ಕದಿರು ಸ್ಪರ್ಧೆ: ಡಾ.ಕಂಬಾರರಿಂದ ಬಹುಮಾನ ವಿತರಣೆ

ಕದಿರು ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಲೇಖನ ಸ್ಪರ್ಧೆ ಬಹುಮಾನ ವಿತರಣೆ

‘ಕದಿರು’ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಲೇಖನಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಜನವರಿ ೩೦ರಂದು ಸೋಮವಾರ ಬೆಳಗ್ಗೆ ಗಂಟೆ ೧೦ಕ್ಕೆ ಕಣಜ ಕಚೇರಿ ಇರುವ ಬೆಂಗಳೂರು ಬನಶಂಕರಿ ೨ನೇ ಹಂತದಲ್ಲಿರುವ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಯುವ ಪ್ರತಿಭೆಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಆರ್‌.ನಿರಂಜನ ಆರಾಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ಆಯೋಗದ ಸದಸ್ಯರಾದ ಇಂಟರನ್ಯಾಶನಲ್‌ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೆಶನ್‌ ಟೆಕ್ನಾಲಾಜಿ, ಬೆಂಗಳೂರು (ಐಐಐಟಿ-ಬಿ) ನಿರ್ದೇಶಕ ಪ್ರೊ.ಎಸ್‌.ಸಡಗೋಪನ್‌, ಐಐಐಟಿ-ಬಿ ಬೋಧಕರಾದ ಪ್ರೊ.ಎಸ್‌.ರಾಜಗೋಪಾಲನ್‌, ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ವಸುಂಧರಾ ಭೂಪತಿ ಅವರು ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಲೇಖಕರಿಗೆ ತರಬೇತಿ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ. ಲೇಖರರಾದ ಟಿ.ಆರ್‌.ಅನಂತರಾಮ್‌ ಮತ್ತು ಪೂರ್ಣಪ್ರಜ್ಞ ಬೇಳೂರು ತರಬೇತಿ ನಡೆಸಿಕೊಡುವರು.

`ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶ ಕರ್ನಾಟಕ ಜ್ಞಾನ ಆಯೋಗದ ಮುತ್ವದ ಯೋಜನೆಯಾಗಿದ್ದು, ಇಂಟರನ್ಯಾಶನಲ್‌ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೆಶನ್‌ ಟೆಕ್ನೊಲಾಜಿ, ಬೆಂಗಳೂರು ಯೋಜನೆಯ ಅನುಷ್ಠಾನ ಮಾಡುತ್ತಿದೆ.

ಕಾಲೇಜು ವಿದ್ಯಾರ್ಥಿಗಳಿಗಳಲ್ಲಿ ಬರವಣಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಕಣಜ ಅಂತರಜಾಲ ಕನ್ನಡ ಜ್ಞಾನಕೋಶ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ರಾಜ್ಯದ ವಿವಿಧ ಜಿಲ್ಲೆಗಳಿಂದ ೭೫೦ಕ್ಕಿಂಲೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೂವತ್ತೈದು ಮಂದಿ ಬಹುಮಾನ ಗೆದ್ದುಕೊಂಡಿದ್ದು, ಅವರಿಗೆ ಒಟ್ಟು ೧.೧೫ ಲಕ್ಷ ರೂಪಾಯಿ ಮೌಲ್ಯದ ನಗದು ಬಹುಮಾನ, ಪ್ರಶಸ್ತಿಪತ್ರ, ೬೫೦ ರೂಪಾಯಿ ಮೌಲ್ಯದ ನವಕರ್ನಾಟಕ ವಿಜ್ಞಾನ – ತಂತ್ರಜ್ಞಾನ ಪದಸಂಪದ, ಅಡಕೆ ಕೃಷಿ ಪತ್ರಿಕೆಯ ಒಂದು ವರ್ಷದ ಚಂದಾ ನೀಡಲಾಗುವುದು.

