ಬಾ, ಎನ್ನ ಕರೆದೊಯ್ಯು ಕಠಿನವಾಸ್ತವದಿಂದೆ,
ಸಂಗೀತ ಸುಂದರಿಯೆ, ಸವಿಗನಸಿದೆಗೆ!
ಬುವಿಯ ಕೋಟಿಲೆಯಿಂದೆ ಚಿಂತೆ ಭೀತಿಗಳಿಂದೆ
ಎಳೆದೊಯ್ಯುತಾತ್ಮವನು ಮುಳುಗಿಸೈ ಸುಧೆಗೆ!
ನಿನ್ನೊಂದು ಚುಂಬನದಿ ಮೈಮರೆಯುವುದು ನೋವು;
ನಂದನದಿ ಹಾಲಾಗಿ ಹರಿಯುವುದು ಬಾಳು!
ನಿನ್ನ ಆಲಿಂಗನದಿ ಸವಿಯಾಗುವುದು ಸಾವು:
ಮತ್ತೆ — ನಾನರಿಯೆ, ಏನಹುದೊ ನೀನೆಹೇಳು!
೧೭.೭.೧೯೩೫
Leave A Comment