ದೂರ ದೂರ ದೂರ
ಮನುಜರಿಂದ ದೂರ
ಕಾಡು ಮಲೆಯ ನೆತ್ತಿಗೇರ
ಬಾರ, ಮನವೆ, ಬಾರ!
ಕರುಬರಿರುವ ಊರ
ತೊರೆದು ದೂರ ದೂರ
ಕಾಡುಳ್ಳಿತು ಬಾರ,
ಓ ಮನವೆ, ಬಾರ!
ಉಲಿವ ಪಕ್ಷಿ ಸಂಗ;
ಝೇಂಕರಿಸುವ ಭೃಂಗ.
ಅಧಿಕಾರದ ಕಾಟ
ಸೋಂಕದಮೃತದೂಟ! …. ದೂರ ….
ಸೂರ್ಯೋದಯ ಸುಂದರ;
ಚಂದ್ರೋದಯ ಸುಂದರ;
ಮುಗಿಲಿಲ್ಲದ ಇರುಳ ಬಾನು
ಅರಿಲ ಮಂದಿರ! …. ದೂರ ….
ಹಸುರು, ಹಸುರು, ಸೊಂಪು;
ಹೆಸರಿಲ್ಲದ ತಂಪು;
ತನೆಗೆ ತಾನೆ ಇಂಪು;
ಇಲ್ಲ ಬೇರೆ ಪೆಂಪು;
ಅಲ್ಲಿ ಬರಿ ಕುಂವೆಂಪು! …. ದೂರ ….
೨೧. ೦೪. ೧೯೬೦
Leave A Comment