(ಫಲಿತಾಂಶದ ವಿವರವನ್ನು PDF ಸ್ವರೂಪದಲ್ಲಿ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ)

ಬಹುಮಾನಗಳ ವಿವರ ಹೀಗಿದೆ:

ಕ್ರಮಾಂಕ ಹೆಸರು ಕಾಲೇಜು ಊರು ಲೇಖನದ ಶೀರ್ಷಿಕೆ
ಅತ್ಯುತ್ತಮ ಲೇಖನಗಳು (ತಲಾ ೫೦೦೦ ರೂ.ಗಳು)
 1 ರಮೇಶ್ ಎಚ್.ಕೆ. ಸಹ್ಯಾದ್ರಿ ಕಾಲೇಜು ಶಿವಮೊಗ್ಗ ಸಾಂಸ್ಕೃತಿಕ ಮೌಢ್ಯ
 2 ಬಸಮ್ಮ ಎಸ್. ತೆಗ್ಗಿ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ ಬಾಗಲಕೋಟ ಕೃಷಿಯಲ್ಲಿ ಹೊಸ ವಿಧಾನ
 3 ಕಲಾಶ್ರೀ ಗಂಗೊಳ್ಳಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಕಂಕನಾಡಿ, ಮಂಗಳೂರು. ಮಂಗಳೂರು ಕುಷ್ಠರೋಗ ಇದು ಶಾಪವಲ್ಲ
 4 ಕೆ. ಸಿ.ಶ್ರಾವ್ಯ ಎ.ಜಿ. ಇನ್ಸ್‌ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು. ಮಂಗಳೂರು ವಂಶವಾಹಿಗಳ ತಟಸ್ಥೀಕರಣ
 5 ಫಿರೋಜ್ ಆರ್. ಎ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂಡೂರು. ಸಂಡೂರು ನಮ್ಮ ಊರಿನ ವಿಶೇಷ ಸಂಗತಿ
 6 ಲಿಪಿ ಎ.ವಿ. ಕೆ.ವಿ.ಜಿ ಕಾನೂನು ವಿದ್ಯಾಲಯ, ಕುರುಂಜಿ ಬಾಗ್, ಸುಳ್ಯ. ಸುಳ್ಯ ಕೊಡಗಿನ ಜಾನಪದ ಆಚರಣೆ
 7 ಮಂಜುನಾಥ್ ಟಿ.ಸಿ. ಸಿ.ಐ.ಟಿ ಇಂಜಿನಿಯರಿಂಗ್ ಕಾಲೇಜು, ಗುಬ್ಬಿ ಗುಬ್ಬಿ ಇಂಧನವಾಗಿ ನೀರು
 8 ಆರ್. ಪರಮೇಶ್ವರ ಜೆ.ವಿ.ಐ.ಟಿ., ಬಿಡದಿ ಬಿಡದಿ ನಮ್ಮೂರಿನ ವಿಶೇಷ ಸಂಪ್ರದಾಯ
 9 ಆಕಾಶ್ ಎಸ್ ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆ. ಬೆಂಗಳೂರು ಪಶ್ಚಿಮ ಘಟ್ಟದ ತಪ್ಪಲಲ್ಲಿ
 10 ಎಸ್. ಗಿರೀಶ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ. ಬೆಂಗಳೂರು ಜಾತ್ರೆ, ಜಾನಪದ ಆಚರಣೆಗಳು, ಸಂಪ್ರದಾಯ.
ಉತ್ತಮ ಲೇಖನಗಳು (ತಲಾ ೩೦೦೦ ರೂ.ಗಳು)
 11 ಅನಂತಕೃಷ್ಣ ಪ್ರಭು ಹರ್ಮಾಡಿ ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ ಬೆಂಗಳೂರು ಪುತ್ತೂರ ಮುತ್ತುಕೃಷಿ
 12 ಸಹನಾ ಎಂ. ಶೆಟ್ಟರ ಅಕ್ಕಮಹಾದೇವಿ ಮಹಿಳೆಯರ ಕಲಾ ಮತ್ತು ವಿಜ್ಞಾನ ಕಾಲೇಜು, ಬಾಗಲಕೋಟ. ಬಾಗಲಕೋಟ ಹಿರಿಯರ ಪಾರಂಪರಿಕ ಅನುಭವಗಳು
 13 ಹರ್ಷ ಎಚ್. ವಿ. ಸಿ.ಐ.ಟಿ ಇಂಜಿನಿಯರಿಂಗ್ ಕಾಲೇಜು ಗುಬ್ಬಿ ಮಾಯಸಂದ್ರವೆಂಬ ಮಾಯಾಜಾಲ
 14 ಬಸಮ್ಮ ಆರ್. ಕೋರಿ ಬಿ.ಎ.೩ನೇ ಸೆಮಿಸ್ಟರ್
ಕೆ.ಎಲ್.ಇ. ಸಂಸ್ಥೆಯ
ಜಗದ್ಗುರು ತೋಂಟದಾರ್ಯ ಪದವಿ ಮಹಾವಿದ್ಯಾಲಯ ಗದಗ – ೫೮೨೧೦೧
ಗದಗ ಜಾತ್ಯತೀತ ನಿಲುವಿನ ಜಗದ್ಗುರು
 15 ಪ್ರತೀಕ್ ಕುಮಾರ್ ಕೋಟೆಗಾರ್ ಎಸ್‌ಬಿಎಂಜೆಸಿಇ ಜೈನ್ ಗ್ಲೋಬಲ್ ಕ್ಯಾಂಪಸ್  ಬೆಂಗಳೂರು ಗಂಡುಗಲೆ ಬೇಡರ ವೇಷ
 16 ಸೀಮಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಲಿಂಗಸ್ಗೂರು ಲಿಂಗಸ್ಗೂರು ಕಸಾಬಲಿಂಗಸೂರಿನ ಕುಪ್ಪಿ ಭೀಮನಜಾತ್ರೆ
 17 ಆನಂದ್ ಟಿ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಂಗಳೂರು ಪೌರಾಣಿಕ ನಾಟಕಗಳು
 18 ಸುನೀಲ್ ಕುಮಾರ್ ಟಿ ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ. ಶಿವಮೊಗ್ಗ ಹಮ್ಮುಬಿಮ್ಮುಗಳ ಮರಳುಗಾಡಿನಲ್ಲಿ
