ರವ ವಿಹೀನ ಗಿರಿಯ ಮೇಲೆ
ಪುಷ್ಪಲತೆಯಲಿ
ಇಹುದು ನಿನ್ನ ಪರ್ಣಶಾಲೆ
ನಿರ್ಜನತೆಯಲಿ.
ಮನೆಯ ಹೊರಗೆ ಮಾಮರದಲಿ
ಕೋಗಿಲೆಯುಲಿ ನಣ್ಚರದಲಿ
ಮೌನಮೂರ್ತಿ ಕಾನನವನೆ
ಮಥಿಸುತಿರುವುದು:
ಲಕ್ಷ ಲಕ್ಷ ಕವನಗಳನೆ
ಗ್ರಥಿಸುತಿರುವುದು!

೧೬.೧೨.೧೯೩೧