀ ಕೆನ್ನೆಯು
ಮುಕ್ತಿಗೆ ಮುರ್ಮಡಿ, ಕಮಲಾಕ್ಷಿ!

೨೩.೧೨.೧೯೩೨