 19 ರಕ್ಷಿತ್ ಕೆ.ಎ. ಶ್ರೀ ದ.ಮ. ತಾಂತ್ರಿಕ ಮಹಾವಿದ್ಯಾಲಯ
ಉಜಿರೆ.
ಉಜಿರೆ ಮನಸ್ಸಿನಲ್ಲಿ ಮೂಡಿದ ವಿಷಯ
 20 ಪ್ರದಾಯಿನಿ ಎಸ್. ಆರ್. ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು. ತುಮಕೂರು ನಮ್ಮ ಊರಿನ ಅನರ್ಘ್ಯ ರತ್ನ
 21 ಸುಪ್ರಿಯ ಬೈಚಬಾಳ ಎ.ಆರ್.ಎಸ್.ಇನಾಮದಾರ್ ಮಹಿಳೆಯರ ಆರ್ಟ್ಸ್, ಸೈನ್ಸ್ & ಕಾಮರ್ಸ್ ಕಾಲೇಜು. ಬಿಜಾಪುರ ಮಸಬಿನಾಳ : ದೇಶಗತಿ ಇಲ್ಲದೇಶಾಭಿಮಾನವೇ ಎಲ್ಲ
 22 ಸೌಮ್ಯ ಜಿ. ಭಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಸಿ ಔಷಧಿ ಗಿಡಗಳ ಸಮೀಕ್ಷೆ
 23 ವಿನಯ ಭಟ್ ಸೇಂಟ್ ಆಗ್ನೆಸ್ ಕಾಲೇಜು, ಮಂಗಳೂರು ಮಂಗಳೂರು ಅನುದಿನ ಇಂಧನ ಉಳಿತಾಯ
 24 ದಾಕ್ಷಾಯಿಣಿ ಲಿಂಗನಗೌಡರ್ ಶ್ರೀ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗೊಳಸಂಗಿ ಗೊಳಸಂಗಿ ಗೋಸಾವಿ ಮಹಿಳೆಯರ ಸಾಂಸ್ಕೃತಿಕ ಪರಂಪರೆ
ಗುಣಾತ್ಮಕ ಲೇಖನಗಳು (ತಲಾ ೨೦೦೦ ರೂ.ಗಳು)
 25 ಚೇತನ ಕುಮಾರ್ ಸೊಲಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಳವಂಡಿ ಮುಂಡರಗಿ ಡಂಬಳದಲ್ಲೊಂದು ರೊಟ್ಟಿ ಊಟದ ಜಾತ್ರೆ
 26 ಶರತ್ ಕೆ.ಎಸ್. ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ ತೀರ್ಥಹಳ್ಳಿ ಜಾತ್ರೆ
 27 ಮುದ್ದಹನುಮಯ್ಯ ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜಾಜಿ ನಗರ, ಬೆಂಗಳೂರು. ಬೆಂಗಳೂರು ಭಾವೈಕ್ಯತೆಯ ಸೆಲೆಯಾಗಿ ಮೋಹರಂ
 28 ಕೀರ್ತಿ ಜಿ. ಕುಲಕರ್ಣಿ ಆರ್.ಪಿ.ಡಿ. ಡಿಗ್ರಿ ಕಾಲೇಜು, ಬೆಳಗಾವಿ ಇಳಕಲ್ ಇಳಕಲ್  ಸೀರೆಗಳು ರೂಬಿರೆಡ್ ಶಿಲೆಗಳು
 29 ಪೂರ್ಣಿಮ ಎಚ್.ಕೆ. ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು, ಮೈಸೂರು. ಮೈಸೂರು ನೈಸರ್ಗಿಕ ಕೃಷಿ
 30 ಸಾವಿತ್ರಿ ಮ. ಅಲ್ಲಾಪುರ ಶ್ರೀ ಮಹದೇವಪ್ಪ ಬಸಲಿಂಗಪ್ಪ ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಅಣ್ಣೀಗೇರಿ. ಅಣ್ಣೀಗೇರಿ ಸಾಮಾಜಿಕ ಸೇವೆಯಲ್ಲಿ ಭದ್ರಾಪೂರ
 31 ಸಂತೋಷ ಮಾರುತಿ ನಡಬಡ್ಡಿ ಶ್ರೀ ಶ್ರೀಪಾದ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಲಗಿ. ಮೂಡಲಗಿ ದಕ್ಷಿಣ ಭಾರತದ ಸುಪ್ರಸಿದ್ಧ ದನದ ಪೇಟೆ
 32 ಮಂಜುನಾಥ್. ಬಿ.ಆರ್. ವಿದ್ಯಾವಿಕಾಸ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮೈಸೂರು. ಮೈಸೂರು ಬನ್ನೂರು
 33 ಸಂಗೀತ ಸಂಗಮೇಶ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬ್ಯಾಡಗಿ ಬ್ಯಾಡಗಿ ಬ್ಯಾಡಗಿಯಲ್ಲೊಂದು ಮಾದರಿ
ರುದ್ರಭೂಮಿ
 34 ಟಿಪ್ಪುಸುಲ್ತಾನ. ಜೆ. ನಾಯ್ಕವಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜ್, ಹಾನಗಲ್ಲ ಹಾನಗಲ್ಲ ಸಾಂಸ್ಕೃತಿಕ ಪರಂಪರೆ
 35  ಸಂತೋಷ ಪ್ರಭು ಶ್ರೀ ಭುವನೇಂದ್ರ ಕಾಲೇಜು,
ಕಾರ್ಕಳ
ಕಾರ್ಕಳ ಕರ್ನಾಟಕದ ಸೊಬಗಿನ ಕರಾವಳಿ  ಯಕ್ಷಗಾನ

