ಕೈಹಿಡಿದ ಕಡುಜಾಣೆ ತವರಿಂದ ಬಂದಿಲ್ಲ;
ಮಕ್ಕಳೂ ತಾಯೊಡನೆ ಇರುವರಲ್ಲಿ,
ಹೆತ್ತವರೊ ಒಡಹಟ್ಟಿದವರೊ ನನಗಾರಿಲ್ಲ:
ಮನೆ ಮಸಣ, ನಾನೊಬ್ಬ ದೆವ್ವವಿಲ್ಲ!
ಬೇಸರವದುವೆ ಸರಸ; ಆಕಳಿಕೆ ಒಡನಾಡಿ;
ಜಿರ್ರೆಂದು ಕರೆಕರೆಯ ಸುರಿವ ಜಡಿಯುನೆ ನೋಡಿ,
ಈ ಶಿಕ್ಷೆ ಸಾಕೆಂದು ಗುರುದೇವನನು ಬೇಡಿ
ಸತ್ತು ಹುಟ್ಟುವ ನನಗೆ ಮರುಗುವರ ಕಾಣೆ:
ಬಿಮ್ಮೆಂದು ಮೂದಲಿಸುತಿದೆ ಸಜ್ಜೆಕೋಣೆ!

೧೦. ೦೬. ೧೯೪೧