 

ಈ ಎಲ್ಲ ಬಹುಮಾನ ವಿಜೇತರಿಗೆ ನಗದು ಬಹುಮಾನದ ಜೊತೆಗೆ ನವಕರ್ನಾಟಕದ  `ವಿಜ್ಞಾನ ತಂತ್ರಜ್ಞಾನ ಪದಸಂಪದ’ ಪುಸ್ತಕವನ್ನು ನೀಡಲಾಗುವುದಲ್ಲದೆ ಕೃಷಿ ಪತ್ರಿಕೆಯಾದ `ಅಡಿಕೆ ಪತ್ರಿಕೆ’ಯ ಒಂದು ವರ್ಷದ ಸಂಚಿಕೆಗಳನ್ನು ಕಳಿಸಿಕೊಡಲಾಗುವುದು.

ಕದಿರು ಸ್ಪರ್ಧೆಗಾಗಿ ರಾಜ್ಯದೆಲ್ಲೆಡೆಯಿಂದ ಏಳುನೂರಕ್ಕೂ ಹೆಚ್ಚು ಲೇಖನಗಳು ಬಂದಿದ್ದವು. ವಿದ್ಯಾರ್ಥಿಗಳು ತಮ್ಮ ಊರಿನ ವಿಶೇಷ ಆಚರಣೆಗಳ ಬಗ್ಗೆ ಬರೆದ ಇನ್ನೂ ಹಲವು ಲೇಖನಗಳಿದ್ದು ಅವುಗಳನ್ನು ಕಣಜದಲ್ಲಿ ಕಾಲಕ್ರಮೇಣ ಪ್ರಕಟಿಸಲಾಗುವುದು.

(ರಮೇಶ ಎಸ್‌ ಪೆರ್ಲ)

ಸಹಾಯಕ ಸಲಹಾ ಸಮನ್ವಯಕಾರ, ಐ ಐ ಐ ಟಿ- ಬಿ

ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶ

 

Leave a Reply

Your email address will not be published. Required fields are